` kattukathe, - chitraloka.com | Kannada Movie News, Reviews | Image

kattukathe,

 • 'Kattukathe' Releasing Today

  kattukathe releasing today

  Surya, Swathi Konde starrer 'Kattukathe' is all set to release tomorrow on the 15th of June. Recently, the songs of the film was released by Yogaraj Bhatt and Soori.

  'Kattukathe' is written and directed by Raj Praveen. Manju Masthi who wrote dialogues for 'Tagaru' has written the dialogues for the film. The film is being produced by Sweets Mahadeva and N Savitha.

  'Kattukathe' stars Rajesh Nataranga, Mitra, Tumkur Mohan, Mohan Juneja, Kempegowda and others. Manu is the cameraman, while Vikram Subramanya has composed songs for the film.

 • Kattu Kathe Review, Chitraloka Rating 3.5/5

  kattu kathe review

  Kattu Kathe is a suspense thriller that has a twist in every scene. It starts with unusual characters and then moves on to become a serial murder mystery. As a series of seemingly unconnected persons are getting murdered in strange ways it is left to the CCB investigator to prove that it is not a ghost which is behind it but a real person with a motive. Does he succeed? Watch this nicely narrated film to find out. 

  Three girsl go to a farmhouse to complete a project. There the various characters are introduced including that of a mute guy played by Surya. He is so good at his work that people do not even realize it at first. It looks like a good place until a death occurs. Then one more. It seems everyone is a suspect and everyone is in danger. Who is behind it really? Many suspect it is a ghost as the deaths are very strange.

  Finally the case is handled by a CCB officer. Even he is stumped by the strange happenings. There are also more deaths and back stories of the characters that complicate the suspicion. But how does he solve the crime? It is a nice investigation work that gives the audience nice entertainment. After many twists and turns no one can guess who the killer is or his motive. 

  All the actors have given good performances be it Rajesh Nataranga, Surya, Swathi Konde or Mithra. Raj Praveen has handled the subject very well. It is not easy to keep the suspense and provide entertainment at the same time. But he does it convincingly. Vikram Subramaniam as the music composer and Manu BK as the cinematographer have provided able support to him and keep the film a quick paced thriller. It is one of the better Kannada films releasing this year. 

 • ಕಿವುಡ ಹೀರೋನ ಕಥೆ ನೋಡೋಕೆ ರೆಡಿಯಾಗಿ

  story of deaf hero

  ಇತ್ತೀಚೆಗೆ ತೆಲುಗಿನಲ್ಲಿ ರಂಗಸ್ಥಳಂ ಅನ್ನೋ ಸಿನಿಮಾ ಬಂದಿತ್ತು. ಚಿತ್ರದ ನಾಯಕ ರಾಮ್‍ಚರಣ್ ಕಿವುಡನಾಗಿ ನಟಿಸಿದ್ದರು. ಚಿತ್ರ ಬಾಕ್ಸಾಫೀಸ್‍ನಲ್ಲೂ ಸಕ್ಸಸ್ ಆಗಿತ್ತು. ಈಗ ಕನ್ನಡದಲ್ಲೂ ಕಿವುಡನ ಪಾತ್ರವೇ ಹೀರೋ ಆಗಿರುವ ವಿಭಿನ್ನ ಸಿನಿಮಾ ಬರುತ್ತಿದೆ. ಅದು ಕಟ್ಟುಕಥೆ.

  ಕಟ್ಟುಕಥೆ ಚಿತ್ರದ ನಾಯಕ ಸೂರ್ಯ, ಚಿತ್ರದಲ್ಲಿ ಶೇ.80ರಷ್ಟು ಕಿವುಡನಾಗಿ ನಟಿಸಿದ್ದಾರೆ. ಫ್ಯಾಕ್ಟರಿಯೊಂದರ ಸ್ಫೋಟದಲ್ಲಿ ಕಿವಿ ಕಳೆದುಕೊಂಡ ಹೀರೋ, ಆಪರೇಷ್‍ನೆ ಮುನ್ನ ಒಂದು ಜಾಗಕ್ಕೆ ಹೋಗುತ್ತಾನೆ. ಅಲ್ಲಿ ಹೀರೋಯಿನ್ನೂ ಇರ್ತಾಳೆ. ಏನೂ ಕೇಳಿಸದಿದ್ದರೂ, ಎಲ್ಲವೂ ಗೊತ್ತಿರುವ ಹಾಗೆ ನಟಿಸುವ ಹೀರೋ, ಅಲ್ಲೊಂದು ಕೊಲೆ.. ಬುದ್ದಿವಂತ ಕೊಲೆಗಾರ.. ಚಾಣಾಕ್ಷ ಅಧಿಕಾರಿ.. ಹೀಗೆ ಇಡೀ ಕಥೆ ಉಸಿರಾಡುವುದಕ್ಕೂ ಆಸ್ಪದ ಕೊಡದೆ ಥ್ರಿಲ್ ಕೊಡುತ್ತೆ ಅನ್ನೋದು ನಟ ಸೂರ್ಯ ಭರವಸೆ.

  ಚಿತ್ರದ ನಿರ್ದೇಶಕ ಪ್ರವೀಣ್ ರಾಜ್, ಶೂಟಿಂಗ್ ಸ್ಪಾಟ್‍ಗೆ ಎಷ್ಟರಮಟ್ಟಿಗೆ ಸಿದ್ಧರಾಗಿ ಬರೋವ್ರು ಅಂದ್ರೆ, ಒಂದು ಪಾತ್ರ ಎಲ್ಲಿ ನಿಲ್ಲಬೇಕು, ಎಷ್ಟು ಏರಿಳಿತದಲ್ಲಿ ಮಾತನಾಡಬೇಕು ಅನ್ನೋದನ್ನೂ ಫಿಕ್ಸ್ ಮಾಡಿರೋರು. ಅಷ್ಟರಮಟ್ಟಿಗೆ ಪ್ರೊಫೆಷನಲ್ ಎಂದು ನಿರ್ದೇಶಕರನ್ನು ಹೊಗಳುತ್ತಾರೆ ಸೂರ್ಯ.

  ರತ್ನಜ ನಿರ್ದೇಶನದ ಪ್ರೀತಿಯಲ್ಲಿ ಸಹಜ ಚಿತ್ರದ ನಂತರ ಸೂರ್ಯ ಅಭಿನಯಿಸುತ್ತಿರುವ ಸಿನಿಮಾ ಇದು. ಮಹಾದೇವ್ ನಿರ್ಮಾಣದ ಚಿತ್ರಕ್ಕೆ ಸ್ವಾತಿ ಕೊಂಡೆ ನಾಯಕಿ. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

 • ಟಗರು ಚಿತ್ರದ ನಾಯಕನೇ, ಕಟ್ಟುಕಥೆಗೂ ನಾಯಕ

  kattukathe has masthi dialogues

  ಕಟ್ಟುಕಥೆ. ಈಗ ಥಿಯೇಟರ್‍ನಲ್ಲಿರುವ ಚಿತ್ರ, ನೈಜ ಕಥೆ, ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಎಲ್ಲವೂ ಇರುವ ವಿಭಿನ್ನ ಶೈಲಿಯ ಸಿನಿಮಾ. ಸೂರ್ಯ, ಸ್ವಾತಿಕೊಂಡೆ, ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿರುವ ಚಿತ್ರ ಇದು. ಈ ಚಿತ್ರದ ಇನ್ನೊಬ್ಬ ನಾಯಕ ಮಾಸ್ತಿ. ಟಗರು ಚಿತ್ರದ ಸಂಭಾಷಣೆಗಳಿಂದಾಗಿ ಸ್ಟಾರ್ ಆದ ಮಾಸ್ತಿ, ಕಟ್ಟುಕಥೆ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಶಕ್ತಿಯಲ್ಲಿ ಒಂದು ಸಂಭಾಷಣೆ. ಹೀಗಾಗಿಯೇ ಟಗರು ಸಂಭಾಷಣೆಯ ಹೀರೋ, ಕಟ್ಟುಕಥೆಗೂ ಹೀರೋ ಆಗಿದ್ದಾರೆ.

  ಟಗರು ನಂತರ ನಾನು ಸಂಭಾಷಣೆ ಬರೆದಿರುವ ಇನ್ನೊಂದು ಚಿತ್ರ ಕಟ್ಟುಕಥೆ. ಕ್ರೈಂ, ಸಮಾಜ, ಅದನ್ನು ನೋಡುವ ದೃಷ್ಟಿಕೋನ.. ಒಟ್ಟಿನಲ್ಲಿ ಇದು ಅಪರೂಪದ ಕಥೆ. ಟಗರು ನಂತರ ಮಾಡಿರುವ ಸಿನಿಮಾ ಆದ ಕಾರಣ, ನನಗೂ ಕಾತುರವಿದೆ. ಮೀನು ಹಿಡಿಯೋದು ಸುಲಭ, ಬಲೆ ಹೆಣೆಯೋದು ಕಷ್ಟ. ಈ ಚಿತ್ರದಲ್ಲಿ ಬಲೆ ಹೆಣೆದಿದ್ದಾರೆ. ಚಿತ್ರದ ಕಥೆಗೆ ಅಮೀಬಾ ಎಂದು ಹೆಸರಿಟ್ಟರೆ ಚೆಂದ ಎಂದು ನಾನೇ ಹೇಳಿದ್ದೆ. ಅಷ್ಟು ಇಂಟೆಲಿಜೆಂಟ್ ಕಥೆ ಚಿತ್ರದಲ್ಲಿದೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ಟಗರು ಮಾಸ್ತಿ.

  ಮಹಾದೇವ್, ಸವಿತಾ ನಿರ್ಮಾಣದ ಚಿತ್ರಕ್ಕೆ ರಾಜ್ ಪ್ರವೀಣ್ ನಿರ್ದೇಶನವಿದೆ. ಕಟ್ಟುಕಥೆ ಖಂಡಿತಾ ಥ್ರಿಲ್ ಕೊಡುತ್ತೆ. ಅದು ಚಿತ್ರತಂಡದ ಪ್ರಾಮಿಸ್.

 • ಡ್ರೈವರ್ ಹನುಮಂತುವಿನ ಬಾಲಕಿ ಕಟ್ಟುಕಥೆಯ ನಿರ್ಮಾಪಕಿ

  child artist turns producer with kattu kathe

  ಡ್ರೈವರ್ ಹನುಮಂತು. ಅದು ಶಿವರಾಮ್ ಅಭಿನಯದ ಕನ್ನಡ ಸಿನಿಮಾ. ಆ ಚಿತ್ರದಲ್ಲಿ ಕರಾಟೆ ಆಡುವ ಪುಟ್ಟ ಬಾಲಕಿಯಾಗಿ ನಟಿಸಿದ್ದ ಹುಡುಗಿ, ಈಗ ನಿರ್ಮಾಪಕಿ. ಈಕೆ ಎನ್. ಸವಿತಾ.

  ಡ್ರೈವರ್ ಹನುಮಂತು ಚಿತ್ರದಲ್ಲಿ ನಟಿಸಿದ್ದಾಗ ನನಗೆ 11 ವರ್ಷ. ಅಷ್ಟೆ. ಅಷ್ಟೊತ್ತಿಗಾಗಲೇ ಗ್ರೀನ್‍ಬೆಲ್ಟ್ ಪಡೆದಿದ್ದ ನಾನು, ಸಿನಿಮಾದಲ್ಲೂ ಅದೇ ಪಾತ್ರ ಮಾಡಿದ್ದೆ. ಆಮೇಲೆ ಶಿಕ್ಷಣದತ್ತ ಗಮನ ಹರಿಸಿ ಸಿನಿಮಾ ರಂಗದಿಂದ ದೂರವಾದೆ. 

  ಅದಾದ ಮೇಲೆ ರಿಯಲ್ ಎಸ್ಟೇಟ್‍ನಲ್ಲಿದ್ದೆ. ಎರಡು ವರ್ಷದಿಂದ ಆ ಬ್ಯುಸಿನೆಸ್‍ನ್ನೂ ಬಿಟ್ಟೆ. ಹೀಗಿರುವಾಗಲೇ ನಟ ಸೂರ್ಯ ಅವರ ಪರಿಚಯವಾಯ್ತು. ಅವರಿಂದ ಮೈಸೂರು ಸ್ವೀಟ್ಸ್ ಮಹದೇವು ಪರಿಚಯವಾಯ್ತು. ಅವರು ಸಿನಿಮಾ ಮಾಡ್ತಾರೆ ಅಂತಾ ಗೊತ್ತಾಗಿ ನಾನು ಕೂಡಾ ಸಹನಿರ್ಮಾಪಕಿಯಾಗಿ ಸೇರಿಕೊಂಡೆ. ಇದು ಸವಿತಾ ಅವರ ಮಾತು.

  ಕಟ್ಟುಕಥೆ ನಿಜಕ್ಕೂ ಒಳ್ಳೆಯ ಸಿನಿಮಾ. ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ನಿರ್ದೇಶಕ ರಾಜ್ ಪ್ರವೀಣ್ ತುಂಬಾ ಬುದ್ದಿವಂತರು. ಒಳ್ಳೆಯ ಸಿನಿಮಾ ಮಾಡಿದ್ದಾರೆ. ರಾಜೇಶ್ ನಟರಂಗ ಅದ್ಭುತವಾಗಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು, ಡಾ.ಮಹೇಶ್, ಮಹದೇವು ಎಲ್ಲರೂ ಸೇರಿಕೊಂಡೆ ಒಳ್ಳೊಳ್ಳೆಯ ಸಿನಿಮಾ ಮಾಡುತ್ತೇವೆ ಎಂದಿದ್ದಾರೆ ಸವಿತಾ. ಕಟ್ಟುಕಥೆ ಮುಂದಿನ ವಾರ ಬಿಡುಗಡೆಯಾಗುತ್ತಿದೆ.

 • ನೈಜ ಕಥೆಯೇ ಕಟ್ಟುಕಥೆ

  kattukathe is real story

  ಕಟ್ಟುಕಥೆ.. ಇದು ಸಿನಿಮಾದ ಹೆಸರು. ಆದರೆ ಸಿನಿಮಾದಲ್ಲಿರುವ ಕಥೆ, ನೈಜಘಟನೆಯನ್ನಾಧರಿಸಿದ್ದು. ಚಿತ್ರದ ಅಡಿಬರಹವೇ ಅದು.. ಎ ರಿಯಲ್ ಸ್ಟೋರಿ. ನಿರ್ದೇಶಕರ ಗೆಲುವು ಇರುವುದೇ ಇಲ್ಲಿ. ಕಟ್ಟುಕಥೆ.. ಎ ರಿಯಲ್ ಸ್ಟೋರಿ ಅನ್ನೋ ಬರಹದಲ್ಲಿ. ಹಾಗಾದರೆ, ಚಿತ್ರದ ಕಥೆ ಎಂಥದ್ದು.. ಕುತೂಹಲಕ್ಕೆ ಉತ್ತರ ಸಿಗೋದು ಸಿನಿಮಾದಲ್ಲಿ ಮಾತ್ರ.

  ಚಿತ್ರದ ಹೀರೋ ಕಿವುಡ. ಅವನೊಬ್ಬ ಹುಡುಗಿಯನ್ನು ಪ್ರೀತಿಸ್ತಾನೆ. ಅವಳು ಹೇಳೋದೊಂದು, ಇವನು ಅರ್ಥ ಮಾಡಿಕೊಳ್ಳೋದೇ ಮತ್ತೊಂದು. ಆಗ ಸೃಷ್ಟಿಯಾಗುವ ಅವಾಂತರಗಳೇ ಚಿತ್ರದ ಕಥೆ. ಅದರ ನಡುವೆ ಒಂದು ಮರ್ಡರ್ ಮಿಸ್ಟರಿ.

  ಚಿತ್ರಕ್ಕೆ ಮಹದೇವ ಮೈಸೂರು ನಿರ್ಮಾಪಕರು. ಮೂಲತಃ ಸ್ವೀಟ್ ವ್ಯಾಪಾರಿಗಳು, ಈಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ರಾಜ್‍ಪ್ರವೀಣ್ ನಿರ್ದೇಶನದ ಸಿನಿಮಾಗೆ ಸೂರ್ಯ ನಾಯಕರಾದರೆ, ಸ್ವಾತಿ ಕೊಂಡೆ ನಾಯಕಿ. ರಾಜೇಶ್ ನಟರಂಗ ಚಿತ್ರದಲ್ಲಿ ಇನ್ಸ್‍ಪೆಕ್ಟರ್ ಆಗಿದ್ದಾರೆ. ಕಟ್ಟುಕಥೆ ಕೇಳೋಕೆ, ನೋಡೋಕೆ.. ಇನ್ನೊಂದು ಜೂನ್ 15ರ ತನಕ ಕಾಯಿರಿ.

   

 • ರಾಜೇಶ್ ನಟರಂಗ ಕಟ್ಟುಕಥೆ ಅನುಭವ

  rajesh natarajan shares his workinf experience

  ಕಟ್ಟುಕಥೆ ಚಿತ್ರದ ಹೀರೋ ರಾಜೇಶ್ ನಟರಂಗ. ಅವರಿಗೆ ಸಿನಿಮಾ ಹೊಸದಲ್ಲ. ಪೋಷಕ ಪಾತ್ರಗಳಲ್ಲಿ, ಅದರಲ್ಲೂ ಪೊಲೀಸ್ ಪಾತ್ರಗಳಲ್ಲಿ ರಾಜೇಶ್ ನಟರಂಗ ಅವರದ್ದು ಖಡಕ್ ಅಭಿನಯ. ರಂಗಭೂಮಿಯಿಂದ ಬಂದ ರಾಜೇಶ್ ಅವರಿಗೆ ಪಾತ್ರ ಎಂತಹುದೇ ಆದರೂ ಅಭಿನಯ ಸಲೀಸು. ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳದೆ ಇಷ್ಟವಾಗುವ ಪಾತ್ರಗಳಲ್ಲಷ್ಟೆ ನಟಿಸುವ ರಾಜೇಶ್ ನಟರಂಗ ಅವರದ್ದು ಕಟ್ಟುಕಥೆಯಲ್ಲಿ ಕೂಡಾ ಪೊಲೀಸ್ ಪಾತ್ರ.

  ಸಿನಿಮಾದ ಕಥೆಯ ಸೂತ್ರದಾರವೇ ಅವರು. ಕಥೆಯ ಒಂದೊಂದೇ ತಿರುಳನ್ನು ಬಿಚ್ಚುತ್ತಾ ಹೋಗುವ ಪಾತ್ರ ಅವರದ್ದು. ನಿರ್ದೇಶಕ ರಾಜ್ ಪ್ರವೀನ್, ಮೂರು ವಿಭಿನ್ನ ದೃಷ್ಟಿಕೋನಗಳಲ್ಲಿ ಕಥೆ ಹೇಳಿದ್ದಾರಂತೆ. ಖಂಡಿತಾ ಸಿನಿಮಾ ಹೊಸತನದ ವಿಭಿನ್ನ ಅನುಭವ ನೀಡಲಿದೆ ಅಂಥಾರೆ ರಾಜೇಶ್ ನಟರಂಗ. ಚಿತ್ರ ಇದೇ ವಾರ ಬಿಡುಗಡೆಯಾಗಲಿದೆ.

 • ಸ್ವೀಟ್ ಸ್ವೀಟಾಗಿ ಇದೆಯಂತೆ ಕಟ್ಟುಕಥೆ..!

  kattukathe producer

  ಕಟ್ಟುಕಥೆ.. ವಿಭಿನ್ನವಾದ ಹೆಸರಿನಿಂದಲೇ ಗಮನ ಸೆಳೆದಿರುವ ಸಿನಿಮಾ. ಇಂತಹ ಸಿನಿಮಾದಲ್ಲಿ ಕಥೆ ಹೇಗಿರಬಹುದು..? ಈ ಪ್ರಶ್ನೆಗೆ ಉತ್ತರ ಏನ್ ಗೊತ್ತಾ..? ಇಡೀ ಸಿನಿಮಾ ಸ್ವೀಟಾಗಿರುತ್ತಂತೆ. ಸತ್ಯಕಥೆ ಆಧರಿಸಿ ಸಿದ್ಧವಾಗಿರುವ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ನಮ್ಮ ಟೀಂ ಚೆನ್ನಾಗಿತ್ತು. ಖಂಡಿತಾ ಸಿನಿಮಾ ಒಂದೊಳ್ಳೆಯ ಸ್ವೀಟು ತಿಂದಷ್ಟೇ ಖುಷಿ ಕೊಡುತ್ತೆ ಅಂದಿದ್ದಾರೆ ನಿರ್ಮಾಪಕರು. ಏಕೆಂದರೆ, ನಿರ್ಮಾಪಕ ಮಹದೇವ್, ಮೂಲತಃ ಸ್ವೀಟ್ ಮಾರಾಟಗಾರರು.

  ಮೈಸೂರಿನಲ್ಲಿ ಮಹಾಲಕ್ಷ್ಮಿ ಸ್ವೀಟ್ಸ್ ಅಂದ್ರೆ ತುಂಬಾ ಫೇಮಸ್. ಅದಷ್ಟೇ ಅಲ್ಲ, ಅನಘ ಆಸ್ಪತ್ರೆ, ಅನಘ ಎಂಟರ್‍ಪ್ರೈಸಸ್ ಎಲ್ಲವೂ ಚಿರಪರಿಚಿತ. ಹೀಗೆ ಸಿಹಿ ಮಾರಾಟಗಾರರಾಗಿ ಯಶಸ್ಸು ಸಾಧಿಸಿರುವ ಮಹದೇವು, ಈಗ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ.

  ಚಿಕ್ಕ ಹುಡುಗರಾಗಿದ್ದಾಗ ಸಿನಿಮಾ ನಟನಾಗಬೇಕೆಂದು ಕನಸು ಕಂಡಿದ್ದೆ. ಈಗ ನಿರ್ಮಾಪಕನಾಗಿ ಬರುತ್ತಿದ್ದೇನೆ. ನಿರ್ದೇಶಕ ರಾಜ್‍ಪ್ರವೀಣ್ ಮತ್ತು ನಟ ಸೂರ್ಯ  ಹೇಳಿದ ಕಥೆ ಇಷ್ಟವಾಯ್ತು. ನಿರ್ಮಾಪಕನಾಗಿಯೇಬಿಟ್ಟೆ ಎಂದು ಖುಷಿಯಿಂದ ಹೇಳಿಕೊಳ್ತಾರೆ ಮಹದೇವು.

  ಚಿತ್ರದ ಶೂಟಿಂಗ್ ಹೊಣೆಯನ್ನು ನಿರ್ವಹಿಸಿದ ಸಹ ನಿರ್ಮಾಪಕಿ ಸವಿತಾ, ಡಾ.ಮಹೇಶ್ ಅವರ ಸಹಾಯವನ್ನು ಪದೇ ಪದೆ ನೆನಪಿಸಿಕೊಳ್ಳುವ ಮಹದೇವು, ಮತ್ತೆ ಸ್ವೀಟಿನ ಕಥೆ ಹೇಳ್ತಾರೆ.

  ನಾವು ತಯಾರು ಮಾಡೋ ಸ್ವೀಟ್ಸ್‍ನ್ನ ಜನ ಮೆಚ್ಚಿದ್ದಾರೆ. ಅಂತಹ ಕ್ವಾಲಿಟಿ ನಾವು ಕೊಟ್ಟಿದ್ದೇವೆ. ಹಾಗೆಯೇ ಈ ಸಿನಿಮಾವನ್ನೂ ಜನ ಮೆಚ್ಚಿಕೊಳ್ತಾರೆ. ಅಂತಹ ಕ್ವಾಲಿಟಿ ಚಿತ್ರದಲ್ಲಿದೆ ಅಂತಾರೆ ಮಹದೇವು.

Trayambakam Movie Gallery

Rightbanner02_butterfly_inside

Paddehuli Movie Gallery