` danny sapani, - chitraloka.com | Kannada Movie News, Reviews | Image

danny sapani,

  • ಕನ್ನಡ ಕಲಿಯೋ ಮುಂಡೇದೆ ಎಂದ ಹಾಲಿವುಡ್ ನಟ

    hollywood actor danny sapani sings in kannada

    ಕನ್ನಡ ಕಲಿಯೋ.. ಕನ್ನಡ ಕಲಿಯೋ.. ಮುಂಡೇದೆ.. ಇಂಥಾ ಮಾತನ್ನು ಹಾಲಿವುಡ್ ನಟನೊಬ್ಬ ಹಾಡುತ್ತಿದ್ದರೆ, ಕೇಳೋಕೆ ಖುಷಿಯಾಗೋದು ಖಂಡಿತಾ. ಇದು ಮಾತಲ್ಲ, ಹಾಡು. ಹಾಡಿರೋದು ಹಾಲಿವುಡ್ ನಟ ಡ್ಯಾನಿ ಸಪಾನಿ. 

    ತಾರಕಾಸುರ ಚಿತ್ರದಲ್ಲಿ ಶಿವರಾಜ್‍ಕುಮಾರ್ ಹಾಡಿರುವ ಈ ಹಾಡು ವೈರಲ್ ಆಗಿದೆ. ಹಾಗೆ ವೈರಲ್ ಆಗಿರುವ ಹಾಡನ್ನು ಇಷ್ಟಪಟ್ಟು ಡ್ಯಾನಿ ಸಪಾನಿ ಹಾಡಿರೋದು ವಿಶೇಷ. ಹಾಲಿವುಡ್ ನಟ ಹಾಡಿರುವ ಕನ್ನಡದ ಹಾಡು, ಕನ್ನಡಿಗರನ್ನು ಬಡಿದೆಬ್ಬಿಸಿರುವುದು ನಿಜ. ನರಸಿಂಹುಲು ನಿರ್ಮಾಣದ ವೈಭವ್ ನಾಯಕತ್ವದ ತಾರಕಾಸುರ ಚಿತ್ರಕ್ಕೆ ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಕ.

  • ನಾನು ಚಿತ್ರದಲ್ಲಿ ಖಳನಾಯಕ.. ರಿಯಲ್ ಲೈಫ್‍ನಲ್ಲಿ ಕರುಣಾಮಯಿ'

    danny sapani talks about his role in tarakasura

    ಡ್ಯಾನಿ ಸಪಾನಿ. ಹಾಲಿವುಡ್ ನಟ. ಎತ್ತರದ ದೈತ್ಯ ದೇಹ. ಕಪ್ಪು ಮೈಬಣ್ಣ. ಗುಂಗುರು ಕೂದಲು. ಬೆಂಕಿ ಕಾರುವ ಕಣ್ಣುಗಳು.. ಇವು ಡ್ಯಾನಿ ಸಪಾನಿಯ ಟ್ರೇಡ್ ಮಾರ್ಕುಗಳು. ಒಳ್ಳೆಯ ಆ್ಯಕ್ಟಿಂಗೂ ಗೊತ್ತಿರುವ ಡ್ಯಾನಿ, ಹಾಲಿವುಡ್‍ನಲ್ಲಷ್ಟೇ ಅಲ್ಲ, ಬಾಲಿವುಡ್, ಟಾಲಿವುಡ್, ಕಾಲಿವುಡ್‍ಗಳಲ್ಲೂ ಬ್ಯುಸಿಯಾಗಿದ್ದವರು. ಈಗ ಸ್ಯಾಂಡಲ್‍ವುಡ್‍ನಲ್ಲಿ ಅವರು ನಟಿಸಿರುವ ತಾರಕಾಸುರ ರಿಲೀಸ್ ಆಗುತ್ತಿದೆ. ಈ ಕುರಿತು ಅಮೆರಿಕದಿಂದಲೇ ಮಾತನಾಡಿರುವ ಡ್ಯಾನಿ `

    ಚಂದ್ರಶೇಖರ್ ಬಂಡಿಯಪ್ಪ ಮತ್ತು ತಾರಕಾಸುರ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದು ನನಗೆ ಒಂದು ಅದ್ಭುತ ಅನುಭವ. ಈ ಚಿತ್ರದಲ್ಲಿ ನನ್ನದು ವಿಲನ್ ಪಾತ್ರ. ಕ್ರೂರ, ನಂಬಿಕೆಗೆ ಅರ್ಹನಲ್ಲದ, ಕಲ್ಲು ಹೃದಯದ, ನೋಡಿದವರನ್ನು ನಡುಗಿಸುವ ವ್ಯಕ್ತಿ. ಪಾತ್ರ ಚೆನ್ನಾಗಿದೆ. ಆದರೆ, ರಿಯಲ್ ಲೈಫ್‍ನಲ್ಲಿ ನಾನು ಹಾಗಿಲ್ಲ. ಮುಂದೊಂದು ದಿನ ನನಗೆ ಒಳ್ಳೆಯ ಪಾತ್ರಗಳೂ ಸಿಗುತ್ತವೆ ಎಂಬ ನಂಬಿಕೆ ಇದೆ. ತಾರಕಾಸುರ ಚಿತ್ರದಲ್ಲಿ ನನ್ನ ಡೈಲಾಗ್‍ಗಳು ಚೆನ್ನಾಗಿವೆ. ಸದ್ಯಕ್ಕೆ ಅವು ಸ್ಪಷ್ಟವಾಗಿ ನೆನಪಿಗೆ ಬರುತ್ತಿಲ್ಲ' ಎಂದಿದ್ದಾಋರೆ. 

    ತಾರಕಾಸುರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ ಡ್ಯಾನಿ. ವೈಭವ್-ಮಾನ್ವಿತಾ ಕಾಮತ್ ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ನರಸಿಂಹುಲು ನಿರ್ಮಾಪಕರು. ಬುಡ್‍ಬುಡ್ಕೆಯವರ ಕಥೆಯನ್ನಿಟ್ಟುಕೊಂಡು ಥ್ರಿಲ್ಲರ್ ಕಥೆ ಹೇಳಿದ್ದಾರೆ ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ. 

  • ಹಾಲಿವುಡ್ ವಿಲನ್‍ಗೆ ಒಂದೂವರೆ ಕೋಟಿ ಸಂಭಾವನೆ..!

    danny sapani gets 1.5 cr remuneration

    ಡ್ಯಾನಿ ಸಪಾನಿ. ಈತ ಹಾಲಿವುಡ್ ನಟ. ತಮಿಳಿನ ಸಿಂಗಂ2ನಲ್ಲಿ ವಿಲನ್ ಆಗಿ ನಟಿಸಿದ್ದ ಡ್ಯಾನಿ, ಇತ್ತೀಚೆಗೆ ಬ್ಲ್ಯಾಕ್ ಪ್ಯಾಂಥರ್ ಚಿತ್ರದಲ್ಲಿ ನಟಿಸಿದ್ದರು. ನೋಡೋಕೆ ರಾಕ್ಷಸನಂತೆಯೇ ಕಾಣುವ ಬಲಿಷ್ಠ ಡ್ಯಾನಿ ಸಪಾನಿ. ಚಿತ್ರದ ಕಥೆಗೆ ಅಷ್ಟು ರಫ್ & ಟಫ್ ಲುಕ್‍ನ ನಟ ಬೇಕಿತ್ತು ಎಂದಿದ್ದಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಒಂದು ಮೂಲದ ಪ್ರಕಾರ, 24 ದಿನಗಳ ಕಾಲ್‍ಶೀಟ್‍ಗೆ ಡ್ಯಾನಿ ಒಂದೂವರೆ ಕೋಟಿ ಸಂಭಾವನೆ ಪಡೆದಿದ್ದಾರಂತೆ.

    ಕನ್ನಡದಲ್ಲಿ ಬಹುತೇಕ ಪೋಷಕ ಪಾತ್ರಧಾರಿಗಳ ಸಂಭಾವನೆ ಲಕ್ಷ, ಸಾವಿಗಳ ಆಸುಪಾಸಿನಲ್ಲಿರುವಾಗ, ಹಾಲಿವುಡ್ ನಟರೊಬ್ಬರಿಗೆ ಒಂದೂವರೆ ಕೋಟಿ ರೂಪಾಯಿ ಸಂಭಾವನೆ ಕೊಟ್ಟಿದೆ ತಾರಕಾಸುರ ಚಿತ್ರತಂಡ. ವೈಭವ್ ಹೀರೋ ಆಗಿರುವ ಚಿತ್ರಕ್ಕೆ ಮಾನ್ವಿತಾ ಹರೀಶ್ ನಾಯಕಿ. ಚಿತ್ರಕ್ಕೆ ನರಸಿಂಹುಲು ನಿರ್ಮಾಪಕರು.

Chemistry Of Kariyappa Movie Gallery

BellBottom Movie Gallery