ಆಕೆ ಹಾರರ್ ಸಿನಿಮಾ. ರಿಲೀಸ್ಗೂ ಮೊದಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಆ ಚಿತ್ರಕ್ಕೆ ದೆವ್ವದ ಅನುಭವವಾಯಿತಾ..? ಹೌದು ಎನ್ನುತ್ತೆ ಚಿತ್ರತಂಡ.
ಶೂಟಿಂಗ್ ವೇಳೆ ಇದ್ದಕ್ಕಿದ್ದಂತೆ ಕತ್ತಲು
ಲಂಡನ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಕಗ್ಗತ್ತಲೆಯಾಗುತ್ತಿತ್ತು. ವಿಚಿತ್ರ ಶಬ್ದಗಳು ಕೇಳಿಸಿ ಚಿತ್ರತಂಡ ಬೆಚ್ಚಿ ಬೀಳುತ್ತಿತ್ತು. ಎಷ್ಟೋ ಬಾರಿ ಆ ಭಯದಲ್ಲೇ ಶೂಟಿಂಗ್ನ್ನು ಅರ್ಧದಲ್ಲೇ ಪ್ಯಾಕಪ್ ಮಾಡಿದ್ದೂ ಇದೆಯಂತೆ.
ವೀಸಾ ಸಿಗುವುದೇ ತಡವಾಗಿತ್ತು
ಮೊದಲಿಗೆ ಶೂಟಿಂಗ್ ಜಾಗಕ್ಕೆ ತೆರಳುವುದೇ ಸಮಸ್ಯೆಯಾಗಿ ಕಾಡಿತ್ತು. ಯಾರೋ ಶಾಪ ಹಾಕಿದಂತೆ ಭಾಸವಾಗುತ್ತಿತ್ತು. ಚೈತನ್ಯ ಅವರಿಗೆ ಮೊತ್ತ ಮೊದಲ ಬಾರಿಗೆ ವೀಸಾ ತಿರಸ್ಕಾರವಾಗಿ, ಮತ್ತೆ ಅರ್ಜಿ ಸಲ್ಲಿಸಿದ ಅನುಭವವೂ ಚಿತ್ರದಲ್ಲಾಗಿದೆ. ಚೈತನ್ಯ ಚಿತ್ರೀಕರಣಕ್ಕೆ ತೆರಳಿದಾಗ ಕೆಲಸ ಶುರುವಾಗಲು ಐದೇ ಐದು ದಿನವಿತ್ತು.
ಹಾರ್ಸ್ಲಿ ಟವರ್ಸ್ ಅನುಭವ
ಲಂಡನ್ನಲ್ಲಿ ಶೂಟಿಂಗ್ ಮಾಡಿದ ಸ್ಥಳವದು. ಅದು ಮೊದಲು ಹುಚ್ಚಾಸ್ಪತ್ರೆಯಾಗಿತ್ತು. ನಂತರ ಅದನ್ನು ರೆಸಾರ್ಟ್ ಮಾಡಲಾಗಿತ್ತು. ಆಕೆ ಸಿನಿಮಾದ ಕಥೆಯೂ ಹಾಗೇ ಇದೆ.
ಯೂರೋಪ್ನ 10 ಅತಿಮಾನುಷ ಶಕ್ತಿ ತಾಣಗಳಲ್ಲಿ
ಯುರೋಪಿನಲ್ಲಿ ಅತಿಮಾನುಷ ಶಕ್ತಿಗಳಿರುವ 10 ಸ್ಥಳಗಳಲ್ಲಿ 450 ವರ್ಷ ಹಳೆಯ ಹಾರ್ಸ್ಲಿ ಟವರ್ಸ್ ಕೂಡಾ ಒಂದು. ಇಂಗ್ಲಿಷ್ ಕವಿಯೊಬ್ಬರ ಪುತ್ರಿ ಕೂಡ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆಕೆಯ ಆತ್ಮ ಅಲ್ಲಿ ಅಲೆಯುತ್ತಿದೆ ಎನ್ನುವ ಕಥೆಯಿದೆ. ನಿರ್ದೇಶಕ ಚೈತನ್ಯರೇ ಆ ಕಥೆ ಕೇಳಿದ ಮೇಲೆ ಅಚ್ಚರಿಗೊಳಗಾದರಂತೆ.
ಎಲ್ಲಿ ಹೋಯ್ತು ಹಾರ್ಡ್ ಡಿಸ್ಕ್ ?
ಹಾರ್ಡ್ ಡಿಸ್ಕ್ ಕಾಣೆಯಾಗಿ ಶೂಟಿಂಗ್ ಮಾಡಿದ್ದ ದೃಶ್ಯವನ್ನೇ ಮತ್ತೆ ಶೂಟಿಂಗ್ ಮಾಡಲಾಗಿದೆ. ಆ ಹಾರ್ಡ್ ಡಿಸ್ಕ್ ಏನಾಯ್ತು ಅನ್ನೋದು ಇದುವರೆಗೆ ಗೊತ್ತಾಗಿಲ್ಲ
ಹೆದರಿದ್ದರು ಶರ್ಮಿಳಾ
ಚಿತ್ರದ ಶೂಟಿಂಗ್ ವೇಳೆ ಚಿತ್ರ ವಿಚಿತ್ರ ಶಬ್ಧ ಕೇಳಿಸಿದ ಅನುಭವವಾಗುತ್ತಿತ್ತು. ಆಗೆಲ್ಲ ಹೆದರಿಕೆಯಾಗುತ್ತಿತ್ತು. ಎಷ್ಟೋ ಬಾರಿ ಇದು ಸಿನಿಮಾ ಎಂದು ಎಷ್ಟೇ ಸಮಾಧಾನಪಟ್ಟುಕೊಂಡರೂ ಹೃದಯ ಹೊಡೆದುಕೊಳ್ಳುತ್ತಲೇ ಇರುತ್ತಿತ್ತು ಎನ್ನುತ್ತಾರೆ ಶರ್ಮಿಳಾ.a