ಧ್ರುವ ಸರ್ಜಾ ಅಭಿನಯದ ಪೊಗರು ರಿಲೀಸ್ ಯಾವಾಗ..? ಚಿತ್ರತಂಡ ಎರಡು ಡೇಟ್ ಹೇಳುತ್ತಿದೆ. ಮೊದಲನೆಯದ್ದು ಡಿಸೆಂಬರ್ 25. ಇನ್ನೊಂದು ಜನವರಿ 1.
ಸ್ಟಾರ್ ಸಿನಿಮಾ ರಿಲೀಸ್ ಆಗದೇ ಹೋದರೆ ಥಿಯೇಟರು ಭರ್ತಿಯಾಗಲ್ಲ. ಅದು ಮತ್ತೊಮ್ಮೆ ಸಾಬೀತಾಗಿದೆ. ಹೀಗಾಗಿ ಪೊಗರು ರಿಲೀಸ್ ಆಗಲಿ ಎನ್ನುವ ನಿರೀಕ್ಷೆಯೇನೋ ಇದೆ. ಇನ್ನು 20 ದಿನಗಳಲ್ಲಿ ಮೊದಲ ಪ್ರತಿ ಹೊರಬರಲಿದ್ದು, ರಿಲೀಸ್‍ಗೂ ಡೇಟ್ ಫಿಕ್ಸ್ ಮಾಡಿದೆ ಚಿತ್ರತಂಡ.
ಎರಡು ಡೇಟ್ಸ್ ಹಿಂದೆ ಕಾರಣವೂ ಇದೆ. ಸದ್ಯಕ್ಕೆ ಥಿಯೇಟರಿನಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶವಿದೆ. ಸ್ಟಾರ್ ಸಿನಿಮಾಗಳಿಗೆ ಇದು ಸಾಕಾಗಲ್ಲ. ಆದರೆ ಜನವರಿ ಹೊತ್ತಿಗೆ ಪರಿಸ್ಥಿತಿ ಸುಧಾರಿಸಿ, ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗಬಹುದು ಎಂಬ ನಿರೀಕ್ಷೆ ಚಿತ್ರತಂಡದ್ದು. ಆ ರೀತಿಯ ಸುಳಿವು ಸಿಕ್ಕರೆ ಜನವರಿ 1ಕ್ಕೆ ರಿಲೀಸ್.
ಅಕಸ್ಮಾತ್.. ಯಾವುದೇ ಬದಲಾವಣೆ ಆಗಲ್ಲ ಎಂದು ಅನ್ನಿಸಿದ್ರೆ ಡಿ.25ಕ್ಕೇ ರಿಲೀಸ್ ಮಾಡೋ ಪ್ಲಾನ್ ಚಿತ್ರತಂಡದ್ದು. ಧ್ರುವ, ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ನಂದಕಿಶೋರ್ ಡೈರೆಕ್ಟರ್. ರಾಘವೇಂದ್ರ ರಾಜ್‍ಕುಮಾರ್, ಧನಂಜಯ್, ರವಿಶಂಕರ್, ಮಯೂರಿ ಕೂಡಾ ನಟಿಸಿರುವ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ.