` siddaganga mutt, - chitraloka.com | Kannada Movie News, Reviews | Image

siddaganga mutt,

 • ನಡೆದಾಡುವ ದೇವರ ಆಶೀರ್ವಾದ ಪಡೆದ ರಶ್ಮಿಕಾ

  rashmika mandanna visits siddaganfa mutt

  ಸತತ ಯಶಸ್ಸಿನ ಸಂತಸದಲ್ಲಿರುವ ರಶ್ಮಿಕಾ ಮಂದಣ್ಣ, ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ರಶ್ಮಿಕಾ ಮಂದಣ್ಣ, ತ್ರಿವಿಧ ದಾಸೋಹಿಗೆ ನಮಸ್ಕರಿಸಿ ಆಶೀರ್ವಚನ ಪಡೆದರು.

  ನಮ್ಮ ಜೀವನದ ಯಶಸ್ಸಿಗೆ ಸಿದ್ದಗಂಗಾ ಶ್ರೀಗಳ ಆಶೀರ್ವಾದವೂ ಕಾರಣ ಎಂದ ರಶ್ಮಿಕಾ ತಮಗೆ ಶ್ರೀಗಳೇ ಸ್ಫೂರ್ತಿ ಎಂದರು.

 • ಸಿದ್ಧಗಂಗಾ ಮಠದಲ್ಲಿ ಯಶ್

  yash at siddaganga mutt

  ರಾಕಿಂಗ್ ಸ್ಟಾರ್ ಯಶ್, ಇತ್ತೀಚೆಗೆ ದಿಢೀರನೆ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ತುಮಕೂರಿನ ಕಾಲೇಜ್‍ವೊಂದರ ಕಾರ್ಯಕ್ರಮಕ್ಕೆ ಹೋಗಿದ್ದ ಯಶ್, ಮಾರ್ಗಮಧ್ಯದಲ್ಲಿಯೇ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

  yash_siddaganga_mutt1.jpgತ್ರಿವಿಧ ದಾಸೋಹಿ ಶ್ರೀಗಳು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಯಶ್ ಅವರಿಗೆ ಹಾರ ಹಾಕಿ ಆಶೀರ್ವದಿಸಿದ್ದಾರೆ. ಸಿದ್ಧಗಂಗಾ ಮಠದ ಕೈಂಕರ್ಯದ ಬಗ್ಗೆ ಯಶ್ ಹಲವಾರು ಬಾರಿ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸೇವೆ ಪ್ರತಿಯೊಬ್ಬರಿಗೂ ಸ್ಪೂರ್ತಿ ಎನ್ನುವ ಯಶ್, ಶ್ರೀಗಳನ್ನು ಭೇಟಿಯಾಗಿರುವುದು ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

  ಯಶ್, ಮಠಕ್ಕೆ ಭೇಟಿ ನೀಡುವುದು ಇದೇ ಮೊದಲೇನೂ ಅಲ್ಲ. ಆಗಾಗ್ಗೆ ಮಠಕ್ಕೆ ಭೇಟಿ ಕೊಟ್ಟು, ಸ್ವಾಮೀಜಿಗಳ ಆಶೀರ್ವಾದ ಪಡೆಯುವುದು ಯಶ್ ಅವರಿಗೆ ಮಾಮೂಲು.

Yajamana Movie Gallery

Bazaar Movie Gallery