` social service, - chitraloka.com | Kannada Movie News, Reviews | Image

social service,

 • ರಶ್ಮಿಕಾ ಸೋಷಿಯಲ್ ಸರ್ವಿಸ್ ಸೀಕ್ರೆಟ್

  fans share rashmika's secret social services

  ರಶ್ಮಿಕಾ ಮಂದಣ್ಣ, ಕನ್ನಡಿಗರು ಮತ್ತು ತೆಲುಗರ ಹಾರ್ಟ್ ಫೇವರಿಟ್ ನಟಿ. ಸಿನಿಮಾಗಳ ಮೂಲಕ ಇಲ್ಲವೇ ವಿವಾದಗಳ ಮೂಲಕ ಸುದ್ದಿಯಲ್ಲಿದ್ದೇ ಇರುತ್ತಾರೆ. ಈ ಬಾರಿ ಒಂದೊಳ್ಳೆ ಸುದ್ದಿಯಿಂದ ಸದ್ದು ಮಾಡಿದ್ದಾರೆ ರಶ್ಮಿಕಾ.

  ರಸ್ತೆ ಬದಿಯ ಅಶಕ್ತರಿಗೆ ರಶ್ಮಿಕಾ ಮಂದಣ್ಣ ಊಟ ಬಡಿಸುತ್ತಿರುವ ಫೋಟೋಗಳನ್ನು ಅಭಿಮಾನಿಗಳು ಸೆರೆ ಹಿಡಿದು, ರಶ್ಮಿಕಾಗೇ ಟ್ಯಾಗ್ ಮಾಡಿದ್ದಾರೆ. ನಾವು ನಿಮ್ಮ ಅಭಿಮಾನಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ. ಪೂರ್ತಿ ವಿವರ ನೀಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

  ಫೋಟೋಗೆ ಅಚ್ಚರಿ ವ್ಯಕ್ತಪಡಿಸಿರುವ ರಶ್ಮಿಕಾ, ಸಂಪೂರ್ಣ ವಿವರ ನೀಡಿಲ್ಲ. ನಿಮಗೆ ಫೋಟೋ ಎಲ್ಲಿ ಸಿಕ್ಕಿತು ಎಂದು ಅಚ್ಚರಿ ವ್ಯಕ್ತಪಡಿಸಿರುವ ರಶ್ಮಿಕಾ, ಪ್ರತಿದಿನ ಬಿಸಿಲಿನಲ್ಲಿ ಆ ಕುಟುಂಬಗಳು ಬಳಲುವುದನ್ನು ನೋಡುತ್ತಿದ್ದೆ. ಅವರು ಕ್ಯಾನ್ಸರ್ ಪೀಡಿತ ಕುಟುಂಬದವರು. ಬಡವರು. ಏನಾದರೂ ಮಾಡಬೇಕು ಎನ್ನಿಸಿತು. ತೋಚಿದ್ದು ಮಾಡಿದ್ದೇನೆ ಅಷ್ಟೆ ಎಂದಿದ್ದಾರೆ ರಶ್ಮಿಕಾ.

 • ಶ್ರೀಮತಿ ಅಮೂಲ್ಯ ಜಗದೀಶ್ ಸಮಾಜಸೇವೆ

  amulya jagadish

  ಮದುವೆಯಾದ ಮೇಲೆ ಅಮೂಲ್ಯ ನಟನೆ ಮಾಡ್ತಾರಾ..? ಅಥವಾ ಸಂಪೂರ್ಣ ಗೃಹಿಣಿಯಾಗಿರ್ತಾರಾ..? ಅನ್ನೋ ಪ್ರಶ್ನೆಗಳಿಗೆ ನಟನೆ ಮುಂದುವರೆಸ್ತೀನಿ ಅನ್ನೋ ಉತ್ತರ ಕೊಟ್ಟಿದ್ದರು ಅಮೂಲ್ಯ. ಆದರೆ, ಹೊಸ ಚಿತ್ರಗಳನ್ನು ಒಪ್ಪಿಕೊಂಡ ಸುದ್ದಿಗಳ್ಯವುವೂ ಇರಲಿಲ್ಲ. ಹಾಗಾದರೆ ಅಮೂಲ್ಯ ಏನ್ ಮಾಡ್ತಿದ್ದಾರೆ ಅಂತಾ ಹುಡುಕಿಕೊಂಡು ಹೊರಟಾಗ, ಅಮೂಲ್ಯ ಅವರ ಸಮಾಜಸೇವೆಯ ಬಗ್ಗೆ ಗೊತ್ತಾಗಿದೆ.

  ವನಿತಾ ವಿಕಾಸ್ ಅನ್ನೋ ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಅಮೂಲ್ಯ, ದುಡಿಯಲು ಆಸಕ್ತಿಯಿರುವ ಮಹಿಳೆಯರನ್ನು ಗುರುತಿಸಿ, ತರಬೇತಿ ನೀಡಿ ಉದ್ಯೋಗ ಕೊಡಿಸುವ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 10 ಸಾವಿರ ಜನಕ್ಕಾದರೂ ಇದನ್ನು ತಲುಪಿಸಬೇಕು ಅನ್ನೋದು ಅಮೂಲ್ಯ ಅವರ ಬಯಕೆ. ಟೈಲರಿಂಗ್, ಬುಕ್‍ಬೈಂಡಿಂಗ್‍ನಂತಾ ಕೆಲಸಗಳ ತರಬೇತಿಗೆ ಈಗಾಗಲೇ ಚಾಲನೆಯನ್ನೂ ಕೊಡಿಸಿಬಿಟ್ಟಿದ್ದಾರೆ.

  ಪತಿ ಜಗದೀಶ್ ಮತ್ತು ಮಾವ ರಾಮಚಂದ್ರ, ಅಮೂಲ್ಯ ಅವರ ಕೆಲಸಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಹಾಗಂತ ರಾಜಕೀಯಕ್ಕೆ ಬರ್ತೀರಾ ಅಂದ್ರೆ, ಒಂದೇ ಮಾತಲ್ಲಿ ಇಲ್ಲ ಅಂತಾರೆ ಅಮೂಲ್ಯ. ಈಗಾಗಲೇ 8 ಬ್ಯಾಚ್‍ನಲ್ಲಿ ತರಬೇತಿಯನ್ನೂ ಕೊಡಿಸಿದ್ದಾರಂತೆ. ಅಮೂಲ್ಯ ಅವರ ಸಮಾಜಸೇವೆಯೂ ಯಶಸ್ವಿಯಾಗಲಿ.

 • ಸುದೀಪ್ ಸಮಾಜಸೇವೆಯ ಕಂಪ್ಲೀಟ್ ಡೀಟೈಲ್ಸ್

  sudeep social service details

  ನಾನು ಕೋಟ್ಯಧಿಪತಿ ಅಲ್ಲ. ಆದರೆ ಸಂಪಾದಿಸಿದ್ದರಲ್ಲಿ ಶೇ.40ರಿಂದ 50ರಷ್ಟನ್ನು ಸಮಾಜಕ್ಕೆ ವಾಪಸ್ ಕೊಡುತ್ತಿದ್ದೇನೆ. ಇದು ಸುದೀಪ್ ಅವರೇ ಹೇಳಿಕೊಂಡಿರುವ ಮಾತು. ಇತ್ತೀಚೆಗಷ್ಟೇ ರಾಜಕೀಯಕ್ಕೆ ಬರುತ್ತೀರಾ ಎಂದು ಕೇಳಿದಾಗ, ನಾನು ನನ್ನ ಹಣದಲ್ಲಿ ನನ್ನ ಕೈಲಾದಷ್ಟು ಸಮಾಜಸೇವೆ ಮಾಡುತ್ತಿದ್ದೇನೆ. ಸೇವೆ ಮಾಡೋಕೆ ರಾಜಕೀಯಕ್ಕೆ ಬರಬೇಕು ಎಂಬ ಅನಿವಾರ್ಯತೆ ಇಲ್ಲ ಎಂದಿದ್ದರು. ಈಗ ತಮ್ಮ ಸಮಾಜಸೇವೆಯ ಕೆಲಸಗಳನ್ನು ಬಹಿರಂಗಪಡಿಸಿದ್ದಾರೆ.

  ಸುದೀಪ್ ಒಟ್ಟು 18 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಅವರ ಸಂಪೂರ್ಣ ಹೊಣೆ ಅವರದ್ದೇ. ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದಾರೆ. ಒಂದು ಅನಾಥಾಶ್ರಮವನ್ನೂ ನಡೆಸುತ್ತಿದ್ದಾರೆ. ಇದೆಲ್ಲವೂ ಅವರ ಸ್ವಂತ ಹಣದಲ್ಲಿಯೇ ನಡೆಯುತ್ತಿದೆ. 

  ಸುದೀಪ್ ಅವರನ್ನು ಮೆಚ್ಚಿಕೊಳ್ಳೋಕೆ ಇನ್ನಷ್ಟು ಕಾರಣಗಳು ಸಿಕ್ಕಿವೆ. ಅಷ್ಟೇ ಅಲ್ಲ, ಸಂಕಷ್ಟದಲ್ಲಿರುವ ಚಿತ್ರರಂಗದ ಕೆಲವರಿಗೆ ವೈಯಕ್ತಿಕವಾಗಿ ಸಹಾಯ ಮಾಡಿರುವುದನ್ನು ಸುದೀಪ್ ಹೊರಗೆ ಹೇಳಿಕೊಳ್ಳೋದಿಲ್ಲ. ಅದು ಸುದೀಪ್ ದೊಡ್ಡಗುಣ.

 • ಹಳ್ಳಿಯನ್ನು ದತ್ತು ಪಡೆದ ನೀನಾಸಂ ಸತೀಶ್

  sathish ninasam adopts a village

  ಸೆಲಬ್ರಿಟಿಗಳು ಸಮಾಜಸೇವೆಯತ್ತ ಮುಖಮಾಡುವುದು ಹೊಸದೇನೂ ಅಲ್ಲ. ಹಲವು ಕಲಾವಿದರು, ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ ನೆರವು ನೀಡುವ, ಕೆಲವರು ಸ್ವತಃ ನಡೆಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಕುಡಿಯುವ ನೀರು ಪೂರೈಕೆ, ಕೆರೆಗಳ ಅಭಿವೃದ್ದಿಗೆ ಮುಂದಾಗುತ್ತಾರೆ.ಆದರೆ, ನೀನಾಸಂ ಸತೀಶ್, ಸಮಾಜ ಸೇವೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಹಳ್ಳಿಯೊಂದನ್ನು ದತ್ತು ಪಡೆದಿದ್ದಾರೆ.

  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಳ್ಳೆಗಾಲ ಅನ್ನೋ ಹಳ್ಳಿಯನ್ನ ನೀನಾಸಂ ಸತೀಶ್ ದತ್ತು ಪಡೆದುಕೊಂಡಿದ್ದಾರೆ. ಮುಂದಿನ ಯೋಜನೆಗಳನ್ನು ಇನ್ನು ಮುಂದಷ್ಟೇ ಮಾಡಬೇಕಿದೆ. ಸದ್ಯಕ್ಕೆ ಗ್ರಾಮಸ್ಥರ ಜೊತೆ ಚರ್ಚೆಗಳು ಶುರುವಾಗಿವೆ. ಅಯೋಗ್ಯ ಚಿತ್ರದ ಚಿತ್ರೀಕರಣಕ್ಕೆ ಮಂಡ್ಯ ಸುತ್ತಮುತ್ತಲ ಹಳ್ಳಿಗಳನ್ನು ಸುತ್ತಿದ್ದ ಸತೀಶ್, ಸ್ವತಃ ಹಳ್ಳಿಯೊಂದನ್ನು ಪಡೆದಿರುವುದು ಮೆಚ್ಚುವ ವಿಷಯವೇ ಸರಿ.

  ಮೂಲತಃ ಮಂಡ್ಯ ಜಿಲ್ಲೆಯವರೇ ಆದ ನೀನಾಸಂ ಸತೀಶ್, ಹಳ್ಳಿಯೊಂದನ್ನು ದತ್ತು ಪಡೆದು ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡದಲ್ಲಿ ಹೀಗೆ ಹಳ್ಳಿಯೊಂದನ್ನು ದತ್ತು ಪಡೆದಿರುವ ಮತ್ತೊಬ್ಬ ನಟ ಪ್ರಕಾಶ್ ರೈ ಮಾತ್ರ. ಈಗ ನೀನಾಸಂ ಸತೀಶ್ ಅದೇ ಹಾದಿ ತುಳಿದಿದ್ದಾರೆ.

 • ಹೃದಯವಂತ ದರ್ಶನ್

  darshan's heart warming moment

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ತಮ್ಮ ಹೃದಯವಂತಿಕೆ ಮೆರೆದಿದ್ದಾರೆ. ಪೂರ್ವಿಕಾ ಅನ್ನೋ ತಮ್ಮ ಅಭಿಮಾನಿಯನ್ನು ತಮ್ಮ ಸೆಟ್‍ಗೇ ಕರೆಸಿಕೊಂಡು ಮಾತನಾಡಿಸಿದ್ದಾರೆ. ಅದರಲ್ಲೇನು ವಿಶೇಷ ಎನ್ನಬೇಡಿ. 

  ಪೂರ್ವಿಕಾ ಮಂಡ್ಯದ ಮದ್ದೂರು ಬಳಿಯ ಹಳ್ಳಿಯೊಂದರ ಬಾಲೆ. ಹೃದಯದಲ್ಲಿ ರಂಧ್ರವಾಗಿದ್ದು ಶಸ್ತ್ರಚಿಕಿತ್ಸೆಗೆ ಸಿದ್ಧರಾಗುತ್ತಿದ್ದಾರೆ. ಆಪರೇಷನ್‍ಗೆ ಹೋಗುವ ಮುನ್ನ ದರ್ಶನ್ ಅವರನ್ನು ನೋಡಬೇಕು ಎಂದು ಬಯಸಿದ್ದ ಅಭಿಮಾನಿಯ ಬಯಕೆಯನ್ನು ದರ್ಶನ್ ಈ ರೀತಿ ಈಡೇರಿಸಿದ್ದಾರೆ. ಮೈಸೂರಿನಲ್ಲಿ ತಮ್ಮ ಯಜಮಾನ ಚಿತ್ರದ ಚಿತ್ರೀಕರಣದ ಸೆಟ್‍ಗೇ ಕರೆಸಿಕೊಂಡಿದ್ದ ದರ್ಶನ್, ಚಿತ್ರೀಕರಣವನ್ನೆಲ್ಲ ತೋರಿಸಿ, ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.