` prajwal devaraj, - chitraloka.com | Kannada Movie News, Reviews | Image

prajwal devaraj,

 • ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಹೀರೋ ಯಾರು..?

  prajwal devaraj, hari priya, nenapirali prem in life jothondu selfi

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದಲ್ಲಿ ಆನ್‍ಸ್ಕ್ರೀನ್ ಮೇಲೆ ಇಬ್ಬರು ಹೀರೋಗಳಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್. ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್. ಹೀರೋಯಿನ್ ಹರಿಪ್ರಿಯಾ. ಇನ್ನು ಡೈರೆಕ್ಟರ್ ದಿನಕರ್ ತೂಗುದೀಪ್ ಕೂಡಾ ಚಿತ್ರದ ಇನ್ನೊಬ್ಬ ಹೀರೋನೇ. ತಮ್ಮ ಹೆಸರಿನಲ್ಲೇ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವ ಶಕ್ತಿಯಿರುವ ಕನ್ನಡದ ಕೆಲವೇ ನಿರ್ದೇಶಕರಲ್ಲಿ ದಿನಕರ್ ಕೂಡಾ ಒಬ್ಬರು. ಆದರೆ, ನಟ ಪ್ರೇಮ್ ಪ್ರಕಾರ ಇವರಲ್ಲಿ ಯಾರೊಬ್ಬರೂ ಚಿತ್ರದ ಹೀರೋ ಅಲ್ಲ. ಹಾಗಾದರೆ ಹೀರೋ ಯಾರು..?

  ಚಿತ್ರದ ಹೀರೋ ಕಥೆ. ಕಥೆ ಎಷ್ಟು ಫ್ರೆಶ್ ಆಗಿದೆ, ಚಿತ್ರದಲ್ಲ ಪ್ರತಿಯೊಬ್ಬರೂ ಹೈಲೈಟ್ ಆಗುತ್ತಾರೆ. ಕಥೆಯೇ ಹೀರೋ ಅಂತಾರೆ ಪ್ರೇಮ್. ಚಿತ್ರಕ್ಕೆ ಕಥೆ ಬರೆದಿರುವುದು ದಿನಕರ್ ಅವರ ಪತ್ನಿ ದಿವ್ಯಾ.

  ನಮಗೆ ಇಷ್ಟವಾದವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇವೆ. ಒಳ್ಳೆಯ ಬ್ಯಾಕ್‍ಗ್ರೌಂಡ್ ಕಂಡಾಗ ಅದರ ಹಿನ್ನೆಲೆಯಲ್ಲಿ ಸೆಲ್ಫಿ ತೆಗೆದುಕೊಳ್ತೇವೆ. ಸುಮ್ಮನೆ ಎಲ್ಲಿ ಅಂದ್ರೆ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲ್ಲ. ಲೈಫ್ ಕೂಡಾ ಹಾಗೇನೆ ಅನ್ನೋದು ಚಿತ್ರದ ಥೀಮ್. ಹಾಗಾದರೆ ಸೆಲ್ಫಿ.. ಅದರಲ್ಲೂ ಲೈಫ್ ಜೊತೆಗೆ ಹೇಗಿರಬಹುದು. ಅದೊಂದು ಅದ್ಭುತ ಜರ್ನಿ. ಡೋಂಟ್ ಮಿಸ್ ಅಂತಾರೆ ಪ್ರೇಮ್.

 • ವಿಷ್ಣು ಅಭಿಮಾನಿಯಾದ ಪ್ರಜ್ವಲ್ : ಶುಭ ಕೋರಿದ ದರ್ಶನ್

  prajwal devaraj's next titled veeram

  ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಪ್ರಜ್ವಲ್ ದೇವರಾಜ್ ವಿಷ್ಣು ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ಅಭಿನಯದ ವೀರಂ ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದೆ. ವೀರಂ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ ದರ್ಶನ್, ಪ್ರಜ್ವಲ್ಗೆ ಶುಭ ಕೋರಿದ್ದಾರೆ.

  ವೀರಂ ಚಿತ್ರಕ್ಕೆ ಖಾದರ್ ಕುಮಾರ್ ನಿರ್ದೇಶಕ. ಡಾಟರ್ ಆಫ್ ಪಾರ್ವತಮ್ಮ ಚಿತ್ರ ನಿರ್ಮಿಸಿದ್ದ ದಿಶಾ ಎಂಟರ್ಟೈನ್ಮೆಂಟ್ ಮೂಲಕವೇ ವೀರಂ ಸೆಟ್ಟೇರಿದೆ. ಕೈ ಮೇಲೆ ವಿಷ್ಣು ಟ್ಯಾಟೂ ಹಾಕಿಸಿಕೊಂಡಿರುವ ಪ್ರಜ್ವಲ್, ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

  ಈ ಮೊದಲು ಯಶ್ ಮಿಸ್ಟರ್ & ಮಿಸಸ್ ರಾಮಾಚಾರಿ ಚಿತ್ರದಲ್ಲಿ ಎದೆಯ ಮೇಲೆ ವಿಷ್ಣು ಟ್ಯಾಟೂ ಹಾಕಿಸಿಕೊಂಡಿದ್ದರು. ಸುದೀಪ್, ವಿಷ್ಣು ಅಭಿಮಾನಿಯಾಗಿ ವಿಷ್ಣುವರ್ಧನ, ಕೋಟಿಗೊಬ್ಬ ಚಿತ್ರಗಳಲ್ಲಿ ಮಿಂಚಿದ್ದರು. ಶ್ರೇಯಸ್ ಮಂಜು ಪಡ್ಡೆಹುಲಿಯಾಗಿ ಪರಾಕ್ರಮ ಮೆರೆದಿದ್ದರು. ಈಗ ಪ್ರಜ್ವಲ್ ದೇವರಾಜ್ ಸರದಿ. ಅಂದಹಾಗೆ ಚಿತ್ರದ ನಿರ್ದೇಶಕ ಖಾದರ್ ಕುಮಾರ್ ಕೂಡಾ ವಿಷ್ಣು ಅಭಿಮಾನಿ.

   

 • ವ್ಹಾರೆವ್ಹಾ.. Gentleman

  gentlaman trailer released

  ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್ಮನ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ರಿಲೀಸ್ ಮಾಡಿದ್ದು ಪುನೀತ್ ಮತ್ತು ಧ್ರುವ ಸರ್ಜಾ ಎನ್ನುವುದೇ ವಿಶೇಷ. ಇನ್ನೂ ವಿಶೇಷವೆಂದರೆ ಪ್ರಜ್ವಲ್ ಹೇಳಿದ ಮಾತು. ‘ನನಗೆ ಸಿನಿಮಾ ರಂಗಕ್ಕೆ ಬರಲು ಸ್ಪೂರ್ತಿಯೇ ಪುನೀತ್ ಮತ್ತು ವಯಸ್ಸಿನಲ್ಲಿ ಚಿಕ್ಕವನಾದರೂ ಧ್ರುವ ನನಗೆ ಸದಾ ಪ್ರೇರಣೆ ’ ಎಂದರು ಪ್ರಜ್ವಲ್.

  ಜಡೇಶ್ ಕುಮಾರ್ ನಿರ್ದೇಶನದ ಜೆಂಟಲ್ಮ್ಯಾನ್ ಟ್ರೇಲರ್ ಟೆಕ್ನಿಕಲ್ ಸಖತ್ತಾಗಿದೆ. ಕ್ಯಾಮೆರಾ, ಮ್ಯೂಸಿಕ್, ಡೈಲಾಗ್ ಎಲ್ಲವೂ ಅದ್ಭುತ ಕ್ವಾಲಿಟಿಯಲ್ಲಿದೆ ಎಂದು ಮೆಚ್ಚಿಕೊಂಡರು ಪುನೀತ್. ಅಫ್ಕೋರ್ಸ್.. ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎಂದು ಕುತೂಹಲ ಹುಟ್ಟಿಸುವಂತಿದೆ ಟ್ರೇಲರ್. ಹೆಣ್ಣು ಮಕ್ಕಳ ಕಿಡ್ನಾಪ್ ಕಥೆ, ಒಂದು ಕ್ಯೂಟ್ ಲವ್ ಸ್ಟೋರಿ ಮತ್ತು ಇವೆಲ್ಲದರ ಮಧ್ಯೆ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ನಲ್ಲಿ ಒದ್ದಾಡುವ ಯುವಕನ ಹೋರಾಟ.

  ಗುರುದೇಶ ಪಾಂಡೆ ನಿರ್ಮಾಣದ ಜೆಂಟಲ್ಮ್ಯಾನ್ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಹೀರೋಯಿನ್.  ಸಿನಿಮಾ ಇದೇ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

 • ಷೇಕ್ಸ್‍ಪಿಯರ್ ಮ್ಯಾಕ್‍ಬೆತ್‍ಗೂ, ಠಾಕ್ರೆಗೂ ಏನ್ ಸಂಬಂಧ..?

  shakespeare's macbeth is now thakre movie

  ಮ್ಯಾಕ್‍ಬೆತ್. ಷೇಕ್ಸ್‍ಪಿಯರ್‍ನ ಅದ್ಭುತ ಕಲಾಕೃತಿಗಳಲ್ಲಿ ಒಂದು. ಬಾಳಾ ಠಾಕ್ರೆ. ಮಹಾರಾಷ್ಟ್ರದಲ್ಲಿ ಬೆಂಕಿಯನ್ನೇ ಉಗುಳುತ್ತಿದ್ದ, ಮರಾಠಿಗರ ಅಸ್ಮಿತೆಯಾಗಿದ್ದ ನಾಯಕ.  ಈ ಮ್ಯಾಕ್‍ಬೆತ್ ಮತ್ತು ಠಾಕ್ರೆ ಒಟ್ಟಿಗೇ ಬಂದರೆ ಹೇಗೆ..? ಅಂಥಾದ್ದೊಂದು ವಿಭಿನ್ನ ಸಾಹಸಕ್ಕೆ ಕೈ ಹಾಕಿದ್ದಾರೆ ಗುರು ದೇಶಪಾಂಡೆ.

  ಚಿರಂಜೀವಿ ಸರ್ಜಾರ ಸಂಹಾರ ಚಿತ್ರದ ಚಿತ್ರೀಕರಣ ಮುಗಿಸಿರುವ ಗುರು, ಠಾಕ್ರೆ ಚಿತ್ರಕ್ಕೆ ಕಥೆ ಹೊಸೆದಿದ್ದಾರೆ. ಚಿತ್ರಕ್ಕೆ ನಾಯಕನಾಗಿರುವುದು ಪ್ರಜ್ವಲ್ ದೇವರಾಜ್. ಇನ್ನೊಂದು ಪ್ರಮುಖ ಪಾತ್ರಕ್ಕೆ ರವಿಚಂದ್ರನ್ ಅವರನ್ನು ಸಂಪರ್ಕಿಸಿ, ಕಥೆ ಹೇಳಲಾಗಿದೆ. ರವಿಚಂದ್ರನ್ ನಟಿಸುವುದು ಇನ್ನೂ ಪಕ್ಕಾ ಆಗಿಲ್ಲ. ಚಿತ್ರದ ಚಿತ್ರೀಕರಣ ಡಿಸೆಂಬರ್‍ನಲ್ಲಿ ಶುರುವಾಗಲಿದೆ.

  ಷೇಕ್ಸ್‍ಪಿಯರ್‍ನ ಹಲವು ನಾಟಕಗಳು ಸಿನಿಮಾಗಳಾಗಿವೆ. ಆದರೆ, ಕನ್ನಡದಲ್ಲಿ ಅಪರೂಪ ಎನ್ನಬಹುದು. ಷೇಕ್ಸ್‍ಪಿಯರ್‍ನ ಕಾಮಿಡಿ ಆಫ್ ಎರರ್ ನಾಟಕದ ಸ್ಫೂರ್ತಿಯಿಂದಾಗಿ ಉಲ್ಟಾಪಲ್ಟಾ ಚಿತ್ರ ಬಂದಿತ್ತು. ಬಹಳ ಹಿಂದೆ ಅಬ್ಬಾ ಆ ಹುಡುಗಿ ಎಂಬ ಸಿನಿಮಾ ಬಂದಿತ್ತು. ಆ ಚಿತ್ರಕ್ಕೆ ಟೇಮಿಂಗ್ ಆಫ್ ದಿ ಶ್ರೂ ಸ್ಫೂರ್ತಿಯಾಗಿತ್ತು.  ಇನ್ನು ಮ್ಯಾಕ್‍ಬೆತ್ ನಾಟಕವನ್ನಾಧರಿಸಿ ಹಿಂದಿಯಲ್ಲಿ ಮಕ್‍ಬೂಲ್ ಸಿನಿಮ ಬಂದಿತ್ತು. ಕನ್ನಡದಲ್ಲಿ ಅದು ಠಾಕ್ರೆಯಾಗಿ ಬರುತ್ತಿದೆ. 

   

   

 • ಸಿನಿಮಾದಲ್ಲಿ ನಟಿಸುತ್ತಿದ್ದರೂ.. ಸಿನಿಮಾ ನನ್ನ ಆದ್ಯತೆ ಅಲ್ಲ - ರಾಗಿಣಿ ಪ್ರಜ್ವಲ್ ದೇವರಾಜ್

  acting is not my first priority says ragini

  ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಪುನೀತ್ ರಾಜ್‍ಕುಮಾರ್ ಬ್ಯಾನರ್‍ನಲ್ಲಿ ನಟಿಸುತ್ತಿದ್ದಾರೆ. ನಂದಿನಿ ಅನ್ನೋ ಲಾಯರ್ ಪಾತ್ರದಲ್ಲಿ, ಪ್ರತಿಯೊಂದನ್ನೂ ಪ್ರಶ್ನಿಸುವ ದಿಟ್ಟ ಹೆಣ್ಣು ಮಗಳ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ ರಾಗಿಣಿ. ಹಾಗಂತ, ಅವರಿಗೆ ಕ್ಯಾಮೆರಾ ಹೊಸದಲ್ಲ. ವೃತ್ತಿಯಲ್ಲಿ ಮಾಡೆಲ್ ಆಗಿರುವ ರಾಗಿಣಿ, ಜಾಹೀರಾತುಗಳಲ್ಲಿ, ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ನನಗೆ ಕ್ಯಾಮೆರಾ ಹೊಸದಲ್ಲ. ಆದರೂ ಮೊದಲ ಬಾರಿ ಅಷ್ಟುದ್ದದ ಡೈಲಾಗ್ ಹೇಳುವಾಗ ಕಷ್ಟವಾಯ್ತು ಎಂದಿದ್ದಾರೆ ರಾಗಿಣಿ.

  ಹಾಗಂತ ಮುಂದಿನ ಭವಿಷ್ಯವನ್ನು ಸಿನಿಮಾದಲ್ಲಿಯೇ ಹುಡುಕಿಕೊಳ್ತೀರಾ ಅಂದ್ರೆ ಸ್ಪಷ್ಟವಾಗಿ ನೋ ಅಂತಾರೆ. ನೃತ್ಯ ನನ್ನ ಆದ್ಯತೆ. ಅದು ನನ್ನ ಲೈಫ್. ತಿಂಗಳಲ್ಲಿ 15 ದಿನ ಡ್ಯಾನ್ಸ್ ಶೋ, ಕಥಕ್‍ನಲ್ಲಿ ಬ್ಯುಸಿ ಇರ್ತೀನಿ. ತುಂಬಾ ಒಳ್ಳೆಯ ಸ್ಕ್ರಿಪ್ಟ್ ಬಂದರೆ ಮಾತ್ರ ಸಿನಿಮಾ ಎಂದಿದ್ದಾರೆ ರಾಗಿಣಿ.

 • ಸ್ಟಾರ್‍ಗಳ ನಡುವೆ ಈಗ ಕಿಕ್‍ವಾರ್

  ganesh prajwal devraj

  ಸ್ಟಾರ್‍ಗಳ ನಡುವೆ ವಾರ್ ಶುರುವಾಯ್ತಾ..? ಛೆ..ಛೆ.. ಏನಾಗಿ ಹೋಯ್ತು ಅಂಥಾ ಗಾಬರಿಯಾಗಬೇಡಿ. ಇದು ಕಿಕ್ ವಾರ್ ಅನ್ನೋದೇನೋ ನಿಜ. ಆದರೆ, ಅಭಿಮಾನದ, ಪ್ರೀತಿಯ ಕಿಕ್‍ವಾರ್. ಇದನ್ನು ಶುರು ಮಾಡಿದ್ದು ಗೋಲ್ಡನ್ ಸ್ಟಾರ್ ಗಣೇಶ್.

  ಗಣೇಶ್, ಮವಾಯ್ ಥಾಯ್ ರಾಯಭಾರಿಯಾಗಿರುವುದು ಗೊತ್ತಿದೆಯಲ್ಲ. ಅದರ ಅಂಗವಾಗಿ ಅವರು ಟೀಪ್‍ಎಡೇ ಅನ್ನೋ ಚಾಲೆಂಜ್ ಹಾಕಿದರು. ಹಾಗೆಂದರೆ, ಪುಶ್ ಕಿಕ್ ಅಂತಾ ಅರ್ಥ. ಕಲ್ಲಂಗಡಿ ಹಣ್ಣಿಗೆ ಕಿಕ್ ಮಾಡಿ ಪುಡಿ ಪುಡಿ ಮಾಡಿದ ಗಣೇಶ್, ಪ್ರಜ್ವಲ್‍ಗೆ ಚಾಲೆಂಜ್ ಹಾಕಿದರು. 

  ಚಾಲೆಂಜ್ ಸ್ವೀಕರಿಸಿದ ಪ್ರಜ್ವಲ್ ದೇವರಾಜ್, ಹೆಂಚುಗಳನ್ನು ಪುಡಿ ಪುಡಿ ಮಾಡಿ ದಿಗಂತ್‍ಗೆ ಸವಾಲು ಹಾಕಿದರು. ಗಣೇಶ್‍ಗೆ ಪ್ರತಿ ಸವಾಲು ಹಾಕಿದರು. ಚಾಲೆಂಜ್ ಸ್ವೀಕರಿಸಿದ ಗಣೇಶ್ 4 ಹೆಂಚುಗಳನ್ನು ಹೊಡೆದರು. ದಿಗಂತ್‍ದು ಇನ್ನೂ ಬಾಕಿ ಇದೆ.

  ಇನ್ನು ಸಿಂಪಲ್ ಸುನಿ ಬಲೂನಿಗೆ ನೀರು ತುಂಬಿ ಹೊಡೆದು ರಶ್ಮಿಕಾ ಮಂದಣ್ಣ ಹಾಗೂ ತಮ್ಮ ಪತ್ನಿ ಸೌಂದರ್ಯಗೆ ಚಾಲೆಂಜ್ ಹಾಕಿದ್ದಾರೆ. ರಶ್ಮಿಕಾ ನೆಲದ ಮೇಲೆ ಬಲೂನ್ ಇಟ್ಟು ಒದ್ದು, ರಕ್ಷಿತ್ ಶೆಟ್ಟಿ, ಶೀತಲ್ ಶೆಟ್ಟಿಗೆ ಸವಾಲು ಹಾಕಿದ್ದಾರೆ.

  ಒಟ್ಟಿನಲ್ಲೀಗ ಸ್ಯಾಂಡಲ್‍ವುಡ್‍ನಲ್ಲಿ ಕಿಕ್ ವಾರ್ ಶುರುವಾಗಿಬಿಟ್ಟಿದೆ. `ಗಣೇಶ' ಆರಂಭಿಸಿದ ಮೇಲೆ ನಿರ್ವಿಘ್ನವಾಗಿ ನಡೆಯಲೇಬೇಕಲ್ವಾ..? 

 • ಹಂಪಿ ಹುಡುಗ ಜೆಂಟಲ್‍ಮನ್ ಕಥೆ ಬರೆದಿದ್ದು ಹೇಗೆ..?

  gentleman movie image

  ಜೆಂಟಲ್‍ಮನ್, ಟ್ರೇಲರ್ ಮತ್ತು ಸ್ಪೆಷಲ್ ಕಥೆಯ ಮೂಲಕ ಗಮನ ಸೆಳೆದಿರುವ ಚಿತ್ರ. ಪ್ರಜ್ವಲ್ ದೇವರಾಜ್ ಸಿನಿ ಕೆರಿಯರ್‍ನಲ್ಲೇ ಒಂದು ಡಿಫರೆಂಟ್ ಕಥಾ ಹಂದರದ ಚಿತ್ರ ಎನ್ನುವ ಕಾರಣಕ್ಕೆ ಗಮನ ಸೆಳೆದಿದೆ. ಈ ಚಿತ್ರಕ್ಕೆ ನಿರ್ದೇಶಕ ಜಡೇಶ್ ಕುಮಾರ್. ಕಥೆಯೂ ಅವರದ್ದೆ.

  ಜಡೇಶ್ ಕುಮಾರ್ ಮೂಲತಃ ಹಂಪಿಯ ಹುಡುಗ. ಸಿನಿಮಾ ಮಾಡಬೇಕು ಎನ್ನುವ ಹುಚ್ಚಿನಲ್ಲಿ ಗಾಂಧಿನಗರಕ್ಕೆ ಬಂದವರು ಗುರು ದೇಶಪಾಂಡೆ ಕಣ್ಣಿಗೆ ಬಿದ್ದರು. ಅವರ ಜೊತೆ ಅಸಿಸ್ಟೆಂಟ್ ಆದರು. ರಾಜಾಹುಲಿ, ರುದ್ರತಾಂಡವ ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ಜಡೇಶ್, ರಾಜಹಂಸ ಚಿತ್ರದ ಮೂಲಕ ನಿರ್ದೇಶಕರೂ ಆದರು.

  `ರಾಜಹಂಸ ಚಿತ್ರಕ್ಕೆ, ಕಥೆಗೆ ಮೆಚ್ಚುಗೆಯೇನೋ ಸಿಕ್ಕಿತು. ಆದರೆ, ಪ್ರೇಕ್ಷಕ ಬೆಂಬಲ ಸಿಗಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಅದೊಂದು ಫ್ಲಾಪ್ ಸಿನಿಮಾ. ಅದು ನಾನು ಎಲ್ಲಿ ಎಡವಿದ್ದೆ, ಏನು ಮಾಡಬೇಕಿತ್ತು ಎಂಬುದನ್ನು ಚೆನ್ನಾಗಿ ಹೇಳಿಕೊಟ್ಟಿತು. ಆಗ ಹೊಳೆದಿದ್ದೇ ಈ ಸ್ಲೀಪಿಂಗ್ ಸಿಂಡ್ರೋಮ್ ಬ್ಯೂಟಿಯ ಕಥೆ. ಬರೀ ಕಾಯಿಲೆಯಷ್ಟೇ ಆದರೆ ಥ್ರಿಲ್ ಇರಲ್ಲ ಎನ್ನುವ ಕಾರಣಕ್ಕೆ ವೀರ್ಯಾಣು ಮಾಫಿಯಾ ಕಥೆ ಸೇರಿಸಿದೆ. ಆ ಮಾಫಿಯಾ ವಿರುದ್ಧ ದಿನಕ್ಕೆ 6 ಗಂಟೆಯಷ್ಟೇ ಎಚ್ಚರ ಇರಲು ಸಾಧ್ಯವಿರುವ ನಾಯಕ ಹೇಗೆ ಹೋರಾಡಬಹುದು ಎನ್ನುವ ಕಲ್ಪನೆಯನ್ನಿಟ್ಟುಕೊಂಡೇ ಚಿತ್ರಕಥೆ ಹೆಣೆದೆ. ಈಗ ಚಿತ್ರ ಅದ್ಭುತವಾಗಿ ಮೂಡಿಬಂದಿದೆ' ಎನ್ನುತ್ತಾರೆ ಜಡೇಶ್.

  ಶಿಷ್ಯನ ವಿಭಿನ್ನ ಕಥೆ ಮತ್ತು ಸಾಹಸಕ್ಕೆ ಹಣ ಹೂಡುವ ಮೂಲಕ ಬೆನ್ನೆಲುಬಾಗಿರುವುದು ಗುರುದೇಶಪಾಂಡೆ. ಪ್ರಜ್ವಲ್ ದೇವರಾಜ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದು, ಸಂಚಾರಿ ವಿಜಯ್ ಪೊಲೀಸ್ ಆಫೀಸರ್ ಪಾತ್ರದಲ್ಲಿದ್ದಾರೆ.

 • ಹುಬ್ಬಳ್ಳಿಗೆ ಬರ್ತಾರವ್ವಾ ದರ್ಶನ್, ಪ್ರಜ್ವಲ್

  darshan and prajwal will be in hubbali for inspector vikram audio launch

  ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ಎನ್ನುವ ಹಾಡು ಯಾವಾಗ ಇವರ ಕಿವಿಗೆ ಬಿತ್ತೋ ಏನೋ.. ಹುಬ್ಬಳ್ಳಿಗೆ ಹೊರಟು ನಿಂತಿದ್ದಾರೆ ದರ್ಶನ್ ಮತ್ತು ಪ್ರಜ್ವಲ್. ಜಂಟಲ್‍ಮನ್ ಚಿತ್ರಕ್ಕೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆಗೆ ಖುಷಿ ಖುಷಿಯಾಗಿರೋ ಪ್ರಜ್ವಲ್ ಅವರ ಇನ್ನೊಂದು ಸಿನಿಮಾ ಇನ್ಸ್‍ಪೆಕ್ಟರ್ ವಿಕ್ರಂ ರಿಲೀಸ್ ಆಗೋಕೆ ರೆಡಿ. ಆಡಿಯೋ ರಿಲೀಸ್ ನಡೆಯುತ್ತಿರೋದು ಹುಬ್ಬಳ್ಳಿಯಲ್ಲಿ.

  ಪ್ರಜ್ವಲ್ ದೇವರಾಜ್ ಅಭಿನಯದ 30ನೇ ಸಿನಿಮಾ ಇನ್ಸ್‍ಪೆಕ್ಟರ್ ವಿಕ್ರಂ. ಫೆ.14ರಂದು ನಡೆಯೋ ಆಡಿಯೋ ರಿಲೀಸ್ ಕಾರ್ಯಕ್ರಮದ ಮುಖ್ಯ ಅತಿಥಿ ದರ್ಶನ್. ಈ ಚಿತ್ರದಲ್ಲಿ ದರ್ಶನ್ ಅತಿಥಿ ನಟರಾಗಿಯೂ ನಟಿಸಿದ್ದಾರೆ. ಅದೂ ಭಗತ್ ಸಿಂಗ್ ಪಾತ್ರದಲ್ಲಿ. ನರಸಿಂಹ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್‍ಗೆ ಭಾವನಾ ನಾಯಕಿ. 

 • ಹೊಸ ಇನ್ಸ್‍ಪೆಕ್ಟರ್ ವಿಕ್ರಂಗೆ ಹಳೆ ಇನ್ಸ್‍ಪೆಕ್ಟರ್ ವಿಕ್ರಂ ಸಾಥ್

  old inspector to release new inspecto's movie audio

  ಇನ್ಸ್‍ಪೆಕ್ಟರ್ ವಿಕ್ರಂ, ಪ್ರಜ್ವಲ್ ದೇವರಾಜ್, ಭಾವನಾ ಕಾಂಬಿನೇಷನ್ನಿನ ಹೊಸ ಸಿನಿಮಾ. ಕನ್ನಡ ಚಿತ್ರರಸಿಕರಿಗೆ ದಶಕಗಳ ಹಿಂದೆ ತೆರೆ ಕಂಡಿದ್ದ ಇನ್ಸ್‍ಪೆಕ್ಟರ್ ವಿಕ್ರಂ ಕೂಡಾ ನೆನಪಿನಲ್ಲಿದೆ. ಹಳೆ ಇನ್ಸ್‍ಪೆಕ್ಟರ್ ವಿಕ್ರಂ ಶಿವರಾಜ್ ಕುಮಾರ್.  ಈಗ ಹಳೆ ಮತ್ತು ಹೊಸ ಇನ್ಸ್‍ಪೆಕ್ಟರ್ ವಿಕ್ರಂ ಇಬ್ಬರೂ ಜೊತೆಯಾಗಿ ಬರಲಿದ್ದಾರೆ. ಮಾರ್ಚ್ 8ಕ್ಕೆ.

  ಮಾರ್ಚ್ 8ರಂದು ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದ್ದು, ಅದನ್ನು ರಿಲೀಸ್ ಮಾಡುವುದು ಶಿವಣ್ಣ. ವಿಖ್ಯಾತ್ ನಿರ್ಮಾಣದ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದು ಚಿತ್ರದ ವೋಲ್ಟೇಜ್ ಹೆಚ್ಚಿಸಿದ್ದಾರೆ. ನರಸಿಂಹ ಎಂಬುವರು ನಿರ್ದೇಶಿಸಿರುವ ಚಿತ್ರ ಪಕ್ಕಾ ಮಾಸ್ ಕಥೆ ಹೊಂದಿದೆಯಂತೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery