` K Manju, - chitraloka.com | Kannada Movie News, Reviews | Image

K Manju,

  • ನಿರ್ಮಾಪಕ ಕೆ. ಮಂಜು.. ಇನ್ನು ಮುಂದೆ ಡಾಕ್ಟರ್ ಕೆ.ಮಂಜು

    producer k manju gets honorary doctrorate

    ನಿರ್ಮಾಪಕ ಕೆ.ಮಂಜು ಅವರನ್ನು ಇನ್ನು ಮುಂದೆ ಡಾ. ಕೆ.ಮಂಜು ಎಂದು ಸಂಬೋಧಿಸಬೇಕು. ಅವರೀಗ ಡಾಕ್ಟರ್ ಮಂಜು ಆಗಿದ್ದಾರೆ. ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್ ವಿಶ್ವವಿದ್ಯಾಲಯ ಕೆ.ಮಂಜು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

    ಸಿನಿಮಾ ಕ್ಷೇತ್ರದಲ್ಲಿ ಕೆ.ಮಂಜು ಅವರ ಸಾಧನೆ ಗುರುತಿಸಿ ಈ ಗೌರವ ನೀಡಿದೆ ವಿಶ್ವ ವಿದ್ಯಾಲಯ. ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಮಂಜು ಅವರಿಗೆ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ.

    ಕೆ.ಮಂಜು ತಮ್ಮ ಕೆ.ಮಂಜು ಸಿನಿಮಾಸ್ ಮತ್ತು ಲಕ್ಷ್ಮಿಶ್ರೀ ಕಂಬೈನ್ಸ್ ಬ್ಯಾನರ್‍ಗಳಲ್ಲಿ ಅನುರಾಗ ಸಂಗಮ, ಜಮೀನ್ದಾರ್ರು, ವಾಲಿ, ಜೇನುಗೂಡು, ರಾಜಾಹುಲಿ, ಹೃದಯವಂತ, ಸಾಹುಕಾರ, ಮಾತಾಡ್ ಮಾತಾಡ್ ಮಲ್ಲಿಗೆ, ವಾಲಿ.. ಮೊದಲಾದ ಹತ್ತು ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ

  • ನಿರ್ಮಾಪಕರ ಸಂಘಕ್ಕೆ ರಾಮಕೃಷ್ಣ ಅಧ್ಯಕ್ಷ, ಎಂ.ಜಿ.ಆರ್. ಉಪಾಧ್ಯಕ್ಷ

    film chamber producers association results

    2011ರ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪ್ರವೀಣ್ ಕುಮಾರ್ (ರಾಮಕೃಷ್ಣ ಡಿ.ಕೆ.) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಜಿ.ರಾಮಮೂರ್ತಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ರಾಮಕೃಷ್ಣ ಅವರು 135 ಮತಗಳನ್ನು ಪಡೆದು ಅಧ್ಯಕ್ಷರಾಗಿ ಗೆದ್ದರೆ, ಎಂ.ಜಿ.ರಾಮಮೂರ್ತಿ117 ಮತ ಪಡದು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಚುನಾವಣೆಗೆ ಒಂದು ದಿನ ಮೊದಲು ನಿರ್ಮಾಪಕ ಮುನಿರತ್ನ ಕಣದಿಂದ ಹಿಂದೆ ಸರಿದಿದ್ದರು. ಹೀಗಿದ್ದರೂ ಅವರಿಗೆ ಚುನಾವಣೆಯಲ್ಲಿ 5 ವೋಟು ಬಿದ್ದಿವೆ.

    ಕಾರ್ಯದರ್ಶಿಯಾಗಿ ಕೆ.ಮಂಜು, ಜಂಟಿ ಕಾರ್ಯದರ್ಶಿಯಾಗಿ ರಮೇಶ್ ಬಾಬು (ಅವಿರೋಧ ಆಯ್ಕೆ) ಖಜಾಂಚಿಯಾಗಿ ಆರ್.ಎಸ್.ಗೌಡ (ಅವಿರೋಧ ಆಯ್ಕೆ) ಸಂಘದ ಹೊಣೆ ಹೊತ್ತಿದ್ದಾರೆ.

    ಕಾರ್ಯಕಾರಿ ಸಮಿತಿಗೆ ಭಾ.ಮಾ.ಹರೀಶ್, ಎನ್.ಎಂ.ಸುರೇಶ್, ಎ.ಗಣೇಶ್, ಉಮೇಶ್ ಬಣಕಾರ್, ಸುಬ್ರಮಣಿ(ಕರಿ ಸುಬ್ಬು), ಜೆ.ಜೆ.ಕೃಷ್ಣ, ಪ್ರಮೀಳಾ ಜೋಷಾಯ್, ಜೆ.ನಂದಿಹಾಳ್, ಎ. ನರಸಿಂಹ, ಅಂಚೆಹಳ್ಳಿ ಶಿವಕುಮಾರ್, ಸುಂದರ್ ರಾಜ್ ಆಯ್ಕೆಯಾಗಿದ್ದಾರೆ. 

  • ಪಡ್ಡೆಹುಲಿ ಕಬಡ್ಡಿ.. ಕಬಡ್ಡಿ..

    kabbadi is the main attraction in paddehuli

    ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಪಡ್ಡೆಹುಲಿ, ಹಲವಾರು ವಿಶೇಷ ಕಾರಣಗಳಿಗೆ ಗಮನ ಸೆಳೆಯುತ್ತಿದೆ. ಚಿತ್ರದ ಹೆಸರೋ ಪಕ್ಕಾ ಮಾಸ್. ಈ ಚಿತ್ರದಲ್ಲಿಯೇ ಕನ್ನಡದ ಖ್ಯಾತ ಕವಿಗಳ ಭಾವಗೀತೆಗಳನ್ನು ಬಳಸಿಕೊಳ್ಳಲಾಗಿದೆ. ಇದೊಂದು ಮ್ಯೂಸಿಕಲ್ ಸಿನಿಮ ಎನ್ನುತ್ತಿದ್ದಾರೆ ಅಜನೀಶ್ ಲೋಕನಾಥ್.

    ರವಿಚಂದ್ರನ್ ಎಂಟ್ರಿಯೊಂದಿಗೇ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ, ಈಗ ರಕ್ಷಿತ್ ಶೆಟ್ಟಿ ಆಗಮನದೊಂದಿಗೆ ನಿರೀಕ್ಷೆಯ ತುತ್ತತುದಿ ಮುಟ್ಟಿದೆ. ಹೀಗೆ ಭಾವಗೀತೆ, ರೊಮ್ಯಾನ್ಸ್ ಇರುವ ಚಿತ್ರದಲ್ಲಿ ನಮ್ಮ ದೇಸೀ ಆಟ ಕಬಡ್ಡಿ ಇರಲಿದೆಯಂತೆ.

    ನಾಯಕನ ಇಂಟ್ರೊಡಕ್ಷನ್ ಸೀನ್ ಕಬಡ್ಡಿ ಆಟದ ಮೂಲಕ ಆಗಲಿದೆಯಂತೆ. ಸೀನಿಯರ್ ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳೋದು ಕಿರಿಕ್ ಪಾರ್ಟಿ ಕರ್ಣ ಅರ್ಥಾತ್ ರಕ್ಷಿತ್ ಶೆಟ್ಟಿ. ರಕ್ಷಿತ್ ಕರ್ಣನಾಗಿಯೇ ಆಡಿದರೆ, ಶ್ರೇಯಸ್ ಪಡ್ಡೆಹುಲಿಯಾಗಿ ಆಡ್ತಾರೆ. 

    ಗುರು ದೇಶಪಾಂಡೆ ನಿರ್ದೇಶನದ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ. 

  • ಪಡ್ಡೆಹುಲಿ ಶುರುವಾಯ್ತು

    k manju's paddehuli launched

    ಕೆ.ಮಂಜು ಪುತ್ರ ಶ್ರೇಯಸ್ ನಾಯಕರಾಗಿ ನಟಿಸುತ್ತಿರುವ ಪಡ್ಡೆಹುಲಿ ಸಿನಿಮಾಗೆ ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ. ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿಯ ದೇವಸ್ಥಾನದಲ್ಲಿ ನಡೆದ ಮುಹೂರ್ತಕ್ಕೆ, ಭಾರತಿ ವಿಷ್ಣುವರ್ಧನ್ ದೀಪ ಬೆಳಗಿಸಿ ಚಾಲನೆ ನೀಡಿದರು.

    ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಕಿಚ್ಚ ಸುದೀಪ್. ಕ್ಯಾಮೆರಾ ಚಾಲನೆ ನೀಡಿದ್ದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಹೊಸ ಪ್ರತಿಭೆಗೆ ಇಬ್ಬರು ಸ್ಟಾರ್‍ಗಳು ಶುಭ ಹಾರೈಸಿದ್ದು ವಿಶೇಷ.

    ಇನ್ನು ಚಿತ್ರ ಯಾವುದೇ ಚಿತ್ರದ ರೀಮೇಕ್ ಅಲ್ಲ ಎಂದಿದ್ದಾರೆ ನಿರ್ಮಾಪಕ ಕೆ.ಮಂಜು. ಚಿತ್ರದ ಕಥೆಯೂ ಅವರದ್ದೇ ಅಂತೆ. ಎಂ.ರಮೇಶ್ ರೆಡ್ಡಿ ನಿರ್ಮಾಣದ ಚಿತ್ರಕ್ಕೆ ಗುರು ದೇಶಪಾಂಡೆ ನಿರ್ದೇಶಕ.

     

  • ಪಡ್ಡೆಹುಲಿ ಶ್ರೇಯಸ್ ಹೊಸ ಸಿನಿಮಾ ಶುರು

    ಪಡ್ಡೆಹುಲಿ ಶ್ರೇಯಸ್ ಹೊಸ ಸಿನಿಮಾ ಶುರು

    ಪಡ್ಡೆಹುಲಿ ಚಿತ್ರದ ಮೂಲಕ ಚಿತ್ರರಂಗದ ಗಮನ ಸೆಳೆದಿದ್ದ ಶ್ರೇಯಸ್ ಮಂಜು ಅವರ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿದೆ. ಹೊಸಪೇಟೆಯ ಹುಲಿಗೆಮ್ಮ ದೇವಸ್ಥಾನದಲ್ಲಿ ನಿರ್ದೇಶಕ ನಂದಕಿಶೋರ್ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ.

    ಪೊಗರು ನಂತರ ದುಬಾರಿ ಚಿತ್ರ ಕೈಗೆತ್ತಿಕೊಂಡಿದ್ದ ನಂದಕಿಶೋರ್, ಆ ಚಿತ್ರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಶ್ರೇಯಸ್ ಮಂಜು ಜೊತೆ ಹೊಸ ಚಿತ್ರ ಆರಂಭಿಸಿದ್ದಾರೆ. ಜೋಗಿ ಪ್ರೇಮ್ ಅವರು ಪರಿಚಯಿಸುತ್ತಿರುವ ಪ್ರತಿಭೆ ಏಕ್ ಲವ್ ಯಾ ಹೀರೋಯಿನ್ ರೀಷ್ಮಾ, ಈ ಚಿತ್ರಕ್ಕೆ ನಾಯಕಿ. ಟಗರು ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಗುಜ್ಜಲ್ ಪುರುಷೋತ್ತಮ್, ಈ ಚಿತ್ರಕ್ಕೆ ನಿರ್ಮಾಪಕ. ಹೊಸ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದು, ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ

  • ಪಡ್ಡೆಹುಲಿ ಹಾಡು.. ವಿಷ್ಣುದಾದಾ ಅಭಿಮಾನಿಗಳಿಗಾಗಿ.. ನೋಡ್ಕೊಂಡ್ ಬಿಡಿ

    special song by vishnu fan to vishnu fans

    ನಿರ್ಮಾಪಕ, ವಿಷ್ಣು ದಾದಾ ಕಟ್ಟರ್ ಅಭಿಮಾನಿಯಾಗಿದ್ದ ಕೆ.ಮಂಜು ತಮ್ಮ ಪುತ್ರ ಶ್ರೇಯಸ್ ಅವರನ್ನ ಚಿತ್ರರಂಗಕ್ಕೆ ಕರೆ ತರುತ್ತಿದ್ದಾರೆ. ಅದು ಪಡ್ಡೆಹುಲಿ ಚಿತ್ರದ ಮೂಲಕ. ಅಪ್ಪ ರಿಯಲ್ ಲೈಫಲ್ಲಿ ವಿಷ್ಣು ಅಭಿಮಾನಿ. ಮಗ ಶ್ರೇಯಸ್ ತಮ್ಮ ಮೊದಲ ಚಿತ್ರದಲ್ಲಿ ವಿಷ್ಣು ದಾದಾ ಫ್ಯಾನ್. ಪಡ್ಡೆಹುಲಿ ಚಿತ್ರದಲ್ಲಿ ಶ್ರೇಯಸ್ ವಿಷ್ಣು ಅಭಿಮಾನಿಯಾಗಿ ನಟಿಸಿದ್ದು, ಅಭಿಮಾನದಿಂದಲೇ ವಿಶೇಷ ಹಾಡು ಚಿತ್ರೀಕರಿಸಲಾಗಿದೆ.

    ಚಿತ್ರದ ನಿರ್ದೇಶಕ ಗುರು ದೇಶಪಾಂಡೆ, ಚಿತ್ರದುರ್ಗದ ಕೋಟೆಯ ಸುತ್ತ ಈ ಹಾಡು ಚಿತ್ರೀಕರಿಸಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಹಾಡಿನ ಪ್ರದರ್ಶನ ಆಯೋಜಿಸಲಾಗಿದೆ. ರಮೇಶ್ ರೆಡ್ಡಿ ನುಂಗ್ಲಿ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್ ಕೂಡಾ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಚಿತ್ರದ ನಾಯಕಿ.

  • ಪಡ್ಡೆಹುಲಿಗೆ ಡಿವಿಜಿ, ಕೆಎಸ್‍ನ, ಜಿಪಿ ರಾಜರತ್ನಂ ಗೀತೆಗಳು..!

    paddhuli gets kannada literature songs

    ಸಿನಿಮಾ ಸಾಹಿತ್ಯ ಹಾಳಾಗೋಯ್ತು ಕಣ್ರಿ. ನಮ್ ಕಾಲ ಯೆಂಗಿತ್ತು. ಎಂತೆಂತ ಹಾಡು ಬರ್ತಾ ಇದ್ವು ಎಂದು ನಿಟ್ಟುಸಿರುವ ಬಿಡುವ ವರ್ಗ ಕನ್ನಡದಲ್ಲಿ ಸ್ವಲ್ಪ ದೊಡ್ಡದೇ ಇದೆ. ಕನ್ನಡದಲ್ಲಿ ಸಾಹಿತ್ಯಕ್ಕೇನು ಕೊರತೆ ಎಂದು ಪ್ರಶ್ನಿಸುವವರಿಗೂ ಕೊರತೆಯಿಲ್ಲ. ಅದು ಸತ್ಯವೂ ಹೌದು. ಈಗ.. ಹಾಗೆ ನಿಟ್ಟುಸಿರು ಬಿಡುವವರಿಗೆಲ್ಲ ಉತ್ತರವೆಂಬಂತೆ ಬರುತ್ತಿದೆ ಪಡ್ಡೆಹುಲಿ.

    ಸಿನಿಮಾದಲ್ಲಿ ಡಿವಿಜಿ ಅವರ ಬದುಕು ಜಟಕಾ ಬಂಡಿ.. ಕೆಎಸ್ ನರಸಿಂಹ ಸ್ವಾಮಿ ಅವರ ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ.. ಜಿಪಿ ರಾಜರತ್ನಂ ಅವರ ಹೆಂಡ ಹೆಂಡ್ತಿ ಕನ್ನಡ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ.. ಬಿ.ಆರ್.ಲಕ್ಷ್ಮಣ್‍ರಾವ್ ಅವರ ಹೇಳಿ ಹೋಗು ಕಾರಣ.. ಹಾಡುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚಿತ್ರದ ಹೀರೋ ಶ್ರೇಯಸ್, ಸಿನಿಮಾದಲ್ಲಿ ಗಾಯಕನೂ ಹೌದು. ಅದಕ್ಕಾಗಿ ಈ ಎಲ್ಲ ಭಾವಗೀತೆಗಳೂ ಬಳಕೆಯಾಗಲಿವೆ.

    ಕೆ.ಮಂಜು ಪುತ್ರ ಶ್ರೇಯಸ್ ಅಭಿನಯಿಸುತ್ತಿರುವ ಮೊದಲ ಸಿನಿಮಾ. ಗುರುದೇಶಪಾಂಡೆ ನಿರ್ದೇಶನದ ಸಿನಿಮಾಗೆ ಎಂ. ರಮೇಶ್  ರೆಡ್ಡಿ ನಿರ್ಮಾಪಕರು. ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ನಾಯಕಿ. ಚಿತ್ರದಲ್ಲಿ ಸ್ಪೆಷಲ್ಲಾಗಿ ವಿ.ರವಿಚಂದ್ರನ್ ನಟಿಸುತ್ತಿದ್ದಾರೆ.

  • ಪಡ್ಡೆಹುಲಿಯ ವಿಷ್ಣು ಪ್ರೇಮ

    paddehli vishnu rap song

    ಪಡ್ಡೆಹುಲಿ. ವಿಷ್ಣುವರ್ಧನ್ ಅವರನ್ನು ಗುರು ಎಂದೇ ಸ್ವೀಕರಿಸಿರುವ ಕೆ.ಮಂಜು ಅವರ ಮಗ ಶ್ರೇಯಸ್ ಅಬಿನಯದ ಮೊದಲ ಸಿನಿಮಾ. ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರತಂಡ, ವಿಷ್ಣು ಹುಟ್ಟುಹಬ್ಬಕ್ಕೆ ವಿಶೇಷ ರ್ಯಾಪ್ ಸಾಂಗ್ ರಿಲೀಸ್ ಮಾಡುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಚಾಮುಂಡಿ ತಾಯಿ ಮಡಿಲಲ್ಲಿ ಹುಟ್ಟಿ, ದುರ್ಗದ ಕೋಟೆಯಲ್ಲಿ ಬೆಳಕು ಕಂಡ ವಿಷ್ಣು ಚಿತ್ರಣವಿದೆ.

    ಸಿನಿಮಾದಲ್ಲಿ ಹೀರೋ ವಿಷ್ಣುವರ್ಧನ್ ಅಭಿಮಾನಿ. ನಾಯಕ ಗುರಿ ಮುಟ್ಟುವುದಕ್ಕೆ ನಾಗರಹಾವು ಸಿನಿಮಾ ಸ್ಫೂರ್ತಿಯಾಗುತ್ತೆ. ಚಿತ್ರದ ಕಥೆ ಶುರುವಾಗುವುದೇ ಚಿತ್ರದುರ್ಗದ ಕೋಟೆಯಿಂದ ಎಂದು ಕಥೆಯ ಒಂದಿಷ್ಟು ಎಳೆ ಬಿಟ್ಟುಕೊಟ್ಟಿದ್ದಾರೆ ಗುರು ದೇಶಪಾಂಡೆ.

    ನನಗೆ ವಿಷ್ಣು ಸರ್ ಗುರುಗಳು. ನನ್ನ ಬದುಕಿನ ಬಹುದೊಡ್ಡ ತಿರುವು, ಯಶಸ್ಸಿಗೆ ವಿಷ್ಣು ಸರ್ ಕಾರಣ. ಹೀಗಾಗಿ ನನ್ನ ಮಗನ ಮೊದಲ ಸಿನಿಮಾ ವಿಷ್ಣು ಸರ್ ಆಶೀರ್ವಾದ ಬೇಕು. ಅವರಿಗೆ ನಮನ ಸಲ್ಲಿಸಲಿಕ್ಕೆಂದೇ ಪಡ್ಡೆಹುಲಿ ಚಿತ್ರ ತಂಡದಿಂದ ಈ ರ್ಯಾಪ್ ಸಾಂಗ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಕೆ.ಮಂಜು.

  • ಪ್ಪ ವಿಷ್ಣು ಫ್ಯಾನ್.. ಮಗ ದರ್ಶನ್ ಫ್ಯಾನ್

    one is vishnuvardhan fan while other one is darshan fan

    ಪಡ್ಡೆಹುಲಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅವರ ಸಿನಿಮಾ ಟ್ರೇಲರ್ ಹೊರಬಂದಿದೆ. ಈಗಾಗಲೇ ಚಿತ್ರದಲ್ಲಿ ಶ್ರೇಯಸ್, ವಿಷ್ಣು ಗೆಟಪ್‍ನಲ್ಲಿ ಕಾಣಿಸಿಕೊಳ್ತಿರೋ ಶ್ರೇಯಸ್, ವಿಷ್ಣು ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದಾರೆ. ನಾಗರಹಾವು ಚಿತ್ರದ ರಾಮಾಚಾರಿ ಗೆಟಪ್‍ನಲ್ಲಿ ಮಿಂಚಿದ್ದಾರೆ ಶ್ರೇಯಸ್. ಅಂದಹಾಗೆ ಚಿತ್ರದ ಟ್ರೇಲರ್ ರಿಲೀಸ್ ಮಾಡಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.

    ಇದೇ ವೇಳೆ ತಮ್ಮದೊಂದು ಸೀಕ್ರೆಟ್ ಹೊರಹಾಕಿದ ಶ್ರೇಯಸ್ `ಅಪ್ಪ ವಿಷ್ಣು ಅಭಿಮಾನಿ. ನಾನು ಡಿ ಬಾಸ್ ಅಭಿಮಾನಿ' ಎಂದು ಹೇಳೋ ಮೂಲಕ ತಮ್ಮ ದರ್ಶನ್ ಪ್ರೇಮವನ್ನು ಹೊರಹಾಕಿದ್ದಾರೆ.

  • ಬುಕ್ ಮೈ ಶೋ ವಿರುದ್ಧ ಸಿಡಿದೆದ್ದ ಕೆ.ಮಂಜು

    k manju balsts book my show

    ಬುಕ್ ಮೈ ಶೋ ಆಗಾಗ್ಗೆ ವಿವಾದಕ್ಕೆ ಸಿಲುಕುತ್ತಲೇ ಇದೆ. ಕನ್ನಡ ಚಿತ್ರಗಳ ವಿಚಾರದಲ್ಲಂತೂ ಬುಕ್ ಮೈ ಶೋ ವಿರುದ್ಧ ದೂರುಗಳ ಸರಮಾಲೆಯೇ ಇದೆ. ಇತ್ತೀಚೆಗೆ ಕನ್ನಡ ಚಿತ್ರಗಳಿಗೆ ಟಿಕೆಟ್ ಖಾಲಿಯಿದ್ದರೂ, ಹೌಸ್‍ಫುಲ್ ಎಂದು ತೋರಿಸುವುದು.. ನಂತರ ಶೋ ಶುರುವಾಗದ ಮೇಲೆ ಖಾಲಿ ಖಾಲಿ ತೋರಿಸಿ, ಜನರೇ ಇಲ್ಲ ಎಂಬಂತೆ ಬಿಂಬಿಸಿ ಚಿತ್ರವನ್ನು ಎತ್ತಂಗಡಿ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

    ಇನ್ನು ರಿಲೀಸೇ ಆಗದ ಚಿತ್ರಕ್ಕೂ ಕೆಟ್ಟ ವಿಮರ್ಶೆ ಹಾಕಿ ರೇಟಿಂಗ್ ಕೊಡುವ ಕೆಟ್ಟ ಸಂಪ್ರದಾಯವನ್ನೂ ಆರಂಭಿಸಿತ್ತು. ಹೀಗೆ ಸದಾ ವಿವಾದಲ್ಲೇ ಇರುವ ಬುಕ್ ಮೈ ಶೋ ವಿರುದ್ಧ ಈಗ ನಿರ್ಮಾಪಕ ಕೆ.ಮಂಜು ಸಿಟ್ಟಿಗೆದ್ದಿದ್ದಾರೆ.

    ಬುಕ್ ಮೈ ಶೋನಲ್ಲಿ ಹಣ ಕೊಟ್ಟರಷ್ಟೇ ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಬರುತ್ತವೆ. ಒಳ್ಳೆಯ ರೇಟಿಂಗ್ ಕೊಡುತ್ತಾರೆ. ಅದೊಂದು ದೊಡ್ಡ ದಂಧೆ ಎಂದು ಕೆಂಡ ಕಾರಿದ್ದಾರೆ ಮಂಜು. ಅಲ್ಲಿ ಪರ್ಸೆಂಟೇಜ್ ಲೆಕ್ಕಾಚಾರದ ಮೇಲೆ ಸೀಟ್ ಫಿಲ್ಲಿಂಗ್ ಎಂದು ತೋರಿಸಿ ವಂಚಿಸಲಾಗುತ್ತೆ ಎಂಬ ಆರೋಪವನ್ನೂ ಮಾಡಿದ್ದಾರೆ ಮಂಜು.

    ಅವರಿಗೆ ಹಣ ಕೊಟ್ಟರೆ, ಯಾವಾಗಲೂ ಶೇ.80ರಷ್ಟು ಫುಲ್ ಎಂಬಂತೆ ತೋರಿಸಿ ಕ್ರೇಜ್ ಸೃಷ್ಟಿಸುತ್ತಾರೆ. ಬೇರೆ ಭಾಷೆಯ ಚಿತ್ರಗಳು ಇಂಥ ದಂಧೆಯನ್ನು ನಡೆಸುತ್ತಿವೆ. ಅಂಥಾದ್ದೊಂದು ಕಾಲ್ ನನಗೂ ಬಂದಿತ್ತು ಎಂಬ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ ಮಂಜು.

    ಬುಕ್ ಮೈ ಶೋನಲ್ಲಿ ಏನೇನೆಲ್ಲ ಆಗುತ್ತೋ..ಹೇಳೋರ್ಯಾರು..?

  • ರವಿಚಂದ್ರನ್ ಸಿನಿಮಾ.. ಆ ದೃಶ್ಯ

    ravichandran k manju movie titled aa drishya

    ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನಿರ್ಮಾಪಕ ಕೆ.ಮಂಜು ಕಾಂಬಿನೇಷನ್‍ನ ಶಿವಗಣೇಶ್ ನಿರ್ದೇಶನದ ಚಿತ್ರಕ್ಕೆ ಆ ದೃಶ್ಯ ಎಂದು ಹೆಸರಿಡಲಾಗಿದೆ. ರವಿಚಂದ್ರನ್ ಈ ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ ಗೆಟಪ್‍ನಲ್ಲಿ ನಟಿಸುತ್ತಿದ್ದಾರೆ. ಈ ಗೆಟಪ್‍ನಲ್ಲಿ ಅವರು 20 ವರ್ಷ ಚಿಕ್ಕವರಂತೆ ಕಾಣಿಸುತ್ತಿರುವುದು ವಿಶೇಷ.

    ದೃಶ್ಯ ಚಿತ್ರದಲ್ಲಿ ಕುಟುಂಬಕ್ಕಾಗಿ ಪೊಲೀಸರನ್ನೇ ಯಾಮಾರಿಸುವ ಪಾತ್ರದಲ್ಲಿ ನಟಿಸಿದ್ದ ರವಿಚಂದ್ರನ್, ಆ ದೃಶ್ಯ ಚಿತ್ರದಲ್ಲಿ ಸ್ವತಃ ಅವರೇ ಒಬ್ಬ ಪೊಲೀಸ್. ಜಿಗರ್‍ಥಂಡ ಖ್ಯಾತಿಯ ಶಿವಗಣೇಶ್ ಅವರ ಚಿತ್ರಕಥೆ ಹಾಗೂ ಕಥೆ ಹೇಳುವ ಶೈಲಿಯನ್ನು ರವಿಚಂದ್ರನ್ ಮೆಚ್ಚಿಕೊಂಡಿದ್ದು, ಚಿತ್ರಕ್ಕೆ ಈಗ ಆ ದೃಶ್ಯ ಎಂಬ ಟೈಟಲ್‍ನ್ನೇ ಫೈನಲ್ ಮಾಡಲಾಗಿದೆಯಂತೆ. ದೃಶ್ಯದಂತೆಯೇ ಆ ದೃಶ್ಯವೂ ಸಕ್ಸಸ್ ಆಗಲಿ ಎನ್ನುವುದು ಎಲ್ಲರ ಹಾರೈಕೆ.

  • ರವಿಚಂದ್ರನ್‍ರಿಂದ ಮತ್ತೊಂದು ಥ್ರಿಲ್ಲರ್

    ravichandran and k manju team up for a movie

    ದೃಶ್ಯ ಚಿತ್ರದಂತಾ ಥ್ರಿಲ್ಲರ್ ಮೂಲಕ ಮತ್ತೆ ಹಿಟ್ ಸಿನಿಮಾ ಕೊಟ್ಟ ರವಿಚಂದ್ರನ್, ಈಗ ಮತ್ತೂ ಒಂದು ಥ್ರಿಲ್ಲರ್ ಕಥೆ ಮಾಡುತ್ತಿದ್ದಾರೆ. ಈ ಬಾರಿ ರವಿಚಂದ್ರನ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡುತ್ತಿರುವುದು ಮಂಜು ಬ್ಯಾನರ್‍ಗೆ. ಕೆ. ಮಂಜು ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾಗೆ ರವಿಚಂದ್ರನ್ ಹೀರೋ. ಜಿಗರ್‍ಥಂಡ ಖ್ಯಾತಿಯ ಶಿವಗಣೇಶ್ ನಿರ್ದೇಶನವಿರುತ್ತೆ.

