` dhanush, - chitraloka.com | Kannada Movie News, Reviews | Image

dhanush,

  • Malayalam Actress Reba For Rishi's Film

    malyalam actress rebs in rishi's next movie

    Malayalam actress Reba Monica John is all set to make her debut in Kannada film opposite Rishi. Well known Tamil actor Dhanush is producing the film and the film is all set to be launched in the end of May.

    Actor Rishi who has completed 'Kavalu Daari' is the hero of this new film. Debutante Islamuddin is directing the film, apart from scripting the film. The film is yet to be titled and the director is yet to finalise the artistes and technicians for the film.

    Director Jacob Verghese has joined hands with Dhanush in his maiden production in Kannada.

    Related Articles :-

    ಧನುಷ್ ಕನ್ನಡ ಚಿತ್ರಕ್ಕೆ ಮಲೆಯಾಳಿ ಹೀರೋಯಿನ್

  • Rishi To Star In Dhanush's First Kannada Production

    rishi to act in dhanush's debut kannada production

    Well known Tamil actor Dhanush producing a Kannada film is not new. The film is all set to be launched in the end of May.

    Actor Rishi who has completed 'Kavalu Daari' is the hero of this new film. Debutante Islamuddin is directing the film, apart from scripting the film. The film is yet to be titled and the director is yet to finalise the artistes and technicians for the film.

    Director Jacob Verghese has joined hands with Dhanush in his maiden production in Kannada.

  • ಕನ್ನಡ ಸಿನಿಮಾ ಮಾಡ್ತಾರಾ ಧನುಷ್..?

    dhanush ready to enter kannada films

    ಧನುಷ್, ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಸೂಪರ್ ಸ್ಟಾರ್ ರಜಿನಿಕಾಂತ್ ಅಳಿಯ. ಆದರೆ, ಮಾವನ ನೆರಳಿನಲ್ಲಿ ಬೆಳೆದು ಸ್ಟಾರ್ ಆದವರಲ್ಲ. ನಟರಾಗಿಯಷ್ಟೇ ಅಲ್ಲ, ತಮ್ಮ ಬ್ಯಾನರ್‍ಗಳಲ್ಲಿ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ, ವಿಭಿನ್ನ ಸಿನಿಮಾಗಳ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ನಟ. ನಿರ್ಮಾಪಕ. ನಿರ್ದೇಶಕ. ಗಾಯಕ.. ತಮಿಳಿನಲ್ಲಿ ಇಂತಹ ಪ್ರಯತ್ನಗಳಿಂದ ಯಶಸ್ಸನ್ನೂ ಗಳಿಸಿರುವ ಧನುಷ್ ಈಗ ಕನ್ನಡ ಚಿತ್ರರಂಗದತ್ತಲೂ ದೃಷ್ಟಿ ಹಾಯಿಸಿದ್ದಾರೆ.

    ಸವಾರಿ, ಪೃಥ್ವಿ ಖ್ಯಾತಿಯ ಜೇಕಬ್ ವರ್ಗಿಸ್ ಅವರ ಚಿತ್ರವನ್ನು ನಿರ್ಮಾಣ ಮಾಡಲು ಧನುಷ್ ಆಸಕ್ತಿ ತೋರಿಸಿದ್ದಾರೆ. ಚಿತ್ರದ ಕಥೆ ಇಷ್ಟವಾಗಿದ್ದು ಮಾತುಕತೆ ನಡೆಯುತ್ತಿದೆ. ಇನ್ನೂ ಫೈನಲ್ ಆಗಿಲ್ಲ. ಆ ಕಥೆಗೆ ನಾಯಕಿ ಶ್ರದ್ಧಾ ಶ್ರೀನಾಥ್. ನಾಯಕ ರಿಷಿ.

    ಸದ್ಯಕ್ಕೆ ಚಂಬಲ್ ಚಿತ್ರದಲ್ಲಿ ಬ್ಯುಸಿಯಾಗಿರುವ ಜೇಕಬ್ ವರ್ಗಿಸ್, ಇನ್ನು ಕೆಲವೇ ದಿನಗಳಲ್ಲಿ ಫೈನಲ್ ರಿಸಲ್ಟ್ ತಿಳಿಸುವ ಸುಳಿವು ಕೊಟ್ಟಿದ್ದಾರೆ.

  • ಕನ್ನಡದ ಅಸುರನ್ ಶಿವಣ್ಣ, ಡೈರೆಕ್ಟರ್ ಫಿಕ್ಸ್

    asuran remake confirmed

    ತಮಿಳಿನಲ್ಲಿ ಕಳೆದ ವರ್ಷ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ ಅಸುರನ್. ಆ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಲಿದ್ದು, ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಚಿತ್ರದ ಬಗ್ಗೆ ಡಿಸ್ಕಷನ್ ನಡೆದಿರುವುದು ನಿಜ. ಇನ್ನೂ ಫೈನಲ್ ಆಗಿಲ್ಲ ಎಂದು ಸ್ವತಃ ಶಿವಣ್ಣ ಹೇಳಿದ್ದರು. ಈಗ ಬಂದಿರೋ ಸುದ್ದಿಯ ಪ್ರಕಾರ, ಚಿತ್ರಕ್ಕೆ ಡೈರೆಕ್ಟರ್ ಕೂಡಾ ಫಿಕ್ಸ್ ಆಗಿದ್ದಾರೆ.

    ಕನ್ನಡ ಚಿತ್ರರಂಗದ ಸಂವೇದನಾ ಶೀಲ ಕಮರ್ಷಿಯಲ್ ಡೈರೆಕ್ಟರ್ ಜೇಕಬ್ ವರ್ಗಿಸ್ ಈ ಚಿತ್ರಕ್ಕೆ ನಿರ್ದೇಶಕರಂತೆ. ಪೃಥ್ವಿ, ಸವಾರಿಯಂತಹ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿರುವ ಜೇಕಬ್ ವರ್ಗಿಸ್, ಅಸುರನ್ ಚಿತ್ರದ ರೀಮೇಕ್ ನಿರ್ದೇಶನಕ್ಕೆ ಓಕೆ ಎಂದಿದ್ದಾರಂತೆ. ಅಸುರನ್‍ನ್ನು ತಮಿಳಿನಲ್ಲಿ ನಿರ್ದೇಶಿಸಿದ್ದ ವೆಟ್ರಿಮಾರನ್, ಕನ್ನಡದ ಅಸುರನ್‍ಗೆ ನಿರ್ಮಾಪಕರಾಗಲಿದ್ದಾರೆ ಎಂಬ ಸುದ್ದಿಯಿದೆ. ಅಧಿಕೃತವಾಗಿಲ್ಲ ಅಷ್ಟೆ.

  • ತಮಿಳಿಗೆ ಹೊರಟರು ಅಲಮೇಲಮ್ಮನ ರಿಷಿ

    rishi in dhanu's banner

    ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಲಡ್ಡುಗಳು ಒಂದರ ಹಿಂದೊಂದರಂತೆ ಬಾಯಿಗೆ ಬೀಳುತ್ತಿವೆ. ಆಪರೇಷನ್ ಅಲಮೇಲಮ್ಮ ನಂತರ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಚಿತ್ರ ಕವಲುದಾರಿಯಲ್ಲಿ ಅವಕಾಶ ಪಡೆದ ರಿಷಿ, ಈಗ ತಮಿಳಿನಲ್ಲೂ ಚಾನ್ಸ್ ಗಿಟ್ಟಿಸಿದ್ದಾರೆ. ತಮಿಳಿನಲ್ಲಿ ಧನುಷ್ ನಿರ್ಮಿಸುತ್ತಿರುವ ಚಿತ್ರದಲ್ಲಿ ರಿಷಿ ಹೀರೋ.

    ತಮಿಳಿನ ಆ ಚಿತ್ರದಲ್ಲಿ ಧನುಷ್ ನಿರ್ಮಾಪಕರಷ್ಟೇ. ಇಸ್ಲಾಹುದ್ದೀನ್ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ.

  • ಧನುಷ್ ಅಣ್ಣನಾಗುತ್ತಿದ್ದಾರೆ ಶಿವಣ್ಣ

    ಧನುಷ್ ಅಣ್ಣನಾಗುತ್ತಿದ್ದಾರೆ ಶಿವಣ್ಣ

    ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದವರು ಕರೆಯೋದೇ ಶಿವಣ್ಣ ಅಂಥಾ. ಇಂತಹ ಶಿವಣ್ಣ 125ನೇ ಸಿನಿಮಾ ರಿಲೀಸ್ ಹೊತ್ತಲ್ಲಿಯೂ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಒಂದೆಡೆ ತಮ್ಮದೇ ನಿರ್ಮಾಣದ ವೇದದ ಬಿಡುಗಡೆ ಬ್ಯುಸಿಯಲ್ಲಿರೋ ಶಿವಣ್ಣ, ಮತ್ತೊಂದೆಡೆ ಘೋಸ್ಟ್, ಕರಟಕ ದಮನಕ, ನೀ ಸಿಗೋವರೆಗೂ.. ಅಶ್ವತ್ಥಾಮ, ಸತ್ಯಮಂಗಳ, 45 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಯಲ್ಲಿಯೇ ರಜನಿಕಾಂತ್ ಜೊತೆ ಜೈಲರ್ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಅದು ತಮಿಳಿನ ಸಿನಿಮಾ. ಶಿವಣ್ಣ ಹೀರೋ ಆಗಿ ನಟಿಸುತ್ತಿಲ್ಲ. ಇದರ ಜೊತೆಯಲ್ಲೇ ಮತ್ತೊಂದು ತಮಿಳು ಸಿನಿಮಾಗೆ ಯೆಸ್ ಎಂದಿದ್ದಾರೆ.

    ಧನುಷ್ ನಟನೆಯ ಹೊಸ ಚಿತ್ರ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಅಣ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಸ್ವಾತಂತ್ರ್ಯ ಪೂರ್ವದ ಕಥೆ ಹೊಂದಿದ್ದು, ಚಿತ್ರದಲ್ಲಿ ತಮಗೆ ಒಂದು ಪಾತ್ರ ಮಾಡುವಂತೆ ಕರೆ ಬಂದಿದೆ ಎನ್ನುವುದನ್ನು ಶಿವಣ್ಣ ಹೇಳಿಕೊಂಡೂ ಇದ್ದರು. ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲವಾದರೂ, ಶಿವಣ್ಣ ಧನುಷ್ ಅಣ್ಣನಾಗುವುದು ಬಹುತೇಕ ಪಕ್ಕಾ ಎನ್ನುತ್ತಿವೆ ಮೂಲಗಳು.

  • ಧನುಷ್ ಕನ್ನಡ ಚಿತ್ರಕ್ಕೆ ಮಲೆಯಾಳಿ ಹೀರೋಯಿನ್

    reba monica is heroine in dhanush's debut production

    ತಮಿಳು ಸೂಪರ್‍ಸ್ಟಾರ್ ಧನುಷ್, ಕನ್ನಡದಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿತ್ರದ ಹೀರೋ ಅಲಮೇಲಮ್ಮ ಖ್ಯಾತಿಯ ರಿಷಿ. ಈಗ ಹೀರೋಯಿನ್ ಆಯ್ಕೆಯೂ ಆಗಿದೆ. ರೆಬಾ ಮೋನಿಕಾ ಜಾನ್ ಎಂಬ ಮಲೆಯಾಳಿ ಸುಂದರಿ, ರಿಚಿ ಎದುರು ನಾಯಕಿಯಾಗುತ್ತಿದ್ದಾರೆ.

    ಇಲ್ಲಾವುದ್ದೀನ್ ನಿರ್ದೇಶನದ ಸಿನಿಮಾಗೆ ಧನುಷ್ ಅಷ್ಟೇ ಅಲ್ಲ, ನಿರ್ದೇಶಕ ಜೇಕಬ್ ವರ್ಗಿಸ್ ಕೂಡಾ ನಿರ್ಮಾಪಕರು. ರೆಬಾ, ಮಲೆಯಾಳಿಯಾದರೂ ಹುಟ್ಟಿದ್ದು ಹಾಗೂ ಮಾಸ್ಟರ್ ಡಿಗ್ರಿ ಓದಿದ್ದು ಬೆಂಗಳೂರಿನಲ್ಲೇ. ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ರೆಬಾ, ಮಾಡೆಲ್ ಕೂಡಾ ಹೌದು. ಚಿತ್ರದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ.

    Related Articles :-

    Rishi To Star In Dhanush's First Kannada Production

    ಕನ್ನಡ ಸಿನಿಮಾ ಮಾಡ್ತಾರಾ ಧನುಷ್..?

    ತಮಿಳಿಗೆ ಹೊರಟರು ಅಲಮೇಲಮ್ಮನ ರಿಷಿ

  • ಧನುಷ್ ಜೊತೆ ನಟಿ ಮೀನಾ ಮದುವೆ ಸುದ್ದಿ ನಿಜಾನಾ..?

    ಧನುಷ್ ಜೊತೆ ನಟಿ ಮೀನಾ ಮದುವೆ ಸುದ್ದಿ ನಿಜಾನಾ..?

    ನಟಿ ಮೀನಾ. ಹಿರಿಯ ನಟಿ. ಸ್ಟಾರ್ ನಟಿಯೂ ಹೌದು. ವಯಸ್ಸು 46 ವರ್ಷ. ಮದುವೆಯಾಗಿತ್ತು. ಪತಿ ವಿದ್ಯಾಸಾಗರ್ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ನಟ ಧನುಷ್. ಹಿರಿಯ ನಟ ಹಾಗೂ ಸ್ಟಾರ್ ನಟ. ವಯಸ್ಸು 40. ಮೀನಾಗಿಂತಲೂ ಚಿಕ್ಕ ವಯಸ್ಸು. ಇವರಿಗೂ ಮದುವೆಯಾಗಿತ್ತು. ಐಶ್ವರ್ಯಾ ರಜನಿಕಾಂತ್ ಜೊತೆ ಮದುವೆಯಾಗಿದ್ದರಾದರೂ ಈಗ ಸಪರೇಟ್ ಆಗಿದ್ದಾರೆ.

    ಈಗ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿರುವುದು ತಮಿಳು ಚಿತ್ರರಂಗದಿಂದಲೆ. ಬೈಲ್ವಾನ್ ರಂಗನಾಥನ್ ಎಂಬ ನಟ ಇವರಿಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿಬಿಟ್ಟಿದ್ದಾನೆ.

    ನಟಿ ಮೀನಾ ಹಾಗೂ ಧನುಷ್ ಮದುವೆಯಾಗಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ವರ್ಷದ ಜುಲೈ ತಿಂಗಳಿನಲ್ಲಿ ಧನುಷ್ - ಮೀನಾ ಮದುವೆ ನಡೆಯಲಿದೆ. ಅದು ವರ್ಕೌಟ್ ಆಗಲಿಲ್ಲ ಅಂದ್ರೆ ಇಬ್ಬರೂ ಲಿವ್ ಇನ್ ರಿಲೇಶನ್ಶಿಪ್ನಲ್ಲಿರಲಿದ್ದಾರೆ ಎನ್ನುವುದು ಈತನ ಮಾತು. ಆ ಮಾತಿಗೇನಾದರೂ ಪ್ರೂಫ್ ಇದೆಯಾ..? ಇಲ್ಲ. ದಾಖಲೆ ಇದೆಯಾ? ಇಲ್ಲ. ಫೋಟೋ..ವಿಡಿಯೋ.. ಏನಾದರೂ ಇದೆಯಾ..? ಇಲ್ಲ. ಧನುಷ್ ಮತ್ತು ಮೀನಾ ಮಧ್ಯೆ ಫ್ರೆಂಡ್‍ಶಿಫ್ ಇದೆಯಾ ಎಂದು ನೋಡಿದರೆ ಅದೂ ಇಲ್ಲ. ಚಿತ್ರರಂಗದ ಕಲಾವಿದರು ಎಂಬ ವಿಷಯದ ಹೊರತಾಗಿ ಆತ್ಮೀಯತೆಯೂ ಇಲ್ಲ. ಪರಿಚಯ ಇದೆ ಅಷ್ಟೆ.

    ಬೈಲ್ವಾನ್ ರಂಗನಾಥನ್ ಇಷ್ಟಕ್ಕೇ ಸುಮ್ಮನಾಗಿಲ್ಲ. ರಜನಿಕಾಂತ್ ಮಗಳು ಐಶ್ವರ್ಯಾ, ಪ್ರಭುದೇವ ಜೊತೆ ಮದುವೆಯಾಗ್ತಾರೆ. ಅಥವಾ ಆಗದಿದ್ದರೆ ಅವರಿಬ್ಬರೂ ಲಿವ್ ಇನ್ ರಿಲೇಷನ್`ಶಿಪ್‍ನಲ್ಲಿರುತ್ತಾರೆ ಎಂದಿದ್ದಾರೆ. ಅದಕ್ಕೂ ಅಷ್ಟೆ..ದಾಖಲೆಗಳಿಲ್ಲ. ಪುರಾವೆಗಳಿಲ್ಲ. ಒಟ್ಟಿನಲ್ಲಿ ಬೈಲ್ವಾನ್ ರಂಗನಾಥನ್ ಈ ಹೇಳಿಕೆ ನೀಡಿದ್ದ ಕಾರಣಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

  • ನಿರ್ಮಾಪಕರ ಒಗ್ಗಟ್ಟು : ಧನುಷ್, ಸಿಂಬು, ವಿಶಾಲ್`ರಂತಹ ಸ್ಟಾರ್ ನಟರಿಗೇ ಬಹಿಷ್ಕಾರದ ಎಚ್ಚರಿಕೆ

    ನಿರ್ಮಾಪಕರ ಒಗ್ಗಟ್ಟು : ಧನುಷ್, ಸಿಂಬು, ವಿಶಾಲ್`ರಂತಹ ಸ್ಟಾರ್ ನಟರಿಗೇ ಬಹಿಷ್ಕಾರದ ಎಚ್ಚರಿಕೆ

    ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಕಾರುಬಾರು ದೊಡ್ಡದು. ನಟರನ್ನು ದೇವರಂತೆಯೇ ಕಾಣುತ್ತಾರೆ. ಅಂತಹ ಚಿತ್ರರಂಗದಲ್ಲಿ ಸ್ಟಾರ್ ನಟರು ಈಗ ಬಹಿಷ್ಕಾರದ ಬಿಸಿ ಎದುರಿಸುತ್ತಿದ್ದಾರೆ. ಅದರಲ್ಲೂ ಧನುಷ್, ವಿಶಾಲ್, ಸಿಂಬು, ಅಥರ್ವ ಅವರಂತಹ ನಟರು. ಈ ಎಲ್ಲ ನಟರಿಗೆ ರೆಡ್ ಕಾರ್ಡ್ ನೀಡುವ ಮೂಲಕ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದರ ಅರ್ಥ  ಯಾವುದೇ ನಿರ್ಮಾಪಕರು ಈ ಹೀರೋಗಳನ್ನು ಹಾಕಿಕೊಂಡು ಇನ್ನುಮುಂದೆ ಸಿನಿಮಾ ಮಾಡುವಂತಿಲ್ಲ. ಕಳೆದ  13ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರದಿಂದಾಗಿ  ನಟರು  ನಿರ್ಮಾಪಕರ ಮಂಡಳಿ ಮುಂದಿನ ಸೂಚನೆ ನೀಡುವವರೆಗೂ ಯಾವುದೇ ನಿರ್ಮಾಣ ಸಂಸ್ಥೆಯು ಅವರೊಂದಿಗೆ ಸಿನಿಮಾಗಳನ್ನು ಮಾಡುವಂತಿಲ್ಲ. ಇನ್ನೊಂದರ್ಥದಲ್ಲಿ ಇವರನ್ನು ಬ್ಯಾನ್ ಮಾಡಲಾಗಿದೆ ಎನ್ನುವುದು.

    ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.  ಕೆಲವು ತಿಂಗಳ ಹಿಂದೆ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ  ಹಾಗೂ ಕಲಾವಿದರ  ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು  ಈ ನಾಲ್ವರು ನಟರ ಮೇಲೆ ಆರೋಪ ಮಾಡಿದ್ದರು. ಇದರಿಂದ ಈ ನಿರ್ಧಾರ ಎನ್ನಲಾಗಿದೆ.

    ಇಷ್ಟಕ್ಕೂ ಯಾವ್ಯಾವ ನಟರ ಮೇಲೆ ಯಾವ ರೀತಿಯ ಆರೋಪಗಳಿವೆ ಅನ್ನೋದನ್ನ ನೋಡೋದಾದ್ರೆ..

    ನಟ ಸಿಂಬು : ಶೂಟಿಂಗ್ ಜಾಗಕ್ಕೆ ಹೇಳಿದ ಸಮಯಕ್ಕೆ ಬರುವುದಿಲ್ಲ. ಚಿತ್ರೀಕರಣವನ್ನ ಯಾವಾಗ ಎಂದರೆ ಆವಾಗ ಪ್ಯಾಕಪ್ ಮಾಡಿಸ್ತಾರೆ.

    ಧನುಷ್ : ತಮ್ಮ ಬ್ಯಾನರ್ ಚಿತ್ರಕ್ಕಾಗಿ ಬೇರೆಯವರಿಗೆ ಒಪ್ಪಿಕೊಂಡಿದ್ದ ಚಿತ್ರಗಳಿಗೆ ಸ್ಪಂದಿಸುವುದಿಲ್ಲ

    ವಿಶಾಲ್ : ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದಾಗ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಅವರು ಬಹಿರಂಗಪಡಿಸಿಲ್ಲ.

    ಅಥರ್ವ : ಇವರನ್ನು ನಂಬಿಕೊಂಡು ಯಾವುದೇ ಪ್ಲಾನ್ ಮಾಡಿಕೊಳ್ಳೋಕೆ ಆಗಲ್ಲ. ಚಿತ್ರೀಕರಣ, ಚಿತ್ರದ ಪ್ರಚಾರ ಎಲ್ಲವೂ ಇವರ ಬೇಜವಾಬ್ದಾರಿಯಿಂದಾಗಿ ದುಬಾರಿಯಾಗುತ್ತಿದೆ.

  • ನೀನಾಸಂ ಸತೀಶ್ ಚಿತ್ರಕ್ಕೆ ಧನುಷ್ ಪ್ರಮೋಷನ್

    dhanush to release sathish's chambal

    ಅಯೋಗ್ಯ ಹಿಟ್ ಆದ ಖುಷಿಯಲ್ಲಿರೋ ನೀನಾಸಂ ಸತೀಶ್, ಚಂಬಲ್ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ. ಚಂಬಲ್ ವಿಶೇಷ ಸಿನಿಮಾ. ಇದುವರೆಗೆ ನೀನಾಸಂ ಸತೀಶ್‍ರನ್ನು ನೋಡದೇ ಇರುವ ಲುಕ್ ಈ ಚಿತ್ರದಲ್ಲಿದೆ. ಕಥೆ ಕೂಡಾ ಡಿಫರೆಂಟ್. ಈಗ ಆ ಖುಷಿಗೆ ಇನ್ನೊಂದು ದೊಡ್ಡ ಖುಷಿ ಸೇರಿದೆ.

    ಚಂಬಲ್ ಚಿತ್ರದ ತಮಿಳು ವರ್ಷನ್‍ನ್ನು ರಜನಿಕಾಂತ್ ಅಳಿಯ, ಸ್ಟಾರ್ ನಟ ಧನುಷ್ ಪ್ರಮೋಟ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಚಿತ್ರಕ್ಕೆ ಈಗಾಗಲೇ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಧ್ವನಿ ಕೊಟ್ಟಿದ್ದಾರೆ. ಈಗ ಚಿತ್ರಕ್ಕೆ ಧನುಷ್ ಬೆಂಬಲವೂ ಸಿಕ್ಕಿದೆ. ಮಾರುಕಟ್ಟೆ, ಉತ್ತಮ ಬಾಂಧವ್ಯದ ದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ ನೀನಾಸಂ ಸತೀಶ್.