ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ. ಬರದಿಂದ ನೀರೇ ಬತ್ತಿ ಹೋಗಿದ್ದ ಈ ಕೆರೆಯ ಪುನರುಜ್ಜೀವನಕ್ಕೆ ಯಶ್ ಸುಮಾರು 1 ಕೋಟಿ ಖರ್ಚು ಮಾಡಿದ್ದಾರೆ. ತಾವೇ ತುಂಬಿಸಿದ ಕೆರೆಗೆ ದಂಪತಿ ಬಾಗಿನ ಅರ್ಪಿಸಿ, ಗಂಗೆಗೆ ಕೈ ಮುಗಿದಿದ್ದಾರೆ.
ಯಶೋಮಾರ್ಗ ಫೌಂಡೇಶನ್ ಮೂಲಕ ಫೆಬ್ರವರಿ 28ರಂದು ಕಾಮಗಾರಿ ಶುರುವಾಗಿತ್ತು. ಹೂಳು ತೆಗೆಯುವ ವೇಳೆ ಕೆಲವೇ ದಿನಗಳಲ್ಲಿ ಕೆರೆಯಲ್ಲಿ ಅಂತರ್ಜಲ ಉಕ್ಕಿ ಹರಿದಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕೆರೆ ಮತ್ತಷ್ಟು ತುಂಬಿರುವುದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದೆ.
ತುಂಬಿದ ಕೆರೆಯನ್ನು ನೋಡಲು ಸಂತಸವಾಗುತ್ತಿದೆ ಎಂದು ಯಶ್ ಹೇಳಿದ್ದಾರೆ.