` rip, - chitraloka.com | Kannada Movie News, Reviews | Image

rip,

 • ಶ್ರೀದೇವಿ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ

  sandalwood stars's condolences to sridevi

  ಭಾರತೀಯ ಚಿತ್ರರಂಗದ ಧ್ರುವತಾರೆ ಶ್ರೀದೇವಿ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಕನ್ನಡದಲ್ಲಿ ರೆಬಲ್‍ಸ್ಟಾರ್ ಅಂಬರೀಷ್, ಸುಮಲತಾ, ಕಿಚ್ಚ ಸುದೀಪ್, ದ್ವಾರಕೀಶ್, ಶ್ರೀನಾಥ್, ಬಿ.ಸರೋಜಾದೇವಿ.. ಮೊದಲಾದವರು ಶ್ರೀದೇವಿ ಜೊತೆ ಕೆಲಸ ಮಾಡಿರುವ ಕಲಾವಿದರು. 

  ಶ್ರೀದೇವಿ ಎಂದರೆ, ಸೆಟ್‍ನಲ್ಲಿ ಲವಲವಿಕೆಯಿಂದ ಓಡಾಡುತ್ತಿದ ಹುಡುಗಿಯೇ ನೆನಪಿಗೆ ಬರುತ್ತಾಳೆ. ಆಕೆಯ ಕುಟುಂಬಕ್ಕೆ ದೇವರು ಈ ದುಃಖ ಭರಿಸುವ ಶಕ್ತಿ ನೀಡಲಿ - ಅಂಬರೀಷ್, ನಟ

  ನಾನು ನಟಿಸಿದ ಮೊದಲ ಸಿನಿಮಾದಲ್ಲಿ ಶ್ರೀದೇವಿ ನಾಯಕಿ. ಅದ್ಭುತ ಸುಂದರಿ, ಅದ್ಭುತ ನಟಿ. ಅನೇಕರಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವ ಅವರದ್ದು. - ಸುಮಲತಾ, ನಟಿ

  ನಾನು ಶ್ರೀದೇವಿ ಜೊತೆ ನಟಿಸಲು ಅವಕಾಶ ಪಡೆದಿದ್ದ ಅದೃಷ್ಟವಂತ. ಅವರ ಜೊತೆ ಕಳೆದ ಸಮಯವನ್ನು ಯಾವಿತ್ತಿಗೂ ಮರೆಯುವುದಿಲ್ಲ. ಕೆಲವು ಸಂಗತಿಗಳನ್ನು ನಂಬುವುದು ಕಷ್ಟ. ಅವರ ಸಾವು ನನ್ನನ್ನು ಘಾಸಿಗೊಳಿಸಿದೆ - ಸುದೀಪ್, ನಟ

  ಅವರೊಬ್ಬ ಅದ್ಭುತ ನಟಿ. ಅವರ ನೃತ್ಯಕ್ಕೆ ನಾನು ಮನಸೋತಿದ್ದೆ - ಶಿವರಾಜ್ ಕುಮಾರ್, ನಟ

  ಭಾರತೀಯ ಸಿನಿಮಾ ರಂಗವೇ ಇಂದು ದುಃಖದಲ್ಲಿದೆ. ಪ್ರಬುದ್ಧ ನಟಿಯೊಬ್ಬರನ್ನು ಕಳೆದುಕೊಂಡು ಅನಾಥವಾಗಿದೆ - ಪುನೀತ್ ರಾಜ್‍ಕುಮಾರ್, ನಟ

  ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ನಂಬಲು ಸಾಧ್ಯವಾಗಲಿಲ್ಲ. ಫೇಕ್ ನ್ಯೂಸ್ ಆಗಿರಲಿ ಎಂದು ಮನಸ್ಸು ಕೇಳುತ್ತಿತ್ತು. ಅಭಿಮಾನಿಗಳ ಹೃದಯಲ್ಲಿ ಅವರು ಯಾವಾಗಲೂ ಶಾಶ್ವತವಾಗಿರುತ್ತಾರೆ - ಯಶ್, ನಟ

  ರಂಭೆ, ಊರ್ವಶಿ, ಮೇನಕೆಯರನ್ನು ಯಾರು ನೋಡಿದ್ದರೋ ಗೊತ್ತಿಲ್ಲ. ನಮ್ಮ ಕಣ್ಣೆದುರು ನೋಡಿದ್ದ ರಂಭೆ, ಊರ್ವಶಿ, ಮೇನಕೆಯರ ಒಟ್ಟು ರೂಪವೇ ಶ್ರೀದೇವಿ - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು

  ನಟಿ ಎನಿಸಿಕೊಳ್ಳುವವರು ಹೀಗೆಯೇ ಇರಬೇಕು ಎನ್ನುವ ಮಾದರಿಯ ನಟಿ ಶ್ರೀದೇವಿ. ಅವರ ಕಣ್ಣು ಅವರಿಗೆ ದೇವರು ಕೊಟ್ಟ ವರ. - ಎಸ್.ವಿ.ರಾಜೇಂದ್ರಸಿಂಗ್ ಬಾಬು, ಚಲನಚಿತ್ರ ಅಕಾಡೆಮಿ ಅಧ್ಯಕ್ಷರು

  ನನ್ನ ಒಬ್ಬ ಒಳ್ಳೆಯ ಸ್ನೇಹಿತೆ ನನ್ನನ್ನು ಅಗಲಿದ್ದಾರೆ - ರಜಿನಿಕಾಂತ್, ನಟ

  ನನ್ನ ಮನಸ್ಸು ಅವರ ಸಾವನ್ನು ಇನ್ನೂ ನಂಬುತ್ತಿಲ್ಲ. - ಸುಧಾರಾಣಿ, ನಟಿ

 • AR Babu No More

  ar babu no more

  Kannada film veteran director AR Babu has expired today in the morning around 8.55 AM. He was admitted to Apollo hospital and was under the Dialysis. He was aged 56 years.

  AR Babu had directed Chora Guru Chandala Shishya, Hello Yama, Cooli Raja, Khalanayaka, Jeeboomba, Agodella Olledakke, Marujanma , Chamkaisi Chindi Udaysi , Sapno Ki Rani and other movies.

 • Kashinath Was An institution

  actor, director, producer kashinath

  Kashinath, who died today, cannot be just described as an actor-director-producer. He was an institution in himself. You can call him a deemed university if you like. And his it was not just about films that he was knowledgeable about. Through his films, he gave his life's message. All his films are called bold, entertaining etc. But if you look closely, his films are about women empowerment, about subtle family relationships, about friendship and being human. But he said and portrayed these things in such an entertaining way that it became imbibed in the audience's minds without them realizing it. 

  kashinath_18.jpgTwo examples of him would tell how he saw things. More than 25 years ago, he suggested that traffic lights should have countdown time so that motorists can switch off their vehicles and save fuel. The idea was adopted by Bengaluru traffic police later. Even in simple things in life, he was very organised. When writing down or saving a phone number of a person he met, he not only saved their names but also their work and other characteristics. So if he needed to find people from a particular area, he had to just search the area name. 

  kashinath4.jpgThe number of films he acted in over the last 40 years is not many. It is less than 50. But the impact they have had on the Kannada film industry is immense. He showed that films can be made without being part of the mainstream film industry. He was not only independent in thought but also in film making issues and business. His early films were remade in Hindi and Malayalam and dubbed into Telugu. 

  kashinath5.jpgIn the last few years he was once again noticed by Sandalwood as an actor. It was more than 10 years ago that he directed his last film Appachchi. After that he remained outside popular media for sometime. He returned for a stint on the small screen. He was seen alongside Ganesh in Zoom recently. In the multistarrer Chowka in 2017 by Tharun Sudhir, Kashinath's role became the highlight. It seemed that Sandalwood had rediscovered the potential of Kashinath. He was also playing the lead role in Olu Muniswami which was set for release. Just when it seemed that we will see more of Kashinath in the coming days, he has left this world.

  Related Articles :-

  ನಟ, ನಿರ್ದೇಶಕ, ನಿರ್ಮಾಪಕ ಕಾಶೀನಾಥ್ ಇನ್ನಿಲ್ಲ

  Kashinath No More

 • M N Vyasa Rao To Be Cremated Today

  mn vyasa to be cremated today

  M N Vyasa Rao who died on Sunday morning due to massive heart attack will be cremated today evening in Bangalore.

  M N Vyasa Rao who was a bank employee made his debut as a lyricist with Puttanna Kanagal's 'Shubhamangala' in 1975. He had written 'Naakondla Naaku' and 'Suryangoo Chandrangoo' songs for the film and both the songs were huge hits. After that M N Vyasa Rao went on to write hundreds of songs. His other famous songs were 'Chanda Chanda' in 'Manasa Sarovara', 'Yugayugagale Saagali' from 'Hrudaya Geethe' and others. 

  Vyasa Rao died on Sunday morning. As his daughter resides in America, the cremation was scheduled on Tuesday and the cremation will be held, after Vyasa Rao's daughter arrives from America.

 • Mandyada Gandu Ambareesh No More

  mandyada gandu ambareesh no more

  Mandyada Gandu, Karna, Jaleela, Kanwarlaala, or simply call him rebel star M H Ambareesh and a friend of numerous personalities from various fields, is no more.

  The star actor turned politician was suffering from breathing problem since four years and had later developed kidney related ailments. He was 66 years old and survived by his wife Sumalatha Ambareesh and his son Abhishek Ambareesh.

  He suffered a cardiac arrest and was soon shifted to Vikram Hospital where he breathed his last. A flamboyant personality was elected to Lok Sabha on three occasion, and once served as the union minister as state minister for information technology and later resigned the post due to Cauvery river water agitation.

  A close friend of Super Star Rajinikanth has expressed saying that he was wonderful human being who was his best friend. “I have lost you today and will miss you. Rest in peace.," Rajinikanth has said. Malavalli Huchegowda Ambareesh, who made his acting debut in Nagarahaavu has immortalised the character of  'jaleela’.

  The star actor turned politician was suffering from lung infection and was also diagnosed with kidney related ailments. The actor who is the grandson of acclaimed musician Peteel Chowdaiah was about to get his kidney transplantation done but had been delaying it for a while and was to get it done post his son's birthday.

  There was even talks to get him admittedly to Singapore hospital for further medication and kidney transplanted after finding the right donor. However, it is said that the ‘karna’ as he is also referred to as by his followers kept delaying it.

  Several hits films to his credit, Ambareesh has acted in popular films such as Nagarahavu, Paduvarahalli Pandavaru, Anta, Tony, Hrudaya Hadithu, Odahuttidavaru, Masanada Hoovu, Yelu Suttina Kote, Olavina Vudugare, Mannina Doni and scores of others. He recently made a comeback in the the film 'Ambi Ninge Vayassaytho’.

  He had also served as state minister and had recently quit from active politics and was eagerly waiting for his son's debut movie 'Amar’ to release.

  As an actor, he has been awarded with state film awards on a couple of times including from neighbouring state. A close friend of many renowned actors and politicians and personalities from other fields, shared a special great bonding with his late friend and actor Dr. Vishnuvardhan.

  Shocked by the sudden news, the entire Kannada film industry is mourning it's best actor who has always been the best friend who would help the needy in his own style. The Kanwarlal from Anata will be missed dearly.

  Related Articles :-

  Meeting Ambi At Malaysia : The 48-Hour Exclusive - Part 1

  Ambi In Malaysia - The Reporting Begins - Exclusive

  Confusion At The Airport Waiting For Ambi - Exclusive

  Ambareesh Shopping and Bargaining in Malaysia

  Ambareesh Shopping In Malaysia - Exclusive

  Ambareesh Malaysian Friends Party Begins

  Ambareesh FareWell Party At Malaysia - Exclusive

 • Producer Jayashri Devi No More

  producer jayashri devi no more

  Noted producer Jayasri Devi, has breathed her last in Hyderabad on Wednesday morning. She was 60. It is learnt that she suffered cardiac arrest at a private hospital, and her mortal remains are being brought back to Bengaluru.

  Among the very few female producers in the Kannada film industry, Jayasri Devi produced her first with Kona Edaithe, and then followed it up with Bhavani, Nammoora Mandara Hoove, Amruthavarshini, Sri Manjunatha, Nishabda and many more.

  Her most recent production was that of 'Mukunda Murari’ which featured Real Star Upendra and Kichcha Sudeepa in the lead. Chitraloka prays for the departed soul.

 • RENOWNED FILM DIRECTOR M S RAJASHEKAR NO MORE

  veteran director ms rajashekar no more

  The veteran Kannada film director M S Rajashekar known for his works such as 'Dhruva Thare’, ‘Rathasapthami,’ ‘Mana Mecchida Hudugi’, 'Nanjundi Kalyana' and many more, has breathed his last here on Monday evening. The filmmaker is survived by his son Raghavendra.

  After working as assistant with noted director Vijay, he made his his directorial debut with 'Dhruva Thare' which starred Dr. Rajkumar. He went onto direct two of the first three movies of Shivarajkumar, for which the actor was later fondly to be known as 'Hat-Trick Hero’.

  Further, he also directed Raghavendra Rajkumar in his debut movie 'Nanjundi Kalyana’ which ran for a record time at the box office following which they again collaborated for the the ‘Gajapathi Garvabhanga’ and a couple more. He has directed 30 plus movies with maximum starring the two elder sons of Dr. Rajkumar. His last was fim 'Ravi Shastri’.

  He was admitted to the hospital to Vikram hospital after he complained of breathing problem following lung infection, for which he was put on life support before he was declared dead.

  His son Raghavendra (Dharani) has directed the Kannada film Dhool. Actors, producers, directors and technicians have expressed their sorrow following the demise of the veteran film personality.

 • Sridevi said click only two photos! – KM Veeresh Experience

  sridevi said click only two photos

  Actress Sridevi who shot to fame in Telugu and Tamil industries and later ruled Bollywood film industry had an heart attack and expired earlier today in Dubai.

  Being a photo journalist in Bengaluru, I had the opportunity to click her photos only once. In 1995 Sridevi and Anil Kapoor were shooting for a Bollywood film in Bengaluru's Abhiman Studio. I got this information and went straight to Abhiman studio. It was a break time and Sridevi was sitting with Anil Kapoor. I approached her and requested that I need some pics of her for magazines. She told me to come the next day.

  I returned the next day with my camera. She had not expected that I would return on the time she had told. She said let’s take photos after the film shot. That shot took nearly two hours. After that she called me and said that she will pose for only two clicks. I agreed and we went inside the shooting sets and I selected a place where the lighting was good and she stood there posing. I managed to click 5-6 snaps within seconds.

  My friend Srinivasan who runs the monthly magazine Hamsa Raaga was a big fan of Sridevi. I used to provide cover photos for that magazine. Whenever we used to meet he would always talk about Sridevi. Such was his devotion to her. After clicking photos of Sridevi I got some of the photos printed and took it to him. I was eager to see his reaction. I showed him all the the photos I had taken along except photos of Sridevi which I had kept in a separate cover. He has selected all the pics and I asked him how much he will pay if I gave him one extraordinary photo.  For every cover page photo, he used pay me Rs. 150. He said he would pay whatever I asked for the "extraordinary" photo. Slowly I opened the cover containing photos of Sridevi and once he saw that they were the photos of his favourite star Sridevi he was shocked and jumped from his seat. He was ready to pay me Rs 1,000 but I took the same amount what he used to pay me for the other photos. Once the HamsaRaga issue came out with Sridevi's cover page it was a big hit and literally sold like hot cakes, revealed Srinivasan. Later I had given the same photo to many other magazines and all were superhit. Later I had given Sridevi photos to many magazines which got published in their Cover pages.

  Crazy star Ravichandran was also a fan of Sridevi. He wanted to cast her in one of his films but he was not able to obtain her shooting dates. Ravichandran was regularly trying to cast her and for a particular movie Sridevi had agreed to act in the Kannada movie. But the remuneration demanded by her resulted in the pan being dropped. The amount she had asked was Rs 50 lakhs. During those days many movies would have completed their entire shooting with that amount.

 • T S Ranga No More

  director ts ranga no more

  Film director T S Ranga, son of T R Shamanna died on Sunday in Bangalore.

  Ranga is known for directing state award winning films like 'Geejagana Goodu' and 'Savithri'. He also made a Hindi film 'Giddh' starring Ompuri, Smitha Patil and others. The film had won the National award. 

  Ranga also got the state award for best screenplay with T S Nagabharana for 'Grahana' that was directed by Nagabharana.

 • Uncle Loknath no more

  uncle lokanath no more

  Veteran actor Uncle Loknath is no more. He passed away this morning at the age of 91. He leaves behind four daughters and a son. CH Loknath debuted at the age of 42 and soon came to be referred to as Uncle in film circles.

  He was a popular theatre person and was first cast in the classic film Samskara. He went on to act in many commercial films and the role of a cobbler in Bhootayyana Maga Aiyyu gave him instant game and recognition. His character constantly yearns for pickles in the film. Uncle has performed in over one thousand stage plays and nearly 700 films.

  lokanath5_18.jpgHe acted in Kaada Beladingalu produced by Chitraloka.com editor KM Veeresh, Siddalingaiah and BS Lingadevaru. This movie got Nationala and State award.

  Public and fans can pay respect to Uncle Lokanath today at the Ravindra Kalakshetra between 12 and 2.30 pm today. He performed in hundreds of plays in this very theatre.

 • Veteran Actor Akki Channabasappa No More

  akki channabasappa no more

  Veteran actor Akki Channabasappa who has acted in numerous films, apart from plays has breathed his last on Tuesday afternoon.

  Akki Channabasappa died due to bad health at the old age home run by stage actor and Junior Rajakumar Ashok Basthi in Bangalore. Channabasappa will be cremated today afternoon by the Kannada Film Supporting Artistes Association headed by Dingri Nagaraj.

 • Veteran M Bhaktavatsalam No More

  m bhaktavatsala no more

  Well known Producer, Distributor and Exhibitor M Bhaktavatsalam is no more. He breathed his last at a private hospital. He was the recipient of Dr Rajkumar Award, 2012, for Lifetime Achievement. 

  Bhaktavatsalam was running the Minerva and Lavanya Theater in Bengaluru and at Mysore Lakshmi theater.  In 1971 He produced Sampoorna Ramayana and Kanneshwara Rama directed by MS Sathyu starring Ananthnag, BV Karanth, Amul Palekar, Shabana Ajmi. this movie became national news.

  Mr M Bhaktavatsala, was president of the Karnataka Film Chamber of Commerce (KFCC) for seven years, the youngest president of the Film Federation of India and two-time president of the South Indian Film Chamber of Commerce, he has held various senior posts in the industry.

  Chitraloka mourn the death of legend.

 • ಅಂಕಲ್ ಲೋಕನಾಥ್ ಇನ್ನಿಲ್ಲ

  veteran actor lokanath no more

  ಹಿರಿಯ ನಟ, ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಪ್ಪಿನಕಾಯಿ ಎಂದೇ ಹೆಸರಾಗಿದ್ದ ಲೋಕನಾಥ್ ನಿಧನರಾಗಿದ್ದಾರೆ. ಮಧ್ಯರಾತ್ರಿ 12.15ಕ್ಕೆ ಕೊನೆಯುಸಿರೆಳೆದಿದ್ದಾರೆ. ಲೋಕನಾಥ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. 2018ರ ಕೊನೆಯ ದಿನ ಚಿತ್ರರಂಗಕ್ಕೆ ಲೋಕನಾಥ್ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಎರಗಿದೆ.

  ಲೋಕನಾಥ್ ಮೂಲತಃ ರಂಗಭೂಮಿ ಕಲಾವಿದ. ರವಿ ಕಲಾವಿದರು, ನಟರಂಗ, ಸಮುದಾಯ, ಸೂತ್ರಧಾರ ಸೇರಿದಂತೆ ಹಲವು ತಂಡಗಳಲ್ಲಿ 1000ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದವರು. 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಲೋಕನಾಥ್‍ಗೆ, ಭೂತಯ್ಯನ ಮಗ ಅಯ್ಯು, ಮಿಂಚಿನ ಓಟ ಚಿತ್ರಗಳು ಹೆಸರು ತಂದುಕೊಟ್ಟಿದ್ದವು. ಭೀಮಾತೀರದಲ್ಲಿ.. ಲೋಕನಾಥ್ ಅಭಿನಯದ ಕೊನೆಯ ಚಿತ್ರವಿರಬೇಕು. 

  ಆಗಸ್ಟ್ 8, 1929, ಲೋಕನಾಥ್ ಅವರ ಜನ್ಮದಿನ. ಸ್ವಾತಂತ್ರ್ಯ ಹೋರಾಟವನ್ನೂ ಕಣ್ಣಾರೆ ಕಂಡಿದ್ದ ಲೋಕನಾಥ್, ಚಿತ್ರರಂಗವನ್ನು ಬಿಟ್ಟು ಅಗಲಿದ್ದಾರೆ.

 • ಅಂಬಿ ಬೈತಿದ್ರೇನೇ ಚೆಂದ ಚೆಂದ.. ಇಲ್ಲಾಂದ್ರೆ.

  ambi's sweet scoldings was his trade mark

  ಅಂಬರೀಷ್ : ಹಲೋ.. ಯಾರು ಬೇಕಾಗಿತ್ತು..ಅತ್ತ ಕಡೆಯಿಂದ.. ಮಂಡ್ಯದ ಅಭಿಮಾನಿ : ಅಂಬ್ರೀಸಣ್ಣ ಬೇಕಿತ್ತು. ವಸಿ ಅವ್ರಿಗೆ ಫೋನ್ ಕೊಡ್ರಣ್ಣೋ..

  ಅಂಬರೀಷ್ : ನಾನೇ ಹೇಳಪ್ಪ..

  ಅತ್ತ ಕಡೆಯಿಂದ.. ಮಂಡ್ಯದ ಅಭಿಮಾನಿ : ಯ್ಯೋವ್.. ಬುಡ್ರಿ.. ಅಂಬ್ರೀಸಣ್ಣುಂಗ್ ಫೋನ್ ಕೊಡ್ರಿ..

  ಅಂಬರೀಷ್ : ಇಲ್ಲ ಕಣಪ್ಪ.. ನಾನೇ ಅಂಬರೀಷ್. ಏನಾಗ್ಬೇಕಿತ್ತು ಹೇಳು..

  ಅತ್ತ ಕಡೆಯಿಂದ.. ಮಂಡ್ಯದ ಅಭಿಮಾನಿ : ಸ್ಸಾ.. ಬುಡಿ ಸಾ.. ನಮ್ ಅಂಬ್ರೀಸಣ್ಣ ನಮಿಗ್ ಗೊತ್ತಿಲ್ವಾ.. ಫೋನ್ ಅಂಬ್ರೀಸಣ್ಣುಂಗ್ ಕೊಡಣ್ಣೋ..

  ಅಂಬರೀಷ್ : ಹೇಳೋ.. ಬೋ.. ಮಗ್ನೇ.. ನಾನೇ ಅಂಬರೀಷ್ ಅಂದ್ರೂ ಮಾತಾಡಕ್ ಏನ್ಲಾ ಪ್ರಾಬ್ಲಮ್ಮು ನಿಂಗೆ.. ನನ್ ಮಗ್ನೇ ಏನಾಗ್ಬೇಕಿತ್ಲಾ..

  ಅತ್ತ ಕಡೆಯಿಂದ.. ಮಂಡ್ಯದ ಅಭಿಮಾನಿ : ನಮ್ಸ್ಕಾರ ಕಣಣ್ಣೋ.. ನೀವ್ ಯಿಂಗ್ ಮಾತಾಡಿರೆಯಾ ಅಂಬ್ರೀಸಣ್ಣ ಅಂತಾ ಗೊತ್ತಾಗದು. 

  ಹೌದು.. ಬೈಗುಳ ಅಂಬರೀಷ್ ಟ್ರೇಡ್ಮಾರ್ಕ್. ನಿಮಗೆ ಅಚ್ಚರಿಯಾಗಬಹುದು. ಅಂಬರೀಷ್ ಅವರು ತಮ್ಮ ಅಭಿಮಾನಿಗಳನ್ನು ಬೈದಷ್ಟು ಯಾವುದೇ ನಟ ತಮ್ಮ ಅಭಿಮಾನಿಗಳನ್ನು ಬೈದಿಲ್ಲ. ಪತ್ರಕರ್ತರ ಮಾತು ಬಿಡಿ.. ಏಕವಚನವೇ ಮಹಾಪ್ರಸಾದ. ಆದರೆ.. ಯಾರೊಬ್ಬರೂ ಅದಕ್ಕೆ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ಅದೊಂದು ವಿಷಯ ಸ್ಪಷ್ಟವಾಗಿ ಗೊತ್ತಿರುತ್ತಿತ್ತು. ಅಂಬಿ ಹೃದಯದಲ್ಲಿ ಕಲ್ಮಷಕ್ಕೆ ಜಾಗವಿಲ್ಲ ಅನ್ನೋದು ಗೊತ್ತಾಗಿ ಹೋಗಿತ್ತು. ಬೈದರೂ.. ಮುದ್ದಿಸಿದರೂ.. ಹೊಟ್ಟೆ ತುಂಬಾ ಊಟ ಬಡಿಸಿದರೂ.. ಕಷ್ಟಕ್ಕೆ ನೆರವಾದರೂ.. ಅಲ್ಲಿ ಪ್ರೀತಿ ಇದ್ದೇ ಇರುತ್ತಿತ್ತು. ಎಲ್ಲರನ್ನೂ ಪ್ರೀತಿಸುವುದು ಅಂಬರೀಷ್ರ ಶಕ್ತಿಯಾಗಿತ್ತು. 

  ಅಂದಹಾಗೆ ನೀವು ಮೇಲೆ ಓದಿದ್ದು ಕಾಲ್ಪನಿಕ ಘಟನೆಯೇನೂ ಅಲ್ಲ. ಅಂಬರೀಷ್ ಮಂತ್ರಿಯಾಗಿದ್ದಾಗ, ಅವರ ಗೆಳೆಯ ವಿಷ್ಣು.. ಇನ್ನಾದರೂ ಜನರ ಜೊತೆ ನೆಟ್ಟಗೆ ಮಾತಾಡು. ಸಭ್ಯತೆ, ಸಜ್ಜನಿಕೆಯಿರಲಿ ಎಂದಿದ್ದರಂತೆ. ಗೆಳೆಯನ ಮಾತಿಗೆ ಓಕೆ ಎಂದಿದ್ದ ಅಂಬಿ, ಅದೇ ವೇಳೆ ತಮಗೆ ಕರೆ ಮಾಡಿದ ಅಭಿಮಾನಿಯ ಜೊತೆ ಮಾತನಾಡಿದ್ದಾಗ ನಡೆದಿದ್ದ ಘಟನೆ ಇದು. 

  ನಿನ್ ತರಾನೇ ನಿನ್ ಫ್ಯಾನ್ಸೂ ಒರಟು.. ಎಂದು ನಕ್ಕಿದ್ದರಂತೆ ವಿಷ್ಣು

 • ಅಚ್ಚಕನ್ನಡದ ನಿರೂಪಕ ಚಂದನ್ ಅಪಘಾತದಲ್ಲಿ ಸಾವು

   anchor chandan dies in accident

  ಚಂದನ್ ಅಲಿಯಾಸ್ ಚಂದ್ರಶೇಖರ್. ಉದಯ ಟಿವಿ, ಉದಯ ಮ್ಯೂಸಿಕ್, ರಾಜ್ ಮ್ಯೂಸಿಕ್ ಸೇರಿದಂತೆ ಹಲವು ವಾಹಿನಿಗಳಲ್ಲಿ ಆ್ಯಂಕರ್ ಆಗಿದ್ದ ಚಂದನ್, ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಚಂದನ್ ಹಾಗೂ ಗಾಯಕಿ ಸಂತೋಷಿ ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಚಂದನ್ ಹಾಗೂ ಸಂತೋಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಹಾಗೂ ಸುನೀತಾ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

  ಬೈಲಹೊಂಗಲ ಬಳಿಯಲ್ಲಿ ಕಾರ್ಯಕ್ರಮವೊಂದರ ನಿರೂಪಣೆಗೆ ತೆರಳುತ್ತಿದ್ದ ಚಂದನ್ ಹಾಗೂ ಸಂತೋಷಿ,  ಹಿಂದಿನ ಸೀಟ್‍ನಲ್ಲಿ ಕುಳಿತಿದ್ದರು. ಕಾರ್‍ನ ಏರ್‍ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಹಾಗೂ ಮುಂದೆ ಕುಳಿತಿದ್ದ ಸುನೀತಾ ಪ್ರಾಣಾಪಾಯದಿಂದ ಪಾರಾದರು.

  ಅಚ್ಚಕನ್ನಡದಲ್ಲಿಯೇ ಮಾತನಾಡುತ್ತಿದ್ದ ಚಂದನ್, ತಮ್ಮ ನಿರೂಪಣೆಯಲ್ಲಿ ಎಲ್ಲಿಯೂ ಇಂಗ್ಲಿಷ್ ಬಳಸುತ್ತಿರಲಿಲ್ಲ. ಹೀಗಾಗಿಯೇ ಚಂದನ್ ಅಚ್ಚಕನ್ನಡದ ನಿರೂಪಕ ಎಂದೇ ಖ್ಯಾತರಾಗಿದ್ದರು.

   

 • ಅಣ್ಣ ಸತ್ತ ಒಂದು ವರ್ಷಕ್ಕೆ ಅಂಬಿ ನಿಧನ

  ambi dies on same day his elder brother passed away one year ago

  ಸರಿಯಾಗಿ ಒಂದು ವರ್ಷದ ಹಿಂದೆ.. 2017ರ ನವೆಂಬರ್ 24ರಂದು ಅಂಬರೀಷ್ ಅವರ ಅಣ್ಣ ಡಾ.ಹರೀಶ್ ನಿಧನರಾಗಿದ್ದರು. ಆಗ ಹರೀಶ್ ಅವರಿಗೆ 69 ವರ್ಷ ವಯಸ್ಸು. ದೊಡ್ಡರಸಿನಕೆರೆಯಲ್ಲೇ ಕ್ಲಿನಿಕ್ ಇಟ್ಟುಕೊಂಡು ಹಳ್ಳಿಯಲ್ಲಿಯೇ ವೈದ್ಯಸೇವೆ ಮಾಡುತ್ತಿದ್ದ ಹರೀಶಣ್ಣ ಎಂದರೆ ಅಂಬಿಗೆ ವಿಶೇಷ ಪ್ರೀತಿ. 

  ಈಗ ಸರಿಯಾಗಿ ಒಂದು ವರ್ಷದ ನಂತರ ಅದೇ ನವೆಂಬರ್ 24ರಂದು ಅಂಬಿ, ಅಣ್ಣನನ್ನು ಹಿಂಬಾಲಿಸಿದ್ದಾರೆ. ಇದಲ್ಲವೇ ಕಾಕತಾಳೀಯ.

 • ಅಣ್ಣಾವ್ರ ಪಕ್ಕದಲ್ಲೇ ಅಂಬಿ ಚಿರನಿದ್ರೆ

  ambi to be cremated next to dr raj samadhi

  ಡಾ.ರಾಜ್ಕುಮಾರ್ ಎಂದರೆ ಅಂಬರೀಷ್ಗೆ ಅಪಾರ ಗೌರವ. ಅಂಬಿ ಎಂದರೆ ರಾಜ್ಗೆ ವಿಶೇಷ ಪ್ರೀತಿ. ಆ ಪ್ರೀತಿಗೆ ಕಾರಣವೂ ಇತ್ತು. ಉಳಿದವರಂತೆ ಅಂಬರೀಷ್, ರಾಜ್ರನ್ನು ಭಯ ಭಕ್ತಿಯಿಂದ ಮಾತನಾಡಿಸುತ್ತಿರಲಿಲ್ಲ. ಒಬ್ಬ ಆತ್ಮೀಯ ಸ್ನೇಹಿತನನ್ನು ಮಾತನಾಡಿಸುವಷ್ಟೇ ಸಲೀಸಾಗಿ ಮಾತನಾಡಿಸುತ್ತಿದ್ದರು. ಹೀಗಾಗಿಯೇ ನನಗೆ ಅಂಬಿ  ಅಂದ್ರೆ ವಿಶೇಷ ಪ್ರೀತಿ ಎಂದು ಹಲವು ಬಾರಿ ಹೇಳಿಕೊಂಡಿದ್ದರು ಡಾ.ರಾಜ್.

  ಈಗ ಅಣ್ಣಾವ್ರ ಸ್ಮಾರಕ ಇರುವ ಕಂಠೀರವ ಸ್ಟುಡಿಯೋದಲ್ಲಿಯೇ ಅಂಬರೀಷ್ ಅವರ ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ನಿರ್ಧರಿಸಿದೆ. ಸ್ಟುಡಿಯೋದ ಎಡಭಾಗದಲ್ಲಿ ರಾಜ್ ಸಮಾಧಿ, ಬಲಭಾಗದಲ್ಲಿರುವ ಒಂದೂವರೆ ಎಕರೆ ಭೂಮಿಯಲ್ಲಿ ಅಂಬರೀಷ್ ಅವರ ಸ್ಮಾರಕ ಮಾಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

  ಒಡಹುಟ್ಟಿದವರು ಸಿನಿಮಾ ಮಾಡೋಕೆ ಮುಂದಾದಾಗ, ನನ್ನ ಅಶಿಸ್ತು ರಾಜ್ರ ಬದ್ಧತೆಗೆ ಸಮಸ್ಯೆಯಾಗಬಾರದು ಎಂದು ಹಿಂದೇಟು ಹಾಕಿದ್ದರು ಅಂಬಿ. ನೀನು ಯಾವಾಗ ಬೇಕಾದರೂ ಬಾ ಎಂದು ಪ್ರೀತಿಯಿಂದ ಒಪ್ಪಿಸಿದ್ದರು ಡಾ.ರಾಜ್. ರಾಜ್ ಮೇಲೆ ಕೈ ಎತ್ತುವ ಸೀನ್ ಇದ್ದರೆ ಮಾಡಲ್ಲ ಎಂದು ಅಂಬಿ ಮತ್ತೊಮ್ಮೆ ಹಠ ಹಿಡಿದಾಗ, ಚಿತ್ರಕಥೆಯನ್ನು ತಿದ್ದಲಾಗಿತ್ತು. ಚಿತ್ರ ರಿಲೀಸ್ ವೇಳೆ ಹಾಕುವ ಕಟೌಟ್ ಯಾವುದೇ ಕಾರಣಕ್ಕೂ ನನ್ನ ಕಟೌಟ್ಗಿಂತ ಕಡಿಮೆ ಇರಬಾರದು ಎಂದು ಕಂಡೀಷನ್ ಹಾಕಿದ್ದರು ಡಾ.ರಾಜ್. ಈಗ ಇಬ್ಬರೂ ಒಂದೇ ಜಾಗದಲ್ಲಿ.. ಚಿರನಿದ್ರೆಯಲ್ಲಿ..

 • ಅತಿಲೋಕ ಸುಂದರಿಯ ಅಂತಿಮ ಯಾತ್ರೆ

  sridevi;s body cremated

  ಅತಿಲೋಕ ಸುಂದರಿ ಶ್ರೀದೇವಿಯ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಭಾನುವಾರ ದುಬೈನಲ್ಲಿ ಮೃತಪಟ್ಟಿದ್ದ ಶ್ರೀದೇವಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ, ಮುಂಬೈನಲ್ಲಿ ನೆರವೇರಿತು. ವಿಲೆ ಪಾರ್ವೆ ಸೇವಾ ನಮಾಜ್ ಚಿತಾಗಾರದಲ್ಲಿ ಶ್ರೀದೇವಿ ಅವರನ್ನು ಅಯ್ಯಂಗಾರ್ ಸಂಪ್ರದಾಯಂತೆ ಸಂಸ್ಕಾರ ಮಾಡಲಾಯಿತು.

  ತಮಿಳುನಾಡಿನವರಾದ ಶ್ರೀದೇವಿಯರಿಗೆ ಕಾಂಜೀವರಂ ರೇಷ್ಮೆ ಸೀರೆ ತೊಡಿಸಿ, ಮೋಹನ ಮಾಲೆ, ಕುಂಕುಮವಿಟ್ಟು, ಮಲ್ಲಿಗೆ ಹೂ ಮುಡಿಸಿ, ಮಾಂಗಲ್ಯದೊಂದಿಗೇ ಸಂಸ್ಕಾರ ನೆರವೇರಿಸಲಾಯಿತು. ಬದುಕಿದ್ದಾಗ ಹೇಗಿದ್ದರೋ, ಅದೇ ರೀತಿ ಅವರ ಪಾರ್ಥಿವ ಶರೀರಕ್ಕೂ ಅಲಂಕಾರ ಮಾಡಲಾಗಿತ್ತು.

  ಪಾರ್ಥಿವ ಶರೀರಕ್ಕೆ ರಸ್ತೆಯ ಇಕ್ಕೆಲಗಳಲ್ಲೂ ಸೇರಿದ್ದ ಜನಸ್ತೋಮ, ನಟಿಯ ಅಂತಿಮ ದರ್ಶನ ಪಡೆಯಿತು. ಬಾಲಿವುಡ್‍ಗೆ ಬಾಲಿವುಡ್ಡೇ ಶ್ರೀದೇವಿಯ ಅಂತಿಮಯಾತ್ರೆಯಲ್ಲಿ ಭಾಗವಹಿಸಿ, ಅಗಲಿದ ಕಲಾವಿದೆಗೆ ಆಶ್ರುತರ್ಪಣ ಸಲ್ಲಿಸಿತು.

  ಪದ್ಮಶ್ರೀ ಪುರಸ್ಕøತ ಕಲಾವಿದೆ, ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರಗಳು ನಡೆದವು. ಪತಿ ಬೋನಿ ಕಪೂರ್, 2ನೇ ಪತ್ನಿಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

 • ಕೊಡುಗೈ ಕರ್ಣ ಅಂಬರೀಷ್ ಕಥೆಗಳು

  ambareesh the kaliyugadha karna

  ಅಂಬರೀಷ್ರನ್ನು ಕಲಿಯುಗ ಕರ್ಣ ಎನ್ನುತ್ತಾರೆ. ತಾಯಿಗೊಬ್ಬ ಕರ್ಣ ಸಿನಿಮಾ ಮಾಡಿದ್ದಕ್ಕೆ ಆ ಹೆಸರು ಬಂದಿದೆ ಎಂದುಕೊಂಡಿದ್ದರೆ, ಅದು ತಪ್ಪು. ಅಂಬರೀಷ್ ಇದ್ದುದೇ ಹಾಗೆ. ಅವರಿಂದ ನೆರವು ಪಡೆದವರ ಸಂಖ್ಯೆ ಅಸಂಖ್ಯ. ತಾವು ಮಾಡಿದ ಯಾವುದೇ ನೆರವನ್ನು ಅವರು ಹೊರಗೆ ಹೇಳಿಕೊಂಡವರಲ್ಲ. ಸಹಾಯ ಪಡೆದವರ ಸ್ವಾಭಿಮಾನಕ್ಕೆ ಘಾಸಿಯಾಗಬಾರದು ಎನ್ನುವುದು ಅವರು ಇಟ್ಟುಕೊಂಡಿದ್ದ ನಂಬಿಕೆ. ಸಹಾಯ ಪಡೆದವರೇ, ಬೆನ್ನಿಗೆ ಇರಿದಾಗಲೂ.. ಹೋಗ್ಲಿ ಬಿಡು ಎಂದಿದ್ದಾರೆ. ಬೆನ್ನಿಗೆ ಇರಿದವರೇ ಸಹಾಯ ಕೇಳಿದಾಗಲೂ ಥಟ್ಟನೆ ಎದ್ದು ನಿಂತು ನೆರವು ಕೊಟ್ಟಿದ್ದಾರೆ. ಅದು ಅಂಬರೀಷ್. ಮಾತಷ್ಟೇ ಒರಟು. ಮನಸು.. ಅಪ್ಪಟ ಮಂಡ್ಯದ ಸಕ್ಕರೆ.

  ಗುರುವಿನ ಎದುರು : ಮಸಣದ ಹೂವು ಸಿನಿಮಾ ನೋಡಿರುತ್ತೀರಿ. ಅದು ಅಂಬಿಯ ಗುರು ಪುಟ್ಟಣ್ಣನವರ ಕೊನೆಯ ಸಿನಿಮಾ. ಆ ಸಿನಿಮಾ ಮಾಡುವಾಗ ಅಂಬಿ ರೆಬಲ್ಸ್ಟಾರ್. ಯಶಸ್ಸಿನ ಉತ್ತುಂಗದಲ್ಲಿದ್ದ ದಿನಗಳು. ಆಗ ಪುಟ್ಟಣ್ನ, ಮಸಣದ ಹೂವು ಚಿತ್ರಕ್ಕೆ ಅಂಬಿಯವರನ್ನು ಕೇಳಿದರು. ಗುರುವಿಗೆ ಓಕೆ ಎಂದರು ಅಂಬಿ. ಪುಟ್ಟಣ್ಣ ಕಥೆ ಹೇಳೋಕೆ ಹೋದಾಗ.. ಗುರುಗಳೇ.. ನೀವು ಕಥೆ ಹೇಳಬೇಡಿ. ನೀವು ಯಾವ ಪಾತ್ರವನ್ನಾದರೂ ಕೊಡಿ. ಮಾಡೋಕೆ ನಾನು ರೆಡಿ ಎಂದಿದ್ದರು ಅಂಬಿ. ನಿಮಗೆ ನೆನಪಿರಲಿ.. ಆ ಚಿತ್ರದಲ್ಲಿ ಅಂಬರೀಷ್ ಪಿಂಪ್ ಪಾತ್ರ ಮಾಡಿದ್ದರು. ಸ್ಟಾರ್ಗಿರಿಯನ್ನು ಪಕ್ಕಕ್ಕಿಟ್ಟು, ಪೋಷಕ ನಟನಾಗಿ ನಟಿಸಿದ್ದರು. ಆ ಪಾತ್ರ ಅವರಿಗೆ ಪ್ರಶಸ್ತಿ ಕೊಡಿಸಿತ್ತು.

  ಪ್ರಭಾಕರ್ ಸಂಸ್ಕಾರದ ವೇಳೆ : ಟೈಗರ್ ಪ್ರಭಾಕರ್, ಬದುಕಿರುವ ಅಷ್ಟೂ ದಿನ ಟೈಗರ್ ಆಗಿಯೇ ಇದ್ದವರು. ಕೊನೆ ದಿನಗಳಲ್ಲಿ ದುಡ್ಡನ್ನೆಲ್ಲ ಕಳೆದುಕೊಂಡಿದ್ದರು. ಮಲ್ಯ ಆಸ್ಪತ್ರೆಯಲ್ಲಿ ನಿಧನರಾದಾಗ ಅವರ ಮೃತದೇಹವನ್ನು ಕೊಡಲು ನಿರಾಕರಿಸಿದ್ದರು. ಕಾರಣ, ಬಿಲ್ ಕಟ್ಟಿರಲಿಲ್ಲ. ವಿಷಯ ಗೊತ್ತಾಗಿದ್ದೇ ತಡ, ಆಸ್ಪತ್ರೆಯವರಿಗೆ ಫೋನ್ ಮಾಡಿ, ಬಿಲ್ ಎಷ್ಟಾದರೂ ಆಗಿರಲಿ. ಬಿಲ್ ನಾನು ಕಟ್ಟುತ್ತೇನೆ ಎಂದು ಹೇಳಿದ್ದರು ಅಂಬಿ. ಪ್ರಭಾಕರ್ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದರು.

  ಸುಧೀರ್ ಮನೆ ಅಂಬರೀಷ್ ನಿಲಯ : ಅದನ್ನು ಅಂಬಿ ಮುಚ್ಚಿಟ್ಟರೂ, ಸುಧೀರ್ ಮುಚ್ಚಿಡಲಿಲ್ಲ. ಕಷ್ಟದ ದಿನಗಳಲ್ಲಿ ಮನೆ ಕಟ್ಟಿಸಿಕೊಳ್ಳಲು ನೆರವಾಗಿದ್ದ ಗೆಳೆಯನ ನೆನಪಿಗಾಗಿ ಸುಧೀರ್, ತಮ್ಮ ಮನೆಗೆ ಅಂಬರೀಷ್ ನಿಲಯ ಎಂದೇ ಹೆಸರಿಟ್ಟಿದ್ದಾರೆ.

  ವಜ್ರಮುನಿಗೆ ಜೀವ ನೀಡಿದ್ದರು : ವಜ್ರಮುನಿ ನಿರ್ಮಾಪಕರಾಗಿ ಲಾಸ್ ಆಗಿದ್ದಾಗ, ಅವರಿಗೆ ಗಂಡಭೇರುಂಡ ಚಿತ್ರ ನಿರ್ಮಿಸು ಎಂದು ಹೇಳಿ, ಸಂಭಾವನೆ ತೆಗೆದುಕೊಳ್ಳದೇ ನಟಿಸಿದ್ದರು ಅಂಬಿ. ತಾವಷ್ಟೇ ಅಲ್ಲ, ಆ ಚಿತ್ರದಲ್ಲಿ ನಟಿಸಿದ್ದ ಶಂಕರ್ನಾಗ್, ಶ್ರೀನಾಥ್ರನ್ನೂ ಕಡಿಮೆ ಸಂಭಾವನೆಗೆ ಒಪ್ಪಿಸಿದ್ದರು. ಚಿತ್ರ ಯಶಸ್ವಿಯಾಗಿತ್ತು. ವಜ್ರಮುನಿ ಸಾಲಭಾದೆ ತೀರಿತ್ತು.

  ಇದೆಲ್ಲ ನೆನಪಾಗಿದ್ದು ಅಂತ್ಯ ಸಂಸ್ಕಾರದ ವೇಳೆ ಕಾಣಿಸಿಕೊಂಡ ಅಂಗವಿಕಲ ಯುವತಿಯೊಬ್ಬಳ ಮಾತಿನಿಂದ. ಆಕೆಗೆ ಅಂಬರೀಷ್, ಸಾಲ, ಜಾಗ ಎಲ್ಲವನ್ನೂ ಕೊಡಿಸಿ ಜೀವನಕ್ಕೆ ದಾರಿ ಕಲ್ಪಿಸಿದ್ದರು. ಅಂತಹ ಋಣಗಳನ್ನು ಅದೆಷ್ಟು ಜನರ ಮೇಲೆ ಹೊರಿಸಿ ಹೋಗಿದ್ದಾರೋ ಅಂಬಿ.

 • ಜೀವನಯಾನ ಮುಗಿಸಿದ ಎಂ.ಎನ್. ವ್ಯಾಸರಾವ್

  veteran writer mn vyasa rao

  ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು.. ನಾಕೊಂದ್ಲ ನಾಕು, ನಾಕೆರಡ್ಲ ಎಂಟು.. ಸೇರಿದಂತೆ ಹಲವು ಮಧುರ ಗೀತೆಗಳಿಗೆ ಭಾವ ತುಂಬಿದ್ದ  ಕವಿ, ಕಥೆಗಾರ, ಕಾದಂಬರಿಕಾರ, ಸಾಹಿತಿ, ಗೀತೆ ರಚನೆಕಾರ  ಎಂ. ಎನ್‌. ವ್ಯಾಸರಾವ್‌ (73) ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ 10.30 ಸುಮಾರಿಗೆ ಹೃದಯಾಘಾತದಿಂದ ಮೃಪಟ್ಟಿದ್ದಾರೆ. 

  ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದ ವ್ಯಾಸರಾಔ್, ದಿಗ್ಗಜ ಪುಟ್ಟಣ್ಣ ಕಣಗಾಲ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದರು. ಜನಮಾನಸದಲ್ಲಿ ಸದಾ ಹಸಿರಾಗಿರುವ ಭಾವಗೀತೆಗಳು ವ್ಯಾಸರಾವ್ ಅವರ ಹೆಗ್ಗುರುತು. 15 ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಹಾಡುಗಳನ್ನು ಹಾಗೂ 35ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಸಾಹಿತ್ಯ ಒದಗಿಸಿರುವ ಹೆಗ್ಗಳಿಕೆ ಇವರದು. 

  ಮೈಸೂರು ಮಲ್ಲಿಗೆ, ಆಸ್ಫೋಟ, ದಂಗೆಯೆದ್ದ ಮಕ್ಕಳು, ವಾತ್ಸಲ್ಯ ಪಥ.. ಚಿತ್ರಗಳಿಗೆ ಕಥೆಗಾರರೂ ಆಗಿದ್ದ ವ್ಯಾಸರಾವ್, ರಾಜ್ಯಪ್ರಶಸ್ತಿ ಪುರಸ್ಕೃತರು. ಬೆಳ್ಳಿ ಮೂಡುವ ಮುನ್ನ, ಮಳೆಯಲ್ಲಿ ನೆನೆದ ಮರಗಳು (ಕವನ ಸಂಕಲನ), ಉತ್ತರಮುಖಿ (3 ನೀಳ್ಗತೆಗಳ ಸಂಕಲನ), ಸ್ಕಾಟ್ ಡಬಲ್ ಎಕ್ಸ್, ಅಖಿಲಾ ಮೈ ಡಾರ್ಲಿಂಗ್ (ಪತ್ತೇದಾರಿ ಕಾದಂಬರಿಗಳು) ನಿರೋಷ, ನದಿಮೂಲ (ಕಾದಂಬರಿ) ಕತ್ತಲಲ್ಲಿ ಬಂದವರು (ನಾಟಕ).. ಹಿಗೆ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಾಧನೆ ಮಾಡಿದವರು. ಚೀನೀ, ಇಂಗ್ಲಿಷ್, ಫ್ರೆಂಚ್, ಉರ್ದು, ಸಿಂಧಿ ಕೇಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ವ್ಯಾಸರಾವ್, ಸಾಹಿತ್ಯ ಕೃಷಿಯಲ್ಲಿ ಉನ್ನತ ಸಾಧನೆ ಮಾಡಿದವರು.

  ವ್ಯಾಸರಾವ್ ನಿಧನಕ್ಕೆ ಫಿಲಂಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಸಿಎಂ ಕುಮಾರಸ್ವಾಮಿ, ಸಚಿವೆ ಜಯಮಾಲಾ.. ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿಸದ್ದಾರೆ.

Chemistry Of Kariyappa Movie Gallery

BellBottom Movie Gallery