` dhananjay, - chitraloka.com | Kannada Movie News, Reviews | Image

dhananjay,

 • ಡಾಲಿ ಮುಂದಿನ ಚಿತ್ರ ವರ್ಮಾ ಜೊತೆನಾ..? ಸೂರಿ ಜೊತೆನಾ..?

  dhananjay to act in rgv's movie?

  ಟಗರು ಚಿತ್ರದ ಡಾಲಿ ಪಾತ್ರ ಧನಂಜಯ್‍ಗೆ ಬೇರೆಯದ್ದೇ ಇಮೇಜ್ ಕೊಟ್ಟುಬಿಟ್ಟಿದೆ. ಎಷ್ಟರಮಟ್ಟಿಗೆ ಅಂದ್ರೆ, ಧನಂಜಯ್ ನಟನೆಗೆ ಖುದ್ದು ರಾಮ್ ಗೋಪಾಲ್ ವರ್ಮಾ ಮರುಳಾಗಿ ಹೋಗಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ಧನಂಜಯ್‍ಗೆ ಪ್ರಮುಖ ಪಾತ್ರವೊಂದನ್ನು ಫಿಕ್ಸ್ ಮಾಡಿರುವ ವರ್ಮಾ, ಈಗಾಗಲೇ ಧನಂಜಯ್ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ.

  ಹೈದರಾಬಾದ್‍ನಲ್ಲಿ ವರ್ಮಾ ಮತ್ತು ಧನಂಜಯ್ ನಡುವೆ ಒಂದು ಸುತ್ತಿನ ಮಾತುಕತೆ ಮುಗಿದಿದೆ. ಸಬ್ಜೆಕ್ಟ್ ಕುರಿತು ಡಿಸ್ಕಷನ್ ಕೂಡಾ ಆಗಿದೆಯಂತೆ. ಸದ್ಯಕ್ಕೆ ಗೊತ್ತಾಗಿರುವ ಮಾಹಿತಿ ಇಷ್ಟು ಮಾತ್ರ.

  ಇತ್ತ ಸೂರಿ ಕೂಡಾ ಧನಂಜಯ್ ಅವರನ್ನೇ ಕಲ್ಪನೆಯಲ್ಲಿಟ್ಟುಕೊಂಡು ಹೊಸ ಕಥೆ ಬರೆಯುತ್ತಿದ್ದಾರೆ. ಧನಂಜಯ್ ಜೊತೆ ಒಟ್ಟು ಎರಡು ಸಿನಿಮಾ ಮಾಡುವ ಸೂಚನೆ ಕೊಟ್ಟಿದ್ಧಾರೆ ಸೂರಿ.

  ಹಾಗಾದರೆ ಧನಂಜಯ್ ಮುಂದಿನ ಸಿನಿಮಾ ಯಾರ ಜೊತೆ..? ಸೂರಿ ಜೊತೆನಾ..? ವರ್ಮಾ ಜೊತೆನಾ..

 • ದರ್ಶನ್ ಎದುರು ಮಿಠಾಯಿ ಸೂರಿ

  dolly dhananjay as mitayi soori in yajamana

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ಸ್ಟಾರ್‍ಗಳಿದ್ದಾರೆ. ದೇವರಾಜ್, ರವಿಶಂಕರ್, ಅನೂಪ್ ಸಿಂಗ್, ರಶ್ಮಿಕಾ ಮಂದಣ್ಣ.. ಹೀಗೆ ಹಲವು ಸ್ಟಾರ್‍ಗಳು ನಟಿಸಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ನಟಿಸಿದ್ದಾರೆ. ಒನ್ಸ್ ಎಗೇಯ್ನ್ ವಿಲನ್.

  ಚಿತ್ರದಲ್ಲಿ ಡಾಲಿ ಧನಂಜ್ ಅವರ ಪಾತ್ರದ ಹೆಸರು ಮಿಠಾಯಿ ಸೂರಿ. ಧನಂಜಯ್ ಅವರ ಹೇರ್ ಸ್ಟೈಲ್, ಮ್ಯಾನರಿಸಂ ಎಲ್ಲವೂ ಡಿಫರೆಂಟ್ ಆಗಿಯೇ ಇದೆ. ದರ್ಶನ್ ಎದುರು ವಿಲನ್ ಆಗುವವರೂ ಅಷ್ಟೇ ಖಡಕ್ ಆಗಿರಬೇಕು. ಒಟ್ಟಿನಲ್ಲಿ ಕೇಡಿಗೆ ಕೇಡಿಯಾಗಿ ಯಜಮಾನನನಿಗೆ ಠಕ್ಕರ್ ಕೊಟ್ಟಿದ್ದಾರೆ ಧನಂಜಯ್. ಹೇಗೆ ಠಕ್ಕರ್ ಕೊಟ್ಟಿದ್ದಾರೆ ಅನ್ನೋದು ಮಾರ್ಚ್ 1ಕ್ಕೆ ಗೊತ್ತಾಗಲಿದೆ.

 • ದರ್ಶನ್‍ಗೆ ಧನಂಜಯ್ ಚಾಲೆಂಜ್

  dhananjay challenges darshan

  ಧನಂಜಯ್, ಅಭಿಮಾನಿಗಳ ಪಾಲಿನ ಧನೂ ಬಾಸ್. ಹಲವು ಚಿತ್ರಗಳಲ್ಲಿ ಹೀರೋ ಆಗಿ ಮಿಂಚಿರುವ ಧನಂಜಯ್, ದರ್ಶನ್ ಚಿತ್ರದಲ್ಲಿ ಮತ್ತೊಮ್ಮೆ ವಿಲನ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಮೊದಲು ಯಾವಾಗ ನಟಿಸಿದ್ದರು ಅಂತೀರಾ. ಅದು ಟಗರು ಚಿತ್ರದಲ್ಲಿ. ಶಿವರಾಜ್ ಕುಮಾರ್ ಎದುರು ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಂಡಿರುವ ಧನಂಜಯ್, ಆ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಮಯದಲ್ಲೇ ದರ್ಶನ್ ಅವರ 51ನೇ ಚಿತ್ರದಲ್ಲಿ ವಿಲನ್ ಆಗಲು ರೆಡಿಯಾಗಿದ್ದಾರೆ.

  ಹೀರೋ ಆಗಿ ನಟಿಸಿದ್ದೇನೆ. ಜನ ನನ್ನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಹೀರೋ ಆಗಿ ಮಾಡುತ್ತಲೇ, ವಿಲನ್ ರೋಲ್ ಮಾಡೋಕೂ ನಾನು ರೆಡಿ ಎಂದಿದ್ದಾರೆ ಧನಂಜಯ್. 

  ಶಿವರಾಜ್ ಕುಮಾರ್ ಎದುರು ನಟಿಸಲು ಸಿಕ್ಕ ಅವಕಾಶವನ್ನು ಯಾರಾದರೂ ಮಿಸ್ ಮಾಡಿಕೊಳ್ತಾರಾ..? ಟಗರು ಚಿತ್ರದಲ್ಲಿನ ಡಾಲಿ ಪಾತ್ರ ನನಗೆ ಬೇರೆಯದ್ದೇ ಇಮೇಜ್ ಕೊಡಲಿದೆ. ಇನ್ನು ದರ್ಶನ್ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಕೇಳಿದ್ದೇ ತಡ, ಅವರ ತಂದೆ ಫೋನ್ ಮಾಡಿ ಅಭಿನಂದಿಸಿದರಂತೆ. 

  ಖಳನಾಯಕನ ಪಾತ್ರ ಮಾಡೋಕೆ ಸ್ಫೂರ್ತಿ ಇನ್ನೇನೂ ಅಲ್ಲ, ಜಲೀಲನ ಪಾತ್ರ. ಅಂಬರೀಷ್ ಹೀರೋ ಆಗಿ ಎಷ್ಟೇ ಚಿತ್ರಗಳಲ್ಲಿ ನಟಿಸಿದ್ದರೂ, ಜನ ಅವರನ್ನು ಜಲೀಲ ಎಂದೇ ಗುರುತಿಸುತ್ತಾರೆ. ಅದು ಪಾತ್ರಕ್ಕಿರುವ ಶಕ್ತಿ ಅಂಥಾರೆ ಧನಂಜಯ್. ಇನ್ನೂ ಚಿತ್ರದ ಟೈಟಲ್ ಕೂಡಾ ಬಿಡುಗಡೆ ಮಾಡದ ಚಿತ್ರತಂಡ, ದರ್ಶನ್ ಅವರ ಹುಟ್ಟುಹಬ್ಬದ ದಿನ ಎಲ್ಲವನ್ನೂ ಬಹಿರಂಗಪಡಿಸುವ ಸೂಚನೆ ಕೊಟ್ಟಿದೆ. ವೇಯ್ಟಿಂಗ್.

 • ನವರಸ ನಾಯಕನ ಜೊತೆ ಡಾಲಿ

  dhananjay shares screen with jaggesh in thotapuri

  ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಚಿತ್ರದಲ್ಲಿ ಹೀರೋ ಆಗಿರುವುದು ನವರಸ ನಾಯಕ ಜಗ್ಗೇಶ್. ಸಿದ್ಲಿಂಗು, ನೀರ್‍ದೋಸೆ ನಿರ್ದೇಶಿಸಿದ್ದ ವಿಜಯ್ ಪ್ರಸಾದ್, ಮತ್ತೊಮ್ಮೆ ಜಗ್ಗೇಶ್ ಅವರ ನಾಯಕತ್ವದಲ್ಲೇ ಚಿತ್ರ ಕೈಗೆತ್ತಿಕೊಂಡಿದ್ದಾರೆ. ವಿಜಯ್ ಪ್ರಸಾದ್ ಅವರ ಫೇವರಿಟ್ ಸುಮನ್ ರಂಗನಾಥ್ ಚಿತ್ರಕ್ಕೆ ನಾಯಕಿ. ಇದೆಲ್ಲದರ ಜೊತೆಗೆ ಡಾಲಿ ಧನಂಜಯ್ ಕೂಡಾ ಇದ್ದಾರೆ.

  ತೋತಾಪುರಿ ಕಥೆ ಕೇಳಿದೆ. ಇಷ್ಟವಾಯಿತು. ವಿಜಯ್ ಪ್ರಸಾದ್ ಅವರ ಸಿದ್ಲಿಂಗು, ನೀರ್‍ದೋಸೆ ಸಿನಿಮಾ ನೋಡಿದ್ದೆ. ಇಷ್ಟವಾಗಿದ್ದವು. ಜೊತೆಗೆ ಜಗ್ಗೇಶ್ ಅವರೊಂದಿಗೆ ನಟಿಸುವ ಅವಕಾಶ. ಹೀಗಾಗಿ ಚಿತ್ರವನ್ನು ಮರುಮಾತಿಲ್ಲದೆ ಒಪ್ಪಿಕೊಂಡೆ ಅಂತಾರೆ ಧನಂಜಯ್.

  ಶೂಟಿಂಗ್ ಬಿರುಸಾಗಿ ನಡೆಯುತ್ತಿದ್ದು, ಧನಂಜಯ್ ಶೀಘ್ರದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

 • ಮಂಕಿ.. ಗಾಗಿ ತಲೆ ಬೋಳಿಸಿಕೊಂಡ ಡಾಲಿ

  dhananjay goes bald for suri's next

  ಡಾಲಿ ಧನಂಜಯ್ ಪಾಪ್‍ಕಾರ್ನ್ ಟೈಗರ್ ಮಂಕಿ ಚಿತ್ರಕ್ಕಾಗಿ ತಲೆ ಬೋಳಿಸಿಕೊಂಡು ನಿಂತಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಧನಂಜಯ್ ಅವರ ಪಾತ್ರದ ಲುಕ್ ರಿವೀಲ್ ಆಗಿದೆ. ಗಡ್ಡ, ಮೀಸೆಯಿಲ್ಲದ ಬೋಳು ತಲೆ, ಬೋಳು ತಲೆಯ ಮೇಲೆ ರಕ್ತದಲ್ಲೇ ಇಂಗ್ಲಿಷ್‍ನಲ್ಲಿ  ಬರೆದಿರುವ ಮಂಕಿ, ಕಣ್ಣಿನಲ್ಲೇ ಕೆಂಡ ಕಾರುತ್ತಿರುವ ಧನಂಜಯ್ ರಗಡ್ ಆಗಿ ಕಾಣಿಸುತ್ತಿದ್ದಾರೆ. ಅಫ್‍ಕೋರ್ಸ್.. ಎಷ್ಟೆಂದರೂ ಅದು ಸೂರಿ ಸಿನಿಮಾ.

  ಕೆ.ಎಂ. ಸುಧೀರ್ ನಿರ್ಮಾಣದ ಚಿತ್ರದಲ್ಲಿ ನಿವೇದಿತಾ ನಾಯಕಿ. ಆದರೆ, ಅಚ್ಚರಿ ಅದಲ್ಲ, ಧನಂಜಯ್ ಕೈತುಂಬಾ ಚಿತ್ರಗಳು ತುಂಬಿಕೊಂಡಿವೆ. ಯುವರತ್ನ, ಪೊಗರು, ಡಾಲಿ, ಸಲಗ ಚಿತ್ರಗಳ ಚಿತ್ರೀಕರಣ ಇನ್ನೂ ಆಗಿಲ್ಲ. ಅವೆಲ್ಲವನ್ನೂ ಬದಿಗಿಟ್ಟು ಗೆಟಪ್ ಬದಲಿಸಿಕೊಂಡಿದ್ದಾರೆ ಡಾಲಿ ಧನಂಜಯ್.

   

 • ಮಿಠಾಯಿ ಸೂರಿಗೆ ಮಿಠಾಯಿ ಕೊಡೋರೇ ಇಲ್ವಂತೆ.. ಪಾಪ..!

  mitayi suri has no lady love in yajamana movie

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ಮಿಠಾಯಿ ಸೂರಿ ಅನ್ನೋ ಪಾತ್ರವಿದೆ. ಆ ಪಾತ್ರ ಮಾಡಿರೋದು ಡಾಲಿ ಧನಂಜಯ್. ಟಗರು ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದಿದ್ದ ಧನಂಜಯ್, ಇಲ್ಲಿ ಪುಟ್ಟದೊಂದು ಪಾತ್ರ ಮಾಡಿದ್ದಾರೆ. ಮಿಠಾಯಿ ಸೂರಿಯಾಗಿದ್ದಾರೆ.

  `ನನ್ನದು ಮಿಠಾಯಿ ಸೂರಿ ಪಾತ್ರ. ಹುಂಬತನವೇ ಮೈವೆತ್ತಿಕೊಂಡಿರುವ ಕ್ಯಾರೆಕ್ಟರ್. ಸಿಕ್ಕಾಪಟ್ಟೆ ಕಿರಿಕ್ ಮಾಡುತ್ತೆ. ಆದರೆ ವಿಲನ್ ಅಲ್ಲ' ಎನ್ನುವ ಧನಂಜಯ್ ಅವರಿಗೆ ಅದೊಂದೇ ಬೇಜಾರು.

  ಮಿಠಾಯಿ ಸೂರಿಗೆ ಮಿಠಾಯಿ ತಿನ್ನಿಸೋರೇ ಇಲ್ಲ. ಸಿಂಗಲ್. ಅರ್ಥಾತ್.. ಮಿಠಾಯಿ ಸೂರಿಗೆ ಹೀರೋಯಿನ್ ಇಲ್ಲ.

  ಯಜಮಾನ ಚಿತ್ರ ಮಾರ್ಚ್ 1ರಂದು ತೆರೆಗೆ ಬರುತ್ತಿದ್ದು, ಭರ್ಜರಿ ಓಪನಿಂಗ್ ಎದುರು ನೋಡುತ್ತಿದೆ.

 • ಯುವರತ್ನ ಅಪ್ಪು ಎದುರೂ ಡಾಲಿನೇ ವಿಲನ್..!

  dhananjay to play baddie in puneeth's yuvaratna

  ಟಗರು ಚಿತ್ರದ ಡಾಲಿ ಪಾತ್ರದ ನಂತರ ಹೀರೋ, ವಿಲನ್ ಎಂದು ತಲೆಕೆಡಿಸಿಕೊಳ್ಳದ ಧನಂಜಯ್, ಇಷ್ಟವಾದ ಪಾತ್ರಗಳನ್ನೆಲ್ಲ ಮಾಡುತ್ತಿದ್ದಾರೆ. ಈಗ ಪುನೀತ್ ಅವರ ಯುವರತ್ನ ಚಿತ್ರಕ್ಕೆ ವಿಲನ್ ಆಗಿ ಕಮಿಟ್ ಆಗಿದ್ದಾರೆ. ಅಲ್ಲಿಗೆ ಇದು ಅವರಿಗೆ ವಿಲನ್ ಆಗಿ 3ನೇ ಸಿನಿಮಾ. ಏಕಂದ್ರೆ, ಈಗಾಗಲೇ ಟಗರುನಲ್ಲಿ ವಿಲನ್ ಆಗಿದ್ರು. ಧ್ರುವ ಸರ್ಜಾರ ಪೊಗರುನಲ್ಲೂ ಅವರೇ ವಿಲನ್ನು. ಜಗಪತಿ ಬಾಬು ಜೊತೆ. ಈಗ ಯುವರತ್ನ ಚಿತ್ರಕ್ಕೂ ವಿಲನ್. ದುನಿಯಾ ವಿಜಿಯವರ ಸಲಗ ಚಿತ್ರದಲ್ಲೂ ಅವರೇ ವಿಲನ್ ಅಂತೆ.

  ಅಂದಹಾಗೆ.. ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಅವರು ವಿಲನ್ ಅಲ್ಲ. ತೋತಾಪುರಿಯಲ್ಲೂ ಅವರದ್ದು ಸಣ್ಣ ಪಾತ್ರ.

  ಇದೆಲ್ಲದರ ಜೊತೆಗೆ ಹೀರೋ ಆಗಿ ಪಾಪ್‍ಕಾರ್ನ್ ಮಂಕಿ ಟೈಗರ್, ಡಾಲಿ ಚಿತ್ರಗಳಿವೆ. 

  `ನಾನು ಬಂದಿದ್ದು ರಂಗಭೂಮಿಯಿಂದ. ಕೊಟ್ಟ ಪಾತ್ರಕ್ಕೆ ಜೀವ ತುಂಬಬೇಕು. ಇಂಥದ್ದೇ ಪಾತ್ರ ಎಂದು ಕೂರಬಾರದು. ಈ ಕಾರಣಕ್ಕೆ ಸಿಗುತ್ತಿರುವ, ಇಷ್ಟವಾಗುತ್ತಿರುವ ಪಾತ್ರಗಳನ್ನು ಹೀರೋ, ವಿಲನ್, ಪೋಷಕ ಪಾತ್ರ ಎಂದು ನೋಡದೆ ಒಪ್ಪಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ ಧನಂಜಯ್.

 • ವಿಲನ್‍ಗಳಿಗೆ ಸೂರಿ ಕೊಡ್ತಾರೆ ಡಿಫರೆಂಟ್ ಸರ್‍ನೇಮ್..!

  suri's different names to his villain

  ದುನಿಯಾ ಸೂರಿ ತಮ್ಮ ಚಿತ್ರಗಳಲ್ಲಿ ವಿಲನ್‍ಗಳಿಗೆ ಸರ್‍ನೇಮ್ ಕೊಡೋದ್ರಲ್ಲಿ ಫೇಮಸ್. ದುನಿಯಾದಲ್ಲಿ ಯೋಗಿಗೆ ಲೂಸ್ ಮಾದ ಅನ್ನೋ ಹೆಸರು ಕೊಟ್ಟಿದ್ದು, ಇಂದಿಗೂ ಅವರಿಗೆ ಅಂಟಿಕೊಂಡೇ ಇದೆ. ಮೊಟ್ಟೆ, ಜಂಗ್ಲಿ, ಕಡ್ಡಿಪುಡಿ, ಮಾಮು.. ಹೀಗೆ ದುನಿಯಾ ಸೂರಿಯ ಚಿತ್ರಗಳಲ್ಲಿ ವಿಲನ್ ಪಾತ್ರಗಳಿಗೆ, ರೌಡಿ ಪಾತ್ರಗಳಿಗೆ ಥರಹೇವಾರಿ ಹೆಸರು ಕೊಡ್ತಾರೆ ಸೂರಿ. ಟಗರು ಚಿತ್ರದಲ್ಲೂ ಅದು ಕಂಟಿನ್ಯೂ ಆಗಿದೆ.

  ಚಿಟ್ಟೆ ಅನ್ನೋ ರೌಡಿಯ ಪಾತ್ರದಲ್ಲ ವಸಿಷ್ಟ ಸಿಂಹ ನಟಿಸಿದ್ದಾರೆ. ಅದೊಂಥರಾ ಡಿಫರೆಂಟ್ ರೌಡಿಯ ಪಾತ್ರ. ಹಾಡು ಬರೆಯುವ ಭಾವನಾ ಜೀವಿ ರೌಡಿಯ ಪಾತ್ರ ಚಿಟ್ಟೆಯದ್ದು.

  ಇನ್ನು ಡಾಲಿಯಾಗಿರೋದು ಧನಂಜಯ್. ಸುಮಾರು ಚಿತ್ರಗಳಲ್ಲಿ ಹೀರೋ ಆಗಿದ್ದ ಧನಂಜಯ್, ಈ ಚಿತ್ರದಲ್ಲಿ ಇಡೀ ಚಿತ್ರದ ಅತ್ಯಂತ ಕೆಟ್ಟ ಖಳನಾಯಕನ ಪಾತ್ರ ಮಾಡಿದ್ದಾರೆ. ಧನಂಜಯ್‍ಗೆ ರಾಟೆ ಮೂಲಕ ಹೀರೋ ಮಾಡಿದ್ದ ಸೂರಿ, ಟಗರು ಮೂಲಕ ವಿಲನ್ ಮಾಡಿರೋದು ವಿಶೇಷ.

  ಕಾಕ್ರೋಚ್ ಅನ್ನುವ ಪಾತ್ರ ಡಾಲಿಯ ತಮ್ಮ. ಈ ಪಾತ್ರದಲ್ಲಿ ಹೊಸ ಹುಡುಗ ಸುಧೀರ್ ನಟಿಸಿದ್ದಾರೆ. ಬೇಬಿ ಕೃಷ್ಣ ಆಗಿ ದೇವನಾಥ, ಅಂಕಲ್ ಆಗಿ ಸಚ್ಚು ನಟಿಸಿದ್ದಾರೆ. 

  ಅಂದಹಾಗೆ ಇವರೆಲ್ಲರೂ ಸಿನಿಮಾದಲ್ಲಿ ಟಗರು ಶಿವ ರಾಜ್‍ಕುಮಾರ್‍ಗೆ ಎದುರಾಗ್ತಾರೆ. ಕ್ರೈಂ ಚೇಸಿಂಗ್ ಶುರುವಾಗುತ್ತೆ. ನಾಳೆಯಿಂದ.

 • ಶಿವಣ್ಣ ಟಗರು ಸ್ಟೆಪ್ ಹಿಂದಿನ ಕಥೆ

  tagaru movie image

  ಶಿವರಾಜ್ ಕುಮಾರ್ ಸಿನಿಮಾದಲ್ಲಿ ಡ್ಯಾನ್ಸ್ ಅದ್ಭುತವಾಗಿರುತ್ತೆ. 54 ದಾಟಿದ್ದರೂ ಶಿವಣ್ಣ ಡ್ಯಾನ್ಸ್‍ನ ಖದರು ಕಡಿಮೆಯಾಗಿಲ್ಲ. ಅದು ಟಗರು ಚಿತ್ರದಲ್ಲಿಯೂ ಕಂಟಿನ್ಯೂ ಆಗಿದೆ.

  ಟಗರು ಚಿತ್ರದಲ್ಲಿ ಶಿವರಾಜ್ ಕುಮಾರ್ ವಿಶೇಷ ಸ್ಟೆಪ್ ಹಾಕಿದ್ದಾರಂತೆ. ಟಗರು.. ಟಗರು ಹಾಡಿಗೆ ಕೊರಿಯಾಗ್ರಫಿ ಮಾಡಿರೋದು ಸ್ವತಃ ಸೂರಿ. ಏನಾದರೂ ಹೊಸದಾಗಿ ಟ್ರೈ ಮಾಡೋಣ. ರೊಟೀನ್ ಬೇಡ ಎನ್ನುವ ಶಿವರಾಜ್ ಕುಮಾರ್ ಉತ್ಸಾಹ ಹಾಗೂ ಏನೇ ಹೇಳಿದರೂ  ಮಾಡೋಣ ಬಿಡಿ ಎನ್ನುವ ಅವರ ಬದ್ಧತೆಯೇ ಈ ಹಾಡು ಮತ್ತು ನೃತ್ಯ ನಿರ್ದೇಶನಕ್ಕೆ ಪ್ರೇರಣೆ ಎನ್ನುತ್ತಾರೆ ಸೂರಿ.

  ಇದೇ ಹಾಡಿಗೆ ಟಗರು ಚಿತ್ರದ ಆಡಿಯೋ ರಿಲೀಸ್‍ನಲ್ಲಿ ಹೆಜ್ಜೆ ಹಾಕಲು ಶಿವರಾಜ್‍ಕುಮಾರ್ ರೆಡಿಯಾಗುತ್ತಿದೆ. ರಾಜು ಎನ್ನುವವರ ಸಹಾಯದಿಂದ ಕೊರಿಯೋಗ್ರಫಿ ಮಾಡಿದ್ದೇನೆ ಎನ್ನುವ ಸೂರಿ, ಡಿ.23ಕ್ಕೆ ಹೊಸಪೇಟೆಯಲ್ಲಿ ಆಡಿಯೋ ಬಿಡುಗಡೆಗೆ ಸಿದ್ಧರಾಗುತ್ತಿದ್ದಾರೆ. ಯಾವುದೇ ರಿಹರ್ಸಲ್ ಇಲ್ಲದೆ ಮಾಡಿರುವ ಈ ಹಾಡು ಟ್ರೆಂಡ್ ಆಗಿಯೇ ಆಗುತ್ತೆ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ ಸೂರಿ.

 • ಸಲಗನಿಗೆ ಲಕ್ಕಿ ಸಿದ್ದು ಆಶೀರ್ವಾದ

  siddaramaiah wishes salaga team

  ದುನಿಯಾ ವಿಜಯ್ ಅಭಿನಯದ, ಅವರೇ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸಲಗ ಚಿತ್ರ, ಆಷಾಡಕ್ಕೆ ಮೊದಲೇ ಸೆಟ್ಟೇರಿದೆ. ವಿಶೇಷವೆಂದರೆ ಚಿತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಶೀರ್ವಾದ ಸಿಕ್ಕಿರುವುದು.

  ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಮೈಲಾರಿ ಹಾಗೂ ಟಗರು ಚಿತ್ರಗಳಿಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದವರು ಸಿದ್ದರಾಮಯ್ಯ. ಎರಡೂ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್. ಈಗ ಸಲಗ ಸಿನಿಮಾಗೆ ಸಿದ್ದು ಶುಭಕೋರಿದ್ದಾರೆ, ಶ್ರೀಕಾಂತ್ ಮತ್ತೊಂದು ಗೆಲುವಿನ ಕನಸು ಕಾಣುತ್ತಿದ್ದಾರೆ.

  ಸಲಗದ ಕಥೆ ನನಗೆ ಗೊತ್ತಿಲ್ಲ. ವಿಜಯ್ ಹೇಳಿಲ್ಲ. ಅದರೆ, ಗುಂಪು ಸಲಗಗಳಿಗಿಂತ ಒಂಟಿಸಲಗಗಳು ಹೆಚ್ಚು ಅಪಾಯಕಾರಿ ಎಂದ ಸಿದ್ದರಾಮಯ್ಯ, ತಾವು ದುನಿಯಾ ವಿಜಯ್ ಅಭಿನಯದ ಎರಡು ಚಿತ್ರಗಳನ್ನು ನೋಡಿದ್ದೇನೆ ಎಂದು ನೆನಪಿಸಿಕೊಂಡರು.

  ಮುಹೂರ್ತ ಸಮಾರಂಭಕ್ಕೆ ಕಿಚ್ಚ ಸುದೀಪ್, ರಾಘವೇಂದ್ರ ರಾಜ್‍ಕುಮಾರ್, ಸಂಸದ ಡಿ.ಕೆ.ಸುರೇಶ್ ಮೊದಲಾದವರು ಹಾಜರಿದ್ದು ಶುಭ ಹಾರೈಸಿದರು.

 • ಸೂರಿಯ ಪಾಪ್‍ಕಾರ್ನ್ ನಿವೇದಿತಾ

  niveditha in popcorn monkey tiger

  ಪಾಪ್‍ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಾಯಕಿಯಾಗಿ ನಿವೇದಿತಾ ಬಂದಿದ್ದಾರೆ. ಶುದ್ಧಿ ಚಿತ್ರದ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳದ ನಿವೇದಿತಾ, ರಂಗಭೂಮಿ, ಪತ್ರಿಕೆಯಲ್ಲಿ ಅಂಕಣಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಸೂರಿಯ ಚಿತ್ರದಲ್ಲಿ ದೇವಿಕಾ ಆಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಮೂವರು ನಾಯಕಿಯರಂತೆ. ಆ ಮೂರು ನಾಯಕಿಯರಲ್ಲಿ ನಿವೇದಿತಾ ಅವರದ್ದು ಪ್ರಮುಖ ಪಾತ್ರ.

  ಅವ್ವ ಚಿತ್ರದಲ್ಲಿ ಸ್ಮಿತಾ ಆಗಿದ್ದಾಗಿನಿಂದಲೂ ನಾನು ನಿವೇದಿತಾ ಅವರನ್ನು ನೋಡಿದ್ದೇನೆ. ಆಕೆಗೆ ಕಂಗನಾ, ವಿದ್ಯಾಬಾಲನ್ ರೀತಿ, ಭಾವನೆಗಳನ್ನು ಸಲೀಸಾಗಿ ಹೊರಹೊಮ್ಮಿಸುವ ಶಕ್ತಿಯಿದೆ. ಹೀಗಾಗಿ ಪಾಪ್‍ಕಾರ್ನ್ ಚಿತ್ರದ ಪಾತ್ರಕ್ಕೆ ಆಕೆ ಸೂಕ್ತ ಆಯ್ಕೆ ಎನ್ನಿಸಿತು ಎಂದು ಹೇಳಿಕೊಂಡಿದ್ದಾರೆ ಸೂರಿ.

  ಕೆಲವು ನಿರ್ದೇಶಕರ ಜೊತೆ ಕೆಲಸ ಮಾಡಲೇಬೇಕು ಎಂಬ ಆಸೆಯಿರುತ್ತೆ. ನಾನು ಹಾಗೆ ಆಸೆಪಟ್ಟ ನಿರ್ದೇಶಕರಲ್ಲಿ ಸೂರಿ ಸರ್ ಒಬ್ಬರು. ಈಗ ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪಾತ್ರದ ಎಳೆಯನ್ನು ವಿವರಿಸಿದ್ದಾರೆ. ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ ನಿವೇದಿತಾ.

  ಟಗರು ಚಿತ್ರದ ನಂತರ, ಈ ಚಿತ್ರದಲ್ಲೂ ಕೆ.ಪಿ.ಶ್ರೀಕಾಂತ್, ಸೂರಿ ಜೋಡಿ ಒಂದಾಗುತ್ತಿದೆ. ಸುರೇಂದ್ರನಾಥ್ ಅವರೇ ಸೂರಿಯ ಜೊತೆ ಕಥೆ ಬರೆಯೋಕೆ ಕುಳಿತಿದ್ದಾರೆ. ಡಾಲಿ ಧನಂಜಯ್ ಹೀರೋ ಆಗಿರುವ ಚಿತ್ರದ ಚಿತ್ರೀಕರಣ ಜೂನ್‍ನಿಂದ ಶುರುವಾಗಲಿದೆ.

  ಅಂದಹಾಗೆ.. ಪಾಪ್‍ಕಾರ್ನ್ ಮಂಕಿ ಟೈಗರ್ ಅನ್ನೋ ಟೈಟಲ್ ಕೊಟ್ಟಿದ್ದು ದುನಿಯಾ ಸೂರಿ ಪುತ್ರ ಪೃಥ್ವಿಯಂತೆ.

 • ಹೆಂಗೈತೆ ಟಗರು..? ಶಿವಣ್ಣ ಕೂಡಾ ವೇಯ್ಟಿಂಗ್..!

  shivarajkumar eager to watch tagaru

  ಟಗರು ಚಿತ್ರದ ಬಗ್ಗೆ ಪ್ರೇಕ್ಷಕರು, ಅಭಿಮಾನಿಗಳ ಜೊತೆ ಅಷ್ಟೇ ಕುತೂಹಲದಿಂದ ಕಾಯುತ್ತಿರುವ ಮತ್ತೊಬ್ಬ ವ್ಯಕ್ತಿ ಶಿವರಾಜ್‍ಕುಮಾರ್. ಕಡ್ಡಿಪುಡಿ ನನ್ನ ಚಿತ್ರಜೀವನದಲ್ಲಿಯೇ ಒಂದು ಫೈನೆಸ್ಟ್ ಸಿನಿಮಾ ಎಂದಿರುವ ಶಿವ ರಾಜ್‍ಕುಮಾರ್, ಸೂರಿ ಜೊತೆ ಆಗಲೇ ಮತ್ತೊಮ್ಮೆ ಕೆಲಸ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಅದು ಮತ್ತೊಮ್ಮೆ ಟಗರು ಚಿತ್ರದಲ್ಲಿ ನನಸಾಗಿದೆ.

  ಇದು ಕ್ರೈಂ ಚೇಸಿಂಗ್ ಸ್ಟೋರಿ ಎನ್ನುವ ಶಿವಣ್ಣ, ಚಿತ್ರದ ಕಥೆ, ಮೇಕಿಂಗ್ ಪ್ರತಿಯೊಂದು ಕೂಡಾ ವಿಭಿನ್ನ ಫೀಲ್ ಕೊಡುತ್ತೆ. ಚಿತ್ರದ ಸೌಂಡಿಂಗ್ ಕೂಡಾ ಅದ್ಭುತವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಚರಣ್‍ರಾಜ್‍ರನ್ನು ಹೊಗಳಿದ್ದಾರೆ. ಸೂರಿ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ವಿಭಿನ್ನವಾದ ಸಿನಿಮಾ ಹುಟ್ಟೋದು ವಿಭಿನ್ನ ಜನ ಒಟ್ಟಿಗೇ ಸೇರಿದಾಗ ಮಾತ್ರ. ಅದು ಟಗರುನಲ್ಲಿ ಸಾಧ್ಯವಾಗಿದೆ. ಚಿತ್ರ ನೋಡೋಕೆ ನಾನೂ ಕುತೂಹಲದಿಂದ ಕಾಯತ್ತಿದ್ದೇನೆ ಎಂದು ನಿರೀಕ್ಷೆ ಬಿಚ್ಚಿಟ್ಟಿದ್ದಾರೆ ಶಿವಣ್ಣ.

I Love You Movie Gallery

Rightbanner02_butterfly_inside

One Way Movie Gallery