` nanjundi kalyana, - chitraloka.com | Kannada Movie News, Reviews | Image

nanjundi kalyana,

 • ಇನ್ನು ಗ್ಯಾರಂಟಿ.. ನಂಜುಂಡಿ ರಿಲೀಸು..

  new nanjundi kalyana to release in april

  ಇನ್ನು ಗ್ಯಾರಂಟಿ ನಂಜುಂಡಿ ಕಲ್ಯಾಣ.. ಹಾಡು ಬಂದು 29 ವರ್ಷಗಳಾಗಿವೆ. ಈ 29 ವರ್ಷಗಳಲ್ಲಿ ನಂಜುಂಡಿ ಕಲ್ಯಾಣದ ದೇವಿ ಮಾಲಾಶ್ರೀ, ಚಿತ್ರರಂಗದಲ್ಲಿ ದಶಕಗಳ ಕಾಲ ಮಹಾರಾಣಿಯಾಗಿ ಮೆರೆದು ಮರೆಯಾದರು. ರಾಘವೇಂದ್ರ ರಾಜ್‍ಕುಮಾರ್, ಈಗ ಹಿರಿಯ ಕಲಾವಿದ. ಒಳಗೆ ಸೇರಿದರೆ ಗುಂಡು ಹಾಡು ಕೇಳಿದರೆ, ಮಾಲಾಶ್ರೀ ನೆನಪಾದಂತೆಯೇ ಮಂಜುಳಾ ಗುರುರಾಜ್ ಕೂಡಾ ನೆನಪಾಗ್ತಾರೆ. ಈಗ ಮತ್ತೆ ನಂಜುಂಡಿ ಕಲ್ಯಾಣ ನೆನಪಾಗ್ತಾ ಇರೋದಕ್ಕೆ ಕಾರಣ, ಮತ್ತೊಂದು ನಂಜುಂಡಿ ಕಲ್ಯಾಣ.

  ರಾಜೇಂದ್ರ ಕಾರಂತ್ ನಿರ್ದೇಶನದ ನಂಜುಂಡಿ ಕಲ್ಯಾಣ ಚಿತ್ರ, ಮಾರ್ಚ್‍ನಲ್ಲಿಯೇ ತೆರೆಗೆ ಬರಬೇಕಿತ್ತು. ಕ್ಯೂಬ್ & ಯುಎಫ್‍ಓ ವಿರುದ್ಧದ ಸಮರ ಸಾರಿದ ಹಿನ್ನೆಲೆಯಲ್ಲಿ ಚಿತ್ರ ಮುಂದಕ್ಕೆ ಹೋಗಿತ್ತು. ಈಗ ಏಪ್ರಿಲ್ 6ಕ್ಕೆ ತೆರೆಗೆ ಬರುತ್ತಿದೆ. ತನುಷ್ ನಾಯಕ ನಟನಾಗಿ ನಟಿಸಿರುವ ಚಿತ್ರದಲ್ಲಿ ಪದ್ಮಜಾ ರಾವ್, ಕುರಿ ಪ್ರತಾಪ್, ಮಂಜುನಾಥ್ ಹೆಗಡೆ, ಸುಂದರ್, ಪಿ.ಡಿ.ಸತೀಶ್ ಅವರಲ್ಲದೇ ನಿರ್ದೇಶಕ ಕಾರಂತ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರಾವ್ಯ ನಾಯಕಿ.

  ಹೆಸರು ಮಾತ್ರ ಅದೇ ಆಗಿದ್ದರೂ, ಹಳೆಯ ನಂಜುಂಡಿ ಕಲ್ಯಾಣದ ಕಥೆಗೂ, ಈ ಚಿತ್ರದ ಕಥೆಗೂ ಯಾವುದೇ ಸಂಬಂಧ ಇಲ್ಲ. ಕಥೆ ಕಂಪ್ಲೀಟ್ ಡಿಫರೆಂಟ್ ಅನ್ನೊದು ರಾಜೇಂದ್ರ ಕಾರಂತ್‍ರ ವಿವರಣೆ.

   

 • 'Nanjundi Kalyana' On April 6th

  new nanjundi kalyana

  Well known theatre personality Rajendra Karanth is back once again as a director. Rajendra Karanth directed Ramesh Aravind starrer 'Mangana Kaili Manikya' a few years ago, but the film was a flop. Now Rajendra Karanth has silently directed yet another film called 'Nanjundi Kalyana' and the film is all set to release on the 06th of April.

