` pogaru, - chitraloka.com | Kannada Movie News, Reviews | Image

pogaru,

  • ಪೊಗರು ನಿಂತಿಲ್ಲ.. ಚಿತ್ರ ರೀಮೇಕ್ ಅಲ್ಲ

    pogaru doubts cleared

    ಪೊಗರು. ಧ್ರುವ ಸರ್ಜಾ ಅಭಿನಯದ ಸಿನಿಮಾ. ಚಿತ್ರದ ಕುರಿತು ಎದ್ದಿರುವ ಹಲವಾರು ಸುದ್ದಿಗಳಿಗೆ, ಅನುಮಾನಗಳಿಗೆ ನಿರ್ಮಾಪಕ ಬಿ.ಕೆ. ಗಂಗಾಧರ್ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಕಥೆ, ಶೂಟಿಂಗ್ ಕುರಿತು ಎದ್ದಿರುವ ಎಲ್ಲ ಅನುಮಾನಗಳಿಗೂ ಫುಲ್‍ಸ್ಟಾಪ್ ಇಟ್ಟಿದ್ದಾರೆ.

    ಚಿತ್ರದ ಕಥೆ ಪಕ್ಕಾ ಆಗಿದೆ. ಕಥೆ ಆಯ್ಕೆ ಆಗಿಲ್ಲ ಅನ್ನೋದು ಸುಳ್ಳು. ಕಥೆ ಸಿದ್ದವಾದ ಮೇಲೆಯೇ ನಾನು ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದು ಎಂದಿದ್ದಾರೆ ಗಂಗಾಧರ್. ನವೆಂಬರ್‍ನಲ್ಲಿ ಚಿತ್ರದ ಫೋಟೋಶೂಟ್ ನಡೆಯಲಿದ್ದು, ಚಿತ್ರೀಕರಣ ಶುರುವಾಗುವ ಹೊತ್ತಿಗೆ ಮೊದಲ ಟೀಸರ್ ಬಿಡುಗಡೆ ಮಾಡುತ್ತೇವೆ. ಬಹುತೇಕ ನವೆಂಬರ್‍ನಲ್ಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ಗಂಗಾಧರ್.

    ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ವೈದಿ ಕ್ಯಾಮೆರಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸತತವಾಗಿ ಗೆದ್ದ ಹೀರೋಗೆ ಸಿನಿಮಾ ಮಾಡುವಾಗ ಕೆಲವು ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತೆ. ಅವೆಲ್ಲವನ್ನೂ ಮಾಡಿಕೊಂಡಿದ್ದೇವೆ. ಪೊಗರು ಚಿತ್ರಕ್ಕೆ ಯಾವುದೇ ಕಂಟಕ ಇಲ್ಲ. ಪೊಗರು ಮುಗಿಯುವವರೆಗೆ ಬೇರೆ ಯಾವುದೇ ಚಿತ್ರ ಮಾಡುವುದಿಲ್ಲ ಎಂದಿದ್ದಾರೆ ಗಂಗಾಧರ್.

  • ಪೊಗರು ಸೆಟ್ಟಲ್ಲಿ ರಶ್ಮಿಕಾ ಬರ್ತ್ ಡೇ

    rashmika's birthday celebrations in pogaru set

    ಕಿರಿಕ್ ಪಾರ್ಟಿಯ ಸಾನ್ವಿ ಅಲಿಯಾಸ್ ರಶ್ಮಿಕಾ, ಈಗ ಸೌಥ್ ಇಂಡಿಯಾ ಕ್ರಶ್. ಪಡ್ಡೆ ರಸಿಕರ ಡಾರ್ಲಿಂಗ್. ಕನಸಲ್ಲೂ ಅಲೆಲೆಲೆಲೆ ಎನ್ನಿಸುವ ಸುಂದರಿ, ಈಗಷ್ಟೇ 22 ಮುಗಿಸಿ, 23ಕ್ಕೆ ಕಾಲಿಟ್ಟಿದ್ದಾರೆ. ಹಾಗೆ ಹುಟ್ಟುಹಬ್ಬ ಸಂಭ್ರಮಿಸುವ ವೇಳೆಯಲ್ಲಿ ಅವರು ಇದ್ದುದು ಪೊಗರು ಚಿತ್ರದ ಸೆಟ್ಟಿನಲ್ಲಿ.

    ಧ್ರುವ ಸರ್ಜಾ ಅವರಿಗೆ ಟೀಚರ್ ಆಗಿ ನಟಿಸುತ್ತಿರುವ ರಶ್ಮಿಕಾ ಅವರಿಗೆ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ಚಿತ್ರತಂಡ ಹುಟ್ಟುಹಬ್ಬ ಶುಭಾಶಯ ಕೋರಿ ಸಂಭ್ರಮಿಸಿದೆ. ಸೆಟ್‍ನಲ್ಲೇ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ ರಶ್ಮಿಕಾ ಮಂದಣ್ಣ.

  • ಪೊಗರು ಸೆಟ್ಟಿನಲ್ಲಿ ಬೆಂಕಿ ; ಸುದ್ದಿ ನಿಜಾನಾ..? ಸುಳ್ಳಾ..?

    news behind pogaru set on fire

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಚಿತ್ರೀಕರಣ ಸೆಟ್ಟಿನಲ್ಲಿ ಬೆಂಕಿ ಬಿದ್ದಿದೆ. ಅಗ್ನಿ ಅವಘಡದಲ್ಲಿ ಧ್ರುವ ಸರ್ಜಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂಬ ಸುದ್ದಿ ಇದ್ದಕ್ಕಿದ್ದಂತೆ ಹಬ್ಬಿದೆ. ಪೊಗರು ಶೂಟಿಂಗ್ ಹೈದರಾಬಾದ್‍ನಲ್ಲಿ ನಡೆಯುತ್ತಿದ್ದು, ಕ್ಲೈಮಾಕ್ಸ್ ಶೂಟಿಂಗ್ ಮಾಡುತ್ತಿದ್ದಾರೆ ನಿರ್ದೇಶಕ ನಂದಕಿಶೋರ್.

    ಚಿತ್ರದ ಬಗ್ಗೆ ಹಬ್ಬಿದ ಈ ಸುದ್ದಿಯೆಲ್ಲ ಸುಳ್ಳು ಎಂದು ಸ್ಪ್ಟಪಡಿಸಿದೆ ಚಿತ್ರತಂಡ. ಹರಿದಾಡುತ್ತಿರುವ ಫೋಟೋ ಕೂಡಾ ಶೂಟಿಂಗ್‍ನದ್ದೇ. ಸೀನ್‍ನಲ್ಲಿ ಬಾಂಬ್ ಸ್ಫೋಟಿಸುವ ದೃಶ್ಯದ ಫೋಟೋ. ಅಷ್ಟೇ ಹೊರತು ಚಿತ್ರೀಕರಣದಲ್ಲಿ ಯಾವುದೇ ಅನಾಹುತ, ಅವಘಡ, ಆಕಸ್ಮಿಕ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ ಪೊಗರು ಟೀಂ.

  • ಪೊಗರು.. ಅದೇನ್ ಖದರ್ ಗುರೂ..

    pogaru dialogue trailer is super hit

    ಇವತ್ತು.. ನಾಳೆ.. ನಾಳಿದ್ದು.. ಎಂದೆಲ್ಲ ನಿರೀಕ್ಷೆ ಹುಟ್ಟಿಸಿಯೇ ವರ್ಷ ಕಳೆದಿದ್ದ ಪೊಗರು ಚಿತ್ರದ ಭರ್ಜರಿ ಟ್ರೇಲರ್ ಹೊರಬಿದ್ದಿದೆ. ತಡೆದ ಮಳೆ ಜಡಿದು ಬಂತು ಅನ್ನೋ ಹಾಗೆ ಪೊಗರು ಟ್ರೇಲರಿನಲ್ಲಿ ಡೈಲಾಗುಗಳ ಸುರಿಮಳೆಯೇ ಇದೆ. ಪಂಚು, ಪವರ್ರು ಮಿಸ್ಸಾಗಿಲ್ಲ.

    ಅಡ್ರೆಸ್ ತಿಳ್ಕೊಂಡು ಹೋಗಿ ಸರ್ವಿಸ್ ಮಾಡೋಕೆ ಕೊರಿಯರ್ ಬಾಯ್ ಅಂದ್ಕೊಂಡ್ಯಾ.. ಫೈಟರ್.. ಹೊಡೆದ್ರೆ ಯಾವನೂ ಅಡ್ರೆಸ್ ಇರಲ್ಲ. ಹೋಗಿ ಅವನಿಗೆ ನನ್ನ ಅಡ್ರೆಸ್ ಹೇಳು...

    ಮಕ್ಳಾ ಸಿಂಪಲ್ಲಾಗಿ ಮೂರು ಹೊಡೆದಿದ್ದಕ್ಕೇ ಸೀರಿಯಸ್ ಆಗಿದ್ದೀರ. ಸೀರಿಯಸ್ಸಾಗಿ ಹೊಡೆದ್ರೆ ಸೀದಾ ಸುಡುಗಾಡೇ..

    ವ್ಹೋ... ಇಂಗ್ಲಿಷಾ.. ಮಾತೃಭಾಷೆ ಬಿಟ್ಟೋರೂ.. ಮೂರೂ ಬಿಟ್ಟೋರು..

    ಹೀಗೆ.. ಒಂದೊಂದು ಡೈಲಾಗಿನಲ್ಲೂ ಒಂದೊಂದು ಅವತಾರ ತೋರಿಸಿದ್ದಾರೆ ಧ್ರುವಾ. ಉದ್ದನೆಯ ಕೂದಲು, ಗಡ್ಡದಲ್ಲಿ ಲುಕ್ಕು ರಗಡ್ಡಾಗಿದೆ. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿಯಲ್ಲಿ ದಪ್ಪನೆಯ ಕನ್ನಡಕದಲ್ಲಿ ಗಮನ ಸೆಳೆದಿದ್ದ ರಶ್ಮಿಕಾ, ಇಲ್ಲಿ ಮತ್ತೊಮ್ಮೆ ಕನ್ನಡಕಧಾರಿಣಿ.

    ಬಿ.ಕೆ.ಗಂಗಾಧರ್ ನಿರ್ಮಾಪಕರಾಗಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತವಿದೆ.

  • ಪೊಗರು'ನ ಕರಾಬು ಹಾಡಿಗೆ ಕೊರೋನಾ ಬ್ರೇಕ್

    pogaru's khabaru song release postponed

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಪೊಗರು ಚಿತ್ರದ ಕರಾಬು ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಗೆ ಕೊರೋನಾ ಬ್ರೇಕ್ ಹಾಕಿದೆ. ಅರೆ.. ಹಾಡು ರಿಲೀಸ್ ಆಗೋದು ಯೂಟ್ಯೂಬ್ ಚಾನೆಲ್ಲಲ್ಲಿ, ಅದಕ್ಕೇಕೆ ಬ್ರೇಕ್ ಹಾಕಬೇಕು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಧ್ರುವ ಸರ್ಜಾ ಕೊಟ್ಟಿರುವ ಉತ್ತರ ಅಷ್ಟೇ ಸಿಂಪಲ್.

    ಎಲ್ಲರೂ ಆತಂಕದಲ್ಲಿದ್ದಾರೆ. ಯುಗಾದಿಯ ಸಂಭ್ರಮವೂ ಇಲ್ಲ. ಎಲ್ಲರೂ ಆತಂಕದಲ್ಲಿರೋವಾಗ ನಮಗೆ ಸಂಭ್ರಮ ಬೇಕಾ ಅನ್ನೋದು ಧ್ರುವ ಸರ್ಜಾ ವಾದ.

    ಸ್ಸೋ.. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದ ಹಾಡು ಇವತ್ತಿಲ್ಲ. ಮುಂದೆ.. ಕಾದು ನೊಡೋಣ.

  • ಫೆ.19ಕ್ಕೆ ಪೊಗರು ಕನ್‍ಫರ್ಮ್

    ಫೆ.19ಕ್ಕೆ ಪೊಗರು ಕನ್‍ಫರ್ಮ್

    ಲಾಕ್ ಡೌನ್ ಮುಗಿದು, ಥಿಯೇಟರ್ ಓಪನ್ ಆದ ನಂತರ ಯಾವ ಸ್ಟಾರ್ ಸಿನಿಮಾ ಮೊದಲು ರಿಲೀಸ್ ಆಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ನ್ಯಾಷನಲ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಫಸ್ಟ್ ಮೂವಿಯಾಗಿ ಫೆಬ್ರವರಿ 19ಕ್ಕೆ ರಿಲೀಸ್ ಆಗುತ್ತಿದೆ.

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರ, ರಿಲೀಸ್ ಆಗೋಕೆ ಹೆಚ್ಚೂ ಕಡಿಮೆ 4 ವರ್ಷ ತೆಗೆದುಕೊಂಡಿದೆ. ನಿರೀಕ್ಷೆ ಇಟ್ಟುಕೊಂಡೇ ಬಂದು ಸಿನಿಮಾ ನೋಡಿ ಎಂದಿರುವ ಧ್ರುವ ಸರ್ಜಾ, ಇದು ಕೇವಲ ಆ್ಯಕ್ಷನ್ ಸಿನಿಮಾ ಅಲ್ಲ, ಭಾವನಾತ್ಮಕ ದೃಶ್ಯಗಳೂ ಇವೆ ಎಂದಿದ್ದಾರೆ.

    ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ. ಗಂಗಾಧರ್ ನಿರ್ಮಾಪಕ. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಚಂದನ್ ಶೆಟ್ಟಿ ನಿರ್ದೇಶನದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಸಾಲಿಗೆ ಸೇರಿವೆ.

  • ಫೆಬ್ರವರಿ 5ರಿಂದ ಮೇ 14 : ಸ್ಟಾರ್ ಹಬ್ಬ ಫಿಕ್ಸ್

    ಫೆಬ್ರವರಿ 5ರಿಂದ ಮೇ 14 : ಸ್ಟಾರ್ ಹಬ್ಬ ಫಿಕ್ಸ್

    ಕನ್ನಡದಲ್ಲಿ ಸ್ಟಾರ್ ಸಿನಿಮಾಗಳು ಬಂದರೆ ಪ್ರೇಕ್ಷಕರು ಥಿಯೇಟರಿಗೆ ಖಂಡಿತಾ ಬರುತ್ತಾರೆ ಎಂಬ ವಾದ, ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಸ್ಟಾರ್ ಚಿತ್ರಗಳೇ ಕ್ಯೂನಲ್ಲಿರೋದ್ರಿಂದ ಎಲ್ಲರೂ ಕುಳಿತು ಮಾತನಾಡಿ, ಒಂದಷ್ಟು ಗ್ಯಾಪ್ ಕೊಟ್ಟು ಥಿಯೇಟರಿಗೆ ಬಂದರೆ ಚಿತ್ರರಂಗಕ್ಕೇ ಒಳ್ಳೆಯದು ಎಂಬ ಅಭಿಪ್ರಾಯವೂ ಕೇಳಿ ಬಂದಿತ್ತು. ಹೀಗಾಗಿಯೇ ಎಲ್ಲ ಚಿತ್ರಗಳ ನಿರ್ಮಾಪಕರೂ ಒಟ್ಟಿಗೇ ಕುಳಿತು ಮಾತನಾಡಿಕೊಂಡು ಒಂದು ಚಿತ್ರ ಇನ್ನೊಂದು ಚಿತ್ರಕ್ಕೆ ಅಡ್ಡಿ ಮಾಡದಂತೆ ರಿಲೀಸ್ ಮಾಡುತ್ತಿದ್ದಾರೆ.

    ಫೆ.5 : ಇನ್ಸ್‍ಪೆಕ್ಟರ್ ವಿಕ್ರಂ : ಪ್ರಜ್ವಲ್ ದೇವರಾಜ್, ಭಾವನಾ ಜೋಡಿ. ಡೈರೆಕ್ಟರ್ ನರಸಿಂಹ, ನಿರ್ಮಾಪಕ ವಿಖ್ಯಾತ್

    ಫೆ.19 : ಪೊಗರು : ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಜೋಡಿ. ನಂದಕಿಶೋರ್ ನಿರ್ದೇಶನ, ಬಿ.ಕೆ.ಗಂಗಾಧರ್ ನಿರ್ಮಾಣ

    ಮಾ.11 : ರಾಬರ್ಟ್, ದರ್ಶನ್, ವಿನೋದ್ ಪ್ರಭಾಕರ್, ಆಶಾ ಭಟ್, ಸೋನಲ್ ಮಂಥೆರೋ ಕಾಂಬಿನೇಷನ್. ತರುಣ್ ಸುಧೀರ್ ನಿರ್ದೇಶನ. ಉಮಾಪತಿ ನಿರ್ಮಾಣ

    ಏ.01 : ಯುವರತ್ನ. ಪುನೀತ್ ರಾಜ್‍ಕುಮಾರ್, ಸಯೇಷಾ  ಜೋಡಿ. ಸಂತೋಷ್ ಆನಂದ ರಾಮ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣ

    ಏ.15 : ಸಲಗ, ದುನಿಯಾ ವಿಜಯ್ ನಾಯಕ ಮತ್ತು ನಿರ್ದೇಶಕ. ಸಂಜನಾ ಆನಂದ್ ನಾಯಕಿ. ಡಾಲಿ ಧನಂಜಯ್ ನಟಿಸಿರುವ ಚಿತ್ರಕ್ಕೆ ಕೆ.ಪಿ.ಶ್ರೀಕಾಂತ್ ನಿರ್ಮಾಪಕ.

    ಏ.29 : ಕೋಟಿಗೊಬ್ಬ 3. ಕಿಚ್ಚ ಸುದೀಪ್ ನಟಿಸಿರುವ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶಕ. ಸೂರಪ್ಪ ಬಾಬು ನಿರ್ಮಾಪಕ.

    ಮೇ. 14 : ಭಜರಂಗಿ 2. ಶಿವರಾಜ್ ಕುಮಾರ್, ಜಾಕಿ ಭಾವನಾ, ಶೃತಿ ನಟಿಸಿರುವ ಚಿತ್ರಕ್ಕೆ ಹರ್ಷ ನಿರ್ದೇಶಕ. ಜಯಣ್ಣ ನಿರ್ಮಾಪಕ.

  • ಬಂದೇ ಬರ್ತಾರೆ ರಶ್ಮಿಕಾ ಬಂದೇ ಬರ್ತಾರೆ..!

    ಬಂದೇ ಬರ್ತಾರೆ ರಶ್ಮಿಕಾ ಬಂದೇ ಬರ್ತಾರೆ..!

    ರಶ್ಮಿಕಾ ಮಂದಣ್ಣಗೆ ಕನ್ನಡದ ಪೊಗರು ಚಿತ್ರದ ಬಗ್ಗೆ ಇಂಟ್ರೆಸ್ಟ್ ಇಲ್ಲ. ಅವರ್ಯಾಕೆ ಪೊಗರು ಬಗ್ಗೆ ಪ್ರಮೋಟ್ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಈಗ ಚಿತ್ರತಂಡವೇ ಉತ್ತರ ಕೊಟ್ಟಿದೆ.

    ಅಂತಹುದ್ದೇನಿಲ್ಲ. ರಶ್ಮಿಕಾ ಖಂಡಿತಾ ಪೊಗರು ಚಿತ್ರದ ಪ್ರಚಾರಕ್ಕೆ ಬರುತ್ತಾರೆ. ನಾವು ಅವರ ಜೊತೆ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ ನಿರ್ದೇಶಕ ನಂದ ಕಿಶೋರ್.

    ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು, ಫೆಬ್ರವರಿ 19ರಂದು ರಿಲೀಸ್ ಆಗುತ್ತಿದೆ. ಬಿಡುಗಡೆಗೆ ಮುನ್ನ ಒಂದಿಡೀ ತಿಂಗಳು ಚಿತ್ರದ ಪ್ರಚಾರವನ್ನು ಹೈ ಲೆವೆಲ್ಲಿನಲ್ಲಿಡಲು ಚಿತ್ರತಂಡ ಪ್ಲಾನ್ ಮಾಡಿದೆ. ಪೊಗರು ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ತಮಿಳು, ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ.

    ಧ್ರುವ ಸರ್ಜಾ ನಾಯಕರಾಗಿರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ.

  • ಮಾ.27ಕ್ಕೆ ಪೊಗರುನ ಕರಾಬ್ ಸಾಂಗ್

    khabaru song on marcha 27th

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಮತ್ತು ನಂದ ಕಿಶೋರ್ ಕಾಂಬಿನೇಷನ್ನಿನ ಸಿನಿಮಾ ಪೊಗರು. ಟ್ರೇಲರಿನ ಪೊಗರು ನೋಡಿಯೇ ಥ್ರಿಲ್ಲಾಗಿರುವ ಫ್ಯಾನ್ಸ್‍ಗೆ ಮಾರ್ಚ್ 27ಕ್ಕೆ ಕರಾಬು ಸಾಂಗ್ ಮೂಲಕ ಮತ್ತೊಂದು ಥ್ರಿಲ್ ಕೊಡೋಕೆ ರೆಡಿಯಾಗಿದೆ ಪೊಗರು ಟೀಂ.

    ಮಾ.27ರಂದು ಆನಂದ್ ಆಡಿಯೋನಲ್ಲಿ ಪೊಗರು ಚಿತ್ರದ ಕರಾಬ್.. ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ. 

  • ಮಾರ್ಚ್ ಅಂತ್ಯಕ್ಕೆ ಪೊಗರು

    pogaru to release in march

    ಧ್ರುವ ಸರ್ಜಾ ಅಭಿನಯದ ಪೊಗರು ಯಾವಾಗ ರಿಲೀಸ್ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಚಿತ್ರದ ಶೂಟಿಂಗ್ ಮುಗಿಸಿದ್ದು, ಮೊದಲನೇ ಹಂತದ ಡಬ್ಬಿಂಗ್ ಕೂಡಾ ಮುಗಿದಿದೆಯಂತೆ.

    ದ್ವಿತಿಯಾರ್ಧದ ಡಬ್ಬಿಂಗ್‌ ಕೆಲಸ ನಡೆಯುತ್ತಿದೆ. ಫೆಬ್ರವರಿಯಲ್ಲಿ ಮೊದಲ ಕಾಪಿ ಬರಲಿದೆ. ಮಾರ್ಚ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಕನ್ಫರ್ಮ್ ಮಾಡಿದ್ದಾರೆ ನಿರ್ದೇಶಕ ನಂದ ಕಿಶೋರ್.

    ಧ್ರುವ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್‌ಗಳಾದ ಮೋರ್ಗನ್‌ ಆಸ್ಟೆ, ಕೈಗ್ರೀನ್‌ , ಜಾನ್‌ ಲುಕಾಸ್‌, ಜೋಸ್ಥೆಟಿಕ್ಸ್‌ ಧ್ರುವ ಜೊತೆ ಫೈಟ್ ಮಾಡಿದ್ದು, ಚಿತ್ರಕ್ಕೆ ಸಹಜವಾಗಿಯೇ ದೊಡ್ಡ ಮಟ್ಟದ ಹೈಪ್ ಸಿಕ್ಕಿದೆ. ಈ ಚಿತ್ರ ರಿಲೀಸ್ ಆದ ಮೇಲೆ ಧ್ರುವ ಅವರಿಗಾಗಿಯೇ ಮತ್ತೊಂದು ಸಿನಿಮಾ ಮಾಡಲಿದ್ದೇನೆ. ಪೊಗರು ರಿಲೀಸ್ ಆದ ಮೇಲೆ ಆ ಚಿತ್ರದ ಬಗ್ಗೆ ಹೇಳುತ್ತಾರಂತೆ ನಂದಕಿಶೋರ್.

  • ಮಾವನ ಗರಡಿ ಮನೆಯಲ್ಲಿ ಧ್ರುವ ಸರ್ಜಾ

    dhruva sarja's training in garadi mane

    ಅರ್ಜುನ್ ಸರ್ಜಾ ಅವರಿಗೆ ಈಗ 55 ವರ್ಷ. ಅಚ್ಚರಿಯಾಗಬೇಡಿ. ಅವರ ಈ ಆರೋಗ್ಯವಂತ, ಇನ್ನೂ ಚಿಕ್ಕ ವಯಸ್ಸಿನವರಂತೆಯೇ ಕಾಣುತ್ತಿರುವ ಹಿಂದಿನ ಗುಟ್ಟು ಗರಡಿ ಮನೆ. ಇವತ್ತಿಗೂ ತಮ್ಮ ಗರಡಿಮನೆಯಲ್ಲಿ ಬೆವರಿಳಿಸುವ ಧ್ರುವ ಸರ್ಜಾ, ತಮ್ಮ ದೇಹವನ್ನು ಫಿಟ್ & ಫೈನ್ ಆಗಿಟ್ಟುಕೊಂಡಿದ್ದಾರೆ. ಈಗ ಆ ಗರಡಿ ಮನೆಗೆ ಧ್ರುವ ಸರ್ಜಾ ಪ್ರವೇಶವಾಗಿದೆ.

    ಪೊಗರು ಚಿತ್ರಕ್ಕೆ ದೇಹವನ್ನು ಮತ್ತೆ ಹುರಿಗೊಳಿಸುತ್ತಿರುವ ಧ್ರುವ, ಈ ಚಿತ್ರಕ್ಕೆ ತಯಾರಾಗಲು ಮಾವನ ಗರಡಿಮನೆ ಹೊಕ್ಕಿದ್ದಾರೆ. ಮಲ್ಲಕಂಬ ಹತ್ತಿ ಕಸರತ್ತು ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಾಚೀನ ಸಾಹಸ ಕಲೆಯಾದ ಮಲ್ಲಕಂಬ ಕಸರತ್ತುಗಳನ್ನು ಬಳಸಿಕೊಳ್ಳಲಾಗುತ್ತಿದೆಯಂತೆ. 

    ಹೀರೋ ಇಂಟ್ರೊಡಕ್ಷನ್ ಆಗುವುದು ಮಲ್ಲಕಂಬ ಪ್ರದರ್ಶನದ ಮೂಲಕ. ಪೊಗರಿಗೂ ಮಲ್ಲಕಂಬಕ್ಕೂ ವಿಶೇಷ ಸಂಬಂಧವಿದೆ ಎಂದು ಹೇಳಿದ್ದಾರೆ ನಿರ್ದೇಶಕ ನಂದಕಿಶೋರ್. ಮಹಾರಾಷ್ಟ್ರದ ಮಲ್ಲಕಂಬ ಶಿಕ್ಷಕರು ಧ್ರುವ ಸರ್ಜಾಗೆ ಮಲ್ಲಕಂಬದ ಕಸರತ್ತುಗಳನ್ನು ಹೇಳಿಕೊಡುತ್ತಿದ್ದಾರೆ.

  • ಯಾರೋ.. ಯಾರೋ.. ಆ ಚೆಲುವೆ..?

    who is dhruva's heroine?

    ಧ್ರುವ ಸರ್ಜಾ, ಸತತ ಹ್ಯಾಟ್ರಿಕ್ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಒಂದರ ಹಿಂದೊಂದು ಹಿಟ್ ಕೊಟ್ಟ ಧ್ರುವಾ ಅವರ 4ನೇ ಚಿತ್ರ ಪೊಗರು ಮೇಲೆ ಭರ್ಜರಿ ನಿರೀಕ್ಷೆಗಳಿವೆ. ಚಿತ್ರಕ್ಕೆ ಮೊದಲು ಶೃತಿ ಹಾಸನ್ ನಾಯಕಿ ಎನ್ನಲಾಗಿತ್ತು. ನಂತರ ಶೃತಿ ಹಾಸನ್ ನಿರಾಕರಿಸಿದ್ದು, ಕನ್ನಡ ಚಿತ್ರಾಭಿಮಾನಿಗಳಿಂದ ಟ್ರೋಲ್ ಆಗಿದ್ದು ಹಳೆಯ ಸುದ್ದಿ.

    ಈಗ ಧ್ರುವ ಸರ್ಜಾಗೆ ನಾಯಕಿ ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಧ್ರುವ ಸರ್ಜಾ ಅವರೇ ಕನ್ನಡದ ಹುಡುಗಿಯನ್ನೇ ಹಾಕಿಕೊಳ್ಳೋಕೆ ಸಲಹೆ ಕೊಟ್ಟಿದ್ದಾರಂತೆ. ಏಕೆಂದರೆ, ಅವರ ಮೂರು ಚಿತ್ರಗಳಲ್ಲಿ ನಾಯಕಿಯಾಗಿದ್ದವರು ಕನ್ನಡತಿಯರು. ಹೀಗಾಗಿ ಚಿತ್ರತಂಡದ ಮುಂದೆ ಈಗ ಮೂರು ಆಯ್ಕೆಗಳಿವೆ. ಕಿರಿಕ್ ಪಾರ್ಟಿಯ ರಶ್ಮಿಕಾ ಮಂದಣ್ಣ, ಅತಿರಥನ ಅರಗಿಣಿ ಲತಾ ಹೆಗಡೆ ಹಾಗೂ ಶಾನ್ವಿ ಶ್ರೀವಾಸ್ತವ್.

    ಸದ್ಯಕ್ಕೆ ಯಾರೂ ಫೈನಲ್ ಆಗಿಲ್ಲ. ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಯಲ್ಲಿದೆ. ಒಟ್ಟಿನಲ್ಲಿ ಧ್ರುವ ಸರ್ಜಾ ಅವರ ಚಿತ್ರದ ಒಂದೊಂದು ಸುದ್ದಿಯೂ ಸಂಚಲನ ಸೃಷ್ಟಿಸುತ್ತಿದೆ.

  • ರಶ್ಮಿಕಾ ಜೊತೆ ಅದೇನೇನ್ ಮಾತಾಡವ್ರೆ ಧ್ರುವಾ

    pogaru dialogue trailer on oct 24th

    ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ, ರಶ್ಮಿಕಾ ನಟಿಸಲಿದ್ದಾರೆ ಎಂದಾಗಲೇ ಕುತೂಹಲ ಹುಟ್ಟಿತ್ತು. ಈಗ ಆ ಕುತೂಹಲದ ಇನ್ನೊಂದು ಮಜಲು ತೋರಿಸಲಿದ್ದಾರೆ ನಂದಕಿಶೋರ್. ಅಕ್ಟೋಬರ್ 24ಕ್ಕೆ ಪೊಗರು ಚಿತ್ರದ ಡೈಲಾಗ್ ಟ್ರೇಲರ್ ಹೊರಬೀಳಲಿದೆ. ಇನ್ನೊಂದ್ಸಲ ಓದಿಕೊಳ್ಳಿ, ಇದು ಡೈಲಾಗ್ ಟ್ರೇಲರ್ ಮಾತ್ರ. ಕಥೆಯ ಸಣ್ಣದೊಂದು ಗುಟ್ಟನ್ನೂ ಬಿಡಲ್ಲ.

    ಇನ್ನೂ ಈ ಡೈಲಾಗ್ ಟ್ರೇಲರ್‍ನಲ್ಲಿ ಧ್ರುವ ಮತ್ತು ರಶ್ಮಿಕಾ ಮಂದಣ್ಣ ನಡುವಣ ಸಂಭಾಷಣೆಗಳಷ್ಟೇ ಇರಲಿವೆ. ಅಂದರೆ.. ಪ್ರೇಮದ ಪೊಗರಿನ ಡೈಲಾಗ್ಸ್ ಎಂದರ್ಥ ಮಾಡಿಕೊಳ್ಳಿ. ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಗಳಲ್ಲಿ ಡೈಲಾಗ್‍ಗಳ ಮೂಲಕವೇ ಶಿಳ್ಳೆಯ ಕಾಣಿಕೆ ಪಡೆದಿದ್ದ ಧ್ರುವಾ, ಇಲ್ಲಿಯೂ ಅದನ್ನು ಕಂಟಿನ್ಯೂ ಮಾಡಿದ್ದಾರೆ.

  • ರಶ್ಮಿಕಾ ಪೊಗರಿನ ಸಂಭಾವನೆ ಲಕ್ಷಾನಾ..? ಕೋಟಿನಾ..?

    rashmika's remuneration creates sensation

    ರಶ್ಮಿಕಾ ಮಂದಣ್ಣ. ಸ್ಯಾಂಡಲ್‍ವುಡ್‍ನಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬೇಡಿಕೆಯಲ್ಲಿರುವ ನಟಿಯಲ್ಲಿರಲ್ಲಿ ಒಬ್ಬರು. ಅವರೀಗ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ. ಆ ಚಿತ್ರಕ್ಕೆ ಅವರು ಪಡೆದಿರುವ ಸಂಭಾವನೆಯೇ ಭರ್ಜರಿ ಸದ್ದು ಮಾಡುತ್ತಿದೆ. 

    ಒಂದು ಮೂಲದ ಪ್ರಕಾರ, ರಶ್ಮಿಕಾ ಪಡೆದಿರುವ ಸಂಭಾವನೆ 64 ಲಕ್ಷ. ಇದುವರೆಗೆ ಕನ್ನಡದ ಯಾವುದೇ ನಟಿ ಇಷ್ಟು ಸಂಭಾವನೆ ಪಡೆದಿಲ್ಲ ಎನ್ನಲಾಗುತ್ತಿದೆ. ನಿರ್ಮಾಪಕ ಗಂಗಾಧರ್ ಆಗಲೀ, ನಿರ್ದೇಶಕ ನಂದಕಿಶೋರ್ ಆಗಲೀ.. ಈ ಬಗ್ಗೆ ನೋ ಕಮೆಂಟ್ಸ್.

    ಇನ್ನೊಂದು ಮೂಲದ ಪ್ರಕಾರ ಇದು ಭಾರಿ ಮೊತ್ತವೇನೂ ಅಲ್ಲ. ತೆಲುಗು, ತಮಿಳಿನಲ್ಲಿ ಇದಕ್ಕಿಂತಲೂ ಒಳ್ಳೆಯ ಸಂಭಾವನೆ ಇದೆ. ಅದು ಕೋಟಿ ದಾಟಿದೆ. ಕನ್ನಡದಲ್ಲಿ ರಶ್ಮಿಕಾ ಅವರೇ ತಮ್ಮ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.

    ದುಡ್ಡಿನ ವಿಷ್ಯ. ಕೇಳಿದ್ರೆ ಎಲ್ಲರೂ ಶ್‍ಶ್‍ಶ್‍ಶ್‍ಶ್‍ಶ್ ಅಂತಾರೆ.

  • ರಾಬರ್ಟ್ ಬಂದ ಮೇಲಷ್ಟೇ ಪೊಗರು

    pogaru will release after roberrt

    2017, ಸೆಪ್ಟೆಂಬರ್ 15. ಭರ್ಜರಿ ರಿಲೀಸ್ ಆದ ಡೇಟ್. ಅದು ಮುಗಿದ ಕೆಲವೇ ದಿನಗಳಲ್ಲಿ ಸೆಟ್ಟೇರಿದ ಸಿನಿಮಾ ಪೊಗರು. 2 ವರ್ಷ ಕಳೆದುಹೋಗಿ, ಇನ್ನೇನು ರಿಲೀಸ್ ಆಗುವ ಡೇಟ್ ಹತ್ತಿರ ಬಂದಾಗಿದೆ. ಇದೇ ಏಪ್ರಿಲ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಆದರೆ.. ಅದೇ ತಿಂಗಳು ರಾಬರ್ಟ್ ಬರುತ್ತಿದೆ. ಹೀಗಾಗಿ ನಿರ್ದೇಶಕ ನಂದ ಕಿಶೋರ್ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ಬರೋದೇನಿದ್ದರೂ ರಾಬರ್ಟ್ ನಂತರವೇ ಎಂದಿದ್ದಾರೆ ನಂದ ಕಿಶೋರ್.

    ಚಿತ್ರ ಯಾಕೆ ಲೇಟ್ ಆಯ್ತು ಎಂದು ಹೇಳೋಕಾಗಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡಿದ್ದೇನೆ ಎನ್ನುವ ನಂದ, ಈ ಚಿತ್ರ ಧ್ರುವ ಸರ್ಜಾ ಕೆರಿಯರ್‍ನಲ್ಲಿ ಬೇರೆಯದೇ ಲೆವೆಲ್ಲಿನ ಸಿನಿಮಾ ಎನ್ನುತ್ತಾರೆ.

    ತಾಯಿ ಮತ್ತು ಬಾಂಧವ್ಯದ ಸುತ್ತ ಇರುವ ಕಥೆ ಇದು. ಸಣ್ಣ ಭಿನ್ನಾಭಿಪ್ರಾಯ ಮನುಷ್ಯನ ಮನಸ್ಸಿನ ಮೇಲೆ ಏನೆಲ್ಲ ಪರಿಣಾಮ ಬೀರುತ್ತವೆ. ನಮ್ಮ ತಪ್ಪುಗಳು, ಕರ್ಮಫಲಗಳದ್ದೇ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಧ್ರುವ ಎಕ್ಸ್‍ಟ್ರೀಮ್ ಆಗಿ ನಟಿಸಿದ್ದರೆ, ರಶ್ಮಿಕಾ ಮಂದಣ್ಣ ಸೂಕ್ಷ್ಮಮನಸ್ಸಿನ ಶಿಕ್ಷಕಿಯಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಗುರುವಿನ ಪಾತ್ರದಲ್ಲಿದ್ದಾರೆ. ಬಿ.ಕೆ.ಗಂಗಾಧರ್ ಚಿತ್ರದ ನಿರ್ಮಾಪಕ.

  • ಸ್ಟಾರ್ಸ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಸ್ಟಾರ್ಸ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಕೊರೊನಾ ಲಾಕ್‍ಡೌನ್ ಮುಗಿದು, ಥಿಯೇಟರುಗಳೆಲ್ಲ ಓಪನ್ ಆದರೂ ಸರ್ಕಾರದ ನಿರ್ಬಂಧ ಮಾತ್ರ ರಿಲ್ಯಾಕ್ಸ್ ಆಗಿಲ್ಲ. ಹೀಗಿರುವಾಗಲೇ ಥಿಯೇಟರಿಗೆ ಬರುವ ನಿರ್ಧಾರ ಮಾಡಿ ಗೆದ್ದಿದೆ ತಮಿಳಿನ ಮಾಸ್ಟರ್. ವಿಜಯ್ ಅಭಿನಯದ ಮಾಸ್ಟರ್ 50% ಸೀಟುಗಳ ನಿರ್ಬಂಧದ ನಡುವೆಯೇ ಮೊದಲ 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಅರ್ಥ ಇಷ್ಟೆ, ಪ್ರೇಕ್ಷಕರು ಸ್ಟಾರ್ ಚಿತ್ರಗಳಿಗೆ ಕಾಯುತ್ತಿದ್ದಾರೆ. ಸದ್ಯಕ್ಕೆ ಪ್ರೇಕ್ಷಕರಿಗೆ ನೊಣ ಹೊಡೆಯುತ್ತಿರುವ ಥಿಯೇಟರುಗಳು ತುಂಬೋಕೆ ಶುರುವಾಗೋದು ಸ್ಟಾರ್ ಚಿತ್ರಗಳ ಎಂಟ್ರಿ ನಂತರಾನೇ. ಸ್ಸೋ.. ಸ್ಟಾರ್ ಚಿತ್ರಗಳಿಗೆ ರಿಲೀಸ್ ಡೇಟ್ ಫಿಕ್ಸ್ ಆಗುತ್ತಿವೆ.

    ಮೊದಲ ಸ್ಟಾರ್ ಸಿನಿಮಾ ಆಗಿ ರಿಲೀಸ್ ಆಗಲಿರುವ ಚಿತ್ರ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು. ಇದು ಫೆಬ್ರವರಿ 5ರಂದು ರಿಲೀಸ್ ಆಗುತ್ತಿದೆ. ಆದರೂ ಅದೇಕೋ ಏನೋ.. ನಿರ್ಮಾಪಕ ಬಿ.ಕೆ. ಗಂಗಾಧರ್ ರಿಲೀಸ್ ಡೇಟ್‍ನ್ನು ಅಧಿಕೃತವಾಗಿ ಘೋಷಿಸುತ್ತಿಲ್ಲ.

    ನಂತರ ಬರಲಿರೋ ಚಿತ್ರ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಮೊದಲ ಬಾರಿಗೆ ದುನಿಯಾ ವಿಜಯ್ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾ ದುನಿಯಾ ಸೆಂಟಿಮೆಂಟ್ ಕಾರಣಕ್ಕೆ ಫೆ.23ರಂದು ರಿಲೀಸ್ ಮಾಡ್ತಾರೆ ಅನ್ನೋ ಲೆಕ್ಕಾಚಾರವಿದೆ. ಅಂದಹಾಗೆ, ಈ ಡೇಟ್ ಕೂಡಾ ಅಫಿಷಿಯಲ್ ಅಲ್ಲ.

    ಅಫಿಷಿಯಲ್ ಆಗಿ ಘೋಷಿಸಿಕೊಂಡಿರೋದು ದರ್ಶನ್ ಅಭಿನಯದ ರಾಬರ್ಟ್, ಮಾರ್ಚ್ 11ಕ್ಕೆ ರಿಲೀಸ್. ಪುನೀತ್ ಅಭಿನಯದ ಯುವರತ್ನ ಏಪ್ರಿಲ್ 1ಕ್ಕೆ ರಿಲೀಸ್. ಸುದೀಪ್ ಅಭಿನಯದ ಕೋಟಿಗೊಬ್ಬ 3, ಏಪ್ರಿಲ್ 23ಕ್ಕೆ ರಿಲೀಸ್.

    ಆಗಸ್ಟ್ ನಂತರ ಶಿವಣ್ಣ ಅಭಿನಯದ ಭಜರಂಗಿ 2, ಯಶ್ ಅಭಿನಯದ ಕೆಜಿಎಫ್ 2, ಸುದೀಪ್ ಅಭಿನಯದ ಪ್ಯಾಂಟಮ್, ರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ, ಗಣೇಶ್-ಭಟ್ಟರ ಕಾಂಬಿನೇಷನ್ನಿನ ಗಾಳಿಪಟ 2, ಚಿತ್ರಗಳಿವೆ.