    ಈ ಸಿನಿಮಾ ತಮಿಳಿನ ದುರುವಂಗಲ್ ಪದಿನಾರು ಚಿತ್ರದ ರೀಮೇಕ್. ತೆಲುಗಿನಲ್ಲಿ 16 ಹೆಸರಲ್ಲಿ ಡಬ್ಬಿಂಗ್ ಆಗಿದ್ದ ಸಿನಿಮಾವನ್ನ ಕನ್ನಡಕ್ಕೆ ತರುತ್ತಿದ್ದಾರೆ ಕೆ. ಮಂಜು. ಒಂದು ಕೊಲೆಯ ಸುತ್ತಲೇ ಸುತ್ತುವ ಕಥೆ, ಕಟ್ಟಕಡೆಯವರೆಗೂ ಕುತೂಹಲ ಹುಟ್ಟಿಸುತ್ತೆ. ಚಿತ್ರದಲ್ಲಿ ರವಿಚಂದ್ರನ್ ಅವರದ್ದು ತನಿಖಾಧಿಕಾರಿಯ ಪಾತ್ರ. ಈ ಹಿಂದೆ ಮಂಜು ಜೊತೆ ಸಾಹುಕಾರ, ಕಳ್ಳಮಳ್ಳಸುಳ್ಳ, ಒಡಹುಟ್ಟಿದವಳು, ರಾಜಕುಮಾರಿ.. ಮೊದಲಾದ ಚಿತ್ರ ಮಾಡಿದ್ದ ರವಿಚಂದ್ರನ್, ಮತ್ತೊಮ್ಮೆ ಮಂಜು ಜೊತೆಯಾಗಿದ್ದಾರೆ.

  • ವಿಷ್ಣು ಸಾರ್ ನನ್ನ ರೌಡಿ ಅಂದುಕೊಂಡಿದ್ದರು - ಕೆ. ಮಂಜು

    ವಿಷ್ಣು ಸಾರ್ ನನ್ನ ರೌಡಿ ಅಂದುಕೊಂಡಿದ್ದರು - ಕೆ. ಮಂಜು. Ace producer  K Manju was the biggest fan of Dr. Vishnuvardhan. But Vishnu had Thought K Manju is a Rowdy. Watch Interesting Video

    #Chitraloka #KManju #Vishnuvardhan #Rowdy #AutoManja #AceProducer

  • ಸಂಪತ್ ಕುಮಾರ್' ಹೆಸರಲ್ಲಿ ಕೆ.ಮಂಜು ಸಿನಿಮಾ

    k manju to produce a movie as sampath kumar

    ನಿರ್ಮಾಪಕ ಕೆ.ಮಂಜು, ವಿಷ್ಣುವರ್ಧನ್ ಅಭಿಮಾನಿ. ಅಷ್ಟೇ ಅಲ್ಲ, ವಿಷ್ಣು ಅಭಿಮಾನಿಯಾಗಿದ್ದುಕೊಂಡೇ ಜಮೀನ್ದಾರ, ಹೃದಯವಂತ, ನೀನೆಲ್ಲೋ ನಾನಲ್ಲೆ, ಬಳ್ಳಾರಿ ನಾಗ, ಮಾತಾಡ್ ಮಾತಾಡು ಮಲ್ಲಿಗೆ ಚಿತ್ರಗಳನ್ನು ನಿರ್ಮಿಸಿದ್ದವರು. ತಮ್ಮ ಮಗನ ಮೊದಲ ಸಿನಿಮಾ ಪಡ್ಡೆಹುಲಿ ಚಿತ್ರದಲ್ಲೂ ವಿಷ್ಣು ಅಭಿಮಾನ ಮೆರೆಯುತ್ತಿರುವ ಕೆ.ಮಂಜು, ಈಗ ಸಂಪತ್ ಕುಮಾರ್ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ.

    ಸಂಪತ್ ಕುಮಾರ್ ಅನ್ನೋ ಹೆಸರನ್ನು ಚೇಂಬರ್‍ನಲ್ಲಿ ರಿಜಿಸ್ಟರ್ ಮಾಡಿಸಿರುವ ಮಂಜು, ತಮ್ಮ ಮಗನ ಮುಂದಿನ ಚಿತ್ರಕ್ಕೆ ಆ ಟೈಟಲ್ ಇಟ್ಟುಕೊಳ್ಳಲು ಯೋಚಿಸಿದ್ದಾರೆ. 

    ಅಂದಹಾಗೆ ಅಭಿಮಾನಿಗಳಿಗೆಲ್ಲ ಗೊತ್ತಿರುವಂತೆ ವಿಷ್ಣುವರ್ಧನ್ ಅವರ ಮೂಲನಾಮ ಸಂಪತ್ ಕುಮಾರ್. ವಿಷ್ಣುವರ್ಧನ್ ಎನ್ನುವುದು ಪುಟ್ಟಣ್ಣ ಕಣಗಾಲ್ ನಾಮಕರಣ ಮಾಡಿದ್ದ ಹೆಸರು. 

  • ಸಿನಿಮಾ ಟೈಟಲ್ ಮಾಸ್.. ಕಥೆ ಕ್ಲಾಸ್.. ಮ್ಯೂಸಿಕ್ ಬಾಸ್.. 

    paddehuli has unique combination

    ಕೆ.ಮಂಜು ಪುತ್ರ ಶ್ರೇಯಸ್ ನಾಯಕರಾಗಿರುವ ಚಿತ್ರದ ಟೈಟಲ್ ಪಡ್ಡೆಹುಲಿ. ಟೈಟಲ್ ನೋಡಿದ್ರೆ ಫುಲ್ ಮಾಸ್. ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ ನಿರ್ದೇಶನ. ಇಷ್ಟೆಲ್ಲ ಇದ್ದರೂ, ಚಿತ್ರದ ಕಥೆ ಕ್ಲಾಸ್ ಅಂತೆ. ಹೇಗೆ ಅಂತೀರಾ..?

