ಸತತ 3 ವರ್ಷ ಕಾದಿದ್ದ.. ಕಾಯಿಸಿದ್ದ ಸಿನಿಮಾದ ಟ್ರೇಲರ್ ಹೊರಬಂದಿದೆ. ಅವನೇ ಶ್ರೀಮನ್ನಾರಾಯಣ. ಪ್ರೇಕ್ಷಕರು ಥ್ರಿಲ್ ಆಗುವಂತೆಯೇ ಟ್ರೇಲರ್ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಚಿನ್. ರಕ್ಷಿತ್ ಶೆಟ್ಟಿ, ಪುಷ್ಕರ್ ಕಾಂಬಿನೇಷನ್ ಮತ್ತೊಮ್ಮೆ ಮೋಡಿ ಮಾಡುವ ಹಾದಿಯಲ್ಲಿ ಹೆಜ್ಜೆಯಿಟ್ಟಿದೆ. ಒಟ್ಟು 5 ಭಾಷೆಗಳಲ್ಲಿ.
ಶಂಕರ್ ನಾಗ್ ಚಿತ್ರಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ, ನಾಯಕಿ ಶಾನ್ವಿ, ನಟರಾದ ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚರಣ್ ರಾಜ್.. ಹೀಗೆ ಇಡೀ ಚಿತ್ರತಂಡವೇ ಅಲ್ಲಿತ್ತು.
ರಾಜವಂಶ, ದರೋಡೆಗ್ಯಾಂಗ್, ಕೌಬಾಯ್ ಪೊಲೀಸ್, ಆಟ-ಹುಡುಗಾಟ, ನಿಧಿಯ ಹುಡುಕಾಟ, ಯುದ್ಧ.. ಹೀಗೆ ಹಲವು ಅಂಶಗಳು ಇರುವ ಸಂಪೂರ್ಣ ಕಾಲ್ಪನಿಕ ಸಿನಿಮಾ ಅವನೇ ಶ್ರೀಮನ್ನಾರಾಯಣ.
ತೆಲುಗಿನಲ್ಲಿ ನಾನಿ, ತಮಿಳಿನಲ್ಲಿ ಧನುಷ್, ಮಲಯಾಳಂನಲ್ಲಿ ನಿವಿನ್ ಪೌಲ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಟ್ರೇಲರ್ ರಿಲೀಸ್ ವೇಳೆ ಭಾವುಕರಾದ ರಕ್ಷಿತ್ ಶೆಟ್ಟಿ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