` devarantha manushya, - chitraloka.com | Kannada Movie News, Reviews | Image

devarantha manushya,

 • 'Devrantha Manushya' Songs Released

  devarantha manushya audio rel

  'Big Boss' winner Pratham's new film as a hero is complete and recently the songs of the film were released in Bangalore. 

  'Devrantha Manushya' is being produced by Suresh, Venkat Gowda and Manjunath and is directed by debutante Kiran Shetty. Kiran himself has written the story and screenplay of the film. 'Devrantha Manushya' has a tagline called 'Sanje Mele Sigabedi'. 

  The film stars Pratham, Nayana, Poornima, Suchendra Prasad, Tabla Nani and others in prominent roles.

 • Devarantha Manushya Review; Chitraloka Rating 3/5

  devarantha manushya image

  Devaranta Manushya tries to mix the image of Bigg Boss star Pratham with a dramatic film story. It manages to blend entertainment and a serious issue also. As the name suggests you know what is going to happen but that it the surprise element also. How can a person who is shown to be so down the depths of immorality be a very good person? For that you have to watch the neatly made film. 

  Pratham is introduced as a person fond of drinking. Every time he manages to get drunk with the money of others. Two of his frines have to listen to his story. That is what the tagline means 'Sanjemele sikkabedi' (Don't meet me after nightfall). The story takes many twists and turns. In the beginning Pratham narrates a love story in flashback. Just when the audience begins to believe in the story there comes a strange twist. It is surprising. Then it becomes even more strange as a new episode begins. There is connection between the two. Why did Pratham become a bad boy all of a sudden? Is there something sinister in him? Why did he cheat a girl? 

  Just when the character is taking a different course there arrives another twist. The film then races towards a surprising climax. Pratham has done quite well in his role. Shruti and Vaishnavi Menon are the two heroines and both have done a good job. They are ably supported by Tabala Nani and Suchendra Prasad. Kirik Keerti arrives in a guest role and lights up things. The film is ably handled by director Kiran Shetty. Composer Praddyottan has given some meaningful tunes. 

  Devaranta Manushya has an unusual story and it was not an easy role for anyone. Pratham has tried his best to fit into it. The challenge is difficult but somehow he has managed to look convincing.

  Chitraloka Rating 3/5

 • ದೇವ್ರಂತ ಮನುಷ್ಯ ಥಿಯೇಟರಲ್ಲಿ ಸಿಕ್ಕೇ ಸಿಗ್ತಾನೆ

  devarantha manushya image

  ದೇವ್ರಂಥ ಮನುಷೈ. ಒಳ್ಳೆ ಹುಡುಗ ಪ್ರಥಮ್ ಅಭಿನಯದ ಚಿತ್ರದ ಟ್ಯಾಗ್‍ಲೈನ್, ಸಂಜೆ ಮೇಲೆ ಸಿಗ್ಬೇಡಿ ಅನ್ನೋದು. ಹೀಗಿದ್ರೂ ಪ್ರಥಮ್ ಇದೇ ವಾರದಿಂದ ಥಿಯೇಟರಿನಲ್ಲಿ ಸಿಗ್ತಾರೆ. ಪ್ರಥಮ್ ಸಿಗದೇ ಹೋದರೂ ಅಪ್ಪಟ ದೇವ್ರಂತಾ ಮನುಷ್ಯ ಸಿಕ್ಕೋದು ಗ್ಯಾರಂಟಿ. ಇದೇ ವಾರ ಚಿತ್ರ ರಿಲೀಸ್ ಆಗ್ತಾ ಇದೆ.

  ಚಿತ್ರದ ಕಥೆ, ಚಿತ್ರಕಥೆಯ ಸಸ್ಪೆನ್ಸ್ ಹಾಗೆಯೇ ಇದೆ. ನಾಯಕಿಯಾಗಿ ವೈಷ್ಣವಿ ನಟಿಸಿದ್ದಾರೆ. ಪಂಚಿಂಗ್ ಡೈಲಾಗುಗಳಿಂದಲೇ ಕಿಕ್ಕು ಹತ್ತಿಸಿದ್ದ ದೇವ್ರಂಥಾ ಮನುಷ್ಯ, ಯೂಟ್ಯೂಬ್‍ನಲ್ಲಿ ಭರ್ಜರಿ ಹಿಟ್ಸ್ ಗಿಟ್ಟಿಸಿತ್ತು. ಅದೇ ಲೆಕ್ಕ ನೋಡಿದರೆ, ಪ್ರಥಮ್ ಮೊದಲ ಎಸೆತದಲ್ಲೇ ಸೆಂಚುರಿ ಹೊಡೆಯೋದು ಗ್ಯಾರಂಟಿ.

   

 • ದೇವ್ರಂಥ ಮನುಷ್ಯ ಸಿಎಂಗೇ ಇಷ್ಟವಾಗಿಬಿಡ್ತು..!

  cm siddaramaiah liked devarantha manushya

  ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಅಭಿನಯದ ಚಿತ್ರ ಚಿತ್ರಮಂದಿರಗಳಿಗೆ ಪ್ರವೇಶಿಸಿದೆ. ಪ್ರೇಕ್ಷಕರ ಅಭಿಪ್ರಾಯ ಕೇಳೋಕೂ ಮೊದಲೇ ಪ್ರಥಮ್ ಚಿತ್ರಕ್ಕೆ ಅತಿ ದೊಡ್ಡ ಮೆಚ್ಚುಗೆಯೊಂದು ಸಿಕ್ಕಿಬಿಟ್ಟಿದೆ. ಅದು ಸಿಎಂ ಸಿದ್ದರಾಮಯ್ಯನವರದ್ದು.

  ದೇವ್ರಂಥ ಮನುಷ್ಯ ಚಿತ್ರದ ಹಾಡು ಕೇಳಿರುವ ಸಿದ್ದರಾಮಯ್ಯ, ಚಿತ್ರದ  ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಹಾಡು ಕೇಳುತ್ತಿರುವ, ತಾಳ ಹಾಕುತ್ತಿರುವ ವಿಡಿಯೋವನ್ನು ಪ್ರಥಮ್ ಬಿಡುಗಡೆ ಮಾಡಿದ್ದಾರೆ. ದೇವ್ರಂಥ ಮನುಷ್ಯ ಸಂಜೆ ಮೇಲೆ ಸಿಗ್ಬೇಡಿ ಅನ್ನೋದನ್ನೇ ಟ್ಯಾಗ್‍ಲೈನ್ ಮಾಡಿಕೊಂಡಿರುವ ಚಿತ್ರದ ಥೀಮ್ ವಿಶೇಷವಾಗಿದೆ. ತಪ್ಪು ಮಾಡೋದು ಸಹಜ. ಆದರೆ, ತಪ್ಪುಗಳೇ ಅತಿಯಾಗಿಬಿಟ್ಟರೆ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ.

  ಎಚ್.ಸಿ.ಮಂಜುನಾಥ್, ತಿಮ್ಮರಾಜು ನಿರ್ಮಾಣದ ಚಿತ್ರಕ್ಕೆ ಕಿರಣ್ ಶೆಟ್ಟಿ ನಿರ್ದೇಶನವಿದೆ. ಶ್ರುತಿ ಹಾಗೂ ವೈಷ್ಣವಿ ಚಿತ್ರದ ನಾಯಕಿಯರು. ಸುಚೇಂದ್ರ ಪ್ರಸಾದ್, ತಬಲಾನಾಣಿ, ಕಿರಿಕ್ ಕೀರ್ತಿ ಕೂಡಾ ಚಿತ್ರದಲ್ಲಿದ್ದಾರೆ. 

  ಈಗಾಗಲೇ ಚಿತ್ರದ ಪುಟ್ಟ ಟ್ರೇಲರ್‍ಗಳು, ಡೈಲಾಗ್‍ಗಳು ಹಾಡುಗಳು ಚಿತ್ರರಸಿಕರ ಮನ ಗೆದ್ದಿವೆ. ಇನ್ನು ಥಿಯೇಟರ್‍ನಲ್ಲಿ ಜನ ಮೆಚ್ಚುವುದಷ್ಟೇ ಬಾಕಿ.

 • ಫೆ.2ರಂದು ಏನಾಗಲಿದೆ ಚಿತ್ರಮಂದಿರಗಳಲ್ಲಿ..?

  8 movies to release this week

  ಹೊಸ ವರ್ಷದ 2ನೇ ತಿಂಗಳೇ ಚಿತ್ರಮಂದಿರಗಳು ತುಂಬಿ ತುಳುಕುವಂತಾ ವಾತಾವರಣ ನಿರ್ಮಾಣವಾಗುತ್ತಿದೆ. 2017ರ ಕೊನೆಯಲ್ಲಿ.. ಅದರಲ್ಲೂ ಅಕ್ಟೋಬರ್, ನವೆಂಬರ್, ಡಿಸೆಂಬರ್‍ನಲ್ಲಿ ಸಿನಿಮಾಗಳು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗಿದ್ದವು. ಆದರೆ, ಈಗ 2018ರಲ್ಲಿ ವರ್ಷದ ಆರಂಭದಲ್ಲೇ ದೊಡ್ಡ ಕ್ಯೂ ಸೃಷ್ಟಿಯಾಗಿದೆ.

  ಫೆಬ್ರವರಿ 2ನೇ ತಾರೀಕು, ಗಾಂಧಿನಗರದಲ್ಲಿ 8 ಸಿನಿಮಾ ರಿಲೀಸ್ ಆಗುತ್ತಿವೆ. ಇವುಗಳಲ್ಲಿ ಬಿಗ್‍ಬಾಸ್ ಪ್ರಥಮ್ ಅಭಿನಯದ ದೇವ್ರಂತಾ ಮನುಷ್ಯ ಚಿತ್ರ, ಪ್ರಥಮ್ ಕಾರಣದಿಂದಲೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ.

  ಅನಿರುದ್ಧ ಮತ್ತು ಸಂಜನಾ ಅಭಿನಯದ ರಾಜಾಸಿಂಹ ಚಿತ್ರ... ಹಾಡು ಮತ್ತು ಮೇಕಿಂಗ್‍ನಿಂದಾಗಿ ಗಮನ ಸೆಳೆದಿದೆ.

  ಮಂಜರಿ ಹಾರರ್ ಚಿತ್ರವಾಗಿ ಗಮನ ಸೆಳೆಯುತ್ತಿದೆ. ಉಳಿದಂತೆ ಜಪ, ಮಳೆಗಾಲ, ಆ ಒಂದು ದಿನ, ಸಂಜೀವ, ಜಂತರ್ ಮಂತರ್ ಎಂಬ ಚಿತ್ರಗಳು ಥಿಯೇಟರಿಗೆ ಬರುತ್ತಿವೆ. 

  ಎಂಟರಲ್ಲಿ ಪ್ರೇಕ್ಷಕ ಯಾವ ಚಿತ್ರದೊಂದಿಗೆ ನಂಟು ಮಾಡಿಕೊಳ್ತಾನೆ.. ನೋಡೋಣ. 

 • ಬಿಗ್‍ಬಾಸ್ ವಿನ್ನರ್-ರನ್ನರ್‍ಗಳ ಸಮ್ಮಿಲನ

  big boss 4 winner and runner up

  ಈಗ ಬಿಡಿ, ಬಿಗ್‍ಬಾಸ್‍ನದ್ದೇ ಸುದ್ದಿ. ಬಿಗ್‍ಬಾಸ್ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಮತ್ತು ರನ್ನರ್ ದಿವಾಕರ್ ಅವರ ಸ್ನೇಹದ ಕಥೆಯದ್ದೇ ಎಲ್ಲೆಲ್ಲೂ ಮಾತು. ಆದರೆ, ನಾವು ಇಲ್ಲಿ ಹೇಳ್ತಿರೋದು ಬಿಗ್‍ಬಾಸ್ ಸೀಸನ್ 5ನ ಕಥೆಯಲ್ಲ, ಸೀಸನ್ 4 ಸ್ಟೋರಿ. ಅದು ಕೂಡಾ ಫ್ರೆಂಡ್‍ಶಿಪ್ ಸ್ಟೋರಿ.

  ಬಿಗ್‍ಬಾಸ್ ಸೀಸನ್ 4ನ ವಿನ್ನರ್ ಪ್ರಥಮ್. ಒಳ್ಳೆ ಹುಡುಗ ಪ್ರಥಮ್ ಪ್ರಥಮ ಬಹುಮಾನ ಗೆದ್ದರೆ, ಕಿರಿಕ್ ಕೀರ್ತಿ ಸೆಕೆಂಡ್ ಬಿಗ್‍ಬಾಸ್ ಆಗಿದ್ದರು. ಬಿಗ್‍ಬಾಸ್‍ನಿಂದ ಹೊರಗೂ ಅವರ ಸ್ನೇಹ ಮುಂದುವರೆದಿತ್ತು. ಅದು ದೇವ್ರಂಥ ಮನುಷ್ಯ ಚಿತ್ರದಲ್ಲೂ ಮುಂದುವರೆದಿರುವುದು ವಿಶೇಷ. 

  ಇದೇ ಶುಕ್ರವಾರ ರಿಲೀಸ್ ಆಗುತ್ತಿರುವ ದೇವ್ರಂಥ ಮನುಷ್ಯ ಚಿತ್ರದಲ್ಲಿ ಕಿರಿಕ್ ಕೀರ್ತಿ ಕೂಡಾ ಇದ್ದಾರೆ. ಸ್ನೇಹಕ್ಕಾಗಿ.. ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರಿಗೂ ಶುಭವಾಗಲಿ. ತಪ್ಪು ಮಾಡೋದು ಸಹಜ. ಆದರೆ, ಅದು ವಿಪರೀತವಾದರೆ ಏನಾಗುತ್ತೆ ಅನ್ನೋದು ಚಿತ್ರದ ಕಥೆಯ ಥೀಮ್.

Shivarjun Movie Gallery

Popcorn Monkey Tiger Movie Gallery