    ಜೀವನದಲ್ಲಿ ಗುರಿ ಸಾಧನೆ ಈಡೇರಿಸಿಕೊಳ್ಳಲು ಹೊರಡುವ ಮಕ್ಕಳ ಪ್ರಯತ್ನದಲ್ಲಿ ಹೆತ್ತವರ ಪಾತ್ರ ಏನು ಎನ್ನುವುದು ಚಿತ್ರದ ಕಥೆ. ಹೀರೋಗೆ ಹಂಸಲೇಖ, ಕೆ.ಎಸ್.ಅಶ್ವತ್ಥ್, ಮೈಸೂರು ಅನಂತಸ್ವಾಮಿ, ರಘು ದೀಕ್ಷಿತ್ ಅವರಂತೆ ಕನ್ನಡದ ಗೀತೆಗಳನ್ನು ರ್ಯಾಪ್ ಶೈಲಿಯಲ್ಲಿ ಜನರನ್ನು ಮುಟ್ಟುವ ಬಯಕೆ. ಅವನು ಗುರಿ ಮುಟ್ಟುತ್ತಾನಾ ಎನ್ನುವುದೇ ಚಿತ್ರದ ಕಥೆ ಎನ್ನುತ್ತಾರರೆ ಡೈರೆಕ್ಟರ್ ಗುರು.

    ಹೀರೋಗೆ ತಂದೆಯಾಗಿ ನಟಿಸಿರುವುದು ರವಿಚಂದ್ರನ್. ಹಳ್ಳಿ ಮೇಷ್ಟ್ರು ರವಿಚಂದ್ರನ್, ಈ ಚಿತ್ರದಲ್ಲಿ ಪ್ರಮೋಷನ್ ಪಡೆದು ಕನ್ನಡ ಪ್ರೊಫೆಸರ್ ಆಗಿದ್ದಾರೆ. ತಾಯಿಯಾಗಿ ನಟಿಸಿರುವುದು ಸುಧಾರಾಣಿ. ಮನೆದೇವ್ರು ನಂತರ ಜೋಡಿ ಮತ್ತೆ ತೆರೆ ಮೇಲೆ ಒಂದಾಗಿದೆ. ಕಬಡ್ಡಿ ಟೀಂ ಕ್ಯಾಪ್ಟನ್ ಆಗಿ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದರೆ, ಮತ್ತೊಂದು ಗೆಸ್ಟ್ ರೋಲ್‍ನಲ್ಲಿ ಪುನೀತ್ ಬಂದಿದ್ದಾರೆ. ಮುಂದಿನ ವಾರ ಸಿನಿಮಾ ರಿಲೀಸ್ ಆಗುತ್ತಿದೆ.

  • ಸುಧಾಕರ್ ಖಾತೆ ಬದಲಾವಣೆಗೆ ಕೇಳಿಬಂತು ಕೂಗು

    ಸುಧಾಕರ್ ಖಾತೆ ಬದಲಾವಣೆಗೆ ಕೇಳಿಬಂತು ಕೂಗು

    ಡಾ. ಕೆ.ಸುಧಾಕರ್. ಪ್ರಸ್ತುತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೊದಲಾದವರು ಸುಧಾಕರ್ ಅವರ ಕಾರ್ಯನಿರ್ವಹಣೆ ಬಗ್ಗೆ ಆಕ್ಷೇಪ ಎತ್ತಿದ್ದರು. ಭ್ರಷ್ಟಾಚಾರದ ಆರೋಪವನ್ನೂ ಹೊರಿಸಿದ್ದರು. ಪಕ್ಷದೊಳಗೇ ಅವರ ವಿರುದ್ಧ ಅಪಸ್ವರಗಳೂ ಕೇಳಿಬಂದಿದ್ದವು. ಆದರೀಗ ರಾಜಕೀಯಕ್ಕೆ ಸಂಬಂಧವೇ ಇಲ್ಲದ ಸಿನಿಮಾ ರಂಗದಿಂದ ಸುಧಾಕರ್ ಬದಲಾವಣೆಗೆ ಒತ್ತಡ ಕೇಳಿಬಂದಿದೆ.

    ಯುವರತ್ನ ಚಿತ್ರಕ್ಕೆ ದಿಢೀರ್ ಎಂದು 50% ನಿರ್ಬಂಧ ಹೇರಿದ ಬಗ್ಗೆ ಚಿತ್ರರಂಗದವರ ಕೆಂಗಣ್ಣು ಬಿದ್ದಿರುವುದು ಸುಧಾಕರ್ ಮೇಲೆ. ಸುಧಾಕರ್ ಇಂಥಾದ್ದೊಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಚಿತ್ರರಂಗದ ಒಬ್ಬರ ಬಳಿಯೂ ಸಣ್ಣ ಚರ್ಚೆಯನ್ನೂ ಮಾಡಿರಲಿಲ್ಲ. ಮಾಹಿತಿಯನ್ನೂ ಕೊಟ್ಟಿರಲಿಲ್ಲ. ಅವರದ್ದೇ ಸರ್ಕಾರದಲ್ಲಿರೋ ವಾರ್ತಾ ಸಚಿವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಬದಲಿಗೆ ಅಂತಹ ಯಾವುದೇ ಕ್ರಮ ಅಥವಾ ಆಲೋಚನೆ ಸರ್ಕಾರದ ಮುಂದಿಲ್ಲ ಎಂದು ಚಿತ್ರರಂಗದವರ ದಾರಿ ತಪ್ಪಿಸಿದ್ದರು.

    ಏನ್ ಮಾಡ್ತಾ ಇದೆ ಸರ್ಕಾರ..? ಸಿನಿಮಾದವರ ಮೇಲೆ ಸುಧಾಕರ್ ಹೀಗೇಕೆ ಮುಗಿಬೀಳುತ್ತಿದ್ದಾರೆ? ಫಿಲಂ ಚೇಂಬರ್‍ಗಾಗಲೀ, ವಾರ್ತಾ ಸಚಿವರನ್ನಾಗಲೀ ಕೇಳದೆ ಇಂಥಾದ್ದೊಂದು ನಿರ್ಧಾರವನ್ನು ಹೇಗೆ ತೆಗೆದುಕೊಳ್ತಾರೆ? ಇದು ಸರಿಯಲ್ಲ. ಯಡಿಯೂರಪ್ಪನವರೇ ದಯವಿಟ್ಟು ಸುಧಾಕರ್ ಖಾತೆಯನ್ನು ಬದಲಾವಣೆ ಮಾಡಿ ಎಂದು ಆಗ್ರಹಿಸಿದ್ದಾರೆ ನಿರ್ಮಾಪಕ ಕೆ.ಮಂಜು.

    ಅಷ್ಟೇ ಅಲ್ಲ, ಚಿತ್ರರಂಗಕ್ಕೆ ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್ ಪಾಠ ಮಾಡಿದ್ದ ಕೆ.ಸುಧಾಕರ್, ಸ್ವತಃ ತಾವೇ ಅದನ್ನು ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಲ್ಲಂಘಿಸಿದ್ದರು. ಇದೂ ಕೂಡಾ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.

  • ಸೆನ್ಸಾರ್ ಗೆದ್ದ ಪಡ್ಡೆಹುಲಿ

    paddehulu gets u/a certificate

    ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಪ್ರಥಮ ಚಿತ್ರ ಪಡ್ಡೆಹುಲಿ, ಸೆನ್ಸಾರ್ ಗೆದ್ದಿದೆ.ಸೆನ್ಸಾರ್‍ನಲ್ಲಿ ಪಡ್ಡೆಹುಲಿಗೆ ಯು/ಎ ಪ್ರಮಾಣದ ಪತ್ರ ಸಿಕ್ಕಿದೆ.  ರಾಜಾಹುಲಿ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯಲ್ಲಿ ನಿಶ್ವಿಕಾ ನಾಯ್ಡು ನಾಯಕಿ. ರವಿಚಂದ್ರನ್-ಸುಧಾರಾಣಿ, ಶ್ರೇಯಸ್ ತಂದೆತಾಯಿಯಾಗಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕ್‍ನಾಥ್, ಕನ್ನಡದ ಭಾವಗೀತೆ, ವಚನಗಳನ್ನ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಷ್ಣುವರ್ಧನ್ ಅವರ ರಾಮಾಚಾರಿ ಗೆಟಪ್‍ನಲ್ಲಿ ಒಂದು ವಿಶೇಷ ಹಾಡು ಕೂಡಾ ಇದೆ. ಬೇಸಗೆಯಲ್ಲಿ ಚಿತ್ರಮಂದಿರದಲ್ಲಿ ಗರ್ಜಿಸಲಿದೆ ಪಡ್ಡೆಹುಲಿ.

  • ಸ್ಮಾರ್ಟ್ ರವಿಚಂದ್ರನ್... ಕೆ.ಮಂಜು ಪ್ರೊಡಕ್ಷನ್ ನಂ.42

    k manju's new film with ravichandran

    ಜಿಗರ್‍ಥಂಡಾ, ತ್ರಾಟಕ ಚಿತ್ರಗಳ ನಿರ್ದೇಶಕ ಶಿವನಾಗೇಶ್, ಈಗಾಗಲೇ 41 ಸಿನಿಮಾ ನಿರ್ಮಿಸಿರುವ ನಿರ್ಮಾಪಕ ಕೆ.ಮಂಜು. ಕನ್ನಡಿಗರ ಕ್ರೇಜಿಸ್ಟಾರ್ ರವಿಚಂದ್ರನ್...ಇವರೆಲ್ಲರ ಮಿಲನ ಪ್ರೊಡಕ್ಷನ್ ನಂ.42. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಇದು ಮಂಜು ಬ್ಯಾನರ್‍ನ 42ನೇ ಸಿನಿಮಾ. 

    ಇದು ಹಾರರ್ ಸಿನಿಮಾ ಅಂತೆ. ಇದುವರೆಗೆ ರವಿಚಂದ್ರನ್ ಹಾರರ್ ಸಿನಿಮಾದಲ್ಲಿ ನಟಿಸಿಯೇ ಇಲ್ಲ. ಅವರಿಗೂ ಇದು ಹೊಸ ಪ್ರಯತ್ನ. ರವಿಚಂದ್ರನ್ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದು, ತನ್ನ ವೃತ್ತಿ ಜೀವನದ ಅತ್ಯಂತ ಕಠಿಣ ಚಾಲೆಂಜ್ ಎದುರಿಸುವ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಆತನ ಜೀವವನ್ನೇ ಕಿತ್ತುಕೊಳ್ಳುವ ಹಂತಕ್ಕೆ ತೆಗೆದುಕೊಂಡುತ್ತೆ. ಅದರಿಂದ ಹೇಗೆ ಬಚಾವ್ ಆಗುತ್ತಾನೆ ಅನ್ನೋದು ಚಿತ್ರದ ಕಥೆ. 

    ಮುಂದಿನ ವರ್ಷ 50ನೇ ಸಿನಿಮಾ ಮಾಡುತ್ತೇನೆ. ನಿರ್ಮಾಪಕನಾಗಿ ಅರ್ಧಶತಕ ಪೂರೈಸುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ ಕೆ.ಮಂಜು. ಈ ಸಿನಿಮಾ ಒಂದೇ ಶೆಡ್ಯೂಲ್‍ನಲ್ಲಿ ಶೂಟಿಂಗ್ ಮುಗಿಸಿಕೊಳ್ಳಲಿದ್ದು, ವರ್ಷದ ಕೊನೆಗೆ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ ಮಂಜು.