` manvita harish, - chitraloka.com | Kannada Movie News, Reviews | Image

manvita harish,

 • ಬಿಬಿಸಿಯಲ್ಲಿ ರೇಡಿಯೋದಲ್ಲಿ ಮಾನ್ವಿತಾ

  manvitha harish's interview in bbc

  ಕೆಂಡಸಂಪಿಗೆ, ಟಗರು ಖ್ಯಾತಿಯ ಮಾನ್ವಿತಾ ಹರೀಶ್ ಬಿಬಿಸಿಯಲ್ಲಿ ಮಾತನಾಡಿದ್ದಾರೆ. ಅರೆ.. ಮಾನ್ವಿತಾ ಸಿನಿಮಾ ಬಿಟ್ಟು, ಮತ್ತೆ ತಮ್ಮ ಹಳೆಯ ಪ್ರೊಫೆಷನ್‍ಗೆ ಮರಳಿಬಿಟ್ಟರಾ ಎಂಬ ಪ್ರಶ್ನೆ ಕಾಡೋದು ಸಹಜ. ಏಕಂದ್ರೆ, ಮಾನ್ವಿತಾ ಮೊದಲು ಆರ್‍ಜೆ (ರೇಡಿಯೋ ಜಾಕಿ) ಆಗಿದ್ದವರು. ಆದರೆ, ಬಿಬಿಸಿಯಲ್ಲಿ ಮಾತನಾಡಿರುವುದು ಆರ್‍ಜೆ ಆಗಿ ಅಲ್ಲ.

  ಕೆಲವು ದಿನಗಳಿಂದ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾ ಶೂಟಿಂಗ್‍ಗಾಗಿ ಲಂಡನ್‍ನಲ್ಲೇ ಬೀಡುಬಿಟ್ಟಿರುವ ಮಾನ್ವಿತಾ, ಬಿಬಿಸಿ ಏಷ್ಯಾನೆಟ್‍ಗೆ ಸಂದರ್ಶನ ನೀಡಿದ್ದಾರೆ. ಕನ್ನಡದಲ್ಲೇ. 

  ಶಾಂತಿ ಓಂಕಾರ್ ಎಂಬುವವರು ಮಾನ್ವಿತಾ ಅವರನ್ನು ಇಂಟರ್‍ವ್ಯೂ ಮಾಡಿದ್ದಾರೆ. ತಮ್ಮ ಜೀವನ ಮತ್ತು ವೃತ್ತಿ ಜೀವನದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆರ್‍ಜೆ ಆಗಿಯೇ ವೃತ್ತಿ ಜೀವನ ಆರಂಭಿಸಿದ ನನಗೆ, ಬಿಬಿಸಿ ರೇಡಿಯೋ ಸಂದರ್ಶನದ ಅತಿಥಿಯಾಗಿದ್ದು ಖುಷಿ ಕೊಟ್ಟಿದೆ. ಜೀವನ ಒಂದು ಸರ್ಕಲ್ ಮುಗಿಸಿದ ಭಾವವೆ ಕಾಡುತ್ತಿದೆ ಎಂದು ಹೇಳಿದ್ದಾರೆ ಮಾನ್ವಿತಾ.

 • ಮರಾಠಿಗೆ ಟಗರು ಪುಟ್ಟಿ

  manvitha acts in marathi films

  ಕೆಂಡ ಸಂಪಿಗೆ ಬಂದಾಗ ಕೆಂಡಸಂಪಿಗೆ ಹುಡುಗಿ ಎಂದರು. ಟಗರು ಬಂದಾದ ಮೇಲೆ ಟಗರು ಪುಟ್ಟಿ ಎಂದರು. ಎರಡೂ ಬಿರುದು ಹೊತ್ತಿರುವ ಮಾನ್ವಿತಾ ಹರೀಶ್, ಈಗ ಮಾನ್ವಿತಾ ಕಾಮತ್ ಆಗಿದ್ದಾರೆ. ಈ ಮಾನ್ವಿತಾ ಕಾಮತ್, ಈಗ ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

  ನಂದಿತಾ ಯಾದವ್ ಅವರ ಮರಾಠಿ ಚಿತ್ರಕ್ಕೆ ಮುಹೂರ್ತವೂ ಆಗಿದೆ. ಆ ಚಿತ್ರದಲ್ಲಿ ಮಾನ್ವಿತಾ ಅವರ ಜೊತೆಗೆ ಬಾಲಿವುಡ್‍ನಿಂದ ಮಿಥುನ್ ಚಕ್ರವರ್ತಿ, ಸ್ಯಾಂಡಲ್‍ವುಡ್‍ನಿಂದ ಅರುಣ್ ಸಾಗರ್, ರಾಜೇಶ್ ನಟರಂಗ, ಮರಾಠಿ ಚಿತ್ರರಂಗದಿಂದ ಸುಮುಖ್, ಇಶಾನ್ ಕತ್ತರ್ ಮೊದಲಾದವರು ನಟಿಸುತ್ತಿದ್ದಾರೆ.

 • ಮಾನ್ವಿತಾ ಪೇಂಯ್ಟಿಂಗ್ ಕೂಡಾ ಮಾಡ್ತಾರೆ..!

  manvitha draws sketches of rajkumar and rajanikanth

  ಟಗರು ಪುಟ್ಟಿ ಮಾನ್ವಿತಾ ಪೇಂಯ್ಟಿಂಗ್ ಕೂಡಾ ಮಾಡ್ತಾರೆ. ಹೌದು, ಟಗರು ಚಿತ್ರದ ಈ ಕೆಂಡಸಂಪಿಗೆ, ಫ್ರೀ ಇದ್ದಾಗ ಬೇರೆ ಬೇರೆ ಹವ್ಯಾಸಗಳನ್ನಿಟ್ಟುಕೊಂಡಿದ್ದಾರೆ. ಓದುವುದು ಅವರ ನೆಚ್ಚಿನ ಹವ್ಯಾಸ. ಇದರ ಜೊತೆ ಪೇಂಯ್ಟಿಂಗ್, ಡ್ರಾಯಿಂಗ್ ಹವ್ಯಾಸವೂ ಇದೆ. 

  ಹೀಗೆಯೇ ಇತ್ತೀಚೆಗೆ ಡಾ.ರಾಜ್ ಕುಮಾರ್ ಹಾಗೂ ರಜನಿಕಾಂತ್ ಚಿತ್ರಗಳನ್ನು ಡ್ರಾಯಿಂಗ್ ಮಾಡಬೇಕು ಎನಿಸಿದೆ. ತಕ್ಷಣ ಬ್ರಷ್ ತೆಗೆದುಕೊಂಡಿದ್ದಾರೆ. ಬ್ಲೂ ಇಂಕ್ ಪೆನ್‍ನಲ್ಲಿ ಒಮ್ಮೆಯೂ ಅಳಿಸದೆ ಇಬ್ಬರೂ ಸ್ಟಾರ್ ನಟರ ಚಿತ್ರವನ್ನು ಅರಳಿಸಿದ್ದಾರೆ.

  ಅನಿಮೇಷನ್ ಕೋರ್ಸ್ ಮಾಡಿರೋದ್ರಿಂದ ಪೆನ್ ಹಾಗೂ ಪೆನ್ಸಿಲ್ ಸ್ಕೆಚ್ ಮಾಡೋದು ಗೊತ್ತು. ಡ್ರಾಯಿಂಗ್ ಮಾಡೋದೆಂದರೆ ನನಗೆ ಬಹಳ ಇಷ್ಟ. ಅದು ನನ್ನ ಬಾಲ್ಯವನ್ನು ನೆನಪಿಸುತ್ತೆ ಎಂದು ಹೇಳಿಕೊಂಡಿದ್ದಾರೆ ಮಾನ್ವಿತಾ.

 • ಮಾನ್ವಿತಾ ಹರೀಶ್.. ಅಲ್ಲ.. ಮಾನ್ವಿತಾ ಕಾಮತ್.. ಕೆಎಎಸ್..!

  manvitha as kas officer in tarakasura

  ಜರ್ನಲಿಸಂ ಓದಿ, ಆರ್‍ಜೆಯಾಗಿದ್ದುಕೊಂಡೇ ಹೀರೋಯಿನ್ ಆದ ಕೆಂಡಸಂಪಿಗೆ ಈಗ ಕೆಎಎಸ್ ಆಗಿದ್ದಾರೆ. ಓದುವ ಅಭ್ಯಾಸವನ್ನು ಇವತ್ತಿಗೂ ಇಟ್ಟುಕೊಂಡಿರೋ ಮಾನ್ವಿತಾ ಕೆಎಎಸ್ ಆಗಿದ್ರೂ ಆಗಿರಬಹುದು ಅಂದ್ಕೋತೀರೇನೋ.. ಆದರೆ, ಅವರು ಕೆಎಎಸ್ ಅಧಿಕಾರಿಯಾಗಿರೋದು ತಾರಕಾಸುರನಿಗಾಗಿ.

  ಚಿತ್ರದಲ್ಲಿ ಅವರದ್ದು ಉತ್ತರ ಕರ್ನಾಟಕದ ಹೆಣ್ಣು ಮಗಳ ಪಾತ್ರ... ಇನ್ನೊಂದು ಶೇಡ್‍ನಲ್ಲಿ ಅವರು ಕೆಎಎಸ್ ಅಧಿಕಾರಿ. ಮರಳು ಮಾಫಿಯಾ ವಿರುದ್ಧ ಸ್ಟ್ರಿಕ್ಟ್ ಆಗುವ ಅಧಿಕಾರಿಯಾಗಿ ಕಾಣಿಸಿಕೊಂಡಿರೋದು.. ತಮ್ಮ ಪಾತ್ರಕ್ಕೆ ಎರಡು ಶೇಡ್ ಇರೋದು ಅವರಿಗೆ ಖುಷಿ ಕೊಟ್ಟಿದೆಯಂತೆ. ನಾಯಕಿಯ ಪಾತ್ರಕ್ಕೆ ಮಹತ್ವವೇ ಇಲ್ಲದಂತಾಗಿರುವ ಸಮಯದಲ್ಲಿ ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಸ್ಟ್ರಾಂಗ್ ಆಗಿದೆ ಎಂದು ಹೇಳಿಕೊಂಡಿದ್ದಾರೆ ಮಾನ್ವಿತಾ.

  ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಚಿತ್ರದಲ್ಲಿ ಈ ಟಗರು ಬೇಬಿಗೆ ವೈಭವ್ ನಾಯಕ. ವೈಭವ್ ಕೂಡಾ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ದೇಹವನ್ನೂ ದಂಡಿಸಿದ್ದಾರೆ. ತೂಕ ಹೆಚ್ಚಿಸಿಕೊಂಡು, ಇಳಿಸಿಕೊಂಡು ತನ್ಮಯರಾಗಿ ನಟಿಸಿದ್ದಾರೆ. ಅವರ ಪಾತ್ರ ನೋಡಿದವರು, ಇದು ಅವರ ಮೊದಲ ಸಿನಿಮಾ ಎಂದುಕೊಳ್ಳಲ್ಲ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ಮಾನ್ವಿತಾ. ನರಸಿಂಹುಲು ಚಿತ್ರದ ನಿರ್ಮಾಪಕರು.

 • ವರ್ಮಾಗೆ ಇಷ್ಟವಾದಳು ಕೆಂಡಸಂಪಿಗೆ

  rgv is impresses by manvitha harish

  ಮಾನ್ವಿತಾ ಹರೀಶ್. ಕೆಂಡಸಂಪಿಗೆಯಿಂದ ಬೆಳಕಿಗೆ ಬಂದ ಪ್ರತಿಭೆ. ದುನಿಯಾ ಸೂರಿಯವರ ಶೋಧ. ಮಾನ್ವಿತಾ ಅವರ ಅಭಿನಯಕ್ಕೆ ಈಗ ಮಾರು ಹೋಗಿರುವುದು ನಿರ್ದೇಶಕ ರಾಮ್‍ಗೋಪಾಲ್ ವರ್ಮಾ.

  ಟಗರು ಚಿತ್ರವನ್ನು ನೋಡೋಕೆ ಬೆಂಗಳೂರಿಗೆ ಬಂದಿದ್ದ ವರ್ಮಾ, ಚಿತ್ರದಲ್ಲಿ ಮಾನ್ವಿತಾ ಅವರ ಅಭಿನಯಕ್ಕೆ ಫಿದಾ ಆಗಿಬಿಟ್ಟಿದ್ದಾರೆ. ತಮ್ಮ ಹೊಸ ಚಿತ್ರದಲ್ಲಿ ಮಾನ್ವಿತಾ ಅವರಿಗೆ ಚಾನ್ಸ್ ಕೊಡುತ್ತಿರುವುದಾಗಿ ಘೋಷಿಸಿಯೂಬಿಟ್ಟಿದ್ದಾರೆ. 

  ಅವರು ಕೇಳಿರೋದಕ್ಕಿಂತ 10 ಲಕ್ಷ ಹೆಚ್ಚು ಕೊಡುತ್ತೇನೆ ಎಂದಿದ್ದಾರೆ ವರ್ಮಾ. ಅಷ್ಟರಮಟ್ಟಿಗೆ ವರ್ಮಾಗೆ ಮಾನ್ವಿತಾ ಅವರ ಎನರ್ಜಿ ಹಾಗೂ ಆ್ಯಕ್ಟಿಂಗ್ ಇಷ್ಟವಾಗಿಬಿಟ್ಟಿದೆ. ಆದರೆ, ಮಾನ್ವಿತಾ ಅವರು ವರ್ಮಾ ಅವರ ಯಾವ ಚಿತ್ರಕ್ಕೆ ನಾಯಕಿ ಅನ್ನೋದು ಸಸ್ಪೆನ್ಸ್.

 • ವಾರ ಮೊದಲೇ ಟಗರು ಬುಕ್ಕಿಂಗ್ ಸ್ಟಾರ್ಟ್

  tagaru release poster

  ಟಗರು ಸಿನಿಮಾ ರಿಲೀಸ್ ಆಗೋದು ಮುಂದಿನ ಗುರುವಾರ. ಹೆಚ್ಚೂ ಕಡಿಮೆ ಇನ್ನೂ ಒಂದು ವಾರ್ ಟೈಂ ಇದೆ. ಆದರೆ, ಟಗರು ಚಿತ್ರದ ಟಿಕೆಟ್ ಬುಕಿಂಗ್ ಆಗಲೇ ಶುರುವಾಗಿಬಿಟ್ಟಿದೆ. ಕಾರಣ, ಟಗರು ಸೃಷ್ಟಿಸಿರುವ ಕ್ರೇಜ್.

  ಆನ್‍ಲೈನ್‍ನಲ್ಲಿ ಟಗರು ಟೀಸರ್, ಹಾಡುಗಳು ಸೃಷ್ಟಿಸಿರುವ ಹವಾ, ಅಭಿಮಾನಿಗಳ ಮಧ್ಯೆ ಸಿನಿಮಾ ನೋಡೋಕೆ ಶುರುವಾಗಿರುವ ಪೈಪೋಟಿ.. ಎಲ್ಲವನ್ನೂ ನೋಡಿ ಚಿತ್ರತಂಡ ಖುಷಿಯಾಗಿ ಹೋಗಿದೆ. ಕಡ್ಡಿಪುಡಿ ನಂತರ ಸೂರಿ ಮತ್ತು ಶಿವರಾಜ್ ಕುಮಾರ್ ಒಂದಾಗಿರುವ ಚಿತ್ರಕ್ಕೆ ಭಾವನಾ ಮತ್ತು ಮಾನ್ವಿತಾ ಹರೀಶ್ ನಾಯಕಿಯರು. ನಾಯಕ ಧನಂಜಯ್, ಚಿತ್ರದಲ್ಲಿ ವಿಲನ್ ರೋಲ್ ಮಾಡಿರುವುದು ವಿಶೇಷ. ಗೋಧಿ ಬಣ್ಣದಂತಾ ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್‍ರಾಜ್, ಸಂಗೀತ ಈ ಚಿತ್ರಕ್ಕಿದೆ.

  ಹೊಸ ತಂತ್ರಜ್ಞರ ತಂಡ ಕಟ್ಟಿಕೊಂಡು ಸೂರಿ ಕಟ್ಟಿಕೊಟ್ಟಿರುವ ಸಿನಿಮಾದಲ್ಲಿರುವುದು ಪೊಲೀಸ್ ಮತ್ತು ಕ್ರೈಂ ಜಗತ್ತಿನ ಕಥೆ. ಶ್ರೀಕಾಂತ್ ನಿರ್ಮಾಣದ ಸಿನಿಮಾ ಫೆಬ್ರವರಿ 23ರಂದು ತೆರೆ ಕಾಣುತ್ತಿದೆ.

 • ಶಿವಣ್ಣಂಗೇ ಪಾಠ ಹೇಳಿಕೊಟ್ಟ ಕೆಂಡಸಂಪಿಗೆ

  tagaru movie image

  ಶಿವರಾಜ್ ಕುಮಾರ್, 118 ಚಿತ್ರಗಳಲ್ಲಿ ನಟಿಸಿರುವ ಸ್ಯಾಂಡಲ್‍ವುಡ್ ಸೂಪರ್‍ಸ್ಟಾರ್. ಮಾನ್ವಿತಾ, ಇನ್ನೂ ಈಗಷ್ಟೇ ಚಿತ್ರರಂಗದಲ್ಲಿ ಕಣ್ಣು ಬಿಡುತ್ತಿರುವ ಪ್ರತಿಭೆ. ಅಂಥಾದ್ದರಲ್ಲಿ ಮಾನ್ವಿತಾ, ಶಿವ ರಾಜ್‍ಕುಮಾರ್‍ಗೆ ಮಾನ್ವಿತಾ ಏನು ಪಾಠ ಹೇಳಿಕೊಟ್ಟಿರಬಹದು..? ಕನ್‍ಫ್ಯೂಸ್ ಆಗಬೇಡಿ. ಶಿವ ರಾಜ್‍ಕುಮಾರ್‍ಗೆ ಮಾನ್ವಿತಾ ಸ್ನ್ಯಾಪ್‍ಶಾಟ್ ಮತ್ತು ಇನ್‍ಸ್ಟಾಗ್ರಾಂ ಬಳಕೆ ಹೇಳಿಕೊಟ್ಟಿದ್ದಾರಂತೆ. ಟಗರು ಚಿತ್ರದಲ್ಲಿ ಶಿವರಾಜ್‍ಕುಮಾರ್ ಜೊತೆ ನಟಿಸಿರುವ ಮಾನ್ವಿತಾ, ಶಿವಣ್ಣ ಅಂಥವನ್ನೆಲ್ಲ ಸಖತ್ ಎಂಜಾಯ್ ಮಾಡುತ್ತಿದ್ದರು ಎಂದಿದ್ದಾರೆ.

  ಇನ್ನು ಶಿವ ರಾಜ್‍ಕುಮಾರ್ ಅವರಿಂದ ಶಿಸ್ತು ಮತ್ತು ಸಮಯಪಾಲನೆ ಕಲಿತೆ ಎಂದಿದ್ದಾರೆ ಮಾನ್ವಿತಾ. ಸಹಕಲಾವಿದರಿಗಾಗಿ ಅವರು ತಮ್ಮ ಶಾಟ್ ಇಲ್ಲದಿದ್ದರೂ ನಟಿಸುತ್ತಿದ್ದರು. ಅಷ್ಟು ದೊಡ್ಡ ಸ್ಟಾರ್‍ಗೆ ಅದು ಅಗತ್ಯವಿಲ್ಲ. ಆದರೆ, ಶಿವಣ್ಣ ಹಾಗಲ್ಲ. ಸಹಕಲಾವಿದರನ್ನು ಗೌರವಿಸಬೇಕು ಎಂಬುದನ್ನು ಶಿವಣ್ಣನವರಿಂದ ಕಲಿಯಬೇಕು. ಅದನ್ನು ನನ್ನ ಇಡೀ ಜೀವನದಲ್ಲಿ ಅಳವಡಿಸಿಕೊಳ್ತೇನೆ ಎಂದು ಹೇಳಿಕೊಂಡಿದ್ದಾರೆ ಮಾನ್ವಿತಾ.

  ಚಿತ್ರದಲ್ಲಿ ನನ್ನ ಪಾತ್ರ ತುಂಬಾ ವಿಭಿನ್ನವಾಗಿದೆ. ಅಭಿನಯಕ್ಕೆ ಚಿತ್ರದಲ್ಲಿ ಬಹಳಷ್ಟು ಅವಕಾಶಗಳಿವೆ. ಚಿತ್ರಜೀವನದ ಆರಂಭದಲ್ಲೇ ಇಂಥಾ ಪಾತ್ರ ಸಿಕ್ಕಿದ್ದು ನನ್ನ ಭಾಗ್ಯ. ಜೊತೆಗೆ ಸೂರಿ ಸರ್ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಚಿತ್ರದ ಬಗ್ಗೆ ನನಗೂ ಕುತೂಹಲವಿದೆ ಎಂದಿದ್ದಾರೆ ಮಾನ್ವಿತಾ. ಈ ಗುರುವಾರದಿಂದ ಟಗರು ಗುಮ್ಮೋಕೆ ಬರ್ತಾ ಇದೆ. 

 • ಶಿವಣ್ಣನ ಜೊತೆ ಕೆಂಡಸಂಪಿಗೆ ಮಾನ್ವಿತಾ ಹುಡುಗಾಟ..ಬಾಡೂಟ

  manvitha's tunthaata in tagaru set

  ಕೆಂಡಸಂಪಿಗೆ ಮಾನ್ವಿತಾ ಟಗರು ಚಿತ್ರದ ನಾಯಕಿಯರಲ್ಲಿ ಒಬ್ಬರು. ಚಿತ್ರದ ಹೀರೋ ಸೀನಿಯರ್ ನಟ ಶಿವರಾಜ್ ಕುಮಾರ್. ಸಾಮಾನ್ಯವಾಗಿ ಶಿವರಾಜ್ ಕುಮಾರ್ ಸೆಟ್‍ನಲ್ಲಿದ್ದರೆ, ಹೊಸ ಹುಡುಗರು ಸ್ವಲ್ಪ ಗಂಭೀರವಾಗಿಯೇ ಇರುತ್ತಾರೆ. ಆದರೆ, ನಟಿ ಮಾನ್ವಿತಾ ಹಾಗಲ್ಲ. ತುಂಟಾಟದ ಹುಡುಗಿ. 

  ಇಡೀ ಚಿತ್ರತಂಡದಲ್ಲಿ ಶಿವಣ್ಣನ ಜೊತೆ ಹುಡುಗಾಟವಾಡುತ್ತಲೇ ಕಾಲ ಕಳೆದಿದ್ದಾರೆ. ಶೂಟಿಂಗ್ ಟೈಮಲ್ಲಿ ಮಧ್ಯೆ ಸ್ವಲ್ಪ ಬಿಡುವು ಸಿಕ್ಕರೂ ಸಾಕು, ಶಿವಣ್ಣನನನ್ನು ಆಟಕ್ಕೆ ಎಳೆದೊಯ್ಯುತ್ತಿದ್ದರಂತೆ. ಶಟಲ್, ಬ್ಯಾಡ್ಮಿಂಟನ್, ಫ್ರಿಸ್ಟೀ ಆಟಗಳನ್ನಾಡುತ್ತಿದ್ದರಂತೆ. ಶಿವರಾಜ್ ಕುಮಾರ್ ಎಷ್ಟೇ ಹಿರಿಯರಾಗಿದ್ದರೂ, ಅವರೊಳಗೊಬ್ಬ ಪುಟ್ಟ ಹುಡುಗನಿದ್ದಾನೆ. ನಮ್ಮಂತಹ ಕಿರಿಯರ ಹುಡುಗಾಟವನ್ನು ತಮಾಷೆಯಾಗಿಯೇ ತೆಗೆದುಕೊಂಡು ಎಂಜಾಯ್ ಮಾಡುತ್ತಾರೆ ಎಂದಿದ್ದಾರೆ ಮಾನ್ವಿತಾ. 

  ಅಷ್ಟೇ ಅಲ್ಲ, ಇಡೀ ಚಿತ್ರತಂಡಕ್ಕೆ ಮಂಗಳೂರು ಸ್ಪೆಷಲ್ ಬಿರಿಯಾನಿಯನ್ನು ಸ್ವತಃ ಮಾಡಿ ಬಡಿಸಿದ್ದಾರೆ. ಚಿಕನ್ ಗೀ ರೋಸ್ಟ್ ಮಾಡಿ ಬಡಿಸಿದ್ದರಂತೆ.

  Related Articles :-

  Tagaru Last Schedule From August 8

  Tagaru Last Schedule From May 22

  Tagaru Making Video On April 24th

  Bhavana Menon Joins The Sets Of Tagaru

  Sri Shivakumara Swamiji in Tagaru

  Bhavana Menon Joins Tagaru

  Manvitha's Tapanguchi For Tagaru

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery