` audi, - chitraloka.com | Kannada Movie News, Reviews | Image

audi,

 • ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ಕಾರು

  rashmika mandanna, rakshith shetty

  ಡಿ.29 ಬಂತೆಂದರೆ, ಎಲ್ಲರಿಗಿಂತ ಹೆಚ್ಚು ಖುಷಿಯಾಗಿರುವವರಲ್ಲಿ ರಶ್ಮಿಕಾ ಇರುತ್ತಾರೆ. ಅದು ಕಳೆದ ವರ್ಷ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ರಿಲೀಸ್ ಆದ ದಿನ. ಈ ವರ್ಷ ಅವರ 3ನೇ ಸಿನಿಮಾ ಚಮಕ್ ರಿಲೀಸ್ ಆದ ದಿನ. ವಾರದ ಹಿಂದಷ್ಟೇ ಅವರ ಅಭಿಯನದ 2ನೇ ಸಿನಿಮಾ ಅಂಜನಿಪುತ್ರ ಬಿಡುಗಡೆಯಾಗಿತ್ತು. ಹೀಗೆ ಡಿಸೆಂಬರ್ ತಿಂಗಳಲ್ಲಿ ಭಾರಿ ಖುಷಿಯಲ್ಲಿರುವ ರಶ್ಮಿಕಾ ಅವರ ಸಂಭ್ರಮಕ್ಕೆ ಹೊಸ ಸೇರ್ಪಡೆ ಆಡಿ ಕಾರು.

  ರಶ್ಮಿಕಾ ಫಳಫಳ ಹೊಳೆಯುವ ಕೆಂಬಣ್ಣದ ಆಡಿ ಕಾರು ಖರೀದಿಸಿದ್ದಾರೆ. ಭಾವೀ ಪತ್ನಿಯ ಹೊಸ ಕಾರು ಖರೀದಿಗೆ ಸಾಕ್ಷಿಯಾಗಿದ್ದವರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಜೀವದ ಗೆಳೆಯನ ಜೊತೆ ಮೊದಲ ಡ್ರೈವ್ ಮಾಡಿ ಬಂದ ರಶ್ಮಿಕಾ ಮುಖದ ರಂಗು, ಥೇಟು ಅವರ ಕಾರಿನ ಬಣ್ಣಕ್ಕೇ ತಿರುಗಿದೆ.

 • ಮರಿ ಟೈಗರ್ ಮನೆಗೆ ಆಡಿ ಕಾರು

  vinod prabahakar buys new audi

  ಟೈಗರ್ ಪ್ರಭಾಕರ್ ಅವರ ಪುತ್ರ, ವಿನೋದ್ ಪ್ರಭಾಕರ್ ಮನೆಗೆ ಹೊಸ ಕಾರು ಬಂದಿದೆ. ಅದ್ದೂರಿ ಐಷಾರಾಮಿ ಕಾರು. ಆಡಿ ಕ್ಯೂ7. ಕಡುನೀಲಿ ಬಣ್ಣದ ಆಡಿ ಕಾರ್‍ನೊಂದಿಗೆ ವಿನೋದ್ ಪ್ರಭಾಕರ್ ಐಷಾರಾಮಿ ಕಾರೊಂದರ ಒಡೆಯರಾಗಿದ್ದಾರೆ.

  ತಮ್ಮ ಮನೆಗೆ ಬಂದ ಹೊಸ ಕಾರಿನ ಜೊತೆ ಪತ್ನಿಯ ಜೊತೆ ಫೋಟೋ ತೆಗೆಸಿಕೊಂಡಿರುವ ವಿನೋದ್ ಪ್ರಭಾಕರ್, ಹೊಸ ಕಾರ್‍ನ್ನು ಸ್ವಾಗತಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery