ಕಿರಿಕ್ ಪಾರ್ಟಿ, ರಿಕ್ಕಿ ಚಿತ್ರಗಳ ನಿರ್ದೇಶಕ ರಿಷಬ್ ಶೆಟ್ಟಿ. ಈಗ ಬೆಲ್‍ಬಾಟಂ ಚಿತ್ರದ ನಾಯಕ. ಅಂದಹಾಗೆ ಎರಡು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿಯವರ ಕನಸು, ಡೈರೆಕ್ಟರ್ ಆಗುವುದಾಗಿರಲಿಲ್ಲ. ನಾಯಕನಾಗಬೇಕು ಎಂಬ ಕನಸಿಟ್ಟುಕೊಂಡು ಚಿತ್ರರಂಗಕ್ಕೆ ಬಂದವರು ರಿಷಬ್ ಶೆಟ್ಟಿ.
13 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ ರಿಷಬ್ ಶೆಟ್ಟಿಗೆ ನಟನಾಗುವ ಅವಕಾಶ ಸಿಗಲಿಲ್ಲ. ಉಳಿದವರು ಕಂಡಂತೆ ಚಿತ್ರದಲ್ಲಿ ನಟಿಸಿದರಾದರೂ, ಪೂರ್ಣ ಪ್ರಮಾಣದ ಹೀರೋ ಆಗಲು ಸಾಧ್ಯವಾಗಿರಲಿಲ್ಲ. ಆದರೆ, ನಿರ್ದೇಶಕರಾಗಿ ಹೆಸರು ಮಾಡಿದ ರಿಷಬ್ ಶೆಟ್ಟಿ, ಬೆಲ್‍ಬಾಟಂ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ.
ಕೆಲವೊಮ್ಮೆ ನಾವು ಊರಿಗೆ ಹೊರಟಾಗ ಡೈರೆಕ್ಟ್ ಬಸ್ ಸಿಗೋದಿಲ್ಲ. ಸುತ್ತಿ ಬಳಸಿ ಹೋಗಬೇಕಾಗುತ್ತೆ. ಆದರೆ, ನಮ್ಮ ಗಮ್ಯ ತಲುಪುವ ತವಕ ಕಡಿಮೆಯಾಗೋದಿಲ್ಲ. 2005ರಲ್ಲಿ ಚಿತ್ರರಂಗಕ್ಕೆ ಬಂದ ನನ್ನ ಕನಸು, 13 ವರ್ಷಗಳ ನಂತರ ನನಸಾಗುತ್ತಿದೆ ಎಂದು ತಮ್ಮ ಹಾದಿಯನ್ನು ನೆನಪಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.
ಪ್ರಯತ್ನ ನಿರಂತರವಾಗಿದ್ದರೆ, ಅವಕಾಶಗಳು ಸಿಕ್ಕೇ ಸಿಗುತ್ತವೆ. ಪರಿಶ್ರಮ ಪ್ರಾಮಾಣಿಕವಾಗಿದ್ದರೆ, ಗೆಲುವು ಕೂಡಾ ಸಿಗುತ್ತೆ. ಅದೃಷ್ಟವೂ ಜೊತೆಯಲ್ಲಿದ್ದರೆ, ಅಂದುಕೊಂಡ ಗುರಿಯನ್ನು ತಲುಪಬಹುದು. ಇವೆಲ್ಲದಕ್ಕೂ ಉದಾಹರಣೆಯಂತಿದ್ದಾರೆ ರಿಷಬ್ ಶೆಟ್ಟಿ.