` kapil dev, - chitraloka.com | Kannada Movie News, Reviews | Image

kapil dev,

  • ಕಣ್ಣೀರಿಟ್ಟಿದ್ದ ಸುದೀಪ್`ಗೆ ಕಪಿಲ್ ಕೊಟ್ಟ ಗಿಫ್ಟ್

    ಕಣ್ಣೀರಿಟ್ಟಿದ್ದ ಸುದೀಪ್`ಗೆ ಕಪಿಲ್ ಕೊಟ್ಟ ಗಿಫ್ಟ್

    ಆಗ ನಾನಿನ್ನೂ ಚಿಕ್ಕ ಹುಡುಗ. ಕಪಿಲ್ ದೇವ್ ಅಂದ್ರೆ ಇಷ್ಟ. ಅವರ ಜೊತೆ ಫೋಟೋ ತೆಗೆಸಿಕೊಳ್ಳೋ ಆಸೆ. 1987 ಇರಬೇಕು. ವೆಸ್ಟ್‍ಇಂಡೀಸ್ ಜೊತೆ ಆಡೋಕೆ ಕಪಿಲ್ ದೇವ್ ಟೀಂ ಬೆಂಗಳೂರಿಗೆ ಬಂದಿತ್ತು. ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಉಳಿದುಕೊಂಡಿತ್ತು. ನಾನು ಅಕ್ಕನ ಜೊತೆ ಹೋಗಿದ್ದೆ.

    ಕಪಿಲ್ ಹೋಗುತ್ತಿದ್ದನ್ನು ನೋಡಿ.. ಓಡಿ ಹೊಗಿ ಅವರ ಕೋಟ್ ಹಿಡಿದು ಎಳೆದೆ. ಅವರು ತಿರುಗಿ ನೋಡಿ ಏನು ಬೇಕು ಮಗು ಅಂದ್ರು. ನಾನು ಫೋಟೋ ಬೇಕು ಎಂದು ನನ್ನ ಬಳಿಯಿದ್ದ ಫ್ಯೂಜಿ ಕ್ಯಾಮೆರಾ ತೋರಿಸಿದೆ. ಯಾರು ಫೋಟೋ ತೆಗೀತಾರೆ ಅಂದೆ. ಅಷ್ಟೊತ್ತಿಗೆ ನನ್ನ ಅಕ್ಕ ಕೂಡಾ ಓಡೋಡಿ ಬಂದಿದ್ದರು. ಅಕ್ಕನನ್ನು ತೋರಿಸಿದೆ. ಆದರೆ, ಫೋಟೋ ತೆಗೆಯೋಕೆ ಅದೇ ಟೈಮಿಗೆ ಹೋದರೆ ಕ್ಯಾಮೆರಾ ಕೆಲಸ ಮಾಡ್ತಿಲ್ಲ. ನಾನು ಅಳೋಕೆ ಶುರು ಮಾಡಿದೆ. ಆಗ ಕಪಿಲ್ ಅವರೇ ಸಮಾಧಾನ ಮಾಡಿದ್ರು. ನಂತರ ನಾನು ವೆಂಗ್ ಸರ್ಕಾರ್ ಅವರನ್ನ ನೋಡ್ಬೇಕು ಅಂದೆ. ಅಳುತ್ತಿದ್ದ ನನ್ನನ್ನು ಕರೆದುಕೊಂಡು ಹೋಗಿ ಅವರನ್ನೂ ಭೇಟಿ ಮಾಡಿಸಿದರು.

    ಸುದೀಪ್ ಇದಿಷ್ಟೂ ಕಥೆಯನ್ನು 83 ಚಿತ್ರದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಳ್ತಿರೋವಾಗ ಅಲ್ಲಿಯೇ ವೇದಿಕೆ ಮೇಲಿದ್ದ ಕಪಿಲ್ ಎದ್ದು ಬಂದು ಈಗ ಸುದೀಪ್‍ಗೆ ನನ್ನ ಜೊತೆ ಫೋಟೋ ಬೇಕೋ ಬೇಡವೋ.. ನನಗೀಗ ಸುದೀಪ್ ಜೊತೆ ಪಿಕ್ಚರ್ ಬೇಕು ಎಂದು ಫೋಟೋ ತೆಗೆಸಿಕೊಂಡರು.

    ಇದೆಲ್ಲ ನಡೆದದ್ದು 83 ಈವೆಂಟ್‍ನಲ್ಲಿ. ಅಂದು ಕಪಿಲ್ ಜೊತೆಗೆ ಒಂದು ಫೋಟೋಗಾಗಿ ಕಣ್ಣೀರಿಟ್ಟಿದ್ದ ಸುದೀಪ್, ಈಗ ಅವರ ಬಯೋಪಿಕ್ 83ಯನ್ನು ಕನ್ನಡದಲ್ಲಿ ಅರ್ಪಣೆ ಮಾಡುತ್ತಿದ್ದಾರೆ. 

  • ಕನ್ನಡದ ಕಪಿಲ್ ಬಯೋಪಿಕ್ 83ಗೆ ಸುದೀಪ್ ರಾಯಭಾರ

    ಕನ್ನಡದ ಕಪಿಲ್ ಬಯೋಪಿಕ್ 83ಗೆ ಸುದೀಪ್ ರಾಯಭಾರ

    83. ಭಾರತೀಯ ಕ್ರಿಕೆಟ್‍ನ ದಂತಕಥೆ ಕಪಿಲ್ ದೇವ್ ಅವರ ಜೀವನವನ್ನೇ ಆಧರಿಸಿದ ಸಿನಿಮಾ. ಇದೇ ಡಿಸೆಂಬರ್ 24ಕ್ಕೆ ರಿಲೀಸ್ ಆಗುತ್ತಿರೋ ಚಿತ್ರ. ಹಿಂದಿಯಲ್ಲಿ ತಯಾರಾಗಿರುವ 83, ಕನ್ನಡಕ್ಕೂ ಡಬ್ ಆಗಿ ಬರುತ್ತಿದೆ. ಕನ್ನಡದಲ್ಲಿ ಡಬ್ ಆಗಿ ಬರುತ್ತಿರೋ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿರುವುದು ಕಿಚ್ಚ ಸುದೀಪ್. ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್ ರಿಲೀಸ್ ಮಾಡಿ ಸುದೀಪ್ ಚಿತ್ರಕ್ಕೆ ಶುಭ ಕೋರಿದ್ದಾರೆ.

    ಸಿನಿಮಾ ಹೊರತಾಗಿ ನಾನು ಹೆಚ್ಚು ಇಷ್ಟಪಡುವ ಇನ್ನೊಂದು ಕ್ಷೇತ್ರ ಕ್ರಿಕೆಟ್. ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರ ಜೀವನಚರಿತ್ರೆ 83. ಅದನ್ನು ನಾನು ಕನ್ನಡದಲ್ಲಿ ಅರ್ಪಿಸುತ್ತಿರುವುದಕ್ಕೆ ಖುಷಿಯಿದೆ. ವಿತರಕ ಜಾಕ್ ಮಂಜು ಚಿತ್ರವನ್ನು ಕನ್ನಡದಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಟ್ರೇಲರ್ ರೋಚಕವಾಗಿದೆ. ಸಿನಿಮಾ ಕೂಡಾ ಹಾಗೆಯೇ ಇರುತ್ತದೆ ಎಂದಿದ್ದಾರೆ ಕಿಚ್ಚ ಸುದೀಪ್.

    ಕಬೀರ್ ಖಾನ್ ನಿರ್ದೇಶನದ 83 ಚಿತ್ರದಲ್ಲಿ ರಣ್‍ವೀರ್ ಸಿಂಗ್ ಕಪಿಲ್ ದೇವ್ ಆಗಿದ್ದರೆ, ಕಪಿಲ್ ಪತ್ನಿ ರೋಮಿಯ ಪಾತ್ರದಲ್ಲಿ ನಟಿಸಿರುವುದು ರಣ್‍ವೀರ್ ಸಿಂಗ್ ಅವರ ರಿಯಲ್ ಪತ್ನಿ ದೀಪಿಕಾ ಪಡುಕೋಣೆ.

  • ಕಿರ್ಮಾನಿಯಾಗುತ್ತಿದ್ದಾರೆ ವಿಶ್ವಕಪ್ ಗೆಲ್ಲಿಸಿದ್ದ ಕನ್ನಡಿಗ ಕಿರ್ಮಾನಿ

    syed kirmani in kapil dev's movie

    ಸೈಯದ್ ಕಿರ್ಮಾನಿ. 1983ರಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ಡೆವಿಲ್ಸ್ ತಂಡದಲ್ಲಿದ್ದ ಕನ್ನಡಿಗ. ಈಗ ಹಿಂದಿಯಲ್ಲಿ ಕಪಿಲ್ ದೇವ್ ಕುರಿತ ಸಿನಿಮಾ ಬರುತ್ತಿದೆ. ಕಬೀರ್ ಖಾನ್ ನಿರ್ದೇಶನದ ಆ ಸಿನಿಮಾದಲ್ಲಿ ಕಪಿಲ್ ದೇವ್ ಆಗಿ ನಟಿಸುತ್ತಿರುವುದು ರಣ್‍ವೀರ್ ಸಿಂಗ್.

    ವಿಶೇಷವೆಂದರೆ, ಆ ಸಿನಿಮಾದಲ್ಲಿ ಸೈಯದ್ ಕಿರ್ಮಾನಿ ನಟಿಸುತ್ತಿದ್ದಾರೆ. ಇನ್ನೂ ವಿಶೇಷವೆಂದರೆ, ಅವರು ನಟಿಸಲಿರುವುದು ಅವರದ್ದೇ ಪಾತ್ರವನ್ನು. ತಮ್ಮ ಪಾತ್ರದಲ್ಲಿ ತಾವೇ  ನಟಿಸುವ ಅಪರೂಪದ ಅವಕಾಶ ಸೈಯದ್ ಕಿರ್ಮಾನಿ ಅವರಿಗೆ ಸಿಕ್ಕಿದೆ.