` james - chitraloka.com | Kannada Movie News, Reviews | Image

james

  • ಜೇಮ್ಸ್ : 4 ದಿನ.. 100,0000000+ ದಾಖಲೆ

     ಜೇಮ್ಸ್ : 4 ದಿನ.. 100,0000000+ ದಾಖಲೆ

    ಜೇಮ್ಸ್ ದಾಖಲೆ ಮೇಲೆ ದಾಖಲೆ ಬರೆಯುತ್ತಲೇ ಇದೆ. ಈಗ ಆ ದಾಖಲೆಗೆ ಹೊಸ ಸೇರ್ಪಡೆ ಬಾಕ್ಸಾಫೀಸ್ ದಾಖಲೆ. ರಿಲೀಸ್ ದಿನವೇ 30 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಸುದ್ದಿ ಮಾಡಿದ್ದ ಜೇಮ್ಸ್, ಕೇವಲ 4 ದಿನದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಇಷ್ಟು ವೇಗವಾಗಿ 100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಜೇಮ್ಸ್.

    ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್, ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾ ಕೂಡಾ. ಜೇಮ್ಸ್ ಚಿತ್ರದ ಸ್ಯಾಟಲೈಟ್, ಆಡಿಯೋ, ಒಟಿಟಿ, ಡಬ್ಬಿಂಗ್ ರೈಟ್ಸ್‍ಗಳಲ್ಲೂ ದಾಖಲೆ ಪ್ರಮಾಣದ ಗಳಿಕೆ ಬರೆದಿದೆ. ನಿರ್ಮಾಪಕರಿಗೆ 80 ಕೋಟಿಗೂ ಹೆಚ್ಚು ಲಾಭ ಬರಲಿದೆ ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.

    ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅಧಿಕೃತವಾಗಿ ಬಾಕ್ಸಾಫೀಸ್ ಮತ್ತು ಇತರೆ ಲೆಕ್ಕಗಳನ್ನು ಕೊಟ್ಟಿಲ್ಲ. ಅಫ್‍ಕೋರ್ಸ್, ಚಿತ್ರದ ಬಜೆಟ್ ಬಗ್ಗೆಯಾಗಲೀ, ಪುನೀತ್ ಸಂಭಾವನೆಯ ವಿಷಯವನ್ನಾಗಲೀ ಅವರು ಮಾತನಾಡಿಯೇ ಇಲ್ಲ. 100 ಕೋಟಿಯಂತೆ ನಿಜವಾ ಎಂದರೆ ಹೌದು ಎಂದೂ ಹೇಳಿಲ್ಲ. ಇಲ್ಲ ಎಂದೂ ಹೇಳಿಲ್ಲ.

  • ಜೇಮ್ಸ್ ತೆಗೆಯೋದು ಬೇಡ.. ನಾವೇ ಲೇಟ್ ಆಗಿ ಬರ್ತೇವೆ : ತ್ರಿಕೋನ ಏಪ್ರಿಲ್ 8ಕ್ಕೆ

     ಜೇಮ್ಸ್ ತೆಗೆಯೋದು ಬೇಡ.. ನಾವೇ ಲೇಟ್ ಆಗಿ ಬರ್ತೇವೆ : ತ್ರಿಕೋನ ಏಪ್ರಿಲ್ 8ಕ್ಕೆ

    ಏಪ್ರಿಲ್ 1ಕ್ಕೆ ರಿಲೀಸ್ ಡೇಟ್ ಘೋಷಿಸಿಕೊಂಡಿದ್ದ ತ್ರಿಕೋನ ಸಿನಿಮಾ ಥಿಯೇಟರ್ ಸಿಗದ ಕಾರಣಕ್ಕೆ ರಿಲೀಸ್ ಡೇಟ್ ಬದಲಿಸಿತ್ತು. ಈಗ ಏಪ್ರಿಲ್ 8ಕ್ಕೆ ಬಿಡುಗಡೆಯಾಗುತ್ತಿದೆ. ತಮ್ಮ ಚಿತ್ರದ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದ್ದರ ರಿಯಲ್ ಕಾರಣವನ್ನು ಚಿತ್ರತಂಡ ಈಗ ಹೇಳಿದೆ.

    ಥಿಯೇಟರ್ ಸಮಸ್ಯೆಯಿದ್ದಾಗ ಕೆಲವು ವಿತರಕರು ಜೇಮ್ಸ್ ಚಿತ್ರವನ್ನು ತೆಗೆದು ಅಲ್ಲಿ ನಮ್ಮ ಚಿತ್ರದ ಶೋ ಹಾಕೋದಾಗಿ ಹೇಳಿದರು. ನಾನೂ ಕೂಡಾ ಪುನೀತ್ ಅಭಿಮಾನಿ. ಜೇಮ್ಸ್ ಅಲ್ಲೆಲ್ಲ ಚೆನ್ನಾಗಿಯೇ ಹೋಗುತ್ತಿತ್ತು. ಅಲ್ಲಿ ಬೇಡ ಎಂದು ನಿರ್ಧರಿಸಿ ನಾವೇ ಒಂದು ವಾರ ಮುಂದಕ್ಕೆ ಹೋದೆವು ಎಂದು ಹೇಳಿದ್ದಾರೆ ನಿರ್ಮಾಪಕ ರಾಜಶೇಖರ್. ನಿರ್ದೇಶಕ ಚಂದ್ರಕಾಂತ್ ಮತ್ತು ಪ್ರಚಾರದ ರಾಯಭಾರಿ ಸುಚೇಂದ್ರ ಪ್ರಸಾದ್.

    ಇದೆಲ್ಲದರ ಜೊತೆಗೆ ತ್ರಿಕೋನ ರಿಲೀಸ್ ಡೇಟ್ ಘೋಷಿಸಿದಾಗ ಏಪ್ರಿಲ್ 1ಕ್ಕೆ ಇದ್ದದ್ದು ಅವರದ್ದೊಂದೇ ಕನ್ನಡ ಚಿತ್ರ. ಅದಾದ ಮೇಲೆ ಅದೇ ವಾರ ಏಳೆಂಟು ಸಿನಿಮಾಗಳು ರಿಲೀಸ್ ಆದವು. ಇದರಿಂದಾಗಿ ವಾದ ವಿವಾದ ಮಾಡುವ ಬದಲು ನಾವೇ ಮುಂದಕ್ಕೆ ಹೋದೆವು ಎಂದಿದೆ ಚಿತ್ರತಂಡ.

    ತ್ರಿಕೋನ ಚರ್ವಿತಚರ್ವಣ ತಥಾಕಥಿತ ಮಾದರಿಯ ಚಿತ್ರವಲ್ಲ. ಬೇರೆಯದ್ದೇ ಅಭಿರುಚಿಯ ಸಿನಿಮಾ ಎನ್ನುವುದು ಸುಚೇಂದ್ರ ಪ್ರಸಾದ್ ಕೊಡುತ್ತಿರುವ ಭರವಸೆ. ಅಚ್ಯುತ್ ಕುಮಾರ್, ಸುಧಾರಾಣಿ, ಲಕ್ಷ್ಮೀ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ತ್ರಿಕೋನ.

  • 'James' To Start From October 13th

    'James' To Start From October 13th

    Puneeth Rajakumar starrer 'James' was launched earlier this year. After the first schedule, the shooting was halted because of Corona and lockdown. Now, as things are slowly coming to normalcy, the shooting for 'James' is all set to resume on the 13th of October.

    This time, well known stunt masters Ram-Lakshman have been roped in for choreographing stunts for the film. The Ram-Lakshman duo have already composed fights for many films in Kannada.

    'James' is directed by Chethan of 'Bahaddur' and 'Bharjari' fame. Chethan has also written the story, screenplay and dialogues for the film apart from directing it. Kishore Pathikonda is the producer

  • 'Yuvaratna' and 'James' poster for Puneeth's birthday

    yuvaratna and james poster for ouneeth's birthday

    Puneeth Rajakumar will be celebrating his 44th birthday today and on the occasion of his birthday, the posters of his new films 'Yuvaratna' and 'James' will be released on Sunday.

    The shooting for Santhosh Anandaram's directorial, 'Yuvaratna' is in full progress and Santhosh had planned to release the teaser of the film on Puneeth's birthday. However, due to to various reasons, the teaser got delayed and Santhosh is releasing the first look poster of the film.

    Apart from that, Chethan Kumar who is directing Puneeth in 'James' will be releasing the motion poster of the film.

     

  • 25 ದಿನದ ನಂತರ ಒಟಿಟಿಗೆ ಜೇಮ್ಸ್

    25 ದಿನದ ನಂತರ ಒಟಿಟಿಗೆ ಜೇಮ್ಸ್

    ಜೇಮ್ಸ್. ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬದ ದಿನವೇ ರಿಲೀಸ್ ಆಗಿದ್ದ ಸಿನಿಮಾ. ಅಪ್ಪು ಅಗಲಿಕೆಯ ನೋವಿನಲ್ಲೇ ಬಂದ ಸಿನಿಮಾ ಬಾಕ್ಸಾಫೀಸಿನಲ್ಲಿ ದಾಖಲೆ ಬರೆದುಬಿಟ್ಟಿತು. 100 ಕೋಟಿಯ ಗಳಿಕೆ ದಾಟಿ ಮುನ್ನಡದ ಜೇಮ್ಸ್ ಈಗ 25 ದಿನ ಪೂರೈಸಿದೆ.

    ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್, ನಿರ್ದೇಶಕ ಚೇತನ್ ಹಾಗೂ ಚಿತ್ರತಂಡಕ್ಕೆ ಗಳಿಕೆಯಲ್ಲಿ ಒಳ್ಳೆಯ ಫಲಿತಾಂಶವನ್ನೇ ಕೊಟ್ಟಿದೆ. ಜೇಮ್ಸ್ ಬ್ಲಾಕ್ ಬಸ್ಟರ್ ಹಿಟ್.

    ಈಗ ಥಿಯೇಟರಿನಲ್ಲಿ ಮಿಸ್ ಮಾಡಿಕೊಂಡವರಿಗೆ ಒಟಿಟಿಯಲ್ಲಿ ನೋಡುವ ಸಮಯ. ಇದೇ ಏಪ್ರಿಲ್ 14ರಿಂದ ಜೇಮ್ಸ್ ಒಟಿಟಿಯಲ್ಲಿ ಬರಲಿದೆ. ಸೋನಿ ಲೈವ್‍ನಲ್ಲಿ ನೀವಿದ್ದರೆ ಜೇಮ್ಸ್ ಚಿತ್ರವನ್ನು ಏಪ್ರಿಲ್ 14ರಿಂದ ನೋಡಬಹುದು.

  • 5ನೇ ವಾರ ಜೇಮ್ಸ್ ಯಶಸ್ವೀ ಪ್ರದರ್ಶನ

    5ನೇ ವಾರ ಜೇಮ್ಸ್ ಯಶಸ್ವೀ ಪ್ರದರ್ಶನ

    ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿದ ಕೊನೆಯ ಸಿನಿಮಾ ಅತ್ತ ಒಟಿಟಿಯಲ್ಲೂ ರಿಲೀಸ್ ಆಗಿದೆ. ಇತ್ತ ಥಿಯೇಟರಲ್ಲೂ ಯಶಸ್ವಿಯಾಗಿಯೇ ಪ್ರದರ್ಶನವಾಗುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರೋ ಸಿನಿಮಾ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್, ಸೂಪರ್ ಹಿಟ್ ಎನ್ನುವುದರಲ್ಲಿ ಅನುಮಾನವೇಲ್ಲ.

    ಪ್ರೇಕ್ಷಕರ ಸಂಖ್ಯೆ ಮೊದಲ ವಾರಕ್ಕೆ ಹೋಲಿಸಿದರೆ ಬಹಳ ಕಡಿಮೆಯಿದ್ದರೂ, ಒಳ್ಳೆಯ ಷೇರ್ ಬರುತ್ತಿದೆ. ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಸತತ 5ನೇ ವಾರವೂ ಜೇಮ್ಸ್ ಯಶಸ್ವಿಯಾಗಿ 50ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಮುಂದುವರೆದಿದೆ.

  • JAMES  ಮೊದಲ ಸೀಕ್ರೆಟ್ ಔಟ್ : JAMES ಎಂದರೆ ಏನ್ ಗೊತ್ತಾ..?

    what is the mening of james

    ಭರಾಟೆ ಮುಗಿಸಿ, ಹ್ಯಾಟ್ರಿಕ್ ಯಶಸ್ಸಿನಲ್ಲಿರೋ ನಿರ್ದೇಶಕ ಚೇತನ್ ಕುಮಾರ್, ಯುವರತ್ನದಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಇಬ್ಬರೂ ಒಟ್ಟಿಗೇ ನವೆಂಬರ್‍ನಲ್ಲಿ ಕೆಲಸ ಶುರುಮಾಡಲಿದ್ದಾರೆ. ಜೇಮ್ಸ್ ಚಿತ್ರಕ್ಕಾಗಿ. ನವೆಂಬರ್ ತಿಂಗಳಲ್ಲಿ ಜೇಮ್ಸ್ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

    ಈ ಚಿತ್ರದಲ್ಲಿ ಅಪ್ಪು ಬೇರೆ ಬೇರೆ ರೀತಿಯ ಶೇಡ್‍ಗಳಲ್ಲಿ ಕಾಣಿಸಿಕೊಳ್ತಾರೆ. ಪಕ್ಕಾ ಮಾಸ್ ಆ್ಯಕ್ಷನ್ ಸಿನಿಮಾ. ಚಿತ್ರದಲ್ಲೊಂದು ಅದ್ಭುತ ಸಂದೇಶವೂ ಇದೆ ಎನ್ನುತ್ತಾರೆ ಚೇತನ್ ಕುಮಾರ್. ಇಷ್ಟಕ್ಕೂ JAMES ಎಂದರೆ ಏನರ್ಥ. ಅದು ನಾಯಕನ ಹೆಸರಾ ಎಂಬ ಪ್ರಶ್ನೆಗೆ ಉತ್ತರವನ್ನೂ ಕೊಟ್ಟಿದ್ದಾರೆ.

    JAMES ಎಂದರೆ ಜಗ್ಗೇನಹಳ್ಳಿ ಮಾದಪ್ಪ ಹೀರಮ್ಮನ ಮಗ ಸಂತು ಎಂದರ್ಥ. ಅದನ್ನು ಶಾರ್ಟ್ & ಸ್ವೀಟ್ ಆಗಿ JAMES ಎನ್ನಲಾಗಿದೆ. ಸಂತೆಯಲ್ಲಿ ನಿಂತ ಕಬೀರ ಚಿತ್ರ ನಿರ್ಮಿಸಿದ್ದ ಕಿಶೋರ್ ಪತ್ತಿಕೊಂಡ JAMES ನಿರ್ಮಾಪಕ.

  • James Movie Review, Chitraloka Rating 4/5

    James Movie Review, Chitraloka Rating 4/5

    Film: James 

    Cast: Puneeth Rajkumar, Priya Anand, Sarathkumar, Srikanth, Rangayana Raghu, Sadhu Kokila, Chikkanna 

    Director: Chethan Kumar

    Duration: 149 minutes 

    Stars:  4/5

    The license to entertain 

    Watching James, the fact that this will be Puneeth Rajkumar's last appearance in a full-fledged feature never fails to nibble at the conscious constantly. This swansong of one of Kannada's best loved entertainers therefore obliges you to overindulge on his presence on screen. Chants of Appu and Puneeth never stopped for the entire duration of the show and the film fortunately captures his on screen prowess that made him such a darling of the masses.

    James is a mass action entertainer that never misses a trick and gladly sticks to the trade. Lavish production values and a cast that would look too small being called ensemble is taken straight out of director Chethan Kumar's playbook. Add Puneeth's mass appeal and presence and you have an instant success formula. 

    The director goes beyond this simple formula to give the audience something more. That makes James special. A private security specialist, James (Puneeth) becomes an inevitable part of a crime syndicate's family. Just when it seems like a routine underworld saga headed toward post-interval massacre, the interval block provides a stunning twist. In the meantime, the parade of new characters adds strength to the screenplay. The best is however yet to come. Post-interval the story takes on a whole new dimension.

    That's for the story, but without doubt this is a film for the fans. It is Puneeth's, dance, fight, smile and style that fans want to watch. James provides the perfect opportunity to fill your eyes and hearts with Puneeth. 

    A special mention is necessary about how Shivarajkumar and Raghavendra Rajkumar's characters are skilfully blended into the story. This has happened post the demise of Puneeth. The three brothers may not share screen space but Chethan Kumar deserves appreciation just for managing to bring them together in the same film. 

    A couple of scenes which Puneeth could not shoot have still been retained skilfully. The excessive body count is a mass film's collateral damage. There were lingering doubts about the suitability of Shivarajkumar's voice for Puneeth. The result is brilliant. 

    James isn't a film for the television and gorilla glass screens. The director has ensured it is best enjoyed on the big screen along with cheering fans.

    Movie Review By -

    S Shyam Prasad 

  • James' Is In News Again..!

    james is in news again

    Almost four years back, there was a news of Chethan Kumar of 'Bahaddur' fame directing Puneeth in a new film called 'James'. However, the film didn't take off because of Puneeth's prior commitments. Now the film is in news again.

    Recently, Chethan and producer Patthikonda Kishore who had distributed films like Puneeth's 'Mythri' and 'Om' met Puneeth and had discussions with him about the film. It is being said that the official announcement of the film will be made on Puneeth's birthday next month.

    Though 'James' will be announced next month, the film will be launched only later this year, as Puneeth will be joining the sets of Santhosh Anandram's 'Yuvaratna' soon.

  • Only Dodmane Huduga is Confirmed - Puneeth Rajkumar

    dodmane huduga image

    Puneeth Rajkumar sure has his hands full with many films. But which among the lined up films will he be taking next is the question on everybody's lips. Puneeth says only 'Dodmane Huduga' has been finalised as of now and the other projects are still in the initial stage.

    'I have been hearing many stories and I might accept some films, but they are all in the initial stage. As of now 'Ranavikrama' is in the dubbing stage and the dubbing will start soon. Soori's 'Dodmane Huduga' might start from the 05th of April. After that I might take up Saravanan's film, which will be followed by Vijaykumar's film. Only after that the rest will follow' says Puneeth.

    Recently 'Bahaddur' fame Chethan Kumar had announced that his next film 'James' will be starring Puneeth Rajkumar. Even Santhosh Anandram was looking forward to work with Puneeth in his second film. Jayanna had announced a film with Puneeth and Shivarajkumar. With Puneeth's schedule being very tight, looks like all the three films will have to wait for at least an year.

  • Power Star Puneeth Rajkumar Starts Shooting For James From Today

    power star puneeth rajkumr starts shooting for james from today

    The race begins for James, as Power Star Puneeth Rajkumar starts shooting for it from today which is being directed by Chethan Kumar.

    It is produced by Kishore Pathikonda under the banner Kishore Productions. The film titled James with the tagline the trademark is tentatively scheduled for release in the last quarter of 2020.

    The star actor has joined the shooting for James after wrapping up Santhosh Anandraam's Yuvarathna under Hombale Films.

     

  • Puneeth's James Producer Kishore

    james image

    Director Chethan Kumar of 'Bahaddur' fame had earlier announced that he would be directing a film called 'James' with Puneeth being Jamesh. However, Chethan did not disclose who the producer is.

    Now the cat is finally out of bag and Patthikonda Kishore who had distributed films like Puneeth's 'Mythri' and 'Om' will be producing the film under his Kishore Films banner. The film will be first from the Kishore Films banner.

    Though the film has been announced, the film will start later this year as Puneeth is busy with his prior commitments.

  • Team 'James' in Kashmir

    Team 'James' in Kashmir

    Puneeth Rajakumar starrer 'James' is half way through and the team has completed major portions in Karnataka. Now the team has left for Kashmir to shoot one song, fight and some talkie portions for the film.

    Director Chethan of 'Bahaddur' fame has fixed a 10 day schedule in Kashmir, where he will be shooting some major portions with all the important artists. All the team members except for Puneeth have left for Kashmir. Puneeth who was supposed to go with the team is held up because of the health condition of Raghavendra Rajakumar. Once Raghavendra Rajakumar is discharged, Puneeth will be joining the team.

    'James' is being produced by Kishore Pattikonda who had earlier produced Shivarajakumar's 'Kabira'. Chethan has also written the story, screenplay and dialogues for the film apart from directing it. Kishore Pathikonda is the producer. Anu Prabhkar, Srikanth, Sadhu Kokila and others play prominent roles in the film.

  • ಅದೊಂದೇ ಏರಿಯಾಗೆ 12 ಕೋಟಿ ಡಿಮ್ಯಾಂಡ್ : ನೋ ಎಂದರಂತೆ ಜೇಮ್ಸ್ ನಿರ್ಮಾಪಕರು

    ಅದೊಂದೇ ಏರಿಯಾಗೆ 12 ಕೋಟಿ ಡಿಮ್ಯಾಂಡ್ : ನೋ ಎಂದರಂತೆ ಜೇಮ್ಸ್ ನಿರ್ಮಾಪಕರು

    ಯಾವುದೇ ಸಿನಿಮಾ ಇರಲಿ. ಕರ್ನಾಟಕದ ಅತಿ ದೊಡ್ಡ ಮಾರುಕಟ್ಟೆ ಬಿಕೆಟಿ. ಬೆಂಗಳೂರು-ಕೋಲಾರ-ತುಮಕೂರು. ಸಿನಿಮಾಗಳು ಹೆಚ್ಚು ದುಡಿಯೋದು ಈ ಪ್ರದೇಶದಲ್ಲೇ. ಜೇಮ್ಸ್ ಚಿತ್ರ ಮಾರ್ಚ್ 17ಕ್ಕೆ ರಿಲೀಸ್ ಆಗುತ್ತಿದೆ. ಹವಾ ಏನೋ ದೊಡ್ಡದಾಗಿದೆ. ಏಕೆಂದರೆ ಇದು ಅಪ್ಪು ಸಿನಿಮಾ. ಅಪ್ಪು ಹೀರೋ ಆಗಿರೋ ಕೊನೆಯ ಸಿನಿಮಾ. ಹೀಗಾಗಿ ನಿರೀಕ್ಷೆಯೂ ದೊಡ್ಡದಾಗಿಯೇ ಇದೆ. ವಿತರಕರ ನಿರೀಕ್ಷೆಯೂ ದೊಡ್ಡದು.

    ಬಿಕೆಟಿ ಏರಿಯಾಗೆ ವಿತರಕರು 12 ಕೋಟಿ ಬೇಡಿಕೆ ಇಟ್ಟಿದ್ದು, ನಿರ್ಮಾಪಕ ಕಿಶೋರ್ ಪತ್ತಿಕೊಂಡ ನೋ ಎಂದಿದ್ದಾರಂತೆ. ಜೇಮ್ಸ್ ಚಿತ್ರಕ್ಕೆ ಪೈಪೋಟಿ ಇಲ್ಲ. ಯಾವುದೇ ಬೇರೆ ಸಿನಿಮಾ ಆ ವಾರ ರಿಲೀಸ್ ಆಗುತ್ತಿಲ್ಲ. ಪುನೀತ್ ಎದುರು ರಾಜಕುಮಾರ ನಾಯಕಿ ಪ್ರಿಯಾ ಆನಂದ್. ಶಿವಣ್ಣ ಮತ್ತು ರಾಘವೇಂದ್ರ ರಾಜ್ಕುಮಾರ್ ಕೂಡಾ ಅತಿಥಿ ಪಾತ್ರಗಳಲ್ಲಿದ್ದು ನಿರೀಕ್ಷೆ ದೊಡ್ಡದು.

  • ಅಪ್ಪು ಇಲ್ಲದ ಜೇಮ್ಸ್‍ನಲ್ಲಿ ಅಣ್ಣಾವ್ರ ಮಕ್ಕಳ ಸಮಾಗಮ

    ಅಪ್ಪು ಇಲ್ಲದ ಜೇಮ್ಸ್‍ನಲ್ಲಿ ಅಣ್ಣಾವ್ರ ಮಕ್ಕಳ ಸಮಾಗಮ

    ಶಿವಣ್ಣ, ರಾಘವೇಂದ್ರ ಮತ್ತು ಪುನೀತ್ ರಾಜ್‍ಕುಮಾರ್ ಒಟ್ಟಿಗೇ ನಟಿಸಬೇಕು, ಒಂದೇ ಚಿತ್ರದಲ್ಲಿ ನಟಿಸಬೇಕು ಅನ್ನೋ ಕನಸು ಅಭಿಮಾನಿಗಳದ್ದಾಗಿತ್ತು. ಆದರೆ ಮೂವರನ್ನೂ ಒಂದೇ ಚಿತ್ರದಲ್ಲಿ ಕಾಣುವ ಭಾಗ್ಯ ಸಿಗಲೇ ಇಲ್ಲ. ಕನಸು ನನಸಾಗಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಕ್ಕಿದ್ದು ಅಪ್ಪು ಅಕಾಲಿಕ ಮರಣದ ಆಘಾತ. ಅಪ್ಪು ದೂರವಾದ ಮೇಲೆ ಈಗ ಅದು ಕೈಗೂಡಿ ಬರುತ್ತಿದೆ. ಜೇಮ್ಸ್ ಚಿತ್ರದಲ್ಲಿ ಅಣ್ಣಾವ್ರ ಮಕ್ಕಳ ಸಮಾಗಮವಾಗಿದೆ.

    ಚೇತನ್ ಅಂಥಾದ್ದೊಂದು ಅವಕಾಶ ನೀಡಿದಾಗ ಬೇಡ ಎನ್ನೋಕೆ ಆಗಲಿಲ್ಲ. ಇದನ್ನು ಮಿಸ್ ಮಾಡಿಕೊಳ್ಳಲೇಬಾರದು ಎನಿಸಿತು. ಹೀಗಾಗಿ ರಾಘು ಜೊತೆ ನಟಿಸಿದ್ದೇನೆ ಎಂದಿದ್ದಾರೆ ಶಿವಣ್ಣ. ಅದೊಂದು ನೋವಿನ ಕ್ಷಣ. ಅಪ್ಪು ಇರಬೇಕಿತ್ತು ಎಂದಿದ್ದಾರೆ ರಾಘವೇಂದ್ರ ರಾಜ್‍ಕುಮಾರ್. ಶುಕ್ರವಾರ ಚಿತ್ರೀಕರಣವೂ ಮುಗಿದಿದೆ.

    ಪುನೀತ್ ಅವರ ಪೋರ್ಷನ್ಸ್ ಚಿತ್ರೀಕರಣ ಮೊದಲೇ ಮುಗಿದಿತ್ತು. ಉಳಿದ ಭಾಗದ ಚಿತ್ರೀಕರಣ ಇತ್ತು. ಆಗ ಶಿವಣ್ಣ ಮತ್ತು ರಾಘಣ್ಣರನ್ನು ನಟಿಸುವಂತೆ ಮಾಡಿದರೆ ಹೇಗೆ ಅನ್ನೋ ಆಲೋಚನೆ ಬಂತು. ಕೇಳಿದೆ, ಅವರೂ ಓಕೆ ಎಂದರು. ಉಳಿದ ವಿವರವನ್ನು ಶೀಘ್ರದಲ್ಲೇ ನೀಡುತ್ತೇನೆ. ಅಪ್ಪು ಜೊತೆ ಅವರಿಬ್ಬರೂ ನಟಿಸುವ ದೃಶ್ಯವಿಲ್ಲದಿದ್ದರೂ, ಒಂದೇ ಚಿತ್ರದಲ್ಲಿ ಮೂವರೂ ಇರುವಂತೆ ಮಾಡಿದ್ದೇವೆ ಎಂದಿದ್ದಾರೆ ಚೇತನ್ ಕುಮಾರ್.

    ಇದು ಗಿಮಿಕ್ ಅಲ್ಲ. ಅಪ್ಪು ಚಿತ್ರದಲ್ಲಿ ನಾನು ಮತ್ತು ಶಿವಣ್ಣ ಒಂದು ಸಣ್ಣ ಪಾತ್ರ ಮಾಡಿದ್ದೀವಿ ಅಷ್ಟೆ. ಮೂವರೂ ಒಟ್ಟಿಗೇ ತೆರೆ ಮೇಲೆ ಬರಲ್ಲ. ಆದರೆ ಒಂದೇ ಚಿತ್ರದಲ್ಲಿದ್ದೇವೆ ಎಂಬುದಷ್ಟೇ ವಿಷಯ ಎಂದಿದ್ದಾರೆ ರಾಘವೇಂದ್ರ ರಾಜ್‍ಕುಮಾರ್. ಚಿತ್ರೀಕರಣ ನಡೆಯುವ ವೇಳೆ ಇಡೀ ಜೇಮ್ಸ್ ಟೀಂ ಕಣ್ಣೀರಿಟ್ಟಿದೆ. ಗಣರಾಜ್ಯೋತ್ಸವದ ದಿನ ಚಿತ್ರದ ಸ್ಪೆಷಲ್ ಪೋಸ್ಟರ್ ಜನವರಿ 26ರಂದು ರಿಲೀಸ್ ಆಗಲಿದೆ. ಕಿಶೋರ್ ಪತಿಕೊಂಡ ನಿರ್ಮಾಣದ ಜೇಮ್ಸ್ ಚಿತ್ರವನ್ನು ಅಪ್ಪು ಹುಟ್ಟುಹಬ್ಬದಂದು ತೆರೆಗೆ ತರಲು ಚಿತ್ರತಂಡ ಶ್ರಮಿಸುತ್ತಿದೆ. ಆದರೆ ಪುನೀತ್ ಪಾತ್ರಕ್ಕೆ ಡಬ್ಬಿಂಗ್ ಮಾಡಿಸುವುದೇ ದೊಡ್ಡ ಸವಾಲಾಗಿದೆ.

  • ಅಪ್ಪು ಈಗ ಸೈನಿಕ

    ಅಪ್ಪು ಈಗ ಸೈನಿಕ

    ಪುನೀತ್ ರಾಜ್‍ಕುಮಾರ್ ಈಗ ಆರ್ಮಿ ಸೇರಿದ್ದಾರೆ. ಇದುವರೆಗೂ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರೋ ಪುನೀತ್, ಇದುವರೆಗೆ ಸೈನಿಕನ ಪಾತ್ರದಲ್ಲಿ ನಟಿಸಿರಲಿಲ್ಲ. ಜೇಮ್ಸ್ ಚಿತ್ರದಲ್ಲಿ ಪುನೀತ್ ಸೈನಿಕನಾಗಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣದಲ್ಲಿರೋ ಜೇಮ್ಸ್ ಚಿತ್ರದಲ್ಲಿ ಪುನೀತ್ ಸೋಲ್ಜರ್ ಆಗಿದ್ದಾರೆ. ಬಹದ್ದೂರ್ ಚೇತನ್ ನಿರ್ದೇಶನದ ಚಿತ್ರವಿದು. ಹೀಗಾಗಿ ನಿರೀಕ್ಷೆಗಳೂ ಹೆಚ್ಚಿವೆ. ಎ. ಹರ್ಷ ನಿರ್ದೇಶನದಲ್ಲಿ ಹಾಡುಗಳು ಹಾಗೂ ವಿಜಯ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.

  • ಅಪ್ಪು ಜೇಮ್ಸ್ ಯಶಸ್ವೀ 50 ದಿನ..

    ಅಪ್ಪು ಜೇಮ್ಸ್ ಯಶಸ್ವೀ 50 ದಿನ..

    ಮಾರ್ಚ್ 18ರಂದು ರಿಲೀಸ್ ಆಗಿದ್ದ ಸಿನಿಮಾ ಜೇಮ್ಸ್. ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿದ್ದ ಕೊನೆಯ ಸಿನಿಮಾ. ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಕನ್ನಡಿಗರು ಅಪ್ಪು ಇಲ್ಲದ ನೋವಿನಲ್ಲೇ ಚಿತ್ರವನ್ನು ಅಪ್ಪಿಕೊಂಡರು. ಮೊದಲಿಗೆ ಶಿವಣ್ಣ ಧ್ವನಿಯಲ್ಲಿ ರಿಲೀಸ್ ಆಗಿದ್ದ ಸಿನಿಮಾ ಈಗ ಅಪ್ಪು ಅವರ ಧ್ವನಿಯಲ್ಲೇ ನೋಡಲು ಸಿಗುತ್ತಿದೆ. ಸಿನಿಮಾ ಈಗ ಯಶಸ್ವಿ 50 ದಿನ ಪೂರೈಸಿದೆ.

    ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದರು. ಚಿತ್ರ ಕನ್ನಡದಲ್ಲಿ 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿತ್ತು.

  • ಅಪ್ಪು ಜೊತೆ 2 ಸಿನಿಮಾ ಅದೃಷ್ಟ ನನ್ನದು : ಪ್ರಿಯಾ ಆನಂದ್

    ಅಪ್ಪು ಜೊತೆ 2 ಸಿನಿಮಾ ಅದೃಷ್ಟ ನನ್ನದು : ಪ್ರಿಯಾ ಆನಂದ್

    ರಾಜಕುಮಾರ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಪ್ರಿಯಾ ಆನಂದ್ ನಟಿಸಿದ್ದು ಕೆಲವೇ ಸಿನಿಮಾ. ಗಣೇಶ್ ಜೊತೆ ನಟಿಸಿದ್ದ  ಆರೆಂಜ್ ಬಿಟ್ಟರೆ ರಾಜಕುಮಾರ ಮತ್ತು ಜೇಮ್ಸ್. ಎರಡೂ ಅಪ್ಪು ಜೊತೆಯಲ್ಲೇ.

    ಒಂದು ರೀತಿಯಲ್ಲಿ ನಾನು ಲಕ್ಕಿ. ಅಪ್ಪು ಜೊತೆ ಯಾರೇ ಹತ್ತಿರ ಹೋದರೂ, ಕೆಲವೇ ನಿಮಿಷ ಅವರ ಜೊತೆ ಇದ್ದರೂ.. ಅವರಿಗೆ ಅಪ್ಪು ಇಷ್ಟವಾಗಿ ಬಿಡ್ತಾರೆ. ಅವರ ನಗು, ವ್ಯಕ್ತಿತ್ವವೇ ಅಂತದ್ದು. ಅವರ ಜೊತೆ ಎರಡು ಚಿತ್ರಗಳಲ್ಲಿ ನಟಿಸಿದ ಅದೃಷ್ಟ ನನ್ನದು. ರಾಜಕುಮಾರ ಚಿತ್ರದಲ್ಲಿ ಹೇಗಿತ್ತೋ.. ಜೇಮ್ಸ್‍ನಲ್ಲೂ ಅಂತಹುದೇ ವಾತಾವರಣವಿತ್ತು. ನನ್ನ ಪಾತ್ರವೂ ವಿಭಿನ್ನವಾಗಿದೆ. ತೆರೆಯ ಮೇಲೆ ಎಷ್ಟು ಹೊತ್ತು ಅನ್ನೋದಕ್ಕಿಂತ, ಆ ಪಾತ್ರಕ್ಕೆ ಸಿಕ್ಕಿರೋ ಮಹತ್ವ ಏನು ಅನ್ನೋದು ಮುಖ್ಯ ಎನ್ನುತ್ತಾರೆ ಪ್ರಿಯಾ ಆನಂದ್.

    ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್, ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್‍ನಲ್ಲಿ ಪ್ರಿಯಾ ಆನಂದ್ ನಾಯಕಿ. ಬೃಹತ್ ತಾರಾಗಣವೇ ಚಿತ್ರದಲ್ಲಿದ್ದು, ಮಾಚ್ 17ರಂದು 5 ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

  • ಅಪ್ಪು ಧ್ವನಿಯಲ್ಲಿ ಜೇಮ್ಸ್ : ಸಂಭ್ರಮಿಸಿದ ಫ್ಯಾನ್ಸ್

    ಅಪ್ಪು ಧ್ವನಿಯಲ್ಲಿ ಜೇಮ್ಸ್ : ಸಂಭ್ರಮಿಸಿದ ಫ್ಯಾನ್ಸ್

    ಪುನೀತ್ ರಾಜಕುಮಾರ್ ಅವರು ಹೀರೋ ಆಗಿ ನಟಿಸಿರೋ ಕೊನೆಯ ಚಿತ್ರ ಮಾರ್ಚ್ 18ರಂದು ರಿಲೀಸ್ ಆಗಿ ಜಯಭೇರಿ ಬಾರಿಸಿತ್ತು. ಆಗ ಇದ್ದದ್ದು ಶಿವಣ್ಣ ಧ್ವನಿ. ಈಗ ಅದೇ ಜೇಮ್ಸ್ ಸಿನಿಮಾ ಅಪ್ಪು ಧ್ವನಿಯಲ್ಲೇ ರೀ ರಿಲೀಸ್ ಆಗಿದೆ. ಸುಮಾರು 15 ಗಂಟೆಗಳ ಅಪ್ಪು ಫುಟೇಜ್‍ಗಳನ್ನೆಲ್ಲ ಜಾಲಾಡಿ ಅಪ್ಪು ಅವರ ಧ್ವನಿಯನ್ನು ಟೆಕ್ನಾಲಜಿಯಲ್ಲೇ ಮರು ಸೃಷ್ಟಿಸಲಾಗಿದೆ.

    ಸುಮಾರು 65 ಥಿಯೇಟರುಗಳಲ್ಲಿ ರೀ ರಿಲೀಸ್ ಆಗಿರೋ ಚಿತ್ರ ಪುನೀತ್ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. ಇನ್ನಿಲ್ಲ ಎಂಬ ತಮ್ಮ ನಾಯಕನ ಧ್ವನಿಯನ್ನು ಮತ್ತೊಮ್ಮೆ ಕೇಳುವ ಅವಕಾಶ ಅಭಿಮಾನಿಗಳದ್ದು. ಹೀಗಾಗಿಯೇ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ನಿರ್ದೇಶಕ ಚೇತನ್ ಕುಮಾರ್ ಹಾಗೂ ಅಪ್ಪು ಧ್ವನಿಯನ್ನು ಮರುಸೃಷ್ಟಿಸಿದ ತಂತ್ರಜ್ಞರಿಗೆ ಥ್ಯಾಂಕ್ಸ್ ಹೇಳುತ್ತಲೇ ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದಾರೆ. ಮತ್ತೆ ಮತ್ತೆ ಭಾವುಕರಾಗುತ್ತಿದ್ದಾರೆ.

  • ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಹಬ್ಬ

    ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಹಬ್ಬ

    ಗಣರಾಜ್ಯೋತ್ಸವ ದಿನದಂದು ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಅಪ್ಪು ಅವರನ್ನು ಆರ್ಮಿ ಆಫೀಸರ್ ಪಾತ್ರದಲ್ಲಿ ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಅಪ್ಪು ಹೀರೋ ಆಗಿ  ಅಭಿನಯಿಸಿರುವ ಕಟ್ಟಕಡೆಯ ಸಿನಿಮಾ ಜೇಮ್ಸ್. ಲಕ್ಕಿಮ್ಯಾನ್ ಚಿತ್ರದಲ್ಲಿ ಅಪ್ಪು ಗೆಸ್ಟ್ ಆ್ಯಕ್ಟರ್. ಗಂಧದ ಗುಡಿ ಸಿನಿಮಾ ಅಲ್ಲ. ಹೀಗಾಗಿ ಜೇಮ್ಸ್‍ಗೆ ಕಾಯುತ್ತಿರೋ ಫ್ಯಾನ್ಸ್ ಅಪ್ಪು ಹುಟ್ಟುಹಬ್ಬವನ್ನು ಎದುರು ನೋಡುತ್ತಿದ್ದಾರೆ.

    ಮಾರ್ಚ್ 17, ಅಪ್ಪು ಹುಟ್ಟುಹಬ್ಬ. ಆ ದಿನವೇ ಸಿನಿಮಾ ರಿಲೀಸ್ ಮಾಡೋಕೆ ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಅದೇ ದಿನ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಇದೆ ಎಂದು ಮಾಹಿತಿ ನೀಡಿರುವುದು ನಿರ್ಮಾಪಕ ಕಿಶೋರ್ ಮತ್ತು ನಿರ್ದೇಶಕ ಚೇತನ್ ಕುಮಾರ್.

    ಜೇಮ್ಸ್ ಚಿತ್ರದಲ್ಲಿ ಅಪ್ಪು ಜೊತೆ ರಾಘಣ್ಣ ಮತ್ತು ಶಿವಣ್ಣ ನಟಿಸುವುದು ಮೊದಲೇ ಪ್ಲಾನ್ ಆಗಿತ್ತು. ಅಪ್ಪುನೇ ಆಸೆಪಟ್ಟಿದ್ದರು. ಆದರೆ ಅದು ಈ ರೀತಿ ಆಗುತ್ತೆ ಎಂದುಕೊಂಡಿರಲಿಲ್ಲ. ಅವರ ಜೊತೆ ಎರಡೂವರೆ ವರ್ಷ ಜರ್ನಿ ಮಾಡಿದ್ದೇನೆ. ಅವರ ಸಿನಿಮಾ ಡೈರೆಕ್ಟ್ ಮಾಡಿದ್ದೇನೆ. ಅದೇ ನನ್ನ ಭಾಗ್ಯ ಎಂದಿದ್ದಾರೆ ಚೇತನ್.