` vashistha simha, - chitraloka.com | Kannada Movie News, Reviews | Image

vashistha simha,

 • 'Tagaru' Completes 50 Days

  tagaru completes 50 days

  Shivarajakumar starrer 'Tagaru' which was released on the 23rd of February, has completed 50 day run. The film has completed 50 days in Santhosh and other theaters across Karnataka.

  To mark the occasion, Shivarajakumar, Dhananjay and director Suri will be visiting theaters to promote the film in Bangalore, Mysore, Mandya and Hassan on today and Sunday.

  'Tagaru' stars Shivarajakumar, Dhananjay, Vasishta Simha, Manvitha Harish, Bhavana Menon, Devaraj and others in prominent roles. 'Tagaru - Maiyyalla Pogaru' is being written and directed by Suri, while K P Srikanth is producing the film. Mahendra Simha is the cinematographer, while Charan Raj of 'Godhi Banna Sadharana Maikattu' is the music director.

   

 • Vasishta Simha Is 'Gangster' Now

  vashistha simha is gangster now

  Actor Vasishta Simha who is looking forward the release of his debut film as a hero 'India vs England' has silently completed yet another film called 'Gangster'.

  Vasishta plays hero again in 'Gangster' and the film is based on some real life incidents. The film is based on naxalism and is shot simultaneously in Kannada and Telugu.

  'Gangster' is being written and directed by debutante Balaji. Varun Kumar is the music director, while Suresh Bhargav is the cinematographer. Film stars Vasishta Simha, Samyukta Belawadi, Yajna Shetty, Aravind Rao and others. The film has been shot in Yellapura and Telangana.

 • ತೆಲುಗಿಗೂ ಸಿಂಗರ್ ಸಿಂಹ

  vashishtha simha to sing in telugu too

  ವಸಿಷ್ಟ ಸಿಂಹ ಎಂಬ ಈ ಉದಯೋನ್ಮುಖ ಕಲಾವಿದ, ವಿಭಿನ್ನ ಪಾತ್ರಗಳಿಂದಲೇ ಚಿತ್ರರಂಗದಲ್ಲಿ ನಿಧಾನವಾಗಿ ಬೇರೂರುತ್ತಿದ್ದಾರೆ. ಟಗರು ಚಿತ್ರದ ಚಿಟ್ಟೆ ಪಾತ್ರದಲ್ಲಿನ ಅವರ ಅಭಿನಯ ಮೆಚ್ಚುಗೆ ಗಿಟ್ಟಿಸುತ್ತಿರುವಾಗಲೇ, ಅವರು ಮತ್ತೊಮ್ಮೆ ಸಿಂಗರ್ ಆಗುತ್ತಿದ್ದಾರೆ. ಈ ಬಾರಿ ತೆಲುಗಿನಲ್ಲಿ.

  ಕಿರಿಕ್ ಪಾರ್ಟಿ ಚಿತ್ರದ `ನೀಚು ಸುಳ್ಳು ಸುತ್ತೋ ನಾಲಿಗೆ.. ಹಾಡನ್ನು ಹಾಡಿದ್ದವರು ವಸಿಷ್ಟ ಸಿಂಹ. ಅದೇ ಹಾಡನ್ನು ತೆಲುಗಿನಲ್ಲಿ ಕೂಡಾ ಹಾಗೆಯೇ ಬಳಸಿಕೊಳ್ಳಲಾಗಿದೆ. ಆ ಹಾಡನ್ನು ಕೂಡಾ ವಸಿಷ್ಟ ಸಿಂಹ ಅವರ ಧ್ವನಿಯಲ್ಲೇ ಹಾಡಿಸಲಾಗಿದೆ.

  ನಾನು ಸಿನಿಮಾ ರಂಗಕ್ಕೆ ಬಂದಿದ್ದು ಗಾಯಕನಾಗಲು. ಹೀಗಾಗಿ ಒಳ್ಳೆಯ ಹಾಡು ಬಂದಾಗ ಇಲ್ಲ ಎನ್ನುವುದಕ್ಕಾಗುವುದೇ ಇಲ್ಲ. ಆದರೆ, ನಟನಾಗಿ ಬ್ಯುಸಿ ಇರುವ ಕಾರಣ, ತುಂಬಾ ಇಷ್ಟವಾದರೆ ಮಾತ್ರ ಹಾಡುತ್ತೇನೆ ಎನ್ನುತ್ತಾರೆ ವಸಿಷ್ಟ. 

 • ಲಂಡನ್‍ನಲ್ಲಿ ಮಾನ್ವಿತಾ ಹರೀಶ್, ವಸಿಷ್ಟ ಸಿಂಹ ಬಂಧನ, ಬಿಡುಗಡೆ

  vasistha simha, manvitha harish in london

  ಕೆಂಡಸಂಪಿಗೆ, ಟಗರು ಚಿತ್ರಗಳ ಖ್ಯಾತಿಯ ಮಾನ್ವಿತಾ ಹರೀಶ್, ರಾಜಾಹುಲಿ, ಟಗರು ಚಿತ್ರಗಳ ಖ್ಯಾತಿಯ ವಸಿಷ್ಟ ಸಿಂಹರನ್ನು ಲಂಡನ್ ಪೊಲೀಸರು ಇತ್ತೀಚೆಗೆ ಅರೆಸ್ಟ್ ಮಾಡಿ ಬಿಡುಗಡೆ ಮಾಡಿದ್ಧಾರೆ. ಅದಕ್ಕೆ ಕಾರಣವಾಗಿದ್ದು ಇಷ್ಟೆ, ಮಾನ್ವಿತಾ ಮತ್ತು ವಸಿಷ್ಟ ಸಿಂಹ, ಲಂಡನ್‍ನ ರಸ್ತೆಯಲ್ಲಿ ರೊಮ್ಯಾನ್ಸ್ ಮಾಡಿದ್ದು.

  ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಮಾನ್ವಿತಾ ಮತ್ತು ವಸಿಷ್ಟ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಅದಾದ ನಂತರ ಇದು ಸಿನಿಮಾಗಾಗಿ ನಡೆಯುತ್ತಿರುವ ರೊಮ್ಯಾನ್ಸ್ ಎಂದು ತಿಳಿದ ಮೇಲೆ ಲಂಡನ್ ಪೊಲೀಸರು ಬಿಟ್ಟು ಕಳಿಸಿದರಂತೆ.

 • ವಸಿಷ್ಠ ಸಿಂಹ ಹುಡುಗಿ ಮೇಲೆ ಯಶ್ ಕಣ್ಣು..!

  funny co incidnce between yash and vashistha in kgf

  ವಸಿಷ್ಠ ಸಿಂಹ, ಈಗ ಕನ್ನಡದ ಸ್ಟಾರ್ ವಿಲನ್ ಎಂದರೆ ತಪ್ಪಾಗಲಿಕ್ಕಿಲ್ಲ. ಕೆಜಿಎಫ್‍ನಲ್ಲೂ ಅದು ಪ್ರೂವ್ ಆಗಿದೆ. ಆದರೆ, ಅಲ್ಲೊಂದು ತರ್ಲೆ ಇದೆ. ವಸಿಷ್ಠ ಸಿಂಹ ಲವ್ ಮಾಡೋ ಹುಡುಗಿ ಮೇಲೆ ಯಶ್ ಕಣ್ಣು ಹಾಕ್ತಾರೆ. 

  ವಿಶೇಷ.. ವಿಚಿತ್ರ ಏನಂದ್ರೆ, ವಸಿಷ್ಠಗೆ ಹೆಸರು ತಂದುಕೊಟ್ಟ ರಾಜಾಹುಲಿಯಲ್ಲೂ ಅಷ್ಟೆ. ವಸಿಷ್ಠ ಲವ್ ಮಾಡೋ ಹುಡುಗಿಯನ್ನೇ ರಾಜಾಹುಲಿ ಯಶ್ ಮದುವೆಯಾಗೋದು. ಅದು ಕೆಜಿಎಫ್‍ನಲ್ಲೂ ಮುಂದುವರಿದಿದೆ.

  `ನಾನೂ ಯಶ್, ಚೆನ್ನಾಗೇ ಇದ್ದೀವಿ. ಆದರೆ, ನಿರ್ದೇಶಕರು ನಮ್ಮಿಬ್ಬರ ಮಧ್ಯೆ ಹುಡುಗಿಯನ್ನು ಬಿಟ್ಟು ಆಟ ಆಡಿಸ್ತಾರೆ.. ಹಹ್ಹಹ್ಹಹ್ಹಾ.. ' ಎಂದು ಗಹಗಹಿಸುತ್ತಾರೆ ವಸಿಷ್ಠ. 

 • ಶಿವಣ್ಣ ಜೊತೆ ವಸಿಷ್ಠ ಸಿಂಹ ಹ್ಯಾಟ್ರಿಕ್

  vashishha simha's hatrick with shivarajkumar

  ಕವಚ ಚಿತ್ರ ರಿಲೀಸ್‍ಗೆ ರೆಡಿ. ಇದೇ ವಾರ ತೆರೆಗೆ ಬರುತ್ತಿರುವ ಚಿತ್ರದಲ್ಲಿ ಶಿವಣ್ಣ ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸಿದ್ದರೆ, ವಸಿಷ್ಠ ವಿಲನ್. 

  ಚಿತ್ರದಲ್ಲಿ ನಂದೊಂಥರಾ ವಿಚಿತ್ರ ಕ್ಯಾರೆಕ್ಟರ್. ಯಾರೊಂದಿಗೂ ಮಾತನ್ನೇ ಆಡದ ಕ್ರೂರಿ. ಕಣ್ಣುಗಳಲ್ಲಿ ಸದಾ ಆಕ್ರೋಶವನ್ನೇ ಉಗುಳುವ ಪಾತ್ರ. ಹೀಗಾಗಿ ನಾನು ಸೆಟ್ಟಿನಲ್ಲಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಒಬ್ಬನೇ ಇರುತ್ತಿದೆ. ಹಾಗೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆತುಬಿಟ್ಟರೆ, ಈ ಪಾತ್ರದೊಳಗೆ ಪ್ರವೇಶ ಸಾಧ್ಯವಾಗದು ಎಂದುಕೊಂಡು ಹಾಗೆ ಇದ್ದೆ ಎನ್ನುತ್ತಾರೆ ವಸಿಷ್ಠ. ಚಿತ್ರದಲ್ಲಿ ವಸಿಷ್ಠ ಲುಕ್ಕಿಗೆ ನಿರ್ದೇಶಕ ಜಿವಿಆರ್ ವಾಸು ಬಹಳ ಕೇರ್ ತೆಗೆದುಕೊಂಡಿದ್ದಾರಂತೆ. ಮೇಕಪ್ಪಿಗೆ ಒಂದು ಗಂಟೆ ಆಗುತ್ತಿತ್ತು ಎಂದಿರುವ ವಸಿಷ್ಠಗೆ ಇನ್ನೂ ಒಂದು ಖುಷಿ ಇದೆ. 

  ಹ್ಯಾಟ್ರಿಕ್ ಹೀರೋ ಜೊತೆಗೆ ಅವರದ್ದೊಂದು ಹ್ಯಾಟ್ರಿಕ್ ಆಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಶಿವಣ್ಣ ಜೊತೆ ಇದು ನನ್ನ 3ನೇ ಸಿನಿಮಾ. ಮಫ್ತಿ, ಟಗರು ನಂತರ ಈಗ ಕವಚ. ಅವರೊಂದು ರೀತಿ ನನಗೆ ಹಿರಿಯ ಅಣ್ಣನಿದ್ದಂತೆ ಎಂದಿದ್ದಾರೆ ವಸಿಷ್ಠ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery