ತಿಥಿ ಚಿತ್ರದ ಮೂಲಕ ಗಮನ ಸೆಳೆದ ಕಲಾವಿದೆ ಪೂಜಾ, ಎಡಪಕ್ಕೆಗೆ ಏಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದ ಘಟನೆ ನಿಧಾನವಾಗಿ ಹೊರಬಿದ್ದಿದೆ. ಪೂಜಾ, ಈ ರೀತಿ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಲು ಕಾರಣವಾಗಿರೋದು ಕೋಲೆ ಬಸವ. ಮೂಕ ಹಕ್ಕಿ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ವೇಳೆ ಕೋಲೆ ಬಸವನ ಜೊತೆ ಸೀನ್ ಇತ್ತು. ಇನ್ನೊಂದು ಐದು ನಿಮಿಷ ಶೂಟಿಂಗ್ ಆಗಿಬಿಟ್ಟಿದ್ದರೆ, ಚಿತ್ರಕ್ಕೆ ಕುಂಭಳಕಾಯಿ ಒಡೆಯಬೇಕಿತ್ತು. ಅಷ್ಟರಲ್ಲಿ ಈ ಅನಾಹುತ ಸಂಭವಿಸಿಬಿಟ್ಟಿದೆ.
ಒಂದೊಳ್ಳೆ ಸಿನಿಮಾ ಮಾಡುವಾಗ ಇಂಥವೆಲ್ಲ ಆಗೋದು ಸಹಜ ಎನ್ನುತ್ತಾರೆ ಪೂಜಾ. ಚಿತ್ರತಂಡದವರೆಲ್ಲ ಪೂಜಾ ಅವರನ್ನು ಚೆನ್ನಾಗಿ ಆರೈಕೆ ಮಾಡಿದ್ದಾರೆ. ಪೂಜಾ ಚೇತರಿಸಿಕೊಳ್ಳುತ್ತಿದ್ದಾರೆ.