` srinidhi shetty, - chitraloka.com | Kannada Movie News, Reviews | Image

srinidhi shetty,

 • 'KGF' Release Date To Be Announced On Sep 19th

  kgf release date to announce on sep 19th

  The shooting for Yash starrer 'KGF' is complete and the release date of the film is all set to be announced on the 19th of September.

  'KGF' is written and directed by Prashanth Neel who had earlier directed Murali starrer 'Ugram'. This is his second film as a director and the film is produced by Vijaykumar Kiragandur, who had earlier produced 'Rajakumara', 'Ninnindale' and 'Master Piece'. 

  'KGF' stars Yash, Srinidhi Shetty, Tamanna Bhatia, Vasishta Simha, Achyuth Kumar, Nassar and others and will be released in Kannada, Telugu and Tamil languages simultaneously. The film has music by Ravi Basrur and camerawork is by Bhuvan Gowda.

 • KGF To Release A Day Early In US and Canada

  kgf to release inusa and canada one day earlier

  For the first time in the history of Sandalwood a Kannada film will be releasing in US and Canada a day early than its release in Karnataka. Earlier Puneeth Rajkumar's Chakravyuha became the first Kannada film to have an overseas premier before an India release. It was released in Australia one day before it released in Karnataka. KGF will not only release in Kannada but also in Tamil,

  Telugu and Malayalam on December 20 in the US and Canada. This will be a big weekend release for the film which will be competing with Shah Rukh Khan's Zero in those markets.

 • ಅಬ್ಬಾ..! ಇತಿಹಾಸ ನಿರ್ಮಿಸುತ್ತಿದೆ ಕೆಜಿಎಫ್

  kgf breaks all records

  ಕೆಜಿಎಫ್... ಬಿಡುಗಡೆಗೆ ಮೊದಲೇ ಒಂದೊಂದೇ ಇತಿಹಾಸ ನಿರ್ಮಿಸುತ್ತಾ ಹೊರಟಿದೆ. ಬಿಡುಗಡೆಯಾಗುವುದು ಡಿಸೆಂಬರ್ ಕೊನೆಯ ವಾರದಲ್ಲಿ. ಟ್ರೇಲರ್ ರಿಲೀಸ್ ಆಗಿ ಒಂದು ವಾರವೂ ಆಗಿಲ್ಲ. ಕ್ರೇಝ್ ಮಾತ್ರ.. ಮೌಂಟ್ ಎವರೆಸ್ಟ್ ಎತ್ತರದಲ್ಲಿ ಬೆಳೆಯುತ್ತಿದೆ.

  ಕೆಜಿಎಫ್ ಚಿತ್ರದ ಟ್ರೇಲರ್ ನೋಡಿದವರ ಸಂಖ್ಯೆ 2 ಕೋಟಿ ದಾಟಿದೆ. ಕನ್ನಡದಲ್ಲಿ ಟ್ರೇಲರ್ ನೋಡಿದವರಿಗಿಂತ, ಹಿಂದಿಯ ಟ್ರೇಲರ್ ನೋಡಿದವರ ಸಂಖ್ಯೆಯೇ ಹೆಚ್ಚು. ಕೆಜಿಎಫ್ ಟ್ರೇಲರ್ ನೋಡಿದವರು, ಕನ್ನಡದ ಬಗ್ಗೆ ಗೊತ್ತಿಲ್ಲದೇ ಇರುವವರು ಯಶ್ ಬಗ್ಗೆ ಹುಡುಕಾಡುವುದು ಹೆಚ್ಚಾಗಿದೆ. ಗೂಗಲ್ ಸರ್ಚ್‍ನಲ್ಲಿಯೂ ಯಶ್ ಟಾಪ್ 10ನಲ್ಲಿದ್ದಾರೆ. ಟ್ರೆಂಡಿಂಗ್‍ನಲ್ಲಿಯೂ ಕೆಜಿಎಫ್ ಟಾಪ್‍ನಲ್ಲಿದೆ.

  ಕೆಜಿಎಫ್ ಸೃಷ್ಟಿಸುತ್ತಿರುವ ಕ್ರೇಝ್ ನೋಡಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಖುಷಿಯಾಗಿದ್ದಾರೆ. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಎಲ್ಲರೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.

 • ಕೆಜಿಎಫ್ ಎಫೆಕ್ಟ್ : ಭುವನ್, ಶ್ರೀನಿಧಿ ಶೆಟ್ಟಿಗೆ ಎಂಥ ಡಿಮ್ಯಾಂಡು..?

  kgf effect, srinidhi shetty in demand

  ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದರೆ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ರಿಯಾಕ್ಷನ್ ನೋಡಿ ಸಂಭ್ರಮಿಸುತ್ತಿದೆ ಹೊಂಬಾಳೆ ಫಿಲಂಸ್. ನಿರ್ದೇಶಕ ಪ್ರಶಾಂತ್ ನೀಲ್‍ರ ಶ್ರಮ ಇಡೀ ಟ್ರೇಲರ್‍ನಲ್ಲಿ ಎದ್ದುಕಂಡಿದೆ. ಟ್ರೇಲರ್ ಹಿಟ್ ಆಗುತ್ತಿದ್ದಂತೆಯೇ ಎಲ್ಲರಿಗಿಂತ ಮೊದಲು ಡಿಮ್ಯಾಂಡ್ ಸೃಷ್ಟಿಯಾಗಿರುವುದು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಛಾಯಾಗ್ರಾಹಕ ಭುವನ್‍ಗೆ.

  ಚಿನ್ನದ ಗಣಿಯ ದೂಳು, ಕಣ್ಣ ಭಾವನೆಯ ನೆರಳುಗಳನ್ನು ಹೃದಯ ಮುಟ್ಟುವಂತೆ ಚಿತ್ರೀಕರಿಸಿರುವ ಭುವನ್‍ಗೆ ಈಗ ಬಾಲಿವುಡ್ ಸೇರಿದಂತೆ ಪರಭಾಷೆ ಚಿತ್ರಗಳ ನಿರ್ದೇಶಕರು, ನಿರ್ಮಾಪಕರಿಂದ ಕರೆ ಬರುತ್ತಿವೆ.

  ಅತ್ತ, ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ನಾಯಕಿ ಶ್ರೀನಿಧಿ ಶೆಟ್ಟಿಗೂ ಬಾಲಿವುಡ್ ಬ್ಯಾನರ್‍ಗಳಿಂದ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲವಾದರೂ, ಅವಕಾಶಗಳ ಸುರಿಮಳೆಯಂತೂ ಆಗುತ್ತಿದೆ. 

  ಡಿಸೆಂಬರ್ 21ಕ್ಕೆ ತೆರೆಗೆ ಬರಲಿರುವ ಕೆಜಿಎಫ್‍ನ ಕ್ರೇಝ್ ನೋಡುತ್ತಿದ್ದರೆ, ಶಾರೂಕ್ ಖಾನ್‍ರ ಝೀರೋ ಶೇಕ್ ಆದರೂ ಅಚ್ಚರಿಯಿಲ್ಲ.

 • ಕೆಜಿಎಫ್ ಟ್ರೇಲರ್‍ನ ಪವರ್‍ಫುಲ್ ಡೈಲಾಗ್ಸ್

  kgf dialogues goes viral

  ಕೆಜಿಎಫ್ ಚಿತ್ರದ ಮೇಕಿಂಗ್, ದೃಶ್ಯ ವೈಭವಕ್ಕೆ ಪೈಪೋಟಿ ನೀಡಿರುವ ಡೈಲಾಗುಗಳಂತೂ ಅದ್ಭುತ. ಟ್ರೇಲರ್‍ನಲ್ಲಿ ಖಡಕ್ ಅನ್ನಿಸೋದು ಎರಡೇ ಡೈಲಾಗು. ಉಳಿದಂತೆ ಭಾವನೆಗಳನ್ನು ಕೆರಳಿಸುವ, ಉದ್ದೀಪಿಸುವ ಮಾತುಗಳಿವೆ. ಟ್ರೇಲರ್ ಆರಂಭ : ಆ ರಾತ್ರಿ ಎರಡು ಘಟನೆ ನಡೀತು. ಆ ಜಾಗಾನೂ ಹುಟ್ತು. ಅವನೂ ಹುಟ್ಟಿದ..

  ಡೈಲಾಗ್ ನಂ. 1 - ಮುಂಬೈ ಏನು ನಿಮ್ಮಪ್ಪಂದಾ..?

  ಅಲ್ಲ ಕಣೋ.. ನಿಮ್ಮಪ್ಪಂದೇ.. ನಿಮ್ಮಪ್ಪ ನಾನೇ..

  ಡೈಲಾಗ್ ನಂ. 2 - ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ನೀನು ಬರೀ ಒಂದು ಯುದ್ಧ ಗೆಲ್ಲಬಹುದು.

  ಅದೇ ನೀನು ಮುಂದೆ ನಿಂತಿದ್ದೀಯ ಅನ್ನೋ ಧೈರ್ಯ ನಿನ್ನ ಹಿಂದೆ ಇರೋ ಸಾವಿರ ಜನಕ್ಕೆ ಬಂದ್ರೆ, ನೀನು ಪ್ರಪಂಚನೇ ಗೆಲ್ಲಬಹುದು.

  ಡೈಲಾಗ್ ನಂ. 3 - ರೌಡಿ : ಏನೋ ಬೇಕು ನಿಂಗೆ..?  ಮಾಸ್ಟರ್ ಯಶ್ ಡೈಲಾಗ್ : ದುನಿಯಾ

  ಟ್ರೇಲರ್ ಇಂಟರ್ವಲ್ - ನೀನು ಒಂದು ಆನೆ ಹೊಡೀಬೇಕು ಅಂತಾ ಹೇಳ್ತಾನೆ ಡಾನ್. ಯಶ್ ಜರ್ನಿ ಶುರು. ಹೊರಟ.. ಅವನಿಗೆ ಹೋಗೋ ದಾರಿನೂ ಗೊತ್ತಿರ್ಲಿಲ್ಲ. ತಲುಪೋ ಜಾಗದ ಬಗ್ಗೆ ಗೊತ್ತಿರಲಿಲ್ಲ.  ಅಲ್ಲಿನ ಅಮಾನುಷತೆಯೂ ಗೊತ್ತಿರಲಿಲ್ಲ.

  ಹೀಗೆ ಶುರುವಾಗುವ ಟ್ರೇಲರ್‍ನಲ್ಲಿ ಸಣ್ಣ ಸಣ್ಣ ಸೌಂಡು ಕೂಡಾ ಎದ್ದು ಕಾಣುತ್ತೆ. ಕಿವಿಗೆ ನಾಟುತ್ತೆ. ಪ್ರಶಾಂತ್ ನೀಲ್ ಮತ್ತೊಮ್ಮೆ ಉಗ್ರಂ ನೆನಪಿಸುತ್ತಾರೆ.

 • ಕೆಜಿಎಫ್ ನಾಯಕಿ ಹೇಳಿದ ಸೀಕ್ರೆಟ್

  kgf heroine srinidhi

  ಹೊಂಬಾಳೆ ಬ್ಯಾನರ್‍ನಲ್ಲಿ ಸಿದ್ಧವಾಗುತ್ತಿರುವ ಕೆಜಿಎಫ್ ಚಿತ್ರದ ಕಥೆ ಏನು..? ಯಶ್ ಪಾತ್ರ ಏನು..? ಈ ಬಗ್ಗೆ ಚಿತ್ರತಂಡ ಅದೆಷ್ಟು ಗಮನ ಹರಿಸಿದೆಯೆಂದರೆ, ಒಂದೇ ಒಂದು ಗುಟ್ಟನ್ನೂ ಅದು ಹೊರಬಿಟ್ಟಿಲ್ಲ. ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವ ಟೀಸರ್, ಕುತೂಹಲ ಹೆಚ್ಚಿಸಿದೆಯೇ ಹೊರತು, ಕಥೆಯ ಸುಳಿವನ್ನೂ ಹೇಳಿಲ್ಲ. 

  ಹೀಗೆ ಪ್ರಶಾಂತ್ ನೀಲ್ ಕಥೆಯ ಬಗ್ಗೆ ಗುಟ್ಟು ಕಾಪಾಡಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ನಾಯಕ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿದ್ದಾರೆ. ಯಶ್ ಬಗ್ಗೆ, ಸಿನಿಮಾ ಟೀಂ ಬಗ್ಗೆ ಖುಷಿ ಖುಷಿಯಾಗಿ ಹೇಳಿಕೊಂಡಿರುವ ಶ್ರೀನಿಧಿ, ನಿಮ್ಮ ರೋಲ್ ಏನು ಎಂದರೆ, ಅದನ್ನೆಲ್ಲ ಹೇಳಂಗಿಲ್ಲ. ನನ್ನ ಪಾತ್ರದ ವಿವರಣೆ ನೀಡಿದರೆ, ಕಥೆ ಗೊತ್ತಾಗಿಬಿಡುತ್ತೆ ಎನ್ನುತ್ತಾರೆ. ಸೀಕ್ರೆಟ್..ಸೀಕ್ರೆಟ್..ಸೀಕ್ರೆಟ್.

  ಕಾಲೇಜು ದಿನಗಳಿಂದ ಯಶ್ ಅವರ ಸಿನಿಮಾ ನೋಡುತ್ತಿದ್ದ ಶ್ರೀನಿಧಿಗೆ ಅವರಿಗೇ ಹೀರೋಯಿನ್ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನಟನೆಯ ಗಾಳಿಗಂಧ ಗೊತ್ತಿಲ್ಲದ ಶ್ರೀನಿಧಿಗೆ ಸೆಟ್‍ನಲ್ಲಿ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದು ಸ್ವತಃ ಯಶ್. ಯಶ್ ಅವರಿಲ್ಲದೆ ಹೋಗಿದ್ದರೆ, ನಾನು ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿದ್ದಾರೆ ಶ್ರೀನಿಧಿ.

  ಮಿಸ್ ಸುಪ್ರಾ ನ್ಯಾಷನಲ್ ಆಗಿ ಆಯ್ಕೆಯಾಗಿದ್ದ ಶ್ರೀನಿಧಿ ಶೆಟ್ಟಿಗೆ ಆ್ಯಕ್ಟಿಂಗ್ ಕ್ಲಾಸ್‍ಗೆ ಹೋಗುವ ಆಸೆಯಿತ್ತು. ಆದರೆ, ಸಮಯವೇ ಸಿಗಲಿಲ್ಲ. ಈ ಸಿನಿಮಾ ಮುಗಿದ ಮೇಲೆ ಬಿಡುವು ಮಾಡಿಕೊಂಡು ಕಲಿಯುತ್ತೇನೆ ಎಂದಿದ್ದಾರೆ ಶ್ರೀನಿಧಿ.

   

 • ಕೆಜಿಎಫ್ ನಾಯಕಿಗೆ ಕಲರಿಪಯಟ್ಟು ಪ್ರಾಕ್ಟೀಸ್ ಏಕೆ..?

  kgf heroine srinishi shetty

  ಶ್ರೀನಿಧಿ ಶೆಟ್ಟಿ, ಕೆಜಿಎಫ್ ಚಿತ್ರದ ನಾಯಕಿ. ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್‍ನ ಈ ಸಿನಿಮಾ, ಸೃಷ್ಟಿಸಿರುವ ನಿರೀಕ್ಷೆ ಸಣ್ಣದಲ್ಲ. ಹೆಚ್ಚೂ ಕಡಿಮೆ ಒಂದು ವರ್ಷದಿಂದ ಚಿತ್ರೀಕರಣದಲ್ಲಿರುವ ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ, ಈಗ ಕಲರಿಪಯಟ್ಟು ಪ್ರಾಕ್ಟೀಸ್ ಮಾಡುತ್ತಿದ್ದಾರೆ.

  ಕಲರಿಪಯಟ್ಟು ಕೇರಳದ ಸಮರಕಲೆ. ಭಾರತೀಯ ಪ್ರಕಾರದ ಮಾರ್ಷಲ್ ಆಟ್ರ್ಸ್. ಮರ್ಮ ಕಲೈ ಅಂತಾನೂ ಕರೀತಾರೆ. ಈ ಸಮರಕಲೆಯನ್ನ ಶ್ರೀನಿಧಿ ಶೆಟ್ಟಿ ಇದ್ದಕ್ಕಿದ್ದಂತೆ ಪ್ರಾಕ್ಟೀಸ್ ಮಾಡ್ತಿರೋದು ಏಕೆ..? ಕೆಜಿಎಫ್ ಸಿನಿಮಾಗೂ ಕಲರಿಪಯಟ್ಟು ಕಲೆಗೂ ಏನು ಸಂಬಂಧ..? ಗೊತ್ತಿಲ್ಲ.

  ಶ್ರೀನಿಧಿ ಶೆಟ್ಟಿಯವರ ಕಲರಿಪಯಟ್ಟು ಪ್ರಾಕ್ಟೀಸ್ ಫೋಟೋ, ಕೆಜಿಎಫ್ ಕುರಿತು ಇನ್ನಷ್ಟು ಕುತೂಹಲ ಸೃಷ್ಟಿಸಿರುವುದಂತೂ ಸತ್ಯ.

 • ಕೆಜಿಎಫ್ ರಿಲೀಸ್ ಯಾವಾಗ..? - ಸೆ.19ಕ್ಕೆ ಹೇಳ್ತಾರೆ

  kgf release date to be announced on sep 19th

  ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಹೇಳಲಿಕ್ಕೆಂದೇ ಒಂದು ಡೇಟ್ ಫಿಕ್ಸ್ ಮಾಡುವ ಟ್ರೆಂಡ್ ಶುರುವಾಗಿದೆಯಾ..? ದಿ ವಿಲನ್ ತಂಡ, ಗಣೇಶನ ಹಬ್ಬದ ದಿನ ರಿಲೀಸ್ ಡೇಟ್ ಹೇಳುತ್ತೇವೆ ಎಂದಿದ್ದರೆ, ಕೆಜಿಎಫ್ ಚಿತ್ರತಂಡವೂ ರಿಲೀಸ್ ಡೇಟ್ ಹೇಳಲಿಕ್ಕೆಂದೆ ಒಂದು ಡೇಟ್ ಫಿಕ್ಸ್ ಮಾಡಿದೆ.

  ಸೆಪ್ಟೆಂಬರ್ 19ರಂದು ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಆ ದಿನವೇ ಚಿತ್ರದ ಬಿಡುಗಡೆ ದಿನಾಂಕ ಹೇಳಲಿದೆ ಕೆಜಿಎಫ್ ಟೀಂ. ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಹೊಂಬಾಳೆ ಬ್ಯಾನರ್‍ನ ಬಹು ನಿರೀಕ್ಷಿತ ಚಿತ್ರ. ಕನ್ನಡದ ಬಿಗ್ ಬಜೆಟ್ ಚಿತ್ರವಾಗಿರೋ ಕೆಜಿಎಫ್, ಹೆಚ್ಚೂ ಕಡಿಮೆ 2 ವರ್ಷಗಳಿಂದ ವಿವಿಧ ಹಂತಗಳಲ್ಲಿ ಸಿದ್ಧವಾಗುತ್ತಿದೆ. ಸದ್ಯಕ್ಕೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

  Related Articles :-

  'KGF' Release Date To Be Announced On Sep 19th

 • ಕೆಜಿಎಫ್‍ಗೆ ಥ್ರಿಲ್ಲಾದ ಸ್ಟಾರ್‍ಗಳು ಏನ್ ಹೇಳಿದ್ರು ನೋಡಿ..

  sandalwood stars thrilled about kgf

  ಕೆಜಿಎಫ್ ಟ್ರೇಲರ್ ಬಂತು. ಹವಾ ಎಬ್ಬಿಸಿತು. ಕನ್ನಡದಲ್ಲಷ್ಟೇ ಅಲ್ಲ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಕೆಜಿಎಫ್ ಬಗ್ಗೆ ಇರುವ ಕ್ರೇಜ್ ಗೊತ್ತಾಯ್ತು. ಚಿತ್ರದ ನಿಜವಾದ ಹೀರೋ ನಿರ್ಮಾಪಕ ವಿಜಯ್ ಕಿರಗಂದೂರು ಎಂದರು ಯಶ್. ಅತಿಶಯೋಕ್ತಿಯೇನೂ ಇರಲಿಲ್ಲ. ಕನಸು ಕಂಡವರು ಪ್ರಶಾಂತ್ ನೀಲ್. ನರ್ವಸ್ ಆಗಿದ್ದೇನೆ ಎಂದು ಪ್ರಾಮಾಣಿಕವಾಗಿಯೇ ಹೇಳಿಕೊಂಡರು. ಶಾರೂಕ್ ಝೀರೋಗೆ ಎದುರಾಗಿ ಬರುತ್ತಿದೆ ಎಂಬ ಮಾತಿಗೆ `ನಾನೂ ಶಾರೂಕ್ ಅಭಿಮಾನಿ. ಅದೊಂದು ಗೌರವ' ಎಂದರು ಯಶ್. ಯಶ್ ನನ್ನ ತಮ್ಮನಿದ್ದ ಹಾಗೆ ಎಂದರು ವಿಶಾಲ್. ಹೀಗೆ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಕೆಜಿಫ್ ಟ್ರೇಲರ್‍ಗೆ ಕನ್ನಡ ಚಿತ್ರರಂಗದ ಸ್ಟಾರ್‍ಗಳು ಏನ್ ಹೇಳಿದ್ದಾರೆ ಗೊತ್ತಾ..?

  ಕಿಚ್ಚ ಸುದೀಪ್ : ಜ್ವಾಲಾಮುಖಿ ಇನ್ನೇನು ಸ್ಫೋಟಗೊಳ್ಳುವ ಹಾಗಿದೆ. ಕೆಜಿಎಫ್ ತಂಡಕ್ಕೆ ನನ್ನ ಶುಭಾಶಯಗಳು. ನಿರ್ದೇಶಕ ಪ್ರಶಾಂತ್ ನೀಲ್‍ಗೆ ಹ್ಯಾಟ್ಸಾಫ್. ಯಶ್ ಲುಕ್ ಚೆನ್ನಾಗಿದೆ. ಹೊಂಬಾಳೆ ಫಿಲಂಸ್‍ಗೆ ಅಭಿನಂದನೆಗಳು.

  ನವರಸನಾಯಕ ಜಗ್ಗೇಶ್ : ಕನ್ನಡ ಚಿತ್ರರಂಗದ ಕಿರೀಟಕ್ಕೊಂದು ನವಿಲುಗರಿ. ಭಾರತದ ದಶದಿಕ್ಕು ತಲುಪಲಿ ಕನ್ನಡಿಗರ ಕಾಯಕ. 

  ರಾಣಾ ದಗ್ಗುಬಾಟಿ : ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯಗಳು.

  ರಾಮ್‍ಗೋಪಾಲ್ ವರ್ಮಾ : ಕೆಜಿಎಫ್ ಟ್ರೇಲರ್ ನೀವು ನೋಡಲೇಬೇಕು. ಉ.ಭಾರತದ ಚಿತ್ರಗಳಿಗಿಂತ ದ.ಭಾರತದ ಚಿತ್ರಗಳು ಬೆಳೆಯುತ್ತಿವೆ.

  ಶ್ರೀಮುರಳಿ : ಒಂದೊಳ್ಳೆ ಅನುಭವಕ್ಕಾಗಿ ಕೆಜಿಎಫ್ ನೋಡಿ. ನಾನೂ ಕೂಡಾ ಸಿನಿಮಾ ನೋಡಲು ಕಾಯುತ್ತಿದ್ದೇನೆ.

  ಶಶಾಂಕ್, ನಿರ್ದೇಶಕ - ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದು ಎಂದರೆ ಇದೇ.. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಮತ್ತು ಕೆಜಿಎಫ್ ತಂಡಕ್ಕೆ ಶುಭಾಶಯಗಳು

  ಡ್ಯಾನಿಶ್ ಸೇಠ್ : ವ್ಹಾವ್... ವ್ಹಾವ್... ವ್ಹಾವ್.. ಕೆಜಿಎಫ್ ಅದ್ಭುತ ಟ್ರೇಲರ್. 

  ಹರಿಪ್ರಿಯಾ : ಟ್ರೇಲರ್ ಅದ್ಭುತವಾಗಿದೆ. ಸಿನಿಮಾ ನೋಡಲು ಕಾತುರಳಾಗಿದ್ದೇನೆ.

  ರಶ್ಮಿಕಾ ಮಂದಣ್ಣ : ಓ ಮೈ ಗಾಡ್.. ಓ ಮೈ ಗಾಡ್.. ಓ ಮೈ ಗಾಡ್.. ಅದ್ಭುತ ಟ್ರೇಲರ್. 

  ಕೃಷ್ಣ, ನಿರ್ದೇಶಕ : ಟ್ರೇಲರ್ ನಿಜಕ್ಕೂ ಗಮನ ಸೆಳೆಯುತ್ತಿದೆ. ಸುದೀರ್ಘ ವರ್ಷಗಳ ಶ್ರಮ, ಪ್ರತಿಭೆ ಎದ್ದು ಕಾಣುತ್ತಿದೆ.

  ಆರ್ಯ : ಅತ್ಯದ್ಭುತ ಟ್ರೇಲರ್. 3 ವರ್ಷಗಳ ಶ್ರಮ ಹೇಗಿದೆ ಅನ್ನೋದಕ್ಕೆ ಟ್ರೇಲರ್ ಸಾಕ್ಷಿ.

  ಪವನ್ ಒಡೆಯರ್ : ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ. ರೋಮಾಂಚನಗೊಳಿಸುವ ಟ್ರೇಲರ್.

  ಶೃತಿ ಹರಿಹರನ್ : ಟ್ರೇಲರ್ ಥ್ರಿಲ್ ನೀಡುತ್ತಿದೆ.

  ರಿಷಬ್ ಶೆಟ್ಟಿ : ಇದು ಮಾಸ್. ಇದು ಕ್ಲಾಸ್. ಅಥವಾ ಆ ಎರಡನ್ನೂ ಮೀರಿದ್ದು. ಕನ್ನಡ ಸಿನಿಮಾ ಎಂದರೆ ಇದು. ಪ್ರಶಾಂತ್ ನೀಲ್ ಮತ್ತೊಮ್ಮೆ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಯಶ್ ಅವರನ್ನು ಬಣ್ಣಿಸಲು ಪದಗಳಿಲ್ಲ.

  ಹೇಮಂತ್ ರಾವ್ : ಇದೊಂದು ಎಪಿಕ್. ಆ ದೃಶ್ಯ ವೈಭವ, ಮೇಕಿಂಗ್ ಅದ್ಭುತ.

 • ಪಾಕಿಸ್ತಾನದಲ್ಲೂ ಕೆಜಿಎಫ್ ಸದ್ದು..!

  kgf craze reaches pakistan

  ಕೆಜಿಎಫ್ ಸಿನಿಮಾ ಭಾರತದಲ್ಲಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಈ ರೀತಿ ಹವಾ ಸೃಷ್ಟಿಸುತ್ತಿದೆ. ಪಾಕಿಸ್ತಾನದಲ್ಲಿಯೂ ಚಿತ್ರದ ಬಗ್ಗೆ ಕ್ರೇಜ್ ಸೃಷ್ಟಿಯಾಗಿದ್ದು, ಚಿತ್ರವನ್ನು ನೋಡೋಕೆ ರೆಡಿಯಾಗಿದ್ದಾರೆ.

  ಇದು ಮಾಮೂಲಿ ಸಲ್ಮಾನ್, ಶಾರುಕ್ ಸಿನಿಮಾ ಅಲ್ಲ. ಚಿತ್ರದ ಮೇಕಿಂಗ್ ವಂಡರ್‍ಫುಲ್ ಆಗಿದೆ. ಡೈಲಾಗ್‍ಗಳೂ ಕಿಕ್ ಕೊಡುತ್ತಿವೆ. ಮಾಮೂಲಿ ಬಾಲಿವುಡ್ ಸಿನಿಮಾಗಿಂತ ಬೇರೆಯದೇ ಆದ ಸಿನಿಮಾ ಇದು. ನಾವಂತೂ ನೋಡಲು ಕಾಯುತ್ತಿದ್ದೇವೆ ಎಂದು ಪಾಕಿಸ್ತಾನದಲ್ಲಿರುವ ಬಾಲಿವುಡ್ ಸಿನಿಮಾ ಅಭಿಮಾನಿಗಳು ವಿಡಿಯೋ ಹೇಳಿಕೆ ಕೊಟ್ಟಿದ್ದಾರೆ.

  ಹೊಂಬಾಳೆ ಫಿಲಂಸ್ ಭರ್ಜರಿ ಹಿಟ್ ಕೊಡುವುದಕ್ಕೆ, ಸಂಭ್ರಮಿಸುವುದಕ್ಕೆ ಸಿದ್ಧವಾಗುತ್ತಿದೆ. 

#

The Terrorist Movie Gallery

Thayige Thakka Maga Movie Gallery