` prashant neel - chitraloka.com | Kannada Movie News, Reviews | Image

prashant neel

 • It is Not Vaalu Remake says Yash

  yash image

  Yashs next film after Masterpiece is not a remake. The actor has clarified that the speculation that it will be the remake of Tamil film Vaalu is a misconception. Director Vijay of Vaalu had narrated the same story to Yash last year. Yash wanted some alterations to be made to it. Meanwhile Vijay has directed the same story in Tamil and this film Vaalu is yet to release.

  So the film will not be a remake of the Tamil film as Yash had approved the story much earlier.  Meanwhile shooting for Masterpiece starts on March 9 and the film with director Vijay will start after that.

  The title of that film has not yet been decided. KGF with Prashant Neel will start later this year.

 • KGF Sets In Badami

  actor yash image

  Recreating the Kolar Gold Fields and its surroundings for the film KGF is proving to be a challenge. Huge sets for the film are being constructed in two places, one in Kolar and another near Badami.

  The film is set in the 1970s Kolar and to get it authentic on screen the film team has spent two years on research alone. The film stars Yash and is directed by Prashant Neel. Sources say the sets being created near Badami is nearing completion and shooting as reported by Chitraloka will start in February. The film KGF will have some of the costliest sets ever created in Kannada films.

  Related Articles :-

  Yash In KGF On Feb 1 or 10th

  KGF Team looking Heroine for Yash

  Silent Start to Costliest Kannada film KGF

  Yash Next Film KGF - Exclusive

 • ಅಬ್ಬಾ..! ಇತಿಹಾಸ ನಿರ್ಮಿಸುತ್ತಿದೆ ಕೆಜಿಎಫ್

  kgf breaks all records

  ಕೆಜಿಎಫ್... ಬಿಡುಗಡೆಗೆ ಮೊದಲೇ ಒಂದೊಂದೇ ಇತಿಹಾಸ ನಿರ್ಮಿಸುತ್ತಾ ಹೊರಟಿದೆ. ಬಿಡುಗಡೆಯಾಗುವುದು ಡಿಸೆಂಬರ್ ಕೊನೆಯ ವಾರದಲ್ಲಿ. ಟ್ರೇಲರ್ ರಿಲೀಸ್ ಆಗಿ ಒಂದು ವಾರವೂ ಆಗಿಲ್ಲ. ಕ್ರೇಝ್ ಮಾತ್ರ.. ಮೌಂಟ್ ಎವರೆಸ್ಟ್ ಎತ್ತರದಲ್ಲಿ ಬೆಳೆಯುತ್ತಿದೆ.

  ಕೆಜಿಎಫ್ ಚಿತ್ರದ ಟ್ರೇಲರ್ ನೋಡಿದವರ ಸಂಖ್ಯೆ 2 ಕೋಟಿ ದಾಟಿದೆ. ಕನ್ನಡದಲ್ಲಿ ಟ್ರೇಲರ್ ನೋಡಿದವರಿಗಿಂತ, ಹಿಂದಿಯ ಟ್ರೇಲರ್ ನೋಡಿದವರ ಸಂಖ್ಯೆಯೇ ಹೆಚ್ಚು. ಕೆಜಿಎಫ್ ಟ್ರೇಲರ್ ನೋಡಿದವರು, ಕನ್ನಡದ ಬಗ್ಗೆ ಗೊತ್ತಿಲ್ಲದೇ ಇರುವವರು ಯಶ್ ಬಗ್ಗೆ ಹುಡುಕಾಡುವುದು ಹೆಚ್ಚಾಗಿದೆ. ಗೂಗಲ್ ಸರ್ಚ್‍ನಲ್ಲಿಯೂ ಯಶ್ ಟಾಪ್ 10ನಲ್ಲಿದ್ದಾರೆ. ಟ್ರೆಂಡಿಂಗ್‍ನಲ್ಲಿಯೂ ಕೆಜಿಎಫ್ ಟಾಪ್‍ನಲ್ಲಿದೆ.

  ಕೆಜಿಎಫ್ ಸೃಷ್ಟಿಸುತ್ತಿರುವ ಕ್ರೇಝ್ ನೋಡಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಖುಷಿಯಾಗಿದ್ದಾರೆ. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಎಲ್ಲರೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.

 • ಕನ್ನಡಕ್ಕೆ ಜೂ.ಎನ್‍ಟಿಆರ್ ನಿರ್ದೇಶಕ ಪ್ರಶಾಂತ್ ನೀಲ್ ?

  ntr junior in prashanth neel's movie

  ತೆಲುಗು ಚಿತ್ರರಂಗದ ಸೂಪರ್ ಸ್ಟಾರ್‍ಗಳಲ್ಲಿ ಜ್ಯೂ.ಎನ್‍ಟಿಆರ್ ಒಬ್ಬರು. ಅವರೀಗ ಕನ್ನಡಕ್ಕೆ ಬರುತ್ತಿದ್ದಾರೆ. ಇದಕ್ಕೂ ಮೊದಲು ಚಕ್ರವ್ಯೂಹ ಚಿತ್ರದಲ್ಲಿ ಗಾಯಕರಾಗಿ ಬಂದಿದ್ದ ಎನ್‍ಟಿಆರ್, ಈಗ ನಾಯಕರಾಗಿ ಬರುತ್ತಿದ್ದಾರೆ. ನಿರ್ದೇಶಕ ಉಗ್ರಂ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್.

  ಆ್ಯಕ್ಷನ್ ಚಿತ್ರಗಳ ಮೂಲಕ ಇಡೀ ಇಂಡಿಯಾದಲ್ಲಿ ಜನಪ್ರಿಯರಾದ ಪ್ರಶಾಂತ್ ನೀಲ್, ಸಂಗೀತ, ನೃತ್ಯ ಪ್ರಧಾನ ಮಾಡುತ್ತಿದ್ದಾರೆ. ಶಾಸ್ತ್ರೀಯ ನೃತ್ಯದಲ್ಲಿ ಎನ್‍ಟಿಆರ್ ತರಬೇತಿ ಪಡೆದಿರುವ ಕಲಾವಿದ. ಕೂಚುಪುಡಿಯಲ್ಲಂತೂ ಪ್ರವೀಣ. ಪ್ರಶಾಂತ್ ನೀಲ್ ಅವರು ಎನ್‍ಟಿಆರ್ ಆಯ್ಕೆ ಮಾಡಿಕೊಳ್ಳೋಕೆ ಇದೂ ಒಂದು ಕಾರಣ. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಅಂದಹಾಗೆ ಎನ್‍ಟಿಆರ್ ಒಳ್ಳೆಯ ಕನ್ನಡ ಮಾತನಾಡುತ್ತಾರೆ. 

  ಸದ್ಯಕ್ಕೆ ಎನ್‍ಟಿಆರ್, ರಾಜಾಮೌಳಿಯವರ ಆರ್‍ಆರ್‍ಆರ್‍ನಲ್ಲಿ ಒಂದು ವರ್ಷ ಬ್ಯುಸಿ. ಇತ್ತ ಪ್ರಶಾಂತ್ ನೀಲ್ ಕೆಜಿಎಫ್-2ನಲ್ಲಿ ಬ್ಯುಸಿ. ಸ್ಸೋ.. ಈ ಚಿತ್ರದ ಅಪ್‍ಡೇಟ್ ಏನಿದ್ದರೂ ಒಂದು ವರ್ಷದ ನಂತರ.

 • ಕನ್ನಡಕ್ಕೆ ಹೊಸ ಮಾರ್ಕೆಟ್ ಸೃಷ್ಟಿಸಿದ ಕೆಜಿಎಫ್

  kgf opens new market to kannada films

  ಕೆಜಿಎಫ್, ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಿದೆಯಷ್ಟೇ ಅಲ್ಲ, ಕನ್ನಡಕ್ಕೆ ಹೊಸ ಮಾರುಕಟ್ಟೆಯನ್ನೂ ಸೃಷ್ಟಿಸಿಕೊಟ್ಟಿದೆ. ಈ ಹಿಂದೆ ಕನ್ನಡ ಚಿತ್ರಗಳು ಎಂಟ್ರಿಯನ್ನೇ ಕೊಡದಿದ್ದ ಪ್ರದೇಶದಲ್ಲೂ ಕೆಜಿಎಫ್‍ನಿಂದಾಗಿ ಡಿಮ್ಯಾಂಡ್ ಸೃಷ್ಟಿಯಾಗಿದೆ.

  ಯೂರೋಪ್ ಹಾಗೂ ಅಮೆರಿಕದ ಕೆಲವೆಡೆ ಕನ್ನಡ ಚಿತ್ರಗಳು ಪ್ರದರ್ಶನವಾಗುವುದು ಹೊಸದೇನಲ್ಲ. ಆದರೆ ಕೆಜಿಎಫ್‍ನಿಂದಾಗಿ ದಕ್ಷಿಣ ಯೂರೋಪ್‍ನ ಲಾಟ್ವಿಯಾ, ಲಿಥೇನಿಯಾ, ಉಕ್ರೇನ್‍ಗಳಲ್ಲಿಯೂ ಕೆಜಿಎಫ್ ಧ್ವಜ ಹಾರಿಸಲು ಸಿದ್ಧವಾಗಿದೆ. ರಷ್ಯಾದ ಕೆಲವು ನಗರಗಳಿಂದಲೂ ಕೆಜಿಎಫ್‍ಗಾಗಿ ಬೇಡಿಕೆ ಬಂದಿದೆಯಂತೆ.

  ಸ್ವೀಡನ್, ನಾರ್ವೆ, ಲುಕ್ಸೆಂಬರ್ಗ್, ಫಿನ್‍ಲ್ಯಾಂಡ್, ಡೆನ್ಮಾರ್ಕ್, ಮಾಲ್ಟಾ, ಸೈಪ್ರಸ್, ಆಫ್ರಿಕನ್ ದೇಶಗಳು, ಇಸ್ರೇಲ್, ಹಾಂಗ್‍ಕಾಂಗ್.. ಹೀಗೆ ಕನ್ನಡ ಚಿತ್ರಗಳು ಇದುವರೆಗೆ ಪ್ರದರ್ಶನವನ್ನೇ ಕಂಡಿರದ ದೇಶಗಳಲ್ಲಿ, ನಗರಗಳಲ್ಲಿ ಕೆಜಿಎಫ್ ರಿಲೀಸ್ ಆಗಲಿದೆ.

 • ಕೆಜಿಎಫ್ 100 ಕೋಟಿ ಕ್ಲಬ್ ಸೇರುತ್ತಾ..?

  will kgf become the first kananda film to reach 100 crore

  ಕೆಜಿಎಫ್, ಕನ್ನಡ ಚಿತ್ರರಂಗದ ಮೊದಲ 100 ಕೋಟಿ ಕ್ಲಬ್ ಸೇರಿದ ಚಿತ್ರವಾಗುತ್ತಾ..? ಸದ್ಯದ ಮಟ್ಟಿಗಂತೂ ಕೆಜಿಎಫ್ ಆ ದಾಖಲೆಯನ್ನೂ ಬರೆಯುವ ಮುನ್ಸೂಚನೆ ಕೊಟ್ಟಿದೆ. ಚಿತ್ರದ ಕಲೆಕ್ಷನ್ ಹಾಗಿದೆ.

  ಕೆಜಿಎಫ್ ದೇಶಾದ್ಯಂತ 3 ದಿನದಲ್ಲೇ 60 ಕೋಟಿ ಕಲೆಕ್ಷನ್ ದಾಟಿದೆಯಂತೆ. ಮೊದಲ ದಿನ 24-25 ಕೋಟಿ ಕಲೆಕ್ಷನ್ ಮಾಡಿದ್ದರೆ, ನಂತರ ಎರಡು ದಿನ 20+ ಕೋಟಿ ಕಲೆಕ್ಷನ್ ಆಗಿದೆ.

  ಹಿಂದಿ ಕೆಜಿಎಫ್ ಗಳಿಕೆ ಮೊದಲ ದಿನ ಮುಂಬೈನಲ್ಲಿ 2 ಕೋಟಿ ದಾಟಿದ್ದರೆ, 2ನೇ ದಿನ 3 ಕೋಟಿ ಹಾಗೂ 3ನೇ ದಿನ 5 ಕೋಟಿ ದಾಟಿದೆ. ಅಂದರೆ, ದಿನೇ ದಿನೇ ಹಿಂದಿಯ ಗಳಿಕೆ ಏರುತ್ತಿದೆ. 

  ತಮಿಳಿನಲ್ಲಿ ಕಲೆಕ್ಷನ್ ಚೆನ್ನಾಗಿದ್ದು, ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಲಾಗಿದೆ.

  ಕೆಜಿಎಫ್ ಒಟ್ಟು 2450 ಸ್ಕ್ರೀನ್‍ಗಳಲ್ಲಿ ಪ್ರದರ್ಶನವಾಗುತ್ತಿದ್ದು, ಜನರ ಮೆಚ್ಚುಗೆಯಲ್ಲಿ ಆಗಲೇ 100 ಕೋಟಿ ಕ್ಲಬ್ ಸೇರಿ ಆಗಿದೆ.

 • ಕೆಜಿಎಫ್ ಚಿತ್ರದಲ್ಲಿ ಅಂಥಾದ್ದೇನಿದೆ..?

  kgf highlights revealed by prashanth neel

  ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಕೆಜಿಎಫ್ ಚಿತ್ರ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಸುಮಾರು ಒಂದು ವರ್ಷದಿಂದ ಕನ್ನಡಿಗರು ಎದುರು ನೋಡುತ್ತಿರುವ ಚಿತ್ರ. ಚಿತ್ರದ ಚಿತ್ರೀಕರಣ ಇನ್ನೂ ಶೇ.15ರಷ್ಟು ಬಾಕಿಯಿದೆ. ಇದುವರೆಗೆ ಹೊರಬಂದಿರೋದು ಎರಡು ಟೀಸರ್ ಮಾತ್ರ. ಅವು ಹುಟ್ಟಿಸಿರುವ ಕುತೂಹಲ ಸಣ್ಣದೇನಲ್ಲ. ಇಷ್ಟಕ್ಕೂ ಚಿತ್ರದಲ್ಲಿ ಅಂಥಾದ್ದೇನಿದೆ..? ಕಥೆ ಎಂಥಾದ್ದು..? ನಿರ್ದೇಶಕ ಉಗ್ರಂ ಪ್ರಶಾಂತ್ ನೀಲ್, ಒಂದಿಷ್ಟು ಹೇಳಿಕೊಂಡಿದ್ದಾರೆ.

  ಇದು 70ರಿಂದ 80ರ ದಶಕದಲ್ಲಿ ನಡೆಯುವ ಕಥೆ. ಅಂಡರ್‍ವಲ್ರ್ಡ್ ಛಾಯೆಯಿರುವುದು ಹೌದಾದರೂ, ಅದಕ್ಕೂ ಕೆಜೆಎಫ್‍ಗೂ ಸಂಬಂಧವಿಲ್ಲ. ಪಾತ್ರಗಳು ನನ್ನ ಕಲ್ಪನೆಯವೇ ಹೊರತು, ನಿಜವಾದ ವ್ಯಕ್ತಿಗೆ ಸಂಬಂಧಪಟ್ಟಿದ್ದಲ್ಲ. ಚಿತ್ರದಲ್ಲಿ ಆ್ಯಕ್ಷನ್, ರೊಮ್ಯಾನ್ಸ್, ತಾಯಿ-ಮಗನ ಸೆಂಟಿಮೆಂಟ್ ಎಲ್ಲವೂ ಇದೆ. ಉಗ್ರಂ ಚಿತ್ರಕ್ಕೂ, ಈ ಚಿತ್ರಕ್ಕೂ ಕೂದಲೆಳೆಯಷ್ಟೂ ಲಿಂಕ್ ಇಲ್ಲ. ಇದು ಕಥೆಯ ಬಗ್ಗೆ ಪ್ರಶಾಂತ್ ಹೇಳಿರುವ ಮಾತು.

  ಇನ್ನು ಚಿತ್ರ ರಿಲೀಸ್ ಆಗುವುದು ಏಪ್ರಿಲ್, ಮೇ ನಂತರಾನೇ ಎಂದಿದ್ದಾರೆ ಪ್ರಶಾಂತ್. ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿರೀಕ್ಷೆಯಂತೆಯೇ ಚಿತ್ರ ಮೂಡಿ ಬರುತ್ತಿದೆ. ಮೇಕಿಂಗ್ ಶೈಲಿ ಹಾಲಿವುಡ್ ಮಾದರಿಯಲ್ಲಿದೆ ಎಂದು ಖುಷಿಗೊಂಡಿದ್ದಾರೆ. 

  ಯಶ್ ಅವರಂತೂ ಇಡೀ ಚಿತ್ರವನ್ನು ತಮ್ಮದೇ ಹೋಮ್ ಬ್ಯಾನರ್ ಸಿನಿಮಾವೇನೋ ಎಂಬಷ್ಟು ಪ್ರೀತಿಸುತ್ತಿದ್ದಾರೆ. ತಾವೊಬ್ಬ ಸ್ಟಾರ್ ನಟ ಅನ್ನೋದನ್ನು ಪಕ್ಕಕ್ಕಿಟ್ಟು, ಚಿತ್ರದ ಚಿತ್ರೀಕರಣದಲ್ಲಿ ಇನ್‍ವಾಲ್ವ್ ಆಗುತ್ತಿದ್ದಾರೆ. ಅನಂತ್‍ನಾಗ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ,  ನಾಜರ್ ಕೂಡಾ ಅಷ್ಟೆ.. ಪ್ರತಿಯೊಬ್ಬರೂ ಸಿನಿಮಾವನ್ನು ನಮ್ಮ ಸಿನಿಮಾ ಎಂದೇ ಸಹಕಾರ ನೀಡುತ್ತಿದ್ದಾರೆ. ಒಂದು ಅದ್ಬುತ ಅನುಭವದ ಚಿತ್ರವಂತೂ ನಿಮ್ಮ ಮುಂದೆ ಬರಲಿದೆ ಎಂದು ಭರವಸೆ ನೀಡಿದ್ದಾರೆ ಪ್ರಶಾಂತ್.

 • ಯಶ್ ಕೆಜಿಎಫ್‍ಗೆ ಬಾಲಿವುಡ್ ಮಿಲ್ಕಾಸಿಂಗ್ ಬಲ

  farhan aktar to distribute hindi version of kgf

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಬಿಡುಗಡೆಗೆ ರೆಡಿಯಾಗುತ್ತಿದೆ. ನವೆಂಬರ್ 16ರಂದೇ ರಿಲೀಸ್ ಎಂದು ಘೋಷಿಸಿದ್ದ ಚಿತ್ರತಂಡ ಈಗ ಬಿಡುಗಡೆಯನ್ನು ಡಿಸೆಂಬರ್ 21ಕ್ಕೆ ಮುಂದೂಡಿದೆ. ಈ ಕುರಿತು ಸುದ್ದಿಗೋಷ್ಟಿ ಕರೆದಿದ್ದ ಚಿತ್ರತಂಡ ಚಿತ್ರದ ಬಿಡುಗಡೆ ಕುರಿತು ಇದ್ದ ಅನುಮಾನಗಳಿಗೆ ಉತ್ತರ ನೀಡಿದೆ. ಸಿನಿಮಾವನ್ನು ಏಕಕಾಲದಲ್ಲಿ 5 ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವುದೇ ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗಲು ಕಾರಣ. ಇದರ ಹೊರತಾಗಿ ಮತ್ಯಾವುದೇ ಕಾರಣಗಳಿಲ್ಲ.

  yash_farhan_aktar_anil_thad.jpgಹಿಂದಿಯಲ್ಲಿ ಕೆಜಿಎಫ್ ಸಿನಿಮಾವನ್ನು ರವೀನಾ ಟಂಡನ್ ಅವರ ಪತಿ ಅನಿಲ್ ತಡಾನಿ ಹಾಗೂ ಬಾಲಿವುಡ್‍ನ ಮಿಲ್ಕಾಸಿಂಗ್ ಎಂದೇ ಖ್ಯಾತರಾಗಿರುವ ಫರ್ಹಾನ್ ಅಖ್ತರ್ ಜಂಟಿಯಾಗಿ ರಿಲೀಸ್ ಮಾಡುತ್ತಿದ್ದಾರೆ. ಇದನ್ನು ಫರ್ಹಾನ್ ಅಖ್ತರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಹಿಂದಿಯಲ್ಲಿ ಸಿನಿಮಾ ರಿಲೀಸ್‍ಗೆ ಮುನ್ನ ಪ್ರಚಾರಕ್ಕೆ ಸ್ವಲ್ಪ ಸಮಯ ಬೇಕೆಂದು ವಿತರಕರು ಕೇಳಿಕೊಂಡ ಕಾರಣ, ಬಿಡುಗಡೆಯನ್ನು ಮುಂದಕ್ಕೆ ಹಾಕಲಾಯಿತು ಎಂದು ತಿಳಿಸಿದ್ದಾರೆ ಯಶ್. 

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images