  'Nanjundi Kalyana' stars Thanush who has acted in films like 'Ale' and 'Madamakki'. This is his third film and Shravya is paired opposite Thanush. Apart from Thanush and Shravya the film stars Padmaja Rao, Kuri Prathap, Manjunath Hegade and others in prominent roles.

  'Nanjundi Kalyana' has nothing to do with the yesteryear film except for the title. Manjunath B Naik is the cameraman, while Anup Seelin has composed the music for the film. Thanush's father Shivanna Dasanapura is the producer of the film. 

   

 • Nanjundi Kalyana Trailer Released

  nanjundi kalyana

  Well known theater personality Rajendra Karanth is back once again as a director. Rajendra Karanth directed Ramesh Aravind starrer 'Mangana Kaili Manikya' a few years ago, but the film was a flop. Now Rajendra Karanth has silently directed yet another film called 'Nanjundi Kalyana' and the trailer of the film was released on Monday morning.

  'Nanjundi Kalyana' stars Thanush who has acted in films like 'Ale' and 'Madamakki'. This is his third film and Shravya is paired opposite Thanush. Apart from Thanush and Shravya the film stars Padmaja Rao, Kuri Prathap, Manjunath Hegade and others in prominent roles.

  'Nanjundi Kalyana' has nothing to do with the yesteryear film except for the title. Manjunath B Naik is the cameraman, while Anup Seelin has composed the music for the film. Thanush's father Shivanna Dasanapura is the producer of the film. 

 • Shravya's Two Films To Release On April 6th

  shavya's two films to release this week

  Actress Shravya, daughter of well known director Omprakash Rao is looking forward for next Friday as two of her films are all set to get released on that day. Thanush starrer 'Nanjundi Kalyana' and 'Huchcha 2' will be releasing on the same day.

  'Nanjundi Kalyana' stars Thanush, Shravya, Padmaja Rao, Kuri Prathap, Manjunath Hegade and others in prominent roles. Rajendra Karanth has written the story and screenplay apart from directing the film. Manjunath B Naik is the cameraman, while Anup Seelin has composed the music for the film. Thanush's father Shivanna Dasanapura is the producer of the film. 

  'Huchcha 2' is being directed by Shravya's father Omprakash Rao. 'Madarangi' Krishna is the hero of the film. Srinivasamurthy, Malavika Avinash, Saikumar, Sadhu Kokila and others forms the rest of the star cast. Ravikumar is the cinematographer, while Anup Seelin is the music director.

 • ಏಪ್ರಿಲ್ 20ಕ್ಕೆ ರಿಯಲ್ ನಂಜುಂಡಿ ಕಲ್ಯಾಣ

  real nanjundi kalyana next month

  28 ವರ್ಷಗಳ ನಂತರ ನಂಜುಂಡಿ ಕಲ್ಯಾಣ ಹೆಸರಿನಲ್ಲಿ ಇನ್ನೊಂದು ಸಿನಿಮಾ ಬರುತ್ತಿದೆ. ಹೊಸ ನಂಜುಂಡಿ ಕಲ್ಯಾಣ ತೆರೆಗೆ ಬರ್ತಾ ಇರೋದು ಏಪ್ರಿಲ್ 6ರಂದು. ಇದಾದ ನಂತರ ರಿಯಲ್ ನಂಜುಂಡಿ ಕಲ್ಯಾಣ ನೆರವೇರಲಿದೆ.

  ರೀಲ್ ಕಲ್ಯಾಣವನ್ನು ಪ್ರೇಕ್ಷಕರಿಗೆ ತೋರಿಸಿದ 2 ವಾರಗಳ ನಂತರ, ಚಿತ್ರದ ಹೀರೋ ಕಂ ನಿರ್ಮಾಪಕ ತನುಷ್, ನಿಜ ಜೀವನದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಇಂಚರಾ ಅವರ ಜೊತೆ ತನುಷ್, ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

 • ಕಲ್ಯಾಣ ನೋಡಿ.. ನಗದೇ ಇದ್ದರೆ 1 ಲಕ್ಷ ಬಹುಮಾನ..

  nanjundi kalyana mvie team;s challenge

  ನಂಜುಂಡಿ ಕಲ್ಯಾಣ. ಮುಂದಿನ ವಾರ ತೆರೆಗೆ ಬರುತ್ತಿರುವ ಚಿತ್ರದ ಮೂಲ ಹಾಸ್ಯ. ಹಠಮಾರಿ ತಾಯಿಯನ್ನು ಪಳಗಿಸಿ, ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವ ನಾಯಕನ ಕಥೆ. ಚಿತ್ರದಲ್ಲಿ ಹಾಟ್ ಸೀನ್‍ಗಳೂ ಧಾರಾಳವಾಗಿವೆಯಂತೆ. ಆದರೆ, ಇಡೀ ಚಿತ್ರದಲ್ಲಿ ಹಾಸ್ಯ ನಕ್ಕುನಗಿಸುವಂತಿದೆ. 

  ಪ್ರೇಕ್ಷಕರನ್ನು ನಗದೇ ಹೋದರೆ 1 ಲಕ್ಷ ಬಹುಮಾನ ಎಂದಿದ್ದಾರೆ ನಿರ್ದೇಶಕ ರಾಜೇಂದ್ರ ಕಾರಂತ್. ಚಿತ್ರಕ್ಕೆ ನಾಯಕ ಕಂ ನಿರ್ಮಾಪಕ ತನುಷ್, ಚಿತ್ರದ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡಿದ್ದಾರೆ.

 • ಕುರಿ ಪ್ರತಾಪ್‍ರ ನಾರೀ ಸಂಕಟ

  nanjundi kakyana movie image

  ಪ್ರತಿ ದಿನ ಶೇವ್ ಮಾಡಬೇಕು. ಒಂದ್ಸಲ ಮೇಕಪ್ ಹಾಕಿಸಿಕೊಂಡ್ರೆ ಇಡೀ ದಿನ ಅದೇ ಮೇಕಪ್‍ನಲ್ಲಿರಬೇಕು. ಪ್ಯಾಕಪ್ ಆಗುವವರೆಗೆ ಮೇಕಪ್ ತೆಗೆಯೋಹಾಗಿಲ್ಲ. ಅಬ್ಬಾ.. ಈ ಕಷ್ಟ ಯಾವ ಗಂಡಸಿಗೂ ಬರಬಾರದು.. ಹೀಗಂತ ತಮ್ಮ ಅನುಭವ ಹೇಳಿಕೊಂಡಿರೋದು ಕುರಿ ಪ್ರತಾಪ್. ಇದೇ ವಾರ ತೆರೆಗೆ ಬರುತ್ತಿರುವ ನಂಜುಂಡಿ ಕಲ್ಯಾಣದಲ್ಲಿ ಹೀರೋನ ಹೆಂಡತಿಯಾಗಿ ನಟಿಸಿರುವ ಕುರಿ ಪ್ರತಾಪ್, ಸ್ತ್ರೀವೇಷದ ಕಷ್ಟಗಳನ್ನೆಲ್ಲ ಹೇಳಿಕೊಂಡಿದ್ದಾರೆ.

  ನಂಜುಂಡಿ ಕಲ್ಯಾಣದಲ್ಲಿ ಕುರಿ ಪ್ರತಾಪ್ ಅವರ ಪಾತ್ರದ ಹೆಸರು ಬ್ಯಾಂಕಾಕ್ ಮಲ್ಲಿಕಾ. ಹೀರೋ ತನುಷ್ ಬ್ಯಾಂಕಾಕ್‍ನಲ್ಲಿ ಮಲ್ಲಿಕಾರನ್ನು ಮದುವೆಯಾಗ್ತಾರೆ. ಅದು ಮದುವೆ ಇಷ್ಟವಿಲ್ಲದ ಕಾರಣಕ್ಕೆ. ಇಷ್ಟವಿಲ್ಲದ ಮದುವೆ ತಪ್ಪಿಸಿಕೊಳ್ಳಲು, ಬ್ಯಾಂಕಾಕ್ ಮಲ್ಲಿಕಾ ಅವರ ಜೊತೆ ಮದುವೆಯಾಗುವ ನಾಯಕ, ನಂತರ ಮದುವೆಯಾಗಬೇಕು ಎಂದುಕೊಂಡಾಗ ಶುರುವಾಗುವುದೇ ಕಲ್ಯಾಣದ ಸಂಕಟ. ಈ ವಾರ ತೆರೆಗೆ ಬರುತ್ತಿರುವ ನಂಜುಂಡಿ ಕಲ್ಯಾಣದಲ್ಲಿ ನಗೋಕೆ ಬೇಜಾನ್ ಕಾರಣಗಳಿವೆ. ತನುಷ್, ಶ್ರಾವ್ಯ ಅಭಿನಯದ ಚಿತ್ರದಲ್ಲಿ ಮದುವೆಯೇ ಕೇಂದ್ರಬಿಂದು. 

 • ತಮಾಷೆಯಾಗಿಯೇ ಹುಟ್ಟಿತ್ತು ಕಾಮಿಡಿ ಸಿನಿಮಾ

  nanjundi kalyana's interesting story

  ನಂಜುಂಡಿ ಕಲ್ಯಾಣ. ಇದೇ ವಾರ ತೆರೆಗೆ ಬರುತ್ತಿರುವ ಹಾಸ್ಯಮಯ ಚಿತ್ರ. ಚಿತ್ರಕ್ಕೆ ತನುಷ್ ನಾಯಕ ಮತ್ತು ನಿರ್ಮಾಪಕ. ನಿರ್ದೇಶಕ ರಾಜೇಂದ್ರ ಕಾರಂತ್. ನಾಯಕಿಯಾಗಿ ನಟಿಸಿರುವುದು ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ. ಇಡೀ ಚಿತ್ರದಲ್ಲಿ ನಗೆಯ ಹೋಳಿಗೆಯೇ ಇದೆ ಅನ್ನೋದು ಚಿತ್ರತಂಡದ ಭರವಸೆ. ಚಿತ್ರ ನೋಡಿ ನಗದೇ ಇದ್ದವರಿಗೆ 1 ಲಕ್ಷ ಬಹುಮಾನ ಕೊಡುತ್ತೇವೆ ಎನ್ನುತ್ತಿದೆ ಚಿತ್ರತಂಡ.

  ಅಂದಹಾಗೆ ಈ ಚಿತ್ರ ಹುಟ್ಟಿದ ಕಥೆಯೇ ಸ್ವಾರಸ್ಯವಾಗಿದೆ. ತಮಾಷೆಯಾಗಿ ಶುರುವಾದ ಸಂಭಾಷಣೆ ಸಿನಿಮಾ ಆಗಿದೆ. ತನುಷ್ ಈ ಹಿಂದೆ ಮಡಮಕ್ಕಿ ಚಿತ್ರದಲ್ಲಿ ನಟಿಸಿದ್ದವರು. ಆ ಚಿತ್ರದಲ್ಲಿ ನಿರ್ದೇಶಕ ರಾಜೇಂದ್ರ ಕಾರಂತ್ ಕೂಡಾ ಇದ್ದರು. ಅವರನ್ನು ತನುಷ್, ತಮ್ಮ ಗುರು ಎಂದೇ ಕರೆಯುತ್ತಾರೆ. ಒಂದ್ಸಲ ಹೀಗೇ ಮಾತನಾಡುವಾಗ ರಾಜೇಂದ್ರ, ಸಲಿಂಗಿಗಳ ಮದುವೆಯ ಕಥೆಯ ಎಳೆಯೊಂದನ್ನು ಹೇಳಿದ್ರು. ನಾನೂ ತಮಾಷೆಗಾಗಿ ಕಥೆ ಚೆನ್ನಾಗಿದೆ. ನಂಜುಂಡಿ ಕಲ್ಯಾಣ ಅನ್ನೋ ಟೈಟಲ್ ಇಡೋಣ ಎಂದೆ. ನಾನು ಹೇಳಿದ್ದು ತಮಾಷೆಗೆ. ಆದರೆ, ರಾಜೇಂದ್ರ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡರಷ್ಟೇ ಅಲ್ಲ, ರಾಘವೇಂದ್ರ ರಾಜ್‍ಕುಮಾರ್ ಬಳಿ ಹೋಗಿ ನಂಜುಂಡಿ ಕಲ್ಯಾಣ ಟೈಟಲ್‍ನಲ್ಲಿ ಮತ್ತೆ ಸಿನಿಮಾ ಮಾಡುತ್ತೇವೆ ಎಂದು ಹೇಳಿ ಅವರ ಒಪ್ಪಿಗೆಯನ್ನೂ ಪಡೆದುಕೊಂಡುಬಿಟ್ಟರು. ಚಿತ್ರ ಶುರುವಾಗಿದ್ದು ಹಾಗೆ.

  ಇದು ನಿಜಕ್ಕೂ ರಿಸ್ಕೀ ಸಬ್ಜೆಕ್ಟ್. ಜನ ಹೇಗೆ ಒಪ್ಪಿಕೊಳ್ತಾರೆ ಅನ್ನೋ ಭಯ ನಮಗೂ ಇದೆ. ಆದರೆ, ಎಲ್ಲಿಯೂ ಅಶ್ಲೀಲತೆಯಿಲ್ಲ. ಚಿತ್ರ ಶುರುವಿಂದ ಕೊನೆಯವರೆಗೆ ಮಜವಾಗಿ ನೋಡಿಸಿಕೊಂಡು ಹೋಗುತ್ತೆ. 2018ರ ಯೂತ್‍ಫುಲ್ ಸಿನಿಮಾ ಇದು. ಥಿಯೇಟರ್‍ನಿಂದ ಹೊರಬರುವಾಗ ಪ್ರತಿಯೊಬ್ಬರೂ ನಗು ನಗುತ್ತಾ ಬರುತ್ತಾರೆ ಅನ್ನೋ ಭರವಸೆ ಕೊಡ್ತಾರೆ ತನುಷ್. 

 • ನಂಜುಂಡಿ ಕಲ್ಯಾಣದಲ್ಲಿ ಸಲಿಂಗಿಗಳಿಗೇನು ಕೆಲಸ..?

  lgbt marriage issue in nanjundi kalyana

  ನಂಜುಂಡಿ ಕಲ್ಯಾಣದಲ್ಲಿ ಮದುವೆಯೇ ಕಥೆಯ ಮೂಲ. ಚಿತ್ರದ ಹೀರೋ ತನುಷ್. ನಾಯಕಿ ಶ್ರಾವ್ಯಾ. 1989ರ ನಂಜುಂಡಿ ಕಲ್ಯಾಣದಂತೆಯೇ, ಈ ಚಿತ್ರದಲ್ಲೂ ಮದುವೆಯೇ ಸೆಂಟರ್ ಆಫ್ ಅಟ್ರ್ಯಾಕ್ಷನ್. ಆದರೆ, ಇವೆಲ್ಲದರ ಮಧ್ಯೆ ಸಲಿಂಗಿಗಳೂ ಇದ್ದಾರೆ. ಅವರಿಗೇನು ಕೆಲಸ ಅನ್ನೋದೇ ನಂಜುಂಡಿ ಕಲ್ಯಾಣದ ದೊಡ್ಡ ಪ್ರಶ್ನೆ.

  ತನುಷ್, ಅಂದರೆ ಚಿತ್ರದ ಹೀರೋ ಬ್ಯಾಂಕಾಕ್‍ನಲ್ಲಿ ಸಲಿಂಗಿ ಕುರಿಪ್ರತಾಪ್‍ನನ್ನು ಮದುವೆಯಾಗಿ ಬೆಂಗಳೂರಿಗೆ ಬರುತ್ತಾನೆ. ಆದರೆ, ಆ ಮದುವೆ ತಾಯಿ ಪದ್ಮಜಾ ರಾವ್‍ಗೆ ಇಷ್ಟವಿರೋದಿಲ್ಲ. ಹಾಗಾಗಿ ಅವಳು ಮಗನಿಗೆ ಹುಡುಗಿಯೊಬ್ಬಳ ಜೊತೆ ಮದುವೆ ಮಾಡಿಸಲು ಹೊರಡುತ್ತಾಳೆ. ಆಗ ಶುರುವಾಗುತ್ತೆ.. ನಗೆಯ ಹಬ್ಬದೂಟ. ಟ್ವಿಸ್ಟುಗಳ ಆಟ. ಪ್ರೇಕ್ಷಕರಿಗೆ ಬೊಂಬಾಟ್ ಭೋಜನ ಗ್ಯಾಂರಟಿ ಎನ್ನುತ್ತಿದೆ ಚಿತ್ರತಂಡ. ಇದೇ ವಾರ ತೆರೆಗೆ ಬರುತ್ತಿದೆ ನಂಜುಂಡಿ ಕಲ್ಯಾಣ.

   

Geetha Movie Gallery

Damayanthi Teaser Launch Gallery