` vande mataram, - chitraloka.com | Kannada Movie News, Reviews | Image

vande mataram,

 • ವಂದೇ ಮಾತರಂ.. ಜಗ್ಗೇಶ್ ಅವರಿಗೆ ಸ್ಫೂರ್ತಿಯಾಗಿದ್ದು ಮಿಲೇ ಸುರ್ ಮೇರಾ ತುಮ್ಹಾರಾ..

  ವಂದೇ ಮಾತರಂ.. ಜಗ್ಗೇಶ್ ಅವರಿಗೆ ಸ್ಫೂರ್ತಿಯಾಗಿದ್ದು ಮಿಲೇ ಸುರ್ ಮೇರಾ ತುಮ್ಹಾರಾ..

  ಎಸ್.ಎಲ್.ಭೈರಪ್ಪ, ಸಾಲುಮರದ ತಿಮ್ಮಕ್ಕ, ವೆಂಕಟೇಶ್ ಪ್ರಸಾದ್, ಜೋಗತಿ ಮಂಜಮ್ಮ ಅವರಂತಹ ಸಾಧಕರು.. ಕಿಚ್ಚ ಸುದೀಪ್, ಶಿವಣ್ಣ, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್, ಧೃವ ಸರ್ಜಾ, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ರಿಷಬ್ ಶೆಟ್ಟಿ, ಧನಂಜಯ, ಅನಂತನಾಗ್.. ಹೀಗೆ ಚಿತ್ರರಂಗದ ಕಲಾವಿದರು.. ಒಟ್ಟಿಗೇ ಸೇರಿ ಹಾಡಿರುವ ಹಾಡು.. ವಂದೇಮಾತರಂ.

  ದೇಶದ ರಾಷ್ಟ್ರೀಯ ಗೀತೆಗೆ ಹೊಸದಾಗಿ ಸಂಗೀತ ಸಂಯೋಜಸಿದವರು ಪ್ರವೀಣ್ ಡಿ.ರಾವ್. ಹಾಡಿಗೆ ಅದ್ಭುತ ಧ್ವನಿ ನೀಡಿದವರು ವಿಜಯ್ ಪ್ರಕಾಶ್. ಈ ಹಾಡನ್ನು ನಿರ್ದೇಶನ ಮಾಡಿದ್ದು ಸಂತೋಷ್ ಆನಂದರಾಮ್ ಅವರಾದರೆ, ನಿರ್ಮಾಣ ಜಗ್ಗೇಶ್ ಅವರದ್ದು.

  ಇಂತಾದ್ದೊಂದು ಹಾಡು ಮಾಡೋಣ ಎಂದು ಗೆಳೆಯ ಶ್ರೀನಿಧಿ ಹೇಳಿದರು. ಎಲ್ಲರನ್ನೂ ಫೋನ್ ಮೂಲಕವೇ ಸಂಪರ್ಕಿಸಿದೆ. ಮಿಲ್ ಸುರ್ ಮೇರಾ ತುಮ್ಹಾರಾ ಹಾಡು ನನಗೆ ಚಿಕ್ಕಂದಿನಿಂದಲೂ ಇಷ್ಟ. ಇಂತಹ ಹಾಡನ್ನು ಕನ್ನಡದಲ್ಲಿ ಮಾಡುವ ಆಸೆಯಿತ್ತು. ಅದು ಈಗ ಈಡೇರಿದೆ ಎಂದಿದ್ದಾರೆ ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್.

 • ವಂದೇಮಾತರಂ.. ಗೀತೆಯೊಂದಿಗೆ ಸುಹಾನಾ ಸೈಯದ್ ಸಿನಿಮಾ ಪ್ರವೇಶ

  suhana syed enters film industry through vande mataram

  ನೀನೆ ರಾಮ.. ನೀನೆ ಶಾಮ.. ನೀನೆ ಅಲ್ಲಾ.. ನೀನೇ ಯೇಸು.. ಮುಕುಂದ ಮುರಾರಿ ಚಿತ್ರದ ಈ ಹಾಡು, ಹಿಟ್ ಆಗಿತ್ತು. ಆದರೆ ಈ ಹಾಡು ವಿವಾದವಾಗಿದ್ದು ರಿಯಾಲಿಟಿ ಶೋನಲ್ಲಿ ಸುಹಾನಾ ಸೈಯ್ಯದ್ ಹಾಡಿದಾಗ. ಮುಸ್ಲಿಂ ಯುವತಿಯಾಗಿದ್ದ ಸುಹಾನಾ, ತಮ್ಮ ಅದ್ಭುತ ಸಿರಿಕಂಠದಲ್ಲಿ ಹಾಡಿದ್ದನ್ನು ಸಂಗೀತ ಪ್ರೇಮಿಗಳು ಮೆಚ್ಚಿಕೊಂಡಿದ್ದರೆ, ಮೂಲಭೂತವಾದಿಗಳು ಬೆಂಕಿಯುಗುಳಿದ್ದರು.

  ಆದರೆ, ಎಂದಿನಂತೆ ಮೂಲಭೂತವಾದಿಗಳು ಸೋಲೊಪ್ಪಲೇಬೇಕಾಯ್ತು. ದೇಶಾದ್ಯಂತ ಚರ್ಚೆಯಾದ ಸುಹಾನಾ, ನಂತರವೂ ರಿಯಾಲಿಟಿ ಶೋಗಳಲ್ಲಿ ಗಾಯನ ಮುಂದುವರಿಸಿದರು. ಈಗ ಸಿನಿಮಾ ಪ್ರವೇಶ ಮಾಡಿದ್ದಾರೆ. ದೈವಭಕ್ತಿ ಗೀತೆಯ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದ ಸುಹಾನಾ ಸೈಯ್ಯದ್, ದೇಶಭಕ್ತಿ ಗೀತೆಯ ಸಿನಿಮಾ ಪ್ರವೇಶ ಮಾಡಿದ್ದಾರೆ.

  ಸ್ಟೇಟ್‍ಮೆಂಟ್ 8/11 ಚಿತ್ರದಲ್ಲಿ ವಂದೇಮಾತರಂ ಹಾಡಿಗೆ ಧ್ವನಿ ನೀಡಿರುವುದು ಸುಹಾನಾ ಸೈಯ್ಯದ್. ಸಿನಿಮಾ ಕ್ಷೇತ್ರದಲ್ಲಿ ನಾನು ಹಾಡಿದ ಮೊದಲ ಹಾಡು ದೇಶಭಕ್ತಿ ಗೀತೆ ಎನ್ನುವುದೇ ನನಗೊಂದು ಹೆಮ್ಮೆ ಎಂದು ಖುಷಿ ಹಂಚಿಕೊಂಡಿದ್ದಾರೆ ಸುಹಾನಾ.

  ಇನ್ನು ಈ ಹಾಡೂ ವಿವಾದವಾದರೆ ಎಂದು ಪ್ರಶ್ನಿಸಿದರೆ, ವಿವಾದ ಆಗಬಹುದು. ಆಗದೆಯೂ ಇರಬಹುದು. ನಾನು ಸಂಗೀತ ಕ್ಷೇತ್ರವನ್ನು ನಂಬಿಕೊಂಡಿದ್ದೇನೆ. ಏನೇ ಆದರೂ ಜನ ಒಳ್ಳೆಯದನ್ನಷ್ಟೇ ಇಷ್ಟಪಡುತ್ತಾರೆ ಅಂತಾರೆ ಸುಹಾನಾ.

  ಸ್ಟೇಟ್‍ಮೆಂಟ್ 16/11 ಸಿನಿಮಾ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಅದು ನೋಟ್‍ಬ್ಯಾನ್ ಕುರಿತ ಸಿನಿಮಾ.