` sonu sood, - chitraloka.com | Kannada Movie News, Reviews | Image

sonu sood,

 • ಕರುನಾಡಿನ ಶ್ರೀಮಂತ ರೈತನಾದ ಸೋನು ಸೂದ್

  ಕರುನಾಡಿನ ಶ್ರೀಮಂತ ರೈತನಾದ ಸೋನು ಸೂದ್

  ವಿಷ್ಣುವರ್ಧನ, ಕುರುಕ್ಷೇತ್ರ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟ ಸೋನು ಸೂದ್ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಇತ್ತೀಚೆಗೆ ಸೋನು ಸೂದ್ ಸುದ್ದಿ ಮಾಡಿದ್ದು ಸಿನಿಮಾಗಳಿಗಿಂತ ಹೆಚ್ಚಾಗಿ ಸಮಾಜ ಸೇವಾ ಕೆಲಸಗಳಲ್ಲಿ. ಸೋನು ಸೂದ್ ಅವರಿಗೆ ಈಗ ದೇಶಾದ್ಯಂತ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಸೋನು ಸೂದ್ ಈಗ ಕನ್ನಡಕ್ಕೆ ಶ್ರೀಮಂತನಾಗಿ ಬರುತ್ತಿದ್ದಾರೆ.

  ಶ್ರೀಮಂತ ಅನ್ನೋದು ಅವರು ನಟಿಸಲಿರೋ ಹೊಸ ಕನ್ನಡ ಚಿತ್ರದ ಹೆಸರು. ರೈತನ ಪಾತ್ರ. ಇದು ಈ ಹಿಂದೆಯೇ ಆರಂಭವಾಗಿದ್ದ ಸಿನಿಮಾ. ಚಿತ್ರದ ಮಳೆ ಮುನಿದರೆ ಸಂತ.. ಹಾಡನ್ನು ಹಾಡಿರೋದು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇತ್ತೀಚೆಗೆ ಚಿತ್ರದ ಹಾಡನ್ನು ರಿಲೀಸ್ ಮಾಡಲಾಗಿದೆ. ರೈತರ ಬದುಕನ್ನು ಸರ್ಕಾರ ಹೇಗೆ ನಿರ್ಲಕ್ಷಿಸಿದೆ ಎನ್ನುವುದರ ಜೊತೆಯಲ್ಲಿಯೇ ಮಾದರಿ ರೈತನಾಗಿ ಸೋನು ಸೂದ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹಾಡುಗಳಲ್ಲಿ ಗಾದೆ, ಒಗಟುಗಳನ್ನು ಬಳಸಿಕೊಳ್ಳಲಾಗಿದೆ. 8 ಹಾಡುಗಳಿವೆ. ಇದೊಂದು ಸಂಗೀತ ಮಯ ಸಿನಿಮಾ ಎನ್ನುವುದು ನಿರ್ದೇಶಕ ಹಾಸನ್ ರಮೇಶ್ ಮಾತು.

  ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್, ರಮೇಶ್ ಭಟ್, ಸಾಧು ಕೋಕಿಲ, ರವಿಶಂಕರ್ ಗೌಡ, ರಾಜು ತಾಳಿಕೋಟೆ ಮೊದಲಾದವರು ನಟಿಸಿದ್ದಾರೆ.

 • ಕುರುಕ್ಷೇತ್ರದಲ್ಲಿ ಅರ್ಜುನನಾಗಲಿದ್ದಾರೆ ಅರುಂಧತಿಯ ಅಘೋರಿ ಸೋನು ಸೂದ್

  sonu sood as arjuna

  ದರ್ಶನ್‌ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಚಿತ್ರದ ಅತ್ಯಂತ ಪ್ರಮುಖ ಪಾತ್ರ ಅರ್ಜುನನದ್ದು. ಆ ಪಾತ್ರಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ತೆಲುಗಿನ ಅರುಂಧತಿ ಚಿತ್ರದಲ್ಲಿ ಅಘೋರಿಯ ಪಾತ್ರ ಮಾಡಿದ್ದ, ಬೊಮ್ಮಾಲಿ ಎನ್ನುತ್ತಲೇ ಪ್ರೇಕ್ಷಕರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಖಳನಟ ಸೋನುಸೂದ್, ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಸೋನು ಸೂದ್​ಗೆ ಕನ್ನಡ ಹೊಸದೇನಲ್ಲ. ಈ ಹಿಂದೆ ದ್ವಾರಕೀಶ್‌ ಪ್ರೊಡಕ್ಷನ್ಸ್​ನ ಸುದೀಪ್‌ ನಟಿಸಿದ್ದ ವಿಷ್ಣುವರ್ಧನ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಕುರುಕ್ಷೇತ್ರ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ ಸೋನು ಸೂದ್.

  ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್ ಅವರದ್ದು ಪ್ರಮುಖ ಪಾತ್ರ. ಧರ್ಮರಾಯನಾಗಿ ಶಶಿಕುಮಾರ್‌, ಭೀಮನಾಗಿ ಡ್ಯಾನಿಶ್ ಅಖ್ತರ್‌ ನಟಿಸುತ್ತಿದ್ದಾರೆ. ಅರ್ಜುನನ ಪಾತ್ರಕ್ಕೆ ಸೋನು ಸೂದ್‌ ಆಯ್ಕೆಯಾಗಿದ್ದು, ನಕುಲ-ಸಹದೇವರಾಗಿ ಯಶಸ್‌ ಮತ್ತು ಚಂದನ್‌ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯಿದೆ. 

  Actor Sonu Sood who was last seen in Sudeep starrer 'Vishnuvardhana' is all set to make a comeback to Kannada film with Darshan starrer 'Kurukshetra'.

  Sonu Sood will be reprising the role of Arjuna in the film and will be joining the shooting soon. The shooting of the film is in full progress at the Ramoji Film City in Hyderabad.

  'Kurukshetra' is based on the Mahabharatha and Darshan will be playing the role of Duryodhana, while Ravichandran is seen in the role of Krishna in this film. Apart from that Lakshmi, Nikhil Kumar, Saikumar, Shashikumar, Srinath, Haripriya and others are playing prominent roles in the film. The film is being produced by Muniratra. Senior director Naganna who had directed 'Krantiveera Sangolli Rayanna' is directing the film.

 • ನಟ ಸೋನು ಸೂದ್ ಮೇಲೆ ಕೇಸ್

  ನಟ ಸೋನು ಸೂದ್ ಮೇಲೆ ಕೇಸ್

  ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರು ಸಂತ್ರಸ್ತರ ಪಾಲಿಗೆ ಬೆಳಕಾಗಿ ಬಂದವರು ನಟ ಸೋನು ಸೂದ್. ಸಾಮಾಜಿಕ ಸೇವೆ, ನೊಂದವರಿಗೆ ಸಾಂತ್ವನ ಹಾಗೂ ನೆರವುಗಳ ಮೂಲಕ ದಿಢೀರ್ ಪ್ರಸಿದ್ಧಿಯನ್ನೂ ಪಡೆದ ಸೋನು ಸೂದ್, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟ ಸೋನು ಸೂದ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಮುಂಬೈ ಮಹಾನಗರ ಪಾಲಿಕೆ ಪೊಲೀಸರನ್ನು ಕೇಳಿಕೊಂಡಿದೆ. ಇಷ್ಟಕ್ಕೂ ಆಗಿರುವುದೇನೆಂದರೆ..

  ಮುಂಬೈನ ಜುಹುವಿನಲ್ಲಿ ಸೋನು ಸೂದ್ ಅವರ ಬಂಗಲೆ ಇದೆ. ಅದು 6 ಮಹಡಿ ಕಟ್ಟಡ. ಅದು ವಸತಿ ನಿಲಯ. ಅದನ್ನು ಸೋನು ಸೂದ್ ಈಗ ಹೋಟೆಲ್ ಆಗಿ ಪರವರ್ತಿಸಿದ್ದಾರೆ. ಆದರೆ, ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲ. ನೋಟಿಸ್‍ಗಳಿಗೂ ಉತ್ತರ ಕೊಟ್ಟಿಲ್ಲ. ಹೀಗಾಗಿ ಪಾಲಿಕೆಯವರು ಜುಹು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟು, ಎಫ್‍ಐಆರ್ ದಾಖಲಿಸುವಂತೆ ಕೇಳಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿದ್ದರೂ, ಎಫ್‍ಐಆರ್ ದಾಖಲಿಸಿಲ್ಲ ಎನ್ನುವುದು ಸದ್ಯಕ್ಕಿರುವ ಮಾಹಿತಿ.

 • ಸೋನು ಸೂದ್ : ವಿಲನ್ ಅಲ್ಲ.. ಹೀರೋ..!

  sonu sood turns life hero

  ಸೋನು ಸೂದ್, ಬಾಲಿವುಡ್ ಹುಡುಗ. ಭಗತ್ ಸಿಂಗ್ ಪಾತ್ರದಲ್ಲಿ ಶಹೀದ್ ಎ ಅಝಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋನು ಸೂದ್, ನಂತರ ಗುರುತಿಸಿಕೊಂಡಿದ್ದು ವಿಲನ್ ಪಾತ್ರಗಳಲ್ಲಿಯೇ. ಆದರೆ ೨೦೦೯ರಲ್ಲಿ ಬಂದ ಅರುಂಧತಿ ಚಿತ್ರದ ಅಘೋರಿಯ ಪಾತ್ರ, ಸೋನು ಸೂದ್ ಲೈಫ್‌ನ್ನೇ ಬದಲಿಸಿಬಿಟ್ಟಿತು. ಸಿನಿಮಾ ರಂಗದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ ಸೋನು ಸೂದ್, ಕನ್ನಡದಲ್ಲಿ ವಿಷ್ಣುವರ್ಧನ ಮತ್ತು ಕುರುಕ್ಷೇತ್ರದಲ್ಲಿ ನಟಿಸಿದ್ದಾರೆ. ಆದರೆ, ಇದ್ಯಾವುದೂ ತಂದುಕೊಡದ ಜನಪ್ರಿಯತೆ ತಂದು ಕೊಟ್ಟಿರೋದು, ಸೋನು ಸೂದ್ ಅವರನ್ನು ಹೀರೋ ಮಾಡಿರೋದು ಕೋವಿಡ್ ೧೯ ಚಕ್ರವ್ಯೂಹದಲ್ಲಿ ಸಿಲುಕಿದ್ದ ಸಾವಿರಾರು ಕಾರ್ಮಿಕರಿಗೆ ನೀಡಿದ ಸಹಾಯ ಹಸ್ತ.

  ಮಹಾರಾಷ್ಟçದಲ್ಲಿ ಅತಂತ್ರರಾಗಿದ್ದ ಹಲವು ರಾಜ್ಯಗಳ ಸಾವಿರಾರು ಕಾರ್ಮಿಕರು ಸುರಕ್ಷಿತವಾಗಿ ತಮ್ಮ ತಮ್ಮ ಊರು ಸೇರಲು ನೆರವಾಗಿದ್ದಾರೆ ಸೋನು ಸೂದ್. ವಲಸೆ ಕಾರ್ಮಿಕರ ಟಿಕೆಟ್, ಊಟದ ವ್ಯವಸ್ಥೆ ಮಾಡಿದ್ದಾರೆ.

  ಒಂದು ಕಾಲದಲ್ಲಿ ಅದೇ ಮುಂಬೈನ ಲೋಕಲ್ ಟ್ರೆöÊನ್‌ನಲ್ಲಿ ಪಾಸ್ ಇಟ್ಟುಕೊಂಡು ಓಡಾಡುತ್ತಾ ಬದುಕು ಕಟ್ಟಿಕೊಂಡಿದ್ದ ಸೋನು ಸೂದ್, ಈಗ ಅದೇ ಮುಂಬೈನ ಸಾವಿರಾರು ಕಾರ್ಮಿಕರ ಕಣ್ಣಲ್ಲಿ ಹೀರೋ. ಸೋನು ಸೂದ್ ನಿಸ್ವಾರ್ಥ ಸೇವೆಗೆ ದೇಶದ ಲಕ್ಷಾಂತರ ಭಾರತೀಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

 • ಸೋನು ಸೂದ್ ಹೆಸರಿನಲ್ಲೂ ಚೀಟಿಂಗ್

  ಸೋನು ಸೂದ್ ಹೆಸರಿನಲ್ಲೂ ಚೀಟಿಂಗ್

  ಕೋವಿಡ್ ಕಷ್ಟದಲ್ಲಿ ದೊಡ್ಡ ಮಟ್ಟದಲ್ಲಿ ಹೀರೋ ಆದವರು ಸೋನು ಸೂದ್. ಸಿನಿಮಾಗಳಲ್ಲಿ ವಿಲನ್ ಆದರೂ, ರಿಯಲ್ ಲೈಫ್‍ನಲ್ಲಿ ಹೀರೋ ಆಗಿರುವ ಸೋನು ಸೂದ್ ತಮ್ಮ ಫೌಂಡೇಷನ್ ಮೂಲಕ ಸಾವಿರಾರು ಜನರಿಗೆ ನೆರವು ನೀಡಿದ್ದಾರೆ. ನೀಡುತ್ತಲೂ ಇದ್ದಾರೆ.

  ಕೋವಿಡ್ ಮೊದಲ ಅಲೆಯಲ್ಲಿ ಬಡವರು, ಕೂಲಿ ಕಾರ್ಮಿಕರ ಸಾಗಾಟಕ್ಕೆ, ಹಸಿವಿಗೆ ಆಸರೆಯಾಗಿದ್ದ ಸೋನು ಸೂದ್, ಈ ಬಾರಿ ಆಕ್ಸಿಜನ್ ನೆರವು ನೀಡುತ್ತಿದ್ದಾರೆ. ಇದರ ಮಧ್ಯೆ ಸೋನು ಸೂದ್ ಹೆಸರಿನಲ್ಲಿ ವಂಚಕರ ಜಾಲವೊಂದು ತಲೆಯೆತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಫೋನ್ ಪೇ ನಂ.6287047336 ಹಾಕಿ, ಸೋನು ಸೂದ್ ಟ್ರಸ್ಟ್‍ಗೆ ದೇಣಿಗೆ ನೀಡುವಂತೆ ಮನವಿ ಮಾಡಲಾಗಿದೆ. ಸೋನು ಸೂದ್ ಅವರ ಸೇವೆಯ ಬಗ್ಗೆ ಹೆಮ್ಮೆಯಿರುವ ಸಾವಿರಾರು ಜನ ತಮ್ಮ ತಮ್ಮ ಕೈಲಾದಷ್ಟು ಹಣವನ್ನು ಈ ಅಕೌಂಟ್‍ಗೆ ಟ್ರಾನ್ಸ್‍ಫರ್ ಕೂಡಾ ಮಾಡಿದ್ದಾರೆ.

  ಈ ಕುರಿತು ಸ್ವತಃ ಸೋನು ಸೂದ್ ಟ್ವೀಟ್ ಮಾಡಿದ್ದು, ಯಾರೂ ಹಣ ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಯಾರಾದರೂ ಈ ಕುರಿತು ಕರೆ ಮಾಡಿದರೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಂದು ಸಾರ್ವಜನಿಕರಿಗೆ ಮನವಿಯನ್ನೂ ಮಾಡಿದ್ದಾರೆ.