` dhanveer, - chitraloka.com | Kannada Movie News, Reviews | Image

dhanveer,

 • ಬಜಾರ್ ಧನ್ವೀರ್.. ಶೋಕ್ದಾರ್ ಆದ್ರು ಕಣ್ರಿ..

  bazaar fame dhanveer is now shokidhaar

  ಬಜಾರ್ ಚಿತ್ರದ ಮೂಲಕ ಭರ್ಜರಿ ಹವಾ ಎಬ್ಬಿಸಿದ್ದ ನಟ ಧನ್ವೀರ್, ಹೊಸ ಚಿತ್ರಕ್ಕೆ ರೆಡಿಯಾಗಿದ್ದಾರೆ. ಹೊಸ ಚಿತ್ರಕ್ಕೆ ಭರಾಟೆ ಸುಪ್ರೀತ್ ನಿರ್ಮಾಪಕರಾದರೆ, ಭರ್ಜರಿ ಚೇತನ್ ಅವರದ್ದೇ ಕಥೆ. ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿ ಆದಿತಿ ಪ್ರಭುದೇವ, ಪಾರಿವಾಳಗಳ ಜೊತೆ ಆಟವಾಡಿದ್ದ ಧನ್ವೀರ್, ಹೊಸ ಚಿತ್ರದಲ್ಲಿ ಫುಲ್ ರೊಮ್ಯಾಂಟಿಕ್ ಹೀರೋ ಅಗಿ ಮಿಂಚಲಿದ್ದಾರೆ.

  ಪಾತ್ರಕ್ಕಾಗಿ ಫುಲ್ ತಯಾರಿ ನಡೆಸಿರುವ ಧನ್ವೀರ್, ತಂದೆಯ ಹುಟ್ಟುಹಬ್ಬದ ಖುಷಿಯ ಜೊತೆ ಜೊತೆಗೇ ಶೋಕ್ದಾರ್ ಖುಷಿಯಲ್ಲಿದ್ದಾರೆ.

   

 • ಬಜಾರ್ ಧನ್ವೀರ್‍ಗೆ ಸಂತು ಬಂಪರ್

  santhu to direct dhanveer

  ಬಜಾರ್ ಮೂಲಕ ಚಿತ್ರರಂಗದ ಬಜಾರ್‍ಗೆ ಕಾಲಿಟ್ಟ ನಟ ಧನ್ವೀರ್. ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ಗಮನ ಸೆಳೆದಿದ್ದ ಪ್ರತಿಭೆ. ಅವರ ಹೊಸ ಚಿತ್ರ ಬಂಪರ್ ಚಿತ್ರ ಶುರುವಾಗಿದೆ. ಭರ್ಜರಿ ಚೇತನ್ ಕುಮಾರ್ ಬರೆದಿರುವ ಕಥೆಯನ್ನು ಭರಾಟೆ ನಿರ್ಮಾಪಕ ಸುಪ್ರೀತ್ ನಿರ್ಮಿಸುತ್ತಿದ್ದಾರೆ. ನಿರ್ದೇಶಕರು ಯಾರು ಎನ್ನುವ ಸಸ್ಪೆನ್ಸ್‍ಗೆ ಈಗ ಉತ್ತರ ಸಿಕ್ಕಿದೆ. ಅಲೆಮಾರಿ ಸಂತು ಅಲಿಯಾಸ್ ಸಂತೋಷ್ ಕುಮಾರ್ ಚಿತ್ರದ ನಿರ್ದೇಶಕ.

  ತೆಲುಗಿನಲ್ಲಿ ತಮ್ಮದೇ ನಿರ್ದೇಶನದ ಕಾಲೇಜ್ ಕುಮಾರ ಚಿತ್ರವನ್ನು ನಿರ್ದೇಶಿಸಿ ಬಂದಿರುವ ಸಂತು, ಸದ್ಯಕ್ಕೆ ಐತಿಹಾಸಿಕ ಸಿನಿಮಾ ಬಿಚ್ಚುಗತ್ತಿಯಲ್ಲಿ ಬ್ಯುಸಿ. ಆ ಚಿತ್ರ ಒಂದು ಹಂತಕ್ಕೆ ಬಂದ ಕೂಡಲೇ ಬಂಪರ್ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಸಂತು.

 • ಬಜಾರ್ ಬೆನ್ನು ಹತ್ತಿದ ಕಾಲಿವುಡ್

  taml producers wants to buy bazaar remake righs

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ ಕಮರ್ಷಿಯಲ್ಲಾಗಿ ಹಿಟ್ ಆಗುತ್ತಿರುವಂತೆಯೇ, ಕಾಲಿವುಡ್ ನಿರ್ದೇಶಕರು, ನಿರ್ಮಾಪಕರು ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಮೊದಲೇ ಕಥೆಯ ಒನ್‍ಲೈನ್ ಕೇಳಿ ಇಷ್ಟಪಟ್ಟಿದ್ದ ತಮಿಳು ನಿರ್ಮಾಪಕರು, ಚಿತ್ರದ ರೀಮೇಕ್ ಹಕ್ಕು ಖರೀದಿಗೆ ಮುಂದಾಗಿದ್ದಾರೆ.

  ಧನ್ವೀರ್, ಆದಿತಿ ಪ್ರಭುದೇವ, ಶರತ್ ಲೋಹಿತಾಶ್ವ, ಸಾಧುಕೋಕಿಲ ನಟಿಸಿರುವ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಈಗಾಗಲೇ ಸೇಲ್ ಆಗಿದೆ. ಚಿತ್ರವನ್ನು ನೋಡಿದ ಪ್ರೇಕ್ಷಕರಿಗೆ ಪಾರಿವಾಳಗಳ ಕಥೆ, ಭೂಗತ ಜಗತ್ತಿನ ಪ್ರೇಮಲೋಕದ ಕಥೆ ಇಷ್ಟವಾಗಿದೆ.

 • ಬಜಾರ್‍ಗೆ ಪಾರಿವಾಳಗಳೇ ವಿಲನ್..!

  bazar release postponed due to pigeons

  ಬಜಾರ್ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಜನವರಿ 11ರ ಹೊತ್ತಿಗೆ ಬಜಾರ್ ಸಿನಿಮಾ ಥಿಯೇಟರುಗಳಲ್ಲಿರಬೇಕಿತ್ತು. ಸಿನಿಮಾದ ಎಲ್ಲ ಕೆಲಸ ಮುಗಿಸಿ, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡ, ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದೆ. ಕಾರಣ ಬೇರೇನಲ್ಲ. ಪಾರಿವಾಳಗಳು.

  ಈಗಾಗಲೇ ಚಿತ್ರತಂಡ ಹೇಳಿಕೊಂಡಿರೋ ಹಾಗೆ ಇಡೀ ಚಿತ್ರದ ಕಥೆ ಸುತ್ತುವುದೇ ಪಾರಿವಾಳಗಳ ಸುತ್ತ. ಪಾರಿವಾಳಗಳ ರೇಸ್ ಮತ್ತು ಭೂಗತ ಲೋಕದ ಕಥೆ ಇರುವ ಬಜಾರ್‍ನಲ್ಲಿ ನಿಜವಾದ ಪಾರಿವಾಳಗಳನ್ನು ಬಳಸಿಕೊಂಡಿರುವುದೇ ಚಿತ್ರತಂಡವನ್ನು ಕಾಡುತ್ತಿದೆ. 

  ವನ್ಯಜೀವಿ ಸಂರಕ್ಷಣಾ ಕಾಯಿದೆ ಎಷ್ಟು ಬಿಗಿಯಾಗಿದೆಯೆಂದರೆ, ಅದು ಬಜಾರ್ ಚಿತ್ರದ ಬಿಡುಗಡೆಯನ್ನೇ ತಡೆಹಿಡಿದಿದೆ. ಇನ್ನೊಂದು ಅರ್ಥದಲ್ಲಿ ಚಿತ್ರದ ಹೀರೋ ಆಗಿದ್ದ ಪಾರಿವಾಳಗಳೇ, ಈಗ ವಿಲನ್ ಆಗಿಬಿಟ್ಟಿವೆ.

  ಆಗಿರೋದು ಇಷ್ಟು. ಪಾರಿವಾಳಗಳನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳೋದಕ್ಕೆ ಸೆಂಟ್ರಲ್ ಅನಿಮಲ್ ಬೋರ್ಡ್ ಅನುಮತಿ ಕೊಡಬೇಕು. ಇದಕ್ಕೆ ಚಿತ್ರತಂಡ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಅವರ ದುರದೃಷ್ಟ ನೋಡಿ. ಇನ್ನೇನು ಅಂತಿಮ ಅನುಮತಿ ಪತ್ರ ಸಿಗಬೇಕು ಎಂಬ ಹೊತ್ತಿನಲ್ಲಿ ಅನಿಮಲ್ ಬೋರ್ಡ್ ನಿರ್ದೇಶಕರು ಬದಲಾಗಿಬಿಟ್ಟರು. ಹೀಗಾಗಿ.. ಅನುಮತಿ ಪಡೆಯುವ ಪ್ರಕ್ರಿಯೆ ಮತ್ತೆ ಮೊದಲಿನಿಂದ ಶುರುವಾಯ್ತು. ಇದರಿಂದಾಗಿ ಸಿನಿಮಾವನ್ನು ಅನಿವಾರ್ಯವಾಗಿ ಬೇರೆ ದಿನಾಂಕದಲ್ಲಿ ರಿಲೀಸ್ ಮಾಡೋಕೆ ನಿರ್ಧರಿಸಿದೆ ಬಜಾರ್ ಟೀಂ.

  ತಿಮ್ಮೇಗೌಡ ನಿರ್ಮಾಣದ ಬಜಾರ್ ಚಿತ್ರದ ಮೂಲಕ ಧನ್ವೀರ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಆದಿತಿ ನಾಯಕಿ. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟಿಸಿರುವ ಸಿನಿಮಾ ಬಿಡುಗಡೆಯ ಮುಂದಿನ ದಿನಾಂಕ ಸದ್ಯಕ್ಕೆ ಸಸ್ಪೆನ್ಸ್.

 • ಬಜಾರ್‍ನಲ್ಲಿ ಲವ್ ಫೇಲ್ಯೂರ್ ಸೆಲಬ್ರೇಷನ್..! 

  love failure song in bazar

  ಬಜಾರ್. ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಧನ್‍ವೀರ್ ಎಂಬ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ಸುನಿ. ಆದಿತಿ ಪ್ರಭುದೇವ ನಾಯಕಿ. ಈ ಚಿತ್ರದಲ್ಲೀಗ ಲವ್ ಫೇಲ್ಯೂರ್ ಆಗಿದೆ. ಅರ್ಥಾತ್.. ಮೊದಲ ಹಾಡು ರಿಲೀಸ್ ಆಗಿದೆ.

  ಲವ್ ಫೇಲ್ಯೂರ್ ಆಗೋಯ್ತು ನನಗೆ..  ಫೀಲ್ ಅಂತೂ ಸೂಪರು ಕಣ್ಣೀರ ಜೊತೆಗೆ.. ಏನೇನೋ ಬೈದ್ರೂ ಚೆಂದಾನೇ ನನಗೆ.. ದೂರಾನೇ ಆದ್ರೂ ನೀ ಕಣ್ಣ ಒಳಗೆ.. ಅನ್ನೋ ಹಾಡು.. ಬಿಟ್ಟಿದ್ದಾರೆ ಸುನಿ. ಸಂಗೀತ ನೀಡಿರುವುದು ರವಿ ಬಸ್ರೂರು. ಹಾಡಿರುವುದು ವಿಜಯ್ ಪ್ರಕಾಶ್.

  ಈ ಹಾಡಿನ ಸ್ಪೆಷಾಲಿಟಿ ಏನ್ ಗೊತ್ತಾ..? ಲವ್ ಫೇಲ್ಯೂರ್ ಅನ್ನು ಸೆಲಬ್ರೇಷನ್ ಮಾಡೋ ಹಾಡಿದು. ಭಗ್ನ ಪ್ರೇಮಿಗಳಿಗೆ ದುಃಖದ ಹಾಡಿದೆ. ಎಣ್ಣೆ ಹಾಡಿದೆ. ಫೀಲಿಂಗ್ ಸಾಂಗ್ ಇದೆ. ಆದರೆ, ಸೆಲಬ್ರೇಷನ್ ಸಾಂಗ್ ಇರಲಿಲ್ಲ. ಅಂಥಾದ್ದೊಂದು ಹಾಡು ಕೊಡೋ ಮೂಲಕ ಸುನಿ, ಒನ್ಸ್ ಎಗೇಯ್ನ್ ತಾವು ಡಿಫರೆಂಟ್ ಅಂತಾ ತೋರಿಸಿದ್ದಾರೆ.

 • ಮತ್ತೊಂದು ಕಿಕ್ ಕೊಟ್ಟ ಬಜಾರ್ ಸುನಿ

  bazaar second trailer is out

  ಸಿಂಪಲ್ ಸುನಿ, ಚಮಕ್ ಸುನಿ.. ಈಗ ಬಜಾರ್ ಸುನಿಯಾಗಿದ್ದಾರೆ. ಪಾರಿವಾಳಗಳ ರೇಸ್, ಭೂಗತ ಜಗತ್ತು ಮತ್ತು ಮಧ್ಯದಲ್ಲೊಂದು ನವಿರಾದ ಪ್ರೇಮಕತೆಯನ್ನಿಟ್ಟುಕೊಂಡು ಬಜಾರ್ ಅನ್ನೋ ಚಿತ್ರ ಸೃಷ್ಟಿಸಿರುವ ಸುನಿ, ಅದೇ ಚಿತ್ರದ ಮತ್ತೊಂದು ಕಿಕ್ ಕೊಟ್ಟಿದ್ದಾರೆ. 

  ಹೊಸ ಪ್ರತಿಭೆ ಧನ್‍ವೀರ್, ಆದಿತಿ, ಶರತ್ ಲೋಹಿತಾಶ್ವ ನಟಸಿರುವ ಚಿತ್ರದ 2ನೇ ಟ್ರೇಲರ್ ಹೊರಬಿಟ್ಟಿದ್ದಾರೆ ಸುನಿ. ಪಾರಿವಾಳ ಎಂದರೆ ಪ್ರೀತಿ.. ಪಾರಿವಾಳ ಎಂದರೆ ಶಾಂತಿ.. ಆ ಎರಡನ್ನೂ ಹೊರತುಪಡಿಸಿದ ಇನ್ನೊಂದು ಕಥೆ ಇಲ್ಲಿದೆ ಎನ್ನುತ್ತಲೇ ವಿಭಿನ್ನ ಕಥೆಯೊಂದನ್ನು ಹೊರತೆಗೆದಿದ್ದಾರೆ ಸುನಿ.

  ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದ್ದು, ಹಾಡು ಹೆಜ್ಜೆ ಹಾಕುವಂತಿವೆ. ಚಿಗುರು ಮೀಸೆ ಹುಡುಗನಾಗಿ ಧನ್‍ವೀರ್, ಚೆಂದೊಳ್ಳಿ ಚೆಲುವೆಯಾಗಿ ಆದಿತಿ ಇಷ್ಟವಾಗುವಂತಿದ್ದಾರೆ. ಜನವರಿ 11ಕ್ಕೆ ಚಿತ್ರಮಂದಿರದ ಬಜಾರುಗಳಲ್ಲಿರಲಿದೆ ಬಜಾರ್.

 • ಲವ್ ಫೇಲ್ಯೂರ್ ಆದ್ರೆ.. ಹಿಂಗೆಲ್ಲ ಎಂಜಾಯ್ ಮಾಡ್ತಾರಾ..?

  this hero is unque and enjoys break up

  ಲವ್ ಫೇಲ್ಯೂರ್ ಆದಾಗ ಹೀರೋಗಳು ಡಿಸೈನ್ ಡಿಸೈನಾಗಿ ಕಣ್ಣೀರು ಹಾಕೋದನ್ನ ಬೇಜಾನ್ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ, ಬಜಾರ್‍ನಲ್ಲಿ ನಿಮಗೆ ಬೇರೆಯದೇ ಸ್ಟೈಲ್ ಇದೆ. ಮುಂದಿನ ವಾರ ತೆರೆಗೆ ಬರ್ತಿರೋ ಸಿಂಪಲ್ ಸುನಿ ನಿರ್ದೇಶನದ ಬಜಾರ್‍ನಲ್ಲಿ ಹೀರೋ ಲವ್ ಫೇಲ್ಯೂರ್ ಆಗಲಿ ಎಂದು ಬಯಸಿ ಬಯಸೀ ಭಗ್ನ ಪ್ರೇಮಿಯಾಗ್ತಾನೆ.

  ಅಷ್ಟೇ ಅಲ್ಲ.. ಲವ್ ಫೇಲ್ಯೂರ್ ಆಗೋಯ್ತು ನನಗೆ.. ಫೀಲ್ ಅಂತೂ ಸೂಪರ್ ಕಣ್ಣೀರ ಜೊತೆಗೆ.. ಅನ್ನೋ ಹಾಡೂ ಇದೆ. ಧನ್ವೀರ್ ಈ ಹಾಡು ಹಾಡಿ ಕುಣಿತಾರಂತೆ. ಹುಡುಗರಿಗೆಲ್ಲ.. ಅದರಲ್ಲೂ ಭಗ್ನಪ್ರೇಮಿಗಳಿಗೆಲ್ಲ ಹಾಡು ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ.

  ಆದಿತಿ ಪ್ರಭುದೇವ ನಾಯಕಿಯಾಗಿರುವ ಚಿತ್ರದಲ್ಲಿ ಪಾರಿವಾಳ ಮತ್ತು ಭೂಗತ ಲೋಕದ ನಂಟಿನ ಕಥೆಯಿದೆ. ಇದುವರೆಗಿನ ಸುನಿ ಚಿತ್ರಗಳ ಸ್ಟೈಲೇ ಬೇರೆ.. ಈ ಚಿತ್ರದ ಸ್ಟೈಲೇ ಬೇರೆ ಎನ್ನುತ್ತಿದೆ ಸ್ಯಾಂಡಲ್‍ವುಡ್.

 • ಸುನಿ ಅಂದ್ರೆ ಹೊಸಬರಿಗೆ ಲಕ್ಕಿ ಡೈರೆಕ್ಟರ್..!

  simple suni is a lucky charm to new comers

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಚಿತ್ರದ ಹೀರೋ ಧನ್‍ವೀರ್. ಅವರಿಗಿದು ಹೊಸ ಸಿನಿಮಾ. ಪಾರಿವಾಳದ ರೇಸ್, ರೌಡಿಸಂ, ಲವ್‍ಸ್ಟೋರಿ, ಮರ್ಡರ್ ಮಿಸ್ಟರಿ ಎಲ್ಲವೂ ಇರುವ ಸಿನಿಮಾ ಇದು. ಚಿತ್ರದ ಡೈರೆಕ್ಟರ್ ಸುನಿ. ಸಿಂಪಲ್ ಸುನಿ. ಲಾಂಚಿಂಗ್ ಸುನಿ. ಈ ಚಿತ್ರದೊಂದಿಗೆ ಸಿಂಪಲ್ ಸುನಿಗೆ ಇಂಥಾದ್ದೊಂದು ಬಿರುದು ಸಿಕ್ಕರೂ ಆಶ್ಚರ್ಯವಿಲ್ಲ. 

  ರಕ್ಷಿತ್ ಶೆಟ್ಟಿ ಎಂಬ ನಟ ಕನ್ನಡಿಗರಿಗೆ ಚಿರಪರಿಚಿತನಾಗಿದ್ದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ. ಆಪರೇಷನ್ ಆಲಮೇಲಮ್ಮ ಮೂಲಕ ರಿಷಿ, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಮೂಲಕ ಪ್ರವೀಣ್, ಈಗ ಬಜಾರ್ ಚಿತ್ರದ ಮೂಲಕ ಧನ್‍ವೀರ್.

  ವಿಶೇಷ ಅಂದ್ರೆ, ನಾನು ಹೊಸಬರನ್ನೇನೂ ಪರಿಚಯಿಸಲಿಲ್ಲ. ಅದಕ್ಕೂ ಮೊದಲೇ ನಟಿಸಿದ್ದ ಅವರಿಗೆ ನನ್ನ ಚಿತ್ರಗಳ ಮೂಲಕ ಹೆಸರೂ ಸಿಕ್ಕಿತು. ಹೀಗಾಗಿ ನಾನು ಲಾಂಚಿಂಗ್ ಡೈರೆಕ್ಟರ್ ಎನಿಸಿಕೊಂಡಿದ್ದೇನೆ ಅಂತಾರೆ ಸುನಿ. ಬಜಾರ್ ಚಿತ್ರದಲ್ಲಿ ಧನ್‍ವೀರ್ ಹಾಗೂ ಕಿರುತೆರೆ ಕಲಾವಿದೆ ಆದಿತಿಯನ್ನು ಲಾಂಚ್ ಮಾಡಿದ್ದಾರೆ ಸಿಂಪಲ್ ಸುನಿ.

   

 • ಸುನಿಗೆ ಬಜಾರ್ ಸಿಕ್ಸರ್

  bazar is sixth movie for suni

  ಬಜಾರ್. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕಾಗಿಯೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಇದು ಅವರ ನಿರ್ದೇಶನದ ಆರನೇ ಸಿನಿಮಾ. ಹೀಗಾಗಿಯೇ ಭರ್ಜರಿ ಸಿಕ್ಸರ್ ನಿರೀಕ್ಷೆಯಲ್ಲಿದ್ದಾರೆ ಸುನಿ.

  2013ರಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಎಂಬ ಸ್ಟಾರ್ ಹುಟ್ಟಿಗೆ ಕಾರಣರಾದ ಸುನಿ, ಈಗ ಧನ್‍ವೀರ್ ಅವರನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ.

  ಬಜಾರ್, ಸುನಿ ಕೆರಿಯರ್‍ನಲ್ಲಿಯೇ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ. ಪಾರಿವಾಳಗಳ ರೇಸ್‍ನ ಕಥೆ ಚಿತ್ರದಲ್ಲಿದೆ. ಪಾರಿವಾಳಗಳ ರೇಸ್, ಭೂಗತ ಜಗತ್ತಿನ ಕಥೆ ಹೇಳುತ್ತಿರುವ ಸುನಿ, ಫೈಟ್ಸ್, ರೊಮ್ಯಾನ್ಸ್, ಕಾಮಿಡಿಯನ್ನು ಹದವಾಗಿ ಬೆರೆಸಿ ತೆಗೆದಿರುವ ಪಾಕ ಬಜಾರ್.

  ಆದಿತಿ ಪ್ರಭುದೇವ ಚಿತ್ರದ ನಾಯಕಿ. ಚಿತ್ರದ 2ನೇ ಟ್ರೇಲರ್ 3ನೇ ತಾರೀಕು ರಿಲೀಸ್ ಆಗುತ್ತಿದ್ದು, ಸಿನಿಮಾ ಜನವರಿ 2ನೇ ವಾರದಲ್ಲಿ ತೆರೆಗೆ ಬರಲಿದೆ.

 • ಸೆನ್ಸಾರ್ ಗೆದ್ದ ಬಜಾರ್ 

  bazar wins censor war

  ಅನಿಮಲ್ ಬೋರ್ಡಿನಿಂದ ಅನುಮತಿ ಸಿಗದೆ, ಬಿಡುಗಡೆ ದಿನಾಂಕವನ್ನು ಘೋಷಿಸಿಯೂ ಸಂಕಷ್ಟಕ್ಕೆ ಸಿಲುಕಿದ್ದ ಬಜಾರ್ ಸಿನಿಮಾ, ಮೊದಲ ಯುದ್ಧ ಗೆದ್ದಿದೆ. ಪಾರಿವಾಳಗಳನ್ನು ಬಳಸಿಕೊಂಡಿದ್ದ ವಿಷಯಕ್ಕೆ ಅನಿಮಲ್ ಬೋರ್ಡಿನಿಂದ ಕ್ಲಿಯರೆನ್ಸ್ ಸಿಗದೆ ಜನವರಿ 11ಕ್ಕೆ ರಿಲೀಸ್ ಆಗಬೇಕಿದ್ದ ಚಿತ್ರವನ್ನು ಮುಂದೂಡಲಾಗಿತ್ತು.

  ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ ಧನ್ವೀರ್ ಹೀರೋ. ನಾಗಕನ್ಯೆ ಖ್ಯಾತಿ ಆದಿತಿ ಪ್ರಭುದೇವ ನಾಯಕಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery