` manoj, - chitraloka.com | Kannada Movie News, Reviews | Image

manoj,

 • Darshan's Cousin Makes His Debut With 'Takkar'

  darshan's lookalike cousin manoj

  Darshan's cousin Manoj who has acted in a few films in small roles is all set to make his debut as a hero through a new film called 'Takkar'.

  'Takkar' is being produced by Nagesh Kogilu and directed by Raghu Shastry who earlier directed Vinay Rajakumar's 'Run Antony. After a gap, Raghu is back directing 'Takkar'. The Photo shoot of the film has been done and the star cast and technicians of the film will be revealed soon.

   

 • ತೂಗುದೀಪ ಫ್ಯಾಮಿಲಿಯಿಂದ ಇನ್ನೊಬ್ಬ ಹೀರೋ

  darshan relative o enter films

  ತೂಗುದೀಪ ಶ್ರೀನಿವಾಸ್ ಕುಟುಂಬದಿಂದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೂರದ ಸಂಬಂಧಿಯಾಗಿರುವ ಮನೋಜ್, ಈಗ ಹೀರೋ ಆಗಿ ತೆರೆಗೆ ಬರುತ್ತಿದ್ದಾರೆ. ದರ್ಶನ್ ಜೊತೆ ಅಂಬರೀಷ, ಚಕ್ರವರ್ತಿ ಸಿನಿಮಾಗಳಲ್ಲಿ ನಟಿಸಿರುವ ಮನೋಜ್, ದರ್ಶನ್ ಅವರಷ್ಟೇ ಹೈಟ್ ಇದ್ದಾರೆ. ಪರ್ಸನಾಲಿಟಯೂ ಜಬರ್‍ದಸ್ತಾಗಿದೆ.

  ಸದ್ಯಕ್ಕೆ ಮನೋಜ್ ಅರವಿಂದ್ ಕೌಶಿಕ್ ಅವರ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸುತ್ತಾಡುತ್ತಿದೆ. ಆದರೆ, ಅಧಿಕೃತವಾಗಿಲ್ಲ.

   

   

 • ಮತ್ತೊಮ್ಮೆ ಓ ಪ್ರೇಮವೇ.. ನೆನಪಾಗುವ ಕ್ರೇಜಿಸ್ಟಾರ್

  o premave reminds us of crazystar

  ಓ ಪ್ರೇಮವೇ.. ಇದು ಮನೋಜ್ ಕುಮಾರ್ ಎಂಬ ಹೊಸಪ್ರತಿಭೆ ನಾಯಕರಾಗಿರುವ ಚಿತ್ರ. ಚಿತ್ರಕ್ಕೆ ನಿಕ್ಕಿ ಗರ್ಲಾನಿ ಹೀರೋಯಿನ್. ಮನೋಜ್ ಅವರದ್ದೇ  ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಇರುವ ಸಿನಿಮಾಗೆ ಚಂಚಲ ಕುಮಾರಿ ನಿರ್ಮಾಪಕಿ. ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಓ ಪ್ರೇಮವೇ ಚಿತ್ರ ಬೇಡ ಬೇಡವೆಂದರೂ ರವಿಚಂದ್ರನ್ ಅವರನ್ನು ನೆನಪಿಸುತ್ತೆ.

  ಓ ಪ್ರೇಮವೇ ಅನ್ನೋ ಹೆಸರಿನ ಸಿನಿಮಾ ಈ ಹಿಂದೆ ಬಂದಿತ್ತು. 18 ವರ್ಷಗಳ ಹಿಂದೆ. ರವಿಚಂದ್ರನ್-ರಂಭಾ ನಾಯಕ, ನಾಯಕಿಯಾದರೆ, ಪ್ರಮುಖ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ, ದಿ.ಶ್ರೀಹರಿ ನಟಿಸಿದ್ದರು. ಈಗ ಅದೇ ಹೆಸರಿನ ಸಿನಿಮಾ ಮತ್ತೊಮ್ಮೆ ಬರುತ್ತಿರುವಾಗ ರವಿಚಂದ್ರನ್ ನೆನಪಾದರೆ, ಆಶ್ಚರ್ಯವೇನೂ ಇಲ್ಲ. 

  ಆದರೆ, ಹೆಸರಿನ ಹೊರತಾಗಿ ಬೇರೇನೂ ಸಂಬಂಧವಿಲ್ಲ. ಚಿತ್ರದಲ್ಲಿ ಹಣ, ಶ್ರೀಮಂತ್ರಿಕೆಗಿಂತ ಪ್ರೀತಿಯೇ ಮುಖ್ಯ ಎಂಬ ಸಂದೇಶವಿದೆ. ಚಿತ್ರದಲ್ಲಿ ಅದನ್ನು ಚೆನ್ನಾಗಿ ತೋರಿಸಲಾಗಿದೆ. ಜನ ಖಂಡಿತಾ ಇಷ್ಟಪಡುತ್ತಾರೆ ಎನ್ನುವುದು ಚಿತ್ರತಂಡದ ನಂಬಿಕೆ.

Johnny Johnny Yes Papa Movie Gallery

Rightbanner02_statement_inside

Dalapathi Movie Gallery