` surprise, - chitraloka.com | Kannada Movie News, Reviews | Image

surprise,

  • ಅಭಿಮಾನಿ ದೇವರ ಮನೆಗೆ ಅಪ್ಪು ಹೋದಾಗ..

    puneeth with his fans

    ಭಕ್ತರು ದೇವರ ಬಳಿ ಹೋಗೋದು ಕಾಮನ್. ದೇವರೇ ಭಕ್ತರ ಬಳಿ ಬಂದರೆ, ಅದು ಅದ್ಭುತ. ಆದರೆ, ಇದು ಒಂಥರಾ ಡಿಫರೆಂಟು. ಬಳ್ಳಾರಿಯಲ್ಲಿ ವಿಶ್ವ ಎಂಬ ಯುವಕನಿದ್ದಾನೆ. ಆತ ಪುನೀತ್ ರಾಜ್‍ಕುಮಾರ್ ಅವರ ಕಟ್ಟಾ ಅಭಿಮಾನಿ. ಇತ್ತೀಚೆಗೆ ಅವರ ತಂಗಿಯ ಮದುವೆಯಾಗಿತ್ತು. ಮದುವೆಗೆ ಬರಲೇಬೇಕೆಂದು ಆಹ್ವಾನ ಪತ್ರಿಕೆ ಕೊಟ್ಟಿದ್ದ ವಿಶ್ವ, ಪುನೀತ್ ಬಂದೇ ಬರುತ್ತಾರೆ ಎಂದು ಕಾಯುತ್ತಿದ್ದ. ಆದರೆ, ಆ ವೇಳೆಯಲ್ಲಿಯೇ ಪಾರ್ವತಮ್ಮ ರಾಜ್‍ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಪುನೀತ್ ಹೋಗಲು ಸಾಧ್ಯವಾಗಲೇ ಇಲ್ಲ.

    ಪುನೀತ್ ಸಮಸ್ಯೆ ಅರ್ಥ ಮಾಡಿಕೊಂಡ ವಿಶ್ವ ತನಗೆ ತಾನೇ ಸಮಾಧಾನಪಟ್ಟುಕೊಂಡಿದ್ದರು. ಆದರೆ, ಮೊನ್ನೆ ಮೊನ್ನೆ ವಿಶ್ವಗೆ ದಿಢೀರ್ ಅಚ್ಚರಿ ಕಾದಿತ್ತು. ಅವರ ಮನೆ ಬಾಗಿಲಲ್ಲಿ ಅಭಿಮಾನದ ದೇವರು ಪುನೀತ್ ನಿಂತಿದ್ದರು. ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಅನಂದ್‍ರಾಮ್ ನಿಶ್ಚಿತಾರ್ಥಕ್ಕೆ ಬಿಡುವು ಮಾಡಿಕೊಂಡು ಬಳ್ಳಾರಿಗೆ ಹೋಗಿದ್ದ ಪುನೀತ್, ಅಭಿಮಾನಿ ವಿಶ್ವನನ್ನು ಮರೆತಿರಲಿಲ್ಲ. ಸೀದಾ ಅವರ ಮನೆಗೆ ಹೋಗಿ, ಅವರ ಮನೆಯ ಆತಿಥ್ಯ ಸ್ವೀಕರಿಸಿದರು.

    ರಾಜ್ ಕುಟುಂಬದವರು ಅಭಿಮಾನಿಗಳನ್ನೇ ದೇವರು ಅಂತಾರೆ. ಪುನೀತ್ ಕೂಡಾ ಹೊರತಲ್ಲ. ಅಭಿಮಾನಿಗಳು, ತಮ್ಮ ಸ್ಟಾರ್‍ನನ್ನೇ ದೇವರು ಅಂತಾರೆ. ಈಗ.. ದೇವರು ಯಾರು.. ಭಕ್ತ ಯಾರು ನೀವೇ ನಿರ್ಧಾರ ಮಾಡಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery