ಮಕ್ರ್ಯುರಿ. ಈ ವಾರ ರಿಲೀಸ್ ಆಗುತ್ತಿರುವ ಸೈಲೆಂಟ್ ಥ್ರಿಲ್ಲರ್. ಪ್ರಭುದೇವ ಹೀರೋ. ಇಡೀ ಚಿತ್ರದಲ್ಲಿ ಒಂದೇ ಒಂದು ಡೈಲಾಗ್ ಇಲ್ಲ. ತಕ್ಷಣ ನಿಮಗೆ 1987ರಲ್ಲಿ ರಿಲೀಸ್ ಆಗಿದ್ದ ಪುಷ್ಪಕವಿಮಾನ ನೆನಪಾದರೆ, ಅದು ಸಹಜ. ಏಕೆಂದರೆ, 30 ವರ್ಷಗಳ ನಂತರೂ ಆ ಚಿತ್ರ ಇಂದಿಗೂ ನಮ್ಮ ಮನಸ್ಸಿನಲ್ಲಿ ಫ್ರೆಷ್ ಆಗಿದೆ. ಆ ಚಿತ್ರದಲ್ಲಿ ಕಮಲ್ಹಾಸನ್ ಹೀರೋ. ಆದರೆ, ಮಕ್ರ್ಯುರಿ ಮತ್ತು ಪುಷ್ಪಕ ವಿಮಾನ ಚಿತ್ರಗಳ ನಡುವಿನ ಹೋಲಿಕೆ ಇಲ್ಲಿಗೇ ಮುಗಿಯುತ್ತೆ.
ಪುಷ್ಪಕ ವಿಮಾನ ಥ್ರಿಲ್ಲರ್ ಆಗಿದ್ದರೂ, ಚಿತ್ರದಲ್ಲಿ ಕಾಮಿಡಿ, ಲವ್ ಎಲ್ಲವೂ ಇತ್ತು. ಆದರೆ, ಮಕ್ರ್ಯುರಿಯಲ್ಲಿ ಹಾಗಿಲ್ಲ. ಒಮ್ಮೆ ಸಿನಿಮಾ ಶುರುವಾದರೆ, ಸೀಟ್ನ ಅಂಚಿಗೆ ಬಂದು ಉಗುರು ಕಡಿಯುತ್ತಾ ಕೂರುವ ಪ್ರೇಕ್ಷಕ ರಿಲ್ಯಾಕ್ಸ್ ಆಗುವುದು ಕ್ಲೈಮಾಕ್ಸ್ನಲ್ಲೇ. ಅಷ್ಟರಮಟ್ಟಿಗೆ ಮಕ್ರ್ಯುರಿ ಚಿತ್ರದ ಕಥೆ, ಚಿತ್ರಕಥೆ ವಂಡರ್ಫುಲ್ ಆಗಿದೆ ಅನ್ನೋದು ಈಗಾಗಲೇ ಚಿತ್ರ ನೋಡಿರುವವರ ಅಭಿಪ್ರಾಯ.
ಮಕ್ರ್ಯುರಿ ಚಿತ್ರದ ಕಥೆ ಕೇಳಿಯೇ ಥ್ರಿಲ್ ಆಗಿಬಿಟ್ಟೆ. ಪುಷ್ಪಕವಿಮಾನದ ನಂತರ ಹಲವು ಮೂಕಿ ಸಿನಿಮಾಗಳು ಬಂದಿವೆ. ಆದರೆ, ಇಂದಿಗೂ ನಮ್ಮ ನೆನಪಲ್ಲಿರುವುದು ಪುಷ್ಪಕವಿಮಾನ. 30 ವರ್ಷಗಳ ನಂತರವೂ. ಸಿನಿಮಾ ನೋಡಿದ ಮೇಲಂತೂ ಥ್ರಿಲ್ ಆಗಿಬಿಟ್ಟೆ. ಚಿತ್ರದ ಮ್ಯೂಸಿಕ್ ಅಂತೂ ಅದ್ಭುತ.
ಹೀಗೆ ಸಿನಿಮಾ ನೋಡಿದ ಥ್ರಿಲ್ನಲ್ಲಿರುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ. ಪರಂವಾ ಸ್ಟುಡಿಯೋಸ್ ಮೂಲಕ ಮಕ್ರ್ಯುರಿ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿರುವುದು ಇವರೇ. ರಕ್ಷಿತ್ ಶೆಟ್ಟಿ, ಪುಷ್ಕರ್ ಜೊತೆಯಲ್ಲಿಯೇ ಇದ್ದಾರೆ. ಒಂದು ವಿಭಿನ್ನ ಸಿನಿಮಾವನ್ನು ಜನರಿಗೆ ತಲುಪಿಸಲೇಬೇಕು. ಸಿನಿಮಾದಲ್ಲಿ ಥ್ರಿಲ್ಲರ್ ಅಂಶವಷ್ಟೇ ಅಲ್ಲದೆ, ಒಂದು ವಿಭಿನ್ನವಾದ ಸಂದೇಶವೂ ಇದೆ ಅಂತಾರೆ ಪುಷ್ಕರ್. ಕೆಲವೇ ದಿನ. ಮಕ್ರ್ಯುರಿ ಥಿಯೇಟರುಗಳಲ್ಲಿ ಪ್ರತ್ಯಕ್ಷವಾಗಲಿದೆ.