777 ಚಾರ್ಲಿ. ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾ. ಈ ವರ್ಷದ ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಜೂನ್ 10ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಆಟ.. ಬೊಂಬಾಟ್ ಆಗಿ ಶುರುವಾಗುತ್ತಿದೆ. ಚಿತ್ರದ ಪ್ರೀಮಿಯರ್ ಶೋಗಳನ್ನು ದೇಶದ 21 ನಗರಗಳಲ್ಲಿ ಆಯೋಜಿಸಲಾಗಿದೆ. ಜೊತೆಗೆ ಅಡ್ವಾನ್ಸ್ ಬುಕ್ಕಿಂಗ್ ಕೂಡಾ ಶುರುವಾಗಿದೆ.
ಮುಂಬೈ, ಪುಣೆ, ನಾಗ್ಪುರ, ಹೈದರಾಬಾದ್, ವೈಜಾಗ್, ಚೆನ್ನೈ, ಮಧುರೈ, ಕೊಯಮತ್ತೂರು, ಡೆಲ್ಲಿ, ಬರೋಡಾ, ಸೂರತ್, ತ್ರಿವೇಂದ್ರಮ್, ಸೊಲ್ಲಾಪುರ, ಅಮೃತ್‍ಸರ, ಜೈಪುರ, ಪಣಜಿ, ಲಖನೌ, ವಾರಾಣಸಿ, ಕೋಲ್ಕತ್ತಾ.. ಹೀಗೆ ಎಲ್ಲೆಡೆ ಪ್ರೀಮಿಯರ್ ಶೋಗಳಿವೆ. ಅಲ್ಲಿಗೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಗೋವಾ, ದೆಹಲಿ, ಉತ್ತರ ಪ್ರದೇಶ, ಪ.ಬಂಗಾಳ, ರಾಜಸ್ತಾನ, ಪಂಜಾಬ್..ಹೀಗೆ ಎಲ್ಲ ರಾಜ್ಯಗಳಲ್ಲೂ ಪ್ರೀಮಿಯರ್ ಶೋಗಳಿವೆ. ಜೂನ್ 2ಕ್ಕೆ ಅಂದ್ರೆ ಇವತ್ತು ಅಮೃತ್‍ಸರ, ದೆಹಲಿಗಳಲ್ಲಿ ಪ್ರೀಮಿಯರ್ ಶೋ.
ಕರ್ನಾಟಕದಲ್ಲಿ ಜೂನ್ 9ಕ್ಕೆ ಪ್ರೀಮಿಯರ್ ಶೋಗಳಿವೆ. ಬೆಂಗಳೂರಿನಲ್ಲಿ 3 ಶೋ, ಮೈಸೂರು, ಮಂಗಳೂರಿನಲ್ಲಿ ಪ್ರೀಮಿಯರ್ ಶೋಗಳಿಗೆ ಪ್ಲಾನ್ ಮಾಡಿದೆ 777 ಚಾರ್ಲಿ ಟೀಂ.
ಕಿರಣ್ ರಾಜ್ ನಿರ್ದೇಶನದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ನಾಯಿಯ ನಡುವಿನ ಬಾಂಧವ್ಯದ ಕಥೆ ಇದೆ. ಸಂಗೀತಾ ಶೃಂಗೇರಿ ನಾಯಕಿ. ರಾಜ್ ಬಿ.ಶೆಟ್ಟಿ, ದಾನಿಶ್ ಸೇಠ್, ಬಾಬ್ಬಿ ಸಿಂಹ ಉಳಿದ ಪ್ರಧಾನ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗಿಂತ ಹೆಚ್ಚು ಸ್ಕ್ರೀನ್ ಪೇಸ್ ನಾಯಿಗೇ ಇದೆ ಎನ್ನೋದು ಕಿರಣ್ ರಾಜ್ ಮಾತು.