` big boss 5, - chitraloka.com | Kannada Movie News, Reviews | Image

big boss 5,

 • Ashitha Eliminated This Week From Big Boss 5

  big boss 5

  This week it was Ashitha who got eliminated in Sudeep's Popular reality show Big Boss Kannada.

  Ashitha was one of the loved contestant in the show. She was usually quiet in the show and in previous episodes, host Sudeep had advised her to be a little more active in the show.

   

   

 • Countdown Starts For Big Boss 5

  count down for big boss 5 begins

  The countdown has started for the fifth edition of the 'Big Boss 5'. The programme is all set to start today evening at 6 PM.

  Though there are few hours left for the show, the names of the participants has not yet been divulged. Earlier, it was being said that actor Rajesh Nataranga, Vijayalakshmi, Tejaswini and others will be participating in the show. However, many have declined to be a part of the show. So, everybody's eyes are on who are the celebrities who are participating in this season of the show.

  This time one of the highlights of the programme is six commoners will be participating in the show along with celebrities. Earlier, 40 thousand entries had comes for the selection, out of which only six commoners have been selected for the show.

 • Sihi Kahi Chandru Eliminated In Big Boss

  sihi kahi chandru eliminated

  Sihi Kahi Chandru got eliminated this week in Sudeep's Popular reality show Big Boss Kannada.

  Sihi Kahi Chandru who was famous for his cooking shows and food recipe was one of the strongest and most loved contestant in the show, he survived for 50 days in the show.

   

 • ಎದ್ದೇಳು ಮಂಜುನಾಥ ಅಂದ್ರೆ ಎದ್ದಿದ್ದು ಸುದೀಪ್

  big boss 5

  ಎದ್ದೇಳು ಮಂಜುನಾಥ ಅಂದ್ರೆ, ತಕ್ಷಣ ನೆನಪಾಗೋದು ನಟ ಜಗ್ಗೇಶ್. ಆದರೆ, ಈ ಹಾಡಿಗೆ ಇಗ ಎದ್ದೇಳೋ ಸರದಿ ಸುದೀಪ್ ಅವರದ್ದು. ಅಂದಹಾಗೆ ಇದು ಬಿಗ್‍ಬಾಸ್ ಶೋ ಆರಂಭದ ಮೊದಲ ಪ್ರೋಮೋ.

  ಹಾಲಿವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‍ವುಡ್, ಕ್ರಿಕೆಟ್ಟು...ಎಲ್ಲಿಂದ ಟೈಂ ಅಡ್ಜಸ್ಟ್ ಮಾಡ್ತಾರೋ ಎಂದು ಇಬ್ಬರು ಯುವಕರು ಮಾತನಾಡ್ತಿರೋವಾಗ್ಲೇ ಎದ್ದೇಳು ಮಂಜುನಾಥದ ಹಾಡು ಕೇಳಿಸುತ್ತೆ. ನಿದ್ದೆ ಮಾಡೋಣ ಎಂದುಕೊಂಡ ಸುದೀಪ್ ಅವರನ್ನು ಬಡಿದೆಬ್ಬಿಸುವುದು ಎದ್ದೇಳು ಮಂಜುನಾಥ..ಎದ್ದೇಳಲೋ.. ಹಾಡು. 

  ಅಲ್ಲಿಗೆ ಬಿಗ್‍ಬಾಸ್ ಶುರುವಾಯ್ತಾ..? ಹೌದು ಸ್ವಾಮಿ..

 • ಚಂದನ್ ಶೆಟ್ಟಿ ಬಿಗ್‍ಬಾಸ್ 

  big boss 5 winner

  ಮೂರೇ ಮೂರು ಪೆಗ್ಗಿಗೆ ಹಾಡಿನ ಮೂಲಕ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದ್ದ ಚಂದನ್ ಶೆಟ್ಟಿ, ಬಿಗ್‍ಬಾಸ್‍ನಲ್ಲೂ ಮಿಂಚಿದ್ದು ಹಾಡು, ಸಂಗೀತದ ಮೂಲಕ. ಮಧ್ಯೆ ಮಧ್ಯೆ ಏನೇ ಜಗಳ, ಕಿರಿಕ್ಕುಗಳಾದರೂ... ಚಂದನ್ ಶೆಟ್ಟಿ ಒಳ್ಳೆಯ ಎಂಟರ್‍ಟೈನರ್ ಆಗಿದ್ದರು. ಆ ಸಾಧನೆಯೇ ಅವರನ್ನೀಗ ಬಿಗ್‍ಬಾಸ್ ವಿನ್ನರ್ ಆಗಿಸಿದೆ.

  ಬಿಗ್‍ಬಾಸ್ ಫಿನಾಲೆಯಲ್ಲಿ ಕಿಚ್ಚ ಸುದೀಪ್, ಚಂದನ್ ಶೆಟ್ಟಿಯವರನ್ನು ವಿನ್ನರ್ ಎಂದು ಘೋಷಿಸುತ್ತಿದ್ದಂತೆ, ಆನ್‍ಲೈನ್‍ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂತು. ಈ ಬಾರಿ ಸೀಕ್ರೆಟ್ ಕಾಪಾಡುವ ಸಲುವಾಗಿ, ಅಭಿಮಾನಿಗಳನ್ನು ಶೋ ಶೂಟಿಂಗ್‍ನಿಂದ ಹೊರಗಿಡಲಾಗಿತ್ತು. ಹೀಗಾಗಿ, ವಿನ್ನರ್ ಯಾರು ಎಂಬ ಕುತೂಹಲವನ್ನು ಕಾರ್ಯಕ್ರಮದಲ್ಲಿಯೇ ತಿಳಿದುಕೊಳ್ಳುವಂತಾಯ್ತು.

  ಇನ್ನು ಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ದಿವಾಕರ್, ರನ್ನರ್ ಅಪ್ ಆಗಿರುವುದು ವಿಶೇಷ. ಅದನ್ನು ಕೂಡಾ ಸಾಧನೆಯೆಂದೇ ಹೇಳಬೇಕು. ಏಕೆ ಗೊತ್ತೇ..? ಅವರಿಗೆ ಸ್ಪರ್ಧಿಯಾಗಿದ್ದವರು ಕಿರುತೆರೆಯ ಸೂಪರ್‍ಸ್ಟಾರ್ ಜೆಕೆ. ಕಟ್ಟಕಡೆಯವರೆಗೂ ರೇಸ್‍ನಲ್ಲಿದ್ದ ಜೆಕೆ, 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

  ಅಲ್ಲಿಗೆ ಬಿಗ್‍ಬಾಸ್ ಸೀಸನ್ 5 ಮುಕ್ತಾಯವಾಯಿತು.

  Related Articles :-

  Kannada Rapper Chandan Shetty Wins Big Boss 5

 • ಬಿಗ್​ಬಾಸ್ ಸೀಸನ್ 5 - ಕಿಚ್ಚನ ಪ್ರೋಮೋ ಶೂಟಿಂಗ್

  big boss 5

  ಬಿಗ್​ಬಾಸ್ ಸೀಸನ್ 5ಗೆ ಕ್ಷಣಗಣನೆ ಶುರುವಾಗುತ್ತಿದೆ. ಸಾಮಾನ್ಯ ಜನರನ್ನೂ ಒಳಗೊಳ್ಳುತ್ತಿರುವುದೇ ಈ ಸರಣಿಯ ವಿಶೇಷ. ಆ ಅಂಶವನ್ನಿಟ್ಟುಕೊಂಡೇ ಬಿಗ್​ಬಾಸ್ ಸೀಸನ್ 5 ಶೂಟಿಂಗ್ ಶುರುವಾಗಿದೆ. 

  ಪೋಸ್ಟ್​ಮ್ಯಾನ್ ಮೂಲಕ ಬರುವ ಪತ್ರಗಳನ್ನು ತೆಗೆದುಕೊಳ್ಳುವ ದೃಶ್ಯದ ಶೂಟಿಂಗ್ ನಡೆದಿದೆ. ಕಿಚ್ಚ ಸುದೀಪ್ ಎಂದಿನಂತೆ ಸ್ಟೈಲಿಶ್. ಸದ್ಯಕ್ಕೆ ಬಿಗ್​ಬಾಸ್ ಸೀಸನ್ 5ನ ಅತಿಥಿಗಳು ಯಾರು ಎನ್ನುವುದು ಸೀಕ್ರೆಟ್.

  4 ಸೀಸನ್​ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್​ಬಾಸ್ ಸರಣಿ, ಈ ಬಾರಿ ಸೆಪ್ಟೆಂಬರ್ 29ರಿಂದ ಶುರುವಾಗುವ ಸಾಧ್ಯತೆ ಇದೆ.

 • ಬಿಗ್‍ಬಾಸ್ ಮನೇಲಿ ಇವರೆಲ್ಲ ಇರ್ತಾರಂತೆ..!

  big boss contestants

  ಬಿಗ್‍ಬಾಸ್ ಅಕ್ಟೋಬರ್ 15ರಿಂದ ಶುರುವಾಗುತ್ತಿದೆ. ಕಿಚ್ಚ ಸುದೀಪ್ ಅವರ ಪ್ರೋಮೋಗಳು ಆಗಲೇ ಕುತೂಹಲ ಹುಟ್ಟಿಸುತ್ತಿವೆ. ಆದರೆ, ಬಿಗ್‍ಬಾಸ್ ಮನೆಗೆ ಹೋಗೋರ್ಯಾರು ಅನ್ನೋದು ಎಂದಿನಂತೆ ಗುಟ್ಟಾಗಿದೆ. ಹಾಗೂ ಎಂದಿನಂತೆಯೇ ಒಂದಿಷ್ಟು ಹೆಸರುಗಳು ಹೊರ ಬಿದ್ದಿವೆ. ಅಂಥಾದ್ದೊಂದು ಪಟ್ಟಿ ಇಲ್ಲಿದೆ. ಓದ್‍ಕೊಂಡ್ ಬಿಡಿ.

  ಹಿತಾ - ಚಿತ್ರನಟಿ, ಸಿಹಿಕಹಿ ದಂಪತಿ ಪುತ್ರಿ

  ದಿಗಂತ್ - ಚಿತ್ರನಟ

  ಆರ್ಯವರ್ಧನ್ - ಸಂಖ್ಯಾಶಾಸ್ತ್ರಜ್ಞ, ಜ್ಯೋತಿಷಿ

  ರಾಜು ತಾಳಿಕೋಟೆ - ಹಾಸ್ಯನಟ

  ಕಾವ್ಯ ಗೌಡ - ಕಿರುತೆರೆ ಕಲಾವಿದೆ

  ಸುನಿಲ್ ರಾವ್ - ನಟ

  ಪಂಕಜ್ ನಾರಾಯಣ್ ಹೆಸರುಗಳು ಕೇಳಿ ಬಂದಿವೆ.

  ಬಿಗ್‍ಬಾಸ್ ಮನೆಗೆ ಹೋಗಲ್ಲ ಎಂದವರ ಪಟ್ಟಿಯೂ ಇದೆ. ನಟಿ, ಶಾಸಕಿ ತಾರಾ, ಕೋಮಲ್ ಹಾಗೂ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಬಿಗ್‍ಬಾಸ್ ಮನೆಗೆ ಹೋಗುತ್ತಿಲ್ಲ. ಪತ್ರಕರ್ತರ ಪಟ್ಟಿಯಿಂದ ಈ ಬಾರಿ ನವೀನ್ ಸಾಗರ್ ಹೆಸರು ಕೇಳಿ ಬರುತ್ತಿದೆ. ಉಳಿದಂತೆ, ಬಿಗ್‍ಬಾಸ್ ಮನೆಯಲ್ಲಿ ಅರ್ಧ ಸೆಲಬ್ರಿಟಿಗಳು ಹಾಗೂ ಇನ್ನರ್ಧ ಜನಸಾಮಾನ್ಯರಿರುತ್ತಾರೆ. ಎಂಜಾಯ್ ಮಾಡಿ

   

 • ಬಿಗ್‍ಬಾಸ್ ಲಾಸ್ಟ್ ಮಿನಿಟ್ ಸಸ್ಪೆನ್ಸ್

  big boss 5

  ಬಿಗ್‍ಬಾಸ್ ಶುರುವಾಗಲಿದೆ ಎನ್ನುವುದು ಸುದ್ದಿಯಾಗುವುದೇ ತಡ, ಸ್ಪರ್ಧಿಗಳು ಯಾರಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಶುರುವಾಗುತ್ತೆ. ಆದರೆ, ಈ ಬಾರಿಯ ಬಿಗ್‍ಬಾಸ್ ಕೊನೆಯ ಕ್ಷಣದವರೆಗೂ ಸಸ್ಪೆನ್ಸ್ ಕಾಯ್ದುಕೊಂಡಿದ್ದು ದೊಡ್ಡದು. ಒಂದೆರಡು ಹೆಸರುಗಳು ಹೊರಬಿದ್ದಿದ್ದವಾದರೂ, ಒಟ್ಟು 17 ಸ್ಪರ್ಧಿಗಳಲ್ಲಿ ಬಹಿರಂಗವಾದ ಸ್ಪರ್ಧಿಗಳ ವಿವರ 5ನ್ನೂ ಮುಟ್ಟಿರಲಿಲ್ಲ. ಈಗ ಬಿಗ್‍ಬಾಸ್ ಶುರುವಾಗಿದೆ. ಬಿಗ್‍ಬಾಸ್ ಮನೆ ಸೇರಿದವರ ಪಟ್ಟಿ ಈ ಬಾರಿ ನಿಜಕ್ಕೂ ಇಂಟ್ರೆಸ್ಟಿಂಗ್.

  ಸಿಹಿಕಹಿ ಚಂದ್ರು - ನಟ, ನಿರ್ದೇಶಕ, ದಯಾಳ್ ಪದ್ಮನಾಭನ್ - ನಿರ್ದೇಶಕ, ನಿರ್ಮಾಪಕ, ಕಾರ್ತಿಕ್ ಜಯರಾಂ (ಜೆಕೆ) - ನಟ, ತೇಜಸ್ವಿನಿ ಪ್ರಕಾಶ್ - ನಟಿ, ಅಶಿತಾ, ಕೃಷಿ ತಾಪಂಡಾ, ಅನುಪಮಾ (ಅಕ್ಕ ಧಾರಾವಾಹಿ ಖ್ಯಾತಿ), ರ್ಯಾಪರ್ ಚಂದನ್ ಶೆಟ್ಟಿ, ಸ್ಟೇಜ್ ಆ್ಯಂಕರ್ ರಿಯಾಜ್ ಬಾಷಾ ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಣ್ಣದ ಲೋಕದವರು. ಇನ್ನು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಇದ್ದಾರೆ.

  ಜನಸಾಮಾನ್ಯರ ಕೋಟಾದಲ್ಲಿ ಮೇಘಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ, ಜಗನ್, ದಿವಾಕರ್, ಸುಮಾ ರಾಜ್‍ಕುಮಾರ್ ಬಿಗ್‍ಬಾಸ್ ಪ್ರವೇಶಿಸಿದ್ದಾರೆ.

  ಇನ್ನು 100 ದಿನ.. 17 ಸ್ಪರ್ಧಿಗಳು.. 47 ಕ್ಯಾಮೆರಾಗಳು.. ಬಿಗ್‍ಬಾಸ್ ಮನೆಯಲ್ಲಿನ ಚಿತ್ರ ವಿಚಿತ್ರ ಕಥನಾವಳಿ.. ವಾರಕ್ಕೆರಡು ಬಾರಿ ಕಿಚ್ಚನ ಜೊತೆ.. ಮನರಂಜನೆ ಭರಪೂರ ಸಿದ್ಧವಾಗಲಿದೆ.

Ayushmanbhava Movie Gallery

Ellidhe Illitanaka Movie Gallery