` amar, - chitraloka.com | Kannada Movie News, Reviews | Image

amar,

 • Abhishek's 'Amar' Launched

  abhishek's amar launched

  Ambarish's son Abhishek's debut film 'Amar' was launched on Monday at Sri Tirumalagiri Lakshmi Venkateshwara Swamy Temple in J P Nagar. It was a simple launch and Ambarish intends to hold a grand launch amidst celebrities of other film industries on the 24th of June.

  'Amar' is being directed by Nagashekhar and he himself has scripted the film. The film is about a middle class youth and his love life. Nagashekhar has based the film on a true incident which happened many years ago. Nagashekhar plans to shoot the film in Madikeri, Mangalore, Sakleshpur, Ireland, England, Scotland and other places.

  Satya Hegade is in charge of cinematography, while Arjun Janya is the music composer. Tanya Hope is the heroine. apart from Abhishek, Suhasini, Rangayana Raghu, Sadhu Kokila, Chikkanna and others will be playing prominent roles in the film.

 • Bahaddur' Chethan Doubtful Of Directing Abhishek's Debut Film

  bahaddur chethan doubtful of directing abhishek's debut fil

  If everything had gone right, then Chethan of 'Bahaddur' and 'Bharjari' fame was supposed to direct Ambarish's son Abhishek's debut film 'Amar. Now it is doubtful whether Chethan will direct the film or not.

  The real reason behind Chethan doubtful of directing this film is, the team has not finalized the story yet. Earlier, Chethan's story was finalised. Now Sandesh Nagaraj has yet another story and is yet to decide about which story to take first. If the other story gets a mandate, then Chethan might lose the opportunity of directing Abhishek's debut film.

  Earlier, Pavan Wodeyar was supposed to direct Abhishek's debut film. However, due to date clashes, Pavan had to walk out of the film. After that Chethan was selected as the director. Now Chethan is also doubtful of directing the film.

 • First Look Of 'Amar' Out

  first look of amar out

  Ambarish's son Abhishek's debut film 'Amar' is all set to start soon. Meanwhile, the first look of the film has been out and the first look and posters will be officially released on Ambarish's birthday on May 29th..

  The film will be launched on Monday the 28th of May. Many celebrities of Kannada film industry are expected to be a part of the launch.

  'Amar' is being directed by Nagashekhar and he himself has scripted the film. Nagashekhar's regular cameraman, Satya Hegade is in charge of cinematography, while Arjun Janya is the music composer. The heroine of the film is yet to be finalised and apart from Abhishek, Suhasini, Rangayana Raghu, Sadhu Kokila, Chikkanna and others will be playing prominent roles in the film.

 • Nirup Bhandari Joins Abhishek's 'Amar'

  nirup bhandari joins amar movie team

  The shooting for Ambarish's son Abhishek's debut film 'Amar' is in full progress and actor Nirup Bhandhari of 'Rangitaranga' fame has also joined the star cast. Nirup will be playing a guest yet prominent role in the film. Sources say, Rachita Ram will also be playing a prominent role in the film.

  'Amar' is being directed by Nagashekhar and he himself has scripted the film. The film is about a middle class youth and his love life. Nagashekhar has based the film on a true incident which happened many years ago.

  Satya Hegade is in charge of cinematography, while Arjun Janya is the music composer. Tanya Hope is the heroine. apart from Abhishek, Suhasini, Rangayana Raghu, Sadhu Kokila, Chikkanna and others will be playing prominent roles in the film.

   

 • Tanya Hope Is The Heroine Of 'Amar'

  tanya hope is heroine for amar movie

  Ambarish's son Abhishek's debut film 'Amar' is all set to be launched on Monday the 28th of May. Meanwhile, actress Tanya Hope has been roped in as the heroine of the film.

  Tanya Hope is a model turned actress from Bangalore. Tanya has acted in Telugu and Tamil films and has made her debut in Kannada through Darshan's 'Yajamana'. 'Amar' is her second Kannada film.

  'Amar' is being directed by Nagashekhar and he himself has scripted the film. Nagashekhar's regular cameraman, Satya Hegade is in charge of cinematography, while Arjun Janya is the music composer. Apart from Abhishek, Suhasini, Rangayana Raghu, Sadhu Kokila, Chikkanna and others will be playing prominent roles in the film.

   

 • ಅಂಬರೀಷ್ ಪುತ್ರನಿಗಾಗಿ ಭಾರತೀಯ ಚಿತ್ರರಂಗದ ಮಿಲನ

  abhishek ambareesh's movie muhurtha

  ರೆಬಲ್‍ಸ್ಟಾರ್ ಅಂಬರೀಷ್, ತಮ್ಮ ಹೃದಯವಂತಿಕೆಯಿಂದ ಕನ್ನಡಿಗರನ್ನಷ್ಟೇ ಅಲ್ಲ, ಸಮಸ್ತ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗೆಳೆಯರನ್ನು ಸಂಪಾದಿಸಿರುವುದು ಅಂಬರೀಷ್ ಸಾಧನೆ. ನನ್ನ ಜೀವಮಾನದ ಅತಿ ದೊಡ್ಡ ದುಡಿಮೆ ನನ್ನ ಗೆಳೆಯರು ಎಂದು ಅಂಬರೀಷ್ ಹೇಳಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರ ಮಗ ಅಭಿಷೇಕ್ ಅಭಿನಯದ ಅಮರ್ ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವನ್ನು ಒಟ್ಟಿಗೇ ತರುವ ಆಲೋಚನೆ ನಿರ್ದೇಶಕ ನಾಗಶೇಖರ್ ತಲೆ ಹೊಕ್ಕಿದೆ. ಅಫ್‍ಕೋರ್ಸ್ ಅಂಬರೀಷ್ ಮನಸ್ಸು ಮಾಡಿದರೆ ಅದು ಅಸಾಧ್ಯವೇನೂ ಅಲ್ಲ. ಅದು ನಿರ್ದೇಶಕ ನಾಗಶೇಖರ್ ನಂಬಿಕೆ.

  ಅದು ಸಾಧ್ಯವಾದರೆ, ಅಮಿತಾಬ್ ಬಚ್ಚನ್, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಶತ್ರುಘ್ನ ಸಿನ್ಹಾ... ಮೊದಲಾದವರೆಲ್ಲ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿಯೇ ಈಗ ಮುಹೂರ್ತವಾಗಿರುವ ಚಿತ್ರಕ್ಕೆ ಮತ್ತೊಂದು ಮಹಾಮುಹೂರ್ತ ಮಾಡಿದರೆ ಹೇಗೆ ಅನ್ನೋದು ನಿರ್ದೇಶಕ ನಾಗಶೇಖರ್ ಐಡಿಯಾ. ಓಂಶಾಂತಿಓಂ ಚಿತ್ರದಲ್ಲಿದ್ದ ದೀವಾನಗಿ... ಹಾಡಿನ ಮಾದರಿಯಲ್ಲಿಯೇ ಎಲ್ಲ ದಿಗ್ಗಜರನ್ನೂ ಒಟ್ಟಿಗೇ ಸೇರಿಸುವ ಕನಸು ಕಾಣುತ್ತಿದ್ದಾರೆ ನಾಗಶೇಖರ್. 

  ಅಂದಹಾಗೆ ಚಿತ್ರದ ಕಥೆ ಬೈಕ್‍ರೇಸ್ ಹಿನ್ನೆಲೆ ಹೊಂದಿದೆ. ಅಮರ್ ಅರ್ಥಾತ್ ಅಭಿಷೇಕ್ ಚಿತ್ರದಲ್ಲಿ ಬೈಕ್ ರೈಡರ್. ನಾಯಕಿ ತಾನ್ಯಾ ಕೂಡಾ ಬೈಕ್ ರೈಡರ್ ಅಂತೆ. 80 ದಿನಗಳ ಚಿತ್ರೀಕರಣಕ್ಕೆ ಪ್ಲಾನ್ ಆಗಿದೆ. ನಾಯಕನಿಗೆ ವಿಲನ್ ಶೇಡ್ ಕೂಡಾ ಇದೆ. ಸ್ಕಾಟ್ಲೆಂಡ್‍ನಲ್ಲೂ ಚಿತ್ರೀಕರಣ ನಡೆಯಲಿದೆ. ಒಟ್ಟಿನಲ್ಲಿ ಇಡೀ ಚಿತ್ರರಂಗ ಕಾಯುತ್ತಿರುವ ಸಿನಿಮಾ ಅಮರ್ ಆಗಲಿದೆ.

 • ಅಂಬರೀಷ್ ಪುತ್ರನಿಗೆ ಅಭಿಮಾನದ ಉಡುಗೊರೆ

  ambareesh son abishekk

  ಅಮರ್, ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರ. ಚಿತ್ರಕ್ಕೆ ಮುಹೂರ್ತವಾಗಿದೆ. ಜೆಪಿ ನಗರದಲ್ಲಿರುವ ತಿರುಮಲಗಿರಿ ದೇವಸ್ಥಾನದಲ್ಲಿ ಚಿತ್ರಕ್ಕೆ ಪೂಜೆ ನೆರವೇರಿದೆ. ತಂದೆ, ತಾಯಿಯ ಆಶೀರ್ವಾದ ಪಡೆದ ಅಭಿಷೇಕ್ ಹೊಸ ಸವಾಲನ್ನು ಸ್ವೀಕರಿಸಿದ್ದಾರೆ. ಹೌದು, ಅಭಿಷೇಕ್‍ಗೆ ಇದು ನಿಜಕ್ಕೂ ಸವಾಲೇ. ತಂದೆ ಅಂಬರೀಷ್ ದೊಡ್ಡ ಸ್ಟಾರ್ ಅಷ್ಟೇ ಅಲ್ಲ, ಅದ್ಭುತ ಕಲಾವಿದರೂ ಹೌದು. ತಾಯಿ ಸುಮಲತಾ ಕೂಡಾ ಅಭಿಜಾತ ಕಲಾವಿದೆ. ತಂದೆ, ತಾಯಿ ಇಬ್ಬರೂ ಜನಪ್ರಿಯ ಕಲಾವಿದರಾಗಿರುವಾಗ ಮಗನಿಗೆ ಅದು ಸವಾಲಾಗರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

  ಅಂಬರೀಷ್ ಪುತ್ರನ ಚಿತ್ರೋತ್ಸವವನ್ನ ಕನ್ನಡ ಚಿತ್ರರಂಗವೇ ಸಂಭ್ರಮಿಸಿದ್ದು ವಿಶೇಷ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಜಗ್ಗೇಶ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಮೇಘನಾ ರಾಜ್, ವಿಷ್ಣು ಮಂಚು.. ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್... ಹೇಳಬೇಕೆಂದರೆ, ಇಡೀ ಚಿತ್ರರಂಗ ಅಂಬರೀಷ್ ಪುತ್ರನಿಗೆ ಹಸಿರು ತೋರಣದ ಸ್ವಾಗತ ಕೋರಿದೆ. 

  ನಾಗಶೇಖರ್ ನಿರ್ದೇಶನದದ, ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣ ನಡೆಸಲಾಗಿದೆ. ನಾಯಕಿ ತಾನ್ಯಗೆ ಬೊಕೆ ಕೊಡುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಜೂನ್ 25ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

  ಅಂದಹಾಗೆ ಅಮರ್ ಅನ್ನೋ ಹೆಸರಿನ ಹಿಂದೊಂದು ಸೆಂಟಿಮೆಂಟ್ ಕಥೆಯೂ ಇದೆ. ಅ ಇಂದ ಶುರುವಾಗುವ ಅಂಬರೀಷ್‍ರ ಎಲ್ಲ ಚಿತ್ರಗಳೂ ಹಿಟ್ ಆಗಿವೆ. ಅಂತ ಚಿತ್ರದ ಮೂಲಕವೇ ಸ್ಟಾರ್ ಆದ ಅಂಬರೀಷ್‍ಗೆ ಅ ಚಿತ್ರದ ಮೇಲೆ ವಿಶೇಷ ಪ್ರೀತಿಯಿದ್ದರೆ ಆಶ್ಚರ್ಯವೇನೂ ಇಲ್ಲ.

 • ಅಪ್ಪನಿಗೆ ಆದ ಅನುಭವವೇ.. ಮಗನಿಗೂ ಆಯ್ತು..!

  abishek ambareesh resumes his shooting

  ರೆಬಲ್‍ಸ್ಟಾರ್ ಅಂಬರೀಷ್ ನಿಧನದ ನಂತರ ಅಮರ್ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿತ್ತು. ನೋವಿನಲ್ಲಿಯೇ ಇದ್ದ ಅಭಿಷೇಕ್, ಈಗ ಮತ್ತೆ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ. ಅಂಬರೀಷ್ ಫೋಟೋ ಹಿಡಿದುಕೊಂಡೇ ಚಿತ್ರೀಕರಣಕ್ಕೆ ತೆರಳಿರುವ ಅಭಿಷೇಕ್, ಇದೆಲ್ಲವನ್ನೂ ಅಪ್ಪ ನೋಡುತ್ತಿದ್ದಾರೆ. ಮತ್ತೆ ಕೆಲಸಕ್ಕೆ ತೆರಳುತ್ತಿದ್ದೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

  ವಿಶೇಷವೆಂದರೆ, ಅಂಬರೀಷ್ ಅವರಿಗೂ ಇದೇ ರೀತಿಯ ಅನುಭವವಾಗಿತ್ತು. ಅಂಬರೀಷ್ ಅವರಿಗೆ ಅವರ ತಂದೆಯ ಸಾವು ಅನಿರೀಕ್ಷಿತ ಆಘಾತವಾಗಿತ್ತು. ತಂದೆಯ ಸಂಸ್ಕಾರಕ್ಕೆ ಚಿತ್ರೀಕರಣವನ್ನು ಅರ್ಧಕ್ಕೇ ನಿಲ್ಲಿಸಿ ಹೋಗಿದ್ದರು ಅಂಬಿ. ತಂದೆಯ ಸಂಸ್ಕಾರ ಮುಗಿಸಿ, ಅದೇ ನೋವಿನಲ್ಲಿದ್ದ ಅಂಬರೀಷ್‍ಗೆ ಅವರ ತಾಯಿ ಶೂಟಿಂಗ್‍ಗೆ ಹೋಗುವಂತೆ ಹೇಳಿದ್ದರಂತೆ. ಎಷ್ಟು ಅತ್ತರೂ ನಿಮ್ಮ ತಂದೆ ವಾಪಸ್ ಬರಲ್ಲ. ನಾವು ನೋವಿನಲ್ಲಿದ್ದೇವೆಂದು ನಮ್ಮನ್ನು ನಂಬಿದ ನಿರ್ಮಾಪಕರಿಗೆ ಕಷ್ಟವಾಗಬಾರದು ಎಂದಿದ್ದರಂತೆ ಅಂಬರೀಷ್ ತಾಯಿ.

  ಅಂದು ಅಂಬರೀಷ್ ಅನುಭವಿಸಿದ ಅದೇ ಕ್ಷಣ, ಈಗ ಅಭಿಷೇಕ್ ಅವರಿಗೂ ಎದುರಾಗಿದೆ.

 • ಅಭಿಷೇಕ್ ಅಂಬರೀಷ್ ಅಪ್ಪನಾಗಿ ರಾಜ್ ದೀಪಕ್ ಶೆಟ್ಟಿ 

  raj deepak shetty is father to abhishek in amar

  ಅಮರ್ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್‍ಗೆ ಅಪ್ಪನಾಗಿ ರಾಜ್ ದೀಪಕ್ ಶೆಟ್ಟಿ ನಟಿಸುತ್ತಿದ್ದಾರೆ. ಶ್ರೀಕಂಠ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಾಜ್ ದೀಪಕ್ ಶೆಟ್ಟಿ, ವಯಸ್ಸಿನಲ್ಲಿ ಹಿರಿಯನೇನೂ ಅಲ್ಲ. ಅಭಿಷೇಕ್‍ಗಿಂತ ಒಂದೈದು ವರ್ಷ ದೊಡ್ಡವರಿರಬಹುದು. ಆದರೂ, ಚಿಕ್ಕ ವಯಸ್ಸಿಗೇ ಅಪ್ಪನಾಗಿ ನಟಿಸುತ್ತಿದ್ದಾರೆ.

  ಅಭಿನಯದಲ್ಲಿ ಹೊಸತನ ಬೇಕು. ಅಷ್ಟೆ ಎನ್ನುವ ರಾಜ್ ದೀಪಕ್ ಶೆಟ್ಟಿಗೆ ತಂದೆ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಬೇಸರವೇನೂ ಇಲ್ಲ. ಅಮರ್ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ತಾನ್ಯಾಹೋಪ್ ನಾಯಕಿಯಾಗಿರುವ ಚಿತ್ರದಲ್ಲಿರೋದು ಬೈಕ್ ರೇಸ್‍ನ ಕಥೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ, ಅಂಬರೀಷ್ ಪುತ್ರನ ಸಿನಿಮಾ ಎಂಬ ಕಾರಣಕ್ಕೆ ಇಡೀ ಚಿತ್ರರಂಗ ಕುತೂಹಲದಿಂದ ಎದುರು ನೋಡುತ್ತಿದೆ. 

 • ಅಮರ್ ಆಗುತ್ತಿದ್ದಾರೆ ಅಭಿಷೇಕ್ ಅಂಬರೀಷ್

  abhishek ambareesh's debut movie is amar

  ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರ ಮೊದಲ ಚಿತ್ರದ ಹೆಸರು ಅಮರ್ ಅಂತೆ. ಚಿತ್ರದ ನಿರ್ದೇಶಕ ಸಂಜು ಮತ್ತು ಗೀತಾ, ಮೈನಾ ಖ್ಯಾತಿಯ ನಾಗಶೇಖರ್. ಚಿತ್ರದ ಕಥೆ ಅಭಿಷೇಕ್‍ಗೆ ಇಷ್ಟವಾಗಿದೆ. ಚಿತ್ರದಲ್ಲಿ ಲವ್, ರೊಮ್ಯಾನ್ಸ್, ಆ್ಯಕ್ಷನ್ ಎಲ್ಲವೂ ಇದೆ. ಅಪ್ಪನ ಅಭಿಮಾನಿಗಳು ಇಷ್ಟಪಡುವಂಥಾ ಕತೆಯಿದೆ. ಸದ್ಯದಲ್ಲೇ ಚಿತ್ರ ಆರಂಭವಾಗುತ್ತದೆ ಎಂದಿದ್ದಾರೆ ಅಭಿಷೇಕ್.

  ನಾಗಶೇಖರ್ ಕೂಡಾ ಸಿನಿಮಾ ವಿಚಾರ ಕರೆಕ್ಟ್ ಎಂದಿದ್ದಾರೆ. ಚಿತ್ರಕ್ಕೆ ಅಮರ್ ಎಂದು ಟೈಟಲ್ ಫೈನಲ್ ಮಾಡಲಾಗಿದೆಯಂತೆ. ಅಮರ್‍ನಾಥ್ ಅನ್ನೋದು ಅಂಬರೀಷ್ ಅವರ ಮೂಲ ಹೆಸರು. ಅಷ್ಟೇ ಅಲ್ಲ, ಅಂಬರೀಷ್‍ರ ಹಲವು ಯಶಸ್ವಿ ಚಿತ್ರಗಳಲ್ಲಿ ಅವರ ಪಾತ್ರದ ಹೆಸರು ಅಮರ್ ಆಗಿರುತ್ತಿತ್ತು. ಅಮರ್‍ನಾಥ್ ಅನ್ನೋ ಹೆಸರಿನ ಚಿತ್ರದಲ್ಲಿ ಅಂಬರೀಷ್ ನಟಿಸಿಯೂ ಇದ್ದರು. ಈಗ, ಅವರ ಪುತ್ರನ ಮೊದಲ ಚಿತ್ರಕ್ಕೆ ಅಮರ್ ಎಂದೇ ಹೆಸರಿಟ್ಟಿರುವುದು ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

   

 • ಅಮರ್ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರಾ..?

  darshan in guest role for abishek ambi's amar

  ರೆಬಲ್‍ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ ಅಮರ್. ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನಾಗಶೇಖರ್. ಬೈಕ್ ರೇಸ್ ಹಿನ್ನೆಲೆಯ ಲವ್ ಸ್ಟೋರಿಯಲ್ಲಿ ಈಗ ಹೊಸ ಅತಿಥಿ.. ಅಲ್ಲಲ್ಲ ಸಾರಥಿಯ ಆಗಮನವಾಗಿದೆಯಂತೆ.

  ಅಪ್ಪಾಜಿ ಮಗನ ಮೊದಲ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಅತಿಥಿ ನಟನಾಗಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. 

  ಆದರೆ, ದರ್ಶನ್ ಪಾತ್ರ ಏನು..? ಸಿನಿಮಾದಲ್ಲಿ ಎಷ್ಟು ಹೊತ್ತು ಇರುತ್ತಾರೆ ಎಂಬ ಸುದ್ದಿ ಸದ್ಯಕ್ಕೆ ಸೀಕ್ರೆಟ್.

  ಅಂದಹಾಗೆ ಕನ್ನಡದಲ್ಲಿ ಅತೀ ಹೆಚ್ಚು ಚಿತ್ರಗಳಲ್ಲಿ ಅತಿಥಿ ನಟನಾಗಿ ನಟಿಸಿರುವ ಹೆಗ್ಗಳಿಕೆ ಅಂಬರೀಶ್ ಅವರದ್ದು. ಶಂಕರ್‍ನಾಗ್, ಪ್ರಭಾಕರ್, ಜಗ್ಗೇಶ್, ದೇವರಾಜ್ ಸೇರಿದಂತೆ ಹಲವು ಹೊಸಬರ ಚಿತ್ರಗಳಲ್ಲಿ ಅತಿಥಿ ನಟನಾಗಿ ನಟಿಸಿ ಪ್ರೋತ್ಸಾಹಿಸಿದ್ದವರು ಅಂಬರೀಶ್. 

 • ಅಮರ್ ಹೀರೋಯಿನ್ ಬೈಕ್ ರೇಸ್

  amar heroine is also a bike racer

  ಅಮರ್. ಅಭಿಷೇಕ್ ಅಂಬರೀಷ್ ಅಭಿನಯದ ಚೊಚ್ಚಲ ಸಿನಿಮಾ. ಈ ಸಿನಿಮಾಗೆ ತಾನ್ಯಾ ಹೋಪ್ ಹೀರೋಯಿನ್. ಅಭಿಷೇಕ್ ತಮ್ಮ ಮೊದಲ ಸಿನಿಮಾದಲ್ಲಿ ಬೈಕ್ ರೇಸರ್ ಎಂಬ ಗುಟ್ಟನ್ನು ನಿರ್ದೇಶಕ ನಾಗಶೇಖರ್ ಬಿಚ್ಚಿಟ್ಟಿದ್ದರು. ಈಗ ಹೀರೋ ಅಷ್ಟೇ ಅಲ್ಲ, ಹೀರೋಯಿನ್ ಕೂಡಾ ಬೈಕ್ ರೇಸರ್ ಅನ್ನೋದು ಬಹಿರಂಗವಾಗಿದೆ.

  ತಾನ್ಯಾ ಹೋಪ್, ಸ್ವತಃ ಡುಕಾಟಿ ಬೈಕ್ ಓಡಿಸೋಕೆ ಕಲಿತಿದ್ದಾರೆ. ಸುಮಾರು 15 ಲಕ್ಷ ರೂಪಾಯಿಯ ಡುಕಾಟಿ 959 ಬೈಕ್‍ನ್ನು ಪಳಗಿಸಿಕೊಂಡಿದ್ದಾರೆ.

  ಅಭಿಷೇಕ್ ಚಿತ್ರಕ್ಕೆ ಸರ್ವರೀತಿಯಲ್ಲೂ ಸಜ್ಜಾಗಿದ್ದಾರೆ. ಚಿತ್ರದ ನಾಯಕಿಗೆ ಕೂಡಾ ಬೈಕ್ ರೇಸ್ ಕಲಿಸಬೇಕಿತ್ತು. ಈಗವರನ್ನು ಅದನ್ನು ಕಲಿತುಕೊಂಡೇ ಬಂದಿದ್ದಾರೆ. ಸಿನಿಮಾ ಚೆನ್ನಾಗಿ ಬರುತ್ತಿದೆ ಎಂದಿದ್ದಾರೆ ನಾಗಶೇಖರ್.

 • ಜ್ಯೂ.ಅಂಬರೀಷ್ ಮೊದಲ ಸಿನಿಮಾ ಸೀಕ್ರೆಟ್ ಏನು..?

  ambareesh son abhishek

  ರೆಬಲ್‍ಸ್ಟಾರ್ ಅಂಬರೀಷ್ ತಮ್ಮ ಪುತ್ರನ ಅಭಿನಯದ ಮೊದಲ ಚಿತ್ರಕ್ಕೆ ಓಕೆ ಎಂದಿರುವುದು, ಆ ಚಿತ್ರಕ್ಕೆ ಅಮರ್ ಎಂದು ಟೈಟಲ್ ಫೈನಲ್ ಆಗಿರುವುದು ಗೊತ್ತಿದೆ ತಾನೇ. ಚಿತ್ರಕ್ಕೆ ನಿರ್ದೇಶಕರಾಗಿರುವುದು ನಾಗಶೇಖರ್. ಸಂಜು ಮತ್ತು ಗೀತಾ, ಮೈನಾ ಖ್ಯಾತಿಯ ನಾಗಶೇಖರ್, ಅಂಬರೀಷ್ ಪುತ್ರನ ಸಿನಿಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಫೋಟೋಶೂಟ್ ಮುಗಿಸಲಾಗಿದೆ. ಆದರೆ, ಅಂಬರೀಷ್ ಕಟ್ಟಾಜ್ಞೆಯಿರುವ ಯಾವುದೇ ಫೋಟೋ ಹೊರಬರುವ ಹಾಗಿಲ್ಲ.

  ಫೋಟೋಶೂಟ್ ನೋಡ್ತಾ ಇದ್ರೆ, ಪ್ರಭಾಸ್‍ರನ್ನೂ ಮೀರಿಸುತ್ತಾರೆ ಅನ್ನೋದು ಅಭಿಷೇಕ್ ಕುರಿತಂತೆ ನಾಗಶೇಖರ್ ಹೇಳೋ ಮಾತು. ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಲವ್ & ಸೆಂಟಿಮೆಂಟ್ ಸಬ್ಜೆಕ್ಟ್ ಎಂದಿದ್ದಾರೆ ನಾಗಶೇಖರ್. ನಿರ್ಮಾಪಕ ಸಂದೇಶ್ ನಾಗರಾಜ್ ಎಲೆಕ್ಷನ್‍ನಲ್ಲಿ ಬ್ಯುಸಿಯಾಗಿರುವ ಕಾರಣ, ಒಂದಿಷ್ಟು ಕೊನೆಯ ಹಂತದ ಸಿದ್ಧತೆಗಳು ಬಾಕಿಯಿವೆ.

  ಅಂಬರೀಷ್ ಹುಟ್ಟುಹಬ್ಬದ ಚಿತ್ರದ ಫೋಟೋ ಟೀಸರ್ ಹೊರತರುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ನಾಗಶೇಖರ್. ಅಮರ್ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಅರ್ಜುನ್ ಜನ್ಯಾ, ಕ್ಯಾಮೆರಾ ಸತ್ಯ ಹೆಗಡೆ ಅವರದ್ದು. ಕಲಾ ನಿರ್ದೇಶನ ಮೋಹನ್ ಬಿ ಕೆರೆ ಅವರದ್ದು. ಸಂಕಲನದ ಜವಾಬ್ದಾರಿ ದೀಪು ಎಸ್ ಕುಮಾರ್ ಹೆಗಲೇರಿದೆ. 

  ಕನ್ನಡದ ಹುಡುಗಿಯೇ ನಾಯಕಿ ಎಂದಿರುವ ನಾಗಶೇಖರ್, ಸುಹಾಸಿನಿ, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ ಮೊದಲಾದವರು ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

 • ಜ್ಯೂನಿಯರ್‍ಗೆ ಸೀನಿಯರ್ ಅಂಬಿ ಹೇಳಿದ ಬುದ್ದಿಮಾತು ಇದು..!

  dont be late advice abishek

  ಮೊನ್ನೆ ಮೊನ್ನೆಯಷ್ಟೇ ಅಭಿಷೇಕ್ ಅಂಬರೀಷ್ ಅಭಿನಯದ ಅಮರ್ ಚಿತ್ರದ ಮುಹೂರ್ತವಾಗಿದೆ. ಇಡೀ ಚಿತ್ರರಂಗ ಅಂಬರೀಷ್‍ರನ್ನೂ ಮೀರಿಸುವ ಸಾಧನೆ ಮಾಡು ಎಂದು ಹಾರೈಸುತ್ತಿದ್ದರೆ, ಅಂಬರೀಷ್ ಮಾತ್ರ ಎಂದಿನಂತೆ ಡಿಫರೆಂಟಾಗಿಯೇ ಬುದ್ದಿವಾದ ಹೇಳಿದ್ದಾರೆ.

  ನಾನು ಮಾಡಿದಂತೆ ನೀನು ಮಾಡಬೇಡ. ಸೆಟ್‍ಗೆ ಟೈಂಗೆ ಸರಿಯಾಗಿ ಹೋಗಬೇಕು. ಅದು ಅಂಬರೀಷ್ ತಮ್ಮ ಮಗನಿಗೆ ಹೇಳಿರೋ ಬುದ್ದಿವಾದ ನಂಬರ್ 1. ಅಂಬರೀಷ್ ಸೆಟ್‍ಗೆ ಲೇಟ್ ಆಗಿ ಹೋಗೋದ್ರಲ್ಲಿ ಫೇಮಸ್.

  ಎರಡನೇ ಬುದ್ದಿವಾದ ಏನು ಗೊತ್ತಾ..? ಸೆಟ್‍ನಲ್ಲಿದ್ದಾಗ ನೀನು ಆ್ಯಕ್ಟರ್ ಅಷ್ಟೆ. ಅಂಬರೀಷ್ ಮಗ ಅಲ್ಲ. ಡೈರೆಕ್ಟರ್ ಹೇಳಿದಂತೆ ಕೇಳಬೇಕು. ಹೊರಗೆ ನಿನಗೆ ಆ ನಿರ್ದೇಶಕ ಸ್ನೇಹಿತನೇ ಆಗಿರಬಹುದು. ಆದರೆ, ಸೆಟ್‍ನಲ್ಲಿ ಡೈರೆಕ್ಟರ್ ಡೈರೆಕ್ಟರೇ. ನಟ ನಟಾನೇ. ಅದನ್ನು ಶಿಸ್ತಿನಿಂದ ಪಾಲಿಸಬೇಕು ಎಂದು ಹೇಳಿದ್ದಾರೆ ಅಂಬರೀಷ್.

  ವಿಶೇಷ ಅಂದ್ರೆ, ಅಂಬರೀಷ್ ಇವರೆಡನ್ನೂ ಶಿಸ್ತಿನಿಂದ ಪಾಲಿಸಿದವರಲ್ಲ. ಬಹುಶಃ ಪುಟ್ಟಣ್ಣರಂತಾ ನಿರ್ದೇಶಕರನ್ನು ಬಿಟ್ಟರೆ, ಅಂಬರೀಷ್‍ರನ್ನು ಪ್ರಶ್ನಿಸುವ ಅಥವಾ ಬಯ್ಯುವ ಧೈರ್ಯ ಮಾಡಿದ ನಿರ್ದೇಶಕರೂ ಇಲ್ಲ ಎನ್ನಬೇಕು. ಆದರೆ, ಯಾವುದೋ ಒಂದು ಸೀನ್ ಚೆನ್ನಾಗಿ ಬಂದಿಲ್ಲ ಎಂದು ನಿರ್ದೇಶಕ ಹೇಳಿದರೆ, ಬಾಯ್ತುಂಬಾ ಬೈದರೂ ಅಷ್ಟೇ ಪ್ರೀತಿಯಿಂದ ಮತ್ತೊಮ್ಮೆ ನಟಿಸುತ್ತಿದ್ದ ಅಂಬಿ, ನಿರ್ದೇಶಕರಿಗೆ ಇಷ್ಟವಾಗಿದ್ದ ನಟ. ನಿರ್ದೇಶಕರ ಸ್ವಾತಂತ್ರ್ಯದಲ್ಲಿ ಯಾವತ್ತೂ ಮೂಗು ತೂರಿಸದ ಅಂಬರೀಷ್, ತಮ್ಮ ಮಗನಿಗೂ ಅದನ್ನೇ ಹೇಳಿಕೊಟ್ಟಿದ್ದಾರೆ. ಅಭಿಷೇಕ್ ಪಾಲಿಸಬೇಕು.. ಅಷ್ಟೆ.

   

 • ದರ್ಶನ್.. ಅಭಿಷೇಕ್ ಅಂಬರೀಶ್ ಅಣ್ಣ..!

  darshan acts as aboshek's brother in amar

  ಅಂಬರೀಶ್ ಪುತ್ರ ಅಭಿಷೇಕ್ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವ  ಅಮರ್ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್, ಅಭಿಷೇಕ್‍ಗೆ ಅಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಚಿತ್ರದಲ್ಲಿ ಮಲ್ಟಿಮಿಲಿಯನೇರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆತ್ಮವಿಶ್ವಾಸ ಕಳೆದುಕೊಂಡಿರುವ ಅಭಿಷೇಕ್‍ಗೆ ಜೀವನೋತ್ಸಾಹ ತುಂಬುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ದರ್ಶನ್ ಅತಿಥಿ ನಟನಾಗಿ ಕಾಣಿಸಿಕೊಳ್ಳುವುದು ಅಪರೂಪ. ಅರಸು ಚಿತ್ರದಲ್ಲಿ ಪುನೀತ್ ಗೆಳೆಯನಾಗಿ ಕಾಣಿಸಿಕೊಂಡಿದ್ದ ದರ್ಶನ್, ನಂತರ ಚೌಕ ಚಿತ್ರದಲ್ಲಿ ರಾಬರ್ಟ್ ಆಗಿ ನಟಿಸಿದ್ದರು. ಪ್ರಜ್ವಲ್ ದೇವರಾಜ್ ಅವರ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವ ದರ್ಶನ್, ಅಮರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೇ ನಟಿಸಲಿದ್ದಾರೆ. 

  ಅಂಬರೀಶ್ ಮೇಲಿನ ಪ್ರೀತಿಗೆ ದರ್ಶನ್ ನೀಡಿರುವ ಗೌರವ ಇದು. ಸಿನಿಮಾ ಶುರುವಾದಾಗಲೇ ಚಿತ್ರರಂಗದ ಹಲವರು ಚಿತ್ರದಲ್ಲಿ ಗೆಸ್ಟ್ ರೋಲ್‍ನಲ್ಲಿ ನಟಿಸಿ ಪ್ರೋತ್ಸಾಹಿಸುವ ಮಾತನ್ನಾಡಿದ್ದರು. ದರ್ಶನ್ ಪ್ರೀತಿಗೆ ನಾನು ಋಣಿ ಎಂದಿದ್ದಾರೆ ನಿರ್ಮಾಪಕ ಸಂದೇಶ್ ನಾಗರಾಜ್. 

 • ಪ್ರೇಮಿ, ರೆಬಲ್, ಟ್ರಬಲ್.. ಎಲ್ಲ ಅವರೇ ಅಂತೆ..!

  what is the story line of amar

  ಜ್ಯೂ.ಅಂಬರೀಷ್, ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಚಿತ್ರರಂಗಕ್ಕೆ ಅಮರ್ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದ ಕಥೆ ಏನು..? ಅಭಿಷೇಕ್ ಪಾತ್ರ ಎಂಥದ್ದು..? ಅಂಥಾದ್ದೊಂದು ಕುತೂಹಲ ಸಹಜಾಗಿಯೇ ಅಭಿಮಾನಿಗಳಲ್ಲಿದೆ. 

  ಇದೊಂದು ಯೂತ್‍ಫುಲ್ ಲವ್‍ಸ್ಟೋರಿ. ಬ್ಯೂಟಿಫುಲ್ ಲವ್‍ಸ್ಟೋರಿ. ಈ ಚಿತ್ರದಲ್ಲಿ ಪ್ರೇಮಿಯೂ ಅವರೇ, ರೆಬಲ್ಲು, ಟ್ರಬಲ್ಲು ಎಲ್ಲ ಅವರೇ.. ನಾಗಶೇಖರ್ ನಿರ್ದೇಶನದ ಚಿತ್ರವಾದ್ದರಿಂದ ನಿರೀಕ್ಷೆಗಳೂ ಇವೆ. 

  ದರ್ಶನ್ ಜೊತೆ ಯಜಮಾನ, ಉಪೇಂದ್ರ ಜೊತೆ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ನಟಿಸುತ್ತಿರುವ ತಾನ್ಯಾ ಹೋಪ್ ಅಭಿಷೇಕ್ ಅಂಬರೀಷ್ ಚಿತ್ರಕ್ಕೆ ನಾಯಕಿ. 

  ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರದ ಮೂಲಕ, ಕನ್ನಡಕ್ಕೆ ಮತ್ತೊಬ್ಬ ಆರಡಿ ಎತ್ತರದ ಹೀರೋ ಸಿಗುತ್ತಿದ್ದಾರೆ. 

 • ಮಿಸ್ಸಾಗಿದ್ದ ಚಾನ್ಸ್ ಮತ್ತೆ ಸಿಕ್ಕಿದ್ದು ಹೇಗೆ..?

  nagashekar's lucky chance

  ಅಮರ್. ಅಂಬರೀಷ್ ಪುತ್ರನ ಮೊತ್ತ ಮೊದಲ ಸಿನಿಮಾ. ರೆಬಲ್‍ಸ್ಟಾರ್ ಪುತ್ರನ ಸಿನಿಮಾ ನಿರ್ದೇಶನದ ಅದೃಷ್ಟ ಸಿಕ್ಕಿರುವುದು ನಾಗಶೇಖರ್‍ಗೆ. ನಾಗಶೇಖರ್, ಸಂಜು ಮತ್ತು ಗೀತಾ, ಮೈನಾದಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟವರು. ಅಂಬರೀಷ್ ಪುತ್ರನ ಸಿನಿಮಾ ನಿರ್ದೇಶನದ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದೇ ಖುಷಿಯಾಗುತ್ತಾರೆ ನಾಗಶೇಖರ್. ಈ ಅದೃಷ್ಟ ಅವರಿಗೆ ಒಲಿದಿದ್ದು 2ನೇ ಬಾರಿ. ಮೊದಲ ಬಾರಿಗೆ ಅದು ಮಿಸ್ಸಾಗಿ ಹೋಗಿತ್ತು.

  ನಾಗಶೇಖರ್‍ಗೆ ತೆಲುಗಿನ ರಾಜಶೇಖರ್ ಪುತ್ರಿಯ ಸಿನಿಮಾ ನಿರ್ದೇಶನದ ಆಫರ್ ಸಿಕ್ಕಿತ್ತು. ರಾಜಶೇಖರ್ ಹಾಗೂ ಅವರ ಮಗಳ ಜೊತೆ ಮಾತನಾಡಿ, ಕಥೆ ಸಿದ್ಧಪಡಿಸುತ್ತಿರುವಾಗ ಒಂದು ದಿನ ನಾಗಶೇಖರ್‍ಗೆ ಸಂದೇಶ್ ನಾಗರಾಜ್ ಫೋನ್ ಬಂತಂತೆ. ಅದೂ ರಾತ್ರಿ 12 ಗಂಟೆಗೆ. ನಾಗಶೇಖರ್ ಫೋನ್ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಮಾಡ್ತೀನಿ ಅಂತಾ ಮೆಸೇಜ್ ಮಾಡಿದ್ದೆ. ಅಮರ್ ಚಿತ್ರಕ್ಕೆ ನೀವು ಡೈರೆಕ್ಟರ್. ನಾಳೆ ಬನ್ನಿ ಮಾತನಾಡೋಣ ಎಂದು ಮೆಸೇಜ್ ಬಂತು. ಹೈದರಾಬಾದ್‍ನಿಂದ ಬಂದಿಳಿದವನು, ಏರ್‍ಪೋರ್ಟ್‍ನಿಮದ ಸೀದಾ ಹೋಗಿದ್ದು ಸಂದೇಶ್ ನಾಗರಾಜ್ ಆಫೀಸ್‍ಗೆ. ಅಲ್ಲಿ ಹೋಗಿ ಬರಲಿಕ್ಕೆ ಹೇಳಿದ್ರಂತೆ ಅಂದ್ರೆ, ನಾನೇನು ಹೇಳಿಲ್ಲವಲ್ಲ ಎಂದರು. ಮತ್ತೊಬ್ಬ ನಿರ್ದೇಶಕರ ಹೆಸರು ಫಿಕ್ಸ್ ಆಗಿತ್ತು. ಹಣೆಬರಹ ಹಳಿದುಕೊಂಡು ವಾಪಸ್ ಹೋದೆ.

  ಆದರೆ, ಹತ್ತಿಪ್ಪತ್ತು ದಿನದ ನಂತರ ಸಂದೇಶ್ ನಾಗರಾಜ್ ಮತ್ತೊಮ್ಮೆ ಫೋನ್ ಮಾಡಿದ್ರು. ಅಮರ್ ಅಂತಾ ಟೈಟಲ್. ಅದಕ್ಕೆ ತಕ್ಕಂತೆ ಕಥೆ ಬರೆಯಬೇಕು ಅಂದ್ರು. ನೀವೇ ಡೈರೆಕ್ಷನ್ ಮಾಡಬೇಕು ಅಂದ್ರು. ನೇರವಾಗಿ ಅಂಬರೀಷ್ ಅಣ್ಣನ ಮನೆಗೆ ಕರೆದುಕೊಂಡು ಹೋಗಿ, ಸುಮಲತಾ ಮೇಡಂ ಮುಂದೆ ಕೂರಿಸಿದ್ರು. ಒಳ್ಳೆ ಸಿನಿಮಾ ಮಾಡಲು ಹೇಳಿದ್ರು.

  ಅದಾದ ಮೇಲೆ ರಾಜಶೇಖರ್ ಅವರಿಗೆ ಹೇಳಿದೆ. ಅಂಬರೀಷ್ ಮಗನ ಸಿನಿಮಾ ಅಂದೆ. ಅವರಿಬ್ಬರೂ ಫ್ರೆಂಡ್ಸ್. ಮೊದಲು ಆ ಸಿನಿಮಾ ಮಾಡು ಅಂದ್ರು. ಅವರು ಒಪ್ಪಿದ್ದು ನನ್ನ ಪುಣ್ಯ ಅಂತಾರೆ ರಾಜಶೇಖರ್.

 • ಯಂಗ ರೆಬಲ್‍ಸ್ಟಾರ್ ಚಿತ್ರಕ್ಕೆ ಮೇ 28ಕ್ಕೆ ಮುಹೂರ್ತ

  abhishek's amar movie launch date fixed

  ಮೇ 29ಕ್ಕೆ ಅಂಬರೀಷ್ ಹುಟ್ಟುಹಬ್ಬ. ಅದೇ ದಿನ ಅವರ ಮಗ ಅಭಿಷೇಕ್ ಅಂಬರೀಷ್ ಅಭಿನಯದ ಅಮರ್ ಚಿತ್ರಕ್ಕೆ ಮುಹೂರ್ತ ಮಾಡಬೇಕು ಅನ್ನೋದು ನಿರ್ಮಾಪಕ ಸಂದೇಶ್ ನಾಗರಾಜ್ ಕನಸಾಗಿತ್ತು. ಆದರೆ, ಆ ದಿನ ಮಂಗಳವಾರ. ಹೀಗಾಗಿ ಹಿಂದಿನ ದಿನವೇ ಸಣ್ಣದೊಂದು ಪೂಜೆ ಮಾಡಲು ನಿರ್ಧರಿಸಿದ್ದಾರೆ ಸಂದೇಶ್ ನಾಗರಾಜ್.

  ಅಮರ್ ಚಿತ್ರದ ಫಸ್ಟ್ ಲುಕ್ ಸಿದ್ಧವಾಗಿದ್ದು, ಚಿತ್ರದ ಪೋಸ್ಟರ್ ಡಿಸೈನ್ ರೆಡಿಯಾಗಿದೆ. ಮೈನಾ, ಸಂಜು ವೆಡ್ಸ್ ಗೀತಾ ಖ್ಯಾತಿಯ ನಾಗಶೇಖರ್ ಚಿತ್ರದ ನಿರ್ದೇಶಕ. ತಾನ್ಯಾ ಹೋಪ್ ಚಿತ್ರಕ್ಕೆ ನಾಯಕಿ. ಸಿನಿಮಾ ಪೋಸ್ಟರ್‍ನಲ್ಲಿ ಅಭಿಷೇಕ್‍ಗೆ ಯಂಗ್ ರೆಬಲ್‍ಸ್ಟಾರ್ ಅನ್ನೋ ಬಿರುದನ್ನೂ ನೀಡಲಾಗಿದೆ.

  ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ಅಭಿಷೇಕ್, ಸಿನಿಮಾವನ್ನೇ ತನ್ನ ಆದ್ಯತೆ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ನಾನು ಹುಟ್ಟಿದ್ದು, ಕಷ್ಟಪಟ್ಟಿದ್ದು, ಇಷ್ಟಪಟ್ಟಿದ್ದು, ಕಲಿತಿದ್ದು ಎಲ್ಲವೂ ಸಿನಿಮಾಗಾಗಿಯೇ. ಹೀಗಾಗಿ ಸಿನಿಮಾ ಬಿಟ್ಟು ಬೇರೆ ಕ್ಷೇತ್ರಗಳ ಬಗ್ಗೆ ನನಗೆ ಆಸಕ್ತಿಯಿಲ್ಲ ಎಂದಿದ್ದಾರೆ ಅಭಿಷೇಕ್ ಅಂಬರೀಷ್.

  ಅಂದಹಾಗೆ ಮತ್ತೊಮ್ಮೆ ಹೇಳಿಬಿಡ್ತೇವೆ ಕೇಳಿ. ಅಮರ್‍ನಾಥ್ ಅನ್ನೋದು ಅಂಬರೀಷ್ ಅವರ ಮೂಲ ಹೆಸರು.ಅಂಬರೀಷ್ ಅನ್ನೋ ನಾಮಕರಣ ಮಾಡಿದ್ದು ಪುಟ್ಟಣ್ಣ ಕಣಗಾಲ್. ಅಂಬರೀಷ್ ಚಕ್ರವ್ಯೂಹ, ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್, ಅಮರ್‍ನಾಥ್ ಸೇರಿದಂತೆ ತಮ್ಮ ಹಲವು ಚಿತ್ರಗಳಲ್ಲಿ ಅಮರ್ ಹೆಸರಿನ ಪಾತ್ರವನ್ನೇ ಮಾಡಿದ್ದಾರೆ. ಈಗ ಅವರ ಮಗನ ಮೊದಲ ಸಿನಿಮಾ ಟೈಟಲ್ ಅಮರ್. 

 • ಯಂಗ್ ರೆಬಲ್‍ಸ್ಟಾರ್‍ಗೆ ಕಿಚ್ಚನ ಸ್ವಾಗತ ಹೇಗಿತ್ತು ಗೊತ್ತಾ..?

  kiccha wishes junior rebel star

  ಯಂಗ್ ರೆಬಲ್‍ಸ್ಟಾರ್ ಅಭಿಷೇಕ್ ಅಂಬರೀಷ್ ಮೊದಲ ಚಿತ್ರವನ್ನು ಇಡೀ ಚಿತ್ರರಂಗ ಸಂಭ್ರಮದಿಂದ ಎದುರು ನೋಡುತ್ತಿದ್ದರೆ, ಕಿಚ್ಚ ಸುದೀಪ್ ತಮ್ಮದೇ ಸ್ಟೈಲ್‍ನಲ್ಲಿ ಶುಭ ಕೋರಿದ್ದಾರೆ.

  ನಿನ್ನದೇ ಆದ ಹೊಸ ಅಧ್ಯಾಯ ಸೃಷ್ಟಿಯಾಗಲಿ..

  ನೀನು ಇಡುವ ಪ್ರತಿ ಹೆಜ್ಜೆಯೂ ನಿನ್ನದಾಗಲೀ..

  ನೀನು ಮುಟ್ಟಬೇಕಿರುವ ಗುರಿಯನ್ನು ಮುಟ್ಟಿಬಿಡು

  ನಿನ್ನದೇ ಆದ ಸಾಮ್ರಾಜ್ಯವನ್ನು ನೀನೇ ಸೃಷ್ಟಿಸು

  ನೀನು ಕಟ್ಟಿದ ಆ ಸಾಮ್ರಾಜ್ಯಕ್ಕೆ ನೀನೇ ಚಕ್ರವರ್ತಿಯಾಗು

  ಶುಭವಾಗಲಿ ಅಭಿ

  ರೈಸ್&ಶೈನ್

  ಚಿತ್ರರಂಗದ ಹಾಲಿ ಸ್ಟಾರ್ ನಟನೊಬ್ಬ, ಇದಕ್ಕಿಂತ ಸುಂದರ ಪದಗಳಲ್ಲಿ ಒಬ್ಬ  ಯುವನಟನನ್ನು ಸ್ವಾಗತಿಸಲು ಸಾಧ್ಯವಿಲ್ಲವೇನೋ.. ಕಿಚ್ಚನ ಹಾರೈಕೆಗೆ ಪ್ರತಿಕ್ರಿಯಿಸಿರುವ ಸುಮಲತಾ, ಅಭಿಯ ಕಲಾಜೀವನಕ್ಕೆ ನೀನೇ ಸ್ಫೂರ್ತಿ ಎಂದಿದ್ದಾರೆ.

Yajamana Movie Gallery

Bazaar Movie Gallery