` avane srimanarayana, - chitraloka.com | Kannada Movie News, Reviews | Image

avane srimanarayana,

  • ಕಿರಿಕ್ ಪಾರ್ಟಿ ರೆಕಾರ್ಡ್ ಮೊದಲ ವಾರಕ್ಕೇ ಮುರಿದ ನಾರಾಯಣ

    avane srimannarayana breaks kirik party record

    ಕಿರಿಕ್ ಪಾರ್ಟಿ, ರಕ್ಷಿತ್ ಶೆಟ್ಟಿ ವೃತ್ತಿ ಜೀವನದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ಆ ಚಿತ್ರ ರಿಲೀಸ್ ಆದ 3 ವರ್ಷಗಳ ನಂತರ ತೆರೆಗೆ ಬಂದ ಅವನೇ ಶ್ರೀಮನ್ನಾರಾಯಣ, ಮೊದಲ ವಾರವೇ ಬಾಕ್ಸಾಫೀಸ್ ದಾಖಲೆ ಮುರಿದಿದೆ. 400 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಅವನೇ ಶ್ರೀಮನ್ನಾರಾಯಣ, ಮೊದಲ ವಾರವೇ ಕಿರಿಕ್‌ ಪಾರ್ಟಿ ಸಿನಿಮಾಗಿಂತ ನಾಲ್ಕು ಪಟ್ಟು ಹೆಚ್ಚು ಗಳಿಸಿದೆ ಎಂದು ಸ್ವತಃ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಥಿಯೇಟರ್ ವಿಸಿಟ್ ನಂತರ ಮಾತನಾಡಿದ ರಕ್ಷಿತ್ ಶೆಟ್ಟಿ, ಈ ಚಿತ್ರ ಮಾಸ್ ಪ್ರೇಕ್ಷಕರ ಜತೆಗೆ, ಕೌಟುಂಬಿಕ ಪ್ರೇಕ್ಷಕರನ್ನೂ ಸೆಳೆದಿದೆ ಎಂದು ತಿಳಿಸಿದ್ದಾರೆ. ವಿಜಯಯಾತ್ರೆ ನಡೆಸುತ್ತಿರುವ ರಕ್ಷಿತ್ ಶೆಟ್ಟಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ನಾವು ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಸಿಗಲಿಲ್ಲ ಎಂದು ಪ್ರಾಮಾಣಿಕವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ, ವಿಮರ್ಶೆ ನೋಡಿ ಹಾಗೂ ಸಿನಿಮಾ ನೋಡಿದವರ ಬಾಯಿ ಮಾತಿನ ಪ್ರಚಾರದಿಂದಾಗಿ ಸಿನಿಮಾಗೆ ಜನ ಬರುವ ಸಂಖ್ಯೆ ಹೆಚ್ಚುತ್ತಿದೆ ಎಂಬ ಖುಷಿಯನ್ನೂ ಹಂಚಿಕೊಂಡಿದ್ದಾರೆ.

    ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿ. ಸಚಿನ್ ರವಿ ನಿರ್ದೇಶಕ. ಒಟ್ಟಾರೆ ಇಡೀ ಚಿತ್ರತಂಡ ಸಂಭ್ರಮ ಯಾತ್ರೆಯಲ್ಲಿದೆ.

  • ಗ್ಲೋಬಲ್ ವಿಮರ್ಶಕರ ಮನಗೆದ್ದ ಶ್ರೀಮನ್ನಾರಾಯಣ

    avavane srimananrayana attracts global audinece

    ಅವನೇ ಶ್ರೀಮನ್ನಾರಾಯಣ ಟ್ರೇಲರ್ ಕೇವಲ ಬರೀ ಯೂಟ್ಯೂಬ್ ಹಿಟ್ಸ್ ಗಿಟ್ಟಿಸಿಲ್ಲ. ಅಭಿಮಾನಿಗಳ ಹೃದಯ ತಣಿಸಿಲ್ಲ. ಅದೆಲ್ಲವನ್ನೂ ಮೀರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ ಅವನೇ ಶ್ರೀಮನ್ನಾರಾಯಣ.

    ಎಎಸ್‌ಎನ್ ಟ್ರೇಲರ್‌ನಲ್ಲಿ ರಕ್ಷಿತ್ ಶೆಟ್ಟಿ ಡೈಲಾಗ್, ನೆರಳು ಬೆಳಕಿನ ಆಟದ ಜೊತೆಗೆ ಇಡೀ ಟ್ರೇಲರ್‌ನ ಬಿಜಿಎಂ ಅರ್ಥಾತ್ ಹಿನ್ನೆಲೆ ಸಂಗೀತ ಮೆಚ್ಚುಗೆ ಪಡೆದಿದೆ. ಅಜನೀಶ್ ಲೋಕನಾಥ್ ಮತ್ತೊಮ್ಮೆ ತಮ್ಮ ಖದರು ತೋರಿಸಿದ್ದಾರೆ. ಎಡಿಟಿಂಗ್ ಕ್ಲಾಸ್ ಎನ್ನುತ್ತಿದ್ದಾರೆ ವಿಮರ್ಶಕರು. ಹಾಹಾಹಾ.. ಚಿತ್ರದ ಟ್ರೇಲರ್‌ಗೆ ಇಷ್ಟೆಲ್ಲ ಮೆಚ್ಚುಗೆ ಕೊಡುತ್ತಿರುವುದು ಗ್ಲೋಬಲ್ ವಿಮರ್ಶಕರು.

    ಯೂಟ್ಯೂಬ್‌ನಲ್ಲಿ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾದ ಕಾರಣ, ಸಹಜವಾಗಿಯೇ ಎಎಸ್‌ಎನ್ ಟ್ರೇಲರ್ ಗ್ಲೋಬಲ್ ವಿಮರ್ಶಕರ ಕಣ್ಣಿಗೆ ಬಿದ್ದಿದೆ. ಈ ವಿದೇಶಿ ಚಿತ್ರಗಳ ವಿಮರ್ಶಕರು ಅವನೇ ಶ್ರೀಮನ್ನಾರಾಯಣನ ಅವತಾರವನ್ನು ನೋಡಿ ಮೆಚ್ಚಿದ್ದಾರೆ. ಚಿತ್ರದ ಛಾಯಾಗ್ರಹಣ, ಮ್ಯೂಸಿಕ್, ಎಡಿಟಿಂಗ್..  ಎಲ್ಲದರ ಬಗ್ಗೆಯೂ ವಿಮರ್ಶೆ ಮಾಡಿದ್ದಾರೆ. ಎಎಸ್‌ಎನ್‌ಗೆ ಸಿಗುತ್ತಿರುವ ಈ ಪ್ರತಿಕ್ರಿಯೆ ನೋಡಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಹಜವಾಗಿಯೇ ಖುಷಿಯಾಗಿದ್ದಾರೆ.

  • ಡಿ. 27ಕ್ಕೆ ಅವನೇ ಶ್ರೀಮನ್ನಾರಾಯಣ ಪ್ರತ್ಯಕ್ಷ

    avane srimnarayana released date fixed

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. 2016ರ ಡಿಸೆಂಬರ್ 30ರಂದು ರಿಲೀಸ್ ಆಗಿದ್ದ ಕಿರಿಕ್ ಪಾರ್ಟಿ ಚಿತ್ರವೇ ಕೊನೆ. ಅದಾದ ಮೇಲೆ ರಕ್ಷಿತ್ ಶೆಟ್ಟಿ ಅಭಿನಯದ ಬೇರೆ ಸಿನಿಮಾ ತೆರೆ ಕಂಡಿಲ್ಲ. ಪಡ್ಡೆಹುಲಿಯಲ್ಲಿ ಇದ್ದರಾದರೂ ಅದು ಗೆಸ್ಟ್ ರೋಲ್ ಆಗಿತ್ತು. ಈಗ ಬರೋಬ್ಬರಿ ಎರಡೂವರೆ ವರ್ಷಗಳ ನಂತರ ಬರುತ್ತಿದ್ದಾರೆ. ಅಫ್‍ಕೋರ್ಸ್.. ರಿಲೀಸ್ ಹೊತ್ತಿಗೆ ಸರಿಯಾಗಿ 3 ವರ್ಷವಾಗುತ್ತೆ.

    ಅವನೇ ಶ್ರೀಮನ್ನಾರಾಯಣ ಸಿನಿಮಾ ಕನ್ನಡ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರಾಗಿರುವ ಚಿತ್ರಕ್ಕೆ ಸಚಿನ್ ರವಿ ನಿರ್ದೇಶಕ.

  • ತೆಲುಗರ ಊರಲ್ಲಿ ಅವನೇ ಶ್ರೀಮನ್ನಾರಾಯಣನ ಕ್ರೇಜ್

    avane srimannarayana gets massive appreciation telugu speaking states

    ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ನಿರೀಕ್ಷೆಯಂತೆಯೇ ಕುತೂಹಲಿ ಪ್ರೇಕ್ಷಕರ ಬಹುಪರಾಕ್ ಸಿಕ್ಕಿದೆ. ಟ್ರೇಲರ್ ನೋಡಿ ಮೆಚ್ಚಿದವರ ಸಂಖ್ಯೆಯೇ 10 ಮಿಲಿಯನ್‌ಗೂ ಹೆಚ್ಚು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾ, ಪ್ರಚಾರವನ್ನು ಬೇರೆಯದೇ ರೀತಿಯಲ್ಲಿ ಮಾಡುತ್ತಿದೆ.

    ಆಂಧ್ರ ಪ್ರದೇಶ, ತೆಲಂಗಾಣದ ಪ್ರಮುಖ ಸೆಂಟರುಗಳಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೇಲರ್, ಸಿನಿಮಾದ ಹೈಲೈಟ್ಸ್ ತೋರಿಸುವ ವಿಡಿಯೋಗಳ ಪ್ರದರ್ಶನ ನಡೆಯುತ್ತಿದೆ. ಜನರು ಮುಗಿಬಿದ್ದು ನೋಡುತ್ತಿರುವುದೇ ಚಿತ್ರಕ್ಕೆ ಸಿಗುತ್ತಿರುವ ಮೊದಲ ಗೆಲುವು.

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ನಟಿಸಿರುವ ಚಿತ್ರಕ್ಕೆ ಸಚಿನ್ ನಿರ್ದೇಶಕ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ.

  • ನ.೨೮ಕ್ಕೆ ನಾರಾಯಣ ಪ್ರತ್ಯಕ್ಷ

    avane srimannarayana trailer on nov 28th

    ಅವನೇ ಶ್ರೀಮನ್ನಾರಾಯಣ. ಕನ್ನಡದ ಬಹು ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ. ಕೆಜಿಎಫ್, ಪೈಲ್ವಾನ್ ನಂತರ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ. ಡಿಸೆಂಬರ್ ೨೭ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದ ಟ್ರೇಲರ್, ನ.೨೮ಕ್ಕೆ ಹೊರಬರಲಿದೆ.

    ಚಿತ್ರದ ಪೋಸ್ಟರ್ ಹೊರಬಂದಿದ್ದು, ಚಿತ್ರದ ಕಥೆಯ ಬಗ್ಗೆ ಕುತೂಹಲ ಕೆರಳಿಸಿದೆ. ೮೫ ವರ್ಷದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ಚಿತ್ರಗಳು ಪ್ಯಾನ್ ಇಂಡಿಯಾ ಕದ ತಟ್ಟಿ ಗೆದ್ದು ಬಂದಿವೆ. ನಮಗೂ ಇದು ಹೊಸ ಸವಾಲು ಎಂದು ಸವಾಲನ್ನು ಸವಾಲಾಗಿಯೇ ಸ್ವೀಕರಿಸಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರದಲ್ಲಿರೋ ಚಿತ್ರ ಕನ್ನಡದಲ್ಲಷ್ಟೇ ಅಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ.

  • ನಾರಾಯಣ 17 ನಿಮಿಷ ಟ್ರಿಮ್

    avane srimanarayana trimmed for 17 minutes

    ಅವನೇ ಶ್ರೀಮನ್ನಾರಾಯಣ ಸಿನಿಮಾ ಬಂಪರ್ ಸಕ್ಸಸ್ ಕಂಡಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ಸಚಿನ್ ರವಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಖದಲ್ಲೀಗ ಗೆಲುವಿನ ನಗೆ. 3 ವರ್ಷಗಳ ಶ್ರಮ ಸಾರ್ಥಕ ಕಂಡ ಭಾವ.

    ಹೀಗಿದ್ದರೂ ಸಿನಿಮಾದ ಲೆಂಗ್ತ್ನ್ನು ಈಗ ಕಡಿಮೆ ಮಾಡಿದ್ದಾರೆ. ಚಿತ್ರದ ಒಟ್ಟಾರೆ ಅವಧಿ 3 ಗಂಟೆ 6 ನಿಮಿಷ ಇತ್ತು. 3 ವರ್ಷದಲ್ಲಿ ಸಿನಿಮಾವನ್ನು ಹಲವು ಬಾರಿ ನೋಡಿದ್ದಕ್ಕೋ ಏನೋ.. ನಮಗೆ ಅದು ಕೊರತೆ ಎಂದು ಅನ್ನಿಸಿರಲಿಲ್ಲ. ಆದರೆ, ಸಿನಿಮಾ ನೋಡಿದವರು ಹಾಗೂ ಮೆಚ್ಚಿಕೊಂಡವರೇ ಇದನ್ನು ಹೇಳಿದಾಗ ಚಿತ್ರದ ಅವಧಿಯಲ್ಲಿ 17 ನಿಮಿಷ ಕಡಿಮೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ನಿರ್ದೇಶಕ ಸಚಿನ್ ರವಿ.

    ಅವನೇ ಶ್ರೀಮನ್ನಾರಾಯಣ, ಹಿಂದಿಯಲ್ಲೂ ರಿಲೀಸ್ ಆಗುತ್ತಿದ್ದು, ಕರ್ನಾಟಕದ ವಿಮರ್ಶೆ ಆಧರಿಸಿಯೇ ಟ್ರಿಮ್ ಮಾಡಿ ಹಿಂದಿಯಲ್ಲಿ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಚಾರ್ಲಿ 777 ಚಿತ್ರದಲ್ಲಿ ನಟಿಸುತ್ತಿದ್ದು, ಪುಣ್ಯಕೋಟಿ ಚಿತ್ರದ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ.

     

  • ನಾರಾಯಣನ ಆ 5 ನಂಬರ್ ಹುಡುಕಿದ್ರೆ.. 2.5 ಲಕ್ಷ ಧನಲಕ್ಷಿö್ಮ ಸಿಗ್ತಾಳೆ..!

    watch avane srimamnaryana and win lakshmi

    ನಂಬರ್ ಹುಡುಕಿ.. 2.5 ಲಕ್ಷ ಬಹುಮಾನ ಗೆಲ್ಲಿ. ಇದು ಅವನೇ ಶ್ರೀಮನ್ನಾರಾಯಣ ಕೊಡುತ್ತಿರುವ ವರ. ಅದಕ್ಕೆ ನೀವು ಅನ್‌ಲಾಕ್ ದಿ ಟ್ರೆಷರ್ ಚಾಲೆಂಜ್ ಸ್ವೀಕರಿಸಬೇಕು.

    ಈಗಾಗಲೇ ರಿಲೀಸ್ ಆಗಿರುವ ಎಎಸ್‌ಎನ್ ಟ್ರೇಲರಿನಲ್ಲಿ 5 ನಂಬರುಗಳಿವೆ. ಅವು ಎಲ್ಲೆಲ್ಲಿಯೋ ಇವೆ. ಅವುಗಳನ್ನು ಹುಡುಕೋದು ನಿಮಗಿರೋ ಚಾಲೆಂಜ್.

    ಪುಷ್ಕರ್ ವೆಬ್‌ಸೈಟ್‌ಗೆ ಹೋಗಿ. ಅಲ್ಲೊಂದು ಲಾಕ್ ಆಗಿರುವ ಟ್ರೇಲರ್ ಸಿಗುತ್ತೆ. 5 ಸಿಂಗಲ್ ನಂಬರ್ ಡಿಜಿಟ್ ಹಾಕುವ ಜಾಗವೂ ಇದೆ. ನೀವು ಅಲ್ಲಿ ಆ 5 ನಂಬರ್ ಹಾಕಿದರೆ, ಟ್ರೇಲರ್ ಓಪನ್ ಆಗುತ್ತೆ. 2.5 ಲಕ್ಷ ಬಹುಮಾನವೂ ಸಿಗುತ್ತೆ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ನಟಿಸಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ. ಅತೀ ಹೆಚ್ಚು ಜನ ವೀಕ್ಷಿಸಿರುವ ಟ್ರೇಲರ್ ಆಗಿ ದಾಖಲೆ ಬರೆದಿರುವ ಅವನೇ ಶ್ರೀಮನ್ನಾರಾಯಣ ಡಿ.27ರಂದು ರಿಲೀಸ್ ಆಗಲಿದೆ.

  • ನಾರಾಯಣನ ದಿಗ್ವಿಜಯ ದಂಡಯಾತ್ರೆ

    avane srimnanarayna vijaya yatre

    ಅವನೇ ಶ್ರೀಮನ್ನಾರಾಯಣ ಚಿತ್ರದ ಯಶಸ್ಸು, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸುವತ್ತ ಹೊರಟಿದೆ. ಸಹಜವಾಗಿಯೇ ಚಿತ್ರತಂಡ ಸಂಭ್ರಮದಲ್ಲಿದೆ. ಹೀಗಾಗಿ ಇಡೀ ಚಿತ್ರತಂಡ ಧನ್ಯವಾದ ದಂಡಯಾತ್ರೆ ಹೊರಟಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಚಿನ್ ರವಿ ಇಡೀ ಕರ್ನಾಟಕವನ್ನು ಸುತ್ತಲು ಹೊರಟಿದ್ದಾರೆ.

    ಈಗಾಗಲೇ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಯಾತ್ರೆ ಮುಗಿಸಿದ್ದಾರೆ.

    ಇಂದು ಅಂದರೆ ಜನವರಿ 6ರಂದು ಮಂಗಳೂರು, ಉಡುಪಿ ಹಾಗೂ ನಾಳೆ ಅಂದರೆ ಜನವರಿ 7ರಂದು ಮೈಸೂರು, ಮಂಡ್ಯದಲ್ಲಿ ಅಭಿಮಾನಿಗಳ ಜೊತೆ ಚಿತ್ರಮಂದಿರಕ್ಕೇ ಬರಲಿದ್ದಾರೆ.

  • ನಾರಾಯಣನ ಲಕ್ಷ್ಮಿ    Birthdayಗೆ  ಲಕ್ಷ್ಮಿ  ಕೊಟ್ಟರಮ್ಮ..!

    avane srimnarayana wshes lakshmi on her borthday

    ಅವನೇ ಶ್ರೀಮನ್ನಾರಾಯಣನ ಲಕ್ಷ್ಮೀದೇವಿ ಶಾನ್ವಿ ಶ್ರೀವಾಸ್ತವ್. ಅವರಿಗೆ ಲಕ್ಷ್ಮಿಯನ್ನೇ ಉಡುಗೊರೆಯಾಗಿ ಕೊಟ್ಟಿದ್ದಾರೆ ಅವನೇ ಶ್ರೀಮನ್ನಾರಾಯಣ. ಚಿತ್ರದ ನಾಯಕಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದೆ ಎಎಸ್ಎನ್ ಟೀಂ.

    ಲಕ್ಷ್ಮಿಗೆ ನಾರಾಯಣ ಪ್ರೀತಿಯಿಂದ ಹಾರೈಸಿದ್ದಾರೆ. ಭಾನುವಾರ ಶಾನ್ವಿ ಹುಟ್ಟುಹಬ್ಬವಿತ್ತು. ನಾರಾಯಣ ರಕ್ಷಿತ್‌ ಶೆಟ್ಟಿ, ‘ಸದಾ ನಗುವ ಕ್ಯೂಟ್‌ ಕಣ್ಣುಗಳಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತ ಈ ದೇವತೆಯನ್ನು ನೋಡುತ್ತಿದ್ದರೆ ನನಗೆ ಯಾವಾಗಲೂ ಆಶ್ರ‍್ಯ ಆಗುತ್ತೆ. ಮುಂದೊಂದು ದಿನ ಈ ದೇವತೆ ಎತ್ತರಕ್ಕೆ ಹಾರಬಹುದು ಅಂತ ಯೋಚಿಸುತ್ತೇನೆ. ಸುಂದರ ಆತ್ಮವಿರುವ ಚೇತನ ನೀವಾಗಿದ್ದು, ಎಂದೆಂದೂ ನಿಮ್ಮ ಜೀವನ ಹೀಗೇ ಇರಲಿ ಎಂದು ಹಾರೈಸುತ್ತೇನೆ’ ಎಂದು ಹಾರೈಸಿದ್ದಾರೆ. ಅಲ್ಲದೆ ಕಷ್ಟ ಸುಖದ ದಿನಗಳಲ್ಲಿ ಜೊತೆಯಾದ ಗೆಳತಿ ನೀವು. ಯು ಆರ್ ಮೈ ಬೆಸ್ಟ್ ಫ್ರೆಂಡ್ ಎಂದಿದ್ದಾರೆ ರಕ್ಷಿತ್.

    ಶಾನ್ವಿ ಹುಟ್ಟುಹಬ್ಬಕ್ಕೆ ಅವನೇ ಶ್ರೀಮನ್ನಾರಾಯಣ ತಂಡ, ಧನಲಕ್ಷ್ಮೀ ಅವತಾರದ ಲಕ್ಷ್ಮೀ ಪೋಸ್ಟರ್ ರಿಲೀಸ್ ಮಾಡಿತ್ತು. ಸಿನಿಮಾ ತಂಡ ಮಧ್ಯರಾತ್ರಿಯೇ ಪೋಸ್ಟರ್‌ ರಿಲೀಸ್‌ ಮಾಡಿದೆ. ಇಂಥದ್ದೊಂದು ಸರ್‌ಪ್ರೈಸ್‌ ಇದೆ ಎಂದು ನನಗೆ ಗೊತ್ತಿರಲಿಲ್ಲ. ಈ ಬಾರಿಯ ಹುಟ್ಟುಹಬ್ಬದಲ್ಲಿ ಎಕ್ಸೈಟ್‌ ಮೆಂಟ್‌ ಇದೆ ಎಂದಿದ್ದಾರೆ ಶಾನ್ವಿ. ಎಂದಿನಂತೆ ಈ ಬಾರಿಯೂ ಮನೆಯಲ್ಲಿ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಶಾನ್ವಿ.

  • ನಾರಾಯಣನನ್ನು ಪ್ರಚಾರ ಮಾಡಿದ್ದು ರಕ್ಷಿತ್ ಅಲ್ಲ.. ಪುಷ್ಕರ್ ಅಲ್ಲ.. ಮತ್ಯಾರು..?

    audience promotoed avane srimnarayana more than the movie team

    ಅವನೇ ಶ್ರೀಮನ್ನಾರಾಯಣ ಭರ್ಜರಿ ರಿಲೀಸ್ ಕಂಡಿದೆ. ಒಂದು ಸಾವಿರಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಏಕಕಾಲಕ್ಕೆ ರಿಲೀಸ್ ಎಂದರೆ ಸುಮ್ಮನೆ ಮಾತಲ್ಲ. ದೊಡ್ಡ ಚಿತ್ರವೊಂದನ್ನು ಪ್ರಚಾರವಿಲ್ಲದೆ ಬಿಡುಗಡೆ ಮಾಡಬಾರದು ಎಂಬ ಕಾರಣಕ್ಕೆ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಪ್ರಮೋಷನ್ ಮಾಡಲಾಗಿದೆ.

    ಆದರೆ, ವಿಶೇಷವೇನು ಗೊತ್ತೇ.. ಇಷ್ಟೆಲ್ಲ ಪ್ರಮೋಷನ್ನುಗಳ ನಡುವೆ ಅತಿ ದೊಡ್ಡ ಪ್ರಚಾರ ಮಾಡಿದ್ದು ಹೀರೋ ರಕ್ಷಿತ್ ಶೆಟ್ಟಿ ಅಲ್ಲ, ಹೀರೋಯಿನ್ ಶಾನ್ವಿ ಶ್ರೀವಾತ್ಸವ್ ಅಲ್ಲ, ಡೈರೆಕ್ಟರ್ ಸಚಿನ್ ಅಲ್ಲ.. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೂ ಅಲ್ಲ. ಹಾಗಾದರೆ ಯಾರು..?

    ಕನ್ನಡಿಗರು. ಹೌದು, ಸಿನಿಮಾ ರಿಲೀಸ್ ಆಗುವ ಮುಂಚೆ ಬಂದ ಟ್ರೇಲರ್ ಹಿಟ್ ಮಾಡಿದ್ದ ಪ್ರೇಕ್ಷಕರು, ಹ್ಯಾಂಡ್ಸಪ್ ಚಾಲೆಂಜ್‍ನ್ನಂತೂ ಮನಸಾರೆ ಎಂಜಾಯ್ ಮಾಡಿದರು. ಚಿತ್ರರಂಗದ ನಟ ನಟಿಯರೇ ಚಾಲೆಂಜ್ ಸ್ವೀಕರಿಸಿ, ತಾವೇ ಹಾಡಿ ಕುಣಿದು ಪ್ರಚಾರ ಮಾಡಿದರು. ಈಗ.. ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರೇ.. ವ್ಹಾವ್.. ಈ ಸಿನಿಮಾ ಹಿಟ್ ಆಗಲೇಬೇಕು ಎಂದು ಸ್ವತಃ ಪ್ರಚಾರಕ್ಕೆ ನಿಂತುಬಿಟ್ಟಿದ್ದಾರೆ. ಅವನೇ ಶ್ರೀಮನ್ನಾರಾಯಣನ ಶಕ್ತಿಯೇ ಅವರು.. ಪ್ರೇಕ್ಷಕರು.

  • ನಾರಾಯಣನಿಗೆ `ವಿಜಯಲಕ್ಷ್ಮಿ' ಸಿಕ್ಕೇಬಿಟ್ಟಳು..!

    avane srimnanarayana impresses audience

    ಅವನೇ ಶ್ರೀಮನ್ನಾರಾಯಣ ಚಿತ್ರದ ಬಜೆಟ್ ನೋಡಿದರೆ, ಪುಷ್ಕರ್ ಮಲ್ಲಿಕಾರ್ಜುನಯ್ಯನವರ ಒಳಗಿದ್ದ ಧೈರ್ಯಲಕ್ಷ್ಮಿ ನೆನಪಾಗುತ್ತಾಳೆ. ಸುರಿದ ಹಣ ನೋಡಿದರೆ, ಆಹಾ.. ಧನಲಕ್ಷ್ಮಿಯೇ ಕಣ್ಣ ಮುಂದೆ ಬರುತ್ತಾಳೆ. ಒಟ್ಟಿನಲ್ಲಿ ನವಲಕ್ಷ್ಮಿಯರ ಒಕ್ಕೂಟವೇ ಆಗಿದ್ದ ಅವನೇ ಶ್ರೀಮನ್ನಾರಾಯಣನಿಗೆ ಪ್ರೇಕ್ಷಕರ ಮೆಚ್ಚುಗೆ ಲಕ್ಷ್ಮಿ ಸಿಕ್ಕಿದ್ದಾಳೆ.

    ನಾರಾಯಣನಿಗೆ ಸಿನಿಮಾದಲ್ಲಿ ಲಕ್ಷ್ಮಿ ಸಿಗುತ್ತಾಳಾ..? ನಾವ್ ಹೇಳಲ್ಲ. ಥಿಯೇಟರಿನಲ್ಲಿ ನೀವೇ ನೋಡಿ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಜೋಡಿಯ, ಸಚಿನ್ ರವಿ ನಿರ್ದೇಶನದ ಚಿತ್ರಕ್ಕೀಗ ವಿಜಯಲಕ್ಷ್ಮಿ ಸಿಕ್ಕಿದ್ದಾಳೆ. ಹೀಗಾಗಿ.. ಪುಷ್ಕರ್ ಮಲ್ಲಿಕಾರ್ಜುನಯ್ಯ ಧನಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಒಳಗಾಗಿದ್ದಾರೆ.

  • ನಿನ್ನೆ ನಿನ್ನೆಗೇ.. ನಾಳೆ ನಾಳೆಗೆ.. - ರಕ್ಷಿತ್ ಶೆಟ್ಟಿ

    rakshit shetty's gentleman reaction towards one question

    ರಕ್ಷಿತ್ ಶೆಟ್ಟಿ ಈಗ ಅವನೇ ಶ್ರೀಮನ್ನಾರಾಯಣದ ಪ್ರಮೋಷನ್ ಕೆಲಸದಲ್ಲಿ ಫುಲ್ ಬ್ಯುಸಿ. ಆದರೆ, ಈ ಸಿನಿಮಾ ಪ್ರಚಾರಕ್ಕೆ ಹೋದಾಗಲೆಲ್ಲ ಅವರಿಗೆ ಎದುರಾಗುತ್ತಿರುವ ಒಂದು ಕಾಮನ್ ಪ್ರಶ್ನೆ ಅವರ ರಿಲೇಷನ್‌ಶಿಪ್‌ನದ್ದು. ಆದರೆ, ಅವರು ಅದನ್ನು ಅದೆಷ್ಟು ಚೆನ್ನಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆಂದರೆ, ಕೇಳುವವರೇ ಪ್ರಶ್ನೆ ಡ್ರಾಪ್ ಮಾಡಬೇಕು ಎನಿಸುವಷ್ಟು.

    `ನಾನು ಭೂತಕಾಲವನ್ನು ಜಡ್ಜ್ ಮಾಡೋಕೆ ಹೋಗಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬರಲ್ಲ ಒಬ್ಬರು ಬರ್ತಾರೆ. ಹೋಗ್ತಾರೆ. ಇದು ಕೇವಲ ರೊಮ್ಯಾಂಟಿಕ್ ರಿಲೇಷನ್‌ಶಿಪ್ ಅಷ್ಟೇ ಅಲ್ಲ, ಸ್ನೇಹಿತರು, ಕೆಲಸದ ವಿಚಾರದಲ್ಲೂ ಅಷ್ಟೆ. ಬರುವವರು ಬರಬಹುದು. ಹೋಗುವವರು ಹೋಗಬಹುದು. ಯಾರನ್ನೂ ನಾನು ತಡೆಯಲ್ಲ. ಜೊತೆಗೆ ಬಂದ ಪ್ರತಿಯೊಬ್ಬರೂ ಪಾಠ ಕಲಿಸ್ತಾರೆ. ಕಲಿಯುತ್ತಿರಬೇಕು, ಅಷ್ಟೆ' ಎಂದಿದ್ದಾರೆ ರಕ್ಷಿತ್.

    ಸಿಂಪಲ್ಲಾಗ್ ಹೇಳ್ಬೇಕಂದ್ರೆ, ಸಿಂಪಲ್ ಸ್ಟಾರ್ ಅದೆಲ್ಲವನ್ನೂ ಪಕ್ಕಕ್ಕಿಟ್ಟು ತಮ್ಮ ಕನಸಿನ ಚಿತ್ರ ಅವನೇ ಶ್ರೀಮನ್ನಾರಾಯಣವನ್ನಷ್ಟೆ ಧ್ಯಾನಿಸುತ್ತಿದ್ದಾರೆ. ಸಚಿನ್ ನಿರ್ದೇಶನದ ಚಿತ್ರದಲ್ಲಿ ರಕ್ಷಿತ್‌ಗೆ ಶಾನ್ವಿ ಹೀರೋಯಿನ್. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಡಿಸೆಂಬರ್ ಕೊನೆಯಲ್ಲಿ ರಿಲೀಸ್ ಆಗುತ್ತಿದೆ.

  • ಪಂಚಭಾಷಾ ಸಿನಿಮಾ ಅವನೇ ಶ್ರೀಮನ್ನಾರಾಯಣ

    after kgf avane srimananrayana to release in 5 languages

    ರಕ್ಷಿತ್ ಶೆಟ್ಟಿ ಸಿನಿಮಾ ಬಂದು ಎರಡೂವರೆ ವರ್ಷವಾಯ್ತು. ಇನ್ನೂ 3 ತಿಂಗಳು ಕಾಯಬೇಕು. ಆಗ ಬರ ನೀಗಲಿದೆ. ಅವನೇ ಶ್ರೀಮನ್ನಾರಾಯಣ ಆಗಸ್ಟ್‍ನಲ್ಲಿ ತೆರೆಗೆ ಬರ್ತಾನೆ. ಒಂದಲ್ಲ.. ಎರಡಲ್ಲ.. ಐದು ಭಾಷೆಗಳಲ್ಲಿ ಮಾತನಾಡ್ತಾನೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮಾತನಾಡಲಿದ್ದಾನೆ ಶ್ರೀಮನ್ನಾರಾಯಣ.

    ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ನಿರ್ಮಾಣದ ಚಿತ್ರಕ್ಕೆ ಯುವ ನಿರ್ದೇಶಕ ಸಚಿನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ವೇತಾ ಶ್ರೀವಾಸ್ತವ್ ಹೀರೋಯಿನ್. 9 ಸೆಟ್ಟುಗಳಲ್ಲಿ 200 ದಿನ ಶೂಟಿಂಗ್ ಮಾಡಿರುವ ಸಿನಿಮಾ ಅವನೇ ಶ್ರೀಮನ್ನಾರಾಯಣ.

    ಆಗಸ್ಟ್‍ನಲ್ಲಿ ಯಾವಾಗ ಅನ್ನೋದು ಫೈನಲ್ ಆಗಿಲ್ಲ. ಒಬ್ಬ ನಟನಾಗಿ ನನಗೂ ಕುತೂಹಲವಿದೆ ಎಂದಿರುವ ರಕ್ಷಿತ್ ಶೆಟ್ಟಿ, ಹಿಂದಿಯಲ್ಲಿಯೂ ಅವರೇ ಡಬ್ ಮಾಡಿದ್ದಾರಂತೆ. 

  • ಬಾಕ್ಸಾಫೀಸಿನಲ್ಲಿ ಅವನೇ ಶ್ರೀಮನ್ನಾರಾಯಣ ಕಲೆಕ್ಷನ್ ಎಷ್ಟು..?

    avane srimnananrayana first day collection report

    ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆಗುವವರೆಗೂ ಅದೇನೇ ಕಾನ್ಫಿಡೆನ್ಸ್ ಇದ್ದರೂ, ಸ್ವಲ್ಪ ಟೆನ್ಷನ್ನಿನಲ್ಲಿರುವಂತೆ ಕಾಣುತ್ತಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ಫುಲ್ ಹ್ಯಾಪಿ. ನಾರಾಯಣನ ಬಗ್ಗೆ ವಿಮರ್ಶಕರು, ಪ್ರೇಕ್ಷಕರು ಹೊಗಳಿರುವುದಷ್ಟೇ ಅಲ್ಲ, ಸಿನಿಮಾದ ಬಾಕ್ಸಾಫೀಸ್ ಖಜಾನೆಯೂ ತುಂಬಿದೆ. ನಾರಾಯಣನಿಗೆ ಧನಲಕ್ಷ್ಮಿ ಒಲಿದಿದ್ದಾಳೆ.

    ಮೂಲಗಳ ಪ್ರಕಾರ ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಚಿತ್ರದ ಮೊದಲ ದಿನದ ಗಳಿಕೆ 12ರಿಂದ 15 ಕೋಟಿ. ಸಿಂಗಲ್ ಸ್ಕ್ರೀನ್‍ಗಳಿಗಿಂತ ಮಲ್ಟಿಪ್ಲೆಕ್ಸುಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಿಲೀಸ್ ಆದ ಎಲ್ಲ ಕಡೆಗಳಲ್ಲೂ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.

    ನಿರ್ಮಾಪಕರಿಗೆ ಇನ್ನೂ ಖುಷಿಯ ವಿಷಯವೆಂದರೆ, ಇದು ಕ್ರಿಸ್‍ಮಸ್ ಟೈಂ. ರಜೆ ಮುಗಿದಿಲ್ಲ. ಹೀಗಾಗಿ ಒನ್ಸ್ ಎಗೇಯ್ನ್ ರಕ್ಷಿತ್-ಪುಷ್ಕರ್ ಜೋಡಿಗೆ ಡಿಸೆಂಬರ್ ಲಕ್ಕಿ ಎನಿಸಿಬಿಟ್ಟಿದೆ.

     

  • ಬುಕ್ಕಿಂಗ್ ಶುರುವಾಯ್ತಾ..? ಹೌದು ಶ್ರೀಮನ್ನಾರಾಯಣ

    avane srimmnarayana booking starts

    ರಕ್ಷಿತ್‌ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗೋಕೆ ಇನ್ನೇನು ಕೆಲವೇ ದಿನ. ಚಿತ್ರದ ಟಿಕೆಟ್‌ ಆನ್‌ಲೈನ್‌ ಬುಕ್ಕಿಂಗ್‌ ಶುರುವಾಗಿದೆ. ಮೂರು ದಿನಗಳ ಮೊದಲು ಆನ್‌ಲೈನ್‌ ಬುಕ್ಕಿಂಗ್‌ ಶುರುವಾಗುವುದು ಕಾಮನ್. ಆದರೆ ಅವನೇ ಶ್ರೀಮನ್ನಾರಾಯಣನ ಮೇಲೆ ಪ್ರೇಕ್ಷಕರ ಭಕ್ತಿ ಹೆಚ್ಚಾಗಿರೋ ಕಾರಣ,  ಒಂದು ವಾರ ಮುಂಚಿತವಾಗಿಯೇ ಆರಂಭವಾಗಿದೆ. ಬೆಂಗಳೂರಿನ ಊರ್ವಶಿ ಹಾಗೂ ಕಾವೇರಿ ಚಿತ್ರಮಂದಿರಗಳಲ್ಲಿ ಈಗಾಗಲೇ ಮೊದಲ ದಿನದ ಎಲ್ಲಾ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ.

    ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರ, ಕನ್ನಡದಲ್ಲಿ 27ರಂದು ಬಿಡುಗಡೆಯಾಗುತ್ತಿದೆ. ತೆಲುಗಿನಲ್ಲಿ ಜನವರಿ 1, ತಮಿಳು ಹಾಗೂ ಮಲಯಾಳದಲ್ಲಿ ಜನವರಿ 3 ಹಾಗೂ ಹಿಂದಿಯಲ್ಲಿ ಜ.17ರಂದು ರಿಲೀಸ್ ಆಗುತ್ತಿದೆ.

    ಚಿತ್ರದ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದರೆ, ಹ್ಯಾಂಡ್ಸಪ್‌  ಹಾಡು ಚಿಕ್ಕ ಚಿಕ್ಕ ಮಕ್ಕಳಿಗೆ ಇಷ್ಟವಾಗಿಬಿಟ್ಟಿದೆ.

    ಸಚಿನ್‌ ರವಿ ನಿರ್ದೇಶನದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ಚಾಲಾಕಿ ನಾರಾಯಣನಿಗಾಗಿ 2 ಸಾವಿರ ದೃಶ್ಯಗಳಲ್ಲಿ ಗ್ರಾಫಿಕ್ಸ್ ಬಳಸಿ ಸಿದ್ಧ ಪಡಿಸಲಾಗಿದ್ಯಂತೆ.ಈ ನಾರಾಯಣ ಪೊಲೀಸ್‌ ಹಾಗೂ ಭ್ರಷ್ಟ ಪೊಲೀಸ್. ಆದರೆ, ಭಲೇ ಬುದ್ದಿವಂತ. ಅವನ ಪ್ರಿಯತಮೆ ಲಕ್ಷ್ಮಿ ಅರ್ಥಾತ್ ಶಾನ್ವಿ ಶ್ರೀವಾತ್ಸವ್. ಅಚ್ಯುತ್‌ ಕುಮಾರ್‌, ರಿಷಬ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

     

  • ರಕ್ಷಿತ್ ಸಿನಿಮಾಗೆ ರಶ್ಮಿಕಾ ವೇಯ್ಟಿಂಗ್

    rashmika eager to watch avane srimannaryana

    ಪ್ರೀತಿ ಮುರಿದುಬಿದ್ದ ನಂತರೂ, ಅಭಿಮಾನಿಗಳಿಂದ ಅತಿರೇಕದ ಟೀಕೆಗೆ ಗುರಿಯಾದರೂ ಸಾರ್ವಜನಿಕವಾಗಿ ಅತ್ಯಂತ ಗೌರವದಿಂದ ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ ಜೋಡಿ ಮತ್ತೊಮ್ಮೆ ಅದೇ ಮೆಚ್ಯುರಿಟಿ ಪ್ರದರ್ಶನ ಮಾಡಿದೆ. ರಕ್ಷಿತ್ ಶೆಟ್ಟಿಯವರ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

    ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ಅವರಿಗೆ ನವೆಂಬರ್ 30 ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭಾಶಯ ಕೋರಿದ ರಶ್ಮಿಕಾ, ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

  • ರಿಷಬ್.. ಕೌಬಾಯ್ ಕೃಷ್ಣಾವತಾರ

    avane srimannarayna cow boy krishna movie title

    ಡಿಟೆಕ್ಟಿವ್ ದಿವಾಕರ ಖ್ಯಾತಿಯ ರಿಷಬ್ ಶೆಟ್ಟಿ, ಕೌಬಾಯ್ ಕೃಷ್ಣನ ಅವತಾರ ಎತ್ತಲು ಸಿದ್ಧರಾಗಿದ್ದಾರೆ. ಅವನೇ ಶ್ರೀಮನ್ನಾರಾಯಣದಲ್ಲಿ ಸೆಕೆಂಡ್ ಹೀರೋ ಅರ್ಥಾತ್ ಅವರೇ ಹೇಳಿಕೊಂಡಂತೆ ಕೆಲವೇ ಸೆಕೆಂಡು ಬಂದು ಹೋಗುವ ಕೌಬಾಯ್ ಕೃಷ್ಣನಾಗಿ ಗಮನ ಸೆಳೆದಿದ್ದರು ರಿಷಬ್ ಶೆಟ್ಟಿ. ಈಗ ಅದೇ ಹೆಸರನ್ನು ಫಿಲಂ ಚೇಂಬರಿನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ.

    ರಂಗಿತರಂಗ ಖ್ಯಾತಿಯ ಪ್ರಕಾಶ್ ಕೌಬಾಯ್ ಶೆಟ್ಟಿಗೆ ನಿರ್ಮಾಪಕರಾಗಲಿದ್ದಾರಂತೆ. ಸದ್ಯಕ್ಕೆ ರಿಷಬ್ ರುದ್ರಪ್ರಯಾಗ ಚಿತ್ರದಲ್ಲಿ ಬ್ಯುಸಿ. ಅದಾದ ನಂತರ ಆಂಟೋನಿ ಶೆಟ್ಟಿ ಮತ್ತು ಬೆಲ್‍ಬಾಟಂ 2 ಚಿತ್ರಗಳಿವೆ. ಮೋಸ್ಟ್‍ಲೀ.. ಆ ಮೂರೂ ಚಿತ್ರಗಳ ನಂತರ ಕೌಬಾಯ್ ಕೃಷ್ಣ ಸೆಟ್ಟೇರಬಹುದು.

  • ಶಾನ್ವಿ ಹೀರೋ ರಕ್ಷಿತ್ ಶೆಟ್ಟಿ ಅಲ್ಲ.. ಲೂನಾ..!

    shanvi srivatsav talks about her movie avana srimananrayana

    ಅವನೇ ಶ್ರೀಮನ್ನಾರಾಯಣ ಚಿತ್ರದ ಹೀರೋಯಿನ್ ಶಾನ್ವಿ ಶ್ರೀವಾಸ್ತವ್. ಚಿತ್ರದ ಹೀರೋ ರಕ್ಷಿತ್ ಶೆಟ್ಟಿ. ಆದರೆ, ಸಿನಿಮಾದಲ್ಲಿ ಶಾನ್ವಿ ಅತೀ ಹೆಚ್ಚು ಜೊತೆಯಲ್ಲಿರೋದು ಲೂನಾದ ಜೊತೆಗಂತೆ. ಲಕ್ಷ್ಮೀ ಅನ್ನೋ ಹೆಸರಿನ ಬುದ್ದಿವಂತ, ಮೆಚ್ಯೂರ್ಡ್ ಹುಡುಗಿಯ ಪಾತ್ರ ಮಾಡುತ್ತಿರುವ ಶಾನ್ವಿ, ನನ್ನ ಜೊತೆ ಈ ಚಿತ್ರದಲ್ಲಿ ಲೂನಾ ಪ್ರಮುಖ ಆಕರ್ಷಣೆ ಎಂದಿದ್ದಾರೆ.

    ಸಿನಿಮಾ ತಡವಾಗಿದೆಯಾದರೂ, ಒಂದೊಳ್ಳೆ ಸಿನಿಮಾ. ಇದಕ್ಕಾಗಿ ಲೇಟ್ ಆಗಿದ್ದಕ್ಕೂ ಬೇಸರವೇನಿಲ್ಲ. ಚಿತ್ರದ ಕಥೆ ಪವರ್‍ಫುಲ್ ಆಗಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ರಕ್ಷಿತ್ ಶೆಟ್ಟಿ ಜೊತೆಗೆ ಇಷ್ಟು ಬೇಗ ನಟಿಸುವ ಚಾನ್ಸ್ ಸಿಗುತ್ತೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ ಶಾನ್ವಿ.

    ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಮತ್ತು ಹೆಚ್.ಕೆ.ಪ್ರಕಾಶ್ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಸಚಿನ್ ರವಿ ನಿರ್ದೇಶಕ. ಚಿತ್ರದ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ.

  • ಶಿವಣ್ಣ V/s ಸುದೀಪ್ V/s ರಕ್ಷಿತ್ ಶೆಟ್ಟಿ V/s ಶ್ರೀಮುರಳಿ

    its clash of legends in august

    ಆಗಸ್ಟ್ ತಿಂಗಳು ಸ್ಯಾಂಡಲ್‍ವುಡ್‍ನ ಪೈಪೋಟಿಯ ತಿಂಗಳಾಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. 2019ರ ಸೆಮಿಫೈನಲ್ ತಿಂಗಳು ಆಗಸ್ಟ್ ಆದರೆ ಅಚ್ಚರಿಯಿಲ್ಲ. ಏಕೆ ಗೊತ್ತೇ.. ಕನ್ನಡ ಚಿತ್ರರಂಗದ ಸ್ಟಾರ್ ನಟರ ಚಿತ್ರಗಳು ಅದೇ ತಿಂಗಳು ರಿಲೀಸ್ ಆಗುತ್ತಿವೆ.

    ವರಮಹಾಲಕ್ಷ್ಮಿ ಹಬ್ಬಕ್ಕೆ ಸುದೀಪ್ ಅಭಿನಯದ ಕೃಷ್ಣ ನಿರ್ದೇಶನದ ಪೈಲ್ವಾನ್ ತೆರೆಗೆ ಬರುತ್ತಿದೆ.

    ಅದೇ ತಿಂಗಳು ರಕ್ಷಿತ್ ಶೆಟ್ಟಿ ಅಭಿನಯದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರವೂ ರಿಲೀಸ್ ಆಗುತ್ತಿದೆ.

    ಪೈಲ್ವಾನ್ 9 ಭಾಷೆಗಳಲ್ಲಿ ರಿಲೀಸ್ ಆದರೆ, ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

    ಈ ಇಬ್ಬರದ್ದಷ್ಟೇ ಅಲ್ಲ, ಆಗಸ್ಟ್ ಹೊತ್ತಿಗೆ ಶಿವರಾಜ್ ಕುಮಾರ್ ಅಭಿನಯದ ಆನಂದ್ ಕೂಡಾ ರಿಲೀಸ್ ಆಗಲಿದೆ. ದ್ವಾರಕೀಶ್ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ಶಿವಣ್ಣ ನಟಿಸಿರುವ, ವಾಸು ನಿರ್ದೇಶನದ ಸಿನಿಮಾ ಅದು. 

    ಇದಕ್ಕೆ ಕಳಶವಿಟ್ಟಂತೆ ಶ್ರೀಮುರಳಿ ಭರಾಟೆಯೂ ಅದೇ ತಿಂಗಳು ಶುರುವಾಗಲಿದೆ. ನಿರ್ದೇಶಕ ಚೇತನ್ ಕುಮಾರ್ ಬಹದ್ದೂರ್, ಭರ್ಜರಿ ನಂತರ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಸಿನಿಮಾ ಭರಾಟೆ.

    ಸದ್ಯಕ್ಕೆ ಆಗಸ್ಟ್ ಕ್ಯೂನಲ್ಲಿರುವ ಚಿತ್ರಗಳಿವು. ಇವುಗಳ ಜೊತೆಗೆ ಇನ್ನಷ್ಟು ಚಿತ್ರಗಳು ಜೊತೆಯಾದರೂ ಅಚ್ಚರಿಯಿಲ್ಲ.

  • ಶೆರ್ಲಾಕ್ ಹೋಮ್ಸ್, ಚುಲ್‍ಬುಲ್ ಪಾಂಡೆ.. ಎಲ್ಲವೂ ಅವನೇ ಶ್ರೀಮನ್ನಾರಾಯಣ..!

    sherlock homes and chulbul pandey is avane srimannarayana

    ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಹೊರಬಿದ್ದ ಹೊತ್ತಲ್ಲೇ, ಚಿತ್ರದಲ್ಲಿನ ತಮ್ಮ ಕ್ಯಾರೆಕ್ಟರ್ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಚಿತ್ರದಲ್ಲಿ ಇಂಟೆಲಿಜೆಂಟ್ ಪೊಲೀಸ್ ಕ್ಯಾರೆಕ್ಟರ್ ಮಾಡಿರುವ ರಕ್ಷಿತ್ ಶೆಟ್ಟಿ, ಡಿಫರೆಂಟ್ ಗೆಟಪ್‍ನಲ್ಲಿ ಕಂಗೊಳಿಸಿದ್ದಾರೆ.

    ಚಿತ್ರದಲ್ಲಿನ ನಾರಾಯಣನ ಪಾತ್ರಕ್ಕೆ ಹಲವು ಶೇಡ್‍ಗಳಿವೆ. ಅವನು ಶೆರ್ಲಾಕ್ ಹೋಮ್ಸ್, ಜ್ಯಾಕ್ ಸ್ಪ್ಯಾರೋ ಹಾಗೂ ದಬ್ಬಾಂಗ್ ಚುಲ್‍ಬುಲ್ ಪಾಂಡೆಯ ಮಿಕ್ಸಿಂಗ್. ಚಿತ್ರದಲ್ಲಿ ನಾನೊಬ್ಬ ಇನ್ಸ್‍ಪೆಕ್ಟರ್. ನನಗಿಬ್ಬರು ಸಬಾರ್ಡಿನೇಟ್ಸ್. ಆ  ಸ್ಟೇಷನ್‍ಗೆ ನಾನೇ ಬಾಸ್. ನನ್ನನ್ನು ಪ್ರಶ್ನಿಸುವ ಅಧಿಕಾರಿಯೂ ಇರಲ್ಲ. ಹೀಗಿರುವಾಗ.. ಮುಂದಿನದ್ದನ್ನು ಸಿನಿಮಾದಲ್ಲೇ ನೋಡಿ..

    ಹೀಗೆ ರಕ್ಷಿತ್ ಶೆಟ್ಟಿ, ಗುಟ್ಟನ್ನು ಬಿಟ್ಟು ಕೊಟ್ಟು, ಸ್ವಲ್ಪವೂ ಬಿಟ್ಟುಕೊಡದೆ ಕುತೂಹಲ ಹುಟ್ಟಿಸಿಯೇ ಸಾಗುತ್ತಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ ಹೀರೋಯಿನ್. ಸಚಿನ್ ನಿರ್ದೇಶನದ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಕಾಣಲಿದೆ.