` satyaprakash, - chitraloka.com | Kannada Movie News, Reviews | Image

satyaprakash,

  • Ondalla Eradalla Review - Chitraloka Rating - 4/5

    ondalla eradalla movie review

    The director of Rama Rama Re and the producer of Hebbuli have come together to make a film and it has turned out to be very unique and worthwhile. Ondalla Eradalla has everything you expect from a commercial film like entertainment and time pass elements. But more than that this film is like a full length Malgudi Days come to life. 

    Sameera is a young boy whose pet is a cow affectionately called Banu. The cow goes missing one day and everyone is looking for it. To the dismay of the family and friends Sameera also goes missing. Aa luck would have it a chain of events is set into motion with Sameera in the middle of everything. 

    Is Sameera reunited with his cow? Does his family find Sameera? Will evil forces do Sameera harm? These are the questions the story tells answer to. 

    The film can be understood at two levels. At the basic level it is a fun film for kids and the family. It is fully of funny incidents and situations and you cannot stop laughing once you start. At another level it has a deeper meaning. Be it a Muslim family treating a cow as part of their family or how different people despite their private intentions act humanely in times of need, the film showcases deeper human emotions. 

    The director has managed to derive very good performance from all the actors. All of them play their part to perfection. Behind the screen there is excellent work by the camera department, background score and music as well as in the art and editing. The film is a perfect getaway for the entire family.

  • Satyaprakash To Do A Film For Umapathi

    satya prakash and umapathi do a film together

    It's more than a year since 'Rama Rama Re' got released and now director Satyaprakash is all set to start his second film as a director.

    Satyaprakash's second film is being produced by Umapathi, who was one of the producers of 'Hebbuli'. This time Umapathi is producing this film independently and is planning to start the film soon.

    The film is yet to be titled and the team is busy searching for a boy who is around eight to 10 years. The boy plays a main role in the film and the team is all set to hold auditions to select the boy. The technical team of 'Rama Rama Re' is expected to continue in this film also. Cameraman Lavith, music director Vasuki Vaibhav will work for this film, which is all set to start soon.

    Related Articles :-

    ರಾಮಾ ರಾಮಾ ರೆ, ಹೆಬ್ಬುಲಿ ಮಿಲನ..!

  • Satyaprakash's New Film Titled 'Ondalla Eradalla'

    satyaprakash's new film titled ondalla eradalla

    'Rama Rama Re' fame director Satyaprakash directing a film is not a new news. Now Satyaprakash has titled the film as 'Ondalla Eradalla' and the film is all set to go on floors this month end.

    Satyaprakash's second film is being produced by Umapathi, who was one of the producers of 'Hebbuli'. This time Umapathi is producing this film independently.

    A boy plays a main role in the film and the team has selected the boy through audition. The technical team of 'Rama Rama Re' has continued in this film also. Cameraman Lavith, music director Vasuki Vaibhav will work for this film.

  • ಜನ ಮೆಚ್ಚಿದ ಒಂದಲ್ಲಾ.. ಎರಡಲ್ಲಾ ಚಿತ್ರಕ್ಕೆ ಯುಎಫ್‍ಓ ಪ್ರಾಬ್ಲಂ

    ufo creates problem to ondalla eradalla

    ಒಂದಲ್ಲಾ.. ಎರಡಲ್ಲಾ... ಸಿನಿಮಾ ರಿಲೀಸ್ ಆಗಿದೆ. ಅದ್ಭುತ ಎನ್ನಿಸುವಂತಹ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಚಿತ್ರ ನೋಡಿದ ಪ್ರೇಕ್ಷಕರು, ವಿಮರ್ಶಕರು, ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಮತ್ತೊಂದು ರಾಮಾ ರಾಮಾ ರೇ ಆಗುವ, ಅದನ್ನೂ ಮೀರಿಸುವ ಸುಳಿವು ನೀಡಿದೆ ಒಂದಲ್ಲಾ.. ಎರಡಲ್ಲಾ.. ಆದರೆ ಚಿತ್ರಕ್ಕೆ ಟೆಕ್ನಿಕಲ್ ಪ್ರಾಬ್ಲಂ. 

    ಚಿತ್ರವನ್ನು ಥಿಯೇಟರುಗಳಲ್ಲಿ ಪ್ರದರ್ಶನ ಮಾಡುವ ಯುಎಫ್‍ಓ ಸಂಸ್ಥೆಯ ತಾಂತ್ರಿಕ ಸಮಸ್ಯೆಯಿಂದಾಗಿ, ಚಿತ್ರದ ಸುಮಾರು 60 ಶೋಗಳು ರದ್ದಾಗಿವೆ. ಶಿವಮೊಗ್ಗ, ಮಣಿಪಾಲ್, ಮಂಗಳೂರು ಸೇರಿದಂತೆ ಹಲವಾರು ಕಡೆ ಚಿತ್ರ ಪ್ರದರ್ಶನ ಆಗಿಲ್ಲ.

    ಸತ್ಯಪ್ರಕಾಶ್ ನಿರ್ದೇಶನದ ಸಿನಿಮಾಗೆ ಉಮಾಪತಿ ನಿರ್ಮಾಪಕರು. ಒಂದು ಹಸು ಹಾಗೂ ಒಬ್ಬ ಪುಟ್ಟ ಹುಡುಗನ ಮೂಲಕ, ವಿಭಿನ್ನ ಸಂದೇಶ ಇರುವ ಸಿನಿಮಾ ನೀಡಿರುವ ನಿರ್ದೇಶಕ, ನಿರ್ಮಾಪಕರು ಈಗ ಯುಎಫ್‍ಓ ಸಂಸ್ಥೆಯ ವಿರುದ್ಧ ಸಿಟ್ಟಾಗಿದ್ದಾರೆ.

  • ನಿರ್ಮಾಪಕರು, ನಿರ್ದೇಶಕರನ್ನು ಹಿಂಗೆಲ್ಲ ಹೊಗಳಿಬಿಟ್ರು..!

    producer and director happy with ondalla eradalla movie

    ಹೊಗಳಿರುವುದು ನಿರ್ಮಾಪಕ ಉಮಾಪತಿ. ಹೊಗಳಿಸಿಕೊಂಡಿರುವುದು ನಿರ್ದೇಶಕ ಸತ್ಯಪ್ರಕಾಶ್. ಉಮಾಪತಿಯವರಿಗಾಗಿ ಸತ್ಯಪ್ರಕಾಶ್ ನಿರ್ದೇಶಿಸಿರುವ ಒಂದಲ್ಲಾ.. ಎರಡಲ್ಲಾ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

    ಒಂದಲ್ಲಾ.. ಎರಡಲ್ಲಾ.. ಸಿನಿಮಾ ಮಾಡೋಕೆ ಸತ್ಯಪ್ರಕಾಶ್ ಹಾಗೂ ಅವರಲ್ಲಿದ್ದ ಕಾನ್ಫಿಡೆನ್ಸ್ ಕಾರಣ. ಅವರಿಗೆ ಸಿನಿಮಾ ಮಾಡೋಕೆ ಯೆಸ್ ಎಂದಾಗ ನಾನು ಅವರ ರಾಮಾ ರಾಮಾ ರೇ ಸಿನಿಮಾ ನೋಡಿಯೇ ಇರಲಿಲ್ಲ. ನಾಲ್ಕೈದು ಸಿನಿಮಾ ಕದ್ದು, ಒಂದು ಸಿನಿಮಾ ಮಾಡುವ ನಿರ್ದೇಶಕರಿಗಿಂತ, ತಾನೇ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ಜನ ಮೆಚ್ಚುವಂತಹ ಸಿನಿಮಾ ಮಾಡುವ ಸತ್ಯಪ್ರಕಾಶ್ ಅಂತಹವರಿಗೆ ಪ್ರೋತ್ಸಾಹ ಕೊಡಬೇಕು. ಅದು ನನಗೆ ಅತ್ಯಂತ ಸಂತೋಷ ಕೊಟ್ಟ ಸಂಗತಿ.

    ಇದು ಉಮಾಪತಿ, ಸತ್ಯಪ್ರಕಾಶ್ ಅವರನ್ನು ಹೊಗಳಿರುವ ರೀತಿ. ಇದು ಇಷ್ಟಕ್ಕೇ ನಿಲ್ಲಲ್ಲ. ಸತ್ಯಪ್ರಕಾಶ್ ತುಂಬಾ ಸ್ವಾಭಿಮಾನಿಯಂತೆ. ಈ ಸಿನಿಮಾವನ್ನು ನಾನು ಕೇವಲ ಆತ್ಮತೃಪ್ತಿಗೋಸ್ಕರ ಮಾಡುತ್ತಿದ್ದೇನೆ. ಸಿನಿಮಾದ ಸೋಲು, ಗೆಲುವು ನನಗೆ ಮುಖ್ಯವೇ ಅಲ್ಲ. ಮುಂದೆಯೂ ಕೂಡಾ ಸತ್ಯಪ್ರಕಾಶ್ ಜೊತೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸದಿಂದ ಹೇಳ್ತಾರೆ ಉಮಾಪತಿ.

    ಚಿತ್ರದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯದ ಸಂದೇಶವೂ ಇದೆ. ಅದನ್ನು ಮುಗ್ಧ ಮಗುವಿನ ಕಣ್ಣಿನಲ್ಲಿ ನೋಡುವ ಪ್ರಯತ್ನ ಚಿತ್ರದಲ್ಲಿದೆ ಅಂತಾರೆ ಉಮಾಪತಿ. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

  • ಪುನೀತ್ ಜೊತೆ ಸತ್ಯಪ್ರಕಾಶ್ ಸಿನಿಮಾ ಪಕ್ಕಾ

    puneeth's next film with satyaprakash

    ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್, ಒಳ್ಳೆಯ ಕಥೆ ಇರುವ ಸಿನಿಮಾಗಳಿಗೆ ಹೆಸರಾದವರು. ಒಂದಲ್ಲ ಎರಡಲ್ಲ ಚಿತ್ರದ ಮೂಲಕವೂ ಗಮನ ಸೆಳೆದವರು. ಪ್ರೇಕ್ಷಕರಿಗೆ  ವ್ಹಾವ್ ಎನಿಸುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಸತ್ಯಪ್ರಕಾಶ್, ಈಗ ಪುನೀತ್ ರಾಜ್‍ಕುಮಾರ್ ಅವರಿಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

    ಕಥೆಯ ಒನ್‍ಲೈನ್ ಕೇಳಿಯೇ ಥ್ರಿಲ್ ಆಗಿದ್ದ ಪುನೀತ್, ಕಥೆಯ ಮೇಲೆ ವರ್ಕ್ ಮಾಡುವಂತೆ ಹೇಳಿದ್ದರಂತೆ. ಎಲ್ಲವೂ ಫೈನಲ್ ಹಂತಕ್ಕೆ ಬಂದಿದೆ. ಪುನೀತ್ ಜೊತೆ ಕೆಲಸ ಮಾಡುವ ಅದೃಷ್ಟ ಸಿಕ್ಕಿದೆ. ಅವರು ಮತ್ತು ಅವರ ಅಭಿಮಾನಿಗಳಿಗೆ ಇಷ್ಟವಾಗುವಂಥೆ ಕಥೆ ಬರೆದಿದ್ದೇನೆ ಎಂದಿರುವ ಸತ್ಯಪ್ರಕಾಶ್ ಶೀಘ್ರದಲ್ಲೇ ಎಲ್ಲ ಮಾಹಿತಿಯನ್ನೂ ನೀಡಲಿದ್ದಾರಂತೆ.

  • ಮರಾಠಿಗೆ ರಾಮಾ ರಾಮಾ ರೇ

    ram rama to be remade in marathi

    ಕನ್ನಡದಲ್ಲಿ 4 ವರ್ಷಗಳ ಹಿಂದೆ ತೆರೆಕಂಡು ಸಂಚಲನ ಸೃಷ್ಟಿಸಿದ್ದ ಚಿತ್ರ ರಾಮಾ ರಾಮಾ ರೇ. ಕೇವಲ ಬಾಯಿಮಾತಿನ ಪ್ರಚಾರದಿಂದಲೇ ಹಿಟ್ ಆಗಿದ್ದ ಚಿತ್ರ. ಸತ್ಯಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇಗೆ ರಾಜ್ಯ ಪ್ರಶಸ್ತಿಯೂ ಸಿಕ್ಕಿತ್ತು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಚಿತ್ರವನ್ನು ಇಷ್ಟಪಟ್ಟು ಸ್ವತಃ ತಾವೇ ತೆಲುಗಿಗೆ ತೆಗೆದುಕೊಂಡು ಹೋಗಿ ರೀಮೇಕ್ ಮಾಡಿ, ಅಲ್ಲಿಯೂ ಗೆದ್ದಿದ್ದರು.

    ಈಗ ಅದೇ ಚಿತ್ರ ಮರಾಠಿಗೆ ಹೋಗುತ್ತಿದೆ. ಲಾಕ್ ಡೌನ್ ಟೈಂನಲ್ಲಿ ಯೂಟ್ಯೂಬ್‍ನಲ್ಲಿ ರಾಮಾ ರಾಮಾ ರೇ ಸಿನಿಮಾ ನೋಡಿದ ಮರಾಠಿ ಚಿತ್ರ ನಿರ್ಮಾಣ ಸಂಸ್ಥೆ, ಚಿತ್ರವನ್ನು ಮೆಚ್ಚಿಕೊಂಡು ಮರಾಠಿಗೆ ರೀಮೇಕ್ ಮಾಡಲು ರೈಟ್ಸ್ ತೆಗೆದುಕೊಂಡಿದೆ.

  • ರಾಮಾ ರಾಮಾ ರೆ, ಹೆಬ್ಬುಲಿ ಮಿಲನ..!

    ass producer class director

    ರಾಮಾ ರಾಮಾ ರೇ ಎಂಬ ಕ್ಲಾಸಿಕ್ ಚಿತ್ರದ ಮೂಲಕ, ಪ್ರೇಕ್ಷಕರ ಮನಸು ಗೆದ್ದ ನಿರ್ದೇಶಕ ಸತ್ಯಪ್ರಕಾಶ್, ಹೊಸ ಸಿನಿಮಾಗೆ ರೆಡಿಯಾಗಿದ್ದಾರೆ. ಅವರಿಗೆ ಜೊತೆಯಾಗಿರುವುದು ಹೆಬ್ಬುಲಿ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ. ಕ್ಲಾಸ್ ಚಿತ್ರದ  ನಿರ್ದೇಶಕ ಹಾಗೂ ಮಾಸ್ ಚಿತ್ರದ ನಿರ್ಮಾಪಕ ಇಬ್ಬರೂ ಸೇರಿ ಮಾಡಲು ಹೊರಟಿರುವ ಸಿನಿಮಾದ ಕಥೆ, ಮಲೆನಾಡಿನದ್ದು. ಆ ಚಿತ್ರಕ್ಕೆ ಸತ್ಯಪ್ರಕಾಶ್‍ಗೆ 10 ವರ್ಷದ ಬಾಲಕ ಬೇಕಂತೆ.

    ಅಂತಹ ಹುಡುಗನಿಗಾಗಿ ಹುಡುಕಾಟ ಶುರು ಮಾಡಿದ್ದಾರೆ ಸತ್ಯಪ್ರಕಾಶ್. ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲೇ ಹುಡುಕುತ್ತಿದ್ದಾರಂತೆ. ಬಹುತೇಕ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಲು ನಿರ್ಧರಿಸಿರುವ ಸತ್ಯಪ್ರಕಾಶ್, ಚಿತ್ರ ಜನವರಿಯಲ್ಲಿ ಶುರುವಾಗಬಹುದು ಎಂದಿದ್ದಾರೆ. ಚಿತ್ರದ ಟೈಟಲ್ ಇದೇ ವಾರ ಫೈನಲ್ ಆಗಲಿದೆಯಂತೆ.

  • ರಾಮಾ ರಾಮಾ ರೇ ಡೈರೆಕ್ಟರ್ ಚಿತ್ರದಲ್ಲಿ ಅಪ್ಪು

    puneeth's next film with satyaprakash

    ಪುನೀತ್ ರಾಜ್‌ಕುಮಾರ್, ಅತ್ತ ಕಡೆ ಕಮರ್ಷಿಯಲ್.. ಇತ್ತ ಕಡೆ ಪ್ರಯೋಗಾತ್ಮಕ ಚಿತ್ರಗಳ ಪ್ರಯೋಗಕ್ಕಿಳಿದಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ತಾವೇ ನಿರ್ಮಾಪಕರಾಗಿ ಕವಲುದಾರಿಯಂತಹ ಚಿತ್ರ ನೀಡಿ ಗೆದ್ದ ಪುನೀತ್, ಈಗ ಮಾಯಾಬಜಾರ್ ಚಿತ್ರವನ್ನು ರಿಲೀಸ್ ಮಾಡಲು ರೆಡಿಯಾಗುತ್ತಿದ್ದಾರೆ. ಇನ್ನೂ ಎರಡು ಚಿತ್ರಗಳು ಪ್ರೊಡಕ್ಷನ್ ಹಂತದಲ್ಲಿವೆ. ಹೀಗಿರುವಾಗಲೇ ತಾವೇ ಹೀರೋ ಆಗಿರುವ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಪಿಆರ್‌ಕೆ ಬ್ಯಾನರ್‌ನಲ್ಲಿ ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರೇ ಹೀರೋ. ಅವರೇ ಪ್ರೊಡ್ಯೂಸರ್. ೨೦೨೦ರ ಆರಂಭದಲ್ಲಿ ಚಿತ್ರದ ಕೆಲಸ ಶುರುವಾಗಲಿದ್ದು, ಸತ್ಯಪ್ರಕಾಶ್ ಪ್ರಿಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  • ರಾಮಾ ರಾಮಾ ರೇ ಡೈರೆಕ್ಟರ್‍ಗೆ ಪುನೀತ್ ಸಿನಿಮಾ

    director satyaprakash to direct next under puneeth'r banner

    ರಾಮಾ ರಾಮಾ ರೇ ಮೂಲಕ ಸಂಚಲನ ಮೂಡಿಸಿದ್ದ, ಒಂದಲ್ಲಾ ಎರಡಲ್ಲಾ ಚಿತ್ರದ ಮೂಲಕ ಭಾವನೆಗಳನ್ನು ಬಡಿದೆಬ್ಬಿಸಿದ್ದ ನಿರ್ದೇಶಕ ಸತ್ಯಪ್ರಕಾಶ್. ಅವರಿಗೀಗ ಒಂದೊಳ್ಳೆ ಆಫರ್ ಸಿಕ್ಕಿದೆ. ಅದು ಪುನೀತ್ ಬ್ಯಾನರ್‍ನಲ್ಲಿ. ಪಿಆರ್‍ಕೆ ಪ್ರೊಡಕ್ಷನ್‍ನಲ್ಲಿ ಚಿತ್ರ ನಿರ್ದೇಶನಕ್ಕೆ ಸತ್ಯಪ್ರಕಾಶ್ ರೆಡಿಯಾಗಿದ್ದಾರೆ. ಕಥೆಯನ್ನು ಪುನೀತ್ ಇಷ್ಟಪಟ್ಟಿದ್ದು, ಚಿತ್ರಕಥೆಯಲ್ಲಿ ಬ್ಯುಸಿಯಾಗಿದ್ದಾರಂತೆ ಸತ್ಯಪ್ರಕಾಶ್. ಅದು ಫೈನಲ್ ಆಗುವವರೆಗೆ ನೋ ಟಾಕ್ ಎಂದಿದ್ದಾರೆ ಸತ್ಯಪ್ರಕಾಶ್.

    ಕವಲುದಾರಿ ಸಕ್ಸಸ್ ಜೋಶ್‍ನಲ್ಲಿರುವ ಪುನೀತ್ ಬ್ಯಾನರ್‍ನಲ್ಲಿ ಈಗಾಗಲೇ ಮಾಯಾಬಜಾರ್, ಲಾ ಚಿತ್ರಗಳ ಶೂಟಿಂಗ್ ಮುಗಿದಿದೆ. ಪನ್ನಗಾಭರಣ, ಡ್ಯಾನಿಶ್ ಸೇಟ್ ಕಾಂಬಿನೇಷನ್ನಿನ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಒಂದರ ಹಿಂದೊಂದು ಬ್ರಿಡ್ಜ್ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಪುನೀತ್, ಯವ ನಿರ್ದೇಶಕರಿಗೆ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ.

  • ಹೆಬ್ಬುಲಿ ನಿರ್ಮಾಪಕರಿಂದ ಒಂದಲ್ಲಾ..ಎರಡಲ್ಲಾ..

    hebbuli and rama rama rey team up

    ಹೆಬ್ಬುಲಿ. ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಆ ಚಿತ್ರದ ನಿರ್ಮಾಪಕರು ಉಮಾಪತಿ. ರಾಮಾ ರಾಮಾ ರೇ.. ಅದ್ಭುತ ಸಂದೇಶ ಇದ್ದ ವಿಭಿನ್ನ ಚಿತ್ರ, ಬಾಕ್ಸಾಫೀಸ್‍ನಲ್ಲೂ ಸದ್ದು ಮಾಡಿತ್ತು. ಆ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್. ಈಗ ಅವರಿಬ್ಬರೂ ಜೊತೆಯಾಗಿದ್ದಾರೆ. ಒಂದಲ್ಲಾ.. ಎರಡಲ್ಲಾ..

    umapathi_saryaprakash_team.jpgಒಂದಲ್ಲಾ.. ಎರಡಲ್ಲಾ.. ಅನ್ನೋದು ಚಿತ್ರದ ಟೈಟಲ್. ಗೊಂದಲ ಬೇಡ. ಚಿತ್ರದ ಮುಖ್ಯ ಪಾತ್ರಧಾರಿ 8ರಿಂದ 12 ವರ್ಷದ ಹುಡುಗ. ಆಡಿಷನ್ ಮೂಲಕವೇ ಆಯ್ಕೆ ನಡೆದಿದೆ. ಉಳಿದಂತೆ ಇಡೀ ಸಿನಿಮಾದಲ್ಲಿ ರಂಗಭೂಮಿ ಕಲಾವಿದರೇ ಇರಲಿದ್ದಾರೆ. ಅಂದಹಾಗೆ ಈ ಚಿತ್ರದ ನಾಯಕ ಯಾರು..? ನಾಯಕಿ ಯಾರು ಎಂದೆಲ್ಲ ಕೇಳೋಕೇ ಬರಬೇಡಿ. ಅಂತಹ ಕಲ್ಪನೆಯೇ ಇಲ್ಲಿಲ್ಲ. ಚಿತ್ರದ ಕಥೆಯೇ ಚಿತ್ರದ ಹೀರೋ.

    Related Articles :-

    Satyaprakash To Do A Film For Umapathi