ಅವನೇ ಶ್ರೀಮನ್ನಾರಾಯಣ, ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷೆಯ ಸಿನಿಮಾ. ಇದೊಂದು ಚಿತ್ರಕ್ಕಾಗಿ ಅವರು 3 ವರ್ಷಗಳ ಶ್ರಮವಹಿಸಿದ್ದಾರೆ. ಮಿಕ್ಕೆಲ್ಲ ಚಿತ್ರಗಳನ್ನೂ ಸೈಡಿಗಿಟ್ಟು, ಹಗಲೂ ರಾತ್ರಿ ಈ ಚಿತ್ರಕ್ಕಾಗಿ ನುಡಿದಿದ್ದಾರೆ. ಇಂತಹ ವೇಳೆಯಲ್ಲೇ ಅವರಿಗೆ ರಜನಿಕಾಂತ್ ಚಿತ್ರದ ಆಫರ್ ಸಿಕ್ಕಿದ್ದ ವಿಷಯವೂ ಹೊರಬಿದ್ದಿದೆ.
ರಜನಿಕಾಂತ್ ಚಿತ್ರವೆಂದರೆ, ಅಲ್ಲೊಂದು ಪುಟ್ಟ ಪಾತ್ರವಾದರೂ ಸೈ, ಮಾಡೋಣ ಎನ್ನುವ ಕಲಾವಿದರೇ ಹೆಚ್ಚು. ಆದರೆ, ಪೆಟ್ಟಾ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಅವಕಾಶ ಸಿಕ್ಕರೂ, ಅವನೇ ಶ್ರೀಮನ್ನಾರಾಯಣನಿಂದಾಗಿ ಪೆಟ್ಟಾ ಕೈಬಿಟ್ಟಿದ್ದಾರೆ ರಕ್ಷಿತ್ ಶೆಟ್ಟಿ.
ಪೆಟ್ಟಾ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ರಕ್ಷಿತ್ ಶೆಟ್ಟಿ ಗೆಳೆಯರೂ ಹೌದು. ಕೊನೆಗೆ ರಕ್ಷಿತ್ ಕೈಬಿಟ್ಟ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದರು. ಗೆದ್ದಿದ್ದರು.
ಇದೆಲ್ಲವನ್ನೂ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಈ ತಿಂಗಳ ಕೊನೆಯಲ್ಲಿ ರಿಲೀಸ್ 5 ಭಾಷೆಗಳಲ್ಲಿ ಆಗುತ್ತಿದೆ. ಸಚಿನ್ ನಿರ್ದೇಶನದ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿ.