` suspense thriller, - chitraloka.com | Kannada Movie News, Reviews | Image

suspense thriller,

 • 6ನೇ ಮೈಲಿಯಲ್ಲಿ ಮಿಸ್ಸಿಂಗ್.

  6ne maili is suspense thriller

  6ನೇ ಮೈಲಿ. ಇದು ಸಂಪೂರ್ಣ ಹೊಸಬರ ಸಿನಿಮಾ. ನಾಗಬ್ರಹ್ಮ ಕ್ರಿಯೇಷನ್ಸ್‍ನಲ್ಲಿ ತೆರೆಗೆ ಬರುತ್ತಿರುವ ಚಿತ್ರಕ್ಕೆ ಶೈಲೇಶ್ ಕುಮಾರ್ ನಿರ್ಮಾಪಕ. ಸೀನಿ ನಿರ್ದೇಶನದ ಈ ಚಿತ್ರದಲ್ಲಿರೋದು ಸಸ್ಪೆನ್ಸ್, ಥ್ರಿಲ್ಲರ್ ಕಥೆ.

  ಪಶ್ಚಿಮ ಘಟ್ಟದ ಧವಳಗಿರಿ ಎಂಬಲ್ಲಿಗೆ ಟ್ರಕ್ಕಿಂಗ್‍ಗೆ ತೆರಳುವ ತಂಡ, 6ನೇ ಮೈಲಿ ಎಂಬಲ್ಲಿ ನಾಪತ್ತೆಯಾಗಿ ಹೋಗುತ್ತೆ. ಕಾಣೆಯಾದ ಚಾರಣಿಗರು ಏನಾದರು..? ಅವರು ಬದುಕಿದ್ದಾರಾ..? ಸತ್ತಿದ್ದಾರಾ..? ಯಾರಾದರೂ ಕೊಂದರಾ..? ಪ್ರಾಣಿಗಳಿಗೆ ಬಲಿಯಾದರಾ..? ಅದೃಶ್ಯ ಶಕ್ತಿಯ ಆಟಕ್ಕೆ ಸಿಕ್ಕಿದರಾ..? ಹೀಗೆ ಚಿತ್ರ ವಿಚಿತ್ರ ಪ್ರಶ್ನೆಗಳು ಉದ್ಭವವಾಗುತ್ತಾ ಹೋಗುತ್ತವೆ.

  ಹೀಗೆ ಮಿಸ್ಸಿಂಗ್ ಆದವರ ಹುಡುಕಾಟದ ನಡುವೆ, ನಕ್ಸಲ್, ಡಕಾಯಿತರು ಎಲ್ಲ ಬರುತ್ತಾರೆ. ಇಂಥಾದ್ದೊಂದು ಸಸ್ಪೆನ್ಸ್ ಥ್ರಿಲ್ಲರ್‍ನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿರೋದು ವಿಶೇಷ. 

 • ರವಿಚಂದ್ರನ್‍ರಿಂದ ಮತ್ತೊಂದು ಥ್ರಿಲ್ಲರ್

  ravichandran and k manju team up for a movie

  ದೃಶ್ಯ ಚಿತ್ರದಂತಾ ಥ್ರಿಲ್ಲರ್ ಮೂಲಕ ಮತ್ತೆ ಹಿಟ್ ಸಿನಿಮಾ ಕೊಟ್ಟ ರವಿಚಂದ್ರನ್, ಈಗ ಮತ್ತೂ ಒಂದು ಥ್ರಿಲ್ಲರ್ ಕಥೆ ಮಾಡುತ್ತಿದ್ದಾರೆ. ಈ ಬಾರಿ ರವಿಚಂದ್ರನ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡುತ್ತಿರುವುದು ಮಂಜು ಬ್ಯಾನರ್‍ಗೆ. ಕೆ. ಮಂಜು ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾಗೆ ರವಿಚಂದ್ರನ್ ಹೀರೋ. ಜಿಗರ್‍ಥಂಡ ಖ್ಯಾತಿಯ ಶಿವಗಣೇಶ್ ನಿರ್ದೇಶನವಿರುತ್ತೆ.

  ಈ ಸಿನಿಮಾ ತಮಿಳಿನ ದುರುವಂಗಲ್ ಪದಿನಾರು ಚಿತ್ರದ ರೀಮೇಕ್. ತೆಲುಗಿನಲ್ಲಿ 16 ಹೆಸರಲ್ಲಿ ಡಬ್ಬಿಂಗ್ ಆಗಿದ್ದ ಸಿನಿಮಾವನ್ನ ಕನ್ನಡಕ್ಕೆ ತರುತ್ತಿದ್ದಾರೆ ಕೆ. ಮಂಜು. ಒಂದು ಕೊಲೆಯ ಸುತ್ತಲೇ ಸುತ್ತುವ ಕಥೆ, ಕಟ್ಟಕಡೆಯವರೆಗೂ ಕುತೂಹಲ ಹುಟ್ಟಿಸುತ್ತೆ. ಚಿತ್ರದಲ್ಲಿ ರವಿಚಂದ್ರನ್ ಅವರದ್ದು ತನಿಖಾಧಿಕಾರಿಯ ಪಾತ್ರ. ಈ ಹಿಂದೆ ಮಂಜು ಜೊತೆ ಸಾಹುಕಾರ, ಕಳ್ಳಮಳ್ಳಸುಳ್ಳ, ಒಡಹುಟ್ಟಿದವಳು, ರಾಜಕುಮಾರಿ.. ಮೊದಲಾದ ಚಿತ್ರ ಮಾಡಿದ್ದ ರವಿಚಂದ್ರನ್, ಮತ್ತೊಮ್ಮೆ ಮಂಜು ಜೊತೆಯಾಗಿದ್ದಾರೆ.

Geetha Movie Gallery

Prarambha Teaserpra Launch Gallery