ಕನ್ನಡದ ಹುಚ್ಚ ಯಾರು ಅಂದ್ರೆ, ಅದು ಕಿಚ್ಚ ಅಂತಾರೆ ಅಭಿಮಾನಿಗಳು. ಹುಚ್ಚ ಸಿನಿಮಾ ಸುದೀಪ್‍ಗೆ ಕೊಟ್ಟ ಅತಿದೊಡ್ಡ ಗಿಫ್ಟ್ ಅದು. ಆ ಚಿತ್ರದ ನಿರ್ದೇಶಕ ಓಂಪ್ರಕಾಶ್ ರಾವ್, ಈಗ ಮತ್ತೊಬ್ಬ ಹುಚ್ಚನನ್ನು ಸೃಷ್ಟಿಸಿದ್ದಾರೆ. ಅವರೇ ಡಾರ್ಲಿಂಗ್ ಕೃಷ್ಣ.
ಓಂಪ್ರಕಾಶ್ ನಿರ್ದೇಶನದ ಹುಚ್ಚ 2 ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಪಕ್ಕಾ ಆ್ಯಕ್ಷನ್ ಸಿನಿಮಾದಂತೆ ಕಾಣಿಸುವ ಚಿತ್ರದಲ್ಲಿ ವಿಚಿತ್ರ ವಿಕ್ಷಿಪ್ತ ಕಥೆಯೊಂದು ಸುರುಳಿಯಾಗಿ ಬಿಚ್ಚಿಕೊಳ್ಳಲಿದೆ.
ಸುದೀಪ್ ಚಿತ್ರ ಜೀವನದಲ್ಲಿ ಅತಿದೊಡ್ಡ ಬ್ರೇಕ್ ಕೊಟ್ಟ ಚಿತ್ರ, ಕೃಷ್ಣಗೂ ಅಂಥದ್ದೇ ಹಿಟ್ ಕೊಡುತ್ತಾ..? ಕಾದು ನೋಡಬೇಕಷ್ಟೆ.