` 6ne maili, - chitraloka.com | Kannada Movie News, Reviews | Image

6ne maili,

  • 6ne Maili Review, Chitraloka Review 3/5

    6ne maili movie review

    A group of friends go on a trekking expedition. There is nothing suspicious as they encounter the usual type of people anyone travelling would expect. There is a funny conductor of the bus, a suspicious worker at a street food stall and all the usual suspects. But director Seeni keeps the suspense till the end. Though there is ample evidence of what the secret is, the audience are not able to piece it together as the suspense is maintained very nicely. 

    The second half of the film is an investigation into the missing persons in a trekking. The film shows the real way in which police and investigating agencies go about their task. There is suspense about who is responsible for the missing trekkers. They are lost in a place without any mobile network also. The area was infested by naxalites and they could be behind it. There is also talk about dacoits in the area. So the suspense about what is really happening is well maintained. 

    The film also shows the technology that is used by anti-naxal forces and how real investigation happens. There are many surprising elements that the director shows in the film which keeps the audience engaged. 

    There is some good acting all around with the top three actors being Sanchari Vijay, RJ Nethra and RJ Sudesh. The supporting cast also gives its best. Technically the film has some good background score and editing. Beautiful locations in the Western Ghats are captured in the cinematography which adds to the visual appeal of 6ne Maili. What is a bit missing is some action. It would have added to the thrills in the film. 

    Overall 6ne Maili is a suspense thriller that keeps tha audience engaged with its innovative techniques. The team has succeeded in giving a very good film that is different from the regular run of the mill films. The promise has been delivered. Watch the film for its thrills.

  • 6ನೇ ಮೈಲಿಯಲ್ಲಿ ಮಿಸ್ಸಿಂಗ್.

    6ne maili is suspense thriller

    6ನೇ ಮೈಲಿ. ಇದು ಸಂಪೂರ್ಣ ಹೊಸಬರ ಸಿನಿಮಾ. ನಾಗಬ್ರಹ್ಮ ಕ್ರಿಯೇಷನ್ಸ್‍ನಲ್ಲಿ ತೆರೆಗೆ ಬರುತ್ತಿರುವ ಚಿತ್ರಕ್ಕೆ ಶೈಲೇಶ್ ಕುಮಾರ್ ನಿರ್ಮಾಪಕ. ಸೀನಿ ನಿರ್ದೇಶನದ ಈ ಚಿತ್ರದಲ್ಲಿರೋದು ಸಸ್ಪೆನ್ಸ್, ಥ್ರಿಲ್ಲರ್ ಕಥೆ.

    ಪಶ್ಚಿಮ ಘಟ್ಟದ ಧವಳಗಿರಿ ಎಂಬಲ್ಲಿಗೆ ಟ್ರಕ್ಕಿಂಗ್‍ಗೆ ತೆರಳುವ ತಂಡ, 6ನೇ ಮೈಲಿ ಎಂಬಲ್ಲಿ ನಾಪತ್ತೆಯಾಗಿ ಹೋಗುತ್ತೆ. ಕಾಣೆಯಾದ ಚಾರಣಿಗರು ಏನಾದರು..? ಅವರು ಬದುಕಿದ್ದಾರಾ..? ಸತ್ತಿದ್ದಾರಾ..? ಯಾರಾದರೂ ಕೊಂದರಾ..? ಪ್ರಾಣಿಗಳಿಗೆ ಬಲಿಯಾದರಾ..? ಅದೃಶ್ಯ ಶಕ್ತಿಯ ಆಟಕ್ಕೆ ಸಿಕ್ಕಿದರಾ..? ಹೀಗೆ ಚಿತ್ರ ವಿಚಿತ್ರ ಪ್ರಶ್ನೆಗಳು ಉದ್ಭವವಾಗುತ್ತಾ ಹೋಗುತ್ತವೆ.

    ಹೀಗೆ ಮಿಸ್ಸಿಂಗ್ ಆದವರ ಹುಡುಕಾಟದ ನಡುವೆ, ನಕ್ಸಲ್, ಡಕಾಯಿತರು ಎಲ್ಲ ಬರುತ್ತಾರೆ. ಇಂಥಾದ್ದೊಂದು ಸಸ್ಪೆನ್ಸ್ ಥ್ರಿಲ್ಲರ್‍ನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿರೋದು ವಿಶೇಷ. 

  • 6ನೇ ಮೈಲಿಯೂ ಸಂಖ್ಯಾಶಾಸ್ತ್ರವೂ

    6ne maili movie linked wirh numerology 6

    6ನೇ ಮೈಲಿ. ಚಿತ್ರದ ಹೆಸರಿನಲ್ಲಿರೋದು 6ನೇ ನಂಬರ್. ಅಂದಹಾಗೆ ಚಿತ್ರದ ಟೈಟಲ್ ಮೊದಲು ಇದ್ದದ್ದು 6ನೇ ಮೈಲಿ ಅಲ್ಲ, 8ನೇ ಮೈಲಿ ಅಂತಾ. ಆನಂತರ ಅದನ್ನು ಬೇರೆ ಕಾರಣಕ್ಕೆ ಕೈ ಬಿಡಬೇಕಾಯ್ತಂತೆ.

    ಚಿತ್ರದ ಕಥೆ ಸಂಪೂರ್ಣವಾಗಿ ನಡೆಯೋದು ಧವಳಗಿರಿ ಅನ್ನೋ ಸ್ಥಳದಲ್ಲಿ. ಹೀಗಾಗಿ ಧವಳಗಿರಿಯನ್ನೇ ಇಟ್ಟುಕೊಂಡು ಟೈಟಲ್ ಕೊಡೋಣ ಎಂದುಕೊಂಡಾಗ, ಹೊಳೆದದ್ದು 6ನೇ ಮೈಲಿ. ಚಿತ್ರದ ಕಥೆಯಲ್ಲಿ ಕೂಡಾ 6ನೇ ಮೈಲಿ ಅನ್ನೋದೇ ಟರ್ನಿಂಗ್ ಪಾಯಿಂಟ್. ಚಾರಣಕ್ಕೆ ಬಂದವರೆಲ್ಲ ಅಲ್ಲಿಂದಲೇ ಮಿಸ್ ಆಗುತ್ತಾರೆ. ಹೀಗಾಗಿ 6ನೇ ಮೈಲಿ ಅನ್ನೋ ಹೆಸರನ್ನೇ ಇಡೋಣ ಎಂದುಕೊಂಡರಂತೆ.

    ಅಷ್ಟೇ ಅಲ್ಲ, 6 ಅನ್ನೋ ಸಂಖ್ಯೆ ಶುಕ್ರನಂತೆ. ಅದು ಚಿತ್ರತಂಡಕ್ಕೆ ಅದೃಷ್ಟವಂತೆ. ಹೀಗಾಗಿ ಚಿತ್ರದ ಬಿಡುಗಡೆಯನ್ನೂ 6ನೇ ತಾರೀಕಿನಂದೇ ಮಾಡೋಕೆ ಚಿತ್ರತಂಡ ಪ್ಲಾನ್ ಮಾಡಿತು. ಹಾಗೆಯೇ ಈದ ಜುಲೈ 6ಕ್ಕೇ ರಿಲೀಸ್ ಆಗುತ್ತಿದೆ 6ನೇ ಮೈಲಿ.

    ಇದು ಇಷ್ಟಕ್ಕೇ ಮುಗಿಯಲ್ಲ. ಚಿತ್ರದ ನಿರ್ದೇಶಕ ಸೀನಿ, ನಿರ್ಮಾಪಕ ಡಾ.ಶೈಲೇಂದ್ರ ಕುಮಾರ್‍ಗೆ ನಿರ್ದೇಶಕ ಸೀನಿ ಕಥೆ ಹೇಳಿದ್ದು ಡಿಸೆಂಬರ್ 6ನೇ ತಾರೀಕು. ಚಿತ್ರದ ಮುಹೂರ್ತ ಆಗಿದ್ದು ಫೆಬ್ರವರಿ 15ರಂದು (1+5=6). ಆಡಿಯೋ ರಿಲೀಸ್ ಆಗಿದ್ದು 24ನೇ ತಾರೀಕು (2+4=6). ಹೀಗೆ ಚಿತ್ರತಂಡಕ್ಕೆ ಬಿಡುಗಡೆಯ ದಿನಾಂಕದವರೆಗೂ (ಜುಲೈ 6) 6ನೇ ಅಂಕಿ ಅದೃಷ್ಟದಂತೆ ಹಿಂಬಾಲಿಸಿದೆ. ಅದೃಷ್ಟ ಮುಂದುವರಿಯಲಿ.

  • Eight Films To Release Today

    eight films to release this week

    The 06th of June is all set to enter the history books once again. Today eight Kannada films are getting released and this is the first time in 2018, that so many films are getting released on a single day.

    Among the six there are none big stars films or high budget films. All the films are being made in small or average budgets. Apart from a few, most of the film stars newcomers and new teams.

    Of the eight, the most expected is 'Kuchiku Kuchiku' which stars JK and Nakshatra. It is the last film of late director D Rajendra Babu. Apart from that Sanchari Vijay's '6ne Mile', Radhika Chethan's 'Asathoma Sadgamaya', Ramkumar's 'Krantiyogi Mahadevaru', Mitra's 'Parasanga', Avinash and Chikkanna's 'Kannadakkagi Ondannu Otti', newcomers 'Vajra' and 'Dangadi' are getting released today.

    Which among the eight with grab the audience attention is yet to be seen.

  • ಇದು, ಹೀರೋಗಳೇ ಇಲ್ಲದ ಸಿನಿಮಾ

    6 ne malli movie is without hero

    ಒಂದು ಸಿನಿಮಾ ಎಂದ ಮೇಲೆ ಚಿತ್ರಕ್ಕೊಬ್ಬ ಹೀರೋ ಇರಬೇಕು, ಹೀರೋಯಿನ್ ಇರಬೇಕು. ಅವರಿಬ್ಬರ ಮಧ್ಯೆ ಪ್ರೀತಿಯೋ ದ್ವೇಷವೋ ಹುಟ್ಟಿಕೊಳ್ಳಲೇಬೇಕು. ಇದು ಸಿನಿಮಾ ಸೂತ್ರ. ಆದರೆ, ಈ ಸಿದ್ಧ ಸೂತ್ರಗಳನ್ನೆಲ್ಲ ಬ್ರೇಕ್ ಮಾಡಲು ಹೊರಟಿರುವುದು 6ನೇ ಮೈಲಿ ಸಿನಿಮಾ. 

    ನಮಗೆ 8ನೇ ಮೈಲಿ ಗೊತ್ತಪ್ಪ, ಬೆಂಗಳೂರು-ತುಮಕೂರು ಹೈವೇ ಮಧ್ಯೆ ಬರುತ್ತೆ. ದಾಸರಹಳ್ಳಿ ನೆಕ್ಸ್ಟ್ ಸ್ಟಾಪು 8ನೇ ಮೈಲಿ ಅಂತೀರಾ.. ಅದು ಏರಿಯಾ.. ಇದು ಸಿನಿಮಾ. ಸಿನಿಮಾ ಹೆಸರೇ 6ನೇ ಮೈಲಿ.

    6ನೈ ಮೈಲಿ, ನೈಜ ಘಟನೆ ಆಧರಿಸಿದ ಸಿನಿಮಾ. ಅಪ್ಪಟ ಸಸ್ಪೆನ್ಸ್ ಥ್ರಿಲ್ಲರ್. ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಸಂಗೀತ ನೀಡಿರೋದು ಸಾಯಿ ಕಿರಣ್. 6ನೇ ಮೈಲಿ ಸಿನಿಮಾ, 6ನೇ ತಾರೀಕಿನಂದೇ ರಿಲೀಸ್ ಆಗುತ್ತಿರುವುದು ಸ್ಪೆಷಾಲಿಟಿ.

    ಚಿತ್ರದ ಕಥೆ ಸಿಂಪಲ್. ಪಾರ್ಟಿ ಮಾಡೋಕೆಂದು ಘಾಟ್ ಸೆಕ್ಷನ್‍ಗೆ ಹೋದಾಗ ಅಲ್ಲಿ ನಡೆಯುವ ಅನಾಹುತಗಳೇ ಚಿತ್ರದ ಕಥಾವಸ್ತು. ಚಿತ್ರಕ್ಕೆ ಇಂಥವರೇ ಹೀರೋ ಅಂತಾ ಹೇಳೋಕಾಗಲ್ಲ. ಚಿತ್ರದ ಕಥೆ, ಚಿತ್ರಕಥೆಯೇ ಹೀರೋ. ಚಿತ್ರವನ್ನು ರಿವರ್ಸ್ ಆಗಿ ತೋರಿಸಲಾಗುತ್ತೆ. ಇದು ಚಿತ್ರದ ಕುತೂಹಲವನ್ನು ಹೆಚ್ಚಿಸುತ್ತೆ ಎನ್ನುತ್ತೆ ಚಿತ್ರತಂಡ. ಜುಲೈ 6ಕ್ಕೆ ರಿಲೀಸ್ ಆಗಲಿರುವ ಸಿನಿಮಾ, ಅದೇ ಥ್ರಿಲ್‍ನ್ನು ಪ್ರೇಕ್ಷಕರಿಗೆ ಕೊಡಬೇಕು. ಹಾಗಾಗಿಬಿಟ್ಟರೆ, 6ನೇ ಮೈಲಿ 100ನೇ ಮೈಲಿಯಲ್ಲಿ ನಿಲ್ಲುತ್ತೆ.

  • ಕಿಚ್ಚ ಮೆಚ್ಚಿದ 6ನೇ ಮೈಲಿ ಸ್ಪೆಷಾಲಿಟಿ ಏನು..?

    6ne malli movie highlights

    ಕಿಚ್ಚ ಸುದೀಪ್, 6ನೇ ಮೈಲಿ ಚಿತ್ರದ ಟ್ರೇಲರ್‍ನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಟ್ರೇಲರ್, ಸುದೀಪ್‍ರನ್ನು ಅಷ್ಟರಮಟ್ಟಿಗೆ ಇಂಪ್ರೆಸ್ ಮಾಡಿತ್ತು. 6ನೇ ಮೈಲಿಯಲ್ಲಿರುವುದು ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಮಧ್ಯರಾತ್ರಿ ಟ್ರಕ್ಕಿಂಗ್‍ಗೆಂದು ಹೋಗುವ ಎರಡು ತಂಡಗಳು, ಅವುಗಳ ಹುಡುಕಾಟ, ಚಾರಣಿಗರಿಗೆ ಕಾಡಿನಲ್ಲಿ ಎದುರಾಗುವ ಅಪಾಯಗಳು, ವಿಶಿಷ್ಟ ಘಟನೆಗಳೇ ಚಿತ್ರದ ಕಥಾವಸ್ತು.

    ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಚಿತ್ರದಲ್ಲಿ ರಗಡ್ ಲುಕ್‍ನಲ್ಲಿ ನಟಿಸಿದ್ದಾರೆ.ಅವರದ್ದು ಇಲ್ಲಿ ಡಿಟೆಕ್ಟಿವ್ ಪಾತ್ರ. ನಕ್ಸಲರು, ಡಕಾಯಿತರು ಎಲ್ಲರೂ ಚಿತ್ರದಲ್ಲಿ ಬರುತ್ತಾರೆ. ಕ್ಷಣ ಕ್ಷಣಕ್ಕೂ ಸಿನಿಮಾ ನೋಡುಗರಿಗೆ ಥ್ರಿಲ್ ಕೊಡುತ್ತೆ ಅನ್ನೋದು ನಿರ್ದೇಶಕ ಸೀನಿಯ ಭರವಸೆ.

    ಆರ್‍ಜೆ ನೇತ್ರ, ಜಾಹ್ನವಿ, ಹೇಮಂತ್ ಕುಮಾರ್, ಮೈತ್ರಿ, ಜಗ್ಗಿ ನಟಿಸಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಸಾಯಿಕಿರಣ್. ವೃತ್ತಿಯಲ್ಲಿ ವೈದ್ಯರಾಗಿರುವ ಶೈಲೇಶ್ ಕುಮಾರ್, ಚಿತ್ರದ ನಿರ್ಮಾಪಕರು.

  • ನೇ ಮೈಲಿಯಲ್ಲಿ ಎಸ್‍ಪಿ ಅಣ್ಣಾಮಲೈ..!

    sp annamalai in 6ne mailai

    ರಾಜ್ಯದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಜನಪ್ರಿಯರೂ ಹೌದು. ಅಂತಹವರಲ್ಲಿ ಒಬ್ಬರು ಈಗ ಚಿಕ್ಕಮಗಳೂರು ಎಸ್‍ಪಿಯಾಗಿರುವ ಅಣ್ಣಾಮಲೈ. ಕರ್ತವ್ಯ ಪಾಲನೆ ಹಾಗೂ ಸಾಮಾಜಿಕ ಕಳಕಳಿಯಿಂದಾಗಿ ಅಣ್ಣಾಮಲೈ, ರಾಜ್ಯದಲ್ಲಿ ಫೇಮಸ್ ಅಧಿಕಾರಿಯಾಗಿದ್ದಾರೆ. ಅವರು 6ನೇ ಮೈಲಿ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅಫ್‍ಕೋರ್ಸ್.. ಅತಿಥಿ ನಟರಾಗಿ.. ಎಸ್‍ಪಿ ಅಣ್ಣಾಮಲೈ ಆಗಿ.

    6ನೇ ಮೈಲಿ ಚಿತ್ರ ತಂಡದಲ್ಲಿ ನಕ್ಸಲೈಟ್ ಕಥೆಯೂ ಇದೆ. ಈ ಕುರಿತು ಅಣ್ಣಾಮಲೈ ಅವರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ ನಿರ್ದೇಶನ ನಾನಿ. ಚಿತ್ರದ ಕಥೆ ಹಾಗೂ ಅದರಲ್ಲಿರುವ ಸಂದೇಶ ಇಷ್ಟವಾಯ್ತು.  ಮಾಜಿ ನಕ್ಸಲೈಟ್‍ಗಳ ಕತೆ ಹೇಳುವಾಗ ನನ್ನನ್ನು ಬಳಸಿಕೊಳ್ಳಲಾಗಿದೆ.  ನಕ್ಸಲೈಟ್‍ಗಳನ್ನು ಮುಖ್ಯವಾಹಿನಿಗೆ ತರುವ ಭಾಗದಲ್ಲಿ ನನ್ನ ಪಾತ್ರ ಬರುತ್ತೆ. ಚಿತ್ರದಲ್ಲಿರುವ ಸಂದೇಶ ನನಗೆ ಇಷ್ಟವಾಯ್ತು ಎಂದು ಹೇಳಿಕೊಂಡಿದ್ದಾರೆ ಅಣ್ಣಾಮಲೈ.

  • ಮಂಡ್ಯದ ಹುಡುಗ 6ನೇ ಮೈಲಿ ನಿರ್ದೇಶಕನಾಗಿದ್ದು ಹೇಗೆ..?

    6ne malli director experience with film industry

    6ನೇ ಮೈಲಿ ನಿರ್ದೇಶಕರ ಹೆಸರು ನಾನಿ. ಇದು ಅವರ ಮೊದಲ ಸಿನಿಮಾ. ಆದರೆ, ಅವರಿಗೆ ಈ ನಿರ್ದೇಶನದ ಅವಕಾಶ ಸರಳವಾಗಿ ಸಿಕ್ಕಿದ್ದೇನಲ್ಲ. ಹೆಜ್ಜೆ ಹೆಜ್ಜೆಗೂ ಹೋರಾಡಿ ಗಿಟ್ಟಿಸಿಕೊಂಡ ಅವಕಾಶ ಈ 6ನೇ ಮೈಲಿ. ಇದು ನಾನಿ ಕಥೆ.

    ಮೂಲತಃ ಮಂಡ್ಯದವರಾದರೂ, ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲೇ. ಕಾಲೇಜು ಬಿಟ್ಟರೂ, ಬಯ್ಯದೇ ಪ್ರೋತ್ಸಾಹಿಸಿದ ಫ್ಯಾಮಿಲಿ ಅವರದ್ದು. ಬ್ಯುಸಿನೆಸ್ ಮಾಡುತ್ತಿದ್ದ ನಾನಿಯನ್ನು ಸೆಳೆದಿದ್ದು ರಂಗನಾಟಕಗಳು. ಅವುಗಳಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದ ನಾನಿ, ನನ್ನ ಜೊತೆ ಕೆಲಸ ಮಾಡಿದವರಲ್ಲಿ ಹಲವರು ಈಗ ಸ್ಯಾಂಡಲ್‍ವುಡ್‍ನಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ ಎಂದು ಹೇಳಿಕೊಳ್ತಾರೆ ನಾನಿ.  ಇಷ್ಟಿದ್ದರೂ ಅವರಿಗೆ ಸಿನಿಮಾ ಮಾಡಬಲ್ಲೆ, ಕಥೆಯನ್ನು ಚೆನ್ನಾಗಿ ಹೇಳಬಲ್ಲೆ ಎಂಬ ಕಾನ್ಫಿಡೆನ್ಸ್ ಮೂಡಿಸಿದ್ದು ಶಿವರಾಜ್‍ಕುಮಾರ್ ಅಂತೆ.

    ನಾನಿ ಮೊದಲು ಕಥೆ ಹೇಳಿದ್ದೇ ಶಿವರಾಜ್‍ಕುಮಾರ್ ಅವರಿಗೆ. ನಾನು ಹೊಸಬನಾದರೂ, ಶಿವರಾಜ್‍ಕುಮಾರ್, ಇಡೀ ಕಥೆಯನ್ನು ಕೇಳಿದರು. ಇಷ್ಟಪಟ್ಟರು. ಆದರೆ, ಬೇರೆ ಬೇರೆ ಕಾರಣಗಳಿಂದ ಆ ಸಿನಿಮಾ ಟೇಕಾಫ್ ಆಗಲಿಲ್ಲ. ಆದರೆ, ಶಿವರಾಜ್ ಕುಮಾರ್ ಅವರಿಗೆ ಕಥೆ ಹೇಳಿದ್ದು ಹಾಗೂ ಅವರು ಗಂಟೆಗಟ್ಟಲೆ ಕೂತು ಕಥೆ ಕೇಳಿದರಲ್ಲ, ಅದು ನನಗೆ, ನನಗೂ ಕಥೆ ಹೇಳುವ ಶೈಲಿ ಗೊತ್ತಿದೆ ಎಂಬ ಕಾನ್ಫಿಡೆನ್ಸ್ ಕೊಟ್ಟಿತು ಎಂದು ಅನುಭವ ಬಿಚ್ಚಿಡ್ತಾರೆ ನಾನಿ.

    ಅದಾದ ಮೇಲೆ ಹಲವು ಸರ್ಕಸ್ಸುಗಳಾದವು. ಕೊನೆಗೆ ಪಲ್ಲವಿ ಟಾಕೀಸ್ ಅನ್ನೋ ಸಿನಿಮಾ ಟೇಕಾಫ್ ಆಯ್ತು. ಅದೇನಾಯ್ತೋ ಏನೋ.. ಶೂಟಿಂಗ್ ಮುಗಿಸಿದ ಸಿನಿಮಾ, ಹೊರ ಬರಲೇ ಇಲ್ಲ. ಅದೇ ವೇಳೆ ಪರಿಚಯವಾದವರು ಡಾ.ಶೈಲೇಂದ್ರ ಕುಮಾರ್.

    ಕಥೆ ಕೇಳಿದ 3 ದಿನಗಳ ನಂತರ, ಶೈಲೇಂದ್ರ ಕುಮಾರ್ ಸಿನಿಮಾ ನಿರ್ಮಿಸೋಕೆ ಓಕೆ ಎಂದರು. ಈಗ ಸಿನಿಮಾ ಸಿದ್ಧವಾಗಿದೆ. ಕನ್ನಡ ಚಿತ್ರಗಳು ತಾಂತ್ರಿಕವಾಗಿ ಅದ್ಭುತ ಅಲ್ಲ ಎನ್ನುವವರಿಗೆ ಈ ಸಿನಿಮಾ ಚಾಲೆಂಜ್. ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ 6ನೇ ಮೈಲಿ ಎಂದು ವಿಶ್ವಾಸದಿಂದ ಹೇಳ್ತಾರೆ ನಾನಿ. ಥ್ರಿಲ್ಲಾಗೋಕೆ ಜುಲೈ 6ರವರೆಗೆ ಕಾಯಿರಿ.

  • ಮೈಲಿ.. 6ನೇ ಮೈಲಿ.. ಮೈ ಮರೆತರೆ ಸಾವಿನ ಬೇಲಿ..

    6ne maili song rises heart beat

    ಮೈಲಿ.. ಇದು ಮೈಲಿ.. ಮೈಲಿ.. ಇದು 6ನೇ ಮೈಲಿ..ಬೇಲಿ.. ಇದು ಬೇಲಿ.. ಮೈ ಮರೆತ್ರೆ ಸಾವಿನ ಬೇಲಿ.. ಇದು 6ನೇ ಮೈಲಿ ಚಿತ್ರದಲ್ಲಿ ಏಕೈಕ ಹಾಡು. ಸಸ್ಪೆನ್ಸ್, ಥ್ರಿಲ್ಲರ್ ಕಥೆಯಲ್ಲಿ ಹಾಡುಗಳಿಗೆ ಜಾಗವಿಲ್ಲ. ಈ ಹಾಡು ಇರೋದು ಕೂಡಾ ಡೆಟ್ ಮೆಟಲ್ ಪ್ಯಾಟ್ರನ್‍ನಲ್ಲಿ. 6ನೇ ಮೈಲಿ ಚಿತ್ರದ ವಿಶೆಷತೆಗಳಲ್ಲಿ ಇದೂ ಒಂದು.

    2010ರಿಂದ 2014ರವರೆಗೆ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕೊಲೆ, ಅಪಹರಣ, ಅತ್ಯಾಚಾರಗಳು ಸಾಮಾನ್ಯವಾಗಿ ಹೋಗಿದ್ದವು. ಆಗ ನಡೆದ ಒಂದು ಸತ್ಯಘಟನೆಯನ್ನಿಟ್ಟುಕೊಂಡೇ ಚಿತ್ರ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸೀನಿ.

    ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಆರ್.ಜೆ.ನೇತ್ರಾ, ಆರ್.ಜೆ.ರಾಘವ ಮೊದಲಾದವರು ನಟಿಸಿರುವ ಸಿನಿಮಾ. ಹಾಡುಗಳನ್ನು ಪುನೀತ್ ರಾಜ್‍ಕುಮಾರ್, ತಮ್ಮದೇ ಕಂಪೆನಿ ಮೂಲಕ ರಿಲೀಸ್ ಮಾಡಿದ್ದರೆ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಆಶೀರ್ವದಿಸಿ.. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಟ್ರೇಲರ್‍ನಲ್ಲಿ ನೋಡಿದರೆ,  ಚಿತ್ರದ ಮೇಕಿಂಗ್ ಅತ್ಯುನ್ನತ ಮಟ್ಟದಲ್ಲಿದೆ ಎನಿಸುತಿದೆ. ಡಾ.ಶೈಲೇಂದ್ರ ಕುಮಾರ್ ನಿರ್ಮಾಣದ ಚಿತ್ರ, ಇದೇ ವಾರ ತೆರಗೆ ಬರುತ್ತಿದೆ.

  • ಸಾಹಸ..ಸಸ್ಪೆನ್ಸ್..ಕ್ರೈಂ..ಥ್ರಿಲ್ಲರ್..ಸಂದೇಶಗಳ 6ನೇ ಮೈಲಿ

    6ne maili is perfect suspense thriller

    ಒಂದು ತಂಡ.. ಪಶ್ಚಿಮ ಘಟ್ಟದ ಕಾಡಿನಲ್ಲಿ ಟ್ರಕ್ಕಿಂಗ್‍ಗೆ ಹೊರಡುತ್ತೆ. ಅಲ್ಲಿ 6ನೇ ಮೈಲಿಗಲ್ಲಿದೆ. ಅ ಜಾಗದಿಂದ ಟ್ರಕ್ಕಿಂಗ್‍ಗೆ ಹೋದವರು ಮಿಸ್ಸಾಗ್ತಾ ಹೋಗ್ತಾರೆ. ಅವರೆಲ್ಲಿ ಮಿಸ್ ಆದ್ರು..? ಅವರನ್ನು ಯಾರಾದರೂ ಕಿಡ್ನಾಪ್ ಮಾಡಿದರಾ..? ಕೊಂದರಾ..? ಆಗಬಾರದ ಅನಾಹುತವೇನಾದರೂ ಆಯಿತಾ..? ಕಾಡಿನಲ್ಲಿ ದಾರಿ ತಪ್ಪಿದರಾ..? ನಕ್ಸಲರ ಜಾಲಕ್ಕೆ ಸಿಕ್ಕರಾ..? ನೂರಾರು ಪ್ರಶ್ನೆಗಳು. ಕುತೂಹಲಗಳು. ಹುಡುಕುತ್ತಾ ಹೊರಟವರಿಗೆ ಕಾಣುವ ಸತ್ಯಗಳೇನು ಅನ್ನೋದೇ ಚಿತ್ರದ ಕಥೆ.

    ಕೆಆರ್‍ಜೆ ಫಿಲಮ್ಸ್‍ನ ಮೊದಲ ಸಿನಿಮಾ 6ನೇ ಮೈಲಿ. ನಿರ್ಮಾಪಕ ಡಾ.ಶೈಲೇಂದ್ರ ಕುಮಾರ್‍ಗೆ ಇದು ಮೊದಲ ಸಿನಿಮಾ. ನಿರ್ದೇಶಕ ಸೀನಿ ಈ ಚಿತ್ರದಿಂದ ದೊಡ್ಡ ಬ್ರೇಕ್‍ನ ನಿರೀಕ್ಷೆಯಲ್ಲಿದ್ದಾರೆ. ಸಂಚಾರಿ ವಿಜಯ್, ಆರ್‍ಜೆ ನೇತ್ರಾ, ರಘು, ಆರ್‍ಜೆ ಸುದ್ದೇಶ್.. ಹೀಗೆ ಹಲವು ಯುವ ಮತ್ತು ಮಾಗಿದ ಕಲಾವಿದರ ಸಮ್ಮಿಲನ 6ನೇ ಮೈಲಿ.

    ಸಿಂಪಲ್ಲಾಗ್ ಹೇಳ್ಬೇಕಂದ್ರೆ ಇದು ರೆಗ್ಯುಲರ್ ಸಿನಿಮಾ ಅಲ್ಲ. ಹೀಗಾಗಿಯೇ ಕುತೂಹಲ ಹುಟ್ಟಿಸಿದೆ ಈ ಸಿನಿಮಾ.

Padarasa Movie Gallery

Kumari 21 Movie Gallery