` prajwal devaraj, - chitraloka.com | Kannada Movie News, Reviews | Image

prajwal devaraj,

 • ದಿನಕ್ಕೆ 18 ಗಂಟೆ ನಿದ್ರೆ ಮಾಡುವ ಪ್ರಜ್ವಲ್ ದೇವರಾಜ್

  prawal devaraj talks about his role in gentlaman

  ದಿನಕ್ಕೆ 18 ಗಂಟೆ ಕೆಲಸ ಮಾಡುವವರು ದೇಶದ ಪ್ರಧಾನಿ ಹುದ್ದೆಯಲ್ಲಿರೋವಾಗ 18 ಗಂಟೆ ಮಾಡುವ ನಿದ್ರೆ ಮಾಡುವ ಹೀರೋ ಬಂದಿದ್ದಾರೆ. ಹೀಗೆ 18 ಗಂಟೆ ನಿದ್ರೆ ಮಾಡೋ ದೊಡ್ಡ ಕಾಯಿಲೆಗೆ ತುತ್ತಾಗಿರುವುದು ಪ್ರಜ್ವಲ್ ದೇವರಾಜ್. ಗುರು ದೇಶಪಾಂಡೆ ನಿರ್ಮಾಣದ ಜಂಟಲ್‌ಮನ್ ಚಿತ್ರದಲ್ಲಿ ಪ್ರಜ್ವಲ್ ಅವರದ್ದು ನಿದ್ರೆ ಮಾಡುವ ಯುವಕನ ಪಾತ್ರ. ಹೈಪರ್ ಸೋಮ್ನಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುವ ಯುವಕನಾಗಿ ಪ್ರಜ್ವಲ್ ದೊಡ್ಡದೊಂದು ಚಾಲೆಂಜಿAಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ನಿರ್ದೇಶನದಿAದ ನಿರ್ಮಾಣಕ್ಕೇ ಹೆಚ್ಚು ಹೆಚ್ಚು ವಾಲುತ್ತಿರುವ ಗುರು ದೇಶಪಾಂಡೆ, ಈ ಚಿತ್ರದಲ್ಲಿ ಜಡೇಶ್ ಕುಮಾರ್ ಹಂಪಿಗೆ ನಿರ್ದೇಶನದ ಅವಕಾಶ ಕೊಟ್ಟಿದ್ದಾರೆ.

  ದಿನಕ್ಕೆ 6 ಗಂಟೆ ಮಾತ್ರ ಎಚ್ಚರದಲ್ಲಿರುವ ನಾಯಕ, ಆ 6 ಗಂಟೆಯಲ್ಲೇ ದಿನದ ಎಲ್ಲ ಕೆಲಸಗಳನ್ನೂ ಮುಗಿಸಿಕೊಳ್ಳುವ ಅನಿವಾರ್ಯತೆಯಲ್ಲಿರುತ್ತಾನೆ. ಒಂದೇ ಸ್ಟೆçಚ್‌ನಲ್ಲಿ ಸತತ 48 ಗಂಟೆ ನಿದ್ರೆ ಮಾಡುವವರೂ ಇದ್ದಾರೆ ಎನ್ನುತ್ತದೆ ಸೈನ್ಸು. ಅಂಥಾದ್ದರಲ್ಲಿ 18 ಗಂಟೆ ನಿದ್ರೆ ಮಾಡುವ ಹೀರೋ ಸುತ್ತ ಕಮರ್ಷಿಯಲ್ ಕಥೆಯೇ ಇದೆ ಎನ್ನುತ್ತಾರೆ ಗುರು ದೇಶಪಾಂಡೆ. ಸಿನಿಮಾ ಹೆಚ್ಚೂ ಕಡಿಮೆ ಮುಕ್ತಾಯದ ಹಂತದಲ್ಲಿದ್ದು, ರಿಲೀಸ್ ಆಗೋಕೆ ಡೇಟ್ ಹುಡುಕಾಟದಲ್ಲಿದೆ.

 • ದೇವರಾಜ್ ಸೊಸೆ ವಿಜಯದಶಮಿಗೆ ಹೀರೋಯಿನ್

  prajwal devaraj's wife ragini

  ಡೈನಮಿಕ್ ಸ್ಟಾರ್ ದೇವರಾಜ್ ಕುಟುಂಬದಿಂದ ಮತ್ತೊಂದು ಪ್ರತಿಭೆ ಚಿತ್ರರಂಗ ಪ್ರವೇಶಿಸುತ್ತಿದೆ. ಈ ಬಾರಿ ಅವರ ಸೊಸೆ ರಾಗಿಣಿ ಚಂದ್ರನ್. ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಹೆಸರಾಂತ ಮಾಡೆಲ್. ಪತಿ ಪ್ರಜ್ವಲ್‍ರ ಚಿತ್ರದಲ್ಲಿ ಅತಿಥಿಯಾಗಿ ನಟಿಸುತ್ತಿರುವ ರಾಗಿಣಿ, ಈಗ ವಿಜಯದಶಮಿ ಹೆಸರಿನ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  ರಘು ಸಮರ್ಥ್ ನಿರ್ದೇಶನದ ವಿಜಯದಶಮಿ, ನಾಯಕಿ ಪ್ರದಾನ ಚಿತ್ರ. ತನ್ನ ಗುರುವಿನ ಮಗಳಿಗೆ ಅನ್ಯಾಯವಾದಾಗ, ಅದನ್ನು ಸರಿಪಡಿಸುವುದಕ್ಕೆ ಹೋರಾಡುವ ದಿಟ್ಟ ಹೆಣ್ಣು ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ ರಾಗಿಣಿ ಚಂದ್ರನ್. ಹಾಗಂತ ಆ್ಯಕ್ಷನ್ ಓರಿಯಂಟೆಡ್ ಸಿನಿಮಾ ಅಲ್ಲ. ಮೈಂಡ್‍ಗೇಮ್ ಥ್ರಿಲ್ಲರ್.

  ಪ್ರೊಫೆಸರ್ ನಿರಂಜನವಾನಳ್ಳಿ ಪುತ್ರಿ ಸಿರಿ ವಾನಳ್ಳಿ, ರಾಗಿಣಿ ಚಂದ್ರನ್ ಗುರುಗಳ ಮಗಳಾಗಿ ನಟಿಸುತ್ತಿದ್ದಾರೆ. ಗುರುವಾಗುತ್ತಿರುವುದು ಅಚ್ಯುತ್ ಕುಮಾರ್. ಅವಿನಾಶ್, ಸಿನಿಮಾದಲ್ಲಿ ರಾಗಿಣಿಯ ಅಪ್ಪ. ವಾಸುಕಿ ವೈಭವ್ ಸಂಗೀತ ನಿರ್ದೇಶನದ ಚಿತ್ರಕ್ಕೆ ಅಕ್ಟೋಬರ್ 19ಕ್ಕೆ ಅಂದರೆ ವಿಜಯದಶಮಿಯಂದೇ ಮುಹೂರ್ತ.

 • ದೇವರಾಜ್-ದರ್ಶನ್ ಅಟ್ಯಾಚ್‍ಮೆಂಟ್ ಒಂದೊಂದ್ಸಲ ಅಸೂಯೆ ಹುಟ್ಟಿಸುತ್ತೆ - ಪ್ರಜ್ವಲ್ ದೇವರಾಜ್

  darshan and devaraj's attacthment is a must

  ಜಂಟಲ್‍ಮನ್ ಚಿತ್ರದ ಆಡಿಯೋ ರಿಲೀಸ್‍ಗೆ ಬಂದಿದ್ದ ದರ್ಶನ್, ಇಂಥಾದ್ದೊಂದು ವಿಭಿನ್ನ ಕಥೆಯ ವಿಶೇಷ ಚಿತ್ರವನ್ನು ನೋಡಿ ಎಂದು ಕನ್ನಡಿಗರಿಗೆ ಆದೇಶವನ್ನೇ ಕೊಟ್ಟುಬಿಟ್ಟರು. ಏಕೆಂದರೆ ಇದು ಸ್ಲೀಪಿಂಗ್ ಸಿಂಡ್ರೋಮ್ ಬ್ಯೂಟಿ ಅನ್ನೋ ರೋಗ ಇರುವ ಹೀರೋನ ಕಥೆ. ಅಲ್ಲಿ ವಿಭಿನ್ನ ಸ್ಮಗ್ಲಿಂಗ್ ಕಥೆಯೂ ಇದೆ. ಅಂಥಾದ್ದೊಂದು ಕಥೆಯನ್ನು ಸಿನಿಮಾ ಮಾಡಿರುವಾಗ ದರ್ಶನ್ ಹಾಗೆ ಹೇಳೋದು ಸಹಜವೇ ಬಿಡಿ.

  ಅಂದಹಾಗೆ ಇದೇ ವೇಳೆ ಪ್ರಜ್ವಲ್ ದೇವರಾಜ್ ದರ್ಶನ್ ಮತ್ತು ತಮ್ಮ ತಂದೆಯ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ದರ್ಶನ್, ನಮ್ಮ ಮನೆಯ ಸದಸ್ಯನೇ ಆಗಿಹೋಗಿದ್ದಾರೆ.

  ನನಗೆ ಹಿರಿಯಣ್ಣನಂತಿದ್ದಾರೆ. ಅಪ್ಪ ಮತ್ತು ದರ್ಶನ್ ಮಧ್ಯೆ  ಸಂಬಂಧ ಇನ್ನಷ್ಟು ಚೆನ್ನಾಗಿದ್ದು ತಾರಕ್ ಚಿತ್ರದ ನಂತರ. ಅದು ಎಷ್ಟರಮಟ್ಟಿಗೆ ಎಂದರೆ ಎಷ್ಟೋ ಬಾರಿ ನನಗೆ ದರ್ಶನ್ ಕಂಡರೆ ಅಸೂಯೆಯಾಗುವಷ್ಟು ಆತ್ಮೀಯತೆ ಅವರಿಬ್ಬರ ಮಧ್ಯೆ ಇದೆ ಎಂದು ಪ್ರೀತಿಯಿಂದಲೇ ಹೇಳಿದ್ದಾರೆ ಪ್ರಜ್ವಲ್.

  ಜಡೇಶ್ ಕುಮಾರ್ ನಿರ್ದೇಶನದ ಜಂಟಲ್‍ಮನ್ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಗುರು ದೇಶಪಾಂಡೆ ನಿರ್ಮಾಪಕ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರದಲ್ಲಿ ಸಂಚಾರಿ ವಿಜಯ್ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.

 • ನಿದ್ದೆ ಮಾಡಿ.. ವಿಡಿಯೋ ಮಾಡಿ.. ಪ್ರಜ್ವಲ್ ಜೊತೆ ಸಿನಿಮಾ ನೋಡಿ

  a unique competition by gentleman team

  ಭೂಮಿ ಮೇಲಿರೋ ಯಾವ ಕೋಳಿ ಕೂಗಿದ್ರೂ ಇವನು ಎದ್ದೇಳಲ್ಲ.. ಇವನ ಹೆಸರೇ ಕುಂಭಕರ್ಣ...

  ಸತತವಾಗಿ 3 ಗಂಟೆ 49 ಸೆಕೆಂಡು ಸ್ಟಡಿ ಮಾಡಿದ ಪ್ರತಿಯೊಬ್ಬ ಕಾಲೇಜ್ ಸ್ಟೂಡೆಂಟೂ...  ಮುಂದಿರೋದು ಗೊರಕೆ ಹೊಡೆಯುತ್ತಿರೋ ಪ್ರಜ್ವಲ್ ಫೋಟೋ..

  ಸಾಂಗ್ಲಿಯಾನ ಚಿತ್ರದಲ್ಲಿ ನಿದ್ದೆ ಮಾಡೋ ವಿಲನ್ `ಕುಂಬಿ' ಆಗಿ ಅಬ್ಬರಿಸಿದ್ದ ಸುಧೀರ್, ಅಲ್ಲಿ ಸ್ವರ್ಗದಲ್ಲಿ ಕುಳಿತು ಟೆನ್ಷನ್ ಆಗಿ ಜಂಟಲ್‍ಮನ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

  ಇಂಥವು.. ಒಂದಲ್ಲ..ಎರಡಲ್ಲ.. ಹತ್ತಲ್ಲ.. ಹಲವಾರಿವೆ. ಇವೆಲ್ಲವೂ ಜೆಂಟಲ್‍ಮನ್ ಚಿತ್ರದ ಮೈಮ್ಸ್‍ಗಳು. ಏಕೆಂದರೆ, ಈ ಚಿತ್ರದ ಹೀರೋ ಭರತ್ ಅಲಿಯಾಸ್ ಪ್ರಜ್ವಲ್ ದೇವರಾಜ್‍ಗೆ ದಿನಕ್ಕೆ 18 ಗಂಟೆ ಮಲಗೋ ಕಾಯಿಲೆ. ಉಳಿದಿರೋ ಜಸ್ಟ್ 6 ಗಂಟೆ ಟೈಮಲ್ಲಿ ಅವನು ಕೆಲಸ ಮಾಡಬೇಕು, ಲವ್ ಮಾಡಬೇಕು, ವಿಲನ್‍ಗಳ ಜೊತೆ ಫೈಟ್ ಮಾಡಬೇಕು. ನಿತ್ಯ ಕರ್ಮಗಳನ್ನೂ ಮುಗಿಸಬೇಕು.

  ಇಂಥಾದ್ದೊಂದು ಸ್ಪೆಷಲ್ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಜಡೇಶ್. ಸ್ಲೀಪಿಂಗ್ ಸಿಂಡ್ರೋಮ್ ಹುಡುಗನ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ಜಡೇಶ್ ಕುಮಾರ್. ಚಿತ್ರದ ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಪಕ ಗುರು ದೇಶಪಾಂಡೆ. ಹೊಸ ಹೊಸ ಹುಡುಗರ ವಿಭಿನ್ನ ಪ್ರಯತ್ನಗಳಿಗೆ ಸಪೋರ್ಟ್ ಕೊಡುತ್ತಿದ್ದಾರೆ ಗುರು ದೇಶಪಾಂಡೆ.

  ಅಂದಹಾಗೆ ವಿಷಯ ಇದಲ್ಲ. ಇಲ್ಲೊಂದು ಸ್ಪರ್ಧೆಯಿದೆ. ನೀವು ಒಂದು ಕೆಲಸ ಮಾಡಬೇಕು. ನಿದ್ದೆ ಮಾಡುತ್ತಿರುವವರ ವಿಡಿಯೋ ಶೂಟ್ ಮಾಡಬೇಕು. ಅವರು ನಿದ್ದೆಯಲ್ಲಿ ಮಾಡಿಕೊಳ್ಳೋ ಎಡವಟ್ಟುಗಳನ್ನು ಶೂಟ್ ಮಾಡಿ ಜೆಂಟಲ್‍ಮನ್ ಟೀಂಗೆ ಕಳಿಸಿಕೊಡಬೇಕು. ಅಂದ್ರೆ ಪ್ರಜ್ವಲ್ ದೇವರಾಜ್ ಅವರಿಗೆ ಟ್ಯಾಗ್ ಮಾಡಿ. ಮುಂದಾ.. ಸಿನಿಮಾ ರಿಲೀಸ್ ಆಗುವ ಮೊದಲೇ ನೀವು ಪ್ರಜ್ವಲ್ ದೇವರಾಜ್ ಜೊತೆ ಸಿನಿಮಾ ನೋಡಬಹುದು.

 • ನಿದ್ದೆಯಿಂದ ಎದ್ದ ಜಂಟಲ್‍ಮನ್ ಕುಂಭಕರ್ಣ ಥಿಯೇಟರ್ ಎಂಟ್ರಿ

  gentleman has lot of specialities

  18 ಗಂಟೆ ನಿದ್ರೆ ಮಾಡಿ, 6 ಗಂಟೆಯಷ್ಟೇ ಎಚ್ಚರ ಇರುವ ಕುಂಭಕರ್ಣ ಭರತ್ ಅರ್ಥಾತ್ ಪ್ರಜ್ವಲ್ ದೇವರಾಜ್ ನಿದ್ದೆಯಿಂದ ಎದ್ದು ಬಂದು ಥಿಯೇಟರಿಗೆ ಎಂಟ್ರಿ ಕೊಟ್ಟಿದ್ದಾನೆ. ಅಂಡಾಣು ಕಳ್ಳಸಾಗಣೆ ಮತ್ತು ಸ್ಲೀಪಿಂಗ್ ಸಿಂಡ್ರೋಮ್ ಬ್ಯೂಟಿಯಂತಹ ವಿಭಿನ್ನ ಹೊಸತನದ ಕಥೆ ಇರುವ ಚಿತ್ರವಿದು. ಪ್ರೇಕ್ಷಕರಿಗೆ ಸಂಪೂರ್ಣ ಹೊಸದೇ ಎಂಬ ಫೀಲ್ ಕೊಡುವ ಜಂಟಲ್‍ಮನ್ ಚಿತ್ರದಲ್ಲಿ ಸಂಚಾರಿ ವಿಜಯ್ ಪೊಲೀಸ್ ಆಫೀಸರ್ ಆಗಿದ್ದರೆ, ಭರತ್‍ಗೆ ಚಿಕಿತ್ಸೆ ಕೊಡುವ ಡಯಟಿಷಿಯನ್ ಹಾಗೂ ಪ್ರೇಮಿಯಾಗಿ ನಟಿಸಿರುವುದು ತಪಸ್ವನಿ ಅರ್ಥಾತ್ ನಿಶ್ವಿಕಾ ನಾಯ್ಡು.

  ಪುಟ್ಟ ಹುಡುಗಿ ಬೇಬಿ ಆರಾಧ್ಯ, ಸೀನಿಯರ್ ಕಲಾವಿದರಿಗೂ ಚಾಲೆಂಜ್ ಹಾಕುವಷ್ಟು ಅದ್ಭುತವಾಗಿ ನಟಿಸಿದ್ದಾಳೆ ಎನ್ನುವುದು ಚಿತ್ರತಂಡದ ಕಾಂಪ್ಲಿಮೆಂಟು. ಸ್ವತಃ ನಿರ್ದೇಶಕರಾಗಿರುವ ಗುರು ದೇಶಪಾಂಡೆ, ಈ ಚಿತ್ರದ ನಿರ್ದೇಶಕ ಜಡೇಶ್ ಕುಮಾರ್ ಹೇಳಿದ ಕಥೆ ಕೇಳಿಯೇ ಥ್ರಿಲ್ ಆಗಿ ತಾವೇ ನಿರ್ಮಾಪಕರಾಗಿದ್ದಾರೆ ಎನ್ನುವುದು ಒನ್ಸ್ ಎಗೇಯ್ನ್ ಕಥೆಯ ಪವರ್.

  ಕನ್ನಡದಲ್ಲಿಯೇ ಅತ್ಯಂತ ಸ್ಪೆಷಲ್ ಎನಿಸುವ ಕಥೆ, ನಟನೆ, ಪ್ರೆಸೆಂಟೇಷನ್ ಇರುವ ಜಂಟಲ್‍ಮನ್ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದ್ದಾರೆ. ವೇಯ್ಟ್ & ಸೀ.

 • ಪುಷ್ಪಕ ವಿಮಾನದವರ ಜೊತೆ ಪ್ರಜ್ವಲ್ ದೇವರಾಜ್

  prajwal devaraj's new movie launched

  ಪ್ರಜ್ವಲ್ ದೇವರಾಜ್ ಅವರ ಹೊಸ ಚಿತ್ರವೊಂದು ಸದ್ದಿಲ್ಲದೆ ಶುರುವಾಗಿದೆ. ಪುಷ್ಕಕ ವಿಮಾನ ಚಿತ್ರ ನಿರ್ಮಿಸಿದ್ದ ಎ.ಆರ್.ವಿಖ್ಯಾತ್, ಪ್ರಜ್ವಲ್ ದೇವರಾಜ್ ಅಭಿನಯದ ಹೊಸ ಚಿತ್ರಕ್ಕೆ ಶ್ರೀಕಾರ ಹಾಕಿದ್ದಾರೆ. ನರಸಿಂಹ ಎಂಬ ಹೊಸಬರಿಗೆ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊರಿಸಲಾಗಿದೆ. ನಾಯಕಿಯಾಗಿ ಸಾಯಿ ಪಲ್ಲವಿ ಅವರನ್ನು ಕರೆತರಲು ಚಿಂತನೆ ನಡೆಸಲಾಗಿದೆ.

  ಬಸವನಗುಡಿಯ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತು. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಚಿತ್ರದ ಟೈಟಲ್ ಸಮೇತ ಟೀಸರ್‍ನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಅಂದಹಾಗೆ ಇದು ಪ್ರಜ್ವಲ್ ದೇವರಾಜ್ ಅಭಿನಯದ 30ನೇ ಚಿತ್ರ.

 • ಪ್ರಜ್ವಲ್ ಕುಂಭಕರ್ಣ ಅಲ್ಲ.. ಜಂಟಲ್‍ಮ್ಯಾನ್

  prajwal devaraj act as sleeping beauty

  ಪ್ರಜ್ವಲ್ ದೇವರಾಜ್ ಅಭಿನಯದ ಹೊಸ ಸಿನಿಮಾಗೆ ನಾಳೆ ಮುಹೂರ್ತ. ಚಿತ್ರದ ಮುಹೂರ್ತದ ದೃಶ್ಯಕ್ಕೆ ಕ್ಲಾಪ್ ಮಾಡಲಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಚಿತ್ರದ ಹೆಸರು ಜಂಟಲ್‍ಮ್ಯಾನ್. ಈ ಮೊದಲು ಚಿತ್ರಕ್ಕೆ ಕುಂಭಕರ್ಣ ಅಥವಾ ಐ ಆ್ಯಮ್ ಕುಂಭಿ ಎಂಬ ಟೈಟಲ್ ಇಡುವ ನಿರ್ಧಾರ ಮಾಡಲಾಗಿತ್ತು. ಆದರೆ ಚಿತ್ರ ಬಿಡುಗಡೆ ವೇಳೆಗೆ ಚಿತ್ರದ ಟೈಟಲ್ ಬದಲಾಗಿದೆ. ಚಿತ್ರದ ಟೈಟಲ್ಲೇ ಈಗ ಜಂಟಲ್‍ಮ್ಯಾನ್.

  ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‍ನಿಂದ ಬಳಲುವ ವ್ಯಕ್ತಿಯಾಗಿ ನಟಿಸಲಿದ್ದಾರೆ ಪ್ರಜ್ವಲ್. ಆಂದರೆ, ಪ್ರಜ್ವಲ್ ಒಂದು ದಿನದಲ್ಲಿ ಎಚ್ಚರ ಇರೋದು ದಿನದ ಏಳೆಂಟು ಗಂಟೆ ಮಾತ್ರ. ಉಳಿದಂತೆ ನಿದ್ರಾನಂದ. ಎದ್ದಿರುವ ಏಳೆಂಟು ಗಂಟೆ ಅವಧಿಯಲ್ಲಿ ನಾಯಕ ಏನೆಲ್ಲ ಮಾಡ್ತಾನೆ ಅನ್ನೋದೇ ಚಿತ್ರದ ಕಥೆ.

  ಜಡೇಶ್ ಕಥೆ, ಚಿತ್ರಕಥೆ ಹೊಣೆ ಹೊತ್ತಿದ್ದು, ನಿರ್ದೇಶನವೂ ಅವರದ್ದೇ. ಚಿತ್ರದ ನಿರ್ಮಾಪಕ ಗುರುದೇಶಪಾಂಡೆ. ತಮ್ಮದೇ ನಿರ್ಮಾಣದಲ್ಲಿ ತಮ್ಮ ಶಿಷ್ಯನನ್ನು ನಿರ್ದೇಶಕರಾಗಿ ಪ್ರಮೋಟ್ ಮಾಡುತ್ತಿದ್ದಾರೆ ಗುರು. ಅಂದಹಾಗೆ ನಾಳೆ ಪ್ರಜ್ವಲ್ ಹುಟ್ಟುಹಬ್ಬ. ಹುಟ್ಟುಹಬ್ಬದ ದಿನವೇ ಸೆಟ್ಟೇರಲಿದೆ ಪ್ರಜ್ವಲ್ ಹೊಸ ಸಿನಿಮಾ.

 • ಪ್ರಜ್ವಲ್ ಜೊತೆ ರಚಿತಾ ರಾಮ್

  rachita ram to pair opposite prajwal devaraj

  ಅರ್ಜುನ್ ಚಿತ್ರದ ಮೂಲಕ ಪ್ರಜ್ವಲ್ ದೇವರಾಜ್‍ಗೆ ವಿಭಿನ್ನತೆಯ ಟಚ್ ಕೊಟ್ಟ ನಿರ್ದೇಶಕ ಪಿ.ಸಿ.ಶೇಖರ್, ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹೀರೋ. ಚಿತ್ರದ ಕಥೆಗೆ ಪ್ರಜ್ವಲ್ ದೇವರಾಜ್ ಓಕೆ ಎಂದಿದ್ದಾರೆ. ನಾಯಕಿಯಾಗಿ ಆಯ್ಕೆಯಾಗಿರೋದು ರಚಿತಾ ರಾಮ್.

  ರಚಿತಾ ರಾಮ್ ಕಥೆ ಕೇಳಿ ಇಂಪ್ರೆಸ್ ಆಗಿದ್ದಾರಂತೆ. ಆದರೆ, ಇನ್ನೂ ಅಧಿಕೃತಗೊಂಡಿಲ್ಲ. ಜೋಡಿ ಪಕ್ಕಾ ಆದರೆ, ಪ್ರಜ್ವಲ್-ರಚಿತಾ ರಾಮ್ ಜೋಡಿಯ ಪ್ರಥಮ ಚಿತ್ರವಾಗಲಿದೆ ಪಿ.ಸಿ.ಶೇಖರ್ ಸಿನಿಮಾ.

 • ಪ್ರಜ್ವಲ್ ದೇವರಾಜ್ ಪತ್ನಿ, ಅಪ್ಪು ಚಿತ್ರಕ್ಕೆ ನಾಯಕಿ

  puneeth rajkumar to produce movie for ragini chandran

  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ವೃತ್ತಿಪರ ಮಾಡೆಲ್. ಅವರೀಗ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಅದೂ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಸಿನಿಮಾ ಮೂಲಕ. ರಘು ಸಮರ್ಥ ನಿರ್ದೇಶನದ ಚಿತ್ರದಲ್ಲಿ ರಾಗಿಣಿ ಚಂದ್ರನ್ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಈಗ ಪುನೀತ್ ಸ್ಪಷ್ಟಪಡಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ.

  `ಸಿನಿಮಾದ ಕಥೆ ಇಷ್ಟವಾಯ್ತು. ಒಂದೊಳ್ಳೆ ಫ್ರೆಶ್ ಥಾಟ್ ಚಿತ್ರದಲ್ಲಿದೆ. ಹೀಗಾಗಿ ನಿರ್ಮಾಣಕ್ಕೆ ಒಪ್ಪಿಕೊಂಡೆ' ಎಂದಿದ್ದಾರೆ ಪುನೀತ್. ಅವಿನಾಶ್, ಪ್ರಕಾಶ್ ಬೆಳವಾಡಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಪ್ರಧಾನ ಪಾತ್ರಗಳಲ್ಲಿದ್ದಾರೆ.

  ಪುನೀತ್ ನಿರ್ಮಾಣದಲ್ಲಿ 3 ಚಿತ್ರಗಳು ಶುರುವಾಗಿವೆ. ಕವಲುದಾರಿ, ಮಾಯಾಬಜಾರ್ ಹಾಗೂ ಪನ್ನಗಾಭರಣ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ. ಇದೂ ಶುರುವಾದರೆ 4ನೇ ಸಿನಿಮಾ ಆಗಲಿದೆ. 

 • ಪ್ರಜ್ವಲ್ ದೇವರಾಜ್ ಫುಲ್ ಹ್ಯಾಪಿ

  prajwal devaraj's new movie trailers r super hit

  ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಅವರ ಅಭಿನಯದ ಎರಡು ಚಿತ್ರದ ಟೀಸರ್‍ಗಳು ಪ್ರಜ್ವಲ್ ಅವರ ಖುಷಿ ಹೆಚ್ಚಿಸಿವೆ. ಟೀಸರ್‍ಗಳು ಹಾಗೂ ಅವುಗಳಿಗೆ ಪ್ರೇಕ್ಷಕರು ಕೊಟ್ಟಿರುವ ರಿಯಾಕ್ಷನ್ಸ್ ಪ್ರಜ್ವಲ್ ಅವರನ್ನು ಕುಣಿದು ಕುಪ್ಪಳಿಸುವಂತೆ ಮಾಡಿವೆ.

  ಎ.ಆರ್.ವಿಖ್ಯಾತ್ ನಿರ್ಮಾಣದ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದ 2ನೇ ಟೀಸರ್ 3 ಲಕ್ಷಕ್ಕೂ ಹೆಚ್ಚು ಹಿಟ್ಸ್ ಗಿಟ್ಟಿಸಿದೆ. ವಿಕ್ರಂಗೆ ಜಾಕಿ ಭಾವನಾ ನಾಯಕಿ. ನರಸಿಂಹ ಡೈರೆಕ್ಟರ್.

  ಇನ್ನು ಗುರು ದೇಶಪಾಂಡೆ ನಿರ್ಮಾಣದ ಜಂಟಲ್‍ಮನ್ ಚಿತ್ರವೂ 3 ಲಕ್ಷ ಹಿಟ್ಸ್ ದಾಟಿದೆ. ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಈ ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿ.

  ಎರಡು ಟೀಸರ್‍ಗಳಿಗೆ ಸಿಕ್ಕಿರುವ ಪ್ರತಿಕ್ರಿಯೆಗೆ ಪ್ರಜ್ವಲ್ ಫುಲ್ ಹ್ಯಾಪಿ.

 • ಪ್ರಜ್ವಲ್, ವಸಿಷ್ಠ ಸಿಂಹ ಜೋಡಿ ಎದೆ ನಡುಗುತಿದೆ..

  gentleman lyrical video released

  ನಡುಗುತಿದೆ ಎದೆಗೂಡು.. ಸುಡುಗಾಡು ಬರಿ ಮೌನ.. ತೆವಳುತಿದೆ ವಾತ್ಸಲ್ಯ.. ಬರಿ ಮೋಸ ದ್ವೇಷಾ.. ಇದೇ ಜಮಾನಾ..

  ಇದು ಜೆಂಟಲ್‌ಮ್ಯಾನ್ ಚಿತ್ರದ ಗೀತೆ. ಹಾಡಿರುವುದು ವಸಿಷ್ಠ ಸಿಂಹ. ಅವರ ಕಂಚಿನAತಹ ಕಂಠದಲ್ಲಿ ಹಾಡಿನ ಫೋರ್ಸು ಮತ್ತಷ್ಟು ಹೆಚ್ಚಿದೆ. ಪ್ರಜ್ವಲ್ ದೇವರಾಜ್ ಈ ಹಿಂದೆ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳದ ರೋಷಾವೇಷದ ಪಾತ್ರದಲ್ಲಿದ್ದಾರೆ.

  ಧನಂಜಯ್ ದಿಡಿಗ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಸಾಹಿತ್ಯ ಕಿಕ್ಕೇರಿಸುತ್ತಿದೆ. ಗುರುದೇಶಪಾಂಡೆ ನಿರ್ಮಾಣದ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕ. 

 • ಪ್ರಜ್ವಲ್‍ಗೆ ಪ್ರೇಮಂ ಪಲ್ಲವಿ

  premam fame sai pallavi

  ಸಾಯಿ ಪಲ್ಲವಿ, ಮಲಯಾಳಂನ ಪ್ರೇಮಂ ಚಿತ್ರದ ನಾಯಕಿ. ಕಣ್ಣುಗಳಲ್ಲಿಯೇ ಆಟವಾಡುವ, ಭಾವನೆಗಳನ್ನು ಮುಖಭಾವದಲ್ಲೇ ವ್ಯಕ್ತಪಡಿಸುವ ಅಪರೂಪದ ನೈಜ ಕಲಾವಿದೆ. ಇವರೀಗ ಕನ್ನಡಕ್ಕೆ ಬರುತ್ತಿದ್ದಾರೆ. ಪ್ರಜ್ವಲ್ ದೇವರಾಜ್‍ಗೆ ನಾಯಕಿಯಾಗುತ್ತಿದ್ದಾರೆ.  ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. 

  ಚಿತ್ರದ ನಿರ್ಮಾಪಕರು ವಿಖ್ಯಾತ್. ನಿರ್ದೇಶಕ ಶ್ರೀನರಸಿಂಹ ಹೇಳಿದ ಕಾಮಿಡಿ ಬ್ಯಾಕ್‍ಗ್ರೌಂಡ್‍ನ ಕಥೆ ಇಷ್ಟವಾಯಿತಂತೆ. ಬೇಜವಾಬ್ದಾರಿಯ ನಾಯಕ. ಪೊಲೀಸ್ ಆಗಿದ್ದರೂ ತಮಾಷೆಯಾಗಿ ವರ್ತಿಸುವ ಹೀರೋ ಪಾತ್ರದಲ್ಲಿ ಪ್ರಜ್ವಲ್ ಇರುತ್ತಾರೆ. ನಾಯಕಿ ಸಾಯಿಪಲ್ಲವಿ. 

  ಸಾಯಿ ಪಲ್ಲವಿಯವರದ್ದೂ ಫನ್ನಿ ಕ್ಯಾರೆಕ್ಟರ್ ಅಂತೆ. ಇಡೀ ಚಿತ್ರ ನಡೆಯುವುದೇ ಪ್ರಜ್ವಲ್ ಮತ್ತು ಸಾಯಿ ಪಲ್ಲವಿ ಅವರ ಪಾತ್ರದ ಮೇಲೆ ಎನ್ನುತ್ತಾರೆ ನಿರ್ದೇಶಕ ಶ್ರೀನರಸಿಂಹ. 

 • ಬೆಳ್ಳಿತೆರೆಗೆ ಪ್ರಜ್ವಲ್ ದೇವರಾಜ್ ಪತ್ನಿ

  ragini ramachandrappa enters silver screen

  ಪ್ರಜ್ವಲ್ ದೇವರಾಜ್ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದಲ್ಲಿ ನಟಿಸುತ್ತಿರೋದು ಹಳೆಯ ಸುದ್ದಿ. ಅದು ಶಿವರಾಜ್ ಕುಮಾರ್-ದಿನೇಶ್ ಬಾಬು ಕಾಂಬಿನೇಷನ್‍ನಲ್ಲಿ ಹಿಟ್ ಆಗಿದ್ದ ಚಿತ್ರದ ಟೈಟಲ್. ಈ ಚಿತ್ರದಲ್ಲಿ ರಮೇಶ್ ಅರವಿಂದ್ ನೆಗೆಟಿವ್ ರೋಲ್‍ನಲ್ಲಿ ನಟಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ನಟರಾಗಿ ನಟಿಸುತ್ತಿದ್ದಾರೆ. ಇಷ್ಟೆಲ್ಲ ವಿಶೇಷ ಇಟ್ಟುಕೊಂಡಿರೋ ಈ ಚಿತ್ರದ ಮೂಲಕ, ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಮದ್ರನ್ ಬೆಳ್ಳಿತೆರೆಗೆ ಬರುತ್ತಿದ್ದಾರೆ.

  ರಾಗಿಣಿ ಚಂದ್ರನ್, ಪ್ರಜ್ವಲ್‍ಗೆ ಹೀರೋಯಿನ್ ಆಗಿಯೇನೂ ಬರ್ತಿಲ್ಲ. ಮೂಲತಃ ಮಾಡೆಲ್ ಹಾಗೂ ನಾಟ್ಯ ಕಲಾವಿದೆಯಾಗಿರುವ ರಾಗಿಣಿ ಚಮದ್ರನ್, ಚಿತ್ರದಲ್ಲೊಂದು ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರಂತೆ. ರಾಗಿಣಿ ಚಂದ್ರನ್‍ಗೆ ಕ್ಯಾಮೆರಾ ಹೊಸದಲ್ಲ. ಹಲವಾರು ಜಾಹೀರಾತುಗಳಲ್ಲಿ ನಟಿಸಿರುವ ರಾಗಿಣಿಗೆ ವೃತ್ತಿಪರ ಡ್ಯಾನ್ಸರ್. ಶಾರ್ಟ್ ಫಿಲಂಗಳಲ್ಲಿ ನಟಿಸಿರುವ ರಾಗಿಣಿ ಚಂದ್ರನ್‍ಗೆ, ನರಸಿಂಹ ನಿರ್ದೇಶನದ ಈ ಚಿತ್ರ, ಬೆಳ್ಳಿತೆರೆಯಲ್ಲಿ ಮೊದಲ ಸಿನಿಮಾ. 

 • ಭಗತ್ ಸಿಂಗ್ ದರ್ಶನ್

  darshan as bhagat singh in inspector vikram

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಭಗತ್ ಸಿಂಗ್ ಅವತಾರ ಎತ್ತುತ್ತಿದ್ದಾರೆ. ಹೌದು, ಕುರುಕ್ಷೇತ್ರದ ಸುಯೋಧನನ ಪೌರಾಣಿಕ ಪಾತ್ರ, ಸಂಗೊಳ್ಳಿ ರಾಯಣ್ಣ ಎಂಬ ಐತಿಹಾಸಿಕ ನಾಯಕನಾಗಿ ಕಾಣಿಸಿಕೊಂಡು ಕನ್ನಡಿಗರ ಮನ ಗೆದ್ದಿರುವ ದರ್ಶನ್, ಈಗ ಭಗತ್ ಸಿಂಗ್ ಆಗುತ್ತಿದ್ದಾರೆ. ಹಾಗಾದರೆ, ಭಗತ್ ಸಿಂಗ್ ಸ್ಟೋರಿ ಸಿನಿಮಾ ಆಗುತ್ತಿದೆಯಾ ಎಂದು ಕೇಳಬೇಡಿ. ಇಲ್ಲ.

  ಪ್ರಜ್ವಲ್ ದೇವರಾಜ್, ಭಾವನಾ ಮೆನನ್ ಅಭಿನಯದ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದಲ್ಲಿ ದರ್ಶನ್ ಅತಿಥಿ ನಟರಾಗಿದ್ದಾರಷ್ಟೇ. ಆ ಚಿತ್ರದಲ್ಲಿ ದರ್ಶನ್ ಅವರದ್ದು ಭಗತ್ ಸಿಂಗ್ ಕ್ಯಾರೆಕ್ಟರ್.

  ವಿಖ್ಯಾತ್ ನಿರ್ಮಾಣದ ಚಿತ್ರಕ್ಕೆ ನರಸಿಂಹ ನಿರ್ದೇಶನವಿದ್ದು, ಅನೂಪ್ ಸಿಳೀನ್ ಸಂಗೀತವಿದೆ. ಹುಡುಗಾಟದ ಸ್ವಭಾವ ಆದರೂ ಟಫ್ ಕಾಪ್ ಆಗಿರುವ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ.

 • ಮೈ ಗಢಗಢ ನಡುಗುವ ಚಳಿಯಲ್ಲಿ..ರಿವರ್ ರಾಫ್ಟಿಂಗ್

  life jothe ondu selfie team

  ರಿವರ್ ರ್ಯಾಫ್ಟಿಂಗ್ ಅನ್ನೋದು ಅದ್ಭುತ ಅನುಭವ ಕೊಡುತ್ತೆ. ಹರಿಯುವ ನದಿಯಲ್ಲಿ ರ್ಯಾಫ್ಟಿಂಗ್ ಮಾಡೋದು ಸುಲಭದ ಕೆಲಸವಲ್ಲ. ಅದಕ್ಕೆ ಮೊದಲು ಧೈರ್ಯ ಇರಬೇಕು. ಈಜು ಗೊತ್ತಿರಬೇಕು. ಈಜು ಗೊತ್ತಿದ್ದವರಿಗಷ್ಟೇ ಧೈರ್ಯ ಬರಲು ಸಾಧ್ಯ. ಸದ್ಯಕ್ಕೆ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರತಂಡ ಹಿಮಾಲಯದ ತಪ್ಪಲಲ್ಲಿ ರ್ಯಾಫ್ಟಿಂಗ್ ಮಾಡಿದೆ.

  ದಿನಕರ್ ತೂಗುದೀಪ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್, ಪ್ರೇಮ್, ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿದ್ದಾರೆ. ಇಡೀ ಚಿತ್ರತಂಡ ಹೃಷಿಕೇಶದಲ್ಲಿ ಗಢಗಢ ನಡುಗುವ ಈ ಚಳಿಯಲ್ಲೇ ರ್ಯಾಫ್ಟಿಂಗ್ ಮಾಡಿರುವುದು ವಿಶೇಷ. ಹರಿಪ್ರಿಯಾ, ಪ್ರಜ್ವಲ್, ಪ್ರೇಮ್.. ಎಲ್ಲರೂ.. ಈಜು ಗೊತ್ತಿದ್ದರೂ, ಹರಿಯುವ ನದಿಯಲ್ಲಿ ರ್ಯಾಫ್ಟಿಂಗ್ ಮಾಡುವುದು ವಿಭಿನ್ನ ಅನುಭವ ಎಂದು ಖುಷಿ ಹಂಚಿಕೊಂಡಿದ್ದಾರೆ.

 • ಮೈಸೂರು ಬಳಿ ದರ್ಶನ್ ಕಾರು ಅಪಘಾತ

  darshan met with an accident in mysore

  ಮೈಸೂರು ಬಳಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಅಪಘಾತಕ್ಕೀಡಾಗಿದೆ. ಕಾರ್‍ನಲ್ಲಿ ದರ್ಶನ್ ಜೊತೆ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೂಡಾ ಇದ್ದರು. ನಿನ್ನೆಯಷ್ಟೇ ಮೈಸೂರಿನಲ್ಲಿ ಗಜಪಡೆಯ ಮಾವುತರೊಂದಿಗೆ ವಿಶೇಷ ಭೋಜನ ಕಾರ್ಯಕ್ರಮ ಹಮ್ಮಿಕೊಂಡಿದ್ದ ದರ್ಶನ್ ಜೊತೆ ಸ್ಯಾಂಡಲ್‍ವುಡ್‍ನ ಹಲವರು ಭಾಗವಹಿಸಿದ್ದರು.

  ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಬರುವಾಗ ಹಿನಕಲ್ ರಿಂಗ್ ರೋಡ್ ಬಳಿ ದರ್ಶನ್‍ರ ಆಡಿ ಕಾರು ಸ್ಕಿಡ್ ಆಗಿದೆ. ಅಪಘಾತದಲ್ಲಿ ದರ್ಶನ್ ಬಲಗೈ  ಮೂಳೆ ಮುರಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್‍ಗೂ ಕೂಡಾ ಗಾಯಗಳಾಗಿವೆ.

  ಮುಂಜಾನೆ 3 ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ದರ್ಶನ್ ಅವರ ಕಾರು ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮೈಸೂರಿಗೆ ಧಾವಿಸಿದ್ದಾರೆ.

 • ರಾಗಿಣಿ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ನಿರ್ಮಾಪಕ

  puneeth to produce ragini's movie

  ರಾಗಿಣಿ ಎಂದರೆ ರಾಗಿಣಿ ದ್ವಿವೇದಿ ಅಲ್ಲ. ರಾಗಿಣಿ ಚಂದ್ರನ್. ಪ್ರಜ್ವಲ್ ದೇವರಾಜ್ ಅವರ ಪತ್ನಿ. ದೇವರಾಜ್ ಅವರ ಸೊಸೆ. ಮೂಲತಃ ಮಾಡೆಲ್ ಆಗಿರುವ ರಾಗಿಣಿ, ನಾಯಕಿಪ್ರಧಾನ ಚಿತ್ರ ವಿಜಯದಶಮಿಯಲ್ಲಿ ನಟಿಸಬೇಕಿತ್ತು. ಎಲ್ಲವೂ ಓಕೆ ಆಗಿ, ಇನ್ನೇನು ಶೂಟಿಂಗ್ ಶುರುವಾಗಬೇಕು ಎನ್ನುವಾಗ ನಿರ್ಮಾಪಕರು ಬದಲಾಗಿದ್ದಾರೆ. ಚಿತ್ರ ನಿರ್ಮಾಣದ ಹೊಣೆಯನ್ನು ಪುನೀತ್ ಅವರ ಪಿಆರ್‍ಕೆ ಪ್ರೊಡಕ್ಷನ್ಸ್ ಹೊತ್ತುಕೊಂಡಿದೆ.

  ರಾಗಿಣಿ ಚಂದ್ರನ್ ಪ್ರಧಾನ ಪಾತ್ರದಲ್ಲಿದ್ದು, ಇನ್ನೊಂದು ಪ್ರಮುಖ ಪಾತ್ರಕ್ಕೆ ಯುಗಳ ಗೀತೆ ಸೀರಿಯಲ್ ಖ್ಯಾತಿಯ ಸಿರಿ ಪ್ರಹ್ಲಾದ್ ಬಂದಿದ್ದಾರೆ. ನಿರ್ದೇಶಕ ರಘು ಸಮರ್ಥ್ ಅವರೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

 • ರಾಗಿಣಿ ಪ್ರಜ್ವಲ್ ದೇವರಾಜ್ ಚಿತ್ರದ ಹೆಸರು law

  prk productions next movie name is law

  ದೇವರಾಜ್ ಅವರ ಸೊಸೆ, ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಪುನೀತ್ ಬ್ಯಾನರ್ ಚಿತ್ರದಲ್ಲಿ ನಟಿಸುತ್ತಿರುವುದು ಭಾರಿ ಸುದ್ದಿಯಾಗಿತ್ತು. ವಿಶೇಷವೆಂದರೆ, ರಘು ಸಮರ್ಥ ನಿರ್ದೇಶನದ ಚಿತ್ರದ ಚಿತ್ರೀಕರಣವೇ ಮುಗಿದು ಹೋಗಿದೆ. ಚಿತ್ರದ ಟೈಟಲ್ ಈಗಷ್ಟೇ ಹೊರಬಿದ್ದಿದೆ. ಹೆಸರು ಲಾ.

  ಲಾ ಎಂದರೆ ಕಾನೂನು. ರಾಗಿಣಿ ಚಿತ್ರದಲ್ಲಿ ಲಾಯರ್ ಆಗಿ ನಟಿಸಿದ್ದಾರೆ. ಚಿತ್ರದ ಪ್ರತಿ ದೃಶ್ಯವನ್ನೂ ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಅವರು ಪ್ರತಿದಿನ ಸೆಟ್‍ಗೆ ಬರುವ ಮುನ್ನ ಸಂಪೂರ್ಣ ಸಿದ್ಧರಾಗಿ ಬರುತ್ತಿದ್ದರು ಎಂದಿದ್ದಾರೆ ರಘು ಸಮರ್ಥ.

  ಜಾಹೀರಾತುಗಳಲ್ಲಿ ನಟಿಸಿದ್ದ, ಮಾಡೆಲಿಂಗ್ ಮಾಡಿರುವ, ನೃತ್ಯ ಕಲಾವಿದೆಯೂ ಆಗಿರುವ ರಾಗಿಣಿ ಚಂದ್ರನ್, ಸಿನಿಮಾ ಮಾತ್ರ ಹೊಸದು.

 • ರೀಮೇಕ್ ಮಾಡಿದಾಗ ಬೈದವರು ಸ್ವಮೇಕ್ ಮಾಡಿದಾಗ ನೋಡ್ತಿಲ್ಲ ಯಾಕೆ..?

  gentlemen image

  ಗುರು ದೇಶಪಾಂಡೆ, ರಾಜಾಹುಲಿಯಂತ ಬ್ಲಾಕ್ ಬಸ್ಟರ್ ಕೊಟ್ಟ ಡೈರೆಕ್ಟರ್. ಅವರೀಗ ಹೊಚ್ಚ ಹೊಸ ಸಿನಿಮಾ ಮಾಡಿದ್ದಾರೆ. ಜಂಟಲ್ಮನ್. ಸ್ವತಃ ನಿರ್ದೇಶಕರಾಗಿದ್ದರೂ, ಇನ್ನೊಬ್ಬ ನಿರ್ದೇಶಕನ ಪ್ರಯತ್ನವನ್ನು ಮೆಚ್ಚಿ, ಹೊಸತನದ ಕಥೆಗೆ ನಿರ್ಮಾಪಕರಾಗಿದ್ದಾರೆ.

  ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಅಪರೂಪ ಎನ್ನಿಸುವ ಕಥೆ ಜಂಟಲ್ಮನ್ ಚಿತ್ರದಲ್ಲಿದೆ. ಒಳ್ಳೆಯ ಮೇಕಿಂಗ್, ನಟನೆ, ಚಿತ್ರಕಥೆ ಎಲ್ಲವೂ ಇರುವ ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ಆದರೆ.. ಅವರು ನಿರೀಕ್ಷಿಸಿದಷ್ಟು ಪ್ರೇಕ್ಷಕರ ಬೆಂಬಲ ಸಿಗುತ್ತಿಲ್ಲ.

  ಇದರ ಬಗ್ಗೆ ನಟ ಸಂಚಾರಿ ವಿಜಯ್ ಬೇಸರ ಮಾಡಿಕೊಂಡಿದ್ದರು. ಒಳ್ಳೆಯ ಸಿನಿಮಾ ಮಾಡಿದ್ದೇವೆ. ನೋಡಿ.. ಗೆಲ್ಲಿಸಿ ಎಂದಿದ್ದರು. ಈಗ ನಿರ್ಮಾಪಕ ಗುರು ದೇಶಪಾಂಡೆ ಕೂಡಾ ಬೇಸರ ಹೊರಹಾಕಿದ್ದಾರೆ. ಸ್ವಮೇಕ್ ಮಾಡಿ ಮಾಡಿ ಎಂದು ಬೈತಾ ಇದ್ರಿ. ಈಗ ಸ್ವಮೇಕ್ ಮಾಡಿದ್ದೇನೆ. ಒಳ್ಳೆಯ ಚಿತ್ರ ಎಂದು ಹೊಗಳಿದ್ದೀರಿ. ಆದರೆ.. ಸಿನಿಮಾ ನೋಡೋಕೆ ಬರ್ತಿಲ್ಲ ಯಾಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್ ಅಭಿನಯದ ಜಂಟಲ್ಮನ್ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕ. ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

 • ಲೈಫ್ ಈಸ್ ಬ್ಯೂಟಿಫುಲ್

  life is beautiful

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಒನ್‍ಲೈನ್ ಸ್ಟೋರಿ ಏನು..? ನಿರ್ದೇಶಕರು ಹೇಳೋದು ಒಂದೇ ವರ್ಡ್ ಉತ್ತರ. ಲೈಫ್ ಈಸ್ ಬ್ಯೂಟಿಫುಲ್. ಚಿತ್ರದ ಕಥೆ ಇರುವುದು ಹಾಗೂ ಚಿತ್ರಕಥೆಯೊಳಗಿನ ಹೂರಣ ಇದೆ..

  ಜೀವನವನ್ನು ನಾವು ಇಷ್ಟಪಟ್ಟಂತೆ ಬದುಕಬೇಕು ಎಂದು ಕನಸು ಕಾಣುವ ನಾಯಕಿ. ಕಟ್ಟುಪಾಡುಗಳನ್ನೆಲ್ಲ ಧಿಕ್ಕರಿಸಿ ಹೊರಡುವ ಅವಳಿಗೆ, ಯಾವುದೋ ಕಾರಣದಿಂದಾಗಿ ಒಂದು ಸೆಲ್ಫಿಗೆ ಒಂದಾಗ್ತಾರೆ. ಅವರು ಸೆಲ್ಫಿಗೆ ಒಂದಾಗೋದು ಏಕೆ ಅನ್ನೋದೇ ಇಂಟ್ರೆಸ್ಟಿಂಗ್ ಆಗಿದ್ಯಂತೆ. 

  ಬೋಲ್ಡ್ ಹುಡುಗಿಯಾಗಿ ಹರಿಪ್ರಿಯಾ, ಕೋಟ್ಯಧಿಪತಿಯಾಗಿ ಪ್ರಜ್ವಲ್ ದೇವರಾಜ್, ನಿರ್ದೇಶಕನಾಗುವ ಕನಸು ಹೊತ್ತ ಹುಡುಗನಾಗಿ ಪ್ರೇಮ್ ನಟಿಸಿದ್ದಾರೆ. ಇವರೆಲ್ಲರನ್ನೂ ಒಟ್ಟಿಗೇ ನಿಲ್ಲಿಸಿ ಸೆಲ್ಫಿ ತಗೊಂಡಿರೋದು ದಿನಕರ್ ತೂಗುದೀಪ್. ಸೆಲ್ಫಿ ಹೆಂಗಿದ್ಯೋ.. ಇದೇ ವಾರ ನೋಡಿ ಹೇಳಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery