` state budget, - chitraloka.com | Kannada Movie News, Reviews | Image

state budget,

 • ಬಜೆಟ್​ನಲ್ಲಿ ಚಿತ್ರರಂಗಕ್ಕೆ ಸಿದ್ದರಾಮಯ್ಯ ಕೊಟ್ಟಿದ್ದೇನು..?

  cm siddarmaiah and kannada film budget

  ಈ ಬಾರಿಯ ಬಜೆಟ್​ನಲ್ಲಿ ಚಿತ್ರರಂಗಕ್ಕೆ ಸಿಕ್ಕಿದ್ದೇನು ಎಂದು ನೋಡಿದರೆ, ತುಂಬಾ ದೊಡ್ಡ ಪ್ರಮಾಣದ ಉಡುಗೊರೆಗಳೇನೂ ಕಾಣುತ್ತಿಲ್ಲ. ಆದರೆ, ಸೃಜನಶೀಲ ಕಥೆಗಾರರು, ನಿರ್ಮಾಪಕರಿಗೆ ಒಂದಿಷ್ಟು ಕೊಡುಗೆಗಳಿವೆ.

  ಕರ್ನಾಟಕ ಚಲನಚಿತ್ರ ಅಕಾಡೆಮಿಯ ಜೇನುಗೂಡು ಕಥಾ ಕಣಜದಿಂದ ಕಥೆಗಳನ್ನು ಆಯ್ಕೆ ಮಾಡಿಕೊಂಡು ಚಿತ್ರ ನಿರ್ಮಿಸಿದರೆ, ಆ ಚಿತ್ರಗಳ ನಿರ್ಮಾಪಕರಿಗೆ ತಲಾ 20 ಲಕ್ಷ ರೂ. ಹಾಗೂ ಕಥಾ ಲೇಖಕರಿಗೆ ತಲಾ 5 ಲಕ್ಷ ರೂ. ವಿಶೇಷ ಸಹಾಯಧನ ಸಿಗಲಿದೆ. ಇದು ಪ್ರತಿ ವರ್ಷ 8 ಚಲನಚಿತ್ರಗಳಿಗೆ ಅನ್ವಯವಾಗಲಿದೆ.

  ಡಾ.ರಾಜ್ ಕುಮಾರ್ ಸ್ಮರಣಾರ್ಥ ರಾಜ್​ಕುಮಾರ್ ಪುಣ್ಯಭೂಮಿ ಆವರಣದಲ್ಲಿ ಸುಸಜ್ಜಿತ ಯೋಗ ಕೇಂದ್ರ ಸ್ಥಾಪನೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

  ಇನ್ನು ಕಳೆದ ವರ್ಷ ಗುಣಾತ್ಮಕ ಚಿತ್ರಗಳಿಗೆ ನೀಡುವ ಸಹಾಯಧನವನ್ನು 125 ಚಿತ್ರಗಳಿಗೆ ಹೆಚ್ಚಿಸಲಾಗಿತ್ತು. ಅದು ಮುಂದುವರೆಯಲಿದೆ. ಅಲ್ಲದೆ, ಚಲನಚಿತ್ರರಂಗದ ಕಾರ್ಮಿಕರು, ತಂತ್ರಜ್ಞರಿಗೆ ಆರೋಗ್ಯಸೌಲಭ್ಯ ಒದಗಿಸಲು 10 ಕೋಟಿ ಅನುದಾನದೊಂದಿಗೆ ‘ಚಲನಚಿತ್ರ ಕಾರ್ಮಿಕರ ದತ್ತಿನಿಧಿ’ ಸ್ಥಾಪಿಸಲಾಗಿದೆ.

  ಇನ್ನು ಚಲನಚಿತ್ರವೂ ಸೇರಿದಂತೆ ವಿವಿಧ ಕ್ಷೇತ್ರಗಳ ಅಶಕ್ತ ಕಲಾವಿದರಿಗೆ ಮಾಸಾಶನ 1000.00 ರೂ.ನಿಂದ 1500.00ರೂ.ಗೆ ಹೆಚ್ಚಿಸಲಾಗಿತ್ತು. 8330 ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಮಾಹಿತಿ ನೀಡಿದ್ದಾರೆ.

   

 • ರಾಮನಗರಕ್ಕೆ ಸಿನಿಮಾ ಯುನಿವರ್ಸಿಟಿ - ಬಜೆಟ್ ಘೋಷಣೆ

  state budget announced

  ಈ ಬಾರಿಯ ಬಜೆಟ್‌ನಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ದೊಡ್ಡದಾಗಿ ಬೆಳೆಯುತ್ತಿರುವ ಚಲನಚಿತ್ರೋದ್ಯಮದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಿತ್ರದ ತಯಾರಿಕೆ, ನಿರ್ದೇಶನ, ಛಾಯಾಚಿತ್ರ, ಧ್ವನಿ, ಸಂಕಲನ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲು ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದ್ದಾರೆ. ಕುಮಾರಸ್ವಾಮಿಯವರ ಸ್ವಕ್ಷೇತ್ರವೂ ಆಗಿರುವ ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯ ತೆರೆಯಲು 30 ಕೋಟಿ ರೂ. ಬಂಡವಾಳ ಮೀಸಲಿಟ್ಟಿದ್ದಾರೆ. 

  ಅಷ್ಟೇ ಅಲ್ಲ, ರಾಮನಗರ ಫಿಲಂ ಸಿಟಿಯಲ್ಲಿ ಛಾಯಾಚಿತ್ರ, ಸಂಕಲನ, ಸೌಂಡ್ ರೆರ್ಕಾಡಿಂಗ್ ಮಾಡುವ ಸಂಸ್ಥೆ, ಅನಿಮೇಷನ್ ಸ್ಟುಡಿಯೋಗಳು, ಕಂಪ್ಯೂಟರ್ ಗ್ರಾಫಿಕ್ ಸ್ಟುಡಿಯೋಗಳು ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು 40 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಬಜೆಟ್​ನಲ್ಲಿ ಘೋಷಿಸಿದ್ಧಾರೆ.

  ಅಲ್ಲದೆ, ಹೊರ ದೇಶದಿಂದ ಚಿತ್ರ ನಿರ್ಮಾಣಕ್ಕಾಗಿ ಬರುವ ಕಲಾವಿದರು ಮುಂತಾದ ತಂತ್ರಜ್ಞರಿಗೆ ವಸತಿ ಹಾಗೂ ಇನ್ನಿತರೆ ಅವಶ್ಯಕ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕಾಗಿ 20 ಕೋಟಿ ರೂ. ನೀಡುವುದಾಗಿ ಬಜೆಟ್​ನಲ್ಲಿ ಪ್ರಕಟಿಸಿದ್ದಾರೆ. 

  ಅಲ್ಲದೆ, ಡಾ. ರಾಜ್‍ಕುಮಾರ್ ಸ್ಮರಣಾರ್ಥ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸುಸಜ್ಜಿತವಾದ ಯೋಗ ಕೇಂದ್ರ ಸ್ಥಾಪನೆಗೂ ಸರ್ಕಾರ ಮುಂದಾಗಿದೆ. ಆದರೆ, ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ದರಕ್ಕೆ ಗರಿಷ್ಟ ಮಿತಿ ನಿಗದಿ ಕುರಿತಂತೆ ಬಜೆಟ್​ನಲ್ಲಿ ಪ್ರಸ್ತಾಪವೇನೂ ಆಗಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery