` sharmila mandre, - chitraloka.com | Kannada Movie News, Reviews | Image

sharmila mandre,

  • ಪ್ರೊಡ್ಯೂಸರ್ ಶರ್ಮಿಳಾ ಮಾಂಡ್ರೆ

    sharmeila mandre turns producer

    ಶರ್ಮಿಳಾ ಮಾಂಡ್ರೆ ಎಂಬ ಕಣ್ ಕಣ್ಣ ಸಲಿಗೆಯ ಸುಂದರಿ ಈಗ ನಿರ್ಮಾಪಕಿಯಾಗಲು ಹೊರಟಿದ್ದಾರೆ. ಇದುವರೆಗೆ ನಟನೆಯಲ್ಲಷ್ಟೇ ಬ್ಯುಸಿಯಾಗಿದ್ದ ಶರ್ಮಿಳಾ, ಇನ್ನು ಮುಂದೆ ಹೊಸಬರ ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ಸ್ ಹೌಸ್ ಆರಂಭ ಮಾಡಿದ್ದಾರೆ ಶರ್ಮಿಳಾ ಮಾಂಡ್ರೆ.

    ಶರ್ಮಿಳಾ ಅವರ ಕುಟುಂಬಕ್ಕೆ ಚಿತ್ರ ನಿರ್ಮಾಣ ಹೊಸದೇನಲ್ಲ. ಅವರ ತಂದೆ ದಯಾನಂದ್, ತಾತ, ಮಾವ.. ಎಲ್ಲರೂ ಚಿತ್ರ ನಿರ್ಮಾಣ, ವಿತರಣೆಯಲ್ಲಿ ತೊಡಗಿಕೊಂಡಿದ್ದವರೇ. ಈ ಅನುಭವ ಶರ್ಮಿಳಾ ಮಾಂಡ್ರೆ ನೆರವಿಗೆ ಬರಲಿದೆ.

    ಸದ್ಯಕ್ಕೆ ಬಾಲಿವುಡ್‍ನ ಕಥಾ ಚಿತ್ರದಲ್ಲಿ ಬ್ಯುಸಿಯಾಗಿರುವ ಶರ್ಮಿಳಾ ಯಾವ ಭಾಷೆಯಲ್ಲಿ ಮೊದಲ ಚಿತ್ರ ನಿರ್ಮಾಣ ಮಾಡುತ್ತಾರೆ ಎನ್ನುವುದು ಸದ್ಯದ ಕುತೂಹಲ.

  • ಭಟ್ಟರ 2ನೇ ಗಾಳಿಪಟಕ್ಕೆ ಇಬ್ಬರು ಚೆಲುವೆಯರು

    two heroines for bhatt's gaalipata 2 ..?

    ಯೋಗರಾಜ್ ಭಟ್, ಗಾಳಿಪಟ 2 ಸಿನಿಮಾ ಮಾಡೋದಾಗಿ ಘೋಷಿಸಿಯೂ ಆಗಿದೆ. ಶರಣ್, ಲೂಸಿಯಾ ಪವನ್, ರಿಷಿ ನಾಯಕತ್ವದ ಗಾಳಿಪಟ 2 ಚಿತ್ರಕ್ಕೆ  ಪಂಚತಂತ್ರ ಬಿಡುಗಡೆ ಟೈಮಿನಲ್ಲೇ ಕೆಲಸ ಶುರು ಮಾಡಿದ್ದಾರೆ. ಒಂದು ಚಿತ್ರ ಮುಗಿಯುತ್ತಿರುವಾಗಲೇ ಇನ್ನೊಂದು ಚಿತ್ರದಲ್ಲಿ ಬ್ಯುಸಿಯಾಗುತ್ತಿರುವುದು ಭಟ್ಟರ ಚರಿತ್ರೆಯಲ್ಲಿ ಇದೇ ಮೊದಲು ಎನ್ನಬೇಕು. ಈಗ ಆ ಚಿತ್ರಕ್ಕೆ ಇಬ್ಬರು ನಾಯಕಿಯರು ಓಕೆ ಆಗಿದ್ದಾರೆ.

    ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಟ್ಟಿದ್ದ ಚೆಲುವೆ ಸೋನಾಲ್ ಓಕೆ ಆಗಿದ್ದಾರೆ. ಇನ್ನೊಂದು ಪಾತ್ರಕ್ಕೆ ಶರ್ಮಿಳಾ ಮಾಂಡ್ರೆ ಜೊತೆ ಮಾತುಕತೆ ನಡೆದಿದೆ. ಬೆಳಗಾವಿ ಮೂಲದ ಮಹೇಶ್ ಎಂಬುವರು ನಿರ್ಮಿಸುತ್ತಿರುವ ಗಾಳಿಪಟ 2ಗೆ ಸಂಗಿತ ಸಂಯೋಜನೆಗೆ ರೆಡಿಯಾಗಿದ್ಧಾರೆ ಭಟ್ಟರು.

    ಇದು ಕಂಪ್ಲೀಟ್ ನನ್ನ ಶೈಲಿಯ ಸಿನಿಮಾ. ಮನರಂಜನೆ ಮತ್ತು ಭಾವನಾತ್ಮಕ ಅಂಶಗಳನ್ನು ಹದವಾಗಿ ಬೆರೆಸಿರುವ ಸಿನಿಮಾ. ಈಗಿನ ಜನರೇಷನ್‍ಗೆ ಇಷ್ಟವಾಗುವ ಸಿನಿಮಾ ಎಂದಿದ್ದಾರೆ ಭಟ್ಟರು.

  • ರಮ್ಯಾ ಮುಂದೆ ಮುಂದೆ.. ಶರ್ಮಿಳಾ ಹಿಂದೆ.. ಹಿಂದೆ

    will sharmeila mandre follow ramya

    ಚಿತ್ರನಟಿ ಶರ್ಮಿಳಾ ಮತ್ತು ರಮ್ಯಾ ಅಲಿಯಾಸ್ ದಿವ್ಯಸ್ಪಂದನಾ ಮೊದಲಿನಿಂದಲೂ ಗೆಳತಿಯರು. ಇದು ಇಡೀ ಚಿತ್ರರಂಗಕ್ಕೇ ಗೊತ್ತು. ಈಗ ಶರ್ಮಿಳಾ ಮಾಂಡ್ರೆ ಕೂಡಾ ರಾಜಕೀಯಕ್ಕೆ ಬರ್ತಾರಾ..? ಇತ್ತೀಚೆಗೆ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದಾಗ ಶರ್ಮಿಳಾ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇಂಥಾದ್ದೊಂದು ಕುತೂಹಲಕ್ಕೆ ಕಾರಣವಾಗಿದೆ. ಶರ್ಮಿಳಾ ರಾಜಕೀಯಕ್ಕೆ ಬರ್ತಾರಾ..? ಶರ್ಮಿಳಾ ಉತ್ತರ ಅಷ್ಟೇ ಇಂಟ್ರೆಸ್ಟಿಂಗ್.

    ರಮ್ಯಾ ನಾನೂ ಒಳ್ಳೆಯ ಸ್ನೇಹಿತೆಯರು. ಹೀಗಾಗಿ ರಮ್ಯಾ ಕರೆದರೆಂದು ನಾನು ಹೋಗಿದ್ದೆ. ನಾನು ಕಾಂಗ್ರೆಸ್ ಸೇರಲೆಂದು ಹೋದವಳಲ್ಲ. ಕೇವಲ ರಮ್ಯಾಗೋಸ್ಕರ ಹೋಗಿದ್ದೆ. ರಾಜಕೀಯ ಅನ್ನೋದು ಎಲ್ಲಿರಲ್ಲ ಹೇಳಿ..? ಮತ ಹಾಕುವುದು ಕೂಡಾ ರಾಜಕೀಯವೇ ಅಲ್ವಾ..? ನಾನೂ ಅದರ ಭಾಗ. ಸಕ್ರಿಯ ರಾಜಕಾರಣ ನನಗೆ ಆಗಿಬರೋದಿಲ್ಲ. ಸಿನಿಮಾ ನನ್ನ ಕ್ಷೇತ್ರ. ಇಲ್ಲಿಯೇ ಏನಾದರೂ ಮಾಡಬೇಕಿದೆ. 

    ಇಷ್ಟುದ್ದದ ಮಾತು ಹೇಳುವ ಶರ್ಮಿಳಾ, ಹೌದು ಅಥವಾ ಇಲ್ಲ ಎಂಬ ಒಂದು ಸಾಲಿನ ಉತ್ತರ ಕೊಡೋದಿಲ್ಲ. ಮುಂದೆ ರಾಜಕೀಯದ ವಾಸನೆ ಬಡಿದರೆ ಅಚ್ಚರಿಯಿಲ್ಲ!

  • ಶರ್ಮಿಳಾ ಮಾಂಡ್ರೆ ಕಾರ್ ಆ್ಯಕ್ಸಿಡೆಂಟ್ : ಇನ್‍ಸೈಡ್ ಸ್ಟೋರಿ

    sharmeila mandra's car accident inside story

    ನಟಿ, ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರ ಕಾರ್ ಅಪಘಾತಕ್ಕೀಡಾಗಿದ್ದರ ಹಿಂದಿನ ಕಥೆಯೇನು..? ಕಾರಿನಲ್ಲಿ ಶರ್ಮಿಳಾ ಅವರೊಬ್ಬರೇ ಇದ್ದರಾ ಅಥವಾ ಜೊತೆಯಲ್ಲಿ ಫ್ರೆಂಡ್ಸ್ ಇದ್ದರಾ..? ಇಷ್ಟಕ್ಕೂ ಲಾಕ್ ಡೌನ್ ಟೈಮಿನಲ್ಲಿ ಅವರು ಹೊರಬಂದಿದ್ದು ಏಕೆ..? ಎಲ್ಲ ಓಕೆ ಶರ್ಮಿಳಾ ಈಗ ಹೇಗಿದ್ದಾರೆ.. ಹೀಗೆ ಹತ್ತು ಹಲವು ಅನುಮಾನಗಳು ಕಾಡೋಕೆ ಶುರುವಾಗಿವೆ.

    ಮೂಲಗಳ ಪ್ರಕಾರ ಶರ್ಮಿಳಾ ಅವರು ಕಾರ್‍ನ್ನು ಡ್ರೈವ್ ಮಾಡುತ್ತಿರಲಿಲ್ಲ. ಆದರೆ ಜೊತೆಯಲ್ಲಿ ಫ್ರೆಂಡ್ಸ್ ಇದ್ದರು ಎನ್ನುವುದು ಸತ್ಯ. ಕಾರ್‍ನ ಓನರ್‍ನ ಹೆಸರು ಡಾನ್ ಥಾಮಸ್ ಎನ್ನಲಾಗಿದೆ. ಕಾರ್‍ನಲ್ಲಿ ಲೋಕೇಶ್ ಒಬ್ಬ ಇನ್ನೊಬ್ಬ ಗೆಳೆಯ ಹಾಗೂ ಇನ್ನೊಬ್ಬ ಯುವತಿಯೂ ಇದ್ದರು ಎನ್ನುವುದು ಸದ್ಯಕ್ಕಿರುವ ಮಾಹಿತಿ. ಅಲ್ಲಿಗೆ ಒಟ್ಟು 5 ಜನರಿದ್ದರು ಎನ್ನಲಾಗಿದೆ.

    ಪೊಲೀಸರ ಬಳಿ ಪಡೆದುಕೊಂಡಿದ್ದ ಎಮರ್ಜೆನ್ಸಿ ಪಾಸ್‍ನ್ನು ದುರುಪಯೋಗ ಪಡಿಸಿಕೊಂಡು ಪಾರ್ಟಿ ಮಾಡಿಕೊಂಡು ಬೇಕಾಬಿಟ್ಟಿ ಡ್ರೈವ್ ಮಾಡುತ್ತಿರುವಾಗ ಅಪಘಾತ ಸಂಭವಿಸಿದೆ ಎನ್ನುವುದು ಮಾಹಿತಿ. ಆದರೆ, ಆ ಪಾಸ್ ಶರ್ಮಿಳಾ ಮಾಂಡ್ರೆ ಅವರದ್ದಾ..? ಸ್ಪಷ್ಟ ಮಾಹಿತಿ ಇಲ್ಲ.

    ಶರ್ಮಿಳಾ ಮಾಂಡ್ರೆ ಅವರಿಗೆ ಗಂಭೀರ ಗಾಯಗಳೇನೂ ಆಗಿಲ್ಲದೇ ಹೋದರೂ, ಮುಖಕ್ಕೆ ಪೆಟ್ಟಾಗಿದೆಯಂತೆ. ಪೊಲೀಸರ ತನಿಖೆ ಮುಂದುವರೆದಿದೆ.

    Also Read :-

    Sharmiela Mandre Defies Lock down, Injured While On A Jolly Ride In Car

  • ಹೆಸರಷ್ಟೇ ಮೈಸೂರು ಮಸಾಲಾ.. ಕಥೆಯೆಲ್ಲ ವಿಜ್ಞಾನ

    mysore masala is a sci fi movie

    ಮೈಸೂರು ಮಸಾಲ. ಅನಂತ್‍ನಾಗ್,  ಶರ್ಮಿಳಾ ಮಾಂಡ್ರೆ ಅಭಿನಯಿಸುತ್ತಿರುವ ಸೈನ್ಸ್ ಫಿಕ್ಷನ್. ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳು ಬಂದಿರುವುದೇ ಅಪರೂಪ. ಅಂತಾದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಅಜಯ್ ಸರ್ಪೇಶ್ವರ್. 

    ಚಿತ್ರದಲ್ಲಿ ಹಾರುವ ತಟ್ಟೆಗಳೂ ಇರುತ್ತವಂತೆ. ಹಾರುವ ತಟ್ಟೆಗಳ ಬಗ್ಗೆ ವಿಜ್ಞಾನದ ಬಗ್ಗೆ ಕುತೂಹಲ ಹೊಂದಿರುವ ಪ್ರತಿಯೊಬ್ಬರಿಗೂ ಅರಿವಿದೆ. ಅವು ನಿಜವೋ ಸುಳ್ಳೋ ಎನ್ನುವುದೇ ಗೊತ್ತಿಲ್ಲ. ಹೀಗಿರುವಾಗ ಅದನ್ನಿಟ್ಟುಕೊಂಡು ಸಿನಿಮಾ ಮಾಡೊಕೆ ಹೊರಟಿದ್ದಾರೆ ಅಜಯ್. 

    ಅಮೆರಿಕದಲ್ಲಿ ಇಂಜಿನಿಯರ್ ಆಗಿರುವ ಅಜಯ್ ಸರ್ಪೇಶ್ವರ್, ಈ ಸಿನಿಮಾ ಮಾಡಲೆಂದೇ ಕರ್ನಾಟಕಕ್ಕೆ ಬಂದಿಳಿದಿರುವುದು ವಿಶೇಷ. ಚಿತ್ರಕ್ಕೆ ಅಮೆರಿಕದವರೇ ಆದ ಜೆಸ್ಸಿ ಕ್ಲಿಂಟನ್ ಎಂಬುವವರು ಸಂಗೀತ ನೀಡುತ್ತಿದ್ದಾರೆ. ನಮ್ಮ ಸಿನಿಮಾಗೆ ಪಾಶ್ಚಾತ್ಯ ಶೈಲಿಯ ಮ್ಯೂಸಿಕ್ ಬೇಕು ಎಂದಿದ್ದಾರೆ ಅಜಯ್. ಚಿತ್ರದಲ್ಲಿ ಸೈನ್ಸ್, ಫಿಕ್ಷನ್, ಡ್ರಾಮಾ, ಅಡ್ವೆಂಚರ್ ಹಾಗೂ ಥ್ರಿಲ್ಲರ್ ಎಲ್ಲವೂ ಇರುತ್ತದಂತೆ.