` K Manju, - chitraloka.com | Kannada Movie News, Reviews | Image

K Manju,

 • Yash Film to be Titled Gandhi Class? - Exclusive

  gandhi class image

  If sources are to be believed, then Yash starrer new film has been titled as 'Gandhi Class' and the shooting for the film is likely to be soon. The film is being produced by K Manju and directed by Mahesh Rao and the film was launched last month.

  But the film was untitled and now it is being said that the film has been titled as 'Gandhi Class'.

 • Yash-Radhika Break Audio Records

  rajahulu yash k manju kiss

  The latest film starring the real life pair of Yash and Radhika Pandit, Santhu Straight Forward has broken records big time. According to industry insiders, the audio rights of the film have been sold for Rs 108 Lakhs.

  This is the highest for a Kannada movie so far. But Chitraloka could not confirm if the rights is for audio alone or includes the DVD rights for the film which is usually sold together. Even if it is a package deal Rs 108 lakhs is a huge amount and a mind-blowing record.

  The film is produced by K Manju and directed by Mahesh Rao.

 • ಕೆ.ಮಂಜು ಗೆಳೆಯರ ಬಳಗದಿಂದ ಶ್ರೀನಿವಾಸ ಕಲ್ಯಾಣ

  sreenivasa kalyana

  ಚಿತ್ರ ನಿರ್ಮಾಪಕ ಕೆ. ಮಂಜು, ಗೆಳೆಯರ ಬಳಗದ ಮೂಲಕ ತುರುವೇಕೆರೆಯಲ್ಲಿ ಶ್ರೀನಿವಾಸ ಕಲ್ಯಾಣ ನಡೆಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ನವೆಂಬರ್ 4ರಂದು ತುರುವೇಕೆರೆಯಲ್ಲಿ ಶ್ರೀನಿವಾಸ ಕಲ್ಯಾಣ ನಡೆಯಲಿದೆ. ಅಂದಹಾಗೆ ಮಂಜು ಅವರು ಈ ಕಾರ್ಯಕ್ರಮ ಆಯೋಜಿಸಲು ಕಾರಣ, ಈ ವರ್ಷ ಸುರಿದ ಭಾರಿ ಮಳೆ. 

  ಉತ್ತಮ ಮಳೆಯಾಗಿದೆ. ಸುಭಿಕ್ಷತೆ ನೆಲೆಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಅಲ್ಲದೆ ಎಷ್ಟೋ ಜನರಿಗೆ ತಿರುಪತಿಗೆ ಹೋಗಿ

  ವೆಂಕಟೇಶ್ವರನ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಅಂಥವರು ಇಲ್ಲಿ ಶ್ರೀನಿವಾಸ ಕಲ್ಯಾಣದಲ್ಲಿ ಭಾಗವಹಿಸಿ ದರ್ಶನ ಪಡೆಯಬಹುದು ಎಂದಿದ್ದಾರೆ ಮಂಜು. ಹೀಗಾಗಿಯೇ ಸುಮಾರು 35 ಸಾವಿರ ಭಕ್ತರು ಏಕಕಾಲದಲ್ಲಿ ಭಾಗವಹಿಸಲು ಅನುವಾಗುವಂತೆ ತುರುವೇಕೆರೆಯ ಹಿರಣ್ಣಯ್ಯ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ.

  ಮಂಜು ಅವರಿಗೆ ಕಳೆದ ಬಾರಿ ಶ್ರೀನಿವಾಸ ಕಲ್ಯಾಣ ನಡೆಸಿದ್ದ ಕಹಿ ನೆನಪು ಕೂಡಾ ಇದೆ. ಕಳೆದ ಬಾರಿ ಶ್ರೀನಿವಾಸ ಕಲ್ಯಾಣ ನಡೆಸಿದ್ದು ಹಾಗೂ ಚುನಾವಣೆ ಒಟ್ಟಿಗೇ ಬಂದುಬಿಟ್ಟಿದ್ದವು. ರಾಜಕೀಯದಲ್ಲೂ ಸಕ್ರಿಯವಾಗಿರುವ ಕೆ.ಮಂಜು, ನೀತಿ ಸಂಹಿತೆ ಉಲ್ಲಂಘನೆಯ ಕೇಸ್ ಎದುರಿಸಿದ್ದರು. ನಂತರ ನಿರ್ದೋಷಿಯೆಂದು ಸಾಬೀತಾಗಿತ್ತು. 

  ತುರುವೇಕೆರೆಯಲ್ಲಿಯೇ ಸುದ್ದಿಗೋಷ್ಟಿ ನಡೆಸಿದ ಕೆ.ಮಂಜು ಶ್ರೀನಿವಾಸ ಕಲ್ಯಾಣದ ವಿವರ ನೀಡಿದ್ದಾರೆ. ಕೆ.ಮಂಜು ಅವರೊಂದಿಗೆ ಪ್ರಸನ್ನ, ಬ್ಯಾಂಕ್ ಶ್ರೀನಿವಾಸ್, ರೈಲ್ವೆ ರಾಮಚಂದ್ರು, ಅರಳೀಕರೆ ಶಿವಯ್ಯ, ಅರಳೀಕರೆ ರವಿಕುಮಾರ್, ಕೋಳಿಘಟ್ಟ ಶಿವಾನಂದ್, ವೆಂಕಟೇಶ್, ಉಪ್ಪಿ ಮೊದಲಾದವರು ಭಾಗವಹಿಸಿದ್ದರು.

  ಶ್ರೀನಿವಾಸ ಕಲ್ಯಾಣಕ್ಕೆ ಯಾರು ಬೇಕಾದರೂ ಹೋಗಬಹುದು. ತಿಮ್ಮಪ್ಪನ ದರ್ಶನವಷ್ಟೇ ಅಲ್ಲ, ಭಕ್ತರಿಗೆ ತಿರುಪತಿ ಲಡ್ಡು ಕೂಡಾ ಸಿಗಲಿದೆ.

 • ಕೆ.ಮಂಜು ಪುತ್ರ ಈಗ ಪಡ್ಡೆಹುಲಿ

  k manju's son to enter films

  ಕೆ.ಮಂಜು, ಕನ್ನಡದ ಹೆಸರಾಂತ ನಿರ್ಮಾಪಕ. 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಮಂಜು, ಹತ್ತಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ ಸಾಧಕ. ಈಗ ಅವರ ಮಗ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಹೆಸರು ಪಡ್ಡೆಹುಲಿ.

  ಪಡ್ಡೆಹುಲಿ ಎಂದ ಕೂಡಲೇ ನಿಮಗೆ ರಾಜಾಹುಲಿ ನೆನಪಾಗಿರಬೇಕಲ್ಲ. ಹೌದು, ಈ ಪಡ್ಡೆಹುಲಿಯ ನಿರ್ದೇಶಕ ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ. ರವಿಚಂದ್ರನ್ ಅವರ ಪ್ರೇಮಲೋಕವನ್ನು ಈ ಜನರೇಷನ್ ಹುಡುಗನ ಮೂಲಕ ಹೇಗೆ ನೋಡೋಕೆ ಸಾಧ್ಯ ಅನ್ನೋ ಕುತೂಹಲಕ್ಕೆ ಈ ಚಿತ್ರದಲ್ಲಿ ಉತ್ತರವಿದೆಯಂತೆ. ಇದೊಂದು ಪಕ್ಕಾ ಯೂತ್‍ಫುಲ್ ಸಬ್ಜೆಕ್ಟ್. ಒಬ್ಬ ಹೊಸ ಹೀರೋನ ಮಾಸ್ ಎಂಟ್ರಿಗೆ ಬೇಕಾದ ಎಲ್ಲ ಅಂಶಗಳೂ ಚಿತ್ರದಲ್ಲಿರುತ್ತವೆ ಎಂದಿದ್ದಾರೆ ನಿರ್ದೇಶಕ ಗುರುದೇಶಪಾಂಡೆ.

  ನನ್ನ ಮಗನ ಲಾಂಚಿಂಗ್ ಚಿತ್ರ ಬೇರೊಬ್ಬ ನಿರ್ಮಾಪಕನ ಮೂಲಕ ಆಗುತ್ತಿದೆ ಎನ್ನುವುದೇ ದೊಡ್ಡ ಖುಷಿ ಎಂದಿದ್ದಾರೆ ಕೆ.ಮಂಜು. ಚಿತ್ರಕ್ಕೆ ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿ ಮಾಡಿಕೊಳ್ಳಲು ಹುಡುಕಾಟ ನಡೆಯುತ್ತಿದೆ. ಹೊಸ ಪ್ರತಿಭೆಯನ್ನೇ ಆಯ್ಕೆ ಮಾಡಿಕೊಳ್ಳಲು ಗುರು ದೇಶಪಾಂಡೆ ನಿರ್ಧರಿಸಿದ್ದಾರೆ.

  ನಿರೀಕ್ಷೆಗಳನ್ನು ಹುಸಿಗೊಳಿಸೋದಿಲ್ಲ. ಎಲ್ಲರ ಕುತೂಹಲಗಳಿಗೆ ಅಭಿನಯದ ಮೂಲಕ ಉತ್ತರ ಕೊಡುತ್ತೇನೆ ಎನ್ನುವುದು ಶ್ರೇಯಸ್ ಆತ್ಮವಿಶ್ವಾಸದ ಭರವಸೆ. ಚಿತ್ರಕ್ಕೆ ನಾಯಕಿಯೊಬ್ಬಳನ್ನು ಬಿಟ್ಟು ಮಿಕ್ಕಿದ್ದೆಲ್ಲವೂ ಫೈನಲ್ ಆಗಿದೆ. ಮುಂದಿನ ತಿಂಗಳು ಚಿತ್ರ ಶುರುವಾಗಲಿದೆ.

 • ನಿರ್ಮಾಪಕ ಕೆ. ಮಂಜು.. ಇನ್ನು ಮುಂದೆ ಡಾಕ್ಟರ್ ಕೆ.ಮಂಜು

  producer k manju gets honorary doctrorate

  ನಿರ್ಮಾಪಕ ಕೆ.ಮಂಜು ಅವರನ್ನು ಇನ್ನು ಮುಂದೆ ಡಾ. ಕೆ.ಮಂಜು ಎಂದು ಸಂಬೋಧಿಸಬೇಕು. ಅವರೀಗ ಡಾಕ್ಟರ್ ಮಂಜು ಆಗಿದ್ದಾರೆ. ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್ ವಿಶ್ವವಿದ್ಯಾಲಯ ಕೆ.ಮಂಜು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

  ಸಿನಿಮಾ ಕ್ಷೇತ್ರದಲ್ಲಿ ಕೆ.ಮಂಜು ಅವರ ಸಾಧನೆ ಗುರುತಿಸಿ ಈ ಗೌರವ ನೀಡಿದೆ ವಿಶ್ವ ವಿದ್ಯಾಲಯ. ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಮಂಜು ಅವರಿಗೆ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ.

  ಕೆ.ಮಂಜು ತಮ್ಮ ಕೆ.ಮಂಜು ಸಿನಿಮಾಸ್ ಮತ್ತು ಲಕ್ಷ್ಮಿಶ್ರೀ ಕಂಬೈನ್ಸ್ ಬ್ಯಾನರ್‍ಗಳಲ್ಲಿ ಅನುರಾಗ ಸಂಗಮ, ಜಮೀನ್ದಾರ್ರು, ವಾಲಿ, ಜೇನುಗೂಡು, ರಾಜಾಹುಲಿ, ಹೃದಯವಂತ, ಸಾಹುಕಾರ, ಮಾತಾಡ್ ಮಾತಾಡ್ ಮಲ್ಲಿಗೆ, ವಾಲಿ.. ಮೊದಲಾದ ಹತ್ತು ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ

 • ಪಡ್ಡೆಹುಲಿ ಶುರುವಾಯ್ತು

  k manju's paddehuli launched

  ಕೆ.ಮಂಜು ಪುತ್ರ ಶ್ರೇಯಸ್ ನಾಯಕರಾಗಿ ನಟಿಸುತ್ತಿರುವ ಪಡ್ಡೆಹುಲಿ ಸಿನಿಮಾಗೆ ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ. ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿಯ ದೇವಸ್ಥಾನದಲ್ಲಿ ನಡೆದ ಮುಹೂರ್ತಕ್ಕೆ, ಭಾರತಿ ವಿಷ್ಣುವರ್ಧನ್ ದೀಪ ಬೆಳಗಿಸಿ ಚಾಲನೆ ನೀಡಿದರು.

  ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಕಿಚ್ಚ ಸುದೀಪ್. ಕ್ಯಾಮೆರಾ ಚಾಲನೆ ನೀಡಿದ್ದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಹೊಸ ಪ್ರತಿಭೆಗೆ ಇಬ್ಬರು ಸ್ಟಾರ್‍ಗಳು ಶುಭ ಹಾರೈಸಿದ್ದು ವಿಶೇಷ.

  ಇನ್ನು ಚಿತ್ರ ಯಾವುದೇ ಚಿತ್ರದ ರೀಮೇಕ್ ಅಲ್ಲ ಎಂದಿದ್ದಾರೆ ನಿರ್ಮಾಪಕ ಕೆ.ಮಂಜು. ಚಿತ್ರದ ಕಥೆಯೂ ಅವರದ್ದೇ ಅಂತೆ. ಎಂ.ರಮೇಶ್ ರೆಡ್ಡಿ ನಿರ್ಮಾಣದ ಚಿತ್ರಕ್ಕೆ ಗುರು ದೇಶಪಾಂಡೆ ನಿರ್ದೇಶಕ.

   

 • ಪಡ್ಡೆಹುಲಿಗೆ ಡಿವಿಜಿ, ಕೆಎಸ್‍ನ, ಜಿಪಿ ರಾಜರತ್ನಂ ಗೀತೆಗಳು..!

  paddhuli gets kannada literature songs

  ಸಿನಿಮಾ ಸಾಹಿತ್ಯ ಹಾಳಾಗೋಯ್ತು ಕಣ್ರಿ. ನಮ್ ಕಾಲ ಯೆಂಗಿತ್ತು. ಎಂತೆಂತ ಹಾಡು ಬರ್ತಾ ಇದ್ವು ಎಂದು ನಿಟ್ಟುಸಿರುವ ಬಿಡುವ ವರ್ಗ ಕನ್ನಡದಲ್ಲಿ ಸ್ವಲ್ಪ ದೊಡ್ಡದೇ ಇದೆ. ಕನ್ನಡದಲ್ಲಿ ಸಾಹಿತ್ಯಕ್ಕೇನು ಕೊರತೆ ಎಂದು ಪ್ರಶ್ನಿಸುವವರಿಗೂ ಕೊರತೆಯಿಲ್ಲ. ಅದು ಸತ್ಯವೂ ಹೌದು. ಈಗ.. ಹಾಗೆ ನಿಟ್ಟುಸಿರು ಬಿಡುವವರಿಗೆಲ್ಲ ಉತ್ತರವೆಂಬಂತೆ ಬರುತ್ತಿದೆ ಪಡ್ಡೆಹುಲಿ.

  ಸಿನಿಮಾದಲ್ಲಿ ಡಿವಿಜಿ ಅವರ ಬದುಕು ಜಟಕಾ ಬಂಡಿ.. ಕೆಎಸ್ ನರಸಿಂಹ ಸ್ವಾಮಿ ಅವರ ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ.. ಜಿಪಿ ರಾಜರತ್ನಂ ಅವರ ಹೆಂಡ ಹೆಂಡ್ತಿ ಕನ್ನಡ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ.. ಬಿ.ಆರ್.ಲಕ್ಷ್ಮಣ್‍ರಾವ್ ಅವರ ಹೇಳಿ ಹೋಗು ಕಾರಣ.. ಹಾಡುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚಿತ್ರದ ಹೀರೋ ಶ್ರೇಯಸ್, ಸಿನಿಮಾದಲ್ಲಿ ಗಾಯಕನೂ ಹೌದು. ಅದಕ್ಕಾಗಿ ಈ ಎಲ್ಲ ಭಾವಗೀತೆಗಳೂ ಬಳಕೆಯಾಗಲಿವೆ.

  ಕೆ.ಮಂಜು ಪುತ್ರ ಶ್ರೇಯಸ್ ಅಭಿನಯಿಸುತ್ತಿರುವ ಮೊದಲ ಸಿನಿಮಾ. ಗುರುದೇಶಪಾಂಡೆ ನಿರ್ದೇಶನದ ಸಿನಿಮಾಗೆ ಎಂ. ರಮೇಶ್  ರೆಡ್ಡಿ ನಿರ್ಮಾಪಕರು. ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ನಾಯಕಿ. ಚಿತ್ರದಲ್ಲಿ ಸ್ಪೆಷಲ್ಲಾಗಿ ವಿ.ರವಿಚಂದ್ರನ್ ನಟಿಸುತ್ತಿದ್ದಾರೆ.

 • ಪಡ್ಡೆಹುಲಿಯ ವಿಷ್ಣು ಪ್ರೇಮ

  paddehli vishnu rap song

  ಪಡ್ಡೆಹುಲಿ. ವಿಷ್ಣುವರ್ಧನ್ ಅವರನ್ನು ಗುರು ಎಂದೇ ಸ್ವೀಕರಿಸಿರುವ ಕೆ.ಮಂಜು ಅವರ ಮಗ ಶ್ರೇಯಸ್ ಅಬಿನಯದ ಮೊದಲ ಸಿನಿಮಾ. ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರತಂಡ, ವಿಷ್ಣು ಹುಟ್ಟುಹಬ್ಬಕ್ಕೆ ವಿಶೇಷ ರ್ಯಾಪ್ ಸಾಂಗ್ ರಿಲೀಸ್ ಮಾಡುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಚಾಮುಂಡಿ ತಾಯಿ ಮಡಿಲಲ್ಲಿ ಹುಟ್ಟಿ, ದುರ್ಗದ ಕೋಟೆಯಲ್ಲಿ ಬೆಳಕು ಕಂಡ ವಿಷ್ಣು ಚಿತ್ರಣವಿದೆ.

  ಸಿನಿಮಾದಲ್ಲಿ ಹೀರೋ ವಿಷ್ಣುವರ್ಧನ್ ಅಭಿಮಾನಿ. ನಾಯಕ ಗುರಿ ಮುಟ್ಟುವುದಕ್ಕೆ ನಾಗರಹಾವು ಸಿನಿಮಾ ಸ್ಫೂರ್ತಿಯಾಗುತ್ತೆ. ಚಿತ್ರದ ಕಥೆ ಶುರುವಾಗುವುದೇ ಚಿತ್ರದುರ್ಗದ ಕೋಟೆಯಿಂದ ಎಂದು ಕಥೆಯ ಒಂದಿಷ್ಟು ಎಳೆ ಬಿಟ್ಟುಕೊಟ್ಟಿದ್ದಾರೆ ಗುರು ದೇಶಪಾಂಡೆ.

  ನನಗೆ ವಿಷ್ಣು ಸರ್ ಗುರುಗಳು. ನನ್ನ ಬದುಕಿನ ಬಹುದೊಡ್ಡ ತಿರುವು, ಯಶಸ್ಸಿಗೆ ವಿಷ್ಣು ಸರ್ ಕಾರಣ. ಹೀಗಾಗಿ ನನ್ನ ಮಗನ ಮೊದಲ ಸಿನಿಮಾ ವಿಷ್ಣು ಸರ್ ಆಶೀರ್ವಾದ ಬೇಕು. ಅವರಿಗೆ ನಮನ ಸಲ್ಲಿಸಲಿಕ್ಕೆಂದೇ ಪಡ್ಡೆಹುಲಿ ಚಿತ್ರ ತಂಡದಿಂದ ಈ ರ್ಯಾಪ್ ಸಾಂಗ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಕೆ.ಮಂಜು.

 • ಬುಕ್ ಮೈ ಶೋ ವಿರುದ್ಧ ಸಿಡಿದೆದ್ದ ಕೆ.ಮಂಜು

  k manju balsts book my show

  ಬುಕ್ ಮೈ ಶೋ ಆಗಾಗ್ಗೆ ವಿವಾದಕ್ಕೆ ಸಿಲುಕುತ್ತಲೇ ಇದೆ. ಕನ್ನಡ ಚಿತ್ರಗಳ ವಿಚಾರದಲ್ಲಂತೂ ಬುಕ್ ಮೈ ಶೋ ವಿರುದ್ಧ ದೂರುಗಳ ಸರಮಾಲೆಯೇ ಇದೆ. ಇತ್ತೀಚೆಗೆ ಕನ್ನಡ ಚಿತ್ರಗಳಿಗೆ ಟಿಕೆಟ್ ಖಾಲಿಯಿದ್ದರೂ, ಹೌಸ್‍ಫುಲ್ ಎಂದು ತೋರಿಸುವುದು.. ನಂತರ ಶೋ ಶುರುವಾಗದ ಮೇಲೆ ಖಾಲಿ ಖಾಲಿ ತೋರಿಸಿ, ಜನರೇ ಇಲ್ಲ ಎಂಬಂತೆ ಬಿಂಬಿಸಿ ಚಿತ್ರವನ್ನು ಎತ್ತಂಗಡಿ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

  ಇನ್ನು ರಿಲೀಸೇ ಆಗದ ಚಿತ್ರಕ್ಕೂ ಕೆಟ್ಟ ವಿಮರ್ಶೆ ಹಾಕಿ ರೇಟಿಂಗ್ ಕೊಡುವ ಕೆಟ್ಟ ಸಂಪ್ರದಾಯವನ್ನೂ ಆರಂಭಿಸಿತ್ತು. ಹೀಗೆ ಸದಾ ವಿವಾದಲ್ಲೇ ಇರುವ ಬುಕ್ ಮೈ ಶೋ ವಿರುದ್ಧ ಈಗ ನಿರ್ಮಾಪಕ ಕೆ.ಮಂಜು ಸಿಟ್ಟಿಗೆದ್ದಿದ್ದಾರೆ.

  ಬುಕ್ ಮೈ ಶೋನಲ್ಲಿ ಹಣ ಕೊಟ್ಟರಷ್ಟೇ ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಬರುತ್ತವೆ. ಒಳ್ಳೆಯ ರೇಟಿಂಗ್ ಕೊಡುತ್ತಾರೆ. ಅದೊಂದು ದೊಡ್ಡ ದಂಧೆ ಎಂದು ಕೆಂಡ ಕಾರಿದ್ದಾರೆ ಮಂಜು. ಅಲ್ಲಿ ಪರ್ಸೆಂಟೇಜ್ ಲೆಕ್ಕಾಚಾರದ ಮೇಲೆ ಸೀಟ್ ಫಿಲ್ಲಿಂಗ್ ಎಂದು ತೋರಿಸಿ ವಂಚಿಸಲಾಗುತ್ತೆ ಎಂಬ ಆರೋಪವನ್ನೂ ಮಾಡಿದ್ದಾರೆ ಮಂಜು.

  ಅವರಿಗೆ ಹಣ ಕೊಟ್ಟರೆ, ಯಾವಾಗಲೂ ಶೇ.80ರಷ್ಟು ಫುಲ್ ಎಂಬಂತೆ ತೋರಿಸಿ ಕ್ರೇಜ್ ಸೃಷ್ಟಿಸುತ್ತಾರೆ. ಬೇರೆ ಭಾಷೆಯ ಚಿತ್ರಗಳು ಇಂಥ ದಂಧೆಯನ್ನು ನಡೆಸುತ್ತಿವೆ. ಅಂಥಾದ್ದೊಂದು ಕಾಲ್ ನನಗೂ ಬಂದಿತ್ತು ಎಂಬ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ ಮಂಜು.

  ಬುಕ್ ಮೈ ಶೋನಲ್ಲಿ ಏನೇನೆಲ್ಲ ಆಗುತ್ತೋ..ಹೇಳೋರ್ಯಾರು..?

 • ರವಿಚಂದ್ರನ್ ಸಿನಿಮಾ.. ಆ ದೃಶ್ಯ

  ravichandran k manju movie titled aa drishya

  ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನಿರ್ಮಾಪಕ ಕೆ.ಮಂಜು ಕಾಂಬಿನೇಷನ್‍ನ ಶಿವಗಣೇಶ್ ನಿರ್ದೇಶನದ ಚಿತ್ರಕ್ಕೆ ಆ ದೃಶ್ಯ ಎಂದು ಹೆಸರಿಡಲಾಗಿದೆ. ರವಿಚಂದ್ರನ್ ಈ ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ ಗೆಟಪ್‍ನಲ್ಲಿ ನಟಿಸುತ್ತಿದ್ದಾರೆ. ಈ ಗೆಟಪ್‍ನಲ್ಲಿ ಅವರು 20 ವರ್ಷ ಚಿಕ್ಕವರಂತೆ ಕಾಣಿಸುತ್ತಿರುವುದು ವಿಶೇಷ.

  ದೃಶ್ಯ ಚಿತ್ರದಲ್ಲಿ ಕುಟುಂಬಕ್ಕಾಗಿ ಪೊಲೀಸರನ್ನೇ ಯಾಮಾರಿಸುವ ಪಾತ್ರದಲ್ಲಿ ನಟಿಸಿದ್ದ ರವಿಚಂದ್ರನ್, ಆ ದೃಶ್ಯ ಚಿತ್ರದಲ್ಲಿ ಸ್ವತಃ ಅವರೇ ಒಬ್ಬ ಪೊಲೀಸ್. ಜಿಗರ್‍ಥಂಡ ಖ್ಯಾತಿಯ ಶಿವಗಣೇಶ್ ಅವರ ಚಿತ್ರಕಥೆ ಹಾಗೂ ಕಥೆ ಹೇಳುವ ಶೈಲಿಯನ್ನು ರವಿಚಂದ್ರನ್ ಮೆಚ್ಚಿಕೊಂಡಿದ್ದು, ಚಿತ್ರಕ್ಕೆ ಈಗ ಆ ದೃಶ್ಯ ಎಂಬ ಟೈಟಲ್‍ನ್ನೇ ಫೈನಲ್ ಮಾಡಲಾಗಿದೆಯಂತೆ. ದೃಶ್ಯದಂತೆಯೇ ಆ ದೃಶ್ಯವೂ ಸಕ್ಸಸ್ ಆಗಲಿ ಎನ್ನುವುದು ಎಲ್ಲರ ಹಾರೈಕೆ.

 • ರವಿಚಂದ್ರನ್‍ರಿಂದ ಮತ್ತೊಂದು ಥ್ರಿಲ್ಲರ್

  ravichandran and k manju team up for a movie

  ದೃಶ್ಯ ಚಿತ್ರದಂತಾ ಥ್ರಿಲ್ಲರ್ ಮೂಲಕ ಮತ್ತೆ ಹಿಟ್ ಸಿನಿಮಾ ಕೊಟ್ಟ ರವಿಚಂದ್ರನ್, ಈಗ ಮತ್ತೂ ಒಂದು ಥ್ರಿಲ್ಲರ್ ಕಥೆ ಮಾಡುತ್ತಿದ್ದಾರೆ. ಈ ಬಾರಿ ರವಿಚಂದ್ರನ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡುತ್ತಿರುವುದು ಮಂಜು ಬ್ಯಾನರ್‍ಗೆ. ಕೆ. ಮಂಜು ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾಗೆ ರವಿಚಂದ್ರನ್ ಹೀರೋ. ಜಿಗರ್‍ಥಂಡ ಖ್ಯಾತಿಯ ಶಿವಗಣೇಶ್ ನಿರ್ದೇಶನವಿರುತ್ತೆ.

  ಈ ಸಿನಿಮಾ ತಮಿಳಿನ ದುರುವಂಗಲ್ ಪದಿನಾರು ಚಿತ್ರದ ರೀಮೇಕ್. ತೆಲುಗಿನಲ್ಲಿ 16 ಹೆಸರಲ್ಲಿ ಡಬ್ಬಿಂಗ್ ಆಗಿದ್ದ ಸಿನಿಮಾವನ್ನ ಕನ್ನಡಕ್ಕೆ ತರುತ್ತಿದ್ದಾರೆ ಕೆ. ಮಂಜು. ಒಂದು ಕೊಲೆಯ ಸುತ್ತಲೇ ಸುತ್ತುವ ಕಥೆ, ಕಟ್ಟಕಡೆಯವರೆಗೂ ಕುತೂಹಲ ಹುಟ್ಟಿಸುತ್ತೆ. ಚಿತ್ರದಲ್ಲಿ ರವಿಚಂದ್ರನ್ ಅವರದ್ದು ತನಿಖಾಧಿಕಾರಿಯ ಪಾತ್ರ. ಈ ಹಿಂದೆ ಮಂಜು ಜೊತೆ ಸಾಹುಕಾರ, ಕಳ್ಳಮಳ್ಳಸುಳ್ಳ, ಒಡಹುಟ್ಟಿದವಳು, ರಾಜಕುಮಾರಿ.. ಮೊದಲಾದ ಚಿತ್ರ ಮಾಡಿದ್ದ ರವಿಚಂದ್ರನ್, ಮತ್ತೊಮ್ಮೆ ಮಂಜು ಜೊತೆಯಾಗಿದ್ದಾರೆ.

 • ಸ್ಮಾರ್ಟ್ ರವಿಚಂದ್ರನ್... ಕೆ.ಮಂಜು ಪ್ರೊಡಕ್ಷನ್ ನಂ.42

  k manju's new film with ravichandran

  ಜಿಗರ್‍ಥಂಡಾ, ತ್ರಾಟಕ ಚಿತ್ರಗಳ ನಿರ್ದೇಶಕ ಶಿವನಾಗೇಶ್, ಈಗಾಗಲೇ 41 ಸಿನಿಮಾ ನಿರ್ಮಿಸಿರುವ ನಿರ್ಮಾಪಕ ಕೆ.ಮಂಜು. ಕನ್ನಡಿಗರ ಕ್ರೇಜಿಸ್ಟಾರ್ ರವಿಚಂದ್ರನ್...ಇವರೆಲ್ಲರ ಮಿಲನ ಪ್ರೊಡಕ್ಷನ್ ನಂ.42. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಇದು ಮಂಜು ಬ್ಯಾನರ್‍ನ 42ನೇ ಸಿನಿಮಾ. 

  ಇದು ಹಾರರ್ ಸಿನಿಮಾ ಅಂತೆ. ಇದುವರೆಗೆ ರವಿಚಂದ್ರನ್ ಹಾರರ್ ಸಿನಿಮಾದಲ್ಲಿ ನಟಿಸಿಯೇ ಇಲ್ಲ. ಅವರಿಗೂ ಇದು ಹೊಸ ಪ್ರಯತ್ನ. ರವಿಚಂದ್ರನ್ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದು, ತನ್ನ ವೃತ್ತಿ ಜೀವನದ ಅತ್ಯಂತ ಕಠಿಣ ಚಾಲೆಂಜ್ ಎದುರಿಸುವ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಆತನ ಜೀವವನ್ನೇ ಕಿತ್ತುಕೊಳ್ಳುವ ಹಂತಕ್ಕೆ ತೆಗೆದುಕೊಂಡುತ್ತೆ. ಅದರಿಂದ ಹೇಗೆ ಬಚಾವ್ ಆಗುತ್ತಾನೆ ಅನ್ನೋದು ಚಿತ್ರದ ಕಥೆ. 

  ಮುಂದಿನ ವರ್ಷ 50ನೇ ಸಿನಿಮಾ ಮಾಡುತ್ತೇನೆ. ನಿರ್ಮಾಪಕನಾಗಿ ಅರ್ಧಶತಕ ಪೂರೈಸುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ ಕೆ.ಮಂಜು. ಈ ಸಿನಿಮಾ ಒಂದೇ ಶೆಡ್ಯೂಲ್‍ನಲ್ಲಿ ಶೂಟಿಂಗ್ ಮುಗಿಸಿಕೊಳ್ಳಲಿದ್ದು, ವರ್ಷದ ಕೊನೆಗೆ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ ಮಂಜು.

Yajamana Movie Gallery

Bazaar Movie Gallery