ರಾಜ್ ಬಿ.ಶೆಟ್ಟಿ. ರಮ್ಯಾ ಅವರು ನಿರ್ಮಾಪಕಿಯಾಗಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಸಿದ್ಧವಾಗಿದ್ದಾರೆ. ಪಕ್ಕಾ ಸ್ಕ್ರಿಪ್ಟ್.. ಪಕ್ಕಾ ಪ್ಲಾನಿಂಗ್.. ಕಡಿಮೆ ಬಜೆಟ್.. ಇದು ರಾಜ್ ಬಿ.ಶೆಟ್ಟಿ ಸ್ಟೈಲ್. ಹೀಗಾಗಿಯೇ ರಾಜ್ ಬಿ.ಶೆಟ್ಟಿಯವರ ಚಿತ್ರಗಳು ಸರಸರನೆ ಮುಗಿಯುತ್ತವೆ. ಬರವಣಿಗೆಗೆ ಹೆಚ್ಚು ಸಮಯ ತೆಗೆದುಕೊಳ್ಳುವ ರಾಜ್ ಬಿ.ಶೆಟ್ಟಿ ಸುಮ್ಮನೆ ಕೂರುವವರಲ್ಲ.
ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ರಾಜ್ ಬಿ.ಶೆಟ್ಟಿ ಹೀರೋ ಕಮ್ ಡೈರೆಕ್ಟರ್. ಇದರ ನಡುವೆ ಟೋಬಿ ಅನ್ನೋ ಸಿನಿಮಾ ಮಾಡಿ ಮುಗಿಸಿದ್ದಾರೆ.
ಗರುಡ ಗಮನ ವೃಷಭ ವಾಹನ. 2022ರಲ್ಲಿ ಹೊಸ ಅಲೆಯೆಬ್ಬಿಸಿದ್ದ ಸಿನಿಮಾ. ರಾಜ್ ಬಿ.ಶೆಟ್ಟಿ ನಟಿಸಿ ನಿರ್ದೇಶಿಸಿದ್ದರೆ, ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಕ್ಷಿತ್ ಶೆಟ್ಟಿ ವಿತರಣೆ ಮಾಡಿದ್ದರು. ಒಂದು ರೀತಿಯಲ್ಲಿ ಅದು ಕನ್ನಡದ ಆರ್.ಆರ್.ಆರ್. ಅದೇ ಚಿತ್ರತಂಡದ ಜೊತೆ ಟೋಬಿ ಅನ್ನೋ ಸಿನಿಮಾ ಸಿದ್ಧ ಮಾಡಿದ್ದಾರೆ ರಾಜ್ ಬಿ.ಶೆಟ್ಟಿ.
ರ್ದೇಶನವನ್ನು ರಾಜ್ ಬಿ ಶೆಟ್ಟಿ ತಂಡದ ಸಹ ನಿರ್ದೇಶಕರೊಬ್ಬರು ಮಾಡಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿನ ನಾಯಕ ಪಾತ್ರಧಾರಿ ಟೋಬಿ. ಮುಗ್ಧ ಮತ್ತು ಎಡವಟ್ಟು ಮನುಷ್ಯ ಎನ್ನಿಸಿಕೊಂಡ ಪಾತ್ರದ ನಿರ್ವಹಣೆಯನ್ನು ರಾಜ್ ನಿರ್ವಹಿಸಿದ್ದಾರೆ. ಇದೊಂದು ಕಮರ್ಶಿಯಲ್ ಸಿನಿಮಾ ಆಗಿದ್ದು, ಸರಿಯಾದ ಸಮಯಕ್ಕೆ ಥಿಯೇಟರ್ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಸಂಸ್ಥೆ ಮತ್ತು ರವಿ ರೈ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ನಟ ರಾಜ್ ಸದ್ಯ ಮಲಯಾಳಂ ಚಿತ್ರ ‘ರುಧಿರಂ’ ಶೂಟಿಂಗ್ ಪಾಲ್ಗೊಂಡಿದ್ದಾರೆ. ಅದಲ್ಲದೇ ಇನ್ನೂ ಎರಡು ವರ್ಷ ರಾಜ್ ಬಿ ಶೆಟ್ಟಿ ಬ್ಯುಸಿಯಾಗಿದ್ದಾರೆ. ಅವರು ಮಾಡಿಟ್ಟುಕೊಂಡಿರುವ ಕಥೆಗಳನ್ನ ಒಂದೊಂದಾಗಿಯೇ ಮುಗಿಸುತ್ತಾ ಬರುತ್ತಿದ್ದಾರೆ. ಹೊಸ ಬಗೆಯ ಕಥೆಯನ್ನ ತೆರೆಯ ಮೇಲೆ ಹೇಳಲು ರಾಜ್ ಬಿ ಶೆಟ್ಟಿ ರೆಡಿಯಾಗಿದ್ದಾರೆ.