` thayige thakka maga, - chitraloka.com | Kannada Movie News, Reviews | Image

thayige thakka maga,

 • Shashank Takes Over The Direction Of 'Thayige Thakka Maga'

  shashank takes over thayige thakka maga

  If everything had gone right, then Ved Guru was supposed to direct Ajay's 25th film 'Thayige Thakka Maga'. Now Shashank who is producing the film has taken over as the director of this film.

  This is not the first time that the director of the film has been changed. When the project was announced last year, Raghu Kovi was the director. Later, Ved Guru replaced him. Now, Shashank himself will be directing the film as his film with Puneeth Rajakumar has been postponed to this year end.

  'Thayige Thakka Maga' stars Ajay Rao, Sumalatha, Ashika, Acyuth Kumar and others in prominent roles. Shekhar Chandru is the cameraman, while Judah Sandy is the music director. The shooting for the film will start from the 06th of February.

 • `ತಾಯಿಗೆ ತಕ್ಕ ಮಗ'ನಿಗೆ ಶಶಾಂಕ್‍ರದ್ದೇ ಡೈರೆಕ್ಷನ್..!

  shashank itself to direct thayige thakka maga

  ನಿರ್ದೇಶಕ ಶಶಾಂಕ್, ನಿರ್ಮಾಪಕರಾಗಿ ಆರಂಭಿಸಿದ್ದ ಮೊದಲ ಚಿತ್ರ ತಾಯಿಗೆ ತಕ್ಕ ಮಗ. ಆದರೆ, ನಿರ್ದೇಶನದ ಹೊಣೆಯನ್ನು ಬೇರೊಬ್ಬರಿಗೆ ಬಿಟ್ಟಿದ್ದರು. ಅಜಯ್ ರಾವ್, ಆಶಿಕಾ ರಂಗನಾಥ್ ಹಾಗೂ ಸುಮಲತಾ ಪ್ರಮುಖ ಪಾತ್ರದಲ್ಲಿರುವ ಚಿತ್ರವನ್ನು ರಘು ಕೋವಿ ನಿರ್ದೇಶಿಸಬೇಕಿತ್ತು. ನಂತರ ಅವರು ಬದಲಾಗಿ, ಅವರ ಜಾತಕ್ಕೆ ವೇದ್‍ಗುರು ಬಂದರು. ಈಗ ಅವರ ಬದಲಾಗಿ ಸ್ವತಃ ಶಶಾಂಕ್ ಅವರೇ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

  ವೇದ್‍ಗರು ಅನಾರೋಗ್ಯದಿಂದಾಗಿ ಚಿತ್ರ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರ ಮಧ್ಯೆ ಪುನೀತ್ ರಾಜ್‍ಕುಮಾರ್ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಹೀಗಾಗಿ ಚಿತ್ರವನ್ನು ನಾನೇ ನಿರ್ದೇಶಿಸಲು ಮುಂದಾಗಿದ್ದೇನೆ ಅನ್ನೊದು ಶಶಾಂಕ್ ಮಾತು.

  ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ತಾಯಿಗೆ ತಕ್ಕ ಮಗ ಚಿತ್ರದ ವೇಳೆಯಲ್ಲೇ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರವೂ ಸೆಟ್ಟೇರಬೇಕಿತ್ತು.

 • ಅಜಯ್ ರಾವ್ ಕೈಮೇಲೆ ಸುಮಲತಾ ಹಚ್ಚೆ..!

  sumalatha's tattoo on ajai rao's arms

  ನಟ ಅಜಯ್ ರಾವ್ ಅವರ ಕೈಮೇಲೆ ಸುಮಲತಾ ಹಚ್ಚೆ ಪ್ರತ್ಯಕ್ಷವಾಗಿದೆ. ಹಚ್ಚೆಯೆಂದರೆ ಹೆಸರೂ ಅಲ್ಲ, ಸುಮಲತಾ ಅವರ ಚಿತ್ರ. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಸುಮಲತಾ ಅವರ ಮಗನ ಪಾತ್ರ ನಿರ್ವಹಿಸಿರುವ ಅಜಯ್ ರಾವ್, ಕೈಮೇಲೆ ತಾಯಿಯ ಚಿತ್ರವನ್ನೇ ಹಚ್ಚೆ ಹಾಕಿಸಿಕೊಂಡಿರುತ್ತಾರೆ. ಅಂದಹಾಗೆ, ಚಿತ್ರಕಥೆಯಲ್ಲಿ ಆ ಟ್ಯಾಟೂ ಕೂಡಾ ಪ್ರಮುಖ ಪಾತ್ರ ವಹಿಸಲಿದೆಯಂತೆ.

  ಶಶಾಂಕ್ ನಿರ್ಮಾಣ ಮತ್ತು ನಿರ್ದೇಶನದ ಚಿತ್ರಕ್ಕೆ ಅಶಿಕಾ ರಂಗನಾಥ್ ನಾಯಕಿ. ಚಿತ್ರೀಕರಣವನ್ನು ಬಹುತೇಕ ಮುಗಿಸಿರುವ ಶಶಾಂಕ್, ಒಂದು ಹಾಡಿನ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದ್ದಾರೆ. ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಇದು ಕನೆಕ್ಟ್ ಆಗಲಿದೆ ಎಂದು ಹೇಳಿಕೊಂಡಿದ್ದಾರೆ ಶಶಾಂಕ್.

 • ಅಜೇಯ್ ರಾವ್‍ಗೆ ಸಿಕ್ಕರು ಅದೃಷ್ಟದ ಅಮ್ಮ

  sumalatha in thayige thakka maga

  ಅಜೇಯ್ ರಾವ್ ಅಭಿನಯಿಸುತ್ತಿರುವ, ಖ್ಯಾತ ನಿರ್ದೇಶಕ ಶಶಾಂಕ್ ನಿರ್ಮಾಣದ `ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಹೀರೋಯಿನ್ ಇನ್ನೂ ಸಿಕ್ಕಿಲ್ಲ. ಆದರೆ, ಹೀರೋಗೆ ಅಮ್ಮ ಸಿಕ್ಕಿದ್ದಾರೆ. ಅದೂ ಕೂಡಾ ಅಜೇಯ್ ರಾವ್‍ಗೆ ಅದೃಷ್ಟದ ಅಮ್ಮ ಸುಮಲತಾ. 

  ಮದುವೆಯ ನಂತರ ಹೆಚ್ಚೂ ಕಡಿಮೆ ಚಿತ್ರರಂಗದಿಂದ ದೂರವೇ ಇದ್ದ ಸುಮಲತಾ, ಸುದೀರ್ಘ ವಿರಾಮದ ನಂತರ ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಅಜೇಯ್ ರಾವ್ ಅಮ್ಮನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಅದು ಅಜೇಯ್ ರಾವ್ ಅಭಿನಯದ ಮೊದಲ ಸಿನಿಮಾ. ಆ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಬ್ರಹ್ಮ ವಿಷ್ಣು ಶಿವಾ ಎದೆ ಹಾಲು ಕುಡಿದರೋ.. ಇಂದಿಗೂ ತಾಯಿಯನ್ನು ಪ್ರೀತಿಸುವ ಮಕ್ಕಳ ಪಾಲಿನ ಮೆಚ್ಚಿನ ಗೀತೆಗಳಲ್ಲೊಂದು.

  ಈಗ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್‍ಗೆ ಮತ್ತೆ ಅಮ್ಮನಾಗಿದ್ದಾರೆ. ಸುಮಲತಾ ಅವರು ತಮ್ಮ ಚಿತ್ರ ಒಪ್ಪಿಕೊಂಡಿದ್ದೇ ಖುಷಿಯ ಸಂಗತಿ ಎಂದು ಸಂಭ್ರಮಿಸುತ್ತಿದ್ದಾರೆ ಶಶಾಂಕ್. 

  Related Articles :-

  ತಾಯಿಗೆ ತಕ್ಕ ಮಗ ನಿರ್ದೇಶಕ ಬದಲು

  ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ

  Thayige Thakka Maga by Shashank - Exclusive

 • ಅಣ್ಣಾವ್ರು ಬಾಕ್ಸರ್ ಆಗಿದ್ದರೆ, ಈ ಮಗ ಕುಂಗ್‍ಫೂ ಫೈಟರ್

  ajai rao's kung fu fghter

  ಓಲ್ಡ್ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಬಾಕ್ಸರ್ ಆಗಿ ನಟಿಸಿದ್ದರು. ತಾಯಿಗೆ ಗೊತ್ತಿಲ್ಲದೆ ಬಾಕ್ಸಿಂಗ್ ರಿಂಗ್‍ಗಿಳಿಯುವ ಮಗನಾಗಿ ರಾಜ್ ಗೆದ್ದಿದ್ದರು. ಈಗ ಹೊಸ ತಾಯಿಯ ಮಗ. ಈ ಹೊಸ ತಾಯಿಗೆ ತಕ್ಕ ಮಗ  ಅಜಯ್ ರಾವ್, ಕುಂಗ್‍ಫು ಫೈಟರ್ ಆಗಿದ್ದಾರೆ. 

  ಶಶಾಂಕ್ ನಿರ್ಮಾಣ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಸೆಂಟಿಮೆಂಟ್ ಕಥೆಯಷ್ಟೇ ಅಲ್ಲ, ಮೈ ನವಿರೇಳಿಸುವ ಸಾಹಸ ದೃಶ್ಯಗಳೂ ಇವೆ. ತಾಯಿಯಾಗಿ ಸುಮಲತಾ ನಟಿಸುತ್ತಿದ್ದಾರೆ. ನಾನಾ ವಿಶೇಷತೆಗಳಿರುವ ಚಿತ್ರದಲ್ಲಿ ಅಜಯ್ ರಾವ್, ತಾಯಿಗಾಗಿಯೇ ಕುಂಗ್‍ಫು ಕಲಿಯುತ್ತಾನೆ ಎನ್ನುವುದು ಇನ್ನಷ್ಟು ಆಸಕ್ತಿ ಕೆರಳಿಸಿದೆ.

 • ತಾಯಿಗೆ ತಕ್ಕ ಮಗ ಅಲ್ಲ, ಮಗನಿಗೆ ತಕ್ಕ ತಾಯಿ..!

  perfect son for a perfcet mother

  ತಾಯಿಗೆ ತಕ್ಕ ಮಗ. ಇದು ಶಶಾಂಕ್ ನಿರ್ಮಾಣದ ಅಜೇಯ್ ರಾವ್ ನಾಯಕರಾಗಿ ನಟಿಸುತ್ತಿರುವ ಚಿತ್ರ. ಚಿತ್ರದಲ್ಲಿ ಅತ್ಯಂತ ವಿಶೇಷ ಪಾತ್ರ ಮಾಡುತ್ತಿರುವುದು ಸುಮಲತಾ. ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಅಜೇಯ್ ರಾವ್‍ಗೆ ಅಮ್ಮನಾಗಿದ್ದ ಸುಮಲತಾ, ಈ ಚಿತ್ರದಲ್ಲಿ ಮತ್ತೊಮ್ಮೆ ತಾಯಿಯಾಗಿದ್ದಾರೆ.

  ಆ ಚಿತ್ರದಲ್ಲಿ ಅಜೇಯ್ ರಾವ್ ಜೀವನಕ್ಕಾಗಿ, ತಮ್ಮ ಪ್ರೀತಿಯನ್ನೇ ತ್ಯಾಗ ಮಾಡುವ ಅಮ್ಮನಾಗಿದ್ದ ಸುಮಲತಾ, ಈ ಚಿತ್ರದಲ್ಲಿ ಮಗನಿಗಾಗಿ ಹೋರಾಡುವ ಅಮ್ಮನ ಪಾತ್ರ ಮಾಡುತ್ತಿದ್ದಾರೆ.

  ಅಜೇಯ್ ರಾವ್, ಸಿನಿಮಾದಲ್ಲಿ ಅನ್ಯಾಯದ ವಿರುದ್ಧ ಹೋರಾಡುತ್ತಿರುತ್ತಾರೆ. ಮಗನ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲುವುದು ಅಮ್ಮ ಸುಮಲತಾ. ಕೋರ್ಟ್‍ನಲ್ಲಿ ಲಾಯರ್ ಆಗಿ ಮಗನನ್ನು ಗೆಲ್ಲಿಸಿಕೊಳ್ಳುವ ರೆಬಲ್ ಅಮ್ಮನಾಗಿದ್ದಾರೆ ಸುಮಲತಾ.

  ಹಾಗಾದರೆ, ಚಿತ್ರದ ಟೈಟಲ್‍ನ್ನು ಮಗನಿಗೆ ತಕ್ಕ ತಾಯಿ ಎಂದೇನಾದರೂ ಬದಲಾಯಿಸುವ ಐಡಿಯಾ ಇದೆಯಾ..? ಶಶಾಂಕ್ ಅವರನ್ನು ಕೇಳಿನೋಡಿ.. ಜೋರಾಗಿ ನಕ್ಕುಬಿಡುತ್ತಾರೆ.

 • ತಾಯಿಗೆ ತಕ್ಕ ಮಗ ಟ್ರೇಲರ್ ಹವಾ..

  thayige thakka maga creates craze

  ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನದ ಸಿನಿಮಾ ಟೈಟಲ್‍ನಿಂದಲೇ ಸದ್ದು ಮಾಡಿದ್ದ ಸಿನಿಮಾ. ಇನ್ನು ಎಕ್ಸ್‍ಕ್ಯೂಸ್ ಮಿ ನಂತರ ಸುಮಲತಾ ಮತ್ತು ಅಜೇಯ್ ರಾವ್ ಮತ್ತೊಮ್ಮೆ ತಾಯಿ ಮಗನಾಗಿ ನಟಿಸಿದ್ದು, ಚಿತ್ರದ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ ಚಿತ್ರದ ಟ್ರೇಲರ್.

  ಕಿಚ್ಚು ಸುದೀಪ್ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗುವ ಚಿತ್ರದ ಟ್ರೇಲರ್‍ನಲ್ಲಿ, ತಾಯಿ-ಮಗನ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾಹಸ ದೃಶ್ಯ ಮತ್ತು ಪಂಚಿಂಗ್ ಡೈಲಾಗುಗಳ ಹಿನ್ನೆಲೆಯಲ್ಲೂ ತಾಯಿ-ಮಗನ ಸೆಂಟಿಮೆಂಟ್ ಕಾಣುವಂತೆ ಮಾಡಿರೋದು ಶಶಾಂಕ್ ಸ್ಪೆಷಾಲಿಟಿ. 

  ಚಿತ್ರದ ನಾಯಕಿ ಆಶಿಕಾ ರಂಗನಾಥ್, ಸಿನಿಮಾದ ಹಾಟ್ ಹಾಟ್ ಸಬ್ಜೆಕ್ಟ್. ಕ್ಲಾಸ್ ಮತ್ತು ಮಾಸ್ ಎರಡೂ ಮಿಕ್ಸ್ ಆಗಿರುವ ಸಿನಿಮಾ ಅಜೇಯ್ ರಾವ್ ಅವರ 25ನೇ ಸಿನಿಮಾ ಎನ್ನವುದು ವಿಶೇಷ.

 • ತಾಯಿಗೆ ತಕ್ಕ ಮಗ ನಿರ್ದೇಶಕ ಬದಲು

  thayige thakka maga

  ತಾಯಿಗೆ ತಕ್ಕ ಮಗ. ಅಜೇಯ್ ರಾವ್ ಅಭಿನಯದ ಹಾಗೂ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಸಿನಿಮಾ. ನಿರ್ದೇಶಕ, ನಾಯಕರಾಗಿ ಅಜೇಯ್ ರಾವ್-ಶಶಾಂಕ್ ಜೋಡಿಯ ಈ ಹಿಂದಿನ ಎರಡೂ ಚಿತ್ರಗಳು ಸೂಪರ್ ಹಿಟ್. 3ನೇ ಬಾರಿ ಜೊತೆಯಾಗುತ್ತಿರುವ ಜೋಡಿ, ಮತ್ತೊಂದು ಸೂಪರ್ ಹಿಟ್ ನಿರೀಕ್ಷೆಯಲ್ಲಿದೆ.

  ಇದು ಶಶಾಂಕ್ ನಿರ್ಮಾಣದ ಮೊದಲ ಸಿನಿಮಾವಾದರೆ, ಅಜೇಯ್ ರಾವ್‍ಗೆ 25ನೇ ಸಿನಿಮಾ. ಅಂದಹಾಗೆ ಶಶಾಂಕ್ ನಿರ್ಮಿಸುತ್ತಿದ್ದರೂ, ಚಿತ್ರಕ್ಕೆ ಅವರು ನಿರ್ದೇಶಕರಲ್ಲ. ಮೊದಲು ರಘುಕೋವಿ ಎಂಬುವರು ನಿರ್ದೇಶಿಸುತ್ತಾರೆ ಎನ್ನಲಾಗಿತ್ತು. ಈಗ ನಿರ್ದೇಶಕರು ಬದಲಾಗಿದ್ದಾರೆ. ಅವರ ಜಾಗಕ್ಕೆ ವೇದಗುರು ಬಂದಿದ್ದಾರೆ. ಅವರು ಈ ಹಿಂದೆ ದಂಡಯಾತ್ರೆ ಎಂಬ ಸಿನಿಮಾ ನಿರ್ದೇಶಿಸಿದ್ದವರು.

  ಪುನೀತ್ ಚಿತ್ರ ಒಪ್ಪಿಕೊಂಡಿರುವ ಶಶಾಂಕ್, ಈಗ ಎರಡೂ ಚಿತ್ರಗಳಲ್ಲಿ ಬ್ಯುಸಿ. ನಾಯಕಿಯರ ಹುಡುಕಾಟ ನಡೆಯುತ್ತಿದ್ದು, 100ಕ್ಕೂ ಹೆಚ್ಚು ನಟಿಯರ ಅಡಿಷನ್ ಆಗಿದೆ. ಆದರೆ, ಯಾವುದೂ ಸಮಾಧಾನ ತಂದಿಲ್ಲ. ಚಿತ್ರತಂಡ ಇನ್ನೂ ಹೀರೋಯಿನ್ಸ್ ಹುಡುಕಾಟದಲ್ಲೇ ಇದೆ. 

 • ತಾಯಿಗೆ ತಕ್ಕ ಮಗನಿಗೆ ಕಿಚ್ಚನ ಪವರ್

  sudeep gives voice over to thayige thakka maga

  ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನ, ನಿರ್ಮಾಣದ ಸಿನಿಮಾ. ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ನಂತರ ಅಜೇಯ್ ರಾವ್ ಮತ್ತು ಶಶಾಂಕ್ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ. ಚಿತ್ರದ ಪ್ರಮುಖ ತಾಯಿಯ ಪಾತ್ರದಲ್ಲಿರೋದು ಸುಮಲತಾ. ಮೊದಲೇ ಅಣ್ಣಾವ್ರ ಹಳೆಯ ಸೂಪರ್ ಹಿಟ್ ಚಿತ್ರದ ಟೈಟಲ್. ಹೀಗೆ ಹಲವು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗೆ ಈಗ ಇನ್ನೊಂದು ಪವರ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್.

  ತಾಯಿಗೆ ತಕ್ಕ ಮಗ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ ಸುದೀಪ್. ಆಶಿಕಾ ರಂಗನಾಥ್ ಚಿತ್ರದ ನಾಯಕಿ. ಆಗಸ್ಟ್ 31ಕ್ಕೆ ಚಿತ್ರದ ಟ್ರೈಲರ್ ರಿಲೀಸ್ ಆಗಲಿದ್ದು, ಅದಕ್ಕೊಂದು ಟೀಸರ್ ಕೂಡಾ ರಿಲೀಸ್ ಮಾಡಿದ್ದಾರೆ ಶಶಾಂಕ್.

 • ತಾಯಿಗೆ ತಕ್ಕ ಮಗನಿಗೆ ಜೋಡಿ ಸಿಕ್ಕಳು..

  thayige thakka maga

  ತಾಯಿಗೆ ತಕ್ಕ ಮಗ. ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಚಿತ್ರ. ಅಜೇಯ್ ರಾವ್, ಸುಮಲತಾ ಅಂಬರೀಷ್ ನಟಿಸುತ್ತಿರುವ ಚಿತ್ರಕ್ಕೆ ನಾಯಕಿಯ ಆಯ್ಕೆಯೇ ದೊಡ್ಡ ಸವಾಲಾಗಿ ಹೋಗಿತ್ತು. 150ಕ್ಕೂ ಹೆಚ್ಚು ಆರ್ಟಿಸ್ಟ್‍ಗಳ ಅಡಿಷನ್ ಮಾಡಿದ್ದ ಶಶಾಂಕ್‍ಗೆ ನಾಯಕಿಯೇ ಸಿಕ್ಕಿರಲಿಲ್ಲ. ಎಲ್ಲೆಲ್ಲೋ ಹುಡುಕಾಡಿದ್ದ ಶಶಾಂಕ್, ಆಶಿಕಾ ರಂಗನಾಥ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

  ಕ್ರೇಜಿಬಾಯ್ ಮೂಲಕ ಬೆಳ್ಳಿತೆರೆಗೆ ಬಂದ ಹುಡುಗಿ, ನಂತರ ಮುಗುಳುನಗೆ, ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ನಟಿಸಿದ್ದರು. ಶರಣ್ ಜೊತೆ ರ್ಯಾಂಬೋ-2 ಚಿತ್ರದಲ್ಲಿ ನಟಿಸುತ್ತಿರುವ ಆಶಿಕಾ ರಂಗನಾಥ್, ಈಗ ತಾಯಿಗೆ ತಕ್ಕ ಮಗನ ಜೋಡಿಯಾಗಿದ್ದಾರೆ.

  ಶಶಾಂಕ್ ಚಿತ್ರಗಳಲ್ಲಿ ನಾಯಕಿಯರೆಂದರೆ ಗ್ಲಾಮರ್ ಗೊಂಬೆಗಳಾಗಿರುವುದಿಲ್ಲ. ಅಭಿನಯಕ್ಕೆ ಅವಕಾಶ ಇದ್ದೇ ಇರುತ್ತೆ. ಆಶಿಕಾ ಅವರಿಂದ ನನ್ನ ಚಿತ್ರದ ಪಾತ್ರಕ್ಕೆ ನ್ಯಾಯ ಸಿಗಲಿದೆ ಎಂಬ ಭರವಸೆ ನನಗಿದೆ. ಆಶಿಕಾ ಅವರಲ್ಲಿ ಪ್ರತಿಭೆ ಮತ್ತು ಸೌಂದರ್ಯ ಎರಡೂ ಇದೆ ಎಂದಿದ್ದಾರೆ ಶಶಾಂಕ್.

  ಚಿತ್ರದಲ್ಲಿ ಆಶಿಕಾ ರೆಬಲ್ ನಾಯಕನ ಎದುರು ಸೌಮ್ಯ ಸ್ವಭಾವದ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಸುಮಲತಾ ಅವರ ಎದುರು ನಟಿಸುತ್ತಿರುವುದೇ ಥ್ರಿಲ್ ಆಗಿದೆ ಎಂದಿದ್ದಾರೆ ಆಶಿತಾ.  ವೇದ್‍ಗುರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅಜೇಯ್ ರಾವ್ ನಾಯಕ. ಅಜೇಯ್ ರಾವ್ ತಾಯಿಯಾಗಿ ಸುಮಲತಾ ನಟಿಸುತ್ತಿದ್ದಾರೆ.

  Related Articles :-

  ತಾಯಿಗೆ ತಕ್ಕ ಮಗ ನಿರ್ದೇಶಕ ಬದಲು

  ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ

  Thayige Thakka Maga by Shashank - Exclusive

   

   

 • ತಾಯಿಗೆ ತಕ್ಕ ಮಗನಿಗೆ ವಿರಾಮ

  thayige thakka maga gets injury break

  ತಾಯಿಗೆ ತಕ್ಕ ಮಗ. ನಿರ್ದೇಶಕ ಶಶಾಂಕ್ ನಿರ್ಮಾಣದ, ಅವರದ್ದೇ ನಿರ್ದೇಶನದ ಸಿನಿಮಾ. ಆರಂಭದಿಂದಲೂ ನಿರ್ದೇಶಕರ ಬದಲಾವಣೆಯಿಂದಾಗಿ ಸುದ್ದಿಯಲ್ಲಿದ್ದ ಚಿತ್ರದ ಚಿತ್ರೀಕರಣಕ್ಕೆ ಈಗ ಅಲ್ಪ ವಿರಾಮ. ಶಶಾಂಕ್ ನಿರ್ದೇಶನ, ನಿರ್ಮಾಣ ಎಂಬ ಕಾರಣಕ್ಕಾಗಿಯೇ ಬಹು ನಿರೀಕ್ಷೆ ಹುಟ್ಟಿಸಿರುವ ಚಿತ್ರ, ಶೇ.50ರಷ್ಟು ಚಿತ್ರೀಕರಣ ಮುಗಿಸಿದೆ. 

  ಈ ಮಧ್ಯೆ ಸಾಹಸ ದೃಶ್ಯವೊಂದರ ಚಿತ್ರೀಕರಣ ವೇಳೆ ನಾಯಕ ನಟ ಅಜೇಯ್ ರಾವ್, ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಶೂಟಿಂಗ್‍ಗೆ ಅಲ್ಪವಿರಾಮ. ಅಜೇಯ್ ರಾವ್‍ಗೆ ವಿಶ್ರಾಂತಿ.

  ಏಪ್ರಿಲ್ 2ನೇ ವಾರದಿಂದ ಮತ್ತೊಮ್ಮೆ ಚಿತ್ರೀಕರಣ ಶುರುವಾಗಲಿದೆ. ಸುಮಲತಾ ಅಂಬರೀಷ್ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ.

Padarasa Movie Gallery

Kumari 21 Movie Gallery