ಶಿವರಾಜ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರ ರುಸ್ತುಂಗೆ ಖಳನಾಯಕನ ಹುಡುಕಾಟದಲ್ಲಿದ್ದಾರೆ ನಿರ್ದೇಶಕ ರವಿವರ್ಮಾ. ರವಿವರ್ಮಾ, ಬಾಲಿವುಡ್ನಲ್ಲೂ ಹೆಸರು ಮಾಡಿರುವ ಸಾಹಸ ನಿರ್ದೇಶಕ. ಹೀಗಾಗಿ ತಮ್ಮೆಲ್ಲ ಸಂಪರ್ಕ ಬಳಸಿ, ಬಾಲಿವುಡ್ನ ದೊಡ್ಡ ಕಲಾವಿದನನ್ನೇ ಖಳನಾಯಕನ ಪಾತ್ರಕ್ಕೆ ಕರೆತರಲು ಸಿದ್ಧತೆ ನಡೆದಿತ್ತು.
ಖಳನ ಪಾತ್ರಕ್ಕೆ ಅನಿಲ್ ಕಪೂರ್, ಸಂಜಯ್ ದತ್, ಸುನಿಲ್ ಶೆಟ್ಟಿ, ಮನೋಜ್ ಬಾಜ್ಪೇಯಿ ಮೊದಲಾದವರನ್ನೆಲ್ಲ ಸಂಪರ್ಕಿಸಿದ್ದೆವು. ಆದರೆ, ಕಥೆ ಇಷ್ಟಪಟ್ಟರು, ಡೇಟ್ಸ್ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಹೀಗಾಗಿ ಇನ್ನೂ ಖಳನಾಯಕನ ಪಾತ್ರ ಅಂತಿಮವಾಗಿಲ್ಲ. ತೆಲುಗು, ತಮಿಳು ಚಿತ್ರರಂಗದ ಖಳನಟರನ್ನೂ ನೋಡುತ್ತಿದ್ದೇವೆ. ಸದ್ಯದಲ್ಲಿಯೇ ಎಲ್ಲವೂ ಫೈನಲ್ ಆಗಲಿದೆ ಎಂದಿದ್ದಾರೆ ರವಿವರ್ಮಾ.
ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರ, ಏಪ್ರಿಲ್ 24ರಂದು ಸೆಟ್ಟೇರಲಿದೆ. ಮೇ 10ರಿಂದ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರು, ಬಿಹಾರ ಸೇರಿದಂತೆ ದೇಶದ ಹಲವೆಡೆ ಚಿತ್ರೀಕರಣ ನಡೆಯಲಿದೆ.