` Yash's KGF - chitraloka.com | Kannada Movie News, Reviews | Image

Yash's KGF

  • ಜಸ್ಟ್ ಒಂದೂವರೆ ಗಂಟೆ : ತೂಫಾನ್ ಹಾಡು ದಾಖಲೆ

    ಜಸ್ಟ್ ಒಂದೂವರೆ ಗಂಟೆ : ತೂಫಾನ್ ಹಾಡು ದಾಖಲೆ

    ಕೆಜಿಎಫ್ ಚಾಪ್ಟರ್ 2. ಇಡೀ ಇಂಡಿಯಾ ಬಹುನಿರೀಕ್ಷೆಯಿಂದ ಕಾಯ್ತಿರೋ ಸಿನಿಮಾ. ಏಪ್ರಿಲ್ 14ಕ್ಕೆ ರಿಲೀಸ್ ಆಗಲಿರೋ ಸಿನಿಮಾ, ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತಿದೆ. ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ.. ಮೊದಲಾದವರು ನಟಿಸಿರೋ ಚಿತ್ರದ ತೂಫಾನ್ ಹಾಡು ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬಂದಿರೋ ಚಿತ್ರದ ಲಿರಿಕಲ್ ಸಾಂಗ್ ವಿಡಿಯೋ, ಮೇಕಿಂಗ್ ಇನ್ನೂ ಅದ್ಭುತವಾಗಿದೆ ಅನ್ನೋದನ್ನು ಸಾರಿ ಹೇಳುತ್ತಿದೆ.

    ಇದೇ ದಿನ 11 ಗಂಟೆ 7 ನಿಮಿಷಕ್ಕೆ ರಿಲೀಸ್ ಆದ ಹಾಡು ಒಂದೂವರೆ ಗಂಟೆಯಲ್ಲೇ ದಾಖಲೆ ಬರೆದಿದೆ. ಎಲ್ಲ ಭಾಷೆಗಳಲ್ಲೂ ರಿಲೀಸ್ ಆದ ಹಾಡು ಕನ್ನಡದಲ್ಲಿಯೇ ಒಂದೂವರೆ ಗಂಟೆಯಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ದಾಖಲೆ ಸಂಖ್ಯೆಯ ಪ್ರೇಕ್ಷಕರು ಹಾಡು ಇಷ್ಟಪಟ್ಟಿದ್ದಾರೆ.

    ಸಂಗೀತ ನಿರ್ದೇಶಕ ರವಿ ಬಸ್ರೂರು ಅವರೇ ಹಾಡಿಗೆ ಸಾಹಿತ್ಯ ಕೊಟ್ಟಿದ್ದಾರೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ರವಿ ಬಸ್ರೂರು, ಪುನೀತ್ ರುದ್ರನಾಗ್, ಮನೀಷ್ ದಿನಕರ್ ಪುರುಷ ಗಾಯಕರಾದರೆ, ವರ್ಷ ಆಚಾರ್ಯ ಗಾಯಕಿ. ಲಹರಿ ಮ್ಯೂಸಿಕ್ ರಿಲೀಸ್ ಮಾಡಿರೋ ಹಾಡು ಬೇರೆಯದೇ ಲೆವೆಲ್ಲಿನಲ್ಲಿದೆ. ವಿಜಯ್ ಕಿರಗಂದೂರು ನಿರ್ಮಾಣದ ಹೊಂಬಾಳೆ ಬ್ಯಾನರ್ನ ಸಿನಿಮಾ ರಿಲೀಸ್ ಆಗಲಿರುವುದು ಏಪ್ರಿಲ್ 14ಕ್ಕೆ.

  • ಧೀರ ಸುಲ್ತಾನನ ಎದುರಿಗೆ ಎಂಟ್ರಿ ಕೊಟ್ಟ ಅಧೀರ

    adheera enters kgf 2 shooting sets

    ಕೆಜಿಎಫ್ 2 ಚಿತ್ರದಲ್ಲಿ ಸಂಜಯ್ ದತ್ ನಟಿಸುವುದು ಪಕ್ಕಾ ಆಗಿದ್ದರೂ, ಅವರಿನ್ನೂ ಶೂಟಿಂಗ್ ಟೀಂ ಸೇರಿಕೊಂಡಿರಲಿಲ್ಲ. ಈಗ ಅಧೀರನಾಗಿ ನಟಿಸುತ್ತಿರುವ ಸಂಜಯ್ ದತ್ ಪ್ರವೇಶವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2ನಲ್ಲಿ ರಾಕಿಭಾಯ್ ಎದುರು ಸೇಡು ತೀರಿಸಿಕೊಳ್ಳುವ ಖಳನಾಯಕನಾಗಿ ಬರಲಿದ್ದಾರೆ ಸಂಜಯ್ ದತ್.

    ಈ ಚಿತ್ರದ ಮೂಲಕ ಸಂಜಯ್ ದತ್ 21 ವರ್ಷಗಳ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 21 ವರ್ಷಗಳ ಹಿಂದೆ ತೆಲುಗಿನಲ್ಲಿ ಚಂದ್ರಲೇಖಾ ಅನ್ನೋ ಹೆಸರಿನ ಸಿನಿಮಾ ಬಂದಿತ್ತು. ನಾಗಾರ್ಜುನ, ರಮ್ಯಾಕೃಷ್ಣ ಜೊತೆಗೆ ಸಂಜಯ್ ದತ್ ನಟಿಸಿದ್ದರು. ಈಗ ಕನ್ನಡದ ಮೂಲಕ ದಕ್ಷಿಣ ಭಾರತಕ್ಕೆ ಮತ್ತೆ ಬಂದಿದ್ದಾರೆ ಸಂಜಯ್ ದತ್.

  • ನರಾಚಿಯಲ್ಲಿ ಕೆಜಿಎಫ್-ಚಾಪ್ಟರ್ 2 ಶೂಟಿಂಗ್

    kgf chapter 3 shooting in narachi

    ಕೆಜಿಎಫ್ ಚಾಪ್ಟರ್2 ಚಿತ್ರದ 2ನೇ ಹಂತದ ಶೂಟಿಂಗ್ ಶುರುವಾಗಿದೆ. ಮಿನರ್ವ ಮಿಲ್‍ನ ನರಾಚಿಯಲ್ಲಿ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ನರಾಚಿ ಎಂದರೆ ಏನೆಂದು ಕೇಳಬೇಡಿ, ಕೆಜಿಎಫ್ ಚಿತ್ರದಲ್ಲಿ ಬರೋ ಕಾಲ್ಪನಿಕ ಪ್ರದೇಶದ ಹೆಸರೇ ನರಾಚಿ.

    ಮೊದಲ ಭಾಗಕ್ಕಿಂತಲೂ 2ನೇ ಭಾಗದಲ್ಲಿ ಯಶ್ ಸ್ಟೈಲಿಶ್ ಆಗಿದ್ದಾರಂತೆ. ನಿರ್ದೇಶಕ ಪ್ರಶಾಂತ್ ನೀಲ್, ಮಿನರ್ವ ಮಿಲ್‍ನಲ್ಲಿ ಹಾಕಿಸಿರುವ ಸೆಟ್‍ನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಕಲಾನಿರ್ದೇಶಕ ಶಿವಕುಮಾರ್ ಸೃಷ್ಟಿಸಿರುವ ನರಾಚಿ ಸೆಟ್ ಗಮನ ಸೆಳೆಯುತ್ತಿದೆ. ಉಳಿದ ಭಾಗವನ್ನು ಬೆಂಗಳೂರು ಹಾಗೂ ಮೈಸೂರಿನಲ್ಲಿ ಶೂಟಿಂಗ್ ಮಾಡಲು ನಿರ್ದೇಶಕ ಪ್ರಶಾಂತ್ ನೀಲ್ ಪ್ಲಾನ್ ಮಾಡಿದ್ದಾರೆ.

  • ಮಂಕಿ ಕ್ಯಾಪ್ ಹಾಕ್ಕೊಂಡು ಕೆಜಿಎಫ್ ನೋಡಿದ ಸ್ಟಾರ್

    jaggesh watches kgf in dusguise

    ತಲೆ ಮೇಲೆ ಮುಖ ಕಾಣದಂತೆ ಮಂಕಿ ಕ್ಯಾಪ್, ಲುಂಗಿ, ಹವಾಯ್ ಚಪ್ಪಲಿ ಹಾಕ್ಕೊಂಡು ಗಾಂಧಿ ಕ್ಲಾಸ್‍ನಲ್ಲಿ ತಮ್ಮ ಜೊತೆ ಸಿನಿಮಾ ನೋಡುತ್ತಿರುವುದು ಸ್ಟಾರ್ ನವರಸನಾಯಕ ಜಗ್ಗೇಶ್ ಎಂದು ಪಕ್ಕದಲ್ಲಿದ್ದವರಿಗೆ ಗೊತ್ತಿರಲಿಲ್ಲ. ತಮ್ಮ ಜೊತೆಯೇ ಟೀ, ಖಾರಾಪುರಿ ತಿಂದಿದ್ದು ಜಗ್ಗಣ್ಣ ಅನ್ನೋದು ಗೊತ್ತಾಗಲೇ ಇಲ್ಲ. ಗೊತ್ತಾಗಿದ್ದರೂ, ಇವರೇಕೆ ಗಾಂಧಿ ಕ್ಲಾಸ್‍ನಲ್ಲಿ ಬಂದು ಸಿನಿಮಾ ನೋಡ್ತಾರೆ ಬಿಡಿ.. ಏನೋ.. ಕನ್‍ಫ್ಯೂಸ್ ಆಗಿರಬೇಕು ಎಂದು ಸುಮ್ಮನಾಗುತ್ತಿದ್ದರೇನೋ..

    ಆದರೆ, ಅದು ನಿಜವಾಗಿಹೋಗಿದೆ. ಜಗ್ಗೇಶ್ ಹಾಗೆ ಮಾರುವೇಷದಲ್ಲಿ ಹೋಗಿ ನೋಡಿರೋ ಸಿನಿಮಾ ಕೆಜಿಎಫ್. ಅದೂ ಗಾಂಧಿ ಕ್ಲಾಸ್‍ನಲ್ಲಿ. 38 ವರ್ಷಗಳ ಹಿಂದೆ ನಾನು ಹೀಗೇ ಸಿನಿಮಾ ನೋಡುತ್ತಿದ್ದೆ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ ಜಗ್ಗೇಶ್. ಯಶ್‍ರನ್ನು ಹೊಗಳಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಪ್ರತಿಭೆಯನ್ನು ಕೊಂಡಾಡಿದ್ದಾರೆ. 

  • ಯಶ್ ಅಭಿಮಾನಿಗಳ ಕ್ಷಮೆ ಕೋರಿದ ಕೆಜಿಎಫ್ ನಿರ್ದೇಶಕ

    kgf director apologoze to yash fans

    ಯಶ್ ಅಭಿಮಾನಿಗಳ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿರೀಕ್ಷೆಯಂತೆ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ ಪ್ರಶಾಂತ್ ನೀಲ್.

    ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ. ಯಶ್ ಬರ್ತ್‍ಡೇಗೆ ಒಂದು ಟೀಸರ್ ಆದರೂ ಪಕ್ಕಾ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸಿರುವುದು ಸುಳ್ಳಲ್ಲ. ಪ್ರಶಾಂತ್ ಕೊಡುತ್ತಿರುವ ಕಾರಣ ಇದು, ಶೂಟಿಂಗ್ ಮುಗಿಸಿಕೊಂಡು ಇಡೀ ತಂಡ ಬೆಂಗಳೂರಿಗೆ ಬರುವುದೇ ಜನವರಿ 7ಕ್ಕೆ. ಉಳಿಯುವುದು ಇನ್ನೊಂದೇ ದಿನ. ಒಂದು ದಿನದಲ್ಲಿ ದಿ ಬೆಸ್ಟ್ ಎನ್ನುವ ಕ್ವಾಲಿಟಿ ಕೊಡಲು ಸಾಧ್ಯವಿಲ್ಲ. ಬೆಸ್ಟ್ ಕೊಡದೇ ಹೋದರೆ ತಪ್ಪಾಗುತ್ತದೆ. ಹೀಗಾಗಿ ಟೀಸರ್ ಬಿಡುಗಡೆಯನ್ನೇ ಮುಂದೂಡಿದ್ದಾರೆ ಪ್ರಶಾಂತ್ ನೀಲ್.

    ನಿರ್ದೇಶಕ ಪ್ರಶಾಂತ್ ನೀಲ್ ಕಮಿಟ್‍ಮೆಂಟ್ ಬಗ್ಗೆ ಅವರ ಜೊತೆ ಕೆಲಸ ಮಾಡಿರುವವರಿಗೆ ಚೆನ್ನಾಗಿ ಗೊತ್ತು. ಅಂದುಕೊಂಡಂತೆ ಔಟ್‍ಪುಟ್ ಸಿಗುವವರೆಗೂ ರಾಜಿಯಾಗದ ಸ್ವಭಾವ ಅವರದ್ದು. ಸ್ಸೋ.. ಟೀಸರ್ ವಿಚಾರದಲ್ಲೂ ರಾಜಿ ಮಾಡಿಕೊಳ್ಳುತ್ತಿಲ್ಲ. ಆದರೆ, ಜನವರಿ 8ಕ್ಕೆ, ಬೆಳಗ್ಗೆ 10 ಗಂಟೆ 8 ನಿಮಿಷಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ 2ನ ಸೆಕೆಂಡ್ ಪೋಸ್ಟರ್ ಹೊರಬೀಳಲಿದೆ.

  • ಯಶ್, ವಿಜಯ್ ಕಿರಗಂದೂರು ದೇಗುಲ ದರ್ಶನ

    ಯಶ್, ವಿಜಯ್ ಕಿರಗಂದೂರು ದೇಗುಲ ದರ್ಶನ

    ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಮುನ್ನ ಯಶ್ ಮತ್ತು ವಿಜಯ್ ಕಿರಗಂದೂರು ದೇಗುಲ ದರ್ಶನ ಮಾಡುತ್ತಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮತ್ತು ಉಜಿರೆಯ ಸೂರ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ.

    ಧರ್ಮಸ್ಥಳದಲ್ಲಿ ಪೂಜೆ ಮುಗಿಸಿದ ಯಶ್ ಮತ್ತು ವಿಜಯ್ ಕಿರಗಂದೂರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ಚಿತ್ರದ ಬಗ್ಗೆ ಮಾಹಿತಿ ಪಡೆದುಕೊಂಡ ಹೆಗ್ಗಡೆಯವರು ಕುಟುಂಬದವರು, ಮಕ್ಕಳ ಬಗ್ಗೆಯೂ ತಿಳಿದುಕೊಂಡರು.

    ಇಷ್ಟು ಶ್ರಮ ಪಟ್ಟಿದ್ದೇವೆ. ಅದರ ಜೊತೆ ದೇವರ ಅನುಗ್ರಹವೂ ಬೇಕು. ಹೀಗಾಗಿ ಬಂದಿದ್ದೇವೆ. ಚಿತ್ರದ ಟಿಕೆಟ್ ಓಪನ್ ಆಗಿದೆ ಎಂದರು ಯಶ್.

    ಬುಕ್ಕಿಂಗ್ ಓಪನ್ ಆಗಿದ್ದು, ಬೆಂಗಳೂರಿನಲ್ಲಿ ಗರಿಷ್ಠ ಬೆಲೆ 2000 ರೂ. ಇದೆ. ಒಂದು ಲೆಕ್ಕದ ಪ್ರಕಾರ ಪ್ರಶಾಂತ್ ನೀಲ್ ನಿರ್ದೇಶನದ ಕೆಜೆಎಫ್ ಚಾಪ್ಟರ್ 2, ಆರ್.ಆರ್.ಆರ್. ಗಳಿಸಿದ್ದ ಮೊದಲ ದಿನದ ದಾಖಲೆಯನ್ನು ಮುರಿಯುವ ನಿರೀಕ್ಷೆ ಇದೆ.

  • ಶಾಕಿಂಗ್ ಅಧೀರ.. ವೈಕ್ಸಿಂಗ್ ಅಧೀರ.. ಅರೆರೆ.. ಅಧೀರ ಇಷ್ಟೊಂದು ಕ್ರೂರಿನಾ..?

    adheera's look creates craze

    ಸಂಜಯ್ ದತ್ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಸಂಜಯ್ ದತ್ ಲುಕ್ ರಿವೀಲ್ ಆಗಿದೆ. ಲುಕ್ ನೋಡಿದರೇನೇ ಭಯ ಹುಟ್ಟಿಸುವಂತಿದೆ. ಈ ಭಯಾನಕ ಲುಕ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರೆ, ಪಾತ್ರ ಇಷ್ಟೊಂದು ಕ್ರೂರವಾಗಿರುತ್ತಾ ಅನ್ನೋ ಪ್ರಶ್ನೆಯನ್ನೂ ಹುಟ್ಟು ಹಾಕಿದೆ.

    ಇನ್ನೂ ಈ ಪಾತ್ರದ ಲುಕ್‍ಗೆ ಪ್ರೇರಣೆಯಾಗಿರೋದು ಹಾಲಿವುಡ್ ಧಾರಾವಾಹಿ ವೈಕ್ಸಿಂಗ್ಸ್ ಸಿರೀಸ್‍ನ ರಾಗ್ನರ್ ಲಾಥ್‍ಬ್ರಾಕ್ ಅವರ ಪಾತ್ರ. ರಾಕಿ ಭಾಯ್ ಎದುರು ಹೊಡೆದಾಡಲು ಸಿದ್ಧವಾಗಿರುವ ಅಧೀರನ ಲುಕ್‍ನಲ್ಲೇ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಗೆಟ್ ರೆಡಿ ಟು ಕೆಜಿಎಫ್ ಚಾಪ್ಟರ್ 2.

  • ಶ್ರೀನಿಧಿ ಶೆಟ್ಟಿ ಕೆಜಿಎಫ್ ಸೀಕ್ವೆಲ್‍ಗೆ ರೆಡಿ

    will recover in 2 weeks says srinidhi shetty

    ಮೊನ್ನೆ ಮೊನ್ನೆ ಒಂದು ಸುದ್ದಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿಗೆ ಗಾಯವಾಗಿದೆ. ಮೂಳೆ ಫ್ರಾಕ್ಚರ್ ಆಗಿದೆ. ಹೀಗಾಗಿ ಚಿತ್ರತಂಡದಿಂದ ಶ್ರೀನಿಧಿ ಹೊರಬಿದ್ದಿದ್ದಾರೆ ಅನ್ನೋ ಸುದ್ದಿಯದು. ಮೊದಲ ಚಿತ್ರದಲ್ಲಿಯೇ ದೇಶಾದ್ಯಂತ ಸದ್ದು ಮಾಡಿದ ಚಿತ್ರದ ನಾಯಕಿ ಹೀಗೆ ಸೈಡಿಗೆ ಹೋಗಿಬಿಟ್ಟರಾ ಎಂಬ ಪ್ರಶ್ನೆಗಳಿಗೆಲ್ಲ ಈಗ ಅವರೇ ಉತ್ತರ ಕೊಟ್ಟಿದ್ದಾರೆ.

    ಬ್ಯಾಡ್ಮಿಂಟನ್ ಆಡುವಾಗ ಬಲಗೈ ರಿಸ್ಟ್‍ನಲ್ಲಿ ಲಿಗಮೆಂಟ್ ಇಂಜುರಿ ಆಗಿದೆ. ಸದ್ಯಕ್ಕೆ ರೆಸ್ಟ್‍ನಲ್ಲಿದ್ದೇನೆ. ನೋ ಪ್ರಾಬ್ಲಂ. ಎರಡು ವಾರದಲ್ಲಿ ಕಂಪ್ಲೀಟ್ ಸರಿ ಹೋಗುತ್ತೇನೆ ಎಂದಿದ್ದಾರೆ ಶ್ರೀನಿಧಿ.

    ಕೆಜಿಎಫ್ ಚಾಪ್ಟರ್ 2 ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಶ್ರೀನಿಧಿ ಡೇಟ್ಸ್ ಇನ್ನೂ ಫಿಕ್ಸ್ ಆಗಿಲ್ಲ. ಸೀಕ್ವೆಲ್‍ನಲ್ಲಿ ಶ್ರೀನಿಧಿ ರೋಲ್ ಹೆಚ್ಚಾಗಿದ್ದು, ಲವ್, ರೊಮ್ಯಾನ್ಸ್ ಎಲ್ಲವೂ ಇದೆಯಂತೆ. ಕೆಜಿಎಫ್ ಚಾಪ್ಟರ್-2 ಮುಗಿಯುವವರೆಗೆ ಬೇರೆ ಸಿನಿಮಾ ಇಲ್ಲ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ. 

  • ಸರಣ್ ಪಕ್ಕಾ.. ಆದರೆ ರಾಕಿಭಾಯ್ ಜೂನಿಯರ್ ಅಲ್ಲ

    saran shakthi in kgf

    ಕೆಜಿಎಫ್ 2ನಲ್ಲಿ ತಮಿಳು ನಟ  ಸರಣ್ ಶಕ್ತಿ ನಟಿಸುತ್ತಿದ್ದಾರೆ. ಅವರು ರಾಕಿಭಾಯ್ ಅವರ ಹದಿಹರೆಯದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಚಿತ್ರಲೋಕ ವರದಿ ಮಾಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ ಕೆಜಿಎಫ್-2 ಸಹನಿರ್ಮಾಪಕರೂ ಆಗಿರುವ ಕಾರ್ತಿಕ್ ಗೌಡ. ಚಿತ್ರಲೋಕದ ವರದಿಯನ್ನೇ ರೀ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಸರಣ್ ಶಕ್ತಿ ನಟಿಸುತ್ತಿರುವುದು ನಿಜ. ಆದರೆ, ರಾಕಿಭಾಯ್ ಜೂನಿಯರ್ ಪಾತ್ರದಲ್ಲಿ ಅಲ್ಲ ಎಂದಿದ್ದಾರೆ. ಸರಣ್ ಶಕ್ತಿ ಪಾತ್ರ ಏನು ಎಂಬ ಬಗ್ಗೆ ಸಸ್ಪೆನ್ಸ್ ಹಾಗೆಯೇ ಉಳಿಸಿಕೊಂಡಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಹೀರೋಯಿಸಂ, ಸಂಜಯ್ ದತ್, ರವೀನಾ ಟಂಡನ್ ಕಾಂಬಿನೇಷನ್, ವಿಜಯ್ ಕಿರಗಂದೂರು ನಿರ್ಮಾಣ.. ಹೀಗೆ ಭರ್ಜರಿ ಕಾಂಬಿನೇಷನ್ನುಗಳ ಕೆಜಿಎಫ್-2 ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ.