` gurukiran, - chitraloka.com | Kannada Movie News, Reviews | Image

gurukiran,

 • Dwarakish And Gurukiran Launch Audio Company

  dwarkish and gurukiran launch audio company

  A new audio company has been launched in Sandalwood. It is a collaboration between Dwarakish Chitra and composer Gurukiran. It has been named DGK Audio Inc. Amma I You directed by KM Chaitanya and starring Chiranjeevi Sarja will be the first album under this audio company.

  The film is releasing shortly. After producing over 50 films in the last 50 years Dwarakish Chitra has ventured into another aspect of films. Gurukiran who has completed 20 years as a film composer has finally started his own label. Almost all composers have their own labels these days and Gurukiran has finally followed suit.

 • ಗುರುಕಿರಣ್ 20 ವರ್ಷದ ಸಂಗೀತ ಯಾನ

  20 years of gurukiran's music

  ಎ. ಕನ್ನಡ ಚಿತ್ರರಂಗವನ್ನಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗ ಧುತ್ತನೆ ಕನ್ನಡ ಚಿತ್ರಗಳತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಕಥೆ, ಚಿತ್ರಕಥೆಯನ್ನು ಹೀಗೂ ಮಾಡಬಹುದಾ ಎಂದು ಎಲ್ಲರನ್ನೂ ಬೆರಗಾಗಿಸಿದ್ದ ಚಿತ್ರ. ಆ ಚಿತ್ರದ ಹಿಂದಿದ್ದವರು ಉಪೇಂದ್ರ. ಕೇವಲ ಕಥೆ, ಚಿತ್ರಕಥೆಯಷ್ಟೇ ಅಲ್ಲ, ಆ ಚಿತ್ರದ ಹಾಡುಗಳೂ ವಿಭಿನ್ನತೆಯಲ್ಲಿ ಅದ್ದಿ ತೆಗೆದ ಹಾಗಿದ್ದವು. ಅಂತಹ ವಿಭಿನ್ನ ಹಾಡುಗಳನ್ನು ಸೃಷ್ಟಿಸಿದ ಮಾಂತ್ರಿಕ ಗುರುಕಿರಣ್. ಅಂದಹಾಗೆ ಗುರುಕಿರಣ್ ಸಿನಿಮಾ ಜರ್ನಿಗೀಗ 20ರ ಹರೆಯ. ತಮ್ಮ 20 ವರ್ಷದ ಸಿನಿಮಾ ಪ್ರಯಾಣದ ಬಗ್ಗೆ ಗುರುಕಿರಣ್ ಹೇಳಿಕೊಂಡಿರುವ ಕಥೆಗಳೂ ಕೂಡಾ ಅವರ ಸಂಗೀತದಷ್ಟೇ ವಿಭಿನ್ನ.

  ಗುರುಕಿರಣ್ ಸಂಗೀತ ನಿರ್ದೇಶಕರಷ್ಟೇ ಅಲ್ಲ, ಹಾಡುಗಳನ್ನೂ ಬರೆದಿದ್ದಾರೆ. ಉಪೇಂದ್ರ ಚಿತ್ರದಲ್ಲಿನ ಟು ಥೌಸೆಂಡ್ ಹಾಡು ಅವರು ಬರೆದ ಮೊದಲ ಗೀತೆ. ಬಂಡಲ್ ಬಡಾಯಿ ಮಾದೇವ, ಈ ಹುಡ್ಗೀರೆಲ್ಲ ಹಿಂಗೆ.. ಮೊದಲಾದ ಟಪ್ಪಾಂಗುಚ್ಚಿ ಹಾಡುಗಳ ಸಾಹಿತ್ಯ ಅವರದ್ದೇ. ಗುರುಕಿರಣ್, ತಮ್ಮ ಕನಸಿನಂತೆಯೇ ತಾವು ಇಷ್ಟಪಡುವ ಹಾಡುಗಳಿಗೆ ತಾವೇ ಧ್ವನಿಯಾದರು. ಗಾಯಕರಾಗುವ ಆಸೆ ಈಡೇರಿಸಿಕೊಂಡರು. 

  ಈ 20 ವರ್ಷಗಳ ಜರ್ನಿಯಲ್ಲಿ ಎ, ಉಪೇಂದ್ರ, ಅಪ್ಪು, ಆಪ್ತಮಿತ್ರ, ಜೋಗಿ, ನಿನಗಾಗಿ, ಖುಷಿ, ಅಭಿ, ಕರಿಯ, ರಾಮಶಾಮಭಾಮ, ಗಂಡುಗಲಿ ಕುಮಾರರಾಮ.. ಹೀಗೆ ಅವರು ಸಂಗೀತ ನೀಡಿದ ಹಿಟ್ ಚಿತ್ರಗಳ ಸಂಖ್ಯೆ ತುಂಬಾ ದೊಡ್ಡದಿದೆ. 

  ಗುರುಕಿರಣ್ ಚಿತ್ರರಂಗಕ್ಕೆ ಬಂದದ್ದು ಗಾಯಕನಾಗುವ ಹಂಬಲದಿಂದಲೇ ಹೊರತು, ಬೇರ್ಯಾವ ಉದ್ದೇಶವೂ ಇರಲಿಲ್ಲ. ಆದರೆ, ಅವರ ಧ್ವನಿ ಮತ್ತು ಹಾಡುವ ಶೈಲಿ ಅಂದಿನ ಸಂಗೀತದ ಸ್ಟೈಲ್‍ಗೆ ಹೊಂದಿಕೆಯಾಗುತ್ತಿರಲಿಲ್ಲ. ತಾನು ಇಷ್ಟಪಡುವ ಹಾಡುಗಳನ್ನು ಹಾಡುವ ಸಲುವಾಗಿಯೇ ಸಂಗೀತ ನಿರ್ದೇಶಕರಾದವರು ಗುರುಕಿರಣ್.

  ಗಾಯಕರಾಗಲೆಂದು ಬಂದ ಗುರುಕಿರಣ್, ಗಾಯಕನಾಗುವ ಬದಲು ನಟರಾದರು. ಅವರಿಗೆ ನಟನೆಯ ಅವಕಾಶ ನೀಡಿದ್ದು ನಾಗಾಭರಣ.

  ತಾವು ಆರಂಭದಲ್ಲಿ ಪಟ್ಟ ಕಷ್ಟಗಳನ್ನು ನೋವು ಎಂದುಕೊಳ್ಳದ ಸಾಧಕ ಗುರುಕಿರಣ್. ಅವುಗಳನ್ನೆಲ್ಲ ಅನುಭವ ಎಂದೇ ಕರೆದುಕೊಳ್ತಾರೆ. ಆ ಅನುಭವ ಕಲಿಸಿದ ಪಾಠದಿಂದಲೇ ಅವರು ಚಿತ್ರರಂಗಕ್ಕೆ 10ಕ್ಕೂ ಹೆಚ್ಚು ಗೀತಸಾಹಿತಿಗಳನ್ನು, 100ಕ್ಕೂ ಹೆಚ್ಚು ಗಾಯಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

  ಗುರುಕಿರಣ್ ಅವರಿಗೆ ಚಿತ್ರಸಂಗೀತದ ಮೊದಲ ಗುರು ವಿ.ಮನೋಹರ್. ಮೊದಲು ಪಡೆದ ಸಂಭಾವನೆ 500 ರೂ.

  ಎ ಚಿತ್ರಕ್ಕೆ ಸಂಗೀತ ನೀಡಿದ ಗುರುಕಿರಣ್‍ಗೆ ಮೊದಲು ಸಿಕ್ಕಿದ್ದ ಪ್ರತಿಕ್ರಿಯೆ ಎಂಥದ್ದು ಗೊತ್ತಾ..? ಎ ಅಂತಾ ಹೆಸರಿಟ್ಟಿದ್ದಾರೆ. ಯಾರು ಕೇಳ್ತಾರೆ ಅನ್ನುತ್ತಿದ್ದವರೇ, ಡ್ಯಾಶ್ ನನ್ ಮಗ ಏನ್ ಹೊಡ್ದವನೇ ಸಾರ್ ಅಂದಿದ್ದರು.

  ಗೆಲುವು, ಸೋಲು ಎರಡನ್ನೂ ನೋಡಿರುವ ಗುರುಕಿರಣ್‍ಗೆ ಇವತ್ತಿಗೂ ಸ್ಫೂರ್ತಿ ಸಿಗುವುದು ಅಭಿಮಾನಿಗಳ ಪ್ರೀತಿಯಿಂದ.

 • ದ್ವಾರಕೀಶ್, ಗುರುಕಿರಣ್ ಹೊಸ ಆಡಿಯೋ ಸಂಸ್ಥೆ

  dwarkish and gurukiran launch audio company

  ದ್ವಾರಕೀಶ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಕನ್ನಡದ ಕುಳ್ಳ ದ್ವಾರಕೀಶ್, ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಆಡಿಯೋ ಸಂಸ್ಥೆ ಕಟ್ಟುವ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ ದ್ವಾರಕೀಶ್. ಈ ಸಾಹಸಕ್ಕೆ ಕೈ ಜೋಡಿಸಿರುವುದು ಸಂಗೀತ ನಿರ್ದೇಶಕ ಗುರುಕಿರಣ್.

  ಇಬ್ಬರೂ ಸಹಭಾಗಿತ್ವದಲ್ಲಿ ಡಿಜಿಕೆ ಅನ್ನೋ ಆಡಿಯೋ ಸಂಸ್ಥೆ ಸ್ಥಾಪಿಸಿದ್ದಾರೆ. ದ್ವಾರಕೀಶ್ ಮತ್ತು ಗುರುಕಿರಣ್ ಹೆಸರಿನ ಅಕ್ಷರಗಳೇ ಕಂಪೆನಿಯ ಹೆಸರು. ಈ ಆಡಿಯೋ ಸಂಸ್ಥೆ ಮೂಲಕ ಹೊರ ತಂದಿರುವ ಮೊದಲ ಆಡಿಯೋ ಅಮ್ಮ ಐ ಲವ್ ಯೂ ಚಿತ್ರದ್ದು. ಅದು ಸ್ವತಃ ದ್ವಾರಕೀಶ್ ಬ್ಯಾನರ್‍ನ ಸಿನಿಮಾ. ಅಲ್ಲದೆ ಈ ಚಿತ್ರದ ಸಂಗೀತ ನಿರ್ದೇಶಕ ಸ್ವತಃ ಗುರುಕಿರಣ್. ಶುಭವಾಗಲಿ.

  Related Articles :-

  Dwarakish And Gurukiran Launch Audio Company

 • ಹೊಸಬರ ಧೂಮ್ ಬಜೆಟ್ 20 ಕೋಟಿ..!

  newcomer's 20 crore project

  ಕನ್ನಡದಲ್ಲಿ ಈಗಲೂ ಕೂಡಾ ಅದ್ಧೂರಿ ಚಿತ್ರಗಳ ಬಜೆಟ್ 10 ಕೋಟಿಯ ಆಸುಪಾಸಿನಲ್ಲಿರುತ್ತೆ. ಲಕ್ಷಗಳ ಲೆಕ್ಕದಲ್ಲಿ ಸಿನಿಮಾ ಮಾಡುವವರೂ ಇದ್ದಾರೆ. ಮಿನಿಮಮ್ ಬಜೆಟ್‍ನಲ್ಲಿ ಸಿನಿಮಾ ಮಾಡುವವರೂ ಇದ್ದಾರೆ. ಇಂತಹವರ ಮಧ್ಯೆ ಹೊಸಬರನ್ನಿಟ್ಟುಕೊಂಡು ಧೂಮ್ ಅನ್ನೋ ಸಿನಿಮಾ ಮಾಡಲು ಹೊರಟಿರುವ ಚಿತ್ರತಂಡ, ಆ ಸಿನಿಮಾಗೆ 20 ಕೋಟಿ ಬಜೆಟ್ ಖರ್ಚು ಮಾಡುತ್ತಿದೆ.

  ರಾಜೇಶ್ ಶರ್ಮಾ ಎಂಬ ಈ ನಿರ್ದೇಶಕರು, ಧೂಮ್ ಅನ್ನೋ ಸಿನಿಮಾ ಮಾಡುತ್ತಿದ್ದು, ಟರ್ಕಿ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರುವ ಚಿತ್ರತಂಡ, ಹೊಸ ಕಲಾವಿದರಿಗೆ ಈ ಕುರಿತು ತರಬೇತಿ ನೀಡುತ್ತಿದೆಯಂತೆ. ಅವರೆಲ್ಲರನ್ನೂ ಶೀಘ್ರದಲ್ಲೇ ಮಾಧ್ಯಮಗಳ ಎದುರು ಪರಿಚಯಿಸಲಿದ್ದೇವೆ ಎಂದು ತಿಳಿಸಿದ್ದಾರೆ ರಾಜೇಶ್ ವರ್ಮಾ. ಹೊಸಬರ ಸಿನಿಮಾಗೆ ಇಷ್ಟು ದೊಡ್ಡ ಬಜೆಟ್ ಹೂಡೋಕೆ ಮುಂದೆ ಬಂದಿರೋದು ದೆಹಲಿ ಮೂಲದ ಮುನ್ನಾ ಎಂಬ ಉದ್ಯಮಿ. ಪಾಟಲಿ ಎಂಬುವವರು ಪ್ರಧಾನ ಪಾತ್ರದಲ್ಲಿನಟಿಸುತ್ತಿದ್ದು, ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery