` prajwal devaraj, - chitraloka.com | Kannada Movie News, Reviews | Image

prajwal devaraj,

 • ಇನ್ಸ್‍ಪೆಕ್ಟರ್ ವಿಕ್ರಂ ಆದ ಪ್ರಜ್ವಲ್ ದೇವರಾಜ್

  prajwal as inspector vikram

  ಇನ್ಸ್‍ಪೆಕ್ಟರ್ ವಿಕ್ರಂ ಎಂದರೆ, ಯಾರು ನೆನಪಾಗ್ತಾರೆ ಹೇಳಿ..? ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ದಿನೇಶ್ ಬಾಬು ನಿರ್ದೇಶನದ ಆ ಚಿತ್ರದಲ್ಲಿ ಶಿವರಾಜ್ ಕುಮಾರ್, ಫನ್ನಿ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದರು. ಕರ್ನಾಟಕ ಪೊಲೀಸ್ ಡಿಪಾರ್ಟ್‍ಮೆಂಟ್‍ನಲ್ಲಿ ನಾನು ಕೊಹಿನೂರ್ ಗೋಲ್ಡು ಎನ್ನುವ ಶಿವರಾಜ್ ಕುಮಾರ್, ಡ್ಯೂಟಿಯಲ್ಲಿ ಸ್ಟ್ರಿಕ್ಟ್. ಈಗ ಅದೇ ಹೆಸರಿನ ಚಿತ್ರವೊಂದು ಮತ್ತೊಮ್ಮೆ ಸೆಟ್ಟೇರಿದೆ. ಪ್ರಜ್ವಲ್ ದೇವರಾಜ್ ಅವರ ಹೊಸ ಸಿನಿಮಾದ ಹೆಸರು ಇನ್ಸ್‍ಪೆಕ್ಟರ್ ವಿಕ್ರಂ.

  ಅಂದಹಾಗೆ ಈ ಚಿತ್ರ ಕೂಡಾ ತಮಾಷೆ ಸ್ವಭಾವದ ಇನ್ಸ್‍ಪೆಕ್ಟರ್ ಕುರಿತೇ ಇದೆಯಂತೆ. ಹಾಸ್ಯದ ಹೊನಲು ಉಕ್ಕಿ ಹರಿಯಲಲಿದೆಯಮತೆ. ಇದೊಂಥರಾ ದಬಾಂಗ್ ಶೈಲಿಯ ಚಿತ್ರ ಎಂದಿದ್ದಾರೆ ನಿರ್ಮಾಪಕ ವಿಖ್ಯಾತ್. ಚಿತ್ರದ ಚಿತ್ರೀಕರಣ ಮುಂದಿನ ತಿಂಗಳಿಂದ ಶುರುವಾಗಲಿದೆ.

 • ಇನ್ಸ್‍ಪೆಕ್ಟರ್ ವಿಕ್ರಂಗೆ ದರ್ಶನ್ ಪವರ್

  darshan in guest role for prajwal' devaraj's movie

  ಇನ್ಸ್‍ಪೆಕ್ಟರ್ ವಿಕ್ರಂ. ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಪ್ರಜ್ವಲ್‍ಗೆ ಜೋಡಿಯಾಗಿ ಭಾವನಾ ಬರುತ್ತಿದ್ದಾರೆ. ಇದೆಲ್ಲದರ ಜೊತೆಗೆ ಈಗ ಚಾಲೆಂಜಿಂಗ್ ಸ್ಟಾರ್ ಪವರ್ ಕೂಡಾ ಸಿಕ್ಕಿದೆ. ಚಿತ್ರದ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ದರ್ಶನ್ ನಟಿಸೋಕೆ ಒಪ್ಪಿಕೊಂಡಿದ್ದಾರಂತೆ.

  ಅರಸು, ನಾಗರಹಾವು, ಚೌಕ, ಪ್ರೇಮ ವಿರಹ.. ಹೀಗೆ ಹಲವು ಚಿತ್ರಗಳಲ್ಲಿ ಸ್ನೇಹಕ್ಕಾಗಿ ಅತಿಥಿ ಪಾತ್ರಗಳಲ್ಲಿ ನಟಿಸಿರುವ ದರ್ಶನ್, ಇನ್ಸ್‍ಪೆಕ್ಟರ್ ವಿಕ್ರಂನಲ್ಲೂ ಅಂಥದ್ದೇ ಪುಟ್ಟ ಪಾತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ.

  ಪುಷ್ಪಕವಿಮಾನ ವಿಖ್ಯಾತ್ ನಿರ್ಮಾಣದ ಚಿತ್ರಕ್ಕೆ ಹೊಸ ಪ್ರತಿಬೇ ನರಸಿಂಹ ನಿರ್ದೇಶಕರು. ಸದ್ಯಕ್ಕೆ ಚಿತ್ರತಂಡ ಅದನ್ನು ಗುಟ್ಟಾಗಿಟ್ಟಿದೆ. ಅಧಿಕೃತಗೊಳಿಸಿಲ್ಲ. 

 • ಇನ್ಸ್‍ಪೆಕ್ಟರ್ ವಿಕ್ರಂಗೆ ಶ್ರೀಮತಿ ಭಾವನಾ ನಾಯಕಿ

  bhavana heroine for inspector vikram

  ಮೊನ್ನೆ ಮೊನ್ನೆಯಷ್ಟೇ ನಿರ್ಮಾಪಕ ನವೀನ್ ಜೊತೆ ಹಸೆಮಣೆ ಏರಿದ ಜಾಕಿ ಭಾವನಾ, ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮದುವೆಯಾದ ನಂತರದ ಕೆಲವೇ ದಿನಗಳಲ್ಲಿ ಚಿತ್ರರಂಗಕ್ಕೆ ಮರಳಿರುವುದು ವಿಶೇಷ. ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರಕ್ಕೆ ನಾಯಕಿಯಾಗಿ ಭಾವನಾ ನಟಿಸುತ್ತಿದ್ದಾರೆ.

  ಸಾಮಾನ್ಯವಾಗಿ ನಾಯಕಿಯರು ಮದುವೆಯಾದರೆ ಮಿನಿಮಮ್ ಒಂದು ವರ್ಷದವರೆಗೆ ಸುದ್ದಿಗೇ ಬರೋದಿಲ್ಲ. ಇನ್ನೂ ಕೆಲವರು ಒಂದು ವರ್ಷದ ನಂತರ ಇನ್ನೊಂದು ಸಿಹಿ ಸುದ್ದಿ ನೀಡುತ್ತಾರೆ. ಆದರೆ, ಭಾವನಾ ಹಾಗಲ್ಲ. ಸಿನಿಮಾದಲ್ಲಿ ನಟಿಸುವ ಸುದ್ದಿಯನ್ನೇ ಕೊಟ್ಟಿದ್ದಾರೆ. 

  ಸೋಮವಾರದಿಂದ ಚಿತ್ರೀಕರಣ ಶುರುಗಾಲಿದ್ದು, ಫೆ.7ರಿಂದ ಭಾವನಾ ಶೂಟಿಂಗ್‍ಗೆ ಬರಲಿದ್ದಾರೆ. ಬ್ಯೂಟಿ ಮತ್ತು ಅಭಿನಯ ಎರಡೂ ಗೊತ್ತಿರುವ ನಾಯಕಿ ಬೇಕಿತ್ತು. ಭಾವನಾ ಅವರು ಪಾತ್ರವನ್ನು ಕೇಳಿದ ತಕ್ಷಣ ಒಪ್ಪಿಕೊಂಡರು ಎಂದಿದ್ದಾರೆ ನಿರ್ಮಾಪಕ ವಿಖ್ಯಾತ್. ಚಿತ್ರಕ್ಕೆ ನರಸಿಂಹ ಎಂಬ ಹೊಸ ಪ್ರತಿಭೆ ನಿರ್ದೇಶಕ.

   

 • ಎಗ್ ಶೆಲ್ ಕಳ್ಳಸಾಗಣೆಯ ಹೊಸ ಕಥೆ ಜಂಟಲ್‍ಮನ್

  gentleman talks about egg shell mafia

  ಎಗ್ ಶೆಲ್ ಟ್ರಾಫಿಕಿಂಗ್ ಮಾಫಿಯಾ. ಇದು ಈಗ ಜಗತ್ತನ್ನು ಆಳುತ್ತಿರುವ ಹೊಸ ದಂಧೆ. ಪುಟ್ಟ ಪುಟ್ಟ ವಯಸ್ಸಿನ ಹೆಣ್ಣು ಮಕ್ಕಳ ಅಂಡಾಣುಗಳನ್ನು ಮಾರುವ ದಂಧೆ. ಒಂದು ಎಗ್ ಶೆಲ್ ವ್ಯಾಲ್ಯೂ 5ರಿಂದ 10 ಲಕ್ಷ ರೂ. ಇದೆ. ಆ ಎಗ್ ಶೆಲ್‍ಗಾಗಿ ಅವರು ಕಿಡ್ನಾಪ್ ಮಾಡುವುದು 15.. 16.. ವರ್ಷದ ಹೆಣ್ಣು ಮಕ್ಕಳನ್ನು. ಇಂಥಾದ್ದೊಂದು ವಿಭಿನ್ನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಜಡೇಶ್ ಕುಮಾರ್.

  ಜಂಟಲ್‍ಮನ್ ಚಿತ್ರದ ಟ್ರೇಲರ್ ಕುತೂಹಲ ಹುಟ್ಟಿಸುವುದೇ ಅಲ್ಲಿ. ದಿನಕ್ಕೆ 18 ಗಂಟೆ ನಿದ್ರೆ ಮಾಡುವ ಹೀರೋ.. ಆತ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಣ್ಣನ ಪುಟಾಣಿ ಮಗಳು.. ಪ್ರೀತಿಸುವ ಡಯಟಿಷಿಯನ್.. ನಡುವೆ ಮಾಫಿಯಾ..

  ಒಟ್ಟಿನಲ್ಲಿ ಜಡೇಶ್, ಪ್ರಜ್ವಲ್ ದೇವರಾಜ್, ಸಂಚಾರಿ ವಿಜಯ್, ನಿಶ್ವಿಕಾ ನಾಯ್ಡು ಅವರ ಜೊತೆ ಹೊಚ್ಚ ಹೊಸ ಕಥೆ ಹೇಳಲು ರೆಡಿಯಾಗಿ ನಿಂತಿದ್ದಾರೆ. ಗುರು ದೇಶಪಾಂಡೆ ಹೊಸ ನಿರ್ದೇಶಕನ ವಿಭಿನ್ನ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಚಿತ್ರ ಇದೇ ವಾರ ರಿಲೀಸ್.

 • ಎದ್ದೇಳು ಭಾರತೀಯ ಇದು ಜಂಟಲ್‍ಮನ್ ಗೀತೆ

  eddelu bharathiyare song speciltiy

  ಎದ್ದೇಳು ಎಂದೊಡನೆ ತಕ್ಷಣ ನೆನಪಾಗುವುದು ಎದ್ದೇಳು ಮಂಜುನಾಥ ಹಾಡು. ಮೊದಲನೆಯದ್ದು ಪಿಬಿಶ್ರೀಯವರ ಭಕ್ತಿಗೀತೆಯಾದರೆ ಮತ್ತೊಂದು ಗುರುಪ್ರಸಾದ್-ಜಗ್ಗೇಶರ ಕ್ವಾಟ್ಲೆ ಗೀತೆ. ಈಗ ಜಂಟಲ್‍ಮನ್ ಚಿತ್ರದ ಎದ್ದೇಳು ಭಾರತೀಯ ಹಾಡು ಬಂದಿದೆ.

  ದಿನಕ್ಕೆ 18 ಗಂಟೆ ನಿದ್ದೆ ಮಾಡುವ ನಾಯಕನ್ನು ಎಚ್ಚರಿಸುವ ಗೀತೆ ಇದು.  ಅಂದು ಸ್ವಾಮಿ ವಿವೇಕಾನಂದ ನಿದ್ರೆ ಮಾಡುತ್ತಿದ್ದ ಭಾರತೀಯರನ್ನು ಎಚ್ಚರಗೊಳಿಸಿದರು. ಇಲ್ಲಿ ಅದನ್ನು ಭಟ್ಟರು ಮಾಡಿದ್ದಾರೆ. 18 ಗಂಟೆಯ ನಿದ್ರೆ ಮಾಡಿದರೆ ಒಬ್ಬ ವ್ಯಕ್ತಿ ಏನೇನೆಲ್ಲ ಕಳೆದುಕೊಳ್ತಾನೆ ಅನ್ನೋದನ್ನು ಎದ್ದೇಳು ಭಾರತೀಯ ಹಾಡಿನಲ್ಲಿ ಸೊಗಸಾಗಿ ವಿವರಿಸಲಾಗಿದೆ.

  ಟಗರು ಬಂತು ಟಗರು ಖ್ಯಾತಿಯ ಆಂಥೋನಿ ದಾಸನ್ ಈ ಹಾಡು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡು ಸೊಗಸಾಗಿದೆ.

  ಜಡೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಗುರುದೇಶಪಾಂಡೆ ನಿರ್ಮಾಪಕ. ಪ್ರಜ್ವಲ್ ದೇವರಾಜ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.

 • ಏನಿದು ಜೆಂಟಲ್‍ಮನ್ ಕಾಡ್ತಿರೋ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್..?

  what is sleeping beauty syndrome in gentleman

  ಜಂಟಲ್‍ಮನ್ ಚಿತ್ರದ ಕಥೆ ಏನಿರಬಹುದು ಎಂದು ನೋಡಿದರೆ, ಪದೇ ಪದೇ ಕೇಳಿಬರೋ ಆ ಕಾಯಿಲೆಯ ಹೆಸರು ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತೆ. ಕೆಲವರಿಗೆ ಎಲ್ಲಿ ಕುಳಿತರೂ ನಿದ್ದೆ, ಆಕಳಿಕೆ.. ಕಣ್ಣು ಮುಚ್ಚಿದರೆ ಗೊರಕೆ ಬರುತ್ತೆ. ಇನ್ನೂ ಕೆಲವರು ಓಡಾಡುತ್ತಿದ್ದರೂ ನಿದ್ದೆಯ ಮೂಡಿನಲ್ಲೇ ಇರುತ್ತಾರೆ. ಒಂದು ವಿಷಯ ಗೊತ್ತಿರಲಿ, ಈ ಒಂದು ಕಾಯಿಲೆಯಲ್ಲೇ 70ಕ್ಕೂ ಹೆಚ್ಚು ಥರಾವರಿ ವಿಧಗಳಿವೆ. ಜಂಟಲ್‍ಮನ್ ಹೀರೋ ಪ್ರಜ್ವಲ್ ದೇವರಾಜ್‍ಗೆ ಈ 70ರಲ್ಲಿ 18 ಗಂಟೆ ನಿದ್ರೆ ಮಾಡೋ ಕಾಯಿಲೆ. ಎಚ್ಚರ ಇರೋಕೆ ಸಾಧ್ಯವಾಗೋದು ದಿನದಲ್ಲಿ 6 ಗಂಟೆ ಮಾತ್ರ.

  ಅಂತಹ ಪ್ರಜ್ವಲ್ ದೇವರಾಜ್‍ಗೆ ಲವ್ವಾಗುತ್ತೆ. ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ  ಅಣ್ಣನ ಮಗಳು ಕಿಡ್ನಾಪ್ ಆಗ್ತಾಳೆ. ನಾಯಕಿಯ ಲೈಫಲ್ಲಿ ಏನೇನೋ ಆಗುತ್ತೆ. ಬಗೆಹರಿಸಲು ಹೋದವನು ಇನ್ನೇನೋ ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾನೆ. ತನ್ನವರನ್ನು ರಕ್ಷಿಸಿಕೊಳ್ಳಬೇಕೆಂದರೆ ಹೋರಾಡಲೇಬೇಕು. ಆದರೆ, ಅದಕ್ಕೂ ಮೊದಲು ಅವನು ತನ್ನ ಕಾಯಿಲೆಯನ್ನು ಗೆಲ್ಲಬೇಕು. ಹೇಗೆ..ಹೇಗೆ..ಹೇಗೆ..

  ಸ್ವಲ್ಪ ದಿನ ಸುಮ್ಮನಿರಿ, ಕೆಲವೇ ದಿನಗಳಲ್ಲಿ ತೆರೆಗೆ ಬರುತ್ತಿದ್ದಾನೆ ಜಂಟಲ್‍ಮನ್.

  ಜಡೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಗುರು ದೇಶಪಾಂಡೆ ನಿರ್ಮಾಪಕ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಮಾನವ ಕಳ್ಳ ಸಾಗಣೆ ಮತ್ತು ವೀರ್ಯಾಣು ದಂಧೆಯ ಕಥೆ ಇದೆ.

 • ಕಷ್ಟ ಬಂದೋರೆಲ್ಲ ಸೆಲ್ಫಿ ನೋಡ್ಕಳಿ

  life jothe ondu selfie has a good message about life

  ಲೈಫ್ ಜೊತೆ ಒಂದ್ ಸೆಲ್ಫಿ... ದಿನಕರ್ ಅವರ ಪತ್ನಿ ಮಾನಸಾ ಅವರು ಬರೆದಿರುವ ಕಥೆ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ ಅನ್ನೋದು ಬರುತ್ತೆ. ಒಬ್ಬೊಬ್ಬರೂ ಆ ಕಷ್ಟವನ್ನು ಬೇರೆ ಬೇರೆ ರೀತಿ ಫೇಸ್ ಮಾಡ್ತಾರೆ. ತಾಳ್ಮೆಯೊಂದಿದ್ದರೆ ಎಂಥ ಕಷ್ಟವನ್ನಾದರೂ ಪಳಗಿಸಬಹುದು, ಗೆಲ್ಲಬಹುದು ಅನ್ನೋದೇ ಚಿತ್ರದ ಕಥೆ. 

  ಮಾನಸಾ, ಇದಕ್ಕೂ ಮೊದಲು ಕೆಲವೊಂದಿಷ್ಟು ಕಥೆ ಹೇಳಿದ್ದರು. ಅದೇಕೋ, ಅವು ನನಗೆ ಇಷ್ಟವಾಗಿರಲಿಲ್ಲ. ಈ ಕಥೆ ಕೇಳುತ್ತಿದ್ದಂತೆಯೇ ಥ್ರಿಲ್ ಆಯ್ತು. ಈಗ ಸಿನಿಮಾ ರೆಡಿ ಎನ್ನುತ್ತಾರೆ ದಿನಕರ್.

  ಸಾರಥಿ ನಂತರ ಮತ್ತೆ ನಿರ್ದೇಶನ ವಿಳಂಬವಾಗೋಕೆ ಕಾರಣ, ಚೇಂಜ್. ಹಳೆಯ ಸಿನಿಮಾಗಿಂತ, ನಾನು ಮಾಡುವ ಹೊಸ ಸಿನಿಮಾ ಡಿಫರೆಂಟ್ ಆಗಿರಬೇಕು. ನನಗೆ ಅದು ಹೊಸತೆನಿಸಬೇಕು. ಹೀಗಾಗಿ ಲೇಟ್ ಎನ್ನುತ್ತಾರೆ.

  ಪ್ರಜ್ವಲ್ ಮತ್ತು ಪ್ರೇಮ್ ಜೊತೆ, ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರೋದು ಹರಿಪ್ರಿಯಾ. ಅಲ್ಲೊಂದು ಬ್ಯೂಟಿಫುಲ್ ಪ್ರೇಮಕಥೆಯಿದೆ. ಅದು ಪ್ರೇಮಕಾವ್ಯ ಎನ್ನುತ್ತಾರೆ ದಿನಕರ್. ಸಿನಿಮಾ ರಿಲೀಸ್‍ಗೆ ರೆಡಿ. ಮುಂದಿನ ವಾರ ಥಿಯೇಟರ್‍ಗೆ ಹೋಗಿ ಲೈಫ್ ಜೊತೆ ಒಂದ್ ಸೆಲ್ಫಿ ತಗೊಳ್ಳಿ.

 • ಕಾಲೇಜು ಕ್ವೀನ್ ಆಗಿ ಬರ್ತಿದ್ದಾರೆ ಡಿಂಪಲ್ ಕ್ವೀನ್..!

  rachita ram to act with prajwal devaraj in veeram

  ಸ್ಯಾಂಡಲ್ವುಡ್ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಈಗ ಕಾಲೇಜು ಸ್ಟೂಡೆಂಟ್ ಆಗಿ ಬರಲು ರೆಡಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ರಚಿತಾ. ಈ ಚಿತ್ರದಲ್ಲಿ ಅವರದ್ದು ಕಾಲೇಜು ಸ್ಟೂಡೆಂಟ್ ಪಾತ್ರ.

  ಯೋಗರಾಜ್ ಭಟ್-ಶಶಾಂಕ್ ನಿರ್ಮಾಣದ ಸೀರೆ, ನಾಗೇಂದ್ರ ಪ್ರಸಾದ್ ನಿರ್ದೇಶನದ ಪಂತ್ರ, ರಮೇಶ್ ಅರವಿಂದ್ ನಿರ್ದೇಶನದ 100, ಜೋಗಿ ಪ್ರೇಮ್ ಅವರ ಏಕ್ ಲವ್ ಯಾ, ಏಪ್ರಿಲ್, ಸಂಜು ಅಲಿಯಾಸ್ ಸಂಜು, ದಾಳಿ.. ಹೀಗೆ ಹಲವು ಚಿತ್ರಗಳ ನಡುವೆಯೇ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ ರಚಿತಾ ರಾಮ್.

  ಅಂದಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ರಚಿತಾ ರಾಮ್ ಅಭಿನಯದ ಆಯುಷ್ಮಾನ್ ಭವ ತೆರೆ ಕಾಣುತ್ತಿದೆ. ಇದು ಈ ವರ್ಷ ರಚಿತಾ ರಾಮ್ ನಟಿಸಿರುವ 7ನೇ ಸಿನಿಮಾ. ಈ ವರ್ಷ ಸೀತಾರಾಮ ಕಲ್ಯಾಣ, ಐ ಲವ್ ಯೂ, ರುಸ್ತುಂ, ನಟಸಾರ್ವಭೌಮ ಚಿತ್ರಗಳಲ್ಲಿ ನಟಿಸಿರುವ ರಚಿತಾ ರಾಮ್, ಅಮರ್ ಹಾಗೂ ಭರಾಟೆಯಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಎಲ್ಲವೂ ಸೇರಿದರೆ ಮುಂದಿನ ವಾರ ಬರುತ್ತಿರುವ ಆಯುಷ್ಮಾನ್ ಭವ 7ನೇ ಸಿನಿಮಾ.

  ಈಗ ಓಕೆ ಎಂದಿರುವ ವೀರಂ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಹೀರೋ. ಆ ಚಿತ್ರದಲ್ಲಿ ಪ್ರಜ್ವಲ್ ವಿಷ್ಣು ಅಭಿಮಾನಿಯಾಗಿ ಕಾಣಿಸಿಕೊಂಡಿದ್ಧಾರೆ ಖಾದರ್ ಕುಮಾರ್ ನಿರ್ದೇಶನದ ಚಿತ್ರ ವಿಷ್ಣು ಹುಟ್ಟುಹಬ್ಬದಂದೇ ಲಾಂಚ್ ಆಗಿದೆ.

 • ಕಿಕ್ ಬಾಕ್ಸರ್ ಅರ್ಜುನ್ ಗೌಡ

  Arjun Gowda actor prajwal devaraj image

  ಕನ್ನಡದಲ್ಲೀಗ ಬಾಕ್ಸರ್‍ಗಳ ಹವಾ ಶುರುವಾಗಿದೆ. ಕಿಚ್ಚ ಸುದೀಪ್ ಪೈಲ್ವಾನ್‍ನಲ್ಲಿ ಕುಸ್ತಿ ಪಟುವಾದ ಬಳಿಕ, ವಿನಯ್ ರಾಜ್‍ಕುಮಾರ್ ಕೂಡಾ ಬಾಕ್ಸರ್ ಆಗುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಹೊಸ ಚಿತ್ರದಲ್ಲಿ ವಿನಯ್ ಬಾಕ್ಸರ್ ಹೀರೋ. ಈಗ ಆ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ಪ್ರಜ್ವಲ್ ಅಭಿನಯದ  ಅರ್ಜುನ್ ಗೌಡ.

  ರಾಮು ನಿರ್ಮಾಣದ ಲಕ್ಕಿ ಶಂಕರ್ ನಿರ್ದೇಶನದ ಅರ್ಜುನ್ ಗೌಡ, ಅರ್ಜುನ್ ರೆಡ್ಡಿಯ ರೀಮೇಕ್ ಇರಬಹುದೇ ಎಂಬ ಅನುಮಾನ ಮೂಡಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಪ್ರಜ್ವಲ್, ಈ ಸಿನಿಮಾದಲ್ಲಿ ಬಾಕ್ಸರ್ ಆಗಿ ನಟಿಸುತ್ತಿದ್ದು, ಕಿಕ್‍ಬಾಕ್ಸಿಂಗ್ ಚಾಂಪಿಯನ್ ಗಿರೀಶ್, ಲಕ್ಕಿ ಶಂಕರ್ ಅವರಿಗೆ ಸಲಹೆ ಸೂಚನೆ ಕೊಟ್ಟಿದ್ದಾರೆ. ಚಿತ್ರದ ಟಾಕಿ ಪೋರ್ಷನ್ ಮುಗಿದಿದೆ.

   

 • ಕುಂಭಕರ್ಣ ಪ್ರಜ್ವಲ್

  prajwal devaraj's new movie is kumbhakarna

  ಪ್ರಜ್ವಲ್ ದೇವರಾಜ್‍ಗೆ ದಿನಕ್ಕೆ 18 ಗಂಟೆ ನಿದ್ದೆ ಬೇಕು. ಇಲ್ಲದೇ ಇದ್ದರೆ ಕಷ್ಟ ಕಷ್ಟ.. ಇಂಥಾದ್ದೊಂದು ವಿಭಿನ್ನ ಕಾಯಿಲೆಯಿಂದ ಬಳಲುತ್ತಿದ್ದಾರೆ ಪ್ರಜ್ವಲ್. ಆದರೆ, ಇದು ಸಿನಿಮಾಗಾಗಿ ಎನ್ನುವುದು ನಿಮ್ಮ ಗಮನಕ್ಕಿರಲಿ. ಇದು ಕುಂಭಕರ್ಣ ಚಿತ್ರದ ಕಥೆ.

  6 ತಿಂಗಳು ನಿದ್ದೆ, 6 ತಿಂಗಳು ಎಚ್ಚರ.. ರಾವಣನ ತಮ್ಮ ಕುಂಭಕರ್ಣನದ್ದು. 18 ತಾಸು ನಿದ್ದೆ ಮಾಡಿ, ಉಳಿದ 6 ಗಂಟೆಯಲ್ಲಿ ತನ್ನೆಲ್ಲ ಕೆಲಸಗಳನ್ನೂ ಪೂರೈಸಿಕೊಳ್ಳಬೇಕು. ಚಿತ್ರದ ಕಥೆಯೇ ಅದು. ರಾಜಹಂಸ ಎಂಬ ಸುಂದರ ಚಿತ್ರ ನಿರ್ದೇಶಿಸಿದ್ದ ಜಡೇಶ್, ಈ ಸಿನಿಮಾ ಮಾಡುತ್ತಿದ್ದಾರೆ.

  ಜಡೇಶ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಾಜಾಹುಲಿ ಖ್ಯಾತಿಯ  ಗುರು ದೇಶಪಾಂಡೆ ನಿರ್ಮಾಪಕ. ಜಡೇಶ್ ಮತ್ತು ಗುರು ದೇಶಪಾಂಡೆ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ, ಶೀಘ್ರದಲ್ಲೇ ಸೆಟ್ಟೇರಲಿದೆ.

  Related Articles :-

  Prajwal Devaraj is now 'Kumbhakarna'

 • ಜಂಟಲ್‍ಮನ್ ಪ್ರಜ್ವಲ್‍ಗೆ ನಿಶ್ವಿಕಾ ನಾಯ್ಡು ನಾಯಕಿ

  nishvika finalised for prajwal's gentlemaan

  ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದ ನಿಶ್ವಿಕಾ ನಾಯ್ಡು, ಮತ್ತೊಂದು ಬಿಗ್‍ಸಿನಿಮಾ ಒಪ್ಪಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್‍ಮನ್ ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿ. ರಾಜಹಂಸ ಚಿತ್ರದ ಮೂಲಕ ಗಮನ ಸೆಳೆದಿದ್ದ ಜಡೇಶ್ ಕುಮಾರ್ ಹಂಪಿ ಚಿತ್ರದ ನಿರ್ದೇಶಕ. 

  ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೂಲಕ. ಆ ಸಿನಿಮಾ ಬಿಡುಗಡೆಗೂ ಮುನ್ನವೇ, ಕನ್ನಡ ಚಿತ್ರರಂಗದ ದೊಡ್ಡ ಬ್ಯಾನರ್‍ನಲ್ಲಿ ಒಂದಾದ ದ್ವಾರಕೀಶ್ ಬ್ಯಾನರ್‍ನ ಅಮ್ಮ ಐ ಲವ್ ಯೂಗೆ ನಾಯಕಿಯಾಗಿದ್ದರು. ಅದಾದ ನಂತರ ಕೆ.ಮಂಜು ಪುತ್ರ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿಗೆ ನಾಯಕಿಯಾದರು. ಈಗ.. ಜಂಟಲ್‍ಮನ್‍ಗೆ ಹೀರೋಯಿನ್ ಆಗಿದ್ದಾರೆ ನಿಶ್ವಿಕಾ.

  `ಹೊಸ ನಟಿಯರಿಗೆ ನಟನೆಗೆ ಸ್ಕೋಪ್ ಇರುವ ಪಾತ್ರಗಳು ಸಿಗುವುದು ಅಪರೂಪ. ನಾನಂತೂ ಈ ವಿಷಯದಲ್ಲಿ ಲಕ್ಕಿ. ಈ ಚಿತ್ರದಲ್ಲೂ ಅಷ್ಟೆ, ನನ್ನ ಪಾತ್ರ, ಅಭಿನಯಕ್ಕೆ ತುಂಬಾ ಸ್ಕೋಪ್ ಇದೆ' ಎಂದಿದ್ದಾರೆ ನಿಶ್ವಿಕಾ ನಾಯ್ಡು. ಅಂದಹಾಗೆ ಇದು ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣದ ಸಿನಿಮಾ.

 • ಜಂಟಲ್‍ಮನ್ ಮೆಚ್ಚಿದ ಸ್ಟಾರ್ಸ್

  celebrities appreciates gentleman

  ವಿಭಿನ್ನ ಕಥೆ, ಥ್ರಿಲ್ ಕೊಡುವ ನಿರೂಪಣೆ, ಹೊಸ ಅನುಭವ ಕೊಡುವ ಚಿತ್ರಕಥೆ, ಸಸ್ಪೆನ್ಸ್, ಟ್ವಿಸ್ಟ್.. ಎಲ್ಲವನ್ನೂ ಇಟ್ಟುಕೊಂಡು ಗೆದ್ದ ಸಿನಿಮಾ ಜಂಟಲ್‍ಮನ್. ತಮಿಳು, ತೆಲುಗಿನಲ್ಲಿಯೂ ರೀಮೇಕ್ ಡಿಮ್ಯಾಂಡ್ ಸೃಷ್ಟಿಸಿಕೊಂಡ ಜಂಟಲ್‍ಮನ್ ಚಿತ್ರವನ್ನು ನೋಡಿ ಮೆಚ್ಚಿದ ಸ್ಟಾರ್‍ಗಳಿಗೇನೂ ಕಡಿಮೆಯಿಲ್ಲ.

  ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ನಿರ್ದೇಶಕ ಸಿಂಪಲ್ ಸುನಿ, ಒಳ್ಳೆ ಹುಡ್ಗ ಪ್ರಥಮ್.. ಹೀಗೆ ಹಲವರು ಚಿತ್ರದ ಬಗ್ಗೆ ಮೆಚ್ಚಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಇನ್ನು ಚಿತ್ರದ ಆಡಿಯೋ ರಿಲೀಸ್ ಮಾಡಿ ಶುಭ ಕೋರಿದ್ದವರು ದರ್ಶನ್. ಒಟ್ಟಿನಲ್ಲಿ ಒಂದು ವಿಭಿನ್ನ ಚಿತ್ರಕ್ಕೆ ಇಡೀ ಚಿತ್ರರಂಗವೇ ಬೆನ್ನಿಗೆ ನಿಂತು ಗೆಲ್ಲಿಸುತ್ತಿದೆ.

  ಜಡೇಶ್ ಕುಮಾರ್ ನಿರ್ದೇಶನ, ಗುರು ದೇಶಪಾಂಡೆ ನಿರ್ಮಾಣ, ಪ್ರಜ್ವಲ್, ನಿಶ್ವಿಕಾ, ಆರಾಧ್ಯ ಅಭಿನಯ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ.. ಎಲ್ಲಕ್ಕಿಂತ ಜಂಟಲ್‍ಮನ್ ಚಿತ್ರವನ್ನು ಗೆಲ್ಲಿಸಿರುವುದು ಸಂಪೂರ್ಣ ಹೊಸದೇ ಎನ್ನಿಸುವ ಕಥೆ.

 • ಜಂಟಲ್‍ಮನ್ ರಿಲೀಸ್ ಡೇಟ್ ಚೇಂಜ್

  gentleman release date fixed

  ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್‍ಮನ್ ಚಿತ್ರ ಜನವರಿ 31ಕ್ಕೆ ರಿಲೀಸ್ ಆಗಬೇಕಿತ್ತು. ಟ್ರೇಲರ್ ಮೂಲಕ ಭರ್ಜರಿ ಕುತೂಹಲ ಹುಟ್ಟಿಸಿರುವ ಚಿತ್ರ ಜಂಟಲ್‍ಮನ್. ಸ್ಲೀಪಿಂಗ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆ, ಮಾಫಿಯಾ ಮತ್ತು ಲವ್ ಸ್ಟೋರಿಯ ವಿಭಿನ್ನ ಕಥಾ ಹಂದರ ಹೊಂದಿರುವ ಜಂಟಲ್‍ಮನ್ ಸಿನಿಮಾ ರಿಲೀಸ್ ಒಂದು ವಾರ ಮುಂದಕ್ಕೆ ಹೋಗಿದೆ.

  ಜನವರಿ 31ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಫೆಬ್ರವರಿ 07ರಂದು ರಿಲೀಸ್ ಆಗುವ ಸಾಧ್ಯತೆ ಇದೆ. ಪ್ರಜ್ವಲ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದು, ಜಡೇಶ್ ಕುಮಾರ್ ಚಿತ್ರದ ನಿರ್ದೇಶಕ. ಗುರು ದೇಶಪಾಂಡೆ ನಿರ್ಮಾಣದ ಜಂಟಲ್‍ಮನ್ ಚಿತ್ರದಲ್ಲಿ ಪ್ರಜ್ವಲ್, 18 ಗಂಟೆ ನಿದ್ದೆ ಮಾಡುವ ರೋಗಿ.

   

 • ಜಂಟಲ್‍ಮನ್ ರೀಮೇಕಿಗೆ ಡಿಮ್ಯಾಂಡ್

  gentleman remake rights in full demand

  ಜೆಂಟಲ್‍ಮನ್ ರಿಲೀಸ್ ಆಗುವ ಮುನ್ನವೇ ಭರ್ಜರಿ ಸೌಂಡು ಮಾಡುತ್ತಿದೆ. 18 ಗಂಟೆ ನಿದ್ರೆ ಮಾಡುವ ಹೀರೋ, ವೀರ್ಯಾಣು ಸ್ಮಗ್ಲಿಂಗ್ ದಂಧೆ ಬಗ್ಗೆ ಬರುತ್ತಿರುವ ಜಗತ್ತಿನ ಮೊದಲ ಸಿನಿಮಾ ಎನ್ನುವುದಷ್ಟೆ ಅಲ್ಲ, ಚಿತ್ರದ ಟ್ರೇಲರ್ ಭಾರಿ ಕುತೂಹಲ ಹುಟ್ಟಿಸುತ್ತಿದೆ. ಚಿತ್ರದ ರೀಮೇಕ್ ಮಾಡಲು ಡಿಮ್ಯಾಂಡ್ ಸೃಷ್ಟಿಯಾಗೋಕೆ ಕಾರಣ, ಚಿತ್ರದ ಟ್ರೇಲರ್.

  ತೆಲುಗಿನಲ್ಲಿ ಸಾಯಿಕುಮಾರ್, ತಮಿಳಿನಲ್ಲಿ ಸಿಂಬು ಮ್ಯಾನೇಜರ್ ಮತ್ತು ಪಿ.ಸಿ.ಗಣೇಶ್, ಮಲಯಾಳಂನಲ್ಲಿ ಸುನಿಲ್ ಹಾಗೂ ಪ್ರತಿಷ್ಠಿತ ತ್ರಿಶೂಲ್ ಬ್ಯಾನರ್ ಅಪ್ರೋಚ್ ಮಾಡಿವೆ. ಫೈನಲ್ ಆಗಿಲ್ಲ ಎಂದು ಹೇಳಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ.

  ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿರೋ ಚಿತ್ರ ಜೆಂಟಲ್‍ಮನ್. ಚಿತ್ರದ ನಿರ್ದೇಶಕ ಜಡೇಶ್ ಕುಮಾರ್. ಒಳ್ಳೆಯ ಕಂಟೆಂಟ್ ಇದ್ದರೆ ಎಲ್ಲಿದ್ದರೂ ಗಮನ ಸೆಳೆಯುತ್ತೆ ಸಿನಿಮಾ ಎಂದು ಖುಷಿಯಾಗಿದ್ದಾರೆ ಡೈರೆಕ್ಟರ್

 • ಜೆಂಟಲ್ ಮ್ಯಾನ್ ತಮಿಳಿಗೆ

  gentleman goes to tamil

  ದಿನಕ್ಕೆ "18 ಗಂಟೆ ನಿದ್ದೆ ಮಾಡುವ ವ್ಯಕ್ತಿಯ" ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸಿರುವ  "ಜೆಂಟಲ್ ಮ್ಯಾನ್" ಚಿತ್ರ ತಮಿಳಿಗೆ ರಿಮೇಕ್ ಆಗಲಿದೆ.

  ಶುಕ್ರವಾರ (ಫೆ.7) ತೆರೆಕಂಡ ರಾಜಾಹುಲಿ‌ ಖ್ಯಾತಿಯ ಗುರು ದೇಶಪಾಂಡೆ‌ ನಿರ್ಮಾಣದ, ಪ್ರಜ್ವಲ್ ದೇವರಾಜ್ ನಟನೆಯ  "ಜಂಟಲ್ ಮ್ಯಾನ್" ಚಿತ್ರ ವೀಕ್ಷಕರ ಮನ್ನಣೆ ಹಾಗೂ ವಿಮರ್ಶಕರ ಪ್ರಶಂಸೆ ಪಡೆದಿದೆ.

  ಚಿತ್ರವನ್ನು ಶುಕ್ರವಾರ ರಾತ್ರಿ ಚೆನ್ನೈನ ಲೈಕ ಪ್ರೋಡಕ್ಷನ್ ಪ್ರಿವ್ಯೂ  ಚಿತ್ರಮಂದಿರದಲ್ಲಿ ತಮಿಳಿನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದ  

   "ಥೇನಾಂಡಾ ಮೂವೀಸ್" ರಾಮನಾರಾಯಣ್ ಅವರ ಪುತ್ರ ಮುರಳಿ ಅವರು, ವೀಕ್ಷಣೆ ಮಾಡಿದ್ದಾರೆ. ಚಿತ್ರ ಅವರಿಗೆ ಬಹಳ ಇಷ್ಟವಾಗಿದೆ. ಚಿತ್ರ ವಿಭಿನ್ನ ಕಥಾವಸ್ತು ಹೊಂದಿದೆ. ಮನುಷ್ಯರನ್ನು ಕಾಡುವ ನಿದ್ರಾಹೀನತೆ ಕಾಯಿಲೆ ಬಗ್ಗೆ ಜನರಿಗೆ ವಿಸ್ತೃತವಾಗಿ ಪರಿಚಯಿಸುವುದರ ಜೊತೆಗೆ ಜಾಗೃತಿಯೂ ಮೂಡಿಸುತ್ತದೆ. ಹಾಗೆಯೇ, ಜನರ ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ಚಿತ್ರ ಮೂಡಿಬಂದಿದೆ. ಹೀಗಾಗಿ ಜೆಂಟಲ್ ಮ್ಯಾನ್ ಅನ್ನು ಸ್ಟಾರ್ ನಟರಾದ ಜಯಂ ರವಿ ಅಥವಾ ವಿಜಯ್ ಸೇತುಪತಿ ಅವರೊಂದಿಗೆ ತಮಿಳಿಗೆ ರೀಮೇಕ್ ಮಾಡುವ ಆಲೋಚನೆಯಲ್ಲಿ ಮುರಳಿ ಇದ್ದಾರೆ.  ಚಿತ್ರದ ರಿಮೇಕ್ ಹಕ್ಕುಗಳನ್ನು ಖರೀದಿಸುವುದಾಗಿಯೂ ಗುರುದೇಶಪಾಂಡೆ ಅವರಿಗೆ ಹೇಳಿದ್ದಾರೆ.‌ ಆದ್ದರಿಂದ ಚಿತ್ರ ಶೀಘ್ರವೇ ತಮಿಳಿಗೆ ರಿಮೇಕ್ ಆಗುವ ಸಾಧ್ಯತೆ ಹೆಚ್ಚಿದೆ.

  ಈ ಕುರಿತು ಚಿತ್ರದ ನಿರ್ಮಾಪಕ‌ ಗುರು ದೇಶಪಾಂಡೆ ಪ್ರತಿಕ್ರಿಯಿಸಿ, ಚಿತ್ರ ಯಶಸ್ಸು ಸಾಧಿಸುತ್ತದೆ. ಜನರ‌ ಮೆಚ್ಚುಗೆ ಪಡೆಯಲಿದೆ ಎಂಬ ದೃಢ ವಿಶ್ವಾಸ ನಮ್ಮಲ್ಲಿ ಮನೆಮಾಡಿತ್ತು. ಇದೀಗ ಚಿತ್ರ ಬಿಡುಗಡೆಯಾಗಿ, ಜನರಿಗೆ ಇಷ್ಟವಾಗಿದೆ. ತಮಿಳಿನ ಖ್ಯಾತ ನಿರ್ಮಾಪಕರಾದ ಮುರಳಿ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ಸಹ ಬಯಸಿದ್ದಾರೆ. ಚಿತ್ರದ ಹಕ್ಕುಗಳನ್ನು ಖರೀದಿಸುವುದಾಗಿ ಹೇಳಿದ್ದಾರೆ.  ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆಯಿಂದ ಖುಷಿಯಾಗಿತ್ತು. ಇದೀಗ ತಮಿಳಿಗೂ ರಿಮೇಕ್ ಆಗುತ್ತಿರುವ ವಿಷಯ ತಿಳಿದು ಸಂತಸ ಮತ್ತಷ್ಟು ಹೆಚ್ಚಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

   ಥೇನಾಂಡಾ ಮೂವೀಸ್  ರಾಮನಾರಾಯಣ್ ಅವರು ಕನ್ನಡದಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಪುತ್ರ ಮುರಳಿ ಸಹ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಮುರಳಿ ಅವರು ಇಳೈಧಳಪತಿ‌ ಖ್ಯಾತಿಯ ವಿಜಯ್ ನಟನೆಯ "ಮೆರ್ಸಲ್" ಸಿನಿಮಾ ಮಾಡಿದ್ದಾರೆ. ಆ ಚಿತ್ರ ದೊಡ್ಡ ಸಕ್ಸಸ್ ಸಾಧಿಸಿತ್ತು.

 • ಜೆಂಟಲ್ಮನ್ ಚಿತ್ರದಲ್ಲಿರೋದು ವೀರ್ಯಾಣು ದಂಧೆಯ ನಿಗೂಢ ಕಥೆ

  gentleman image

  ಅರೆ.. ಇಂಥಾದ್ದೊಂದು ದಂಧೆ ಇದೆಯಾ.. ಎಂದು ಅನುಮಾನಪಡುವ, ಆದರೆ, ಜಗತ್ತಿನಲ್ಲಿ ರಣಭಯಂಕರವಾಗಿ ನಡೆಯುತ್ತಿರುವ ವಿಚಿತ್ರ ದಂಧೆಯಿದು. ಅಂದರೆ ಮಕ್ಕಳು ಬೇಕಿರುವವರು ಐವಿಎಫ್ನಲ್ಲಿ ಮಕ್ಕಳು ಹಡೆಯುತ್ತಾರಲ್ಲ.. ಅಂತಹ ದಂಪತಿ ತಮಗೆ ಬೇಕಾದ ಮಾದರಿಯ ವ್ಯಕ್ತಿಯ ವೀರ್ಯಾಣು ಅಥವಾ ಅಂಡಾಣುವನ್ನು ಪಡೆಯಲು ಬಯಸುತ್ತಾರೆ. ಅಂತಹ ದಾನಿಗಳು ಸಿಕ್ಕದೇ ಹೋದಾಗ, ಅದಕ್ಕೆ ಸೂಟ್ ಆಗುವ ವ್ಯಕ್ತಿಗಳನ್ನು ಅಪಹರಿಸಿ ಅವರ ಮೂಲಕ ವೀರ್ಯಾಣು ಪಡೆದು ಸಾಗಿಸುವ ದಂಧೆಯಿದು. ಸದ್ಯಕ್ಕೆ ಜಗತ್ತಿನಲ್ಲಿ ನಡೆಯುತ್ತಿರುವ ಅತಿ ದೊಡ್ಡ ಭೂಗತ ಚಟುವಟಿಕೆಗಳಲ್ಲಿ ಇದೂ ಒಂದು.

  ಕನ್ನಡದಲ್ಲಿ ಬರುತ್ತಿರೋ ಜೆಂಟಲ್ಮನ್ ಸಿನಿಮಾ, ಇಂತಹ ಅಪರೂಪದ ಕಥೆಯನ್ನು ಆಯ್ಕೆ ಮಾಡಿಕೊಂಡಿದೆ. ದಿನಕ್ಕೆ 18 ಗಂಟೆ ನಿದ್ರಿಸುವ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ನಿಂದ ಬಳಲುವ ನಾಯಕನದ್ದೇ ಸ್ಪೆಷಲ್ ಎಂದರೆ, ಚಿತ್ರದ ಕಥೆ ಇನ್ನೂ ಸ್ಪೆಷಲ್.

  ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕ. ಈ ಸಬ್ಜೆಕ್ಟ್ ಎಂದು ಡಿಸೈಡ್ ಆದ ಮೇಲೆ, ಇದರ ಮೇಲಿನ ಸಂಶೋಧನೆಗಾಗಿಯೇ 6 ತಿಂಗಳು ಕೆಲಸ ಮಾಡಿದೆ. ಮನರಂಜನೆಯ ಜೊತೆಯಲ್ಲೇ ಇದು ಕನ್ನಡ ಪ್ರೇಕ್ಷಕರಿಗೆ ವಿನೂತನ ಅನುಭವ ಕೊಡುತ್ತೆ ಎನ್ನುತ್ತಾರೆ ಜಡೇಶ್ ಕುಮಾರ್.

  ರಾಜಾಹುಲಿ ಗುರು ದೇಶಪಾಂಡೆ ನಿರ್ಮಾಣದ ಚಿತ್ರದ ಟ್ರೇಲರ್ ಈ ವಿಭಿನ್ನ ಕಾರಣಕ್ಕಾಗಿಯೇ ಟ್ರೆಂಡ್ ಆಗುತ್ತಿದೆ. ಸೆನ್ಸೇಷನ್ ಸೃಷ್ಟಿಸುತ್ತಿದೆ.

 • ಜೆಂಟಲ್‍ಮನ್ ಡೈನಮಿಕ್ ಪ್ರಿನ್ಸ್ ಆಟಕ್ಕೆ ಆ್ಯಕ್ಷನ್ ಪ್ರಿನ್ಸ್ ಪವರ್

  Dhruva Sarja To Release The Songs Of prajwal Devaraj's 'Gentleman'

  ಇವರು ಡೈನಮಿಕ್ ಪ್ರಿನ್ಸ್. ಅರ್ಥಾತ್ ಪ್ರಜ್ವಲ್‌ ದೇವರಾಜ್. ಅವರು ಆ್ಯಕ್ಷನ್  ಪ್ರಿನ್ಸ್. ಅಂದ್ರೆ ಧ್ರುವ ಸರ್ಜಾ. ಇವರಿಬ್ಬರೂ ಒಟ್ಟಿಗೇ ಌಕ್ಟ್ ಮಾಡುತ್ತಿದ್ದಾರಾ ಎಂದೆಲ್ಲ ಕೇಳಬೇಡಿ. ಆ ಶುಭ ಘಳಿಗೆ ಇನ್ನೂ ಬಂದಿಲ್ಲ. ಆದರೆ, ಡಿಫರೆಂಟ್ ಕಾನ್ಸೆಪ್ಟ್‌ ಮೂಲಕವೇ ಟ್ರೆಂಡ್ ಸೃಷ್ಟಿಸಿರುವ ಜಂಟಲ್‌ಮನ್‌ ಚಿತ್ರದ ಟ್ರೇಲರ್ ಬಿಡುಗಡೆಗೆ ಧ್ರುವ ಸರ್ಜಾ ಮುಖ್ಯ ಅತಿಥಿ.

  ಜನವರಿ 6ರಂದು ಬೆಳಗ್ಗೆ 11 ಗಂಟೆಗೆ ಆನಂದ್‌ ಆಡಿಯೋ ಯೂ ಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್‌ ರಿಲೀಸ್ ಆಗುತ್ತಿದೆ. ಅದೇ ದಿನ 12 ಗಂಟೆಗೆ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಟ್ರೇಲರ್‌ ಬಿಡುಗಡೆಯೂ ಇದೆ. ಆ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಚೀಫ್ ಗೆಸ್ಟ್.

  ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುವ ನಾಯಕನಾಗಿ ನಟಿಸಿದ್ದಾರೆ ಪ್ರಜ್ವಲ್‌. ಅಂದರೆ ದಿನಕ್ಕೆ 18 ಗಂಟೆ ನಿದ್ರೆ, 6 ಗಂಟೆ ಮಾತ್ರ ಎಚ್ಚರ ಇರುವ ನಾಯಕ. ಆ 6 ಗಂಟೆಗಳಲ್ಲಿ ಹೀರೋ ಲವ್ ಮಾಡಬೇಕು, ಫೈಟ್ ಮಾಡಬೇಕು. ಅಕಸ್ಮಾತ್ ಆಗಿ ಸಿಲುಕಿಕೊಳ್ಳೋ ಸಮಸ್ಯೆಯಿಂದ ಹೊರಬರಬೇಕು. ಜಾಗ ಸಿಕ್ಕರೆ ಗೊರಕೆ ಹೊಡೆಯೋ ಹೀರೋ ಅದರಿಂದ ಹೇಗೆ ಹೊರಬರುತ್ತಾನೆ ಅನ್ನೋದೇ ಚಿತ್ರದ ಕಥೆ.

  ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ ಈ ಚಿತ್ರಕ್ಕೆ ನಿರ್ಮಾಪಕ. ಜಡೇಶ್‌ ಕುಮಾರ್‌ ನಿರ್ದೇಶಕ. ಐ ಲವ್ ಯೂ ಖ್ಯಾತಿಯ ನಿಶ್ವಿಕಾ ನಾಯ್ಡು ಹೀರೋಯಿನ್. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಚಿತ್ರದಲ್ಲಿ ಪೊಲೀಸ್ ಆಫೀಸರ್. ಉಳಿದ ಡೀಟೈಲ್ಸ್.. ಏನಿದ್ದರೂ ಜನವರಿ 6ಕ್ಕೆ ಕೊಡ್ತಾರೆ.

 • ಡೈರೆಕ್ಟರ್ ದಿನಕರ್ ಜೊತೆ ಒಂದ್ ಸೆಲ್ಫಿ

  dinakar talks about life jothe ondu selfie

  ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರವನ್ನು ರಿಲೀಸ್‍ಗೆ ರೆಡಿ ಮಾಡಿರುವ ದಿನಕರ್ ತೂಗುದೀಪ್ & ಟೀಂ, ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ಮಾಡುತ್ತಿದೆ. 7 ವರ್ಷಗಳ ನಂತರ ಸಿನಿಮಾ ನಿರ್ದೇಶನಕ್ಕೆ ಇಳಿದಿರುವ ದಿನಕರ್, ಚಿತ್ರದ ಬಗ್ಗೆ ಮಾತನಾಡಿದ್ದಾರೆ.

  ಚಿತ್ರದಲ್ಲಿ 3 ಪಾತ್ರಗಳೇ ಹೈಲೈಟ್. ಪ್ರಜ್ವಲ್ ವಿರಾಟ್ ಎಂಬ ಹೆಸರಿನ ಮಲ್ಟಿಮಿಲಿಯನೇರ್ ಪಾತ್ರ. ಲೈಫಲ್ಲಿ ಎಲ್ಲ ಇದ್ದರೂ, ಏನೋ ಇಲ್ಲ ಎಂಬ ಕೊರಗಿನಲ್ಲಿರುವ ವ್ಯಕ್ತಿ.

  ಪ್ರೇಮ್ ಅವರದ್ದು ನಕುಲ್ ಎಂಬ ಎಂಎನ್‍ಸಿ ಉದ್ಯೋಗಿಯ ಪಾತ್ರ. ಅವರಿಗೆ ನಿರ್ದೇಶಕನಾಗಬೇಕು ಎಂಬ ಕನಸು.

  ಹರಿಪ್ರಿಯಾ ಅವರದ್ದೂ ಒಂದು ಸಮಸ್ಯೆ ಇರುತ್ತೆ. ಅವರೂ ಒಂದು ಕೊರಗಿನಲ್ಲೇ ಇರ್ತಾರೆ. 

  ಹೀಗೆ ಕೊರಗುವ ಜೀವಗಳೆಲ್ಲ ಒಂದು ಕಡೆ ಸೇರುತ್ತವೆ. ಗೋವಾದಲ್ಲಿ ಪರಿಚಯವಾಗೋ ಮೂವರನ್ನೂ ಕನ್ನಡಿಗರು ಎಂಬ ವಿಷಯ ಒಗ್ಗೂಡಿಸುತ್ತೆ. ಮೊದಲರ್ಧ ಸಮಸ್ಯೆಗಳಾದರೆ, ದ್ವಿತೀಯಾರ್ಧ ಪರಿಹಾರ. ಸಿನಿಮಾ ನೋಡುವಾಗ ಪ್ರತಿಯೊಬ್ಬರೂ ತಮ್ಮ ಜೊತೆ, ತಮ್ಮ ಲೈಫ್ ಜೊತೆ ಒಂದ್ ಸೆಲ್ಫಿ ತಗೋತಾರೆ ಅನ್ನೋ ಕಾನ್ಫಿಡೆನ್ಸ್ ದಿನಕರ್ ಅವರಿಗೆ ಇದೆ.

  ಸಮೃದ್ಧಿ ಮಂಜುನಾಥ್ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನಿರ್ದೇಶನವಿದೆ.

 • ಡ್ರಗ್ಸ್ ಆಕ್ಸಿಡೆಂಟ್ - ಪ್ರಜ್ವಲ್, ದಿಗಂತ್ ಹೇಳಿದ್ದೇನು..?

  one accident two stars

  ಇಂದು ಬೆಳಗ್ಗೆಯಷ್ಟೇ ಬೆಂಗಳೂರಿನ ಸೌತ್ ಎಂಡ್ ಸರ್ಕಲ್​ನಲ್ಲಿ ಒಂದು ಅಪಘಾತವವಾಯ್ತು. ಖ್ಯಾತ ಉದ್ಯಮಿ ಆದಿಕೇಶವುಲು ಅವರ ಮೊಮ್ಮಗ ವಿಷ್ಣು ಅವರಿದ್ದ ಕಾರು, ಓಮ್ನಿ ಕಾರ್​ಗೆ ಡಿಕ್ಕಿ ಹೊಡೆದಿತ್ತು. ಆಗ ಕಾರ್​ನಲ್ಲಿ ವಿಷ್ಣು ಅವರ ಜೊತೆಗೆ ಇಬ್ಬರು ಸಿನಿಮಾ ಸ್ಟಾರ್​ಗಳಿದ್ದರು. ಅವರು ವಿಪರೀತ ಕುಡಿದಿದ್ದರು. ಹಾಗೂ ಡ್ರಗ್ಸ್​ ನಶೆಯಲ್ಲಿದ್ದರು ಎಂದು ಪೊಲೀಸ್ ಮೂಲಗಳು ಹೇಳಿದವು. ಕಾರ್​ನಲ್ಲಿ 200 ಗ್ರಾಂ ಗಾಂಜಾ ಕೂಡಾ ಸಿಕ್ಕಿತ್ತು.

  ಅಷ್ಟಾಗಿದ್ದೇ ತಡ, ಕೆಲವರು ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಅವರ ಹೆಸರು ಹೇಳಿದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಬ್ಬರೂ ನಟರು ತಾವು ಕಾರ್​ನಲ್ಲಿ ಇರಲಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ. ವಿಷ್ಣು ಸ್ನೇಹಿತ ಹೌದು. ಆದರೆ, ಕಾರ್​ನಲ್ಲಿ ನಾವಿರಲಿಲ್ಲ. ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಮಗೆ ಡ್ರಗ್ಸ್ ಚಟವೂ ಇಲ್ಲ. ನಮ್ಮ ಮರ್ಯಾದೆ ತೆಗೆಯಬೇಡಿ ಎಂದಿದ್ದಾರೆ. ಸುಮ್ಮ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸದಂತೆ ಮಾಧ್ಯಮಗಳಿಗೆ ಕಿವಿಮಾತು ಹೇಳಿದ್ದಾರೆ.

 • ದರ್ಶನ್ ಅನುಪಸ್ಥಿತಿಯಲ್ಲಿ ಇನ್ಸ್‍ಪೆಕ್ಟರ್ ವಿಕ್ರಂ ಆಡಿಯೋ ರಿಲೀಸ್

  inspector vikram audio launch without darshan's presence

  ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದ ಆಡಿಯೋ ಅದ್ಧೂರಿಯಾಗಿ ರಿಲೀಸ್ ಆಗಿದೆ. ಹುಬ್ಬಳ್ಳಿಯಲ್ಲಿ. ಪ್ಲಾನ್ ಪ್ರಕಾರ ಆಡಿಯೋ ಬಿಡುಗಡೆಗೆ ದರ್ಶನ್ ಅವರೂ ಕೂಡಾ ಹೋಗಬೇಕಿತ್ತು. ಆದರೆ ಕಡೆಯ ಗಳಿಗೆಯಲ್ಲಿ ಕಾರ್ಯಕ್ರಮ ತಪ್ಪಿಸಿಕೊಂಡಿದ್ದಾರೆ ದರ್ಶನ್.

  ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಗದೀಶ್ ಶೆಟ್ಟರ್, ಆಡಿಯೋ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಆದರೆ.. ದರ್ಶನ್ ಆಗಮನದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಕೂಗಾಟಕ್ಕೆ ಮುಂದಾದಾಗ ನಿರೂಪಕಿ ಅನುಶ್ರೀ ಅಭಿಮಾನಿಗಳನ್ನು ಸಮಾಧಾನಿಸಿದರು. ಅಂದಹಾಗೆ ಚಿತ್ರದಲ್ಲಿ ದರ್ಶನ್ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ. ಅದೂ ಭಗತ್ ಸಿಂಗ್ ಪಾತ್ರದಲ್ಲಿ.

  ಪ್ರಜ್ವಲ್ ಜೊತೆಗೆ ಭಾವನಾ ಮೆನನ್ ನಾಯಕಿಯಾಗಿದ್ದಾರೆ. ನರಸಿಂಹ ಈ ಚಿತ್ರದ ನಿರ್ದೇಶಕ. ಚಿತ್ರತಂಡಕ್ಕೆ ನಟಿ ಅಶಿಕಾ ರಂಗನಾಥ್, ಡಾಲಿ ಧನಂಜಯ್, ದೀಪಿಕಾ ದಾಸ್, ಅನೂಪ್ ಸೀಳಿನ್ ಮೊದಲಾದವರು ಶುಭ ಕೋರಿದರು. ದೇವರಾಜ್ ಕುಟುಂಬವೇ ಕಾರ್ಯಕ್ರಮದಲ್ಲಿ ಹಾಜರಿತ್ತು